Tag: ಸೊಶಿಯಲ್ ಮೀಡಿಯಾ

  • ನಾಯಿಯನ್ನ ಒದೆಯಲು ಹೋಗಿ ತಾನೇ ಬಿದ್ದ!

    ನಾಯಿಯನ್ನ ಒದೆಯಲು ಹೋಗಿ ತಾನೇ ಬಿದ್ದ!

    ನವದೆಹಲಿ: ಎಷ್ಟೋ ಜನರು ‘ಕರ್ಮ’ ಎಂಬ ಕಾನ್ಸೆಪ್ಟ್ ನಂಬುತ್ತಾರೆ. ಇದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.

    ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ನಮ್ಮ ಹತ್ತಿರ ಬಂದೇ ಬರುತ್ತೆ ಎಂಬುದನ್ನು ಹಲವು ಜನರು ನಂಬುತ್ತಾರೆ. ಈಗ ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ನಾಯಿ ತನ್ನ ಗಾಡಿ ಪಕ್ಕ ನಿಂತಿದೆ ಎಂದು ಕೋಪದಿಂದ ಬರುತ್ತಾನೆ. ಬಂದ ತಕ್ಷಣ ನಾಯಿಯನ್ನು ಒದೆಯಲು ಕಾಲು ಎತ್ತುತ್ತಾನೆ. ಕೊಡಲೇ ನಾಯಿ ಅಲ್ಲಿಂದ ಓಡಿ ಹೋಗುತ್ತೆ. ನಿಯಂತ್ರಣ ಸಿಗದೇ ಆ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ. ಇದನ್ನೂ ಓದಿ: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಳ್ಳಾಟಕ್ಕೆ ರೋಸಿ ಹೋದ ರೈತರು

    ಟ್ವಿಟ್ಟರ್ ನಲ್ಲಿ ನೇಚರ್ಹೋಲಿಕ್ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಈ ವೀಡಿಯೋ ಶೇರ್ ಮಾಡಿದ ಅವರು, ‘ಪರ್ಫೆಕ್ಟ್ ಕರ್ಮಾ’ ಎಂದು ಬರೆದು ನಗುವಿನ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ವೀಡಿಯೋವನ್ನು ಫೆ.19 ರಂದು ಹಂಚಿಕೊಂಡಿದ್ದು, ನೆಟ್ಟಿಗರು ವೀಡಿಯೋ ನೋಡಿ ಅವನಿಗೆ ಈ ರೀತಿ ಆಗಲೇ ಬೇಕು. ಅವನಿಗೆ ಸರಿಯಾಗಿ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

    https://twitter.com/Natureholic2/status/1494825736313573378?ref_src=twsrc%5Etfw%7Ctwcamp%5Etweetembed%7Ctwterm%5E1494825736313573378%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-attempts-to-kick-stray-dog-gets-instant-karma-watch-5250648%2F

    ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಗಟ್ಟಲೇ ಜನರು ವೀಡಿಯೋವನ್ನು ವೀಕ್ಷಿಸಿದ್ದು, ಶೇರ್ ಮಾಡುತ್ತಿದ್ದಾರೆ. ವೀಡಿಯೋ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

  • ಅರವಿಂದ್‍ಗೆ ಕ್ಯೂಟ್ ಎಂದ ದಿವ್ಯಾ ಉರುಡುಗ

    ಅರವಿಂದ್‍ಗೆ ಕ್ಯೂಟ್ ಎಂದ ದಿವ್ಯಾ ಉರುಡುಗ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರಣಯ ಪಕ್ಷಿಗಳತ್ತಿದ್ದ ಜೋಡಿ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಬಿಗ್‍ಬಾಸ್ ಕಾರ್ಯಕ್ರಮದ ನಂತರ ಎಲ್ಲೂ ಅಷ್ಟಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದೇ ಇದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಅರವಿಂದ್ ಕೆಪಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು ದಿವ್ಯಾ ಉರುಡುಗ ಕಾಮೆಂಟ್ ಮಾಡಿದ್ದಾರೆ.

    aravind divya

    ಹೌದು ಅರವಿಂದ್ ಕಪ್ಪು ಶ್ವಾನವೊಂದರ ಜೊತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ ಬೆನ್ನಟ್ಟಬೇಡಿ ಆದರೆ ಆಕರ್ಷಿಸಿ. ನಿಮ್ಮದಾಗಿರುವುದು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಶುಭವಾರ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಫೋಟೋಗೆ ದಿವ್ಯಾ ಉರುಡುಗ ಕ್ಯೂಟ್ ಎಂದು ಕಾಮೆಂಟ್ ಮಾಡುವುದರ ಜೊತೆಗೆ ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ಇದನ್ನೂ ಓದಿ:  ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

     

    View this post on Instagram

     

    A post shared by Aravind K P (@aravind_kp)

    ಬಿಗ್‍ಬಾಸ್ ಮನೆಯ ಕ್ಯೂಟ್ ಕಪಲ್ ಆಗಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಕ್ಷಕರ ಮನಗೆದ್ದಿದ್ದರು. ಇನ್ನೂ ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರವಾದ ಅಭಿಮಾನಿ ಬಳಗ ಹೊಂದಿದ್ದಾರೆ. ಅಲ್ಲದೇ ಇವರಿಬ್ಬರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯ ದಿವ್ಯಾ ಹಾಗೂ ಅರವಿಂದ್ ಮಾತ್ರ ಯಾವುದೇ ಗುಟ್ಟು ಬಿಟ್ಟು ಕೊಡದೇ ತಮ್ಮ, ತಮ್ಮ ಲೈಫ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ – ಅಭಿಮಾನಿಗಳಲ್ಲಿ ಅರವಿಂದ್ ಮನವಿ

  • ಮೊಬೈಲ್ ಫೋನ್ ಕದ್ದು ಟ್ರಿಪ್ ಹೊಡೆದ ಗಿಳಿ

    ಮೊಬೈಲ್ ಫೋನ್ ಕದ್ದು ಟ್ರಿಪ್ ಹೊಡೆದ ಗಿಳಿ

    ಗಿಳಿಯೊಂದು ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಕದ್ದು ಆಕಾಶದಲ್ಲಿ ಹಾರಾಡಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಗಿಳಿಯೊಂದು ವ್ಯಕ್ತಿಯೊಬ್ಬರ ಮೊಬೈಲ್ ಫೋನ್‍ನನ್ನು ಕದ್ದು, ವೇಗವಾಗಿ ಹಾರಾಡಿದೆ. ಈ ವೇಳೆ ಮೊಬೈಲ್ ಫೋನ್ ಕ್ಯಾಮೆರಾ ಆನ್ ಆಗಿದ್ದು, ಗಿಳಿ ಹಾರಾಡುವಾಗ ರಸ್ತೆ, ಮನೆಗಳು ಮತ್ತು ಮೇಲ್ಛಾವಣಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಒಂದು ನಿಮಿಷಗಳ ಕಾಲ ಹಾರಾಡಿದ ಗಿಳಿ ಕೊನೆಗೆ ಬಾಲ್ಕನಿಯ ಅಂಚಿನ ಮೇಲೆ ನಿಂತು ಕೊಳ್ಳುತ್ತದೆ. ಆಗ ಜನರು ಗಿಳಿಯನ್ನು ಓಡಿಸಲು ಪ್ರಯತ್ನಿಸಿದ್ದು, ಭಯದಿಂದ ಗಿಳಿ ಮೊಬೈಲ್‍ನನ್ನು ಅಲ್ಲಿಯೇ ಬಿಟ್ಟು ಹೋಗುತ್ತದೆ. ಇದನ್ನೂ ಓದಿ:ಖ್ಯಾತ ತಬಲ ವಾದ್ಯಕಾರ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

    ಈ ವೀಡಿಯೋವನ್ನು ಫ್ರೆಡ್ ಎಂಬವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಗಿಳಿ ಮೊಬೈಲ್ ಹಿಡಿದು ಅದ್ಭುತವಾಗಿ ಟ್ರಿಪ್ ಹೊಡೆದಿದೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಈ ವರೆಗೂ 973 ಸಾವಿರ ಮಂದಿ ವೀಕ್ಷಿಸಿದ್ದು, 7000 ರೀ ಟ್ವೀಟ್‍ಗಳು ಬಂದಿದೆ. ಕೆಲವರು ವೀಡಿಯೋ ನೋಡಿ ಇದೊಂದು ಪರಿಸರ ಸ್ನೇಹಿ ಡ್ರೋನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು

     

  • ಯುವಕನ ಅಪಾಯಕಾರಿ ಬೈಕ್ ಸ್ಟಂಟ್ – ಕಾಂಪೌಂಡ್ ನಜ್ಜುಗುಜ್ಜು

    ಯುವಕನ ಅಪಾಯಕಾರಿ ಬೈಕ್ ಸ್ಟಂಟ್ – ಕಾಂಪೌಂಡ್ ನಜ್ಜುಗುಜ್ಜು

    ಅಪಾಯಕಾರಿ ಬೈಕ್ ಸ್ಟಂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಯುವಕನೋರ್ವ ಬೈಕ್ ಸ್ಟಂಟ್ ಮಾಡುತ್ತಿರುವ ವೇಳೆ ನೆರೆ ಮನೆಯವರ ಕಾಂಪೌಂಡ್ ಗೆ ಗುದ್ದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನ ಸ್ಪ್ಲೆಂಡರ್ ಬುಲೆಟ್ ಲೋವ್ ಎಂಬ ಖಾತೆಯಲ್ಲಿ ಶೇರ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಲೈಕ್ಸ್ ಮತ್ತು ವ್ಯೂವ್ಸ್ ಪಡೆದುಕೊಂಡಿದೆ.

    ವೀಡಿಯೋದಲ್ಲಿ ಯುವಕನೋರ್ವ ನೀರಿನ ಮೇಲೆ ತನ್ನ ಬೈಕನ್ನು ವ್ಹೀಲಿಂಗ್ ಮಾಡಿ, ಒಂದೇ ಚಕ್ರದಲ್ಲಿ ಗಾಡಿಯನ್ನು ಓಡಿಸುತ್ತಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ನೆರೆಮನೆಯವರ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು ಗೋಡೆ ಕಿತ್ತು ಹೋಗುತ್ತದೆ. ಗೋಡೆ ಒಡೆದು ಹೋದರೂ ಯುವಕ ಮಾತ್ರ ಬೈಕನ್ನು ತನ್ನ ಕೈಯಲ್ಲಿಯೇ ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ. ಅಲ್ಲದೇ ಹೆಲ್ಮೆಟ್ ಕೂಡ ಧರಿಸಿರುವುದಿಲ್ಲ. ಅದೃಷ್ಟವಶಾತ್ ಯುವಕ ಅಪಾಯದಿಂದ ಪಾರಾಗಿದ್ದಾನೆ.  ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ