Tag: ಸೈಬರ್ ಕ್ರೈಮ್

  • ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್

    ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್

    ಚಿತ್ರದುರ್ಗ: ಪೊಲೀಸ್ ಇಲಾಖೆಯ (Police Department) ಎಕ್ಸ್ ಖಾತೆಯನ್ನೇ ಖದೀಮರು ಹ್ಯಾಕ್ (Hack) ಮಾಡಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.

    ಜಿಲ್ಲಾ ಪೊಲೀಸ್ ಅಕೌಂಟ್ ಹ್ಯಾಕ್ ಮಾಡಿರುವ ಖದೀಮರು, ಬಿಟ್ ಕಾಯಿನ್ ಬಗ್ಗೆ ಜಾಹೀರಾತು ಪ್ರಕಟಿಸಿದ್ದಾರೆ. ಹೀಗಾಗಿ ಅಲರ್ಟ್ ಆದ ಪೊಲೀಸ್ ಇಲಾಖೆ, ಖಾತೆಯನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ. ಇದನ್ನೂ ಓದಿ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ಪರಿಶೀಲನೆ ಬಳಿಕ ಪುನಃ ಎಕ್ಸ್ ಖಾತೆಯನ್ನು ಸಕ್ರಿಯಗೊಳಿಸಿದ್ದು, ಎಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಕ್ ಮಾಹಿತಿಯನ್ನು ಜನರ ಜಾಗೃತಿಗಾಗಿ ಶೇರ್ ಮಾಡಿದೆ. ಇದನ್ನೂ ಓದಿ: ಹೆಚ್‌ಡಿಕೆಯೇ ಕಾರು ಬೇಡ ಎಂದಿದ್ರು: ಚಲುವರಾಯಸ್ವಾಮಿ ಬಾಂಬ್‌ | ಏನಿದು ಕಾರ್‌ ಕಿರಿಕ್‌?

    ಇನ್ನು ಸೈಬರ್ ಕ್ರೈಂಬಗ್ಗೆ ಜಿಲ್ಲೆಯಾದ್ಯಂತ ವಿಶೇಷ ಜಾಗೃತಿ ಮೂಡಿಸುತ್ತಿರುವ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ನಿರಂತರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಸಾಮಾಜಿಕ ಜಾಲಾ ತಾಣ ಸೇರಿದಂತೆ ಶಾಲಾ ಕಾಲೇಜುಗಳಲ್ಲೂ ಅಪರಾಧ ತಡೆ ಹಾಗು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ರೀತಿ ಪೊಲೀಸ್ ಇಲಾಖೆಯ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿರೋದು ದುರಂತವೇ ಸರಿ.‌ ಇದನ್ನೂ ಓದಿ: ಜನ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ʻಶೀಷ್‌ ಮಹಲ್‌ʼ ನವೀಕರಣ – ಮೋದಿ ಮತ್ತೆ ಕಿಡಿ

  • ಡಿಜಿಟಲ್ ಫ್ರಾಡ್, ಅರೆಸ್ಟ್ ಬಗ್ಗೆ ಜಾಗೃತಿ ಮೂಡಿಸಲು ಕ್ರಮ: ಪರಮೇಶ್ವರ್

    ಡಿಜಿಟಲ್ ಫ್ರಾಡ್, ಅರೆಸ್ಟ್ ಬಗ್ಗೆ ಜಾಗೃತಿ ಮೂಡಿಸಲು ಕ್ರಮ: ಪರಮೇಶ್ವರ್

    ಬೆಳಗಾವಿ: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ವಂಚನೆ ಪ್ರಕರಣ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಹಾಗೂ ಸೈಬರ್ ಜಾಗೃತಿಯ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಡಿಜಿಟಲ್ ಫ್ರಾಡ್ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ವರ್ಷದಲ್ಲಿ ಡಿಜಿಟಲ್ ಅರೆಸ್ಟ್ ಸಂಬಂಧಿತ ಒಟ್ಟು 641 ಪ್ರಕರಣಗಳಲ್ಲಿ 109 ಕೋಟಿ ರೂ.ಗೂ ಹೆಚ್ಚು ಮೊತ್ತದ ವಂಚನೆ ಆಗಿದೆ. ಅದರಲ್ಲಿ 9.45 ಕೋಟಿ ರೂ.ಗಳನ್ನು ವಶಪಡಿಸಿಕೊಂಡು 27 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಉಗ್ರ ಸಂಘಟನೆಗೆ ನೇಮಕಾತಿ ಕೇಸ್‌ | 5 ರಾಜ್ಯಗಳ 19 ಸ್ಥಳಗಳಲ್ಲಿ ಎನ್‌ಐಎ ಶೋಧ -ಮೂವರು ಅರೆಸ್ಟ್‌

    ಸಾರ್ವಜನಿಕರನ್ನು ಇಂತಹ ಅಪರಾಧಿಕ ಕೃತ್ಯಗಳ ಮೂಲಕ ವಂಚಿಸಲು ನಕಲಿ ಸಿಮ್ ಕಾರ್ಡ್ ಹಾಗೂ ನಕಲಿ ಬ್ಯಾಂಕ್ ಖಾತೆಗಳನ್ನು ಮಾರಾಟಕ್ಕೆ ಬಳಸುವ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟೆಲಿಗ್ರಾಂ ಇತರೆ ಅಂತರ್ಜಾಲ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಖಾತೆಗಳು ಹಾಗೂ ಗುಂಪುಗಳನ್ನು ಪತ್ತೆ ಹಚ್ಚಿ, 268 ಫೇಸ್ಬುಕ್ ಗುಂಪುಗಳು, 465 ಟೆಲಿಗ್ರಾಂ ಗುಂಪುಗಳು, 15 ಇನ್ಸ್ಟಾಗ್ರಾಂ ಖಾತೆಗಳು ಹಾಗೂ 61 ವಾಟ್ಸಾಪ್ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಇತರೆ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಅರೆಸ್ಟ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿರುವ ಸೈಬರ್ ವಂಚಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇದನ್ನೂ ಓದಿ: ರೈತ ಆತ್ಮಹತ್ಯೆ ಕೇಸ್‌ ಟ್ವೀಟ್‌ ವಿವಾದ; ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು

    ದೇಶದಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ಕಳೆದ ವರ್ಷ ಇಡೀ ದೇಶದಲ್ಲಿ 42,000 ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ 11,000 ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಸೈಬರ್ ವಂಚನೆ ಆದ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1930ಗೆ ಮಾಹಿತಿ ನೀಡುವಂತೆ ತಿಳಿಸಿದರು.  ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಸಂಸದರು ಕೆಂಡ

  • 100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    ನವದೆಹಲಿ: 100 ಕೋಟಿ ರೂ. ಮೊತ್ತದ ಬೃಹತ್ ಸೈಬರ್ ವಂಚನೆ (Cyber Fraud) ಪ್ರಕರಣದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆ ಫಾಂಗ್ ಚೆಂಜಿನ್‌ನನ್ನು ದೆಹಲಿಯಲ್ಲಿ ಇಂದು (ಮಂಗಳವಾರ) ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಫಾಂಗ್ ಚೆಂಜಿನ್ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಗಳಲ್ಲಿ ಭಾಗಿಯಾಗಿದ್ದ. ಸಂತ್ರಸ್ತರಲ್ಲಿ ಒಬ್ಬರಾದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಅವರು ಸೈಬರ್ ಕ್ರೈಂ (Cyber Crime) ಪೋರ್ಟಲ್‌ನಲ್ಲಿ 43.5 ಲಕ್ಷ ರೂ. ವಂಚಿಸಿದ್ದಾನೆ ಎಂದು ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಅವರನ್ನು ವಂಚನೆಯ ಷೇರು ಮಾರುಕಟ್ಟೆಯ ತರಬೇತಿ ಅವಧಿಗಳಿಗೆ ಆಮಿಷವೊಡ್ಡಲಾಯಿತು. ನಂತರ ಹಣವನ್ನು ಹಲವಾರು ವಹಿವಾಟುಗಳಲ್ಲಿ ಹೂಡಿಕೆ ಮಾಡುವಂತೆ ಹೇಳಿ ವಂಚನೆ ಎಸಗಲಾಗಿದೆ. ನಂತರ ಈ ಹಣವನ್ನು ವಂಚಕರು ನಿಯಂತ್ರಿಸಲ್ಪಡುವ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ: ಆರ್.‌ ಅಶೋಕ್‌

    ಏಪ್ರಿಲ್‌ನಲ್ಲಿ 1.25 ಲಕ್ಷ ರೂ. ವಂಚನೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಂಡ್ಕಾದಲ್ಲಿರುವ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ಇತ್ತು. ಅಪರಾಧಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಇದು ಆರೋಪಿ ಚೆಂಜಿನ್‌ನನ್ನು ಗುರುತಿಸಲು ಸಹಾಯವಾಯಿತು. ಆರೋಪಿಗಳು ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ – ಯುವತಿ ಸಜೀವ ದಹನ

    ಅಪರಾಧಗಳನ್ನು ನಡೆಸಲು ಬಳಸಲಾದ ಫೋನ್‌ನಲ್ಲಿ ಚೆಂಜಿನ್ ಮತ್ತು ಅವನ ಸಹಚರರ ನಡುವೆ ವಾಟ್ಸಾಪ್ ಸಂಭಾಷಣೆಗಳು ಸೇರಿದಂತೆ ಹಲವಾರು ಸಾಕ್ಷಿಗಳು ಸಿಕ್ಕಿದೆ. ಈ ಸಾಕ್ಷಿ ಮೇರೆಗೆ ಆತನನ್ನು ಬಂಧಿಸಲಾಗಿದೆ. ಆರೋಪಿಯು ವಂಚನೆಗೆ ಬಳಸಲಾದ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡುವಂತೆ ತನ್ನ ಸಹಾಯಕನಿಗೆ ಸೂಚಿಸಿದ್ದಾನೆ. ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಕನಿಷ್ಠ 17 ದೂರುಗಳನ್ನು ದಾಖಲಿಸಲಾಗಿದೆ. ಎಲ್ಲವೂ ಒಂದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆ. ದೂರುಗಳ ಪ್ರಕಾರ, 100 ಕೋಟಿ ರೂ. ವಂಚನೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆಯಿಂದ ಆಂಧ್ರಪ್ರದೇಶ (Andhra Pradesh) ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಸೈಬರ್ ಕ್ರೈಮ್ ಮತ್ತು ಮನಿ ಲಾಂಡರಿಂಗ್ ಒಳಗೊಂಡತೆ ಇತರ ಎರಡು ಮಹತ್ವದ ವಂಚನೆ ಪ್ರಕರಣಗಳಿಗೂ ಫಾಂಗ್ ಚೆಂಜಿನ್‌ಗೂ ಸಂಬಂಧವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶಹದಾರ, ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

  • ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿ ಬಂಧನ

    ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿ ಬಂಧನ

    ಬಳ್ಳಾರಿ: ನಕಲಿ ಇಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಮಧ್ಯ ಪ್ರದೇಶದವರೆಗೂ (Madhya Pradesh) ಹೋಗಿ ಹಿಡಿದುಕೊಂಡು ಬಂದಿರುವ ಬಲು ರೋಚಕ ಘಟನೆ ಬಳ್ಳಾರಿಯಲ್ಲಿ (Ballary) ನಡೆದಿದೆ.

    ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ. ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2.11 ಕೋಟಿ ರೂ. ವಂಚಿಸಿದ್ದಾನೆ. ಹಿಂದುಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಯೂ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ಹಣ ಕೊಡಬೇಕಿತ್ತು. ಇದರ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್, ಅಗರ್ವಾಲ್ ಕಂಪನಿಯ ನಕಲಿ ಇಮೇಲ್ ತಯಾರಿಸಿ ಕಂಪನಿಯ ಬ್ಯಾಂಕ್ ಖಾತೆ ನಂಬರ್ ಚೇಂಜ್ ಆಗಿದೆ ಎಂದು ಹಿಂದುಸ್ತಾನ್‌ಗೆ ಕಳಿಸಿ ವಂಚನೆ ಮಾಡಿದ್ದ. ಇದನ್ನೂ ಓದಿ: ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ: ಕೆಇಎ

    ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್‌ಗೆ ಹಣ ಹಾಕಿದ್ದರು. ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ. ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿಯಿಂದ ದೂರು ದಾಖಲಾಗಿದೆ. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿಎಸ್‌ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿ ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಹೊರಟಿತ್ತು. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ಆರೋಪಿ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ಹಿಂದೆ ದೆಹಲಿ (Dehli) ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಶಂಕೆಯಾಗಿದೆ. ಪೊಲೀಸರ ತನಿಖೆ ಚುರುಕು ಆರೋಪಿಯಿಂದ 1.21 ಕೋಟಿ ರೂ. ನಗದು, ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ರೂ. ಹಣ ಫ್ರೀಜ್ ಮಾಡಿಸಿದರು. ಒಟ್ಟಾರೆ ಸದ್ಯಕ್ಕೆ ಪೊಲೀಸರು 1.49 ಕೋಟಿ ರೂ. ವಶಕ್ಕೆ ಪಡೆದಿದ್ದು, ಇನ್ನುಳಿದ 62 ಲಕ್ಷ ರೂ. ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

  • ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

    ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

    ಹುಬ್ಬಳ್ಳಿ: ಅಪರಿಚಿತ ಯುವತಿಯರನ್ನು ನಂಬಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗುವ ಯುವಕರಿಗೆ ಪೊಲೀಸ್ (Police) ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ, ವಂಚನೆ ಮಾತ್ರ ನಿಲ್ಲುತ್ತಿಲ್ಲ. ಅಪರಿಚಿತ ಯುವತಿಯೊಬ್ಬಳ ಮಾತುಕೇಳಿ ಯುವಕನೊಬ್ಬ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ 2.40 ಲಕ್ಷ ರೂ. ಕಳೆದುಕೊಂಡ ಪ್ರಕರಣ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ನಗರದ ದತ್ತಾತ್ರೇಯ ಎಂಬಾತ ಹಣ ಕಳೆದುಕೊಂಡ ಯುವಕನಾಗಿದ್ದಾನೆ. ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಬಳಿಕ ಸಲುಗೆ ಬೆಳೆಸಿಕೊಂಡು ನಗ್ನವಾಗಿ ವೀಡಿಯೋ ಕಾಲ್‍ನಲ್ಲಿ ಮಾತಾಡುತ್ತಿದ್ದಳು. ಅಲ್ಲದೇ ಯುವಕನಿಗೂ ನಗ್ನವಾಗಲು ಸೂಚಿಸಿದ್ದಳು. ಕೆಲವು ದಿನಗಳು ಹೀಗೆ ಇಬ್ಬರೂ ಮಾತಾಡಿದ್ದು, ಬಳಿಕ ಯುವಕನ ವೀಡಿಯೋಗಳನ್ನು ಸುದ್ದಿವಾಹಿನಿಗಳಿಗೆ ನೀಡುವುದಾಗಿ ಅಪರಿಚಿತರು ಬ್ಲಾಕ್‍ಮೇಲ್ ಮಾಡಿದ್ದಾರೆ. ಅಲ್ಲದೇ ಜೀವನವನ್ನು ಹಾಳು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್

    ಯುವಕನಿಗೆ ದೆಹಲಿ (Delhi) ಪೊಲೀಸರ ಹೆಸರಲ್ಲಿ ಮಾತನಾಡಿ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆಯಿಟ್ಟಿದ್ದು, ಅದರಂತೆ ದತ್ತಾತ್ರೇಯ ಹಂತ ಹಂತವಾಗಿ ವಂಚಕರಿಗೆ 2.40 ಲಕ್ಷ ರೂ. ಹಣ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ವಂಚಕರು ಕೆಲವು ದಿನಗಳ ಬಳಿಕ ಯೂಟ್ಯೂಬರ್ ಹೆಸರಲ್ಲಿ ಬೆದರಿಕೆ ಹಾಕಿ ಮತ್ತೆ ಹಣದ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಆತಂಕಗೊಂಡ ಯುವಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು

  • ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ತಂತ್ರಜ್ಞಾನ ಕ್ಷೇತ್ರ ಮುಂದುವರಿದಂತೆ ಅದರಿಂದ ಅನುಕೂಲತೆಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ವ್ಯವಹಾರಗಳೂ ಡಿಜಿಟಲೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ಕಿಡಿಗೇಡಿಗಳು ತಂತ್ರಜ್ಞಾನ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮನೆ ದರೋಡೆ, ಕಳ್ಳತನಕ್ಕಿಂತ ಹೆಚ್ಚಾಗಿ ಸೈಬರ್ ಮೂಲಕವೇ ಈಗ ಹೆಚ್ಚಿನ ವಂಚನೆಗಳು ನಡೆಯುತ್ತಿದೆ. ಅಲ್ಲದೇ ಇನ್ನೂ ಅನೇಕ ರೀತಿಯ ಅಪರಾಧಗಳು ಇಂಟರ್‌ನೆಟ್ (Internet) ಮುಖಾಂತರವೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಆತಂಕ ಕೂಡ ಇದೆ.

    ಕಳೆದ 2021-2022 ರ ಅವಧಿಯಲ್ಲಿ ಭಾರತದಲ್ಲಿ 8,84,863 ಸೈಬರ್ ಕ್ರೈಮ್‌ (Cybercrime )ಪ್ರಕರಣಗಳು ನಡೆದಿದ್ದು, 1,376 ಮಕ್ಕಳ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ನಡೆದಿವೆ. 2023ರಲ್ಲಿ ಪ್ರತಿ ಗಂಟೆಗೆ 97 ಸೈಬರ್ ಅಪರಾಧಗಳು ಜರಗುತ್ತಿವೆ. ಅಂದರೆ ದಿನಕ್ಕೆ 2,328 ಪ್ರಕರಣಗಳು ನಡೆಯುತ್ತಿದ್ದು, ಅದರಲ್ಲಿ ಕೋಲ್ಕತ್ತಾ, ತೆಲಂಗಾಣ ಹಾಗೂ ಕರ್ನಾಟಕ ಮುಂಚೂಣಿಯಲ್ಲಿವೆ. ಇದನ್ನೂ ಓದಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ

    ರಾಜ್ಯದಲ್ಲಿ ಸೈಬರ್ ಕ್ರೈಮ್‍ಗಳನ್ನು ತಡೆಗಟ್ಟುವ ಉದ್ದೇಶದಿಂದ 2001ರಲ್ಲೇ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸೈಬರ್ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಅರಿತು ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇಶಾದ್ಯಂತ ಸೈಬರ್ ಅಪರಾಧಗಳ ತಡೆಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ. ಈ ರೀತಿಯಾಗಿ ಸೈಬರ್ ಕ್ರೈಮ್ ತಡೆಯಲು ಕ್ರಮ ಕೈಗೊಂಡರು ಸಹ ಸಾರ್ವಜನಿಕರು ತಿಳುವಳಿಕೆಯ ಕೊರತೆಯಿಂದ ಸೈಬರ್ ಸುಲಿಗೆಗೆ ಒಳಗಾಗುತ್ತಿದ್ದಾರೆ.

    ನಕಲಿ ಸಂದೇಶಗಳು
    ವ್ಯಕ್ತಿಗೆ ಇ-ಮೇಲ್ ಅಥವಾ ಎಸ್‍ಎಂಎಸ್ ಕಳುಹಿಸಿ ನಿಮಗೆ ನಮ್ಮ ಸಂಸ್ಥೆಯಿಂದ ಉಡುಗೊರೆ ನೀಡುತ್ತೇವೆ. ಅದರ ಕೊರಿಯರ್ ವೆಚ್ಚವನ್ನು ನೀವೇ ನೀಡಬೇಕು ಎಂದು ಹಣ ವಸೂಲಿ ಮಾಡುವುದು. ಆನ್‍ಲೈನ್ ಮೂಲಕ ಹಣ ಪಾವತಿಸಿದ ಮೇಲೆ ಖಾತೆಗೆ ಕನ್ನ ಹಾಕುವುದು. ಇಂತಹ ಜಾಲದಲ್ಲಿ ಅನೇಕ ಅಮಾಯಕರು ಸಿಕ್ಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಠಿಣವಾಗಿರುತ್ತದೆ.

    ಸಾಲದ ವಂಚನೆ
    ಸಾಲದ ಬಗ್ಗೆ ಹುಡುಕಾಟದಲ್ಲಿರುವವರನ್ನು ಕಡಿಮೆ ಬಡ್ಡಿ ದರದಲ್ಲಿ ಭಾರೀ ಮೊತ್ತದ ಸಾಲ ಕೊಡಿಸುವುದಾಗಿ ವಂಚಕರು ಆಮಿಷವೊಡ್ಡುತ್ತಾರೆ. ಬಳಿಕ ಮೊಬೈಲ್ ಅಥವಾ ಇಮೇಲ್‍ಗಳ ಮೂಲಕ ಬ್ಯಾಂಕ್ ಹಾಗೂ ದಾಖಲೆಗಳ ವಿವರ ಪಡೆದು ವಂಚಿಸುತ್ತಾರೆ. ಇಲ್ಲವೇ ಒಟಿಪಿ ಕಳುಹಿಸಿ ತಿಳಿಸುವಂತೆ ಹೇಳಿ ಈ ಮೂಲಕ ಈಗಾಗಲೇ ಬ್ಯಾಂಕ್‍ನಲ್ಲಿ ಇರುವ ಹಣವನ್ನು ದೋಚುತ್ತಾರೆ.

    ಒಟಿಪಿ ವಂಚನೆಗಳು
    ವಂಚಕರು ಕರೆ ಮಾಡಿ ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಈ ವೇಳೆ ಮೊಬೈಲ್‍ಗೆ ಬಂದಿರುವ ಒಟಿಪಿಯನ್ನು (OTP) ತಿಳಿಸುವಂತೆ ಸೂಚಿಸುತ್ತಾರೆ. ಈ ವೇಳೆ ಒಟಿಪಿ ಹಂಚಿಕೊಂಡರೆ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ವಂಚಕರ ಜೇಬು ಸೇರಲಿದೆ. ಇಂಥ ಕರೆಗಳು ಬಂದಾಗ ಯಾರಿಗೂ ಒಟಿಪಿ, ಎಟಿಎಂ ಪಿನ್ ನಂಬರ್‍ಗಳನ್ನು ತಿಳಿಸಬಾರದು. ಯಾವುದೇ ಬ್ಯಾಂಕ್ ತನ್ನ ಖಾತೆದಾರರಿಗೆ ಸಿವಿವಿ, ಒಟಿಪಿ, ಎಟಿಎಂ ಪಿನ್ ಇವ್ಯಾವುದನ್ನೂ ಕೇಳುವುದಿಲ್ಲ. ಆ ರೀತಿ ಕೇಳಿ ಕರೆ ಬಂದರೆ ಅದು ವಂಚನೆಯ ಕರೆ ಎಂದು ತಿಳಿಯಬೇಕು.

    ಆನ್‍ಲೈನ್ ಜಾಹಿರಾತುಗಳ ವಂಚನೆ
    ಇದರಲ್ಲಿ ವಂಚಕರು ಅಸ್ತಿತ್ವದಲ್ಲೇ ಇರದ ವಾಹನ, ಆಸ್ತಿ ಮಾರಾಟಕ್ಕಿದೆ ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಗ್ರಾಹಕರಿಂದ ಹಣ ಪಡೆದು ವಂಚನೆ ನಡೆಸುತ್ತಾರೆ. ಅಲ್ಲದೇ ಜಾಹಿರಾತನ್ನು ವಿಶ್ವಾಸಾರ್ಹ ಎಂದು ನಂಬಿಸಿ ಹಣ ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ನಾಪತ್ತೆಯಾಗುತ್ತಾರೆ. ಇದಾದ ಮೇಲೆ ಯಾವ ಪ್ರತಿಕ್ರಿಯೆಯೂ ಇಲ್ಲದ ಬಳಿಕ ಗ್ರಾಹಕನಿಗೆ ವಂಚನೆಗೊಳಗಾಗಿರುವುದು ತಿಳಿಯುತ್ತದೆ.

    ಕ್ರಿಪ್ಟೋ ಕರೆನ್ಸಿ ವಂಚನೆ
    ಇದರಲ್ಲಿ ಬಿಟ್ ಕಾಯಿನ್ ರೂಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಯಾರಿಗೂ ಯಾವುದೇ ಸಂಸ್ಥೆಗೂ ವರ್ಚುವಲ್ ಕರೆನ್ಸಿಯ ರೂಪದಲ್ಲಿ ಹಣ ದ್ವಿಗುಣಗೊಳಿಸುವ ವ್ಯವಹಾರಕ್ಕೆ ಲೈಸೆನ್ಸ್ ನೀಡಿಲ್ಲ.

    ಹನಿಟ್ರ್ಯಾಪ್/ ಬ್ಲಾಕ್‍ಮೇಲ್ ಪ್ರಕರಣ
    ಇತ್ತೀಚೆಗೆ ನಗ್ನ ಚಿತ್ರಗಳನ್ನು ಬಳಸಿ ಕಿಡಿಗೇಡಿಗಳು ವ್ಯುಕ್ತಿಗಳನ್ನು ಬ್ಲಾಕ್‍ಮೇಲ್ ಮಾಡಿ ವಂಚಿಸುವ ಹೆಚ್ಚಿನ ಪ್ರಕರಣಗಳು ನಡೆಯುತ್ತಿವೆ. ಡೇಟಿಂಗ್ ಆಪ್‍ಗಳ ಮೂಲಕ ಮಹಿಳೆಯರಿಂದ ವ್ಯಕ್ತಿಗಳಿಗೆ ವಿಡಿಯೋ ಕರೆ ಮಾಡಿ ಅದನ್ನು ಬೇಕಾದಂತೆ ತಿರುಚಿ ಹಣಕ್ಕೆ ಬೇಡಿಕೆ ಇಡುವ ಎಷ್ಟೋ ಪ್ರಕರಣಗಳು ವರದಿಯಾಗಿವೆ.

    ಹ್ಯಾಕಿಂಗ್
    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ (Hacking) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹ್ಯಾಕ್ ಮಾಡಿ ಕಿಡಿಗೇಡಿಗಳು ತಮ್ಮ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಸಾಮಾಜಿಕ ಜಾಲತಾಣದ ಸಂಪರ್ಕದಲ್ಲಿರುವವರಿಂದ ಹಣಕ್ಕೆ ಬೇಡಿಕೆ ಇಡುವುದು, ಅಲ್ಲದೇ ನಿಗದಿತ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳನ್ನು ಸೃಷ್ಟಿಸಿ ಕಿಡಿಗೇಡಿಗಳು ಇದೇ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ.

    ಆನ್‍ಲೈನ್ ವಂಚನೆಯಾಗದಂತೆ ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡುವುದು ಈ ದಿನಗಳಲ್ಲಿ ಸವಾಲಾಗಿದೆ. ಆದರೂ ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಸೈಬರ್ ವಂಚನೆಯಿಂದ ಪಾರಾಗಲು ಅವಕಾಶವಿದೆ. ಇಂಟರ್‌ನೆಟ್ ಸಂಬಂಧಿತ ವ್ಯವಹಾರಗಳ ಪಾಸ್‍ವರ್ಡ್ ಯಾರಿಗೂ ನೀಡದಿರುವುದು, ಹಾಗೂ ಕ್ಲಿಷ್ಟಕರವಾದ ಪಾಸ್‍ವರ್ಡ್ ಇಟ್ಟುಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸದಿರುವುದು, ಆಧಿಕೃತವಲ್ಲದ ಆಪ್‍ಗಳನ್ನು ಡೌನ್‍ಲೋಡ್ ಮಾಡದೇ ಇರುವುದು ಸೈಬರ್ ವಂಚನೆಗೆ ಒಳಗಾಗದಂತೆ ಇರುವ ಮಾರ್ಗಗಳು.

    ಇದಾಗಿಯೂ ವಂಚನೆಗೆ ಒಳಗಾದರೆ ಸೈಬರ್ ಕ್ರೈಮ್ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶ ಇದೆ. ಆದರೆ ಪ್ರಪಂಚದ ಯಾವುದೋ ಮೂಲೆಯಲ್ಲಿಂದ ನಿಮಗೆ ಅನ್ಯಾಯವಾಗಿದ್ದರೆ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಇದರಿಂದ ಸೈಬರ್ ವಿಚಾರದಲ್ಲಿ ಜಾಗ್ರತೆ ವಹಿಸುವುದೊಂದೆ ಮೊದಲ ಪರಿಹಾರವಾಗಿ ಕಾಣುತ್ತದೆ.

    ಪಿಂಕ್ ವಾಟ್ಸಾಪ್ ಬಳಕೆ ಸೈಬರ್ ವಂಚನೆಗೆ ಆಹ್ವಾನ ಕೊಟ್ಟಂತೆ ಎಂದು ಆಂಡ್ರಾಯ್ಡ್ ಬಳಕೆದಾರರಿಗೆ ಮುಂಬೈ ಪೊಲೀಸರು ಇತ್ತೀಚೆಗೆ ಎಚ್ಚರಿಕೆ ನಿಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಲ್ಲದೇ ಪ್ರಕರಣವೊಂದರ ತನಿಖೆ ವೇಳೆ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ ಎಂದು ಕರ್ನಾಟಕ ಹೈಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ಇದನ್ನೂ ಓದಿ: ಅನ್ನಭಾಗ್ಯದ ದುಡ್ಡಿಗಾಗಿ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    ಮುಂಬೈ: ಪೊಲೀಸರಂತೆ ನಟಿಸಿ ದಿನವೊಂದಕ್ಕೆ 5 ರಿಂದ 10 ಕೋಟಿ ರೂ. ದೋಚುತ್ತಿದ್ದ ಸೈಬರ್ ಕ್ರೈಮ್ ಜಾಲವನ್ನು(Cybercriminals) ಮುಂಬೈ (Mumbai) ಪೊಲೀಸರು ಬಯಲಿಗೆಳೆದಿದ್ದಾರೆ.

    12ನೇ ತರಗತಿ ಓದಿ, ಉತ್ತಮ ತಾಂತ್ರಿಕ ಜ್ಞಾನ  (Technical Knowledge) ಹೊಂದಿದ್ದ ಮಾಸ್ಟರ್ ಮೈಂಡ್ (Mastermind) ಶ್ರೀನಿವಾಸ್ ರಾವ್ ದಾಡಿ (49) ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‍ನ ಹೋಟೆಲ್‍ನಲ್ಲಿ ಬಂಧಿಸಿದೆ. ಅಲ್ಲದೆ ಆತನ ಗ್ಯಾಂಗ್ ಸದಸ್ಯರಾದ ಥಾಣೆಯ ಇಬ್ಬರು ಮತ್ತು ಕೋಲ್ಕತ್ತಾದ (Kolkata) ನಾಲ್ವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ಆರೋಪಿಗಳು ದಾಡಿ ಹೆಸರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದರು. ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಅಲ್ಲದೆ ಎನಿಡೆಸ್ಕ್ ಅಪ್ಲಿಕೇಷನ್‍ಗಳನ್ನು ಸಹ ಬಳಸಿದ್ದರು. ಅವರು ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಬಂಧಿತರಿಂದ 1.5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಗಳು ಜನರನ್ನು ಸಂಪರ್ಕಿಸಿ ಕೋರಿಯರ್ ಮೂಲಕ ತಮ್ಮ ರಿಯಲ್ ಎಸ್ಟೇಟ್ ಕಛೇರಿಗೆ ದಾಖಲೆಗಳನ್ನು ಕಳಿಸುವಂತೆ ಹೇಳುತ್ತಿದ್ದರು. ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಇವರು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೆ ತಮಗೆ ಕಳುಹಿಸಿದ ಕೊರಿಯರ್‍ನಲ್ಲಿ ಪೊಲೀಸರು ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೆದರಿಸುತ್ತಿದ್ದರು. ಭಯಭೀತರಾದವರಿಂದ ಬ್ಯಾಂಕ್ ಅಥವಾ ಆದಾಯ ತೆರಿಗೆ (Income Tax) ಸಂಬಂಧಿತ ವಿವರಗಳನ್ನು ಪಡೆದು ಖಾತೆಯಲ್ಲಿದ್ದ ಹಣ ಕದಿಯುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.

    ದರೋಡೆಕೋರರು ಕದ್ದ ಎಲ್ಲಾ ಹಣ ಶ್ರೀನಿವಾಸ್ ರಾವ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಸೇರುತ್ತಿತ್ತು. ನಂತರ ಆತ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ (Cryptocurrency) ಪರಿವರ್ತಿಸಿ ಚೀನಾದ ಪ್ರಜೆಗೆ ವರ್ಗಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ತನಿಖೆಗಾಗಿ, ನಗರ ಪೊಲೀಸ್ ತಂಡಗಳು ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಜಾಖರ್ಂಡ್, ಹರಿಯಾಣ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗ್ಯಾಂಗ್‍ನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

  • ವೃದ್ಧರಿಗೆ ಸಹಕರಿಸುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ ಬಂಧನ

    ವೃದ್ಧರಿಗೆ ಸಹಕರಿಸುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ ಬಂಧನ

    ಬೆಂಗಳೂರು: ಜನ ಎಷ್ಟೇ ಎಚ್ಚೆತ್ತುಕೊಂಡರು, ವಂಚಿಸುವವರು ಅಷ್ಟೇ ಹೊಸ ಪ್ಲಾನ್ ಮಾಡಿ ಬದಲಾಗುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ವಂಚಕ, ವೃದ್ಧರಿಗೆ ಸಹಕರಿಸುವ ಮುಖವಾಡ ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಎಟಿಎಂಗೆ (ATM) ಬರುತ್ತಿದ್ದ ವಯಸ್ಸಾದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆಟೋ ಚಾಲಕನನ್ನು (Auto Driver) ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಶಶಿಕುಮಾರ್ ಎಟಿಎಂಗೆ ಬರುತ್ತಿದ್ದ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಹೋಗುತ್ತಿದ್ದ. ಹಣ ಡ್ರಾ ಮಾಡಿಕೊಡುವುದಾಗಿ ಕಾರ್ಡ್ ಪಡೆಯುತ್ತಿದ್ದ. ಆತನನ್ನು ನಂಬಿ ಪಿನ್ ಕೊಡುತ್ತಿದ್ದ ವೃದ್ಧರಿಗೆ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ಕೊಡುತ್ತಿದ್ದ. ನಂತರ ಹಣ ತೆಗೆಯುವ ರೀತಿ ನಟಿಸಿ ಎಟಿಎಂ ವರ್ಕ್ ಆಗ್ತಿಲ್ಲ ಎಂದು ಹೇಳಿ ಕಳಿಸುತ್ತಿದ್ದ. ಅಲ್ಲಿಂದ ವೃದ್ಧರು ಹೋದ ಮೇಲೆ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ. ಇದನ್ನೂ ಓದಿ: ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ


    ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ವಿರುದ್ಧ ಈಶಾನ್ಯ ವಿಭಾಗದ ಸೈಬರ್ ಕ್ರೈಮ್‌ (Cyber Crime ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

  • ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ! – ಎಂಟ್ರಿಕೊಟ್ಟಿದೆ ರಷ್ಯಾದ ಸೋವಾ-5.0 ವೈರಸ್

    ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ! – ಎಂಟ್ರಿಕೊಟ್ಟಿದೆ ರಷ್ಯಾದ ಸೋವಾ-5.0 ವೈರಸ್

    ಬೆಂಗಳೂರು: ಡಿಜಿಟಲ್ ಯುಗದಲ್ಲಿ ಏನ್ ಇಲ್ಲ ಅಂದ್ರೂ ನಡೆಯುತ್ತೆ. ಆದರೆ ಕೈಯಲ್ಲಿ ಒಂದು ಫೋನ್‌ (Phone) ಇರಲೇಬೇಕು. ಹಳ್ಳಿಯಿಂದ ಡೆಲ್ಲಿವರೆಗೆ ಸಹ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ (Mobile)  ಇದೆ. ಇದರಿಂದ ಎಷ್ಟು ಲಾಭವೋ ಅಷ್ಟೇ ಅಪಾಯವು ಇದೆ. ಜನ ವಂಚನೆಗೆ ಒಳಗಾಗುತ್ತಿರುವ ಘಟನೆಯು ಹೆಚ್ಚಾಗುತ್ತಿದೆ. ಇದೀಗ ಸ್ಮಾರ್ಟ್ ಫೋನ್‌ಗೆ (Smartphone) ಹೊಸ ವೈರಸ್ ಒಂದು ಲಗ್ಗೆ ಇಟ್ಟಿದೆ.

    ಸೈಬರ್ ಕ್ರೈಮ್ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇರಲ್ಲ. ಅದರಲ್ಲೂ ಮೊಬೈಲ್‍ನಲ್ಲಿರೋ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೋ ಕದಿಯಬಲ್ಲ ವೈರಸ್ ಒಂದು ನಮ್ಮ ದೇಶಕ್ಕೆ ಕಾಲಿಟ್ಟಿದೆ. ಹೌದು ಈ ಖತರ್ನಾಕ್ ವೈರಸ್‍ಗೆ ಸೋವಾ (SOVA)  ಎಂದು ಕರೆಯುತ್ತಿದ್ದು ಇದು ರಷ್ಯಾದಿಂದ ಬಂದಿರುವ ಮೊಬೈಲ್ ವೈರಸ್. ರಷ್ಯಾ (Russia) ಭಾಷೆಯಲ್ಲಿ ಸೋವಾ ಅಂದ್ರೆ ಗೂಬೆ ಅನ್ನೋ ಅರ್ಥವಿದೆ. ಸೈಬರ್ ಖದೀಮರು ಈ ವೈರಸ್‌ನ್ನು 2021ರಲ್ಲಿ ಅಭಿವೃದ್ಧಿ ಪಡಿಸಿ ಈಗ ಅದರ ಹೊಸ ವರ್ಷನ್ 5.0ವನ್ನು (SOVA-5.0)  ಹಣ ಮಾಡಲು ಬಳಸುತ್ತಿದ್ದಾರೆ. ಆ್ಯಂಡ್ರಾಯ್ಡ್, ಸ್ಮಾರ್ಟ್‌ಫೋನ್‌ಗಳಲ್ಲಿನ ಮೊಬೈಲ್‌ ಬ್ಯಾಂಕಿಂಗ್‌ (Mobile Banking) ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್‌ ದಾಳಿ ಮಾಡುತ್ತಿದೆ. ಅಮೆರಿಕ (America), ರಷ್ಯಾ ಮತ್ತು ಸ್ಪೇನ್‌ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್‌ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಕಳವು – ಪವರ್ ಬ್ಯಾಂಕ್ ಚಾರ್ಚಿಂಗ್‍ನಿಂದ ಆಪತ್ತು!

    ಡೇಟಾಗೆ ಗುನ್ನಾ:
    ಹೌದು ಇದು ಮೊಬೈಲ್‍ಗೆ ಹೊಸ ಹೊಸ ಆ್ಯಪ್ ಡೌನ್‍ಲೋಡ್ ಮಾಡುವಾಗ ಎಂಟ್ರಿ ಕೊಡುವ ವೈರಸ್ ಆಗಿದ್ದು, ಇದು ಒಮ್ಮೆ ಮೊಬೈಲ್‍ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲದಂತೆ ಅಭಿವೃದ್ಧಿ ಪಡಿಸಿದ್ದಾರೆ. ಇದು ಮೊಬೈಲ್‍ನಲ್ಲಿ ಇರುವುದು ತಿಳಿಯದಂತೆ ಕೆಲಸ ಮಾಡತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುವುದರಿಂದ ಹಿಡಿದು ನಿಮ್ಮ ಮೊಬೈಲ್‍ನಲ್ಲಿ ಏನೇಲ್ಲ ಡೇಟಾ ಇದೇ ಅದನ್ನು ಕದಿಯಲಿದೆ. ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಮ್ಮ ದೇಶದಲ್ಲೂ ಆಗಿದೆ. ಇದು ಹೇಗೆ ಬರುತ್ತೆ ಇದು ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನು ಸೈಬರ್ ತಜ್ಞೆ ಆಗಿರುವ ಡಾ. ಶೋಭಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶೋಭಾ, ಈ ವೈರಸ್ ಬರದಂತೆ ಹೇಗೆ ತಡೆಯೋದು ಅನ್ನೋ ಪ್ರಶ್ನೆ ಸಹಜವಾಗಿಯೇ ನಿಮಗೂ ಬಂದಿರುತ್ತೆ. ಹೌದು ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ. ಹೊಸ ಆ್ಯಪ್ ಡೌನ್‌ಲೋಡ್‌ ಮಾಡುವಾಗ ಅದು ಸರಿಯಾದ ಆ್ಯಪ್ ಅನ್ನೋದನ್ನು ಪರಿಶೀಲಿಸಿ. ಬೇಕಾಬಿಟ್ಟಿ ಸಿಕ್ಕಸಿಕ್ಕ ಆ್ಯಪ್ ಇನ್‍ಸ್ಟಾಲ್ ಮಾಡಬೇಡಿ. ಗೊತ್ತಿಲ್ಲದ ಲಿಂಕ್‍ಗಳನ್ನು ಓಪನ್ ಮಾಡಬೇಡಿ. ಯಾರೋ ಗೊತ್ತಿಲ್ಲದವರು ಕಳುಹಿಸಿದ ಆ್ಯಪ್ ಡೌನ್‍ಲೋಡ್ ಮಾಡಬೇಡಿ. ಜಾಹೀರಾತಿನಲ್ಲಿ ಬರುವ ಫೋಟೋ ವೀಡಿಯೋಗಳನ್ನು ಡೌನ್‍ಲೋಡ್ ಮಾಡಬೇಡಿ. ಅಧಿಕೃತ ವೈರಸ್ ರಿಮೂವ್ ಆ್ಯಪ್ ಆಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ, ದೂರು ದಾಖಲು

    ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ, ದೂರು ದಾಖಲು

    ಬೆಂಗಳೂರು:  ಕಾದಂಬರಿಕಾರ, ನಾಟಕಕಾರ, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿ ಡಾ.ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಂಚನೆಗೆ ಯತ್ನ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

    ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಾಟ್ಸಪ್‌ ಸಂದೇಶ ಕಳಿಸುತ್ತಿರುವ ಅಪರಿಚಿತರು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್‌ ಅಪರಾಧ ವಿಭಾಗಕ್ಕೆ ಚಂದ್ರಶೇಖರ ಕಂಬಾರ ದೂರು ನೀಡಿದ್ದಾರೆ.  ಇದನ್ನೂ ಓದಿ: 1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    ದೂರಿನಲ್ಲಿ ಏನಿದೆ?
    ನನ್ನ ಹೆಸರು ಮತ್ತು ಫೋಟೋ ಬಳಸಿ ನನಗೆ ಧನ ಸಹಾಯ ಮಾಡಿ ಎಂದು ವಿವಿಧ ಕಡೆ ವಾಟ್ಸಪ್‌ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಾರ್ವಜನಿಕರು ನಂಬಬಾರದು. ಈ ರೀತಿ ನನ್ನ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.