ಮಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir), ನಟಿ ಸೋನಲ್ ಮೊಂಥೆರೋ (Sonal Monteiro) ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ (Christian Tradition) ಮದುವೆಯಾಗಿದ್ದಾರೆ.
ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಬೆನ್ನಲ್ಲೇ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಿದೆ. ಇದನ್ನೂ ಓದಿ: ಮೂಡುಗಲ್ಲು ಕೇಶವನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿದ ಜೂನಿಯರ್ ಎನ್‌ಟಿಆರ್
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಉಂಗುರ ಬದಲಾಯಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಷನ್ನಲ್ಲಿ ನವವಧು ಸೋನಾಲ್ ಗೋಲ್ಡ್ ಕಲರ್ ಡ್ರೆಸ್ ಧರಿಸಿದ್ದರು.
ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ. ಈ ಅದ್ಧೂರಿ ರೆಸೆಪ್ಷನ್ನಲ್ಲಿಯೂ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.
ಮರಿ ಟೈಗರ್ ವಿನೋದ್ ಪ್ರಭಾಕರ್ (Vinnod Prabhakar) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮಾದೇವ’. ಪೋಸ್ಟರ್‌ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ‘ಮಾದೇವ’ (Maadeva Film) ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಾಥ್ ಕೊಟ್ಟರು.
ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ಜೊತೆ ನನಗೆ ಒಳ್ಳೆಯ ಬಾಂಧವ್ಯ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರಸೆಂಟೇಷನ್, ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್‌ನಲ್ಲಿ ಅವರು ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಹಾರ್ಡ್ ವರ್ಕರ್. ಸಿನಿಮಾಗೆ ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ:ಡ್ರೋನ್ ದೋಖಾ ಆರೋಪ: ಸದ್ಯಕ್ಕೆ ದೂರು ನೀಡಲ್ಲ ಎಂದ ಸಾರಂಗ್
ನಟ ಅಭಿಷೇಕ್ ಅಂಬರೀಶ್ (Abhishek Ambareesh) ಮಾತನಾಡಿ, ಟೈಗರ್ ಅವರ ನಟನೆ, ಫೈಟ್ ಬಗ್ಗೆ ಅಥವಾ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮಾತನಾಡುವ ಬಗ್ಗೆ ದೊಡ್ಡವನಲ್ಲ ನಾನು. ನಮ್ಮೆಲ್ಲರಿಗಿಂತ ಅವರು ಹಿರಿಯರು. ಆದರೆ ಯುವಕರಾಗಿ ಕಾಣಿಸಿಕೊಳ್ಳುತ್ತಾರೆ. ವಿಷ್ಯುವಲ್ಸ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಸಬ್ಜೆಕ್ಟ್ ಬೇರೆ ತರ ಇದೆ. ಇತ್ತೀಚಿಗಿನ ದಿನ 70ರ ಕಥೆ ಸಕ್ಸಸ್ ಆಗಿದೆ. ಈಗ 80ರ ಕಥೆಗೆ ಬಂದಿದ್ದೇನೆ. 2023 ಹಿಟ್ ಕಾಟೇರ ಸಿನಿಮಾ. 2024ರ ಹಿಟ್ ನಿಮ್ಮದಾಗಲಿ ಎಂದು ವಿನೋದ್ ಪ್ರಭಾಕರ್ ಚಿತ್ರಕ್ಕೆ ಶುಭ ಹಾರೈಸಿದರು.
ನಾಯಕ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿ, ನಾವು ಏನ್ ಅನ್ನೋದನ್ನು ಕೆಲಸದಲ್ಲಿ ತೋರಿಸುತ್ತೇವೆ. ಇದು ಬೇರೆ ರೀತಿಯ ಜಾನರ್ ಸಿನಿಮಾ. ಬಹಳಷ್ಟು ಜನ ಟಚ್ ಮಾಡಲು ಆಗದ ಕಥೆ. ನನ್ನ ಗೆಟಪ್ ನಿಮಗೆ ಇಷ್ಟ ಆಗಿದೆ ಅಂದುಕೊಳ್ಳುತ್ತೇನೆ. ಬೆಸ್ಟ್ ಲುಕ್ ಮಾದೇವ ಅಂತಾ ನನಗೆ ಅನಿಸುತ್ತದೆ. ನಿರ್ಮಾಪಕ ಕೇಶವಣ್ಣ ಬಹಳಷ್ಟು ಕಷ್ಟ ಎದುರಿಸಿ ಸಿನಿಮಾ ಮಾಡಿದ್ದೀರಾ? ನಿಮಗೆ ಒಳ್ಳೆಯದಾಗಲಿ. ಸಿನಿಮಾ ಬಗ್ಗೆ ಮಾತಾನಾಡುವುದು ತುಂಬಾ ಇದೆ. ಟ್ರೈಲರ್ ಇವೆಂಟ್‌ನಲ್ಲಿ ಮಾತನಾಡುತ್ತೇನೆ ಎಂದರು.
ನಾಯಕಿ ಸೋನಲ್ (Sonal Monteiro) ಮಾತನಾಡಿ, ರಾಬರ್ಟ್ (Robert) ಆದ್ಮೇಲೆ ನನಗೆ ವಿನೋದ್‌ಗೆ ಜೋಡಿಯಾಗಿ ನಟಿಸಲು ತುಂಬಾ ಸಿನಿಮಾಗಳು ಬಂದವು. ಆದರೆ ಯಾವುದು ಸೆಟ್ ಆಗಲಿಲ್ಲ. ಮಾದೇವ ಸಿನಿಮಾ ವಿನೋದ್‌ಗೆ ಬಂದಿದ್ದು, ಅವರು ನನ್ನ ಕಾಸ್ಟ್ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದಾಗ ನನ್ನ ಜರ್ನಿ ಶುರುವಾಯ್ತು. ಹಳ್ಳಿ ಹುಡುಗಿ ಪಾತ್ರ ನನ್ನದು. ನಾನು ತುಂಬಾ ಎಂಜಾಯ್ ಮಾಡಿ ನನ್ನ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು.
ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಶೃತಿ ಮೇಡಂ ಪಾತ್ರ ಚಾಲೆಂಜಿಂಗ್ ಆಗಿದೆ. ಇಡೀ ಸಿನಿಮಾವನ್ನು ವಿನೋದ್ ಸರ್ ಭುಜದ ಮೇಲೆ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಅಚ್ಯುತ್ ಸರ್ ಗೆಸ್ಟ್ ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಕಿಟ್ಟಿ ಸರ್ ನಟಿಸಿದ್ದಾರೆ. ಇಡೀ ತಂಡದ ಶ್ರಮ ಇದು ಎಂದರು. ಇದನ್ನೂ ಓದಿ:ಹೊಸ ಪಕ್ಷ ಕಟ್ಟಲು ಹೊರಟ ದಳಪತಿ ಖ್ಯಾತ ನಟ ವಿಜಯ್
‘ಮಾದೇವ’ ಟೀಸರ್ ಮಾಸ್ ಅಂಶಗಳಿಂದ ಕೂಡಿದೆ. ವಿನೋದ್ ಪ್ರಭಾಕರ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದಂತಹ ಗೆಟಪ್‌ನಲ್ಲಿ ಮರಿ ಟೈಗರ್ ಮಿಂಚಿದ್ದಾರೆ. ಖಳನಾಯಕನಾಗಿ ಶ್ರೀನಗರ ಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರಾಬರ್ಟ್’ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ಮಾದೇವ’ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.
ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮಂಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.
ಯುವ ಪ್ರತಿಭೆ ಅಭಿಲಾಷ್ (Abhilash) ಹಾಗೂ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸುತ್ತಿರುವ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ (Margaret Lover of Ramachari) ಸಿನಿಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಚಿತ್ರದುರ್ಗ ಸುತ್ತಮುತ್ತ ಕೋಟೆಯಲ್ಲಿ 21 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಹೊಸತಂಡ ಎಂಬುದನ್ನು ಪರಿಗಣಿಸದೇ ನಿರ್ಮಾಪಕರಾದ ವನಿತಾ ಎಚ್.ಎನ್ ಸಾಕಷ್ಟು ಖರ್ಚು ಮಾಡಿದ್ದಾರೆ. ಚಿತ್ರೀಕರಣ ಸರಾಗವಾಗಿ ಸಾಗಲು, ಗ್ರಾಮಸ್ಥರೇ ಕಾರಣ. ಇಡೀ ಊರಿಗೆ ಊರೇ ಚಿತ್ರೀಕರಣಕ್ಕೆ ಸಹಕಾರ ನೀಡಿದೆ. ಬಹಳ ನೈಜ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಷ್, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೆಜಿಎಫ್, ಲವ್ ಮಾಕ್ಟೇಲ್, ಬಡವ ರಾಸ್ಕಲ್, ಗುರುದೇವ್ ಹೊಯ್ಸಳ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸಿನಿಮಾದಲ್ಲಿಯೂ ಇಡಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್
ಅಭಿಲಾಷ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ (Sonal Monthero) ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಜಹಾಂಗೀರ್, ಸುಮನ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ವನಿತಾ ಎಚ್.ಎನ್. ಹಾಗೂ ಹರೀಶ್ ನಿಹಾಂತ್ ಪ್ರೊಡಕ್ಷನ್ಸ್ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆದಷ್ಟು ಬೇಗ ಸೆಕೆಂಡ್ ಶೆಡ್ಯುಲ್ಡ್ ಶೂಟಿಂಗ್ ಆರಂಭಿಸಲಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ನಾಗರಹಾವು. ಈ ಚಿತ್ರದ ರಾಮಾಚಾರಿ (Ramachari) ಹಾಗೂ ಮಾರ್ಗರೇಟ್ (Margaret) ಪಾತ್ರಗಳು ಇಂದಿಗೂ ಪ್ರೇಕ್ಷಕರ ಅಚ್ಚುಮೆಚ್ಚು. ಇದೇ ಚಿತ್ರದ ಪಾತ್ರಗಳನ್ನು ಇಟ್ಕೊಂಡು ಬಂದ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ನಾಗರಹಾವು ಸಿನಿಮಾದ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸಿನಿಮಾವೊಂದು ಬರ್ತಿದೆ. ಆ ಚಿತ್ರಕ್ಕೆ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಎಂದು ಟೈಟಲ್ ಇಡಲಾಗಿದೆ.
ಯುವ ಪ್ರತಿಭೆ ಅಭಿಲಾಶ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭವಿಂದು ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ನೆರವೇರಿತು. ನಟರಾಕ್ಷಸ ಡಾಲಿ ಧನಂಜಯ್ (Dhananjay) ಹೊಸ ತಂಡಕ್ಕೆ ಶುಭ ಹಾರೈಸಿದರು. ಡಾಲಿ ಧನಂಜಯ್ ಮಾತನಾಡಿ,ಅಭಿ ಬಡವ ರಾಸ್ಕಲ್, ಹೊಯ್ಸಳದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು. ಇದನ್ನೂ ಓದಿ:ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ
ನಿರ್ದೇಶಕ ಗಿರಿಧರ್ ಕುಂಬಾರ್ ಮಾತನಾಡಿ, ಈ ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ ಎಂದರು. ನಿರ್ಮಾಪಕರಾದ ಹರೀಶ್ ಮಾತಾನಾಡಿ, ಬಹಳ ಸಂತೋಷ ಆಗಿದೆ. ಧನಂಜಯ್ ಅಣ್ಣ ಬಂದಿರುವುದು ಖುಷಿಕೊಟ್ಟಿದೆ. ಅವರು ಯುವಕರಿಗೆ ಎಷ್ಟು ಪ್ರೇರಣೆ ಕೊಡುತ್ತಾರೆ ಎಂದರೆ ನಿಜ ಬೆಲೆ ಕಟ್ಟಲು ಆಗುವುದಿಲ್ಲ. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಈ ಸಿನಿಮಾ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ನಟ ಅಭಿಲಾಷ್ (Abhilash), ತುಂಬಾ ಎಮೋಷನಲ್ ಮೂಮೆಂಟ್. ಇವತ್ತು ಕಷ್ಟಪಟ್ಟು ಇಲ್ಲಿ ಕೂತಿದ್ದೇನೆ. ಇದಕ್ಕೆ ಮೂಲ ಕಾರಣ ನಿರ್ಮಾಪಕರು. ನನ್ನ ಒದ್ದಾಟಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಇವರೇ ನನ್ನ ಅನ್ನದಾತರು. ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ ಎಂದರು. ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಶ್ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿಯೂ ಇಡಲಾಗಿದೆ.
ಅಭಿಲಾಶ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ (Sonal Monthero) ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಅವಿನಾಶ್ ಮತ್ತು ರವಿಶಂಕರ್ ಮುಂತಾದವರು ಕೂಡ ನಟಿಸುತ್ತಿದ್ದಾರೆ. ವನಿತಾ ಎಚ್.ಎನ್. ಅವರ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಮುಹೂರ್ತ ನೆರವೇರಿದ್ದು, ಮೇ 15ರಿಂದು ಚಿತ್ರದುರ್ಗದಲ್ಲಿ ಶೂಟಿಂಗ್ ಶುರುವಾಗಲಿದೆ.
ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮಾದೇವ (Madeva) ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ (Vinod Prabhakar) ಎದುರು ಶ್ರೀನಗರ ಕಿಟ್ಟಿ (Shrinagar Kitty) ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.
ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ (Sonal Monthero) ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್
ಹೈದ್ರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇಕಡ ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.
Live Tv
[brid partner=56869869 player=32851 video=960834 autoplay=true]