Tag: ಸೈಬರ್ ದಾಳಿ

  • ಸೈಬರ್ ಅಟ್ಯಾಕ್ | ಯೂರೋಪ್‌ನ ಪ್ರಮುಖ ಏರ್‌ಪೋರ್ಟ್‌ಗಳಿಂದ ವಿಮಾನಯಾನ ವಿಳಂಬ, ರದ್ದು

    ಸೈಬರ್ ಅಟ್ಯಾಕ್ | ಯೂರೋಪ್‌ನ ಪ್ರಮುಖ ಏರ್‌ಪೋರ್ಟ್‌ಗಳಿಂದ ವಿಮಾನಯಾನ ವಿಳಂಬ, ರದ್ದು

    – 3 ಗಂಟೆ ಸರತಿ ಸಾಲಲ್ಲಿ ನಿಂತು ಸುಸ್ತಾದ ಪ್ರಯಾಣಿಕರು

    ಲಂಡನ್‌: ಸೈಬರ್‌ ದಾಳಿಯಿಂದಾಗಿ ಲಂಡನ್‌ನ ಹೀಥ್ರೂ (London Heathrow Airport) ಸೇರಿದಂತೆ ಪ್ರಮುಖ ಯುರೂಪಿಯನ್‌ ವಿಮಾನ ನಿಲ್ದಾಣಗಳ ವಿಮಾನ ಯಾನದಲ್ಲಿ ವಿಳಂಬವಾಗಿದೆ. ಕೆಲ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ (Flight Cancellations) ಎಂದು ವರದಿಗಳಿಂದ ತಿಳಿದುಬಂದಿದೆ.

    ಸೈಬರ್‌ ದಾಳಿಯ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ಯುರೋಪಿಯನ್ ವಿಮಾನ ನಿಲ್ದಾಣಗಳ (European Airports) ಚೆಕ್-ಇನ್ ಮತ್ತು ಬೋರ್ಡಿಂಗ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಯುರೂಪಿಯನ್‌ನ ಹಲವು ವಿಮಾನ ನಿಲ್ದಾಣಗಳಲ್ಲಿ‌ ವಿಳಂಬ ಎಚ್ಚರಿಕೆ ನೀಡಲಾಗಿದೆ ಎಂದು ಬೆಲ್ಜಿಯಂನ ಬ್ರಸೆಲ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    ಸೈಬರ್‌ ದಾಳಿಯ ನಂತರ ಸ್ವಯಂಚಾಲಿತ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಮ್ಯಾನ್ಯುವಲ್‌ (ಹಸ್ತಚಾಲಿತ) ಚೆಕ್-ಇನ್ ಮತ್ತು ಬೋರ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಬೆನ್ನಲ್ಲೇ ಬ್ರಸೆಲ್ಸ್ ವಿಮಾನ ನಿಲ್ದಾಣವು 10 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಜೊತೆಗೆ 17 ವಿಮಾನಗಳ ಹಾರಾಟದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಬರ್ಲಿನ್‌ ವಿಮಾನ ನಿಲ್ದಾಣದಲ್ಲೂ ಹಲವಾರು ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ.

    ಈ ಸಮಸ್ಯೆ ಯಾವಾಗ ಪರಿಹರಿಸಲಾಗುತ್ತೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ತಾಂತ್ರಿಕ ತಂಡಗಳು ತ್ವರಿತ ಪರಿಹಾರಕ್ಕಾಗಿ ಕೆಲಸ ಮಾಡುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    3 ಗಂಟೆ ಸರತಿ ಸಾಲಲ್ಲಿ ನಿಂತು ಸುಸ್ತಾದ ಜನ
    ಸೈಬರ್‌ ದಾಳಿ ಎಫೆಕ್ಟ್‌ನಿಂದಾಗಿ ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನಲ್ಲಿ ಮ್ಯಾನ್ಯುವಲ್‌ ಮೂಲಕ ಚೆಕ್‌ ಇನ್‌ ಮತ್ತು ಬೋರ್ಡಿಂಗ್‌ ಮಾಡಲಾಗುತ್ತಿತ್ತು. ಹೀಗಾಗಿ ಪ್ರಯಾಣಿಕ ಸುಮಾರು 3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬ್ಯಾಗ್‌, ಲಗೇಜ್‌ಗಳನ್ನ ಕೈಯಲ್ಲಿಡಿದು ಸುಸ್ತಾಗಿ ನಿಂತಿದ್ದ ದೃಶ್ಯಗಳು ಕಂಡುಬಂದವು.

  • ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

    ಸೈಬರ್‌ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್‌ – 700 ಮಂದಿ ಮನೆಗೆ

    ಲಂಡನ್‌: ಸೈಬರ್ ದಾಳಿಯಿಂದ (Cyber Attack) 158 ವರ್ಷದ ಯುಕೆಯ (UK) ಹಳೆಯ ಸಾರಿಗೆ ಕಂಪನಿ ಬಂದ್‌ ಆಗಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

    ಕೆಎನ್‌ಪಿಯ ಲಾಜಿಸ್ಟಿಕ್ಸ್‌ (KNP Logistics) ಕಂಪನಿ 500 ಲಾರಿಗಳನ್ನು ನಿರ್ವಹಣೆ ಮಾಡುತ್ತಿತ್ತು. ಹ್ಯಾಕರ್‌ಗಳು ಉದ್ಯೋಗಿಯೊಬ್ಬನ ಪಾಸ್‌ವರ್ಡ್‌ ಊಹಿಸಿ ಸೈಟ್‌ ಪ್ರವೇಶಿಸಿದ್ದಾರೆ. ನಂತರ  ರಾನ್ಸಮ್‌ವೇರ್ (Ransomware) ಮಾಲ್ವೇರ್‌ ಕಳುಹಿಸಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಆಂತರಿಕ ವ್ಯವಸ್ಥೆಗಳನ್ನು ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

     

    ಹ್ಯಾಕ್‌ ಮಾಡಿದ ಬಳಿಕ ಉದ್ಯೋಗಿಗಳಿಗೆ ವೆಬ್‌ಸೈಟ್‌ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಹ್ಯಾಕರ್‌ಗಳು 5 ಮಿಲಿಯನ್ ಪೌಂಡ್‌ಗೆ (ಅಂದಾಜು 58. 40 ಕೋಟಿ ರೂ) ಬೇಡಿಕೆ ಇಟ್ಟಿದ್ದರು. ಆದರೆ ಇಷ್ಟೊಂದು ಮೊತ್ತವನ್ನು ಪಾವತಿ ಮಾಡಲು ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಂಪೂರ್ಣ ಡೇಟಾ ನಷ್ಟಕ್ಕೆ ಕಾರಣವಾಯಿತು. ಅಂತಿಮವಾಗಿ ಕಂಪನಿಯ ಪತನಕ್ಕೆ ಕಾರಣವಾಯಿತು.

    M&S, Co-op ಮತ್ತು Harrods ನಂತಹ ಇತರ ಪ್ರಮುಖ UK ಕಂಪನಿಗಳು ಸಹ ಇದೇ ರೀತಿಯ ದಾಳಿಗೆ ಬಲಿಯಾಗಿವೆ. Co-op ಪ್ರಕರಣದಲ್ಲಿ, 65 ಲಕ್ಷ ಸದಸ್ಯರ ಡೇಟಾವನ್ನು ಕಳವು ಮಾಡಲಾಗಿತ್ತು.

  • Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    – ಪ್ಯಾನ್, ಬ್ಯಾಂಕ್‌ ಖಾತೆ ವಿವರ, ಮೊಬೈಲ್ ಸಂಖ್ಯೆ ಸೇರಿ ಪ್ರಮುಖ ಡೇಟಾ ಕಳವು

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸೈಬರ್‌ ಪ್ರಕರಣವೊಂದು (Cyber Case) ಬೆಳಕಿಗೆ ಬಂದಿದೆ. ಭಾರತದ ಪ್ರಮುಖ ಆರೋಗ್ಯ ವಿಮಾ ಸಂಸ್ಥೆ ಸ್ಟಾರ್‌ ಹೆಲ್ತ್‌ ನಲ್ಲಿ (Star Health Insurance) ಕೋಟ್ಯಂತರ ಪ್ರಮಾಣದ ಡೇಟಾ ಕಳವಾಗಿದೆ ಎಂದು ವರದಿಯಾಗಿದೆ.

    ಕೋಟ್ಯಂತರ ಗ್ರಾಹಕರ ಸೂಕ್ಷ್ಮ, ವೈಯಕ್ತಿಕ ಹಾಗೂ ವಿಮೆಗೆ ಸಂಬಂಧಿಸಿದ ವಿವರಗಳನ್ನು ಕಳುವು ಮಾಡಲಾಗಿದೆ. ಕದ್ದ ಡೇಟಾಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಬಗ್ಗೆ ಖುದ್ದು ಹ್ಯಾಕರ್‌ (Hacker) ಹೇಳಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ತಾನು 3.1 ಕೋಟಿಗಿಂತಲೂ ಹೆಚ್ಚು ಗ್ರಾಹಕರಿಗೆ ಸಂಬಂಧಿಸಿದ 7.24TB ಡೇಟಾವನ್ನು (7240 GB) ಹ್ಯಾಕ್‌ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಳವು ಮಾಡಿದ ಈ ಡೇಟಾವನ್ನು 1.50 ಲಕ್ಷ ಡಾಲರ್‌ಗೆ (1.26 ಕೋಟಿ ರೂ.) ಮಾರಾಟ ಮಾಡಲು ಡೇಟಾಗಳನ್ನ ಪಟ್ಟಿ ಮಾಡಲಿದ್ದೇನೆ. ಹೆಚ್ಚುವರಿಯಾಗಿ ಹೊಂದಿರುವ 1 ಲಕ್ಷ ಗ್ರಾಹಕರ ಸಣ್ಣ ಡೇಟಾ ಸೆಟ್‌ಗಳನ್ನು ಪ್ರತಿ ತಲಾ 10 ಸಾವಿರ ಡಾಲರ್‌ಗೆ (8.40 ಲಕ್ಷ ರೂ.) ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಈ ಡೇಟಾ ಉಲ್ಲಂಘನೆಯು ದೇಶದಲ್ಲಿ ದತ್ತಾಂಶ ರಕ್ಷಣೆ ಮತ್ತು ಭದ್ರತೆ ಬಗ್ಗೆ ಗಮನಾರ್ಹ ಕಾಳಜಿಯನ್ನು ಹುಟ್ಟುಹಾಕಿದೆ. ಬಳಕೆದಾರರು ಕೂಡಲೇ ತಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳುವಂತೆ ಸೈಬರ್‌ ತಜ್ಞರು ಸೂಚಿಸಿದ್ದಾರೆ.

    ಏನೇನು ಡೇಟಾ ಕಳವು?
    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ ಕದ್ದ ಡೇಟಾಗಳಲ್ಲಿ ಗ್ರಾಹಕರ ಹೆಸರು, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸಗಳು, ಜನ್ಮದಿನಾಂಕ, ಗೌಪ್ಯ ವೈದ್ಯಕೀಯ ದಾಖಲೆಗಳು, ವಸತಿ ವಿಳಾಸಗಳು, ಬ್ಯಾಂಕ್‌ ಸ್ಥಿತಿ ವಿವರ, ಆರೋಗ್ಯ ಕಾರ್ಡ್ ಸಂಖ್ಯೆಗಳು ಸೇರಿ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: 10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಕೊಂಡು ಏನು ಮಾಡ್ತೀರಿ? : ಹೆಚ್‌ಡಿಕೆ ಕಿಡಿ

    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) ಅಮರ್‌ಜೀತ್ ಖನುಜಾ ಅವರೇ ಮಾಹಿತಿಯನ್ನು ನೇರವಾಗಿ ನನಗೆ ಮಾರಾಟ ಮಾಡುವ ಮೂಲಕ ಡೇಟಾ ಸೋರಿಕೆಯ ಪಾಲುದಾರರಾಗಿದ್ದಾರೆ. 3.1 ಕೋಟಿ ಗ್ರಾಹಕರ ಡೇಟಾವನ್ನು 43,000 ಯುಎಸ್‌ ಡಾಲರ್‌ಗೆ (36.14 ಲಕ್ಷ ರೂ.)ಗೆ ಮಾರಾಟ ಮಾಡಿದ್ದಾರೆ ಎಂದು ಖುದ್ದು ಹ್ಯಾಕರ್‌ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

  • 140 ಕೋಟಿ ಜನರ ಖಾಸಗಿತನದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ – ಮಲ್ಲಿಕಾರ್ಜುನ ಖರ್ಗೆ ಕಿಡಿ

    140 ಕೋಟಿ ಜನರ ಖಾಸಗಿತನದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ – ಮಲ್ಲಿಕಾರ್ಜುನ ಖರ್ಗೆ ಕಿಡಿ

    ನವದೆಹಲಿ: ಕೊವೀನ್ ಆ್ಯಪ್ (CoWIN App) ಮೂಲಕ ಸಾರ್ವಜನಿಕರ ಮಾಹಿತಿ ಸೋರಿಕೆಯಾಗಿದ್ದು, ಸರ್ಕಾರ ಎಷ್ಟೆ ಮುಚ್ಚಿಟ್ಟರೂ ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ಡೇಟಾ ಸುರಕ್ಷಿತವಾಗಿಲ್ಲ ಎಂಬುದು ದತ್ತಾಂಶಗಳಿಂದ ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರ ಮಾಹಿತಿಯನ್ನು ಎಷ್ಟೇ ಮುಚ್ಚಿಟ್ಟರೂ 3 ಅಂಶಗಳು ಸ್ಪಷ್ಟವಾಗಿವೆ. ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ದತ್ತಾಂಶ (Personal Data) ಸುರಕ್ಷಿತವಾಗಿಲ್ಲ, ಇದಕ್ಕಾಗಿಯೇ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಸುಪ್ರೀಂ ಕೋರ್ಟ್ (Supreme Court) ಅನ್ನು 2017 ರಲ್ಲಿ ಮೋದಿ ಸರ್ಕಾರ ಹೇಗೆ ಬಲವಾಗಿ ವಿರೋಧಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

    ದೇಶದಲ್ಲಿ ಸೈಬರ್ ದಾಳಿಗಳು (Cyber Attack) ಮತ್ತು ಡೇಟಾ ಸೋರಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. 2018ರ ವಿಶ್ವದ ಅತಿದೊಡ್ಡ ಆಧಾರ್ ಡೇಟಾ ಉಲ್ಲಂಘನೆಯಾಗಿರಬಹುದು ಅಥವಾ ನವೆಂಬರ್ 2022ರ AIIMS ಮೇಲೆ ಸೈಬರ್ ದಾಳಿಯಾಗಿರಬಹುದು. 13 ಅಡಿ ಎತ್ತರ ಮತ್ತು 5 ಅಡಿ ದಪ್ಪದ ಗೋಡೆಗಳಲ್ಲಿ ಆಧಾರ್ ಡೇಟಾವನ್ನು (Aadhar Data) ರಕ್ಷಿಸಲಾಗಿದೆ ಎಂದು ಮೋದಿ ಸರ್ಕಾರ ಸೆಪ್ಟೆಂಬರ್ 2018 ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

    ಆ ನಂತರವೂ ದೇಶದಲ್ಲಿ ಸೈಬರ್ ದಾಳಿಗಳು ಹಲವು ಪಟ್ಟು ಹೆಚ್ಚಿವೆ. 2018 ರಲ್ಲಿ 2.08 ಲಕ್ಷ, 2019 ರಲ್ಲಿ 3.94 ಲಕ್ಷ, 2020 ರಲ್ಲಿ 11.58 ಲಕ್ಷ, 2021 ರಲ್ಲಿ 14.02 ಲಕ್ಷ, 2022 ರಲ್ಲಿ 13.91 ಲಕ್ಷ ಸೈಬರ್ ದಾಳಿಗಳು ವರದಿಯಾಗಿವೆ. ಒಟ್ಟಾರೆ 140 ಕೋಟಿ ಜನರ ಖಾಸಗಿತನದ ಮೂಲಭೂತ ಹಕ್ಕಿನ ಬಗ್ಗೆ ಮೋದಿ ಸರ್ಕಾರಕ್ಕೆ ಕಾಳಜಿ ಇಲ್ಲ, ರಾಷ್ಟ್ರೀಯ ಭದ್ರತೆಯ ಬಗ್ಗೆ ಕಾಳಜಿ ಇಲ್ಲ ಎಂದು ಖರ್ಗೆ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.

  • ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

    ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

    ಬೀಜಿಂಗ್: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿಕೊಂಡು ಚೀನಿ ಹ್ಯಾಕರ್‍ಗಳು ಸೈಬರ್ ದಾಳಿ ನಡೆಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಚೀನಾ ಸರ್ಕಾರ ಜೊತೆ ಸಂಬಂಧ ಹೊಂದಿರುವ ಹ್ಯಾಕರ್ ಗುಂಪು, ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಬಳಸುವ ವಿಎಲ್‍ಸಿ ಮೀಡಿಯಾ ಪ್ಲೇಯರ್ ಮೂಲಕ ಸೈಬರ್ ದಾಳಿ ಮಾಡಲು ಮುಂದಾಗುತ್ತಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:  ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?

    A large monitor displaying a security hacking breach warning.

    ಈ ಚಟುವಟಿಕೆಗಳನ್ನು ಸಿಕಾಡಾ ಎಂಬ ಹ್ಯಾಕರ್ ಗುಂಪು ಮಾಡುತ್ತಿದೆ ಎಂದು ವರದಿಯಾಗಿದೆ. 2006ರಿಂದ ಸಿಕಾಡಾ ಕಾರ್ಯನಿರ್ವಹಿಸುತ್ತಿದೆ.

    ತಜ್ಞರು ಹೇಳುವುದೇನು?
    ಚೀನಾ ಸರ್ಕಾರದ ಬೆಂಬಲಿತ ಸಿಕಾಡಾ ಹ್ಯಾಕರ್‍ಗಳು, ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಮಾಲ್‍ವೇರ್‍ಗಳನ್ನು ರವಾಸಿಸುತ್ತಿದ್ದಾರೆ. ಈ ಮಾಲ್‍ವೇರ್ ಸಿಸ್ಟಮ್‍ನಲ್ಲಿರುವ ಎಲ್ಲ ಮಾಹಿತಿಯನ್ನು ಕಲೆಹಾಕುತ್ತದೆ. ಅಲ್ಲದೇ ಚಾಲನೆಯಲ್ಲಿರುವ ಪ್ರಕ್ರಿಯೆಗಳು, ಡೌನ್ಲೋಡ್ ಮಾಡಿದ ಮಾಹಿತಿಗಳನ್ನು ಕದ್ದು, ಹ್ಯಾಕರ್‍ಗಳಿಗೆ ರವಾನಿಸುತ್ತಿವೆ ಎಂದು ತಜ್ಞರು ಮಾಹಿತಿಯನ್ನು ಕೊಟ್ಟಿದ್ದಾರೆ.

    VLC Media Player.

    ಭಾರತ, ಅಮೆರಿಕಾ, ಕೆನಡಾ, ಹಾಂಕಾಂಗ್, ಟರ್ಕಿ, ಇಸ್ರೇಲ್, ಇಟಲಿ ಮಾದಲಾದ ದೇಶಗಳಲ್ಲಿ ಸಿಕಾಡಾ ಸೈಬರ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

    ಸಿಕಾಡಾ 3 ಖಂಡಗಳ ಸರ್ಕಾರವನ್ನು ಗುರಿಯಲ್ಲಿ ಇಟ್ಟುಕೊಂಡು ಆ ರಾಷ್ಟ್ರಗಳ ದೂರಸಂಪರ್ಕ ಹಾಗೂ ಕಾನೂನಾತ್ಮಕ ಸಂಸ್ಥೆಗಳ ಮಾಹಿತಿಯನ್ನು ಕಲೆಯಾಕುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಮಾಲ್‍ವೇರ್ ಎಂದರೇನು?
    ಮಾಲ್‍ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನಿನ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

     

     

  • ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಪ್ಯಾರಿಸ್: ಉಕ್ರೇನ್-ರಷ್ಯಾದ ಯುದ್ಧ ಪ್ರಾರಂಭವಾದ ಬಳಿಕ ಶುಕ್ರವಾರ ಸೈಬರ್ ಅಟ್ಯಾಕ್ ಆಗಿರುವ ಬಗ್ಗೆ ವದಂತಿಗಳು ಹಬ್ಬಿವೆ. ಈ ಕಾರಣದಿಂದ ಯೂರೋಪ್‌ನಾದ್ಯಂತ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಬಳಕೆದಾರರು ಇಂಟರ್‌ನೆಟ್ ಇಲ್ಲದೇ ದಿನದೂಡುತ್ತಿದ್ದಾರೆ.

    ಫ್ರಾನ್ಸ್ ಅಂಗಸಂಸ್ಥೆ ನಾರ್ಡ್‌ನೆಟ್ ಒದಗಿಸುತ್ತಿದ್ದ ಉಪಗ್ರಹ ಇಂಟರ್‌ನೆಟ್ ಸೇವೆಯನ್ನು ಸುಮಾರು 9 ಸಾವಿರ ಚಂದಾದಾರರು ಬಳಸುತ್ತಿದ್ದು, ಈ ಸೇವೆಯನ್ನು ಫೆಬ್ರವರಿ 24ರಂದು ಸ್ಥಗಿತಗೊಳಿಸಲಾಗಿದೆ. ಇದೀಗ ಅಷ್ಟೂ ಜನರು ಇಂಟರ್‌ನೆಟ್ ಸೇವೆ ಇಲ್ಲದೇ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇತರ ಇಂಟರ್‌ನೆಟ್ ಮೂಲಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿದೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಯೂರೋಪ್, ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟಲಿ ಹಾಗೂ ಪೋಲೆಂಡ್‌ನಲ್ಲಿ ಬಿಗ್‌ಬ್ಲೂನ 40,000 ಚಂದಾದಾರರಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ಇಂಟರ್‌ನೆಟ್ ಸ್ಥಗಿತದ ಪರಿಣಾಮ ಬೀರಿದೆ. ಈ ಮಾಹಿತಿಯನ್ನು ಬಿಗ್‌ಬ್ಲೂ ಉಪಗ್ರಹ ಇಂಟರ್‌ನೆಟ್ ಸೇವೆಯ ಮೂಲ ಕಂಪನಿ ಯುಟೆಲ್‌ಸಾಟ್ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ಉಕ್ರೇನ್ ರಷ್ಯಾದ ಯುದ್ಧದಿಂದಾಗಿ ಸೈಬರ್ ದಾಳಿ ನಡೆದಿದೆ. ಹೀಗಾಗಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಬಾಹ್ಯಾಕಾಶ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಫ್ರೆಡ್ಲಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಾಗಿಲ್ಲ. ಇದರ ಬಗ್ಗೆ ಪೊಲೀಸ್ ಹಾಗೂ ರಾಜ್ಯದ ಪಾಲುದಾರರಿಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

  • ಸರ್ಕಾರದ 100 ಕಂಪ್ಯೂಟರ್‌ ಮೇಲೆ ಬೆಂಗಳೂರಿನ ಐಟಿ ಕಂಪನಿಯಿಂದ ಸೈಬರ್‌ ದಾಳಿ

    ಸರ್ಕಾರದ 100 ಕಂಪ್ಯೂಟರ್‌ ಮೇಲೆ ಬೆಂಗಳೂರಿನ ಐಟಿ ಕಂಪನಿಯಿಂದ ಸೈಬರ್‌ ದಾಳಿ

    ನವೆದಹಲಿ: ಕೇಂದ್ರ ಸರ್ಕಾರ 100 ಕಂಪ್ಯೂಟರ್‌ಗಳು ಮಾಲ್ವೇರ್‌ಗೆ ತುತ್ತಾಗಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ವಿಶೇಷ ಏನೆಂದರೆ ಬೆಂಗಳೂರು ಮೂಲದ ಐಟಿ ಕಂಪನಿಯಿಂದ ಈ ಮಾಲ್ವೇರ್‌ಗಳು ಬಂದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

    ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌(ಎನ್‌ಐಸಿ) 100 ಕಂಪ್ಯೂಟರ್‌ಗಳ ಮೇಳೆ ಮಾಲ್ವೇರ್‌ ದಾಳಿ ನಡೆದಿತ್ತು.

    ಸೆಪ್ಟೆಂಬರ್‌ ಮೊದಲ ವಾರದಲ್ಲಿ ಎನ್‌ಐಸಿಯ ಉದ್ಯೋಗಿಯೊಬ್ಬರು ಮೇಲ್‌ ಸ್ವೀಕರಿಸಿದ್ದರು. ಇಮೇಲ್‌ ತೆರೆದಾಗ ಈ ಸಿಸ್ಟಂನಲ್ಲಿ ಸ್ಟೋರ್‌ ಆಗಿದ್ದ ಡೇಟಾಗಳು ಡಿಲೀಟ್‌ ಆಗಿದೆ.

    ಈ ವಿಚಾರ ಗಮನಕ್ಕೆ ಬಂದ ಕೂಡಲೇ ಎನ್‌ಐಸಿ ಮತ್ತು ಸಚಿವಾಲಯದ 100ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಮಾಲ್ವೇರ್‌ಗೆ ತುತ್ತಾಗಿರುವ ವಿಚಾರ ಗೊತ್ತಾಗಿದೆ.

    ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಇಳಿದಾಗ ಈ ಸೈಬರ್‌ ಕ್ರೈಂ ಬೆಂಗಳೂರಿನ ಐಟಿ ಕಂಪನಿಯಿಂದ ನಡೆದಿದೆ ಎನ್ನುವುದು ಗೊತ್ತಾಗಿದೆ. ಪ್ರಾಕ್ಸಿ ಸರ್ವರ್‌ ಮೂಲಕ ಮೇಲ್‌ ಕಳುಹಿಸಿ ಈ ಕೃತ್ಯ ಎಸಗಲಾಗಿದೆ.

    ಪ್ರಧಾನಮಂತ್ರಿ, ಭದ್ರತೆ ಸೇರಿದಂತೆ ಸರ್ಕಾರದ ಇಲಾಖೆಯ ಸೂಕ್ಷ್ಮ ಡೇಟಾಗಳು ಎನ್‌ಐಸಿ ಸಂಗ್ರಹದಲ್ಲಿರುತ್ತದೆ. ರಾಜಕೀಯ ವ್ಯಕ್ತಿಗಳು, ಮಿಲಿಟರಿ ನಾಯಕರು, ಪತ್ರಕರ್ತರು ಸೇರಿದಂತೆ ಹಲವರ ಮೇಲೆ ಚೀನಾ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಯ ಬೆನ್ನಲ್ಲೇ ಈ ಸೈಬರ್‌ ದಾಳಿ ವಿಚಾರ ಪ್ರಕಟವಾಗಿದೆ.

  • ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

    ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

    – ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ
    – ಇಸ್ರೇಲ್ ಮೂಲದ ಕಂಪನಿಯಿಂದ ಹ್ಯಾಕ್

    ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಹ್ಯಾಕ್ ಆಗಿದೆ.

    ಹ್ಯಾಕ್ ಆಗಿರುವ ವಿಚಾರವನ್ನು ವಾಟ್ಸಪ್ ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಿ ಎಂದು ಸೂಚಿಸಿದೆ.

    ಇಸ್ರೇಲ್ ಮೂಲದ ಎನ್‍ಎಸ್ಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ಈ ಹ್ಯಾಕ್ ಮಾಡಿದೆ. ಒಂದು ತಿಂಗಳ ಹಿಂದೆಯೇ ಈ ವಿಚಾರ ಬೆಳಕಿಗೆ ಬಂದಿದ್ದು ಶುಕ್ರವಾರ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ಶನಿವಾರ ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ.

    ದಾಳಿ ಹೇಗೆ ಆಗುತ್ತೆ?
    ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ.

    ವಾಟ್ಸಪ್ ಭದ್ರತಾ ತಂಡ ಈ ದಾಳಿಯನ್ನು ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿತ್ತು. ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

    ದಾಳಿಯ ಹಿಂದೆ ಯಾರಿದ್ದಾರೆ?
    ಸೈಬರ್ ದಾಳಿಯ ವಿಚಾರದಲ್ಲಿ ಪ್ರಸಿದ್ಧವಾಗಿರುವ ಇಸ್ರೇಲಿನ ಎನ್‍ಎಸ್‍ಒ ಗ್ರೂಪ್ ಈ ವಾಟ್ಸಪ್ ದಾಳಿಯ ಹಿಂದೆ ಇದೆ. ಈ ಕಂಪನಿಯ ಭಾಗಶ: ಪಾಲನ್ನು ಫೆಬ್ರವರಿಯಲ್ಲಿ ಲಂಡನ್ ಮೂಲದ ನೋವಲ್‍ಪಿನಾ ಕ್ಯಾಪಿಟಲ್ ಪಡೆದುಕೊಂಡಿದೆ.

    ಎನ್‍ಎಸ್‍ಒ ಕಂಪನಿ ಸ್ಪೈ ಸಾಫ್ಟ್ ವೇರ್ ಪೆಗಾಸಸ್ ಅಭಿವೃದ್ಧಿ ಪಡಿಸಿದೆ. ಫೋನ್ ಮೂಲಕ ಕ್ಯಾಮೆರಾ, ಮೈಕ್ರೋಫೋನ್, ಲೋಕೇಶನ್ ಡೇಟಾಗಳನ್ನು ಈ ಸಾಫ್ಟ್ ವೇರ್ ಸಂಗ್ರಹಿಸಿ ವ್ಯಕ್ತಿಯ ಮೇಲೆ ಗೂಢಾಚಾರಿಕೆ ಮಾಡುತ್ತದೆ.

    ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಸ್ರೇಲ್ ಸರ್ಕಾರದಿಂದಲೇ ಅನುಮತಿ ಪಡೆದಿದ್ದೇವೆ ಎಂದು ಎನ್‍ಎಸ್‍ಒ ಕಂಪನಿ ಸ್ಪಷ್ಟನೆ ನೀಡಿದೆ.

    ಇಲ್ಲಿಯವರೆಗೆ ಎಷ್ಟು ಬಳಕೆದಾರರಿಗೆ ತೊಂದರೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿಲ್ಲ. ಈ ಹಿಂದೆ ಎನ್‍ಎಸ್‍ಒ ಗ್ರೂಪ್ ನಮ್ಮನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಆರೋಪಿಸಿತ್ತು.

    ಈ ಸಂಬಂಧ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಸ್ರೇಲ್ ಕೋರ್ಟ್ ನಲ್ಲಿ ದೂರು ದಾಖಲಿಸಿದೆ. ಎನ್‍ಎಸ್‍ಒ ಗ್ರೂಪಿಗೆ ನೀಡಿದ ಲೈಸೆನ್ಸ್ ರದ್ದು ಮಾಡುವಂತೆ ಇಸ್ರೇಲಿನ ರಕ್ಷಣಾ ಸಚಿವಾಲಯ ಆದೇಶ ನೀಡಬೇಕೆಂದು ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಟೆಲ್ ಅವಿವ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಈ ಅರ್ಜಿಯ ವಿಚಾರಣೆ ಈ ಗುರುವಾರ ನಡೆಯಲಿದೆ.

  • ಪಾಕ್ ಇತಿಹಾಸದಲ್ಲಿ ಕಂಡು ಕೇಳರಿಯದ ಸೈಬರ್ ದಾಳಿ

    ಪಾಕ್ ಇತಿಹಾಸದಲ್ಲಿ ಕಂಡು ಕೇಳರಿಯದ ಸೈಬರ್ ದಾಳಿ

    ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಬಳಿಕ ಭಾರತದ ಟೆಕ್ಕಿಗಳು ರೊಚ್ಚಿಗೆದ್ದು ಪಾಕ್ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಲು ಆರಂಭಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಕಂಡು ಕೇಳರಿಯದ ಸೈಬರ್ ದಾಳಿ ಆಗುತ್ತಿದ್ದು, ಸರ್ಕಾರಿ ಸೇರಿದಂತೆ 50ಕ್ಕೂ ಹೆಚ್ಚು ವೆಬ್‍ಸೈಟ್‍ಗಳನ್ನು ಭಾರತೀಯ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ.

    ಭಾರತ ಮೂಲದ ಟೀಂ ಐ ಕ್ರೀವ್ ಸದಸ್ಯರು ಪಾಕಿಸ್ತಾನದ ವೆಬ್‍ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಪಾಕಿಸ್ತಾನದಲ್ಲಿರುವ ಮಾಧ್ಯಮಗಳೇ ವರದಿ ಮಾಡಿವೆ. ನಾವು ಯಾವುದೇ ಕಾರಣಕ್ಕೂ 2019ರ ಫೆ.14 ಕಹಿ ಘಟನೆಯನ್ನು ಮರೆಯಲು ಸಾಧ್ಯವಿಲ್ಲ, ದೇಶಕ್ಕಾಗಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹ್ಯಾಕ್ ಮಾಡಲಾಗಿದೆ ಹ್ಯಾಕರ್ಸ್ ಬರೆದುಕೊಂಡಿದ್ದಾರೆ. ದೀಪ ಹೊತ್ತಿ ಉರಿಯುತ್ತಿರುವ ಫೋಟೋಗಳು ಮತ್ತು ಹ್ಯಾಕರ್ಸ್ ಹಾಕಿರುವ ಸಂದೇಶಗಳು ಹ್ಯಾಕ್ ಆಗಿರುವ ವೆಬ್‍ಸೈಟ್‍ನ ಮುಖಪುಟದಲ್ಲಿ ಕಾಣುತ್ತಿವೆ.

    ವಿಶೇಷವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಮತ್ತು ಸೇನೆಯ ವೆಬ್‍ಸೈಟ್ ಗಳನ್ನು ಟೀಂ ಐ ಕ್ರೀವ್ ಹ್ಯಾಕ್ ಮಾಡಿದೆ. ಆಸ್ಟ್ರೇಲಿಯಾ, ನೆದರ್‍ಲ್ಯಾಂಡ್, ಸೌದಿ ಆರೇಬಿಯಾ, ಇಂಗ್ಲೆಂಡ್ ದೇಶದ ಬಳಕೆದಾರರಿಗೆ ವಿದೇಶಾಂಗ ಸಚಿವಾಲಯ ವೆಬ್‍ಸೈಟ್ ತೆರೆಯಲು ಆಗುತ್ತಿಲ್ಲ.

    16 ರಂದು ಪಾಕ್ ವಿದೇಶಾಂಗ ಸಚಿವಾಲಯದ ವೆಬ್‍ಸೈಟನ್ನು ಹ್ಯಾಕ್ ಮಾಡಿ ಪ್ರಧಾನಿ ಇಮ್ರಾನ್ ಖಾನ್ ಹೆಸರನ್ನು ಅಳಿಸಿ ಹಾಕಿದ್ದಾರೆ. ಈ ಸುದ್ದಿಯನ್ನು ಅಲ್ಲಿನ ಮಾಧ್ಯಮಗಳೇ ಒಪ್ಪಿಕೊಂಡು ವರದಿ ಮಾಡಿವೆ. ದಾಳಿ ನಡೆದ ಮೊದಲ ದಿನವಾದ 14ರಂದು ಪಾಕಿಸ್ತಾನದ 5 ವೆಬ್‍ಸೈಟ್‍ಗಳು ಹ್ಯಾಕ್ ಆಗಿದ್ದರೆ, ಫೆ. 15 ಮತ್ತು 16 ರಂದು 8 ಪಾಕಿಸ್ತಾನ ವೆಬ್‍ಸೈಟ್‍ಗಳು ಹ್ಯಾಕ್ ಆಗಿತ್ತು.

    ಹ್ಯಾಕ್ ಆಗಿರುವ ಪಾಕಿಸ್ತಾನದ ಪ್ರಮುಖ ವೆಬ್‍ಸೈಟ್‍ಗಳು

    https://sindhforests.gov.pk/op.html
    https://mail.sindhforests.gov.pk/op.html,
    https://pkha.gov.pk/op.html
    https://ebidding.pkha.gov.pk/op.html,
    https://mail.pkha.gov.pk/op.html

    http://kda.gkp.pk/op.html,
    http://blog.kda.gkp.pk/op.html,
    http://mail.kda.gkp.pk/op.html,
    https://kpsports.gov.pk/op.html,
    https://mail.kpsports.gov.pk/op.html,

    http://seismic.pmd.gov.pk/op.html
    http://namc.pmd.gov.pk/op.html
    http://rmcpunjab.pmd.gov.pk/FlightsChartFolder/op.html
    http://ffd.pmd.gov.pk/modis/op.html
    http://radar.pmd.gov.pk/islamabad/op.html,

    http://pjm.pmd.gov.pk/cache/op.html
    http://202.163.66.44:811/14-02-2019.html
    http://www.urbanunit.gov.pk/upload/14-02-2019.php
    https://opf.edu.pk/14-02-2019.php

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv