Tag: ಸೈಬರ್

  • ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್

    ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್

    ಹಿಂದೆ ಬೆಂಗಳೂರಿನ ವಕೀಲೆಯೊಬ್ಬರು 24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ (Digital Arrest) ಆಗಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಕನ್ನಡದ ಹೆಸರಾಂತ ನಿರ್ದೇಶಕಿ, ನಟಿ ಹಾಗೂ ಬಿಜೆಪಿಯ ಕಾರ್ಯಕರ್ತೆ ರೂಪಾ ಅಯ್ಯರ್ಕೂ (Roopa Iyer) ಡ ಅಂಥದ್ದೇ ಸಂಕಷ್ಟ ಎದುರಿಸಿದ್ದಾರೆ. ಬುಧವಾರ ಮಧ್ಯಾಹ್ನ 2.30ರಿಂದ ಗುರುವಾರ ಬೆಳಗ್ಗೆ 10.30ರವೆಗೂ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು ಎಂದು ಸ್ವತಃ ರೂಪಾ ಅಯ್ಯರ್ ಅವರೇ ಪಬ್ಲಿಕ್ ಟಿವಿ ಡಿಜಿಟಲ್ ಗೆ ಖಚಿತಪಡಿಸಿದ್ದಾರೆ. ಈ ಕುರಿತಂತೆ ದೂರು ಕೂಡ ದಾಖಲಾಗಿದೆ.

    ಜೆಟ್ ಏರ್‍ ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ಸೈಬರ್ ಕಳ್ಳರು ಒಟ್ಟು 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಹೇಳಿದರು. ಗುರುವಾರ ಮಧ್ಯಾಹ್ನ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬ ತಾನು ಟ್ರಾಯ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮೊಬೈಲ್ ‍ಬ್ಲ್ಯಾಕ್ ಮಾಡಬೇಕು ಎಂದು ಹೆದರಿಸಿದ್ದಾನೆ.

    ರೂಪಾ ಅವರ ಆಧಾರ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರಿಂದ ದೇಶದ್ರೋಹದ ಚಟುವಟಿಕೆ ಮಾಡಲಾಗಿದೆ. ಈಗಾಗಲೇ ಈ ಕುರಿತಂತೆ ಮುಂಬೈ ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಗಾಬರಿ ಪಡಿಸಿದ್ದಾರೆ. ಇದರಿಂದ ಆತಂಕಗೊಂಡ ರೂಪಾ, ಅವರು ಹೇಳಿದ್ದಂತೆಲ್ಲ ಕೇಳಿದ್ದಾರೆ. ಸೆಲೆಬ್ರಿಟಿ ಆಗಿರೋದ್ರಿಂದ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ರೂಪಾ, ಅವರು ಹಣ ಕೇಳೋಕೆ ಶುರು ಮಾಡಿದಾಗ ನನಗೆ ಅನುಮಾನ ಬಂತು. ಬ್ಯಾಂಕ್ ಖಾತೆ ವಿವರ ಕೇಳಿದ್ದಕ್ಕೆ ನಾನು ತಕ್ಷಣವೇ ಎಚ್ಚೆತ್ತುಕೊಂಡೆ. ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನನಗೆ ಗೊತ್ತು ಅಂತೆಲ್ಲ ಹೇಳಿದೆ. ಆಗ ಅವರು ಸುಮ್ಮನಾದರು. ಬಿಜೆಪಿ ವಿರುದ್ಧ ನಿಂದಿಸಿದರು ಎಂದರು.

    ಸೈಬರ್ ಕಳ್ಳರು ರೂಪಾ ಅವರನ್ನು ನಂಬಿಸುವುದಕ್ಕಾಗಿ ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕಳುಹಿಸಿದ್ದಾರೆ. ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದಿರುವಂತೆ ವಿಕ್ರಂ ಗೋಸ್ವಾಮಿ ಎನ್ನುವವರ ಹೆಸರಿನಲ್ಲಿ ನಕಲಿ ಸಹಿ ಕೂಡ ಮಾಡಿದ್ದಾರೆ.  ಕೂಡಲೇ ಅರೆಸ್ಟ್ ಮಾಡಬೇಕು ಎಂದು ಭಯ ಪಡಿಸಿದ್ದಾರೆ.

     

    ಸದ್ಯ ರೂಪಾ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಹೇಳಿದಂತೆ ನಾನು ಕೇಳಿದ್ದರೆ 30 ಲಕ್ಷ ರೂಪಾಯಿ ಕಳೆದುಕೊಳ್ಳಬೇಕಿತ್ತು ಅಂತಾರೆ.

  • ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಸೈಬರ್ ಕೇಂದ್ರಗಳಿಗೆ ಬೀಗ ಜಡಿದ ಅಧಿಕಾರಿಗಳು

    ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಸೈಬರ್ ಕೇಂದ್ರಗಳಿಗೆ ಬೀಗ ಜಡಿದ ಅಧಿಕಾರಿಗಳು

    ರಾಯಚೂರು: ಗೃಹಲಕ್ಷ್ಮಿ ಯೋಜನೆ (Gruhalakshmi Scheme) ನೋಂದಣಿಗೆ 200ರಿಂದ 300 ರೂ. ಶುಲ್ಕ ವಸೂಲಿ ಮಾಡುತ್ತಿದ್ದ 3 ಸೈಬರ್ (Cyber) ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.

    ಸ್ಥಳೀಯ ಸೈಬರ್‌ಗಳು ಗ್ರಾಮ ಒನ್ (Grama One) ಕೇಂದ್ರದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದರು. ಮೊಬೈಲ್‌ಗೆ ಮೆಸೇಜ್ ಬಂದಿರದಿದ್ದರೂ ನೋಂದಣಿ ಮಾಡುವುದಾಗಿ ಹೇಳಿ ಹಣ ವಸೂಲಿ ನಡೆಸಿದ್ದರು. ನೋಂದಣಿ ಮಾಡಿ ರಸೀದಿಯನ್ನು ಕೊಡಲಾಗುತ್ತಿತ್ತು. ಮಾನ್ವಿ ತಹಶಿಲ್ದಾರ್ ಎಲ್.ಡಿ.ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಟ್ಟಣದ ಎಕ್ಸೆಲ್ ಕಂಪ್ಯೂಟರ್ಸ್, ಲಕ್ಷ್ಮಿ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆ – ಸೋರುತ್ತಿದ್ದ ಬಸ್‌ನಲ್ಲೂ ಕೊಡೆ ಹಿಡಿದು ಕುಳಿತ ಪ್ರಯಾಣಿಕ

    ಮಾನ್ವಿ (Manvi) ಪಟ್ಟಣದ ಸಾದಾಪುರ ಗ್ರಾಮ ಒನ್ ಕೇಂದ್ರದ ಐಡಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಸೈಬರ್ ಕೇಂದ್ರದ ಮಾಲೀಕರ ವಿರುದ್ಧ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿ ನಗ್ಮಾ

    ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿ ನಗ್ಮಾ

    ಸೈಬರ್ (Cyber) ಖದೀಮರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾನಾ ರೂಪದಲ್ಲಿ ಅವರೆಲ್ಲ ವಂಚನೆ (Fraud) ಮಾಡುತ್ತಿದ್ದು, ನಟಿ ನಗ್ಮಾ (Nagma) ಸೈಬರ್ ವಂಚಕರು ಬೀಸಿದ್ದ ಬಲೆಗೆ ಬಿದ್ದಿದ್ದಾರೆ. ಕೇವಲ ಐದೇ ನಿಮಿಷದಲ್ಲಿ  ಸಾಕಷ್ಟು ಹಣವನ್ನೂ ಅವರು ಕಳೆದುಕೊಂಡಿದ್ದಾರೆ. ಬ್ಯಾಂಕ್ ಹೆಸರಿನಲ್ಲಿ ನಗ್ಮಾಗೆ ಕರೆ ಮಾಡಿದ್ದ ವಂಚಕರು, ಕ್ಷಣಾರ್ಧದಲ್ಲೇ ಅವರ ಖಾತೆಯನ್ನು ಹಣವನ್ನು ದೋಚಿಸಿದ್ದಾರೆ.

    ಫೆಬ್ರವರಿ 28 ರಂದು ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ನಲ್ಲಿ ಉಲ್ಲೇಖಿಸಲಾಗಿದೆ. ಮಸೇಜ್ ಬಂದ ಹಿಂದೆಯೇ ಖದೀಮರು ಕಾಲ್ ಕೂಡ ಮಾಡಿದ್ದಾರೆ. ಮಸೇಜ್ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ. ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

    ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಸೈಬರ್ ವಂಚನೆಯ ಕುರಿತು ಸಾಕಷ್ಟು ಜಾಗ್ರತೆ ಮೂಡಿಸುತ್ತಿದ್ದರೂ, ಬುದ್ಧಿವಂತರೇ ಹೆಚ್ಚು ಮೋಸ ಹೋಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ ಸೈಬರ್ ಪೊಲೀಸ್ ಅಧಿಕಾರಿಗಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬೀಸಿದ್ದಾರೆ.

  • ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಗೆಗಿನ ಗದ್ದಲದ ನಡುವೆಯೇ ಮಹಾರಾಷ್ಟ್ರದ ಥಾಣೆ ನಗರ ಪೊಲೀಸ್ ಕಮಿಷನರೇಟ್ ಸೇರಿಂತೆ 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಮಂಗಳವಾರ ಹ್ಯಾಕ್ ಆಗಿವೆ.

    ಕಮಿಷನರೇಟ್‌ನ ಹ್ಯಾಕ್ ಆದ ವೆಬ್‌ಸೈಟ್‌ನಲ್ಲಿ ಸಂದೇಶವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಜಗತ್ತಿನಾದ್ಯಂತ ಮುಸ್ಲಿಮರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶವನ್ನು ಭಾರತ ಸರ್ಕಾರಕ್ಕೆ ನಿರ್ದೇಶಿಸಿರುವಂತಿದೆ.

    ಘಟನೆ ಬಳಿಕ ಮಹಾರಾಷ್ಟ್ರದ ಸೈಬರ್ ಸೆಲ್ ಹ್ಯಾಕ್ ಆಗಿರುವ ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳನ್ನು ಸರಿಪಡಿಸುವಂತೆ ಆದೇಶಿಸಿದೆ ಹಾಗೂ ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಯುಪಿಯಲ್ಲಿ ಬುಲ್ಡೋಜರ್ ಆ್ಯಕ್ಷನ್ ಕಾನೂನಿನ ಅಪಹಾಸ್ಯ- ಕೋರ್ಟ್ ಮೆಟ್ಟಿಲೇರಲು ಮಾಜಿ ನ್ಯಾಯಾಧೀಶರ ಒತ್ತಾಯ

    ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ, ಇಂದು 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. 70ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಅವುಗಳಲ್ಲಿ 3 ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಸೇರಿವೆ. ನಾವು ಈಗಾಗಲೇ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಿದ್ದೇವೆ, ಇನ್ನೂ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಇದೀಗ ಎಲ್ಲೆಡೆ ಉದ್ವಿಗ್ನತೆ ಎದ್ದಿದ್ದು, ಇದರ ಬೆನ್ನಲ್ಲೇ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಈ ಗದ್ದಲಕ್ಕೂ ಸೈಬರ್ ಹ್ಯಾಕ್‌ಗೂ ಸಂಬಂಧ ಇರುವಂತೆ ತೋರುತ್ತದೆ. ಭಾರತದಲ್ಲಿ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹ್ಯಾಕರ್ಸ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ತಮ್ಮ ಸ್ಥಾನದಿಂದ ಅಮಾನತಾಗಿದ್ದರು. ಅವರ ಹೇಳಿಕೆಯಿಂದ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರುಯಾಗಿ ಪ್ರತಿಭಟನೆಗಳನ್ನು ಮಾಡಲಾಗಿತ್ತು.

  • ಡಿಜಿಟಲ್ ಸ್ಟ್ರೈಕ್ 3 – ಮತ್ತೆ 43 ಚೀನಿ ಆ್ಯಪ್‍ಗಳು ನಿಷೇಧ

    ಡಿಜಿಟಲ್ ಸ್ಟ್ರೈಕ್ 3 – ಮತ್ತೆ 43 ಚೀನಿ ಆ್ಯಪ್‍ಗಳು ನಿಷೇಧ

    ನವದೆಹಲಿ: 43 ಚೀನಾ ಆ್ಯಪ್‍ಗಳನ್ನು ಭಾರತದಲ್ಲಿ ನಿಷೇಧ ಮಾಡಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.

    ಇಂದು ಈ ವಿಚಾರವಾಗಿ ಪತ್ರಿಕಾ ಹೇಳಿಯನ್ನು ಬಿಡುಗಡೆ ಮಾಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ. ಜೊತೆಗೆ ಈ ಆ್ಯಪ್‍ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ಮಾಹಿತಿ ಇರುವುದರಿಂದ ಬ್ಯಾನ್ ಮಾಡಿದ್ದೇವೆ ಎಂದು ತಿಳಿಸಿದೆ.

    ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ 43 ಆ್ಯಪ್‍ಗಳನ್ನು ನಿಷೇಧ ಮಾಡುವಂತೆ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ ಎಂದು ತಿಳಿಸಿದೆ. ಈ ಹಿಂದೆಯೂ ಕೂಡ ಭಾರತ ಸರ್ಕಾರ ಟಿಕ್‍ಟಾಕ್ ಸೇರಿದಂತೆ ಸುಮಾರು 118 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿತ್ತು.

    ಗಲ್ವಾನ್ ಘರ್ಷಣೆಯ ನಂತರ ಕಳೆದ ಜೂನ್ 29 ರಂದು ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿತ್ತು. ನಂತರ ಈ 59 ಆ್ಯಪ್‍ಗಳನ್ನು ಒಳಗೊಂಡಂತೆ ಸೆಪ್ಟಂಬರ್ 2ರಂದು 118 ಆ್ಯಪ್‍ಗಳನ್ನು ನಿಷೇಧ ಮಾಡಲಾಗಿತ್ತು. ಈಗ ಮತ್ತೆ ಚೀನಾ ದೇಶದ ಅಲಿ ಎಕ್ಸ್ ಪ್ರೆಸ್, ಆಲಿಬಾಬ ವರ್ಕ್ ಬೆಂಚ್ ಮತ್ತು ಕ್ಯಾಮ್‍ಕಾಡ್ ಸೇರಿದಂತೆ ಸುಮಾರು 43 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಅಪ್ಲಿಕೇಶನ್‍ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‍ಗಳನ್ನು ನಿಷೇಧಿಸಿ ಎಂದು ಜೂನ್‍ನಲ್ಲಿ ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‍ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.