ಬಾಲಿವುಡ್(Bollywood) ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಸಾಕಷ್ಟು ಸ್ಟಾರ್ ಕಿಡ್ಸ್‌ನ ಲಾಂಚ್ ಮಾಡಿದ್ದಾರೆ. ಆಲಿಯಾ ಭಟ್, ವರುಣ್ ಧವನ್ ಹೀಗೆ ಸಾಕಷ್ಟು ಸ್ಟಾರ್ ಮಕ್ಕಳ ಎಂಟ್ರಿಗೆ ಕರಣ್ ಜೋಹರ್ ಸಾಥ್ ನೀಡಿದ್ದಾರೆ. ಇದೀಗ ಸೈಫ್ ಆಲಿ ಖಾನ್ (Saif Ali Khan) ಪುತ್ರ ಇಬ್ರಾಹಿಂ ಆಲಿ ಖಾನ್ ಲಾಂಚ್‌ಗೆ ಕರಣ್ ಜೋಹರ್ (Karan Johar) ಸಾಥ್ ನೀಡುತ್ತಿದ್ದಾರೆ.

ಬಿಟೌನ್‌ನ ಅದೆಷ್ಟೋ ಸೂಪರ್ ಸ್ಟಾರ್‌ಗಳ ಮಕ್ಕಳ ಎಂಟ್ರಿಗೆ ಕಾರಣವಾಗಿರೋದೇ ಕರಣ್ ಜೋಹರ್ ಹೀಗಿರುವಾಗ ಮತ್ತೊಬ್ಬ ಸ್ಟಾರ್ ನಟ ಪುತ್ರನಿಗೆ ಗ್ರ್ಯಾಂಡ್ ಆಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ಡಿಫರೆಂಟ್ ಕಥೆಯ ಮೂಲಕ ಇಬ್ರಾಂಹಿಂಗೆ (Ibrahim Ali Khan) ಲಾಂಚ್ ಮಾಡಲು ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ʻಸಿಂಧೂರ ಲಕ್ಷ್ಮಣʼನಾಗಿ ಬರಲಿದ್ದಾರೆ ನಟ ಧನಂಜಯ

ಈಗಾಗಲೇ ಕರಣ್ ನಿರ್ಮಾಣದ ರಣ್‌ವೀರ್, ಆಲಿಯಾ ನಟನೆಯ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಇಬ್ರಾಹಿಂ ಆಲಿ ಖಾನ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.ಈಗ ಅವರ ನಿರ್ಮಾಣದ ಹೊಸ ಚಿತ್ರದಲ್ಲಿ ನಾಯಕನಾಗಿ ಮಿಂಚಲು ರೆಡಿಯಾಗಿದ್ದಾರೆ.

ಇನ್ನೂ ಸೈಫ್ ಪುತ್ರಿ ಸಾರಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ ಈ ಬೆನ್ನಲ್ಲೇ ಚಿತ್ರರಂಗಕ್ಕೆ ಮಗನ ಎಂಟ್ರಿ ಕೂಡ ಆಗುತ್ತಿದೆ.






ಸೈಫ್ ಜೊತೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರು ಕರೀನಾ ಕಪೂರ್‌ಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಈಗಲೂ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ನಟಿಗೆ ಬಗ್ಗೆ ಹೊಸದೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಇತ್ತೀಚಿನ ಫೋಟೋ ಗಮನಿಸಿರುವ ನೆಟ್ಟಿಗರು ನೀವು ಮತ್ತೆ ತಾಯಿಯಾಗಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ. ಈ ಸುದ್ದಿಗೆ ಕರೀನಾ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:
ಇದು ಪಾಸ್ಟಾ ಮತ್ತು ವೈನ್ ಹುಡುಗರೇ, ಶಾಂತವಾಗಿರಿ. ನಾನು ಗರ್ಭಿಣಿಯಾಗಿಲ್ಲ ಉಫ್, ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನ ಸಂಖ್ಯೆಗೆ ತುಂಬಾ ಕೊಡುಗೆ ನೀಡಿದ್ದಾರೆ. ಈ ಮೂಲಕ ತಾವು ಮತ್ತೆ ಗರ್ಭಿಣಿಯಲ್ಲ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.



