Tag: ಸೋದರರು

  • ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಪಲ್ಟಿ- ಸಹೋದರರಿಬ್ಬರ ಸಾವು

    ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಪಲ್ಟಿ- ಸಹೋದರರಿಬ್ಬರ ಸಾವು

    ರಾಯಚೂರು: ತಾಲೂಕಿನ ಬುಳ್ಳಾಪುರ ಗ್ರಾಮದ ಬಳಿ ರಾತ್ರಿ ವೇಳೆ ಮರಳು ಸಾಗಣೆ ಟ್ರ್ಯಾಕ್ಟರ್ ಪಲ್ಟಿಯಾಗಿ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಗಿಲ್ಲೆಸುಗೂರು ಕ್ಯಾಂಪ್ ನ ಸಾಮುವೆಲ್( 29) ಹಾಗೂ ಶಾಂತರಾಜ್(25) ಮೃತ ಸಹೋದರರು. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವಾಗ ದುರ್ಘಟನೆ ನಡೆದಿದೆ. ಸಂಜೆ 6ಋ ಬಳಿಕ ಮರಳು ಸಾಗಣೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಅಹೋರಾತ್ರಿ ಮರಳು ಸಾಗಣೆ ದಂಧೆ ನಡೆದಿದೆ. ಅಕ್ರಮದಂಧೆ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

    ರಾತ್ರಿ ಅವಸರದಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಕ್ಕೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನಾ ಸ್ಥಳಕ್ಕೆ ರಾಯಚೂರು ಡಿವೈಎಸ್‍ಪಿ ಶಿವನಗೌಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ಮೈಸೂರು: ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ಅಣ್ಣ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಮನಕಲಕುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು. ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕ ಸಹ ಆಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬುದ್ಧಿ ಹೇಳಿದ್ದರು. ಇತ್ತ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದರು. ಆತ್ಮೀಯ ಅಣ್ಣ ತನಗೆ ಬೈದನೆಂದು ನೊಂದ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ತಮ್ಮ ಸಾವಿನ ಸುದ್ದಿ ತಿಳಿದ ವೆಂಕಟೇಶ್ ಮಾನಸಿಕವಾಗಿ ಕುಸಿದಿದ್ದರು. ಈ ವೇಳೆ ಮೊಬೈಲ್ ಗೆ ತಮ್ಮನ ಸಾವಿನ ಫೋಟೋಗಳು ಬಂದಿವೆ. ಫೋಟೋ ನೋಡಿ ಮತ್ತಷ್ಟು ಆಘಾತಕ್ಕೊಳಾದ ವೆಂಕಟೇಶ್, ನನ್ನಿಂದಲೇ ತಮ್ಮನ ಸಾವು ಆಯ್ತು ಎಂದು ನೊಂದು ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಕ್ಕ-ಪಕ್ಕದಲ್ಲಿ ಸೋದರರ ಅಂತ್ಯಕ್ರಿಯೆ ಮಾಡಲಾಗಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ತಮ್ಮನೋರ್ವ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

    33 ವರ್ಷದ ಹಾಲೇಶ್ ತಾಳೇದಹಳ್ಳಿ ಕೊಲೆಯಾದ ಅಣ್ಣ. 31 ವರ್ಷದ ಹೊನ್ನಪ್ಪ ತಾಳೇದಹಳ್ಳಿ ಅಣ್ಣನನ್ನು ಕೊಲೆಗೈದ ಆರೋಪಿ. ಆಸ್ತಿ ವಿಚಾರದಲ್ಲಿ ಸೋದರರಿಬ್ಬರ ನಡುವೆ ಕಲಹವಿತ್ತು. ಶುಕ್ರವಾರ ರಾತ್ರಿ ಸಹ ಆಸ್ತಿಯ ವಿಚಾರವಾಗಿ ಹಾಲೇಶ್ ಮತ್ತು ಹೊನ್ನಪ್ಪನ ನಡುವೆ ಗಲಾಟೆ ನಡೆದಿದೆ. ರಾತ್ರಿ ಸುಮಾರು 2 ಗಂಟೆಗೆ ಮಲಗಿದ್ದ ಹಾಲೇಶ್ ನನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದು ಹೊನ್ನಪ್ಪ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಸಂಬಂಧ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೋದರ ವಾತ್ಸಲ್ಯ: 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಊಟ ಮಾಡ್ತೀರೋ ಅಣ್ಣ-ತಮ್ಮ

    ಸೋದರ ವಾತ್ಸಲ್ಯ: 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಊಟ ಮಾಡ್ತೀರೋ ಅಣ್ಣ-ತಮ್ಮ

    ಮುಂಬೈ: ಸೋದರರಿಬ್ಬರು ಕಳೆದ 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಜೊತೆಯಾಗಿ ಊಟ ಮಾಡಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಐದು ಜನ ಸೋದರರು ಜೊತೆಯಾಗಿಯೇ ಊಟ ಮಾಡುತ್ತಿದ್ದರು. ಐವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಪ್ರತಿನಿತ್ಯ ಜೊತೆಯಾಗಿ ಊಟ ಮಾಡುತ್ತಿದ್ದಾರೆ.

    ಮುಂಬೈ ನಗರದ ವ್ಯಾಪಾಗಳಾದ ಪ್ರಕಾಶ್ ಚಂದ್ (70) ಮತ್ತು ಪುಷ್ಪರಾಜ್ ಚಂದ್ (66) ಜೊತೆಯಾಗಿ ಊಟ ಮಾಡಿಕೊಂಡು ಬರುವ ಪದ್ಧತಿಯನ್ನು ಇಂದಿಗೂ ಜೀವಂತವಾಗಿರಿಸುವ ಮೂಲಕ ಸೋದರ ವಾತ್ಸಲ್ಯಕ್ಕೆ ತಾಜಾ ಉದಾಹರಣೆಯಾಗಿದ್ದಾರೆ.

    ಮೂಲತಃ ರಾಜಸ್ಥಾನದ ಬಿಸಲಾಪುರದ ನಿವಾಸಿಯಾದ ರಾಮ್‍ಲಾಲ್ ಜೈನ್ 1962ರಲ್ಲಿ ವ್ಯಾಪಾರ ನಿಮಿತ್ತ ಮುಂಬೈ ನಗರಕ್ಕೆ ಆಗಮಿಸಿದ್ದರು. ಸಣ್ಣ-ಪುಟ್ಟ ಕೆಲಸದ ಜೊತೆಗೆ ತಮ್ಮದೇ ಸ್ವಂತ ಟ್ರಾನ್ಸ್ ಪೋರ್ಟ್ ಸಂಸ್ಥೆ ಆರಂಭಿಸಿದ್ದರು. ವ್ಯವಹಾರದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಸೋದರರಿಬ್ಬರನ್ನು ಮುಂಬೈಗೆ ಕರೆಸಿಕೊಳ್ಳುತ್ತಾರೆ. ಹಾಗೆ ರಾಮ್‍ಲಾಲ್ ತಮ್ಮ ಕೊನೆಯ ಸೋದರರನ್ನು ಕರೆಸಿಕೊಳ್ಳುತ್ತಾರೆ. ಹೀಗೆ ಸೋದರರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಅಂದಿನಿಂದ ಐವರು ಸದಸ್ಯರು ಪ್ರತಿನಿತ್ಯ ಜೊತೆಯಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡೋದನ್ನು ರೂಡಿಸಿಕೊಳ್ಳುತ್ತಾರೆ. ಮೂವರು ಸೋದರರು ಸಾವನ್ನಪ್ಪಿದ ಬಳಿಕವೂ ಪ್ರಕಾಶ್ ಮತ್ತು ಪುಷ್ಪರಾಜ್ ಊಟದ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

    ಮಧ್ಯಾಹ್ನದ ಊಟವನ್ನು ಪ್ರಕಾಶ್ ಚಂದ್ ಮನೆಯಲ್ಲಿ, ರಾತ್ರಿ ನನ್ನ ನಿವಾಸದಲ್ಲಿ ನಾವು ಊಟ ಮಾಡುತ್ತೇವೆ. ಕೆಲಸದ ನಿಮಿತ್ತ ಇಬ್ಬರಲ್ಲಿ ಒಬ್ಬರು ಬರೋದು ತಡವಾದ್ರೆ ಒಬ್ಬರಿಗೊಬ್ಬರು ಕಾದು ಕೊನೆಗೆ ಜೊತೆಯಾಗಿಯೇ ಆಹಾರ ಸೇವಿಸುತ್ತೇವೆ ಎಂದು ಪುಷ್ಪರಾಜ್ ಹೇಳುತ್ತಾರೆ.

    ಪುಷ್ಪರಾಜ್ ಕಳೆದ 9 ವರ್ಷಗಳಿಂದ ವಾರದಲ್ಲಿ ಕೆಲವು ದಿನ ಉಪವಾಸ ಕೈಗೊಳ್ಳುತ್ತಾರೆ. ಉಪವಾಸದ ಮರುದಿನ ಸೋದರ ಬರೋವರೆಗೂ ಊಟ ಮಾಡಲ್ಲ ಎಂದು ಪುಷ್ಪರಾಜ್ ಪತ್ನಿ ಪವನಬೆನ್ ತಿಳಿಸುತ್ತಾರೆ.