ಕೊಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ಗೆ (Darshan) ಜೈಲಿನಿಂದ ರಿಲೀಸ್ ಆಗಿದ್ದಕ್ಕೆ ನಟಿ ಸೋನಲ್ (Sonal Monterio) ಸಂತಸ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ.
ಇನ್ನೂ ದರ್ಶನ್ ಆಪ್ತ ಬಳಗದಲ್ಲಿ ಸೋನಲ್ ಗುರುತಿಸಿಕೊಂಡಿದ್ದಾರೆ. ಅವರೊಂದಿಗೆ ‘ರಾಬರ್ಟ್’ (Robert) ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇದೇ ಆ.11ರಂದು ತರುಣ್ ಜೊತೆ ಹಸೆಮಣೆ ಏರಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅನುಪಸ್ಥಿತಿ ಅನ್ನು ನೆನೆದು ಸೋನಲ್ ಕಣ್ಣೀರಿಟ್ಟಿದ್ದರು.
‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (TharunSudhir) ಮತ್ತು ಸೋನಲ್ (Sonal) ದಂಪತಿ ಮಾಲ್ಡೀವ್ಸ್‌ಗೆ (Maldives) ಹಾರಿದ್ದಾರೆ. ಹನಿಮೂನ್‌ನಲ್ಲಿ ಜಾಲಿ ಮೂಡ್‌ನಲ್ಲಿರುವ ಈ ಜೋಡಿ ಇದೀಗ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ
ತರುಣ್ ಮತ್ತು ಸೋನಲ್ ಜೋಡಿ ಬಿಳಿ ಬಣ್ಣದ ಉಡುಗೆ ಧರಿಸಿ ವಿವಿಧ ಭಂಗಿಯಲ್ಲಿ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ನವಜೋಡಿಯ ಕ್ಯೂಟ್ ಪೋಸ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಇನ್ನೂ ಅ.9ರಂದು ತರುಣ್ ಹುಟ್ಟುಹಬ್ಬದ ನಿಮಿತ್ತ ನವಜೋಡಿ ಮಾಲ್ಡೀವ್‌ಗೆ ತೆರಳಿದ್ದರು. ಅಲ್ಲೇ ಪತಿಯ ಹುಟ್ಟುಹಬ್ಬವನ್ನು ನಟಿ ಆಚರಿಸಿದ್ದಾರೆ. ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದರು.
ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ನೀಡುತ್ತಿದ್ದಾರೆ. ಅಂದಹಾಗೆ, ಆಗಸ್ಟ್ 11ರಂದು ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾಟೇರ, ರಾಬರ್ಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್‌ಗೆ (Tharun Sudhir) ಇಂದು (ಅ.9) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ (Sonal) ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಯುವ ರಾಜ್‌ಕುಮಾರ್‌ಗೆ ರೋಹಿತ್ ಪದಕಿ ಆ್ಯಕ್ಷನ್ ಕಟ್
ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅದಕ್ಕೆ ತರುಣ್ ಕೂಡ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಲವ್ ಎಂದಿದ್ದಾರೆ.
ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ಅಂದಹಾಗೆ, ಆಗಸ್ಟ್ 11ರಂದು ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇತ್ತೀಚೆಗಷ್ಟೇ ಮದುವೆಯಾದ ನವವಧು ಸೋನಲ್ (Sonal Monterio) ಈಗ ಇನ್ಸ್ಟಾಗ್ರಾಂ ನಯಾ ಫೋಟೋದೊಂದಿಗೆ ಕಾಣಿಸ್ಕೊಂಡಿದ್ದಾರೆ. ಹಸಿರು ಸೀರೆಯುಟ್ಟು ಕೈತುಂಬಾ ಹಸಿರು ಬಳೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದು ಬಳೆಶಾಸ್ತ್ರದ ಫೋಟೋಗಳಾಗಿದ್ದು ಕೈಗೆ ಬಳೆ ತೊಡಿಸಿಕೊಳ್ಳವ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಪುತ್ರ
ಈ ಫೋಟೋ ನೋಡಿದರೆ ಮದುವೆ ನಡೆದು ತಿಂಗಳೇ ಉರುಳಿದೆ, ಮತ್ಯಾಕೆ ಸೋನಲ್ ಬಳೆ ಶಾಸ್ತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಆಶ್ಚರ್ಯವಾಗೋದೇನು ನಿಜ. ಆದರೆ ಇದು ಹಳೆಯ ಫೋಟೋಗಳಾಗಿದ್ದು ಈಗ ಒಂದೊಂದಾಗೇ ನೆನಪು ತೋಡಿಕೊಳ್ಳುತ್ತಿದ್ದಾರೆ. ನಟಿ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಳೆದ ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆ ವೇಳೆ ಮದುವೆ ಹೆಣ್ಣಿಗೆ ನಡೆದ ಬಳೆ ತೊಡಿಸುವ ಸಂಪ್ರದಾಯದ ಮುದ್ದಾದ ಫೋಟೋಗಳನ್ನ ಈಗ ಸೋನಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸೋನಲ್ ಮತ್ತು ತರುಣ್ (Tharun Sudhir) ಮದುವೆ ಸಮಾರಂಭ ಸಂಪ್ರದಾಯಗಳು ಆಗಸ್ಟ್‌ನಲ್ಲಿ ಭರ್ತಿ ಒಂದು ವಾರ ನಡೆದಿತ್ತು. ಬೆಂಗಳೂರಿನ ಹೊರವಲಯದ ಛತ್ರದಲ್ಲಿ ಅದ್ದೂರಿಯಾಗಿ ಮದುವೆಯಾದ್ದರು ಸೋನಲ್ ಮತ್ತು ತರುಣ್. ಬಳಿಕ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ಮದುವೆಯಾಗಿದ್ದರು. ಅಲ್ಲಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ಇದೀಗ ಮದುವೆಯ ಸಂಭ್ರಮಗಳ ಒಂದೊಂದೇ ನೆನಪುಗಳನ್ನ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಸೋನಲ್. ಕೆಲವೇ ದಿನದ ಹಿಂದೆ ಮೆಹಂದಿ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿದ್ದ ಸೋನಲ್ ಈಗ ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.
‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ (Sonal Monteiro) ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿರುವ (Wedding) ಸುಂದರ ಫೋಟೋಗಳು ಇಲ್ಲಿವೆ.
ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್‌ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಈ ಮದುವೆ ಸಂಭ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಟುಂಬ ಕೂಡ ಭಾಗಿಯಾಗಿತ್ತು.
ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡಿದೆ. ಈ ಅದ್ಧೂರಿ ಆರತಕ್ಷತೆನಲ್ಲಿ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.
ಇನ್ನೂ ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಾದ ಗೆಳೆತನ ಸೋನಲ್ ಮತ್ತು ತರುಣ್ ಮದುವೆಗೆ ಮುನ್ನುಡಿ ಬರೆಯಿತು. ಈ ಮದುವೆಗೆ ನೇತೃತ್ವ ವಹಿಸಿದ್ದೇ ದರ್ಶನ್. ಆದರೆ ಜೈಲು ಪಾಲಾಗಿರುವ ದರ್ಶನ್ ಅನುಪಸ್ಥಿತಿ ನೆನೆದು ಮದುವೆ ದಿನ (ಆ.11) ಸೋನಲ್ ಮತ್ತು ತರುಣ್ ಭಾವುಕರಾಗಿದ್ದರು.
ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು.
ನಟಿ ಸೋನಲ್ (Sonal) ಮಾಂಥೆರೋ ನಿರ್ದೇಶಕ ತರುಣ್ ಸುಧೀರ್ (Tarun Sudhir) ಜೊತೆ ಆಗಸ್ಟ್ ೧೦ ರಂದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ರು. ಇದೀಗ ಸೋನಲ್ ತರುಣ್ ಜೋಡಿಗೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರವೂ ಒಂದಾಗುತ್ತಿದ್ದಾರೆ. ಸೋನಲ್ ಹುಟ್ಟೂರು ಮಂಗಳೂರಿನಲ್ಲಿ ಸಪ್ಟೆಂಬರ್ 1 ರಂದು ಚರ್ಚ್ನಲ್ಲಿ ವಿವಾಹ ನಡೆಯಲಿಒದೆ. ಬಳಿಕ ಪ್ರತಿಷ್ಟಿತ ಕನ್ವೆಂಷನ್ ಹಾಲ್‌ನಲ್ಲಿ ಆರತಕ್ಷತೆ ನಡೆಸಲು ತಯಾರಿ ನಡೆದಿದೆ.
ಕ್ರಿಶ್ಚಿಯನ್ ಸಂಪ್ರದಾಯದ ಹಲವೆಡೆ ಮಧುಮಗಳಿಗೆ ರೋಸ್ ಸೆಲೆಬ್ರೇಷನ್ (Rose Celebration) ಮಾಡುವ ಪದ್ಧತಿ ಇದೆ. ಅದರ ಪ್ರಕಾರ ಸೋನಲ್‌ಗೆ ರೋಸ್ ಸೆಲೆಬ್ರೇಷನ್ ಕಾರ್ಯಕ್ರಮವನ್ನೂ ಮಾಡಲಾಗಿದೆ. ತಾಯಿ-ಬಂಧುಗಳು ಹಾಗೂ ಗೆಳತಿಯರ ಜೊತೆ ನವವಧು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಪೂರ್ವ ಕಾರ್ಯಗಳಲ್ಲಿ ಪಾಲ್ಗೊಂಡ್ರು. ಹಳದಿ ಬಣ್ಣದ ಪಾರ್ಟಿವೇರ್ ಉಡುಗೆಯಲ್ಲಿ ಸೋನಲ್ ನಳನಳಿಸಿದ್ದಾರೆ.
ಅಂತರ್‌ಧರ್ಮೀಯ ಮದುವೆಯಾದ ತರುಣ್ ಸೋನಲ್ ಎರಡೂ ಕಡೆಯ ಸಂಪ್ರದಾಯವನ್ನ ಪಾಲಿಸುವ ಸಲುವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ರೀತಿ ಮದುವೆಯಗುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮವನ್ನ ಖಾಸಗಿಯಾಗಿ ನೆರವೇರಿಸಲು ಪ್ಲ್ಯಾನ್ ಮಾಡಿಕೊಂಡಿರುವ ತರುಣ್ ಸೋನಲ್ ಜೋಡಿ ಅಲ್ಲಿನ ಜನರಿಗಷ್ಟೇ ಆಹ್ವಾನ ನೀಡಿದೆ.
ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಇದೀಗ ಅವರ ಸಂಪ್ರದಾಯದಂತೆ ಸೆ.1ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಮದುವೆ ಆರತಕ್ಷತೆ ಕೂಡ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ.
ಇನ್ನೂ ಇದೇ ಆ.11ರಂದು ತರುಣ್ ಮತ್ತು ಸೋನಲ್ ಹಿಂದೂ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಗೆ ಸ್ಯಾಂಡಲ್‌ವುಡ್ ನಟ, ನಟಿಯರು ಸಾಕ್ಷಿಯಾಗಿದ್ದರು.
ಇಂದು ಹೊಸ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್ (Tarun Sudhir) ಮತ್ತು ಸೋನಲ್(Sonal) ಲುಕ್ ಎಲ್ಲರ ಗಮನ ಸೆಳೆಯಿತು. ಗೋಲ್ಡನ್ ಸೀರೆಯಲ್ಲಿ ಸೋನಲ್ ಗೊಂಬೆಯಂತೆ ಕಂಡರೆ, ಮೈಸೂರು ಪೇಟ ತೊಟ್ಟು ತರುಣ್ ಸಖತ್ತಾಗಿಯೇ ಪೋಸ್ ಕೊಟ್ಟರು. ಸೋನಲ್ ಧರಿಸಿದ್ದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದವು.
ಗೋಲ್ಡನ್ ಕಲರ್ ಕುರ್ತಾ ಮತ್ತು ಅದೇ ಬಣ್ಣ ಪಂಚೆ ತೊಟ್ಟಿದ್ದ ತರುಣ್, ತಲೆ ಮೇಲಿನ ಮೈಸೂರು ಪೇಟೆ ಮಾತ್ರ ಅವರಿಗೆ ಮತ್ತಷ್ಟು ಕಳೆ ತಂದಿತ್ತು. ಈ ಜೋಡಿಯ ಮದುವೆ (marriage) ಎರಡು ಥೀಮ್ ನಲ್ಲಿ ನಡೆದಿದೆ. ಆರತಕ್ಷತೆಯು ಸಿನಿಮಾ ಪ್ರಶಸ್ತಿ ಪ್ರದಾನ ಸಮಾಂಭದ ಥೀಮ್ ನಲ್ಲಿ ನಡೆದಿದ್ದರೆ, ಮದುವೆ ಸಂಪ್ರದಾಯಿಕ ಶೈಲಿಯಲ್ಲಿತ್ತು.
ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.
ನಟರಾದ ಶಿವರಾಜ್ ಕುಮಾರ್, ಗಣೇಶ್, ಶರಣ್, ಜಗಪತಿ ಬಾಬು, ನೆನಪಿರಲಿ ಪ್ರೇಮ್, ಅವಿನಾಶ, ಗಾಯಕ ವಿಜಯ ಪ್ರಕಾಶ್, ನಟಿಯರಾದ ತಾರಾ , ಗಿರಿಜಾ ಲೋಕೇಶ್, ಶ್ರುತಿ, ಮೇಘನಾ ರಾಜ್, ಮೇಘಾ ಶೆಟ್ಟಿ, ರಚಿತಾ ರಾಮ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಪದ್ಮರಾಜ್ ರಾವ್ ಸಂಗೀತ ನಿರ್ದೇಶಕರಾದ ಹಂಸಲೇಖ, ಹರಿಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ತಾರಾಯರು ಈ ಮದುವೆಗೆ ಸಾಕ್ಷಿಯಾಗಿದ್ದರು
ಮತ್ತೊಂದು ಸ್ಟಾರ್ ಜೋಡಿಗೆ ಸಾಕ್ಷಿಯಾಗಿತ್ತು ಸ್ಯಾಂಡಲ್‍ವುಡ್. ತರುಣ್ (Tarun Sudhir) ಮತ್ತು ಸೋನಲ್ (Sonal) ಆಪ್ತರು ಹಾಗೂ ಬಹುತೇಕ ಸ್ಟಾರ್ ನಟರು ಈ ಮದುವೆಗೆ (Marriage) ಬಂದು ನೂತನ ದಂಪತಿಗೆ ಶುಭ ಹಾರೈಸಿದರು. ಜೊತೆಗೆ ಪರಭಾಷಾ ಕೆಲ ನಟ ನಟಿಯರು ಕೂಡ ಆಗಮಿಸಿದ್ದರು. ತಾರಾ ಕಲರವವೇ ಅಲ್ಲಿ ನೆರದಿತ್ತು.
ನಟರಾದ ಶಿವರಾಜ್ ಕುಮಾರ್, ಗಣೇಶ್, ಶರಣ್, ಜಗಪತಿ ಬಾಬು, ನೆನಪಿರಲಿ ಪ್ರೇಮ್, ಅವಿನಾಶ, ಗಾಯಕ ವಿಜಯ ಪ್ರಕಾಶ್, ನಟಿಯರಾದ ತಾರಾ , ಗಿರಿಜಾ ಲೋಕೇಶ್, ಶ್ರುತಿ, ಮೇಘನಾ ರಾಜ್, ಮೇಘಾ ಶೆಟ್ಟಿ, ರಚಿತಾ ರಾಮ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಪದ್ಮರಾಜ್ ರಾವ್ ಸಂಗೀತ ನಿರ್ದೇಶಕರಾದ ಹಂಸಲೇಖ, ಹರಿಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ತಾರಾಯರು ಈ ಮದುವೆಗೆ ಸಾಕ್ಷಿಯಾಗಿದ್ದರು.
ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ: ಸೋನಲ್
ಗುರು ಹಿರಿಯರ ಸಮ್ಮುಖದಲ್ಲಿ ಇಂದು ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್ ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್ ವುಡ್ ನಟ ನಟಿಯರು, ತಂತ್ರಜ್ಞರು ಮತ್ತು ಪರ ಭಾಷಾ ನಟರೂ ಆಗಮಿಸಿದ್ದರು. ಜೊತೆಗೆ ರಾಜಕಾರಣಗಳು ಕೂಡ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷ. ಹಾಗಾಗಿ ಸಹಜವಾಗಿಯೇ ಹೊಸ ದಂಪತಿಗೆ ಸಂಭ್ರಮವಾಗಿದೆ.
ಮದುವೆ ಕುರಿತಂತೆ ನಟಿ ಸೋನಲ್ ಮಾತನಾಡುತ್ತಾ, ‘ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ’ ಅಂದಿದ್ದಾರೆ.
ತರುಣ್ ಸುಧೀರ್ ಹೇಳಿದ್ದೇನು?..
ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.
ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.
ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.
ಗುರು ಹಿರಿಯರ ಸಮ್ಮುಖದಲ್ಲಿ ಇಂದು ನಟಿ ಸೋನಲ್ (Sonal) ಮತ್ತು ನಿರ್ದೇಶಕ ತರುಣ್ ಸುಧೀರ್ (Tarun Sudhir) ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ (marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್ ವುಡ್ ನಟ ನಟಿಯರು, ತಂತ್ರಜ್ಞರು ಮತ್ತು ಪರ ಭಾಷಾ ನಟರೂ ಆಗಮಿಸಿದ್ದರು. ಜೊತೆಗೆ ರಾಜಕಾರಣಗಳು ಕೂಡ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷ. ಹಾಗಾಗಿ ಸಹಜವಾಗಿಯೇ ಹೊಸ ದಂಪತಿಗೆ ಸಂಭ್ರಮವಾಗಿದೆ.
ಮದುವೆ ಕುರಿತಂತೆ ನಟಿ ಸೋನಲ್ ಮಾತನಾಡುತ್ತಾ, ‘ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ’ ಅಂದಿದ್ದಾರೆ.
ತರುಣ್ ಸುಧೀರ್ ಹೇಳಿದ್ದೇನು?..
ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.
ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.
ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.