Tag: ಸೈಬರ್ ಕ್ರೈಂ ಪೊಲೀಸ್

  • ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

    ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

    ಬೆಂಗಳೂರು: ಮಾನ್ಯತೆ ಪಡೆಯದ ಬೆಟ್ಟಿಂಗ್ ಆಪ್ ಬಗ್ಗೆ ಪ್ರಮೋಟ್ (Betting App Promote) ಮಾಡಿದ ಆರೋಪದ ಮೇಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್‌ಗೌಡ (Sonu Srinivas Gowda) ಸೇರಿದಂತೆ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ನೀಡಿ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

    ತಮ್ಮ ತಮ್ಮ ಇನ್ಸ್ಟಾಗ್ರಾಂ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದ ರೀಲ್ಸ್ ಸ್ಟಾರ್‌ಗಳಿಗೆ (Reels Stars) ಶಾಕ್ ಎದುರಾಗಿದೆ. ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು. ಹಾಗಾಗಿ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಜನರಿಗೆ ವಂಚಿಸುವ ಜಾಹೀರಾತು ಪ್ರಕಟಿಸಿದ್ದ ರೀಲ್ಸ್ ಸ್ಟಾರ್‌ಗಳ ಪಟ್ಟಿ ಮಾಡಿ ಸೈಬರ್ ಕ್ರೈಂ (Cyber Crime) ಪೊಲೀಸರು ನೋಟಿಸ್ ನೀಡಿದ್ದರು. ಇದನ್ನೂ ಓದಿ: ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ದರ್ಶನ್‌, ಪವಿತ್ರ ಗೌಡ

    ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ವಿಚಾರಣೆಗೆ ಹಾಜರಾದ ಸ್ಟಾರ್‌ಗಳು ಇನ್ನು ಮುಂದೆ ಇಂತಹ ಜಾಹೀರಾತುಗಳನ್ನ ನಾವು ಪ್ರಕಟಿಸುವುದಿಲ್ಲ. ಈ ಜಾಹೀರಾತು ಪ್ರಕಟಿಸುವುದರಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂಬ ಅರಿವಿಲ್ಲದೇ ನಾವು ಪ್ರಕಟಿಸಿದ್ದೇವೆ. ನಾವು ಮಾಡಿದ್ದ ತಪ್ಪಿನ ಬಗ್ಗೆ ಅರಿವಿಗೆ ಬಂದಿದ್ದು, ಜಾಹೀರಾತುಗಳನ್ನ ಡಿಲೀಟ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಜನರಿಗೆ ವಂಚಿಸುವ ಜಾಹೀರಾತುಗಳು ಇನ್ನೊಮ್ಮೆ ಪ್ರಕಟಿಸಿದರೆ ಜೈಲಿಗೆ ಕಳಿಸುವ ಎಚ್ಚರಿಕೆಯನ್ನು ಸೈಬರ್ ಕ್ರೈಂ ಪೊಲೀಸರು ನೀಡಿದ್ದಾರೆ. ಇದನ್ನೂ ಓದಿ: ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

  • Cyber Crimeː 4 ವರ್ಷಗಳಲ್ಲಿ ರಾಜ್ಯಕ್ಕೆ 722 ಕೋಟಿ ನಷ್ಟ!

    Cyber Crimeː 4 ವರ್ಷಗಳಲ್ಲಿ ರಾಜ್ಯಕ್ಕೆ 722 ಕೋಟಿ ನಷ್ಟ!

    ಬೆಂಗಳೂರು: ಆನ್‌ಲೈನ್ ವ್ಯವಹಾರ (Online Money Transfer) ಹೆಚ್ಚಿದಂತೆ ಸೈಬರ್ ವಂಚಕರ ಜಾಲ ಬೃಹತ್ತಾಗಿ ಬೆಳೆದಿದ್ದು, ನೇರವಾಗಿ ಗ್ರಾಹಕರ ಖಾತೆಗೆ ಕನ್ನ ಹಾಕುವ ಕೆಲಸ ನಡೆಯುತ್ತಿದೆ.

    ಹಾಗೆಯೇ 2019 ರಿಂದ 2023ರ ವರೆಗೆ ಸೈಬರ್ ಅಪರಾಧಗಳ (Cyber Crime) ಅಡಿಯಲ್ಲಿ ಬರೋಬ್ಬರಿ 722 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು, 722 ಕೋಟಿ ರೂ. ನಷ್ಟವಾಗಿದೆ ಎಂಬ ಅಂಕಿ-ಅಂಶ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಪೊಲೀಸರು ಸಂಗ್ರಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

    ಅಲ್ಲದೆ, ಸೈಬರ್ ಅಪರಾಧಗಳಿಂದ ಎಚ್ಚರ ವಹಿಸುವಂತೆ ವಿಶೇಷ ಕೈಪಿಡಿ ಸಿದ್ಧಪಡಿಸಿದ್ದು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಕತ್ತಿಯಿಂದ ಕಡಿದು ಯುವಕನ ಭೀಕರ ಹತ್ಯೆ

    ಯಾವ ವರ್ಷ ಎಷ್ಟು ನಷ್ಟ?
    2019ರಲ್ಲಿ ಸೈಬರ್ ಅಪರಾಧದಲ್ಲಿ ರಾಜ್ಯಕ್ಕೆ 71.27 ಕೋಟಿ ರೂ. ನಷ್ಟವಾಗಿತ್ತು, ಅದರಲ್ಲಿ 8.59 ಕೋಟಿ ರೂ.ಗಳನ್ನು ಪೊಲೀಸರು ಸಂಗ್ರಹಿಸಿಕೊಟ್ಟಿದ್ದಾರೆ. 2020ರಲ್ಲಿ 105.99 ಕೋಟಿ ರೂ. ನಷ್ಟವಾಗಿದ್ದು, 14.83 ಕೋಟಿ ರೂ. ವಸೂಲಿ ಮಾಡಿದ್ದಾರೆ. 2021ರಲ್ಲಿ 145.05 ಕೋಟಿ ನಷ್ಟವಾಗಿದ್ದು, 25.96 ಕೋಟಿ ರೂ. ವಸೂಲಿ, 2022ರಲ್ಲಿ 363.11 ಕೋಟಿ ಕಳೆದುಕೊಳ್ಳಲಾಗಿದ್ದು, 46.87 ಕೋಟಿ ವಸೂಲಿ ಮಾಡಿದ್ದಾರೆ. ಇನ್ನೂ 2023ರ ಪ್ರಸಕ್ತ ವರ್ಷದಲ್ಲಿ ಜನವರಿ ತಿಂಗಳ ಅಂತ್ಯದ ವರೆಗೆ 36.63 ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದ್ದು, ಪೊಲೀಸರು 1.03 ಕೋಟಿ ರೂ. ಮಾತ್ರ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೈಬರ್ ಕ್ರೈಂ ವಿಭಾಗ ಮಾಹಿತಿ ನೀಡಿದೆ.

  • ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

    ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

    – ಆರೋಪಿಯಿಂದ 3.5 ಲಕ್ಷ ಹಣ ವಶ

    ಕಲಬುರಗಿ: ಹುಡಗಿಯರೇ ಫೇಸ್‍ಬುಕ್‍ನಲ್ಲಿ ಒಳ್ಳೊಳ್ಳೆಯ ಫೋಟೋಗಳನ್ನು ಹಾಕುವ ಮುನ್ನ ಒಂದು ಸಾರಿ ಯೋಚನೆ ಮಾಡಿ. ನಿಮಗೆ ಗೊತ್ತಿಲ್ಲದೆ ನಿಮ್ಮ ಫೋಟೋಗಳನ್ನ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡೋ ಖತರ್ನಾಕ್ ಟೀಮ್ ಆ್ಯಕ್ಟಿವ್ ಆಗಿದ್ದು, ಸುಂದರವಾದ ಹುಡುಗಿಯರ ಫೋಟೋ ಕಂಡು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಗಂಡಸರೇ ಇವರ ಟಾರ್ಗೆಟ್ ಆಗಿದೆ.

    ಹೌದು. ಕಲಬುರಗಿ ನಿವಾಸಿ ರಘುವೀರ್ ಈ ರೀತಿಯ ಹುಡುಗಿಯರ ಫೋಟೋ ತೋರಿಸಿ ಹಣ ವಸೂಲಿ ಮಾಡುವ ಖತರ್ನಾಕ್ ಖದೀಮ. ಎಂಜನಿಯರಿಂಗ್, ಎಂಬಿಎ ಮುಗಿಸಿಕೊಂಡಿರೋ ರಘುವೀರ್, ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಬಿಟ್ಟು ಸುಲಭವಾಗಿ ದುಡ್ಡು ಮಾಡೋಕೆ ಹೋಗಿ ಈಗ ಜೈಲು ಪಾಲಾಗಿದ್ದಾನೆ.

    ಗೂಗಲ್ ಮುಖಾಂತರ ಚಂದ ಚಂದದ ಹುಡುಗಿಯರ ಫೋಟೋ ತೆಗೆದುಕೊಂಡು ನಕಲಿ ಫೇಸ್‍ಬುಕ್ ಅಕೌಂಟ್ ಕ್ರಿಯೇಟ್ ಮಾಡುವ ಈತ ಬೇರೆಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಬಳಿಕ ಆನ್‍ಲೈನ್ ಜಾಬ್ ಲಿಂಕ್ ಕಳುಹಿಸಿ ಅದರ ಬಗ್ಗೆ ಪುಸಲಾಯಿಸಿ ಹಣವನ್ನ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ನಂತರ ಕೆಲಸ ಕೊಡಿಸದಿದ್ದಾಗ ಹಣ ವಾಪಸ್ ಕೊಡುವಂತೆ ಹಣ ನೀಡಿದವರು ಕೇಳಿದರೆ ಅವರನ್ನೇ ರಘುವೀರ್ ಹೆದರಿಸುತ್ತಿದ್ದ. ಅಷ್ಟೇ ಅಲ್ಲ ಮತ್ತೊಂದು ನಂಬರಿನಿಂದ ಅವರಿಗೆ ಕರೆ ಮಾಡಿ ತಾನು ಸೈಬರ್ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು ನಿಮ್ಮ ವಿರುದ್ಧ ದೂರು ಬಂದಿದೆ ಅಂತ ಹೇಳಿ ಮತ್ತೆ ಹಣ ವಸೂಲಿ ಮಾಡುತ್ತಿದ್ದನು.

    ಹೀಗೆ ಆನ್‍ಲೈನ್ ಜಾಬ್ ಕೊಡಿಸ್ತೀನಿ ಎಂದು ಪಂಗನಾಮ ಹಾಕಿ ರಘುವೀರ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ಕೆಲದಿನಗಳ ಹಿಂದೆ ಕಲಬುರಗಿಯ ಕೆಎಸ್‌ಆರ್‌ಪಿ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಪ್ರಿಯಾ ಶೆಟ್ಟಿ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡು ಹಣ ವಸೂಲಿ ಮಾಡಿದ್ದನು. ಈ ವಿಚಾರ ತಿಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನ ಕಂಬಿ ಹಿಂದೆ ಕಳುಹಿಸಿದ್ದಾರೆ. ಬಂಧಿತನಿಂದ ಸುಮಾರು 3.5 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

    ಸೋಷಿಯಲ್ ಮೀಡಿಯಾವನ್ನ ದುರ್ಬಳಕೆ ಮಾಡಿಕೊಂಡು ಹಣ ಮಾಡಬಹುದು ಅಂದುಕೊಂಡಿದ್ದ ರಘುವೀರ್ ಸದ್ಯ ಅಂದರ್ ಆಗಿದ್ದಾನೆ. ಆದರೆ ಗೊತ್ತಿಲ್ಲದ ಹುಡುಗಿಯ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದರೆ ಅಕ್ಸೆಪ್ಟ್ ಮಾಡೋಕೂ ಮುಂಚೆ ಒಂದು ಸಾರಿ ಯೋಚನೆ ಮಾಡಿ ಬಳಿಕ ಅಪರಿಚಿತರ ಜೊತೆ ಸ್ನೇಹ ಬೆಳೆಸೋದು ಒಳ್ಳೆಯದು.

  • ಸಂಸದ ಪ್ರತಾಪ್ ಸಿಂಹ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಸಂಸದ ಪ್ರತಾಪ್ ಸಿಂಹ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಚೋದನಾತ್ಮಕ ಪೋಸ್ಟ್ ಹಾಕುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕರ್ನಾಟಕ ಅಂತರ್ಜಾಲ ಪ್ರಾಧಿಕಾರದ ಎ ಆನಂದ ಎಂಬವರು ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಿಸಿದ್ದು, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ವಿನಕಾರಣ ಹೇಳಿಕೆ ನೀಡಿ ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

    ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಡಿಯೋ ಕುರಿತು ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ನೈಜವಲ್ಲದ ಪೋಸ್ಟ್ ಗಳನ್ನು ಫೇಸ್‍ಬುಕ್ ನಲ್ಲಿ ಹಾಕಿ ಪ್ರಚೋದನೆ ನೀಡುತ್ತಾರೆ. ಅಲ್ಲದೇ ದೇಶದ ವೀರ ವನಿತೆಯರ ಚಾರಿತ್ರ್ಯ ಹರಣ ಮಾಡುವಂತಹ ಪೋಸ್ಟ್ ಗಳನ್ನು ಹಾಕಿದ್ದು, ಈ ಕುರಿತು ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುಬೇಕು. ಪ್ರಕರಣದ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ನಂತರ ದಿನಗಳಲ್ಲಿ ಹಾಜರು ಪಡಿಸುವುದಾಗಿ ದೂರಿನಲ್ಲಿ ಮನವಿ ಮಾಡಿದ್ದಾರೆ. (ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!)

    ಪ್ರತಾಪ್ ಸಿಂಹ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 66 ಸಿ, ಐಪಿಸಿ ಸೆಕ್ಷನ್ ಗಳಾದ 153ಎ(ಸಮಾಜದ ಸಾಮರಸ್ಯ ಹಾಳು ಮಾಡುವುದು), 295ಎ( ಕೋಮು ಸೌಹಾರ್ದಕ್ಕೆ ಧಕ್ಕೆ), 505(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.