Tag: ಸೊಹೈಲ್‌

  • ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ನ್ನಡದ `ಬಿಂದಾಸ್’ (Bindas Kannada) ಚಿತ್ರದ ನಾಯಕಿ ಹನ್ಸಿಕಾ ಮೋಟ್ವಾನಿ(Hansika Motwani)  ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯುಸಿನೆಸ್‌ಮ್ಯಾನ್ ಸೊಹೈಲ್ (Sohael) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಫೋಟೋಗಳು ಸದ್ದು ಮಾಡುತ್ತಿದೆ. ಮದುವೆಯ ಪೂರ್ವ ತಯಾರಿ ಫೋಟೋ ನೆಟ್ಟಿಗರಿಗೆ ಮೋಡಿ ಮಾಡ್ತಿದೆ.

     

    View this post on Instagram

     

    A post shared by hansika???? (@ihansika_addicted)

    ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಸಂಭ್ರಮದಲ್ಲಿ ಈ ಜೋಡಿ ಮಿಂಚಿದ್ದಾರೆ. ಡಿಸೆಂಬರ್ 4ರಂದು ರಾತ್ರಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

     

    View this post on Instagram

     

    A post shared by hansika???? (@ihansika_addicted)

    ಮೆಹೆಂದಿ ಮತ್ತು ಅರಿಶಿನ ಶಾಸ್ತ್ರದ ಸಂಭ್ರಮ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಜೈಪುರದ 450 ವರ್ಷದ ಹಳೆಯ ಕಟ್ಟಡದಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಆಪ್ತರ ಸಮ್ಮುಖದಲ್ಲಿ ಈ ಮದುವೆ ಜರುಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಚುಲರ್ ಪಾರ್ಟಿಯಲ್ಲಿ ಮಿಂಚಿದ ಬಿಂದಾಸ್ ಹುಡುಗಿ ಹನ್ಸಿಕಾ

    ಬ್ಯಾಚುಲರ್ ಪಾರ್ಟಿಯಲ್ಲಿ ಮಿಂಚಿದ ಬಿಂದಾಸ್ ಹುಡುಗಿ ಹನ್ಸಿಕಾ

    ಪುನೀತ್‌ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗುವ ಮೂಲಕ ಬಿಂದಾಸ್ ಹುಡುಗಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಇದೀಗ ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಸದ್ಯ ಬ್ಯಾಚುಲರ್ ಪಾರ್ಟಿಯಲ್ಲಿ ನಟಿ ಸಂಭ್ರಮಿಸಿದ್ದಾರೆ. ಈ ಕುರಿತಾದ ವೀಡಿಯೋವೊಂದನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಉದ್ಯಮಿ ಸೊಹೈಲ್ (Sohael) ಜೊತೆ ಡಿಸೆಂಬರ್ ಮೊದಲ ವಾರದಲ್ಲಿ ನಟಿ ಹನ್ಸಿಕಾ ಹಸೆಮಣೆ ಏರುತ್ತಿದ್ದಾರೆ. ಹಾಗಾಗಿ ತಮ್ಮ ಬ್ಯಾಚುಲರ್ ಪಾರ್ಟಿಯಲ್ಲಿ ನಟಿ ಖುಷಿಯಿಂದ ಸಂಭ್ರಮಿಸಿದ್ದಾರೆ. ಈ ಪಾರ್ಟಿಗೆ ನಟಿಯ ಸ್ನೇಹಿತೆಯರು ಕೂಡ ಸಾಥ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Hansika Motwani (@ihansika)

    ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾಗೆ ಮದುವೆ ನಿಶ್ಚಯವಾಗಿದೆ. ಮದುವೆಗೂ ಮುನ್ನ ಹೈಫಿಲ್ ಟವರ್ ಬಳಿ ಮಂಡಿಯೂರಿ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದರು. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ಸೌಂಡ್ ಮಾಡಿತ್ತು. ಇದನ್ನೂ ಓದಿ:`ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಶುರುವಾಯ್ತು ವಿನೋದ್ ಪರ ಅಭಿಯಾನ

    ಇನ್ನೂ ಡಿಸೆಂಬರ್ 3ರಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಡಿ.4ರಂದು ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ(Wedding) ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಸದ್ಯ ನೆಚ್ಚಿನ ನಟಿಯ ಹೊಸ ಬಾಳಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

    ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

    ಟಾಲಿವುಡ್ (Tollywood) ಬ್ಯೂಟಿ ಹನ್ಸಿಕಾ ಮೋಟ್ವಾನಿ(Hansika Motwani) ಸದ್ಯ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ. ಉದ್ಯಮಿ ಸೊಹೈಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹನ್ಸಿಕಾ ಮೋಟ್ವಾನಿ ಮದುವೆಯನ್ನ ಲೈವ್ ಆಗಿ ಅಭಿಮಾನಿಗಳು ನೋಡಬಹುದು ಅಂತಾ ಅವಕಾಶವನ್ನ ಒದಗಿಸಲು ಹನ್ಸಿಕಾ ಟೀಮ್ ಪ್ಲಾನ್ ಮಾಡಿದ್ದಾರೆ.

    ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಸದ್ಯ ತಮ್ಮ ಖಾಸಗಿ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಈ ನಟಿ, ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಉದ್ಯಮಿ (Businessman) ಸೊಹೈಲ್(Sohail) ಜೊತೆಗಿನ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ತಿಳಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಸೌತ್ ಸುಂದರಿ ಹನ್ಸಿಕಾ ಮೋಟ್ವಾನಿಗೆ ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟಿಯ ಮದುವೆ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಿದ್ದಾರೆ. ಹಾಗಾಗಿ ತಮ್ಮ ಮದುವೆಯನ್ನು ಓಟಿಟಿಯಲ್ಲಿ ಸ್ಟ್ರಿಮಿಂಗ್‌ ಮಾಡಲು ಯೋಚಿಸಿದ್ದಾರೆ. ಹನ್ಸಿಕಾ ಅವರ ಮದುವೆಯನ್ನು ಎಲ್ಲರೂ ಲೈವ್ ಆಗಿ ಓಟಿಟಿ ಮೂಲಕ ನೋಡಬಹುದಾಗಿದೆ.

     

    View this post on Instagram

     

    A post shared by Hansika Motwani (@ihansika)

    ಹನ್ಸಿಕಾ ಮತ್ತು ಸೊಹೈಲ್ ಜೋಡಿಯ ಮದುವೆ ಜೈಪುರದ 450 ವರ್ಷಗಳ ಹಳೆಯ ಮುಂಡೋಟಾ ಕೋಟೆಯಲ್ಲಿ ನಡೆಯಲಿದೆ. ಡಿಸೆಂಬರ್ 4ರಂದು ಗುರುಹಿರಿಯರು, ಆಪ್ತರು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 3ರಂದು ಮೆಹೆಂದಿ ಶಾಸ್ತ್ರ ನಡೆಯಲಿದೆ. ಈ ಸಂಭ್ರಮದ ಕ್ಷಣವನ್ನು ಫ್ಯಾನ್ಸ್ ಓಟಿಟಿ ಮೂಲಕ ಲೈವ್ ಆಗಿ ನೋಡಬಹುದಾಗಿದೆ. ಈ ಕುರಿತ ಮತ್ತಷ್ಟು ಅಪ್‌ಡೇಟ್‌ ಸದ್ಯದಲ್ಲೇ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]