Tag: ಸೈಬರ್ ಕಾನೂನು

  • ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

    ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

    ವಾರಣಾಸಿ: ನೀವು ಫೇಸ್‍ಬುಕ್/ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ನಿಮ್ಮ ಗ್ರೂಪಿನ ಯಾವೊಬ್ಬ ಸದಸ್ಯ ಸುಳ್ಳು ಮಾಹಿತಿ, ವದಂತಿಯನ್ನು ಶೇರ್ ಮಾಡಿದ್ರೆ ನೀವು ಜೈಲಿಗೆ ಹೋಗುವ ಪ್ರಸಂಗ ಬಂದರೂ ಆಶ್ಚರ್ಯವೆನಿಲ್ಲ.

    ಹೌದು. ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ವಿಚಾರಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.

    ಈ ವಿಚಾರವಾಗಿ ವಾರಣಾಸಿಯ ಜಿಲ್ಲಾಧಿಕಾರಿ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ಜಂಟಿ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಯನ್ನು ಹರಡಿದರೆ ಆ ಗ್ರೂಪಿನ ಅಡ್ಮಿನ್ ಮೇಲೆ ಸೈಬರ್ ಕ್ರೈಮ್ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನ್ಯೂಸ್ ಹೆಸರಿನಲ್ಲಿ ಗ್ರೂಪ್‍ಗಳು ಕ್ರಿಯೇಟ್ ಆಗಿವೆ. ಆದರೆ ಈ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದು, ಕ್ರಾಸ್ ಚೆಕ್ ಮಾಡದೇ ಸುದ್ದಿಗಳನ್ನು ಶೇರ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಇದನ್ನೂ ಓದಿ:ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

    ಗ್ರೂಪಿನಲ್ಲಿ ಸದಸ್ಯನೊಬ್ಬ ಸುಳ್ಳು ಸುದ್ದಿ ಅಥವಾ ಧಾರ್ಮಿಕ ಸೌಹಾರ್ದತೆಗೆ ಅಡ್ಡಿ ತರುವಂತಹ ವಿಚಾರ, ವದಂತಿಯನ್ನು ಹಾಕಿದ್ರೆ ಅಡ್ಮಿನ್ ಆದವನು ಕೂಡಲೇ ಆತನನ್ನು ಗ್ರೂಪ್‍ನಿಂದ ಕಿತ್ತು ಹಾಕಬೇಕು. ಈ ರೀತಿಯ ಸಂದೇಶಗಳು ಹರಿದಾಡಿದರೆ ಜನರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಬುಧವಾರ ಈ ಆದೇಶ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ  ವ್ಯಕ್ತಪಡಿಸಲು ಅವಕಾಶವಿದೆ. ಇದರ ಜೊತೆಗೆ ಜವಾಬ್ದಾರಿಯೂ ಇದೆ ಎಂದು ತಿಳಿಸಲಾಗಿದೆ.

    ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವಾಗಿದ್ದು, ಭಾರತದಲ್ಲಿ ಪ್ರಸ್ತುತ 20 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ಇದನ್ನೂ ಓದಿ:ಇನ್ನು ಮುಂದೆ ವಾಟ್ಸಪ್‍ನಲ್ಲೂ ಹಣ ಸೆಂಡ್ ಮಾಡಬಹುದು!