ಸಿನಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಎರಡೂ ಕೈಗಳಲ್ಲಿ ತಾಳಿ ಹಿಡಿದುಕೊಂಡಿದ್ದ ತರುಣ್ ಸುಧೀರ್ ಒಂದು ಸುತ್ತು ಸುತ್ತುತ್ತಾ ಗಣ್ಯರಿಗೆ ತಾಳಿ ಪ್ರದರ್ಶಿಸಿದರು. ಬಳಿಕ ಸೋನಲ್ ಕೊರಳಿಗೆ ಕಟ್ಟಿದರು. ಈ ಶುಭವೇಳೆ ನಟಿ ಸೋನಲ್ ಕಣ್ಣಲ್ಲಿ ನೀರು ತುಂಬಿಕೊಂಟು ಭಾವುಕರಾದರು. ಈ ಕುರಿತ ಅದ್ಭುತ ವೀಡಿಯೋ ಇಲ್ಲಿದೆ…
Tag: ಸೋನಲ್ ಮಂಥೆರೋ
-

Tharun Sonal Wedding: ತಾರಾ ಜೋಡಿ ಮದುವೆ – ತಾಳಿ ಕಟ್ಟೋ ವೇಳೆ ಭಾವುಕರಾದ ಸೋನಲ್
ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tharun Sudheer) ಮತ್ತು ನಟಿ ಸೋನಲ್ (Sonal Monteiro) ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆಯಿತು.
ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು. ಇದನ್ನೂ ಓದಿ: ತರುಣ್-ಸೋನಲ್ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್ ತಾರೆಯರು, ಗಣ್ಯರಿಂದ ವಿಶ್

ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ
ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು. ನಟ ಶರಣ್, ನೆನಪಿರಲಿ ಪ್ರೇಮ್, ಶ್ರುತಿ, ಮಾಲಾಶ್ರೀ, ಸುಧಾರಾಣಿ, ಅವಿನಾಶ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಗಣ್ಯರು ಮದುವೆಗೆ ಸಾಕ್ಷಿಯಾದರು. ನಿನ್ನೆ ಸಂಜೆ ನಡೆದ ತರುಣ್ ಮತ್ತು ಸೋನಾಲ್ ಆರತಕ್ಷತೆಯಲ್ಲೂ ಚಿತ್ರರಂಗ, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ನೂತನ ಜೋಡಿಗೆ ಶುಭ ಹಾರೈಸಿದರು.
-

ತರುಣ್-ಸೋನಲ್ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್ ತಾರೆಯರು, ಗಣ್ಯರಿಂದ ವಿಶ್
ಸ್ಯಾಂಡಲ್‌ವುಡ್ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ತಾರಾ ಜೋಡಿಯಾದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ (Tharun-Sonal Wedding) ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ತಾರಾ ಬಳಗದ ದಂಡೇ ಆಗಮಿಸುತ್ತಿದ್ದು, ನವಜೋಡಿಗೆ ವಿಶ್ ಮಾಡಿದೆ.

ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್-ಸೋನಲ್ ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿ ತಾರಾಗಣವೇ ಆಗಮಿಸಿ ಜೋಡಿಗೆ ಶುಭಹಾರೈಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಿ ನವಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಂತೋಶ್ ಆನಂದ್ ರಾಮ್, ವಿಜಯ್ ರಾಘವೇಂದ್ರ, ನೆನಪಿರಲಿ ಪ್ರೇಮ್, ಸಿಂಗರ್ ಅರ್ಚನಾ ಉಡುಪ, ನಟಿಯರಾದ, ರಾಗಿಣಿ ಅಮೃತಾ ಅಯ್ಯಂಗಾರ್ ಹಾಗೂ ನಿಶ್ವಿಕಾ ನಾಯ್ಡು, ಅಮೂಲ್ಯ ಮೊದಲಾದವರು ರಿಷಪ್ಷನ್‌ಗೆ ಆಗಮಿಸಿ ತರುಣ್ ಮತ್ತು ಸೋನಲ್‌ಗೆ ವಿಶ್ ಮಾಡಿದರು.

ನಟಿ ಶೃತಿ ಕುಟುಂಬ, ನಟಿ ಮಾಲಾಶ್ರೀ ಮತ್ತು ಆರಾಧನಾ, ನಟಿ ಹರ್ಷಿಕಾ ಪೂಣಚ್ಚಾ, ಕಾರುಣ್ಯ ರಾಮ್, ನಟರಾದ ಉಪೇಂದ್ರ, ಡಾಲಿ ಧನಂಜಯ್, ಸೃಜನ್ ಲೋಕೇಶ್, ವಿ.ರವಿಚಂದ್ರನ್, ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿ ಬಂದು ತಾರಾ ಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: Tharun Sonal Wedding Reception: ಅವಾರ್ಡ್ ಫಂಕ್ಷನ್ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ
ನಟಿ ಹಾಗೂ ಮಾಜಿ ಸಂಸದೆ ಸುಮಲತಾ, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅನುರಾಧಾ ಭಟ್, ಅನುಪಮ ಭಟ್ ಸಹೋದರಿಯರು ಆರತಕ್ಷತೆಗೆ ಆಗಮಿಸಿದ್ದರು. ನಟ ದುನಿಯಾ ವಿಜಯ್, ನಿರ್ದೇಶಕ ಯೋಗರಾಜ್ ಭಟ್, ಟಾಕ್ಸಿಕ್ ಸಿನಿಮಾ ನಿರ್ಮಾಪಕ ವೆಂಕಟ್ ನಾರಾಯಣ್, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 10 ಸಾವಿರ ಜನರು ಆರತಕ್ಷತೆ ಹಾಗೂ ಮದುವೆಗೆ ಆಗಮಿಸುವ ನಿರೀಕ್ಷೆಯಿದೆ.
-

Tharun Sonal Wedding: ಸೋನಲ್‌ಗೆ ಹಲಸಿನ ಹಲ್ವಾ, ತರುಣ್‌ಗೆ ಸ್ಪೈಸಿ ಐಟಂ – ಆರತಕ್ಷತೆ ಮೆನುವಿನಲ್ಲಿ ಏನಿದೆ ಸ್ಪೆಷಲ್..?
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ – ಸೋನಲ್ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಬೆಂಗಳೂರಿನಲ್ಲಿ ನಡೆಯತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯುತ್ತಿದ್ದು, ರಿಸೆಪ್ಷನ್‌ಗೆ ಬಂದವರಿಗೆ ಅದ್ಧೂರಿ ಭೋಜನ ಏರ್ಪಡಿಸಲಾಗಿದೆ.
ಮದುವೆ ಹಾಗೂ ಆರತಕ್ಷತೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಬಾಣಸಿಗರು 4 ಕಿಚನ್‌ಗಳಲ್ಲಿ ಅಡುಗೆ ಸಿದ್ಧ ಮಾಡುತ್ತಿದ್ದಾರೆ.

ರಿಸೆಪ್ಷನ್ ಸ್ಪೆಷಲ್ ಮೆನು ಏನೇನು?
20ಕ್ಕೂ ಅಧಿಕ ಬಗೆಯ ಸ್ವೀಟ್‌ಗಳು, ತರಹೇವಾರಿ ದೋಸೆಗಳು, ರೊಟ್ಟಿಗಳು, ಶ್ಯಾವಿಗೆ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗಿದೆ. ಮಂಗಳೂರು- ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಫುಡ್, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನಲ್ಲಿದೆ. (Tharun Sonal Wedding Recepton Menu)
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತರುಣ್ ಮದುವೆ ರಿಸೆಪ್ಷನ್ ಕ್ಯಾಟರಿಂಗ್ ಮುಖ್ಯಸ್ಥ ಸುಭಾಷ್, ನಾವು ಈ ಅಡುಗೆ ವಹಿಸಿಕೊಂಡಿದ್ದಕ್ಕೆ ಸಂತೋಷವಿದೆ. ತರುಣ್ ಸರ್ ಹಾಗೂ ಸೋನಲ್ ಮೇಡಂ ಈ ಹಿಂದೆ ನಮ್ಮ ಕ್ಯಾಟರಿಂಗ್ ಅಡುಗೆ ರುಚಿ ನೋಡಿದ್ದಾರೆ. ಸೋನಲ್ ಮೇಡಮ್‌ಗಾಗಿಯೇ ಹಲಸಿನ ಹಲ್ವಾ, ತರುಣ್ ಗೋಸ್ಕರ ಒಂದು ಸ್ಪೆಷಲ್ ಸ್ಪೈಸಿ ಐಟಂ ಮಾಡ್ತಿದೀವಿ. ಎಷ್ಟು ಜನ ಬಂದ್ರೂ ಮ್ಯಾನೇಜ್ ಮಾಡ್ತೀವಿ. ಯಾರಿಗೂ ಊಟ ಕಡಿಮೆ ಆಗಬಾರದು ಎಂಬ ಹಾಗೆ ಪ್ರಿಪೇರ್ ಮಾಡ್ತಿದ್ದೇವೆ ಎಂದರು.
ಮಂಗಳೂರು – ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಆಹಾರ, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನ ಸ್ಪೆಷಲ್ ಐಟಂಗಳು ಎಂದು ಸ್ಪೆಷಲ್ ಮೆನು ಬಗ್ಗೆ ಸುಭಾಷ್ ವಿವರಿಸಿದ್ದಾರೆ.
-

Tharun Sonal Wedding: ತರುಣ್ ಲವ್ ಬಗ್ಗೆ ಹೇಳ್ಲಿಲ್ಲ, ಮದುವೆ ಮಾಡಿಸಿದ್ದು ಬಾಸ್ ದರ್ಶನ್ ಅಂದ್ರು ತರುಣ್ ತಾಯಿ
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ತಾರಾ ಜೋಡಿ ಮದುವೆ ಸಂಭ್ರಮದಲ್ಲಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಇಂದು ನಡೆಯುತ್ತಿದೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನವಜೋಡಿಯ ಆರತಕ್ಷತೆಗೆ ಸಿದ್ಧವಾಗಿದೆ.

ಮಗನ ಮದುವೆ ಸಂಭ್ರಮದ ಬಗ್ಗೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ. ಮಗನ ಮದುವೆಯನ್ನ ಬಾಸ್ ಮಾಡಿಸಿದ್ದು. ಎಲ್ಲವೂ ಅವರದ್ದೇ ತಯಾರಿ ಆಗಿತ್ತು ಎಂದು ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಣ ಎಂದು ಹೇಳಿದ ಅವರು, ಸೊಸೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಮುಂದೆ ಚೆನ್ನಾಗಿ ನೋಡಿಕೊಳ್ತೀನಿ. ನಮಗೆ ಹೆಣ್ಣುಮಗಳಿಲ್ಲ. ಅವಳೇ ಮಗಳ ಥರ ಎಂದರು. ಇದನ್ನೂ ಓದಿ: ಸೋನಲ್ ಜೊತೆ ತರುಣ್ ರೊಮ್ಯಾಂಟಿಕ್ ಫೋಟೋಶೂಟ್- ಮದುವೆ ಬಗ್ಗೆ ಕೊಟ್ರು ಗುಡ್ ನ್ಯೂಸ್

ನನ್ನ ಮಗ ಮದುವೆಯಾಗ್ತಿರೋದು ತುಂಬಾ ಖುಷಿಯಾಗ್ತಿದೆ. ಆದರೆ ಈಗ ಯಜಮಾನ್ರಿಲ್ಲ ಅನ್ನೋದೇ ಬೇಸರ. ಅವರು ಅಲ್ಲಿಂದಲೇ ನೋಡಿ ಖುಷಿ ಪಟ್ಟಿರ್ತಾರೆ ಎಂದು ಮಾಲತಿ ಸುಧೀರ್ ಅವರು ಹೇಳಿದ್ದಾರೆ. ಮಗ ಡೈರೆಕ್ಟರ್ ಅಲ್ವೇ.. ಹಾಗಾಗಿ ಕ್ರಿಯೇಟಿವ್ ಆಗಿ ಹೀಗೆ ಪ್ಲ್ಯಾನ್ ಮಾಡಿದಾನೆ ಎಂದು ಸಂಭ್ರಮಿಸಿದ್ದಾರೆ.
ತರುಣ್ ಫ್ರೆಂಡ್ ಲ್ಯಾಪ್‌ಟಾಪಲ್ಲಿ ಫೋಟೋ ತೋರಿಸ್ದ!: ತರುಣ್ ಬಂದು ನನಗೆ ಸೋನಲ್ ಜೊತೆಗಿನ ಪ್ರೀತಿ ಬಗ್ಗೆ ಹೇಳಿಲ್ಲ. ಅವನ ಸ್ನೇಹಿತ ಬಂದು ಲ್ಯಾಪ್‌ಟಾಪ್‌ನಲ್ಲಿ ತೋರಿಸ್ದ. ನೋಡಿ ಅಮ್ಮ ಇವರೇ ತರುಣ್ ಮದುವೆ ಆಗ್ತಿರೋ ಹುಡುಗಿ ಅಂದ. ಹೌದಾ, ಕೊನೆಗೂ ಮದುವೆಗೆ ಒಪ್ಪಿಕೊಂಡ ಅಂತ ನನಗೆ ಖುಷಿ ಆಯ್ತು ಎಂದು ಮಾಲತಿ ಹೇಳಿದರು. ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್ ಸುಧೀರ್ – ಸೋನಲ್ ಮದುವೆ ಡೇಟ್ ಫಿಕ್ಸ್
-

ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ (Sonal) ಮದುವೆ ವಿಚಾರ ಕೆಲದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಮದುವೆ ಯಾವಾಗ? ಯಾರ ಜೊತೆ ಎಂಬುದು ತರುಣ್ ನೇರವಾಗಿ ಮಾತನಾಡಿರಲಿಲ್ಲ. ಈಗ ಜೀವನದ ರಿಯಲ್ ಹೀರೋಯಿನ್ ಬಗ್ಗೆ ‘ಕಾಟೇರ’ ನಿರ್ದೇಶಕ ತರುಣ್ ಘೋಷಣೆ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

ದರ್ಶನ್‌ರನ್ನು ತರುಣ್ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ. ಮದುವೆ ಹಾಗೂ ತನ್ನ ಬದುಕಿನ ಹೀರೋಯಿನ್ ಕುರಿತು ನಾಳೆ (ಜು.22) ಬೆಳಗ್ಗೆ 11:08ಕ್ಕೆ ಮಾಹಿತಿ ನೀಡುವುದಾಗಿ ನಿರ್ದೇಶಕ ತರುಣ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
View this post on Instagramಈವರೆಗೂ ವದಂತಿ ಬಿಟ್ಟರೇ ತರುಣ್ ಆಗಲಿ, ಸೋನಲ್ ಆಗಲಿ ಪ್ರೀತಿ ಅಥವಾ ಮದುವೆ ಕುರಿತು ಮಾತಾಡಿರಲಿಲ್ಲ. ಜು.22ರಂದು ವಿಶೇಷ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಸೋನಲ್ ಜೊತೆಗಿನ ಮದುವೆ ವದಂತಿಗೆ ತೆರೆ ಎಳೆಯಲಿದ್ದಾರೆ ‘ರಾಬರ್ಟ್’ ನಿರ್ದೇಶಕ ತರುಣ್. ಸೋನಲ್ ಮತ್ತು ತರುಣ್ ಒಂದೇ ರೀತಿಯ ಪೋಸ್ಟ್ ಶೇರ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಅಂದಹಾಗೆ, ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಿ ಸೋನಲ್ ಜೊತೆಗಿನ ಪರಿಚಯವೇ ಇಂದು ಮದುವೆಗೆ ಮುನ್ನಡಿ ಬರೆದಿದೆ. ಇಬ್ಬರ ಮದುವೆಗೆ ಮುನ್ನುಡಿ ಬರೆದಿದ್ದೇ ದರ್ಶನ್. ಇದೀಗ ಇದೇ ಆಗಸ್ಟ್ 10, 11ರಂದು ಹೊಸ ಬಾಳಿಗೆ ಸೋನಲ್ ಮತ್ತು ತರುಣ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕುರಿತು ನಾಳೆ ಅಧಿಕೃತ ಘೋಷಣೆ ಆಗಲಿದೆ.
-

ಕಡಿಮೆ ಅವಧಿಯಲ್ಲಿ ದಾಖಲೆಯ ವೀಕ್ಷಣೆ ಪಡೆದ ಝೈದ್ ಖಾನ್ ನಟನೆಯ ‘ಬನಾರಸ್’ ಟ್ರೇಲರ್
ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಝೈದ್ ಖಾನ್ (Zaid Khan) ನಟನೆಯ ‘ಬನಾರಸ್’ (Banaras) ಸಿನಿಮಾದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಆಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಂಚ ಭಾಷೆಗಳಲ್ಲಿ ಹತ್ತು ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ, ಸಿನಿಮಾದ ಮೇಲಿನ ಭರವಸೆಯನ್ನು ದುಪ್ಪಟ್ಟು ಮಾಡಿದೆ.

ಬನಾರಸ್ ಕಡೆಯಿಂದ ಮಾಯಾಗಂಗೆ ಸಾಂಗ್ ರಿಲೀಸ್ ಆದಾಗಲೇ ಟ್ರೇಲರ್ (Trailer) ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಯನ್ನು ಟ್ರೇಲರ್ ಎಲ್ಲಿಯೂ ಹುಸಿಗೊಳಿಸಲಿಲ್ಲ. ಅಂದುಕೊಂಡಿದ್ದಕ್ಕಿಂತ ಎಕ್ಸ್ಟ್ರಾ ಎನಿಸುವಂತ ಅಂಶಗಳನ್ನು ಇಟ್ಟು, ಟ್ರೇಲರ್ ಅನ್ನು ನೀಡಲಾಗಿದೆ. ವಾವ್ ಎನಿಸುವಂಥ ವಿಷ್ಯೂಲೈಸೇಷನ್, ಶಾಕಿಂಗ್ ಎನಿಸುವಂತ ಘಟನೆಗಳು ಟ್ರೇಲರ್ ನಲ್ಲಿ ಪಾಸ್ ಆಗುತ್ತವೆ. ಝೈದ್ ಖಾನ್ ಈಗಾಗಲೇ ಹಾಡುಗಳಲ್ಲಿ ಭರವಸೆ ಮೂಡಿಸಿದ್ದರು. ಆದರೆ ಟ್ರೇಲರ್ ನಲ್ಲಿ ಮತ್ತಷ್ಟು ಖುಷಿ ನೀಡಿದ್ದಾರೆ. ಝೈದ್ ಗೆ ಇದು ಮೊದಲ ಸಿನಿಮಾ ಎಂಬ ಫೀಲ್ ನೋಡುಗರಲ್ಲಿ ಬರುವಂತೆ ಬಿಟ್ಟುಕೊಟ್ಟಿಲ್ಲ.

ಜಯತೀರ್ಥ (Jayathirtha) ಅವರ ಡೈರೆಕ್ಷನ್ ನಲ್ಲಿ ಬನಾರಸ್ ರೆಡಿಯಾಗಿದ್ದು, ಇತ್ತೀಚೆಗಷ್ಟೇ ದೊಡ್ಡ ವೇದಿಕೆಯಲ್ಲಿ ಟ್ರೇಲರ್ ಲಾಂಚ್ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನ ಅರ್ಬಾಜ್ ಖಾನ್ ವೇದಿಕೆ ಮೇಲೇರಿ ಬನಾರಸ್ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ರವಿಚಂದ್ರನ್ ಅಂತು ಟ್ರೇಲರ್ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಇದೀಗ ಟ್ರೇಲರ್ ಜನರ ಮನಸ್ಸನ್ನು ಗೆದ್ದಿದೆ. ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ವೀವ್ಸ್ ಪಡೆದುಕೊಂಡಿದೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

ಝೈದ್ ಖಾನ್ ಹಾಗೂ ಸೋನಲ್ ಮಂಥೆರೋ (Sonal Manthero) ಕೆಮಿಸ್ಟ್ರಿ ಸೂಪರ್ ಆಗಿ ವರ್ಕೌಟ್ ಆಗಿರುವುದು ಟ್ರೇಲರ್, ಸಾಂಗ್ಸ್ ನಲ್ಲಿ ಕಾಣಬಹುದು. ನವೆಂಬರ್ 4ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾಗೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
