Tag: ಸೈಮಾ ಅವಾರ್ಡ್

  • SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    ಗೌರಿ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. `ಗೌರಿ’ ಚಿತ್ರಕ್ಕಾಗಿ (Gowri Cinema) ಸೈಮಾ (SIIMA Award) ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಹಾಗೂ ಅತ್ಯುತ್ತಮ ಉದಯೋನ್ಮುಖ ನಟನಿಗಾಗಿ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ ಸಮರ್ಜಿತ್.

    ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ. ಸತತವಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಭರವಸೆಯ ಹೊಸ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಇದೀಗ ಸಮರ್ಜಿತ್ ಬಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ದುಬೈನಲ್ಲಿ ನಡೆದ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025ರ ಸಮಾರಂಭದಲ್ಲಿ ಸಮರ್ಜಿತ್ ತಮ್ಮ ಪ್ರಥಮ ಚಿತ್ರ `ಗೌರಿ’ಯಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ (ಕನ್ನಡ) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಈ ಭರವಸೆಯ ಹೆಜ್ಜೆ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: `ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?

     ದುಬೈನಲ್ಲಿ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಸಮರ್ಜಿತ್ ಅವರು ಅವಾರ್ಡ್ ಹಿಡಿದು ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ.

  • ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

    ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

    ಬೆಂಗಳೂರು: ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಕೊಡಲಾಗುವ ಪ್ರತಿಷ್ಠಿತ ಸೈಮಾ ಅವಾರ್ಡ್ (SIIMA Award) ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಿನ್ನೆ ಮತ್ತು ಇಂದು ಎರಡು ದಿನಗಳು ಜಯಮಹಲ್ ಪ್ಯಾಲೇಸ್‍ (Jayamahal Palace) ನಲ್ಲಿ ನಡೆಯುತ್ತಿದೆ. ವಿಶೇಷ ಅಂದ್ರೆ ಕಾರ್ಯಕ್ರಮ ಅಗಲಿದ ಕರ್ನಾಟರ ರತ್ನ ಅಪ್ಪು ಹೆಸರಲ್ಲಿ ನಡೆಯುತ್ತಿದೆ.

    ಚಿತ್ರರಂಗ ಕಲರ್‍ಫುಲ್ ಪ್ರಶಸ್ತಿ ಪ್ರದಾನ ಸಮಾರಂಭ ಸೈಮಾಗೆ ಈ ಬಾರಿ ಬೆಂಗಳೂರು (Bengaluru) ಸಾಕ್ಷಿ ಆಗಿದೆ. ನಿನ್ನೆ ಕನ್ನಡ ಸಿನಿಮಾ ಇಂಡಸ್ಟ್ರಿ (Kannada Film Industry) ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಗೆ (Telugu Film Industry) ಸಂಬಂಧ ಪಟ್ಟ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಕಳೆದ ಹತ್ತು ವರ್ಷಗಳಲ್ಲಿ ಇದೀಗ ಮೊದಲ ಬಾರಿಗೆ ಸೈಮಾ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದೂ ಪವರ್ ಸ್ಟಾರ್ (Power Star) ಡಾ.ಪುನೀತ್ ರಾಜ್‍ಕುಮಾರ್ (Dr. Puneeth RajKumar) ಹೆಸರಲ್ಲಿ ನಡೆಯುತ್ತಿದ್ದು, ಅಪ್ಪುಗೆ ಅರ್ಪಣೆಯಾಗಿದೆ.

    ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯ ತಾರೆಗಳು ತಂತ್ರಜ್ಞರು ಒಟ್ಟಿಗೆ ಸೇರಿದ್ರು. ತೆಲುಗು ನಟ ರಾಣಾ ದಗ್ಗುಬಾಟಿ (Rana daggubati) ಅಗಲಿದ ಗೆಳೆಯ ಅಪ್ಪುವನ್ನ ನೆನಪುಮಾಡಿಕೊಂಡ್ರು. ಅಲ್ಲದೇ ಶಿವಣ್ಣ (Dr. Shivaraj Kumar) ಸಹ ಅಪ್ಪುವನ್ನು ನೆನೆದು ಅಪ್ಪು ಎಲ್ಲೂ ಹೋಗಿಲ್ಲ ಅಂತಂದ್ರು. ಕನ್ನಡದ ಹಲವು ನಟ ನಟಿಯರು ಸುಂದರ ಸಂಜೆಗೆ ಮೆರುಗು ತಂದ್ರು. ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಶುಭ್ರಾ ಅಯ್ಯಪ್ಪ ಸೇರಿ ಹಲವು ನಾಯಕಿಯರು ಕಲರ್ ಕಲರ್ ಗೌನ್ ತೊಟ್ಟು ರೆಡ್‍ಕಾರ್ಪೇಟ್ ಮೇಲೆ ಬೆಕ್ಕಿನ ನಡಿಗೆಯಲ್ಲಿ ನಡೆದು ಬೀಗಿದ್ರು.

    ದಕ್ಷಿಣದ ನಾಲ್ಕು ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗೂಡಿಸಿ ಪ್ರಶಸ್ತಿ ನೀಡುವ ಸೈಮಾ ಮೊದಲ ಬಾರಿ ಕರ್ನಾಟಕದ ಬೆಂಗಳೂರಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    Live Tv
    [brid partner=56869869 player=32851 video=960834 autoplay=true]

  • ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್

    ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್

    ಬೆಂಗಳೂರು: ಅಮರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಭಿಷೇಕ್ ಅಂಬರೀಷ್ ಅವರಿಗೆ ಸೈಮಾ ಸಮಾರಂಭದಲ್ಲಿ ಅತ್ಯುತ್ತಮ ಉದಯೋನ್ಮಕ ನಟ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್‍ನ್ನು ಅಭಿಷೇಕ್ ಅಂಬರೀಷ್ ತಂದೆಯ ಫೋಟೋ ಎದುರು ಇಟ್ಟಿದ್ದಾರೆ.

    ಹೈದರಾಬಾದ್‍ನಲ್ಲಿ ನಡೆದ ಅದ್ದೂರಿ ಸೈಮಾ ಸಮಾರಂಭದಲ್ಲಿ ಅತ್ಯುತ್ತಮ ಉದಯೋನ್ಮಕ ನಟ ಪ್ರಶಸ್ತಿಯನ್ನು ಅಭಿಷೇಕ್ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅಪ್ಪ ಅಂಬರೀಷ್ ಅವರ ಫೋಟೋದ ಮುಂದಿರಿಸಿ ಖುಷಿಪಟ್ಟಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

    ಮಗನಿಗೆ ಮೊದಲ ಅವಾರ್ಡ್ ಸಿಕ್ಕಿದ್ದಕ್ಕೆ ಹೆಮ್ಮೆ ಮತ್ತು ಸಂತಸ ಆಗುತ್ತಿದೆ. ಅಂಬರೀಷ್ ಇನ್ನೂ ಹೆಚ್ಚು ಹೆಮ್ಮೆ ಪಡುತ್ತಿದ್ದರು ಎಂದು ಬರೆದುಕೊಂಡು ಮಗನಿಗೆ ಅವಾರ್ಡ್ ಸಿಕ್ಕಿರುವ ಅಂಭ್ರಮದ ಕ್ಷಣದ ಫೋಟೋವನ್ನು, ಸೈಮಾ ಸಮಾರಂಭದಲ್ಲಿ ಸುಮಲತಾ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:  ಬೆಂಗಳೂರಿನಲ್ಲಿ ಪಾಕಿಸ್ತಾನ ಗೂಢಾಚಾರಿಯ ಬಂಧನ

    ಮಗನಿಗೆ ಸಿಕ್ಕ ಮೊದಲ ಅವಾರ್ಡ್ ಬಗ್ಗೆ ಸುಮಲತಾ ಅಂಬರೀಷ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸುಮಲತಾ ಕೂಡ ಭಾಗವಹಿಸಿದ್ದರು. ಈ ಸಂಭ್ರಮದ ಕ್ಷಣಕ್ಕೆ ಅವರೂ ಸಾಕ್ಷಿಯಾದರು.

    ನಾಗಶೇಖರ್ ನಿರ್ದೇಶನದ ಅಮರ್ ಸಿನಿಮಾ ಮೂಲಕ ಅಭಿಷೇಕ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಂಬರೀಷ್ ಇಹಲೋಕ ತ್ಯಜಿಸಿದ್ದು, ನೋವಿನ ಸಂಗತಿಯಾಗಿದೆ.