Tag: ಸೋದರಿ

  • 6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    – ಬಾಲಕಿಯರಿಗೆ ನಶೆ ಪದಾರ್ಥ ನೀಡಿ ಅತ್ಯಾಚಾರ
    – ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ನೀಚರು ಎಸ್ಕೇಪ್

    ಇಸ್ಲಾಮಾಬಾದ್: ಆರು ದಿನ 15 ಜನರು ಇಬ್ಬರು ಅಪ್ರಾಪ್ತ ಸೋದರಿಯರನ್ನು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಾಕಿಸ್ತಾನದ ಫೆಸ್ಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮಹಿಳೆ ಸಂಘಟನೆಗಳು ಸೇರಿದಂತೆ ಬಹುತೇಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಕಾಮುಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

    15 ಮತ್ತು 17 ವರ್ಷದ ಬಾಲಕಿಯರನ್ನ 11 ಜನ ಪ್ಲಾನ್ ಮಾಡಿ ಅಪಹರಿಸಿದ್ದಾರೆ. ನಂತರ ಇಬ್ಬರನ್ನ ಪ್ರತ್ಯೇಕವಾಗಿ ಫೆಸ್ಲಾಬಾದ್ ವ್ಯಾಪ್ತಿಯಲ್ಲಿರಿಸಿದ್ದಾರೆ. ಆರು ದಿನವೂ ಇಬ್ಬರನ್ನ ನಶೆಯಲ್ಲಿರುವಂತೆ ನೋಡಿಕೊಂಡ ನೀಚರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆರು ದಿನಗಳ ಬಳಿಕ ಓರ್ವ ಬಾಲಕಿಯನ್ನ ಜಂಗ್ ಬಜಾರ್ ಮತ್ತು ಮತ್ತೋರ್ವಳನ್ನ ಗುಜರಾನ್ವಾಲ್ ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

    ತಾಯಿಯ ಕಣ್ಣೀರು: ಸೆಪ್ಟೆಂಬರ್ 11ರಂದು ಇಬ್ಬರು ಮಕ್ಕಳನ್ನ ಅಪಹರಿಸಲಾಗಿತ್ತು. ಆರು ದಿನಗಳ ಬಳಿಕ ಮಕ್ಕಳು ಮನೆಗೆ ಬಂದಾಗ ಅತ್ಯಾಚಾರ ನಡೆದಿರುವ ವಿಷಯ ತಿಳಿಯಿತು. ಎಲ್ಲ 15 ಜನ ಮಕ್ಕಳಿಗೆ ಆರು ದಿನ ನಶೆ ಪದಾರ್ಥ ನೀಡುವ ಮೂಲಕ ಮಂಪರಿನಲ್ಲಿರುವಂತೆ ನೋಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿರದ ಕಾರಣ ಕಾನೂನು ಹೋರಾಟ ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಈ ಊರು ತೊರೆದು ಬೇರೆ ಸ್ಥಳದಲ್ಲಿ ನೆಲಸಲು ತೀರ್ಮಾನಿಸಿದ್ದೇವೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಕಣ್ಣೀರು ಹಾಕುತ್ತಾರೆ.

    ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾವ ಆರೋಪಿಯನ್ನ ಬಂಧಿಸಿಲ್ಲ. ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಸಂಘಟನೆಗಳ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

  • ಅಪ್ರಾಪ್ತ ಸೋದರಿಯರನ್ನ ಅಪಹರಿಸಿ 6 ಯುವಕರಿಂದ ಗ್ಯಾಂಗ್‍ರೇಪ್

    ಅಪ್ರಾಪ್ತ ಸೋದರಿಯರನ್ನ ಅಪಹರಿಸಿ 6 ಯುವಕರಿಂದ ಗ್ಯಾಂಗ್‍ರೇಪ್

    – ರಕ್ತದ ಮಡುವಿನಲ್ಲಿ ಸಂತ್ರಸ್ತೆಯರನ್ನ ಬಿಟ್ಟು ಎಸ್ಕೇಪ್

    ಜೈಪುರ: ಅಪ್ರಾಪ್ತ ಸೋದರಿಯರನ್ನ ಅಪಹರಿಸಿದ ಆರು ಯುವಕರು ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಭಿನ್ಮಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅತ್ಯಾಚಾರದ ಬಳಿಕ ಅಪ್ರಾಪ್ತ ಸೋದರಿಯರಿಬ್ಬರನ್ನು ಕಾಮುಕರು ಜಸ್ವಂತಪುರ ಕ್ಷೇತ್ರದ ರಾಜಪುರ ಸುಂಧಾಮಾತಾ ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಬಾಲಕಿಯರನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯರನ್ನ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:  ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ– ಜೀವಂತವಾಗಿ ಬಂದ ಸುಂದರಿ ಹೇಳಿದ್ದು ಮೈ ನಡುಗಿಸೋ ಕೊಲೆ ಕಥೆ

    ಮನೆಗೆ ನುಗ್ಗಿದ ಆರು ಜನರು ಇಬ್ಬರು ಬಾಲಕಿಯರನ್ನ ಅಪಹರಿಸಿದ್ದಾರೆ. ನಂತರ ಸುಂಧಾಮಾತಾ ಬೆಟ್ಟದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

     

  • ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆ – ಅಣ್ಣನೇ ಕೊಂದು ಎಸೆದಿದ್ದ!

    ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆ – ಅಣ್ಣನೇ ಕೊಂದು ಎಸೆದಿದ್ದ!

    ಮಂಗಳೂರು: ಸುಮಾರು 18 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಸ್ವಂತ ಅಣ್ಣನೇ ತಂಗಿಯನ್ನು ಕೊಲೆ ಮಾಡಿರುವ ಪ್ರಕರಣವೊಂದು ಮಂಗಳೂರಿನ ಕೊಣಾಜೆ ಬಳಿಯ ಮುಡಿಪುವಿನಲ್ಲಿ ಬೆಳಕಿಗೆ ಬಂದಿದೆ.

    ಸ್ಟೀಫಲ್ ಕುಟಿನ್ಹೋ(16) ಮೃತ ವಿದ್ಯಾರ್ಥಿನಿ. ಈಕೆಯ ಸಹೋದರ ಸ್ಯಾಮ್ಸನ್ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಶನಿವಾರ ಮನೆ ಬಳಿಯ ಗುಡ್ಡದಲ್ಲಿ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆಯಾಗಿದೆ.

    ಏನಿದು ಪ್ರಕರಣ?
    ಸ್ಟೀಫಲ್ ಕುಟಿನ್ಹೋ ಮಂಗಳೂರಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಳು. ಆದರೆ ಅಕ್ಟೋಬರ್ 8ರಂದು ಮನೆಯಲ್ಲಿದ್ದ ಸ್ಟೀಫಲ್ ದಿಢೀರ್ ನಾಪತ್ತೆಯಾಗಿದ್ದಳು. ಪೋಷಕರು ಸುತ್ತಮುತ್ತ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು. ತಂದೆ ಫ್ರಾನ್ಸಿಸ್ ಕುಟಿನ್ಹೋ ನೀಡಿದ್ದ ದೂರಿನಂತೆ ಪೊಲೀಸರು ತನಿಖೆ ಕೂಡ ನಡೆಸಿದ್ದರು. ಆದರೆ ವಿದ್ಯಾರ್ಥಿನಿ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ.

    ಹೀಗಾಗಿ ಪೊಲೀಸರು ಮತ್ತೊಮ್ಮೆ ಮನೆಯವರನ್ನು ವಿಚಾರಣೆ ಮಾಡಿದ್ದಾರೆ. ತೀವ್ರ ವಿಚಾರಣೆಯ ಬಳಿಕ ಸೋದರ ಸ್ಯಾಮ್ಸನ್ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಅಕ್ಟೋಬರ್ 8ರಂದು ಮನೆಯಲ್ಲಿ ಸ್ಟೀಫಲ್ ಕುಟಿನ್ಹೋ ಮತ್ತು ಸೋದರ ಸ್ಯಾಮ್ಸನ್ ಇಬ್ಬರೇ ಇದ್ದರು. ಆಗ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆ ಕೋಪದಿಂದ ಆರೋಪಿ ಸೋದರ ವಿದ್ಯಾರ್ಥಿನಿ ತಲೆಗೆ ಸುತ್ತಿಗೆಯಿಂದ ಬಡಿದು ಕೊಲೆ ಮಾಡಿದ್ದಾನೆ.

    ನಂತರ ಸೋದರಿಯ ಮೃತದೇಹವನ್ನು ಗುಡ್ಡದಲ್ಲಿ ಎಸೆದಿದ್ದಾನೆ. ವಿಚಾರಣೆ  ನಂತರ ಆರೋಪಿ ಮೃತದೇಹವನ್ನು ಎಸೆದಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾನೆ. ಅಲ್ಲಿ ಯುವತಿ ಮೃತದೇಹ ಅಸ್ಥಿಪಂಜರ ಸಿಕ್ಕಿದೆ.

    ಸದ್ಯಕ್ಕೆ ಮಂಗಳೂರಿನ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ಯಾಮ್ಸನ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಭೂತ ಹಿಡಿಯಲು ಪೊಲೀಸರನ್ನ ಕರೆಸಿದ ಯುವಕ

    ಭೂತ ಹಿಡಿಯಲು ಪೊಲೀಸರನ್ನ ಕರೆಸಿದ ಯುವಕ

    ಲಕ್ನೋ: ಯುವಕನೋರ್ವ ಭೂತವನ್ನು ಹಿಡಿಯಲು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲವಾರಿ ಮಾಫಿ ಮಡಿಯಾನ್‍ನಲ್ಲಿ ನಡೆದಿದೆ.

    100 ನಂಬರ್ ಗೆ ಕರೆ ಮಾಡಿದ ಯುವಕ ಆನಂದ್ ಪಟೇಲ್ ತನ್ನ ತಂಗಿಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದನು. ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಸೋದರಿಯನ್ನು ಭೂತದಿಂದ ಬಿಡುಗಡೆಗೊಳಿಸಬೇಕೆಂದು ಹೇಳಿಕೊಂಡಿದ್ದಾನೆ. ಕರೆಯಿಂದ ಮಾಹಿತಿ ಪಡೆದ ಪೊಲೀಸರು ಯುವಕನ ಮನೆಗೆ ತೆರಳಿದ್ದಾರೆ. ನನ್ನ ಸೋದರಿಯ ಮೇಲೆ ಬಂದ ಓರ್ವ (ಭೂತ) ಕಳೆದ ಕೆಲ ದಿನಗಳಿಂದ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಸೋದರಿಯನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾನೆ.

    ಈ ಕುರಿತು ಪೊಲೀಸರು ಆನಂದ್ ತಂದೆಯನ್ನು ಸಂಪರ್ಕಿಸಿದ್ದಾರೆ. ಪುತ್ರ ಮನೆಯಲ್ಲಿ ಯಾರಿಗೂ ತಿಳಿಸದೇ ಕರೆ ಮಾಡಿದ್ದಾನೆ. ನಾವು ಆತನಿಗೆ ತಿಳಿ ಹೇಳುತ್ತೇವೆ ಎಂದಿದ್ದಾರೆ. ಪೊಲೀಸರು ಸಹ ಯುವಕನನ್ನು ಕರೆಸಿ ಸೋದರಿಯ ಆರೋಗ್ಯಸ್ಥಿತಿಯನ್ನು ಆನಂದ್‍ನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

    ನನ್ನ ಸೋದರಿಯನ್ನು ಆವರಿಸಿಕೊಂಡಿರುವ ಯುವಕನ ಜೊತೆ ನಾನು ಮಾತನಾಡಿದೆ. ತಂಗಿಯನ್ನು ಬಿಟ್ಟು ಹೋಗುವಂತೆ ಅವನ ಬಳಿ ಪ್ರಾರ್ಥನೆ ಮಾಡಿಕೊಂಡ್ರೂ ಆತ ಹೋಗಲಿಲ್ಲ. ಹಾಗಾಗಿ ಸೋದರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಪೊಲೀಸರಿಗೆ ಕರೆ ಮಾಡಿದೆ ಎಂದು ಆನಂದ್ ಪಟೇಲ್ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ವರನ 11 ವರ್ಷದ ಸೋದರಿಯನ್ನು ರೇಪ್ ಮಾಡಿ, ಕೊಲೆಗೈದ!

    ರಾಯ್‍ಪುರ: ವರನ ಸೋದರಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬುಧವಾರ ಛತ್ತೀಸಘಡ ರಾಜ್ಯದ ಪೋಧಿ ಗ್ರಾಮದಲ್ಲಿ ನಡೆದಿದೆ.

    ಘಟನೆ ಸಂಬಂಧ ವರನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಲ್ಲಿ ವರನ ಸ್ನೇಹಿತ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಸೇರಿಸಿ ಕುಡಿಸಿದ್ದಾನೆ. ಎಚ್ಚರ ತಪ್ಪಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

    ಕೊಲೆಯ ಬಳಿಕ ಬಂದು ಎಲ್ಲರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾನೆ. ಕೆಲವು ಸಮಯದ ಬಳಿಕ ಬಾಲಕಿ ಕಾಣೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ವೇಳೆ ಅಲ್ಲಿಯೇ ಇದ್ದ ಆರೋಪಿ ತನಗೆ ಏನು ಗೊತ್ತಿಲ್ಲ ಎಂಬಂತೆ ನಟಿಸಿತ್ತಾ ನಿಂತಿದ್ದ ಅಂತಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಮದುವೆಗೆ ಬಂದ ಎಲ್ಲರೂ ಹೊರಡುವ ತಯಾರಿಯಲ್ಲಿದ್ರು. ಈ ವೇಳೆ ವರನ ಗೆಳೆಯ ಬಾಲಕಿಗೆ ತಂಪು ಪಾನೀಯ ನೀಡಿ ಕರೆದುಕೊಂಡು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಮಂಟಪದಿಂದ 1.5 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ ಬಳಿಕ ಸಿಮೆಂಟ್ ಇಟ್ಟಿಗೆಗಳಿಂದ ಬಾಲಕಿಯ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನಗ್ನ ಸ್ಥಿತಿಯಲ್ಲಿದ್ದ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಮದುವೆ ಮನೆ ಸೇರಿಕೊಂಡಿದ್ದಾನೆ.

    ಬಾಲಕಿ ಕಾಣೆಯಾದ ಬಳಿಕ ಪೋಷಕರು ಹುಡುಕಾಟ ಆರಂಭಿಸಿದಾಗ ಕೊನೆಯದಾಗಿ ವರನ ಗೆಳೆಯನೊಂದಿಗೆ ಹೊರ ಹೋಗಿದ್ದು ತಿಳಿದು ಬಂದಿದೆ. ವರನ ಗೆಳೆಯನನ್ನು ಕರೆದು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಶಾಜಿಯಾ ಸಹೋದರನಿಂದ ಕೊಲೆಯಾದ ದುರ್ದೈವಿ.

    ಕೆಲವು ದಿನಗಳ ಹಿಂದೆ ಶಾಜಿಯಾ ಶೇರಕೋಟಾ ಪ್ರಾಂತದ ಯುವಕನೊಂದಿಗೆ ಪರಾರಿಯಾಗಿದ್ದರು. ಈ ವೇಳೆ ಶಾಜಿಯಾ ಸಹೋದರ ಮೊಹಮ್ಮದ್ ಇಶಾಖ್ ನನ್ನ ಸಹೋದರಿಯನ್ನು ಯುವಕನೊಬ್ಬ ಅಪಹರಿಸಿದ್ದಾನೆ ಎಂದು ನಾಪತ್ತೆ ಮತ್ತು ಅಪಹರಣ ದೂರನ್ನು ದಾಖಲಿಸಿದ್ದನು. ದೂರು ದಾಖಲಾದ ನಂತರ ಶಾಜಿಯಾ ಯುವಕನೊಂದಿಗೆ ಮದುವೆಯಾಗಿ ಹಿಂದುರುಗಿ ಬಂದಿದ್ದರು.

    ಶಾಜಿಯಾ ಹಿಂದುರಿಗಿದ ಕಾರಣ ಎರಡು ಕುಟುಂಬಗಳು ರಾಜಿ ಮೂಲಕ ದೂರನ್ನು ಹಿಂಪಡೆದಿದ್ದವು. ಶಾಜಿಯಾ ಮನೆಯಲ್ಲಿದ್ದಾಗ ಸಹೋದರ ಇಶಾಖ್ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಿ ಎಂದು ಹೇಳಿ ಹರಿತವಾದ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಶಾಜಿಯಾ ಕೊಲೆಯಾಗುವ ವೇಳೆ ಮನೆಯಲ್ಲಿ ಆಕೆಯ ಪೋಷಕರಿದ್ರು, ಇಶಾಖ್ ನನ್ನನ್ನು ತಡೆಯಲು ಮುಂದಾಗಿಲ್ಲ. ಈ ಸಂಬಂಧ ಶಾಜಿಯಾ ಹಿರಿಯ ಸಹೋದರಿ ಇಶಾಖ್ ಮತ್ತು ಮನೆಯ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.