Tag: ಸೊಂಕಿತ

  • ಲಾಕ್‍ಡೌನ್ ಸಡಿಲಗೊಂಡ ದಿನವೇ ಹಾವೇರಿಯಲ್ಲಿ ಕೊರೊನಾ ಪ್ರಕರಣ ಪತ್ತೆ

    ಲಾಕ್‍ಡೌನ್ ಸಡಿಲಗೊಂಡ ದಿನವೇ ಹಾವೇರಿಯಲ್ಲಿ ಕೊರೊನಾ ಪ್ರಕರಣ ಪತ್ತೆ

    ಹಾವೇರಿ: ಗ್ರೀನ್ ಝೋನ್‍ನಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದ ದಿನವೇ ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

    ಹಾವೇರಿ ಜಿಲ್ಲೆ ಸವಣೂರು ಮೂಲದ 32 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ 28ರಂದು ಮುಂಬೈನಿಂದ ಲಾರಿಯಲ್ಲಿ ಸವಣೂರಿಗೆ ಸೋಂಕಿತ ವ್ಯಕ್ತಿ ಆಗಮಿಸಿದ್ದರು. ಏಪ್ರಿಲ್ 29ರಂದು ಆರೋಗ್ಯ ಇಲಾಖೆ ಸಿಬ್ಬಂದಿ ಮುಂಬೈನಿಂದ ಬಂದು ಮನೆಯಲ್ಲಿದ್ದ ವ್ಯಕ್ತಿಯ ಸ್ಯಾಂಪಲ್‍ಗಳನ್ನು ಲ್ಯಾಬ್‍ಗೆ ಪರೀಕ್ಷೆ ಮಾಡಲು ಕಳಿಸಿದ್ದರು.

    ಮುಂಬೈನಿಂದ ಒಟ್ಟು ಮೂವರು ಹಾವೇರಿಗೆ ಬಂದಿದ್ದರು. ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಇಂದು ಓರ್ವ ವ್ಯಕ್ತಿಯ ವರದಿ ಬಂದಿದ್ದು, ಅದರಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನಿಬ್ಬರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.