ಬೆಂಗಳೂರು: ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳಿಗೆ ಡೆಂಗ್ಯೂ (Dengue Fever) ಭೀತಿ ಶುರುವಾಗಿದೆ. ಮನೆಗಳ ಮುಂದೆಯೇ ಕಸ ಬಿದ್ದಿದ್ದು, ವಿಲೇವಾರಿ ಮಾಡದ ಪಾಲಿಕೆಯ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಡೆಂಗ್ಯೂ ದಿನೇದಿನೇ ಆತಂಕ ಸೃಸ್ಟಿಸ್ತಿದೆ. ಬಿಬಿಎಂಪಿ ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ. ಇದೇ ಡೆಂಗ್ಯೂ ಭೀತಿಯಿಂದ ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳು ಅಕ್ಷರಶಃ ಭಯಭೀತಗೊಂಡಿದ್ದಾರೆ. ಫುಟ್‍ಪಾತ್ ಮೇಲಿನ ಕಸ ವಿಲೇವಾರಿ ಮಾಡದೇ ಇರೋದ್ರಿಂದ ಸೊಳ್ಳೆಗಳು ಕಾಟ ವಿಪರೀತವಾಗಿವೆ. ಹೀಗಾಗಿ ಜನ ತಮ್ಮ ಮನೆಗಳ ಕಿಟಕಿ, ಬಾಗಿಲು ಕ್ಲೋಸ್ ಮಾಡಿಕೊಂಡೇ ವಾಸ ಮಾಡುತ್ತಿದ್ದಾರೆ.
ಇತ್ತ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ರೆ ದಂಡ ಹಾಕ್ತೀವಿ ಅಂತ ಕಮಿಷನರ್ ಸೂಚನೆ ನೀಡಿದ್ದಾರೆ. ಆದ್ರೆ ಪಾಲಿಕೆಯ ಕೆಲ ಸಿಬ್ಬಂದಿಯೇ ಆಯಾ ಏರಿಯಾಗಳಲ್ಲಿ ಕಸ ವಿಲೇವಾರಿ ಮಾಡಿಸ್ತಿಲ್ಲ. ಅದೇನೆ ಆಗ್ಲಿ ಅನಾರೋಗ್ಯ ಸೃಷ್ಟಿಯಾಗೋ ಮುನ್ನವೇ ಏರಿಯಾ ಜನರ ಆರೋಗ್ಯ ಕಾಪಾಡಬೇಕಿದೆ.
ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು, ಮನುಷ್ಯರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ ರಾಜ್ಯವಾದ ಕೇರಳದಲ್ಲಿ (Kerala) ಹಕ್ಕಿಜ್ಚರ ಕಾಣಿಸಿಕೊಂಡಿತ್ತು. ಅದು ಮಾಸುವ ಮುನ್ನವೇ ವೆಸ್ಟ್‌ನೈಲ್ (West Nile Virus) ಎಂಬ ವೈರಸ್ ಕೇರಳದ ಜನರನ್ನು ಕಾಡುತ್ತಿದ್ದು, ಈಗಾಗಲೇ ಮಕ್ಕಳು ಸೇರಿದಂತೆ ಕನಿಷ್ಟ ಐವರಲ್ಲಿ ಸೋಂಕು ದೃಢಪಟ್ಟಿದೆ. ವೆಸ್ಟ್‌ನೈಲ್ ವೈರಸ್ ಎಂದರೇನು? ರೋಗಲಕ್ಷಣಗಳೇನು ಎಂಬುದರ ಕುರಿತು ಸಣ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕೇರಳದ ತ್ರಿಶೂರ್, ಮಲಪ್ಪುರಂ ಹಾಗೂ ಕೋಝಿಕ್ಕೋಡ್‌ನಲ್ಲಿ ವೆಸ್ಟ್‌ನೈಲ್ ಜ್ವರ ಹರಡುತ್ತಿದೆ. ಇದು ಸೊಳ್ಳೆಯಿಂದ (Mosquito) ಹರಡುವ ರೋಗವಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗಿದೆ. ಮುಂಗಾರು ಪೂರ್ವ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವ ಕಾರಣ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಏನಿದು ವೈರಸ್? ವೆಸ್ಟ್‌ನೈಲ್ ವೈರಸ್ 1937ರಲ್ಲಿ ಮೊದಲ ಬಾರಿಗೆ ಉಗಾಂಡಾದ ವೆಸ್ಟ್‌ನೈಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿತು. ಕೇರಳವು 2011ರಲ್ಲಿ ವೆಸ್ಟ್‌ನೈಲ್ ಜ್ವರದ ಮೊದಲ ಪ್ರಕರಣವನ್ನು ವರದಿ ಮಾಡಿದೆ. 2019 ರಲ್ಲಿ ಮಲಪ್ಪುರಂನ ಆರು ವರ್ಷದ ಬಾಲಕ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. 2022ರಲ್ಲಿ, ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಈ ವೈರಸ್ ಮಾನವರಲ್ಲಿ ಮಾರಣಾಂತಿಕ ನರವೈಜ್ಞಾನಿಕ ಕಾಯಿಲೆಗೆ ಕಾರಣವಾಗಬಹುದು. ಆದರೆ, ಕೆಲವೊಮ್ಮೆ ಸೋಂಕಿಗೆ ಒಳಗಾದ ಹೆಚ್ಚಿನ ವ್ಯಕ್ತಿಗಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಇದು ಮುಖ್ಯವಾಗಿ ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ವೆಸ್ಟ್‌ನೈಲ್ ವೈರಸ್ ಮುಖ್ಯವಾಗಿ ಆಫ್ರಿಕಾ, ಯುರೋಪ್, ಮಧ್ಯಪ್ರಾಚ್ಯ, ಉತ್ತರ ಅಮೆರಿಕ ಮತ್ತು ಪಶ್ಚಿಮ ಏಷ್ಯಾದಲ್ಲಿ ಕಂಡುಬರುತ್ತದೆ. ಈ ಜ್ವರವು ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳಿಂದ ಹರಡುತ್ತದೆ.
ರೋಗಲಕ್ಷಣಗಳೇನು? ಸಾಮಾನ್ಯವಾಗಿ ಮೊಟ್ಟಮೊದಲ ಬಾರಿಗೆ ಈ ಸೋಂಕಿಗೆ ಒಳಗಾದ 80% ಜನರಲ್ಲಿ ಯಾವುದೇ ಬಗೆಯ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಕೆಲವರಲ್ಲಿ ಜ್ವರ, ತಲೆನೋವು, ಸುಸ್ತು, ದೇಹದ ನೋವು, ವಾಕರಿಕೆ, ವಾಂತಿ, ಚರ್ಮದ ದದ್ದುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ, ಕೆಲವು ರೋಗಿಗಳಲ್ಲಿ ಕುತ್ತಿಗೆ ಬಿಗಿತ, ಮೂರ್ಖತನ, ದಿಗ್ಭ್ರಮೆ, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯು ಸೇರಿದಂತೆ ತೀವ್ರವಾದ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.
ಈ ಸೋಂಕು ತಗುಲಿದವರಲ್ಲಿ 1%ಕ್ಕಿಂತ ಕಡಿಮೆ ಪ್ರಕರಣದಲ್ಲಿ ಗಂಭೀರತೆ ಗೋಚರವಾಗಬಹುದು. ಸೋಂಕು ತಗುಲಿ ಸಮಸ್ಯೆ ಗಂಭೀರವಾದರೆ ಮೆದುಳಿನಲ್ಲಿ ಉರಿಯೂತ ಅಥವಾ ಮೆನಿಂಜೈಟಿಸ್‌ನಂತಹ ನರವೈಜ್ಞಾನಿಕ ತೊಡಕುಗಳು ಉಂಟಾಗಬಹುದು. ಇದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳ ಉರಿಯೂತಕ್ಕೆ ಕಾರಣವಾಗಬಹುದು ಎಂದು ಡಾ.ರಾಕೇಶ್ ಗುಪ್ತಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ವೈರಸ್‌ನ ಪ್ರಭಾವ ಸಾಮಾನ್ಯವಾಗಿ ಮೂರರಿಂದ 14 ದಿನಗಳ ವರೆಗೆ ಇರುತ್ತದೆ.
ವೆಸ್ಟ್‌ನೈಲ್ ರೋಗಕ್ಕೆ ಇಲ್ಲ ಚಿಕಿತ್ಸೆ: ವೆಸ್ಟ್‌ನೈಲ್ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂದು ಡಾ ಗುಪ್ತಾ ತಿಳಿಸಿದ್ದಾರೆ. ಸೌಮ್ಯವಾದ ಪ್ರಕರಣಗಳಲ್ಲಿ, ನೋವು ಮತ್ತು ಜ್ವರ ಪರಿಹಾರಕ್ಕಾಗಿ ಪ್ರತ್ಯಕ್ಷವಾದ ಔಷಧಿಗಳ ಮೂಲಕ ರೋಗಲಕ್ಷಣಗಳನ್ನು ನಿರ್ವಹಿಸಬಹುದು.
ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ಸೇರಿಸುವುದು, ಅಭಿದಮನಿ ದ್ರವಗಳು, ಉಸಿರಾಟದ ಬೆಂಬಲ ಮತ್ತು ದ್ವಿತೀಯಕ ಸೋಂಕುಗಳ ತಡೆಗಟ್ಟುವಿಕೆ ಅಗತ್ಯವಾಗಬಹುದು.
ಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ವ್ಯಕ್ತಿಯ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ, ವಯಸ್ಸಾದ ವಯಸ್ಕರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ತೀವ್ರ ತೊಡಕುಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ತಡೆಗಟ್ಟುವುದು ಹೇಗೆ? ವೆಸ್ಟ್‌ನೈಲ್ ರೋಗಕ್ಕೆ ಯಾವುದೇ ಔಷಧಿ ಅಥವಾ ಚಿಕಿತ್ಸೆ ಇಲ್ಲದ ಕಾರಣ ಆದಷ್ಟು ನಮ್ಮ ಆರೋಗ್ಯದ ಕಾಳಜಿಯನ್ನು ವಹಿಸಬೇಕು. ಮನೆಗೆ ಸೊಳ್ಳೆಗಳು ಬರದಂತೆ ನೋಡಿಕೊಳ್ಳುವುದು, ಶುಚಿತ್ವ ಕಾಪಾಡಿಕೊಳ್ಳುವುದರಿಂದ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಅಲ್ಲದೇ ಮಲಗುವ ವೇಳೆ ಸೊಳ್ಳೆ ಪರದೆಯನ್ನು ಬಳಸುವುದು ಉತ್ತಮ. ಇನ್ನು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರವಿರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ತಂದೆಯನ್ನು ಕೊಲ್ಲುವ ಉದ್ದೇಶದಿಂದ ಜೈಲಿನಲ್ಲಿಟ್ಟಿದ್ದಾರೆಂದು ನಾರಾ ಲೋಕೇಶ್ ಆರೋಪ
ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ಜೈಲಿನಲ್ಲಿ (Jail) ಝಡ್ ಪ್ಲಸ್ ಭದ್ರತೆ ಇದ್ದರೂ ಅವರಿರುವ ಕೊಠಡಿಯಲ್ಲಿ ವಿಪರೀತ ಸೊಳ್ಳೆಗಳಿವೆ (Mosquito) ಎನ್ನಲಾಗಿದೆ. ತಮ್ಮ ತಂದೆಯನ್ನು ಕೊಲ್ಲಲು ಜೈಲಿನಲ್ಲಿಟ್ಟಿರುವುದಾಗಿ ಅವರ ಪುತ್ರ ನಾರಾ ಲೋಕೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ನಾರಾ ಲೋಕೇಶ್, ಮುಖ್ಯಮಂತ್ರಿ ಜಗನ್ ರೆಡ್ಡಿ ತನ್ನ ತಂದೆಯನ್ನು ಕೊಲ್ಲುವ ಉದ್ದೇಶದಿಂದ ಜೈಲಿನಲ್ಲಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರು ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ ಎಂದು ಲೋಕೇಶ್ ಆರೋಪಿಸಿದ್ದಾರೆ. ಈ ಹಿನ್ನೆಲೆ ತಮ್ಮ ತಂದೆಯ ಆರೋಗ್ಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿ ಸೊಳ್ಳೆ ಕಡಿತದ ಬಗ್ಗೆ ಚಂದ್ರಬಾಬು ನಾಯ್ಡು ಅವರ ದೂರುಗಳನ್ನು ಜೈಲು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಲೋಕೇಶ್ ಆರೋಪಿಸಿದ್ದಾರೆ. ಅದೇ ರೀತಿ ಟಿಡಿಪಿ ಆಂಧ್ರಪ್ರದೇಶದ ಅಧ್ಯಕ್ಷ ಕಿಂಜರಾಪು ಅಚ್ಚನ್ನೈಡು ಅವರು ಕೂಡಾ ಜೈಲಿನಲ್ಲಿ ತೀವ್ರ ಸೊಳ್ಳೆಗಳ ಹಾವಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂದಿದ್ದಾರೆ. ಡೆಂಗ್ಯೂಗೆ ಕೈದಿಯೊಬ್ಬರು ಸಾವನ್ನಪ್ಪಿದ ನಂತರ ಈ ಆತಂಕಗಳು ತೀವ್ರಗೊಂಡಿವೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಆರು ವರ್ಷದ ನಂತರ ಕಾರವಾರಕ್ಕೆ ಬಂದಿಳಿದ ಟುಪೋಲೆವ್ ಯುದ್ಧ ವಿಮಾನ
ಈ ಹಿಂದೆ ಟಿಡಿಪಿ ಅವಧಿಯಲ್ಲಿ ಮಾಜಿ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಅವರು ಕೂಡಾ ಇದೇ ರೀತಿ ಸೊಳ್ಳೆ ಕಾಟದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಸೆಪ್ಟೆಂಬರ್ 18 ರಂದು ಕೇಂದ್ರ ಕಾರಾಗೃಹದಲ್ಲಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ರಾಮಕೃಷ್ಣುಡು ಚಂದ್ರಬಾಬು ನಾಯ್ಡು ಅವರ ಜೈಲು ಕೋಣೆಯಲ್ಲಿ ವಿಪರೀತ ಸೊಳ್ಳೆಗಳಿವೆ ಎಂಬುದನ್ನು ತಿಳಿದುಕೊಂಡರು. ಈ ಬಗ್ಗೆ ವಿಚಾರಿಸಿದಾಗ ಸೊಳ್ಳೆಪರದೆ, ಹಾಸಿಗೆ ಮತ್ತಿತರ ವಸ್ತುಗಳನ್ನು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಅಸಮರ್ಪಕ ಸೌಲಭ್ಯಗಳು ಇರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಟಿಡಿಪಿ ನಾಯಕರಿಂದ ಹಲವಾರು ದೂರುಗಳ ಹೊರತಾಗಿಯೂ ಜೈಲು ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ನೀಡದ ಕಾರಣ ಚಂದ್ರಬಾಬು ನಾಯ್ಡು ಅವರ ಬಂಧನದ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಿದರು ಎಂದು ಪಕ್ಷ ಹೇಳಿದೆ. ರಾಜ್ಯಾದ್ಯಂತ ಜನರು ಮಾಜಿ ಸಿಎಂ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರೂ, ಈ ಕಳವಳಗಳನ್ನು ಪರಿಹರಿಸಲು ಅಧಿಕಾರಿಗಳು ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಪಕ್ಷ ಆರೋಪಿಸಿದೆ. ಇದನ್ನೂ ಓದಿ: ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ- 100 ಮಂದಿ ದುರ್ಮರಣ
ಲಕ್ನೋ: ಆಸ್ಪತ್ರೆಯಲ್ಲಿ (Hospital) ಪತ್ನಿಗೆ ಸೊಳ್ಳೆ (Mosquitoes) ಕಚ್ಚುತ್ತಿದೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಬಳಿ ಸಹಾಯ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಚಂದೌಸಿಯ ರಾಜ್ ಮೊಹಲ್ಲಾದ ನಿವಾಸಿ ಅಸದ್ ಖಾನ್ ಪೊಲೀಸರ ಬಳಿ ಸಹಾಯ ಕೇಳಿದ ವ್ಯಕ್ತಿ. ಈತ ಪತ್ನಿಗೆ (Wife) ಹೆಣ್ಣು ಮಗು ಜನಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಚಂದೌಸಿಯ ಹರಿ ಪ್ರಕಾಶ್ ನರ್ಸಿಂಗ್ ಹೋಮ್‍ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆಗೆ ಹೆಚ್ಚು ಸೊಳ್ಳೆ ಕಡಿದಿತ್ತು. ಇದನ್ನು ಗಮನಿಸಿದ ಅಸದ್ ಖಾನ್ ಟ್ವೀಟ್ ಮಾಡಿದ್ದು, ಸಹಾಯಕ್ಕಾಗಿ ಉತ್ತರಪ್ರದೇಶದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.
‘माफिया से लेकर मच्छर तक का निदान’ –
नर्सिंग होम में अपने नवजात शिशु और प्रसूता पत्नी को मच्छरों से राहत देने के लिये एक व्यक्ति द्वारा ट्वीट कर मदद की अपील की गयी। #UP112 PRV 3955 ने त्वरित कार्यवाही कर नर्सिंग होम में मॉस्किटो क्वॉइल पहुँचाया।#UPPCares@sambhalpolicepic.twitter.com/WTrK7o8bhY
ಟ್ವೀಟ್‍ನಲ್ಲಿ ಏನಿದೆ?: ನನ್ನ ಹೆಂಡತಿ ಚಂದೌಸಿಯಲ್ಲಿರುವ ಹರಿ ಪ್ರಕಾಶ್ ನಸಿರ್ಂಗ್ ಹೋಮ್‍ನಲ್ಲಿ ಪುಟ್ಟ ದೇವತೆಗೆ ಜನ್ಮ ನೀಡಿದ್ದಾಳೆ. ನನ್ನ ಹೆಂಡತಿ ನೋವಿನಿಂದ ಬಳಲುತ್ತಿದ್ದಾಳೆ. ಜೊತೆಗೆ ಆಕೆಗೆ ಹಲವಾರು ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ತಕ್ಷಣ ಮಾರ್ಟೀನ್ ಕಾಯಿಲ್ ಅನ್ನು ಒದಗಿಸಿ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಪಡೆದ ಪೊಲೀಸರು ಸೊಳ್ಳೆ ನಿವಾರಕ ಕಾಯಿಲ್‍ನೊಂದಿಗೆ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿದರು. ವಿಷಯವನ್ನು ಅರಿತು ಸಹಾಯ ಮಾಡಿದ ಪೊಲೀಸರಿಗೆ ಅಸಾದ್ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಸದ್, ನನ್ನ ಹೆಂಡತಿ ನಮ್ಮ ಮಗುವಿಗೆ ಜನ್ಮ ನೀಡಲು ಆಸ್ಪತ್ರೆಯಲ್ಲಿದ್ದಳು. ಆಕೆ ಅನುಭವಿಸುತ್ತಿದ್ದ ನೋವಿನ ಜೊತೆಗೆ ಸೊಳ್ಳೆಗಳು ಕಚ್ಚುತ್ತಿದ್ದವು. ಸಮಯ ಬೆಳಗ್ಗೆ 2: 45 ಆಗಿದ್ದರಿಂದ ಯುಪಿ ಪೊಲೀಸರನ್ನು ಹೊರತುಪಡಿಸಿ ಬೇರೆಯವರ ಸಹಾಯವನ್ನು ಪಡೆಯಲು ನಾನು ಯೋಚಿಸಲಿಲ್ಲ. ಆದರೆ ನಾನು ಟ್ವೀಟ್ ಮಾಡಿದ ಕೂಡಲೇ ನನಗೆ ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿತು. ಅದರ ನಂತರ, ಅವರು ಸೊಳ್ಳೆ ನಿವಾರಕ ಕಾಯಿಲ್ ಅನ್ನು 10 ರಿಂದ 15 ನಿಮಿಷಗಳಲ್ಲಿ ತಲುಪಿಸಿದರು. ಈ ಹಿನ್ನೆಲೆಯಲ್ಲಿ ಯುಪಿ ಪೊಲೀಸರಿಗೆ ಸಹಾಯಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ:ಪಕ್ಷದಲ್ಲೇ ಉಳಿದುಕೊಳ್ಳುವಂತೆ ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿವಾದ
ಇಸ್ಲಾಮಾಬಾದ್: ನಿಗೂಢ ವೈರಲ್ ಜ್ವರವು ಪಾಕಿಸ್ತಾನದ ಕರಾಚಿಯಲ್ಲಿ ಕಾಡುತ್ತಿದ್ದು, ವೈದ್ಯರು ಇದು ಯಾವ ಜ್ವರವೆಂದು ತಿಳಿಯದೆ ತತ್ತರಿಸುತ್ತಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ‘ನಿಗೂಢ ವೈರಲ್ ಜ್ವರ’ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ವೈರಲ್ ಜ್ವರವನ್ನು ಮೊದಲು ಡೆಂಗ್ಯೂ ಎಂದು ಪರಿಗಣಿಸಿ ಪರೀಕ್ಷಿಸಿದಾಗ, ರಿಪೋರ್ಟ್ ನೆಗೆಟಿವ್ ಬಂತು ಎಂದು ವೈದ್ಯರು ಮತ್ತು ರೋಗಶಾಸ್ತ್ರಜ್ಞರು ತಿಳಿಸಿದರು. ಈ ರೋಗದಿಂದ ರೋಗಿಗಳ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತಿದ್ದು, ಡೆಂಗ್ಯೂ ರೋಗದ ಲಕ್ಷಣವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದ 3 ವಿಭಾಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಉತ್ತರಾಖಂಡ್
ಡೌ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಆಣ್ವಿಕ ರೋಗಶಾಸ್ತ್ರದ ಮುಖ್ಯಸ್ಥ ಪ್ರೊ.ಸಯೀದ್ ಖಾನ್ ಈ ಕುರಿತು ಮಾತನಾಡಿದ್ದು, ಒಂದೆರಡು ವಾರಗಳಿಂದ, ನಾವು ಈ ವೈರಲ್ ಜ್ವರದ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಜ್ವರದಿಂದ ರೋಗಿಗಳಲ್ಲಿ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳು ಕುಸಿಯುತ್ತಿವೆ. ಈ ರೋಗಲಕ್ಷಣಗಳು ಡೆಂಗ್ಯೂ ಜ್ವರಕ್ಕೆ ಹೋಲುತ್ತವೆ. ಆದರೆ ಈ ಕುರಿತು ಪರೀಕ್ಷೆಸಿದಾಗ ರಿಪೋರ್ಟ್ ನೆಗೆಟಿವ್ ಬರುತ್ತಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ(ಡಿಎಚ್‍ಒ) ಈ ಕುರಿತು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಶುಕ್ರವಾರ 45 ಜನರಿಗೆ ಹೊಸ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ಈ ನಿಗೂಢ ವೈರಸ್ ಕಾಯಿಲೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ನಗರದಲ್ಲಿ ಪ್ಲೇಟ್‍ಲೆಟ್‍ಗಳ ಮೆಗಾ ಯೂನಿಟ್‍ಗಳು ಮತ್ತು ಯಾದೃಚ್ಛಿಕ ಘಟಕಗಳ ತೀವ್ರ ಕೊರತೆಯಿದೆ. ಈ ಹಿನ್ನೆಲೆ ಇಲ್ಲಿನ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದರು.
ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ಹೆಮಟೋ-ರೋಗಶಾಸ್ತ್ರಜ್ಞರು ಸೇರಿದಂತೆ ಇತರ ತಜ್ಞರು, ಕರಾಚಿಯಲ್ಲಿ ಡೆಂಗ್ಯೂ ವೈರಸ್ ತರಹದ ಇನ್ನೊಂದು ರೋಗ ಕಾಣಿಸಿಕೊಂಡಿದೆ ಎಂದು ದೃಢಪಡಿಸಿದ್ದಾರೆ. ಇದು ಡೆಂಗ್ಯೂ ಜ್ವರದಂತೆಯೇ ಕಾರ್ಯನಿರ್ವಹಿಸುವ ಮತ್ತು ಅದೇ ಚಿಕಿತ್ಸಾ ಫ್ರೋಟೋಕಾಲ್ಸ್ ಗಳ ಅಗತ್ಯವಿರುವ ರೋಗವನ್ನು ಉಂಟುಮಾಡುತ್ತದೆ. ಆದರೆ ಇದು ಡೆಂಗ್ಯೂ ಜ್ವರವಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು
ಗುಲ್ಯನ್-ಎ-ಇಕ್ಬಾಲ್‍ನ ಮಕ್ಕಳ ಆಸ್ಪತ್ರೆಯ ಆಣ್ವಿಕ ವಿಜ್ಞಾನಿ ಡಾ.ಮುಹಮ್ಮದ್ ಜೊಹೈಬ್ ಅವರು, ಈ ವೈರಸ್ ಡೆಂಗ್ಯೂ ಅಲ್ಲ. ಆದರೆ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರವಾಗಿದೆ ಎಂದು ದೃಢಪಡಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಸಾಮಾನ್ಯವಾಗಿದೆ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುತ್ತೆ ಎಂದು ತಿಳಿಸಿದರು.
‘ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಹೊಸ ಮಾದರಿಯ ಸೆರೋಟೈಪ್-2 ವೈರಾಣುವಿಂದ ಅಪಾಯಕಾರಿ ಡೆಂಗ್ಯೂ ಜ್ವರ ಕಾಣಸಿಕೊಳ್ಳುತ್ತಿದೆ’ ಎಂದು ಕಳೆದ ವಾರವಷ್ಟೇ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಈ ವರ್ಷ ಮೊದಲ ಏಳು ತಿಂಗಳ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,500ರ ಗಡಿಯ ಆಸುಪಾಸಿನಲ್ಲಿತ್ತು. ಮಳೆ ಚುರುಕುಗೊಂಡ ಬಳಿಕ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯ ಹಾದಿ ಹಿಡಿದಿದೆ. ಈವರೆಗೆ ಒಟ್ಟು 3,279 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರಿನಲ್ಲಿ 575 ಪ್ರಕರಣಗಳು ದೃಢಪಟ್ಟಿವೆ. ಕಲಬುರ್ಗಿಯಲ್ಲಿ 313, ಉಡುಪಿಯಲ್ಲಿ 312, ಶಿವಮೊಗ್ಗದಲ್ಲಿ 235, ದಕ್ಷಿಣ ಕನ್ನಡದಲ್ಲಿ 190, ಕೊಪ್ಪಳದಲ್ಲಿ 160, ಬಳ್ಳಾರಿಯಲ್ಲಿ 145, ದಾವಣಗೆರೆಯಲ್ಲಿ 138, ಹಾವೇರಿಯಲ್ಲಿ 125, ಗದಗದಲ್ಲಿ 116 ಹಾಗೂ ವಿಜಯಪುರದಲ್ಲಿ 114 ಮಂದಿ ಡೆಂಗ್ಯೂ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ. ಇದನ್ನೂ ಓದಿ: ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಹುಲಿರಾಯ
ಸೋಂಕಿತ ಈಡಿಸ್ ಈಜಿಫ್ಟೈ ಸೊಳ್ಳೆಗಳ ಕಡಿತದಿಂದ ಹರಡುವ ಈ ಜ್ವರಕ್ಕೆ 2019ರಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದರು. ಅವರಲ್ಲಿ 17 ಮಂದಿ ಮೃತಪಟ್ಟಿದ್ದರು. 10 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದ್ದವು. ದಶಕದಲ್ಲೇ ಅತೀ ಹೆಚ್ಚು ಮಂದಿ ಈ ಜ್ವರಕ್ಕೆ ಒಳಪಟ್ಟಿದ್ದರು. ಕಳೆದ ವರ್ಷ 3,823 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.
ಆರೋಗ್ಯ ಇಲಾಖೆಯ ದೈನಂದಿನ ಡೆಂಗ್ಯೂ ವರದಿಯಲ್ಲಿ ಈ ವರ್ಷ ಯಾವುದೇ ಮರಣ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 1,042 ಚಿಕೂನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಉತ್ತರ ಕನ್ನಡ, ರಾಯಚೂರು ಹಾಗೂ ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಕರಣಗಳು ಖಚಿತಪಟ್ಟಿವೆ. ಎರಡು ತಿಂಗಳಲ್ಲಿ 534 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕಲಬುರ್ಗಿ (143), ಕೋಲಾರ (108) ಹಾಗೂ ಶಿವಮೊಗ್ಗದಲ್ಲಿ (106) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ.
ಮುಂಜಾಗ್ರತಾ ಕ್ರಮಕ್ಕೆ ಸೂಚನೆ:
‘ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆ, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಹಾಗಾಗಿ, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ
‘ನೀರಿನ ತೊಟ್ಟಿಗಳು, ಟ್ಯಾಂಕ್‍ಗಳು ಮತ್ತು ಬ್ಯಾರಲ್‍ಗಳನ್ನು ಕನಿಷ್ಠ ಒಂದು ವಾರಗಳಿಗೊಮ್ಮೆ ಸ್ವಚ್ಛಗೊಳಿಸಿ, ಮುಚ್ಚಿಡಬೇಕು. ಮಳೆ ನೀರು ಸಂಗ್ರಹವಾಗುವ ವಾಹನಗಳ ಚಕ್ರಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು. ಹವಾನಿಯಂತ್ರಿತ ಯಂತ್ರಗಳು, ಹೂವಿನಕುಂಡಗಳಲ್ಲಿ ಪ್ರತಿ ವಾರ ನೀರನ್ನು ಖಾಲಿ ಮಾಡಬೇಕು’ ಎಂದು ಇಲಾಖೆ ಹೇಳಿದೆ.
ಡೆಂಗ್ಯೂ, ಚಿಕೂನ್ ಗುನ್ಯಾ ಜ್ವರದ ಲಕ್ಷಣಗಳು:
* ತೀವ್ರ ಜ್ವರ
* ಮೈ-ಕೈ ನೋವು ಮತ್ತು ಕೀಲು ನೋವು
* ತೀವ್ರತರ ತಲೆನೋವು
* ಕಣ್ಣುಗಳಿಗೆ ಆಯಾಸದ ಅನುಭವ
* ವಾಕರಿಕೆ ಮತ್ತು ವಾಂತಿ
* ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು
* ಬಾಯಿ, ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ
ಚಿಕ್ಕಬಳ್ಳಾಪುರ: ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮನೆಯಲ್ಲಿ ಹೊಗೆ ಹಾಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ಮರಾಠಿ ಪಾಳ್ಯದಲ್ಲಿ ನಡೆದಿದೆ.
ರಾತ್ರಿ ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮಲಗುವ ಮುನ್ನ ಮನೆಯಲ್ಲಿ ಹೊಗೆ ಹಾಕಲಾಗಿತ್ತು. ಟಿನ್ ಡಬ್ಬದಲ್ಲಿ ಇದ್ದಿಲು ಹಾಕಿ ಬೆಂಕಿ ಹಚ್ಚಿ ಹೊಗೆ ಹಾಕಿ ಇಡೀ ಕುಟುಂಬವೇ ಗಾಢ ನಿದ್ರೆಗೆ ಜಾರಿದೆ. ಪರಿಣಾಮ ರಾತ್ರಿ ಪೂರ್ತಿ ಮನೆಯ ತುಂಬಾ ಹೊಗೆ ಆವರಿಸಿದ್ದು, ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ನಿದ್ದೆಗೆ ಜಾರಿದ 16 ವರ್ಷದ ಬಾಲಕಿ ಹೊಗೆ ಸೇವಿಸಿ ಮಲಗಿದ್ದಲ್ಲೇ ಕೊನೆಯುಸಿರು ಎಳೆದಿದ್ದಾಳೆ. ಮೃತ ಬಾಲಕಿಯ ತಂದೆ ವೀರಾಂಜನೇಯ, ತಾಯಿ ಶಾಂತಮ್ಮ ಮತ್ತು ತಂಗಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತ ಕುಟುಂಬ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಈ ಪ್ರಕರಣ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಹಮದಾಬಾದ್: ಸೊಳ್ಳೆ ಕಚ್ಚಿದ್ದಕ್ಕೆ ಮಹಿಳೆ ತನ್ನ ಮಗಳೊಂದಿಗೆ ಸೇರಿ ಪತಿಯನ್ನು ಥಳಿಸಿರುವ ವಿಚಿತ್ರ ಘಟನೆಯೊಂದು ಗುಜರಾತಿನ ಅಹಮದಾಬಾದ್ ನಗರದ ನರೋದಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭೂಪೇಂದ್ರ ಲೆವಾ ಹಲ್ಲೆಗೊಳಗಾದ ಪತಿ. ಗಂಭೀರವಾಗಿ ಗಾಯಗೊಂಡಿರುವ ಭೂಪೇಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಭೂಪೇಂದ್ರ ಕಳೆದ ಕೆಲವು ತಿಂಗಳಿನಿಂದ ಕಾರಿನಲ್ಲಿ ಎಲ್‍ಇಡಿ ಲೈಟ್ ಗಳ ಮಾರಾಟ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಚೆನ್ನಾಗಿ ಆದಾಯ ಬಾರದ ಕಾರಣ ಎರಡು ತಿಂಗಳಿನಿಂದ ಮನೆಯ ವಿದ್ಯುತ್ ಬಿಲ್ ತುಂಬಿರಲಿಲ್ಲ. ಹೀಗಾಗಿ ಅಧಿಕಾರಿಗಳು ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಮಂಗಳವಾರ ರಾತ್ರಿ ಮಲಗಿದ್ದಾಗ ಫ್ಯಾನ್ ಇಲ್ಲದ ಕಾರಣ ಸೊಳ್ಳೆಗಳು ಕಚ್ಚುತ್ತಿದ್ದವು.
ಬುಧವಾರ ಬೆಳಗ್ಗೆ ಆಗುತ್ತಿದ್ದಂತೆ ಪತ್ನಿ ಸಂಗೀತಾ ರಾತ್ರಿಯೆಲ್ಲ ಸೊಳ್ಳೆ ಕಚ್ಚಿವೆ ಎಂದು ದೂರಿದ್ದಾಳೆ. ಪತಿ ಭೂಪೇಂದ್ರ ನಗುತ್ತಾ ನನ್ನ ಜೊತೆ ಮಲಗಿದ್ದರೆ ಚೆನ್ನಾಗಿ ನಿದ್ದೆ ಬರುತ್ತಿತ್ತು ಎಂದು ಪತ್ನಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ಸಂಗೀತಾ ಅಡುಗೆ ಮನೆಗೆ ತೆರಳಿ ಒನಕೆ ತಂದು ಪತಿಯನ್ನು ಕೆಳಗೆ ಹಾಕಿ ಥಳಿಸಿದ್ದಾಳೆ. ಅಮ್ಮನಿಗೆ ಪುತ್ರಿ ಚಿತಲ್ ಸಹ ಸಾಥ್ ನೀಡಿದ್ದಾಳೆ.
ಭೂಪೇಂದ್ರ ಚೀರಾಟ ಕೇಳಿ ಮನೆಗೆ ಆಗಮಿಸಿದ ನೆರೆಹೊರೆಯವರು ಆತನನ್ನು ರಕ್ಷಿಸಿದ್ದಾರೆ. ಕೂಡಲೇ ಭೂಪೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಭೂಪೇಂದ್ರ ಎಡ ಕಣ್ಣಿನ ಭಾಗದಲ್ಲಿ ಏಳು ಹೊಲಿಗೆ ಹಾಕಲಾಗಿದೆ.
ಬೀಜಿಂಗ್: ಜಗತ್ತಿನಲ್ಲಿ ನಡೆದ ಯುದ್ಧಗಳಿಂದಾಗಿ ಸಾವನ್ನಪ್ಪುವುದಕ್ಕಿಂತ ಹೆಚ್ಚಾಗಿ ಮನಷ್ಯರು ಸೊಳ್ಳೆ ಕಡಿತದಿಂದ ಮೃತರಾಗುತ್ತಾರೆ. ಹೀಗಾಗಿ ಸೊಳ್ಳೆಗಳ ಸರ್ವನಾಶಕ್ಕೆ ಚೀನಾ ಹೊಸ ಅಸ್ತ್ರವನ್ನು ಬಳಸಲು ಸಿದ್ಧತೆ ನಡೆಸುತ್ತಿದೆ.
ಹೌದು. ಚೀನಾದ ಬೀಜಿಂಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಟಿಐ) ಪ್ರಯೋಗಾಲಯದಲ್ಲಿ ಸೊಳ್ಳೆಗಳ ನಿರ್ನಾಮಕ್ಕೆಂದು `ರಾಡಾರ್’ ಎಂಬ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ಪರೀಕ್ಷೆಯ ವೇಳೆ ಪ್ರಯೋಗ ಯಶಸ್ವಿಯಾಗಿದೆ.
ರಾಡಾರ್ ತಂತ್ರಜ್ಞಾನವು ಕ್ಷಿಪಣಿ, ರಹಸ್ಯ ವಿಮಾನಗಳನ್ನು ಪತ್ತೆ ಹಚ್ಚುವ ಮಾದರಿಯಲ್ಲೇ ಸೊಳ್ಳೆಗಳ ವಿರುದ್ಧ ಹೋರಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಮಲೇರಿಯಾದಿಂದ ಸುಮಾರು 10 ಲಕ್ಷ ಜನ ಸಾವಿಗೀಡಾಗಿದ್ದಾರೆಂದು ವರದಿ ಮಾಡಿತ್ತು. ಇಂತಹ ಸೊಳ್ಳೆಗಳ ಕಾಟದಿಂದ ಮುಕ್ತವಾಗಲು ರಾಡಾರ್ ತಂತ್ರಜ್ಞಾನ ಬಳಸಲು ಬಿಟಿಐ ಸಜ್ಜಾಗಿದೆ.
ಸೊಳ್ಳೆಗಳನ್ನು ಪತ್ತೆ ಮಾಡುವುದು ಹೇಗೆ?: ಇಷ್ಟು ದೊಡ್ಡ ತಂತ್ರಜ್ಞಾನದಿಂದ ಸಣ್ಣ ಗಾತ್ರವಿರುವ ಸೊಳ್ಳೆಗಳನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ರಾಡಾರ್ ನಿಂದ ಬೇರೆ ಬೇರೆ ಫ್ರೀಕ್ಷೆನ್ಸಿಗಳಲ್ಲಿ ಎಲೆಕ್ಟ್ರೋಮ್ಯಾಗ್ನಟಿಕ್ ಎಂಬ ಅಲೆಗಳನ್ನು ಹೊರಡಿಸಲಾಗುತ್ತದೆ. ಈ ಅಲೆಗಳು ಸುಮಾರು 2 ಕೀ.ಮೀ ದೂರದ ವ್ಯಾಪ್ತಿಯಲ್ಲಿ ಎಲ್ಲೇ ಸೊಳ್ಳೆಗಳು ಕಂಡುಬಂದರೂ ಅವುಗಳಿಗೆ ಬಡಿದು ರಾಡಾರ್ ಗೆ ಸಂದೇಶ ತಲುಪಿಸುತ್ತದೆ. ಈ ವಿಧಾನದ ಮೂಲಕ ಒಂದು ಪ್ರದೇಶದಲ್ಲಿ ಸೊಳ್ಳೆಗಳ ಪ್ರಮಾಣವನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.
ಸರ್ವನಾಶ ಹೇಗೆ?: ಒಂದು ಪ್ರದೇಶದಲ್ಲಿ ಸೊಳ್ಳೆಗಳನ್ನು ಪತ್ತೆ ಮಾಡಿದ ಬಳಿಕ ಅವುಗಳು ಹೆಚ್ಚಿರುವ ಪ್ರದೇಶದಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾಶ ಮಾಡಬಹುದು. ಒಂದು ಪ್ರದೇಶದಿಂದ ಸೊಳ್ಳೆಗಳು ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಈ ವೇಳೆ ರಾಡಾರ್ ತಂತ್ರಜ್ಞಾನದ ಮೂಲಕ ಅವುಗಳನ್ನು ಪತ್ತೆ ಹಚ್ಚಿ ಅಲ್ಲಿನ ಜನರಿಗೆ ಮಾಹಿತಿ ನೀಡಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಬಹುದು.
ಒಟ್ಟಿನಲ್ಲಿ ಇದೀಗ ಚೀನಾ ಸೊಳ್ಳೆಗಳ ಸರ್ವನಾಶ ಮಾಡಲು ಕೈ ಹಾಕಿದ್ದು, ಅದರ ಪ್ರಯೋಗದಲ್ಲಿ ಯಶಸ್ವಿ ಕೂಡ ಆಗಿದೆ.
ಮೈಸೂರು: ಖಾಕಿಗಳನ್ನು ಕಂಡರೆ ದುಷ್ಟರು ಹೆದರುತ್ತಾರೆ. ದುಷ್ಟರ ಪಾಲಿಗೆ ಯಾವತ್ತು ಖಾಕಿಗಳು ದುಸ್ವಪ್ನ. ಇಂತಹ ಖಾಕಿಗಳು ಸಂಜೆಯಾದರೆ ಸಾಕು ಪೊಲೀಸ್ ಠಾಣೆಯಲ್ಲೇ ಕುಳಿತುಕೊಳ್ಳಲು ಬೆಚ್ಚುತ್ತಾರೆ. ಅವು ಒಳಗೆ ಸೇರಿಕೊಂಡರೆ ಹೇಗಪ್ಪಾ ಎಂದು ತಮ್ಮ ಸುತ್ತಲೂ ಹೊಗೆ ಹಾಕಿಕೊಳ್ಳುತ್ತಾರೆ.
ಅಂದಹಾಗೆ ಪೊಲೀಸರು ಹೆದರುತ್ತಿರುವುದು ಯಾವುದಕ್ಕೆ ಅಂದುಕೊಂಡಿದ್ದೀರ? ನರ ಮಾನವವಿಗೂ ಅಲ್ಲ ದೆವ್ವ ಭೂತಕ್ಕೂ ಅಲ್ಲ. ಪೊಲೀಸರು ಹೆದರುತ್ತಿರುವುದು ಸೊಳ್ಳೆಗಳಿಗೆ. ಈ ಪರಿಸ್ಥಿತಿ ಇರೋದು ಸಿಎಂ ತವರೂರು ಮೈಸೂರಿನಲ್ಲಿ. ಹೇಳಿ ಕೇಳಿ ಮೈಸೂರಿನಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ ಭೀತಿ ಇದೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳು ಮುತ್ತಿಕೊಳ್ಳುತ್ತವೆ. ಸೊಳ್ಳೆ ಕಾಟದಿಂದ ರಕ್ಷಿಸಿಕೊಳ್ಳಲು ಠಾಣೆಯ ಪೊಲೀಸರು ಪ್ರತಿನಿತ್ಯ ಸಂಜೆ ಠಾಣೆಗೆ ಬೇವಿನ ಸೊಪ್ಪಿನ ಹೊಗೆ ಹಾಕುತ್ತಿದ್ದಾರೆ. ಪೊಲೀಸ್ ಠಾಣೆಯ ಸುತ್ತಮುತ್ತಲು ಬೆಳೆದಿರುವ ಗಿಡಗಂಟಿಗಳಿಂದ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ.
ಈ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ರೂ ಪಾಲಿಕೆ ಸಿಬ್ಬಂದಿ ಸ್ಪಂದಿಸಿಲ್ಲ. ಪ್ರತಿನಿತ್ಯ ಅವರಿಗೆ ಹೇಳಿ ಸುಸ್ತಾಗಿರುವ ಪೊಲೀಸ್ ಸಿಬ್ಬಂದಿ ಇದೀಗ ತಾವೇ ಸ್ವತಃ ಬೇವಿನ ಸೊಪ್ಪಿನ ಹೊಗೆ ಹಾಕಿಕೊಂಡು ಸೊಳ್ಳೆಗಳಿಂದ ರಕ್ಷಸಿಕೊಳ್ಳಲು ಮುಂದಾಗಿದ್ದಾರೆ.