Tag: ಸೊಳ್ಳೆ

  • ಸೊಳ್ಳೆ ಕೊಂದಿದ್ದಕ್ಕೆ ಟ್ವಿಟ್ಟರ್‍ನಲ್ಲಿ ನಿಷೇಧ!

    ಸೊಳ್ಳೆ ಕೊಂದಿದ್ದಕ್ಕೆ ಟ್ವಿಟ್ಟರ್‍ನಲ್ಲಿ ನಿಷೇಧ!

    ಟೋಕಿಯೋ: ಉಗ್ರಗಾಮಿ ಸಂಘಟನೆ ಪರ ಟ್ವಿಟ್ ಮಾಡಿದರೆ ಆ ಖಾತೆಗಳನ್ನು ಟ್ವಿಟ್ಟರ್ ನಿಷೇಧಿಸುವುದು ನಿಮಗೆ ಗೊತ್ತೆ ಇದೆ. ಆದರೆ ಸೊಳ್ಳೆ ಕೊಂದಿದ್ದಕ್ಕೆ ಜಪಾನ್ ಪ್ರಜೆಯೊಬ್ಬನಿಗೆ ಟ್ವಿಟ್ಟರ್ ನಲ್ಲಿ ನಿಷೇಧ ಹೇರಲಾಗಿದೆ.

    ಆಗಿದ್ದು ಇಷ್ಟು ಆಗಸ್ಟ್ 20ರಂದು ಆತ ಟಿವಿ ನೋಡುತ್ತ ಕುಳಿತ್ತಿದ್ದಾಗ ಸೊಳ್ಳೆಯೊಂದು ಈತನನ್ನು ಕಡಿದಿದೆ. ಕೂಡಲೇ ಆತ ಸೊಳ್ಳೆಯನ್ನು ಕೊಂದು @nemuismywife ಖಾತೆಯಿಂದ ಫೋಟೋ ಹಾಕಿ ಟ್ವೀಟ್ ಮಾಡಿದ್ದ.

    ಇದಾದ ಕೆಲವೇ ಗಂಟೆಗಳಲ್ಲಿ ನಿಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎನ್ನುವ ಸಂದೇಶ ಬಂದಿದೆ. ನಂತರ ಆತ @DaydreamMatcha ಹೆಸರಿನ ಹೊಸ ಖಾತೆಯನ್ನು ತೆರೆದು, ನಾನು ಸೊಳ್ಳೆಯನ್ನು ಕೊಂದು ಫೋಟೋವನ್ನು ಹಾಕಿದ್ದಕ್ಕೆ ನನ್ನ ಹಿಂದಿನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ನಾನು ಸೊಳ್ಳೆಯನ್ನು ಕೊಂದಿದ್ದು ತಪ್ಪೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾನೆ.

    ಕೋಪದಿಂದ ಮಾಡಿದ ಈತನ ಟ್ವೀಟನ್ನು 31 ಸಾವಿರಕ್ಕೂ ಅಧಿಕ ಜನ ರೀ ಟ್ವೀಟ್ ಮಾಡಿದ್ದು, 27 ಸಾವಿರ ಕ್ಕೂ ಅಧಿಕ ಜನ ಲೈಕ್ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.

    ಆನ್ ಲೈನ್ ನಲ್ಲಿ ಕ್ರೈಂ, ಹಿಂಸಾಚಾರಕ್ಕೆ ಸಂಬಂಧಿಸಿದ ಟ್ವೀಟ್ ಗಳನ್ನು ತಡೆಗಟ್ಟಲು ಟ್ವಿಟ್ಟರ್ ಕೆಲವೊಂದು ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಆತನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು.

     

  • ಕಾರ್ ಕಿಟಕಿ ಮುಚ್ಚೋದು ಮರೆತಿದ್ದ ಮೀನುಗಾರ ವಾಪಸ್ ಬಂದು ನೋಡಿದಾಗ ದಂಗಾದ!

    ಕಾರ್ ಕಿಟಕಿ ಮುಚ್ಚೋದು ಮರೆತಿದ್ದ ಮೀನುಗಾರ ವಾಪಸ್ ಬಂದು ನೋಡಿದಾಗ ದಂಗಾದ!

    ನೆಯಲ್ಲಿ ಸಂಜೆಯಾದ್ರೆ ಸೊಳ್ಳೆ ಬರುತ್ತೆ ಅಂತ ಬಾಗಿಲು, ಕಿಟಕಿಗಳನ್ನ ಮುಚ್ಚಿಬಿಡ್ತೀವಿ. ಒಂದು ವೇಳೆ ಅವು ಒಳಗೆ ಬಂದ್ರೂ ಸೊಳ್ಳೇಬತ್ತಿ ಹಚ್ಚಿ ಅಥವಾ ಸೊಳ್ಳೇಬ್ಯಾಟ್ ಹಿಡಿದು ಸೊಳ್ಳೆಗಳನ್ನ ಸದೆಬಡಿಯಲು ನಿಂತುಬಿಡ್ತೀವಿ. ಆದ್ರೆ ಈ ವಿಡಿಯೋ ನೋಡಿದ್ರೆ ಮಾತ್ರ ನೀವು ಹೌಹಾರಿಬಿಡ್ತೀರ.

    ಮೀನುಗಾರರೊಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹೋಗಿದ್ದು, ತಮ್ಮ ಕಾರ್ ಕಿಟಕಿ ಮುಚ್ಚೋದನ್ನ ಮರೆತು ಹಾಗೇ ಬಿಟ್ಟು ಹೋಗಿದ್ರು. ಅವರು ವಾಪಸ್ ಬಂದು ನೋಡಿದಾಗ ಕಾರ್ ತುಂಬೆಲ್ಲಾ ಸೊಳ್ಳೆಗಳೇ. ಅದೂ ಹತ್ತೋ ಇಪತ್ತೋ ಸೊಳ್ಳೆಯಲ್ಲ. ಸಾವಿರಾರು ಸೊಳ್ಳೆಗಳು.

    ಅದ್ರಲ್ಲೂ ಕಾರ್‍ನೊಳಗೆ ಲೈಟ್ ಆಫ್ ಆಗಿರಲಿಲ್ಲ. ಆ ವ್ಯಕ್ತಿ ಬಣ್ಣಬಣ್ಣದ ಅಲಂಕಾರಿಕ ಲೈಟ್ ಕೂಡ ಕಾರ್‍ನೊಳಗೆ ಹಾಕಿದ್ದರಿಂದ ಸೊಳ್ಳೆಗಳು ಅದಕ್ಕೆ ಆಕರ್ಷಿತವಾಗಿ ಕಾರ್‍ನೊಳಗೆ ನುಗ್ಗಿವೆ. ಇನ್ನು ಆ ಮೀನುಗಾರ ಕಾರಿನ ಬಾಗಿಲು ತೆಗೆದು ಸೀಟ್ ಮೇಲಿದ್ದ ಸೊಳ್ಳೆಗಳನ್ನ ಕೈಯಲ್ಲೇ ತೆಗೆದು ತೋರಿಸ್ತಾರೆ.

    https://www.youtube.com/watch?v=mBdqj85o7E0