Tag: ಸೈಫ್ ಅಲಿ ಖಾನ್

  • ಪತ್ನಿ, ಪುತ್ರನ ಜೊತೆ ಹೊರ ಬಂದ ಸೈಫ್‍ಗೆ ಪೊಲೀಸರ ಸೂಚನೆ

    ಪತ್ನಿ, ಪುತ್ರನ ಜೊತೆ ಹೊರ ಬಂದ ಸೈಫ್‍ಗೆ ಪೊಲೀಸರ ಸೂಚನೆ

    ಮುಂಬೈ: ಪತ್ನಿ ಕರೀನಾ ಕಪೂರ್, ಪುತ್ರ ತೈಮೂರ ಜೊತೆ ಕಡಲ ಕಿನಾರೆಗೆ ಬಂದ ನಟ ಸೈಫ್ ಅಲಿ ಖಾನ್‍ಗೆ ಪೊಲೀಸರು ಸಲಹೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾನೂನುಗಳು ಎಲ್ಲರಿಗೂ ಒಂದೇ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿ ಬಂಧಿಯಾಗಿದ್ದ ಜನ ಹೊರಗಡೆ ಸುತ್ತಾಡುತ್ತಿದ್ದಾರೆ. ಅಂತೆಯೇ ಸದಾ ಮನೆಯಿಂದ ಹೊರ ಇರುತ್ತಿದ್ದ ಸೆಲೆಬ್ರಿಟಿಗಳನ್ನು ಕೊರೊನಾ ಮನೆಯಲ್ಲಿ ಕಟ್ಟಿ ಹಾಕಿದೆ. ಸದ್ಯ ಚಿತ್ರೀಕರಣಗಳು ಆರಂಭಗೊಳ್ಳದಿದ್ದರೂ ಹೊರಗಡೆ ಸುತ್ತಾಡಲು ಸರ್ಕಾರ ನಿಯಮಗಳನ್ನ ಸಡಿಲಿಕೆ ಮಾಡಿದೆ.

    https://www.instagram.com/p/CBIqS9Zn0ab/

    ಲಾಕ್‍ಡೌನ್ ಸಡಿಲಿಕೆ ಆಗಿದ್ದರಿಂದ ನಟ ಸೈಫ್ ಅಲಿ ಖಾನ್ ಕುಟುಂಬದ ಜೊತೆ ಮುಂಬೈನ ಮರೀನ್ ಡ್ರೈವ್ ಬಳಿಯ ಕಡಲ ಕಿನಾರೆಗೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ಮಕ್ಕಳನ್ನು ಹೊರಗಡೆ ಕರೆದುಕೊಂಡು ಬರಬಾರದು ಅಂತ ಸಲಹೆ ನೀಡಿದ್ದಾರೆ.

    https://www.instagram.com/p/CBIhP-Tnoyg/

    ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರಿಗೆ ಮನೆಯಿಂದ ಹೊರ ಬರದಂತೆ ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಸೂಚಿಸಿದೆ.

    https://www.instagram.com/p/CBIuP6NHXxG/

  • ಕರೀನಾ ನನಗೆ ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ ಅಷ್ಟೇ: ಸೈಫ್ ಮಗಳು

    ಕರೀನಾ ನನಗೆ ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ ಅಷ್ಟೇ: ಸೈಫ್ ಮಗಳು

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ನಟಿ ಕರೀನಾ ಕಪೂರ್ ನನ್ನ ಒಳ್ಳೆಯ ಸ್ನೇಹಿತೆ ಅಷ್ಟೇ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾರಾ ಅವರಿಗೆ ಕರೀನಾ ಅವರ ಬಗ್ಗೆ ಪ್ರಶ್ನಿಸಲಾಯಿತು. ಆಗ ಸಾರಾ, ಕರೀನಾ ನನ್ನ ಒಳ್ಳೆಯ ಸ್ನೇಹಿತೆ, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ. ನಾನು ಅವರನ್ನು ಗೌರವಿಸುತ್ತೇನೆ. ಅಲ್ಲದೆ ಅವರು ನನ್ನ ತಂದೆಯನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ನಾನು ಹಾಗೂ ಕರೀನಾ ಒಂದೇ ವೃತ್ತಿಯಲ್ಲಿ ಇರುವ ಕಾರಣ ನಮ್ಮ ಪ್ರಪಂಚವೊಂದೇ ಎಂದು ಹೇಳಿದ್ದಾರೆ.

    ಸಾರಾ ನಟ ಸೈಫ್ ಅವರ ಮೊದಲ ಪತ್ನಿ ಅಮೃತ ಸಿಂಗ್ ಮಗಳು. 2004ರಲ್ಲಿ ಸೈಫ್, ಅಮೃತ ಸಿಂಗ್ ಅವರಿಂದ ವಿಚ್ಛೇದನೆ ಪಡೆದು 2012ರಲ್ಲಿ ಕರೀನಾ ಕಪೂರ್ ಅವರನ್ನು ಮದುವೆಯಾದರು. ಕಳೆದ ವರ್ಷ ಸಾರಾ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನನ್ನ ತಾಯಿಯೇ ಅಪ್ಪನ ಮತ್ತೊಂದು ಮದುವೆಗೆ ರೆಡಿ ಮಾಡಿದ್ದರು ಎಂದು ಹೇಳಿದ್ದರು.

    ನಿಮಗೆ ಈಗಾಗಲೇ ಅದ್ಭುತ ತಾಯಿ ಸಿಕ್ಕಿದ್ದಾರೆ. ನಾನು ನಿಮ್ಮ ಒಳ್ಳೆಯ ಸ್ನೇಹಿತೆ ಆಗಲು ಸಾಧ್ಯ ಎಂದು ಕರೀನಾ ಈ ಹಿಂದೆ ಹೇಳಿದ್ದರು. ಅಲ್ಲದೆ ನನ್ನ ತಂದೆ ಕೂಡ, ಕರೀನಾ ನಿನಗೆ ಎರಡನೇಯ ತಾಯಿ ಎಂದು ನನಗೆ ಎಂದಿಗೂ ಹೇಳಲಿಲ್ಲ. ನಾನು ಕರೀನಾ ಚಿಕ್ಕ ಅಮ್ಮ(ಚೋಟಿ ಮಾ) ಎಂದು ಕರೆದರೆ ಅವರು ಹಾಗೆ ಕರೆಯಬೇಡ ಎಂದು ಹೇಳುತ್ತಾರೆ ಎಂದು ಸಾರಾ ಅಲಿ ಖಾನ್ ತಿಳಿಸಿದ್ದರು.

  • ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗ್ತಾನೆ: ನಟ ಸೈಫ್ ಗರಂ

    ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗ್ತಾನೆ: ನಟ ಸೈಫ್ ಗರಂ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಹಾಗು ಮಗ ತೈಮೂರ್ ಖಾನ್ ಜೊತೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಕ್ಯಾಮೆರಾಮೆನ್‍ಗಳು ತೈಮೂರ್ ಫೋಟೋ ಕ್ಲಿಕ್ಕಿಸಲು ಮುಂದಾದಾಗ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗ್ತಾನೆ ಎಂದು ಗರಂ ಆಗಿದ್ದಾರೆ.

    ಸೈಫ್ ಅಲಿ ಖಾನ್, ಕರೀನಾ ಹಾಗೂ ತೈಮೂರ್ ಮೂವರು ಪಟೌಡಿಯಲ್ಲಿ ಇರುವ ತಮ್ಮ ಹಿರಿಯರ ಮನೆಗೆ ಭೇಟಿ ನೀಡಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಸೈಫ್ ತಮ್ಮ ಹೆಗಲ ಮೇಲೆ ತೈಮೂರ್ ನನ್ನು ಕುಳ್ಳಿರಿಸಿಕೊಂಡು ನಡೆದುಕೊಂಡು ಬರುತ್ತಿದ್ದರು.

    ಈ ವೇಳೆ ಅಲ್ಲಿ ನಿಂತಿದ್ದ ಕ್ಯಾಮೆರಾಮೆನ್‍ಗಳನ್ನು ನೋಡಿ ತೈಮೂರ್ ಕೈ ಬೀಸಿದ್ದಾನೆ. ಆಗ ಕ್ಯಾಮೆರಾಮೆನ್‍ಗಳು ಆತನ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸೈಫ್ ಕೋಪದಿಂದ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗುತ್ತಾನೆ ಎಂದು ಹೇಳಿದರು.

    ಸೈಫ್ ಹಾಗೂ ತೈಮೂರ್ ಜೊತೆ ಕರೀನಾ ಕಪೂರ್ ಕೂಡ ಬರುತ್ತಿದ್ದರು. ಆಗ ಛಾಯಾಗ್ರಾಹಕರು ಫೋಟೋಗೆ ಪೋಸ್ ನೀಡಲು ಕೇಳಿದರು. ಈ ವೇಳೆ ಸೈಫ್ “ನಿಮಗೆ ಫೋಟೋ ಬೇಕೆಂದರೆ ಕ್ಲಿಕ್ಕಿಸಿಕೊಳ್ಳಿ, ಅದನ್ನು ಬಿಟ್ಟು ಪೋಸ್ ಎಂದು ಹೇಳಬೇಡಿ. ಪೋಸ್ ಕೊಡುವುದು ಸ್ವಲ್ಪ ವಿಚಿತ್ರ ಎಂದು ಅನಿಸುತ್ತದೆ” ಎಂದು ಪ್ರತಿಕ್ರಿಯಿಸಿದರು.

  • ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    -ಸೈಫ್ ಎರಡನೇ ಮದ್ವೆ ಹಿಂದಿನ ರಹಸ್ಯ ಬಿಚ್ಚಿಟ್ಟ ಪುತ್ರಿ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಮ್ಮ ತಂದೆಯ ಎರಡನೇ ಮದುವೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ಸಾರಾ ಅಲಿ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ ಸಂದರ್ಶಕ ಸೈಫ್ ಅಲಿ ಖಾನ್ ಅವರ ಎರಡನೇ ಮದುವೆ ಬಗ್ಗೆ ಸಾರಾ ಅಲಿ ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ಎರಡನೇ ಮದುವೆಯಾಗುವಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ್ದಾರೆ.

    ನನ್ನ ತಂದೆ ಎರಡನೇ ಮದುವೆ ಆಗುವ ವಿಷಯ ನನಗೆ ತಿಳಿದಿತ್ತು. ನಾನು ಕರೀನಾ ಕಪೂರ್ ಅವರ ಅಭಿಮಾನಿ. ಅವರು ನನ್ನ ಜೀವನದಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ ಅವರು ಈಗ ಮಲತಾಯಿ ಆಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಸಾರಾ ಅಲಿ ಖಾನ್ ಉತ್ತರಿಸಿದ್ದಾರೆ.

    ನನ್ನ ತಂದೆ ಕರೀನಾ ಕಪೂರ್ ಅವರನ್ನು ಮದುವೆ ಆಗುತ್ತಿದ್ದೀನಿ ಎಂದು ಹೇಳಿದ್ದಾಗ ನಾನು ಯಾವ ಉಡುಪು ಧರಿಸಬೇಕು ಎಂದು ನನ್ನ ತಾಯಿಯ ಬಳಿ ಕೇಳಿದೆ. ಆಗ ನನ್ನ ತಾಯಿ ನೀನು ಯಾವ ಉಡುಪನ್ನು ಧರಿಸುತ್ತೀಯಾ? ಎಂದು ಕೇಳಿದ್ದರು. ನನ್ನ ತಾಯಿ ಕೂಡ ನನ್ನ ತಂದೆಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಸಾರಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ಎದುರೇ ಪತ್ನಿ ಜೊತೆಗಿನ ಸೆಕ್ಸ್ ಲೈಫ್ ರಿವೀಲ್ ಮಾಡಿದ ಸೈಫ್!

    ಮಗಳ ಎದುರೇ ಪತ್ನಿ ಜೊತೆಗಿನ ಸೆಕ್ಸ್ ಲೈಫ್ ರಿವೀಲ್ ಮಾಡಿದ ಸೈಫ್!

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಕಪೂರ್ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಗಳಿಗೆ ಖಾಸಗಿ ಜೀವನದ ಬಗೆಗೆ ಬೋಲ್ಡ್ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್ ಕೇಳುವ ಪ್ರಶ್ನೆಗೆ ತಾರೆಯರು ನೇರವಾಗಿಯೇ ಉತ್ತರಿಸುತ್ತಾರೆ.

    ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಸೈಫ್ ಅಲಿ ಖಾನ್ ತಮ್ಮ ಮೊದಲ ಪತ್ನಿ ಮಗಳು ಸಾರಾ ಜೊತೆ ಆಗಮಿಸಿದ್ದರು. ಈ ವೇಳೆ ಕರಣ್ ಪ್ರಶ್ನೆ ಕೇಳುತ್ತಿರುವಾಗ, ನಿಮ್ಮ ಪತ್ನಿಯ ಸೆಕ್ಸಿ ಜಿಮ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರೋದಕ್ಕೆ ಕಾರಣ ಗೊತ್ತಾ ಎಂದು ಪ್ರಶ್ನಿಸಿದರು.

    ಹೌದು, ಆಕೆಯ ಸೆಕ್ಸಿಯಾಗಿದ್ದು, ಜಿಮ್ ತೆರಳುವ ಮುನ್ನವೇ ಬೆಡ್ ರೂಮ್‍ನಲ್ಲಿ ಆಕೆಯನ್ನು ಕ್ಲೋಸ್ ಅಪ್ ಲುಕ್ ನಲ್ಲಿ (ಸಮೀಪದಿಂದ) ನೋಡಿ ಚೆಕ್ ಮಾಡುತ್ತೇನೆ. ಕರೀನಾ ಬೆಡ್ ರೂಮ್ ಬಂದು ತನ್ನ ಕ್ಲೋಸ್ ಅಪ್ ಲುಕ್ ತೋರಿಸ್ತಾಳೆ ಎಂದು ಹೇಳಿದ್ದಾರೆ. ಪಕ್ಕದಲ್ಲಿಯೇ ಕುಳಿತಿದ್ದ ಪುತ್ರಿ ಸಾರಾ ‘ಓ ನೋ..’ ಎಂದು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.

    ನಿಮ್ಮ ಪುತ್ರಿ ಸಾರಾಳನ್ನು ಮದುವೆ ಆಗುವ ಹುಡುಗನನ್ನು ಹೇಗೆ ಆಯ್ಕೆ ಮಾಡ್ತೀರಿ ಪ್ರಶ್ನೆಗೆ, ಕುಟುಂಬದ ಹಿನ್ನೆಲೆ, ರಾಜಕೀಯ ಲಿಂಕ್ ಇದೆಯಾ? ಆರ್ಥಿಕವಾಗಿ ಸ್ಥಿತಿವಂತನಾ ಎಂಬಿತ್ಯಾದಿ ಅಂಶಗಳನ್ನು ಗಮನಿಸುತ್ತೇನೆ ಅಂದ್ರು. ಪಕ್ಕದಲ್ಲಿಯೇ ಕುಳಿತಿದ್ದ ಸಾರಾ, ರಣ್‍ಬೀರ್ ಕಪೂರ್ ಮದ್ವೆ ಆಗಲು ಇಷ್ಟಪಡ್ತೀನಿ, ಆದ್ರೆ ಕಾರ್ತಿಕ್ ಆರ್ಯನ್ ಜೊತೆಗೆ ಡೇಟ್ ಮಾಡಲು ಇಷ್ಟಪಡುತ್ತೇನೆ ಅಂತ ಹೇಳಿದಾಗ ಹಾಗಾದ್ರೆ ಕಾರ್ತಿಕ್ ಬಳಿ ಹಣವಿದೆಯಾ ಎಂದು ಸೈಫ್ ಮರು ಪ್ರಶ್ನೆ ಮಾಡಿದರು.

    ಈ ಕಾರ್ಯಕ್ರಮದ ಪ್ರೋಮೋಗಳು ಸಾಕಷ್ಟು ವೈರಲ್ ಆಗಿದ್ದು, ನವೆಂಬರ್ 18ರಂದು ಶೋ ಪ್ರಸಾರವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪತ್ನಿ, ಮಗನ ಫೋಟೋ ತೆಗೆದಿದ್ದಕ್ಕೆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದ ಸೈಫ್- ವಿಡಿಯೋ ನೋಡಿ

    ಪತ್ನಿ, ಮಗನ ಫೋಟೋ ತೆಗೆದಿದ್ದಕ್ಕೆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದ ಸೈಫ್- ವಿಡಿಯೋ ನೋಡಿ

    ಮುಂಬೈ: ತನ್ನ ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಮಗ ತೈಮೂರ್ ಫೋಟೋ ತೆಗೆದಿದ್ದಕ್ಕೆ ಸೈಫ್ ಅಲಿ ಖಾನ್ ಅಭಿಮಾನಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಸೈಫ್ ತನ್ನ ಪತ್ನಿ ಹಾಗೂ ಮಗನ ಜೊತೆ ರಜೆ ಕಳೆಯಲು ಲಂಡನ್‍ಗೆ ಹೋಗಿದ್ದರು. ಅಲ್ಲಿ ಸೈಫ್ ಹಾಗೂ ಕರೀನಾ ತನ್ನ ಮಗ ತೈಮೂರ್ ಜೊತೆ ಲಂಡನ್‍ನ ರಸ್ತೆಗಳಲ್ಲಿ ತಿರುಗಾಡುತ್ತಿದ್ದರು.

    ಸೈಫ್, ಕರೀನಾ ರಸ್ತೆಯನ್ನು ದಾಟುವಾಗ ಅಭಿಮಾನಿಯೊಬ್ಬರು ತೈಮೂರ್ ನ ಫೋಟೋ ಕ್ಲಿಕಿಸಲು ಮುಂದಾದರು. ಆಗ ಸೈಫ್ ಆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸೈಫ್ ರೊಚ್ಚಿಗೆದಿದ್ದನ್ನು ನೋಡಿದ ಅಭಿಮಾನಿ ತೈಮೂರ್ ಫೋಟೋ ಕ್ಲಿಕಿಸುವ ಬದಲು ಕೋಪದಲ್ಲಿರುವ ಸೈಫ್ ಫೋಟೋ ಕ್ಲಿಕಿಸಿದ್ದಾರೆ.

    ಸದ್ಯ ಸೈಫ್ ಹಾಗೂ ಕರೀನಾ ರಜೆ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದಾರೆ. ಈಗ ಈ ಸ್ಟಾರ್ ಜೋಡಿ ದೊಡ್ಡ ಬ್ರಾಂಡ್‍ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಇದೇ ಜಾಹೀರಾತಿನಲ್ಲಿಯೇ ಸೈಫ್ ಪತ್ನಿಗೆ ಸಾಥ್ ನೀಡಲಿದ್ದಾರೆ ಎಂದು ವರದಿಯಾಗಿದೆ.

     

    ಸೈಫ್ ಅಲಿ ಖಾನ್ ನಟಿಸುತ್ತಿರುವ ಸಿನಿಮಾಗಳು ಪ್ರೇಕ್ಷಕರನ್ನು ತಲುಪವಲ್ಲಿ ವಿಫಲವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರೀನಾ ಪತಿಯ ಜೊತೆಯೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

  • ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ನವದೆಹಲಿ: ಬಲ್ಗೇರಿಯಾದಲ್ಲಿ ಕಾಡು ಹಂದಿ ಬೇಟೆಯಾಡಿದ್ದರ ಕುರಿತು ಸೈಫ್ ಅಲಿ ಖಾನ್ ಗೆ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ.

    ಬೇಟೆಯಾಡಿರುವುದರ ವಿಚಾರ ಕುರಿತು ಸೈಫ್ ಅಲಿ ಖಾನ್ ಅವರಿಂದ ಹೇಳಿಕೆ ಪಡೆಯುವಂತೆ ಬಲ್ಗೇರಿಯಾ ಸರ್ಕಾರ ಇಂಟರ್ ಪೋಲ್ ಗೆ ಸೂಚನೆ ನೀಡಿದೆ.

    ಅನುಮತಿ ಹಾಗೂ ಪರವಾನಗಿ ಪಡೆದುಕೊಳ್ಳದೆ ಸೈಫ್ ಅಲಿ ಖಾನ್ ಅವರ ಏಜೆಂಟ್ ಕಾಡು ಹಂದಿ ಬೇಟೆಯನ್ನು ವ್ಯವಸ್ಥೆ ಮಾಡಿದ್ದರು ಹಾಗಾಗಿ ಏಜೆಂಟ್ ನನ್ನು ಬಲ್ಗೇರಿಯಾ ಪೊಲೀಸರು ಪ್ರಕರಣದಲ್ಲಿ ಸೇರಿಸಿದ್ದಾರೆ. ಪ್ರಕರಣದಲ್ಲಿ ಸೈಫ್ ಅಲಿ ಖಾನ್ ಸಾಕ್ಷಿಯಾಗಿದ್ದು ಒಂದು ತಿಂಗಳ ಹಿಂದೆ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

    ಬಲ್ಗೇರಿಯಾದಲ್ಲಿ ಬೇಟೆಯಾಡಲು ನಿಯಮಗಳಿದ್ದು, ಬೇಟೆಯ ಕಾನೂನಿನ ಪ್ರಕಾರ ಬೇಟೆಯಾಡುವವರು ಆ ದೇಶದ ಬೇಟೆಯಾಡುವ ಪರವಾನಗಿ ಹೊಂದಿರಬೇಕು ಅಥವಾ ಬಲ್ಗೇರಿಯಾ ದೇಶದ ಪರೀಕ್ಷೆಯನ್ನು ಪಾಸ್ ಮಾಡಿ ಪರವಾನಗಿಯನ್ನು ಪಡೆದಿರಬೇಕು.

    ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪಡೆಯುವಂತೆ ಇಂಟರ್ ಪೋಲ್ ನಿಂದ ಬಾಂದ್ರಾ ಘಟಕದ ಕ್ರೈಂ ವಿಭಾಗಕ್ಕೆ ಸೂಚನೆ ಬಂದ ಬೆನ್ನಲ್ಲೇ ಪೊಲೀಸರು ಖಾನ್ ಅವರ ಉಪನಗರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಸಿಬಿಐ ಮೂಲಕ ಇಂಟರ್ ಪೋಲ್ ನಿಂದ ಕೆಲವು ದಾಖಲೆಗಳು ಬಂದಿತು ಅದನ್ನು ಖಾನ್ ಅವರಿಗೆ ಕಳಿಸಿಕೊಡಲಾಗಿದೆ ಹೇಳಿಕೆಯನ್ನು ಇನ್ನೂ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾಡು ಪ್ರಾಣಿಗಳ ಬೇಟೆಯನ್ನು ನಿಷೇಧಿಸಲಾಗಿದೆ.

  • ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸೈಫ್-ಕರೀನಾ

    ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸೈಫ್-ಕರೀನಾ

    ಮುಂಬೈ: ಬಾಲಿವುಡ್‍ನ ರಾಯಲ್ ಕಪಲ್ ಅಂತಾ ಕರೆಸಿಕೊಳ್ಳುವ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ 5 ವರ್ಷಗಳ ಬಳಿಕ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಲಿದ್ದಾರೆ.

    ಈ ಹಿಂದೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಸೈಫ್ ಮತ್ತು ಕರೀನಾ ಕಳೆದ 5 ವರ್ಷಗಳಿಇಬ್ಬರೂ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಸದ್ಯ ತಾಯಿಯಾದ ಬಳಿಕ ಕರೀನಾ ವೀರೆ ದಿ ವೆಡ್ಡಿಂಗ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಲಂಡನ್‍ನಲ್ಲಿ ರಾಯಲ್ ಕಪಲ್ ಪುತ್ರ ತೈಮೂರ್ ಜೊತೆ ರಜೆಯ ಮಜಾವನ್ನು ಕಳೆಯುತ್ತಿದ್ದಾರೆ.

    ಭಾರತಕ್ಕೆ ಬಂದ ಕೂಡಲೇ ಕರೀನಾ ದೊಡ್ಡ ಬ್ರಾಂಡ್‍ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಇದೇ ಜಾಹೀರಾತಿನಲ್ಲಿಯೇ ಸೈಫ್ ಪತ್ನಿಗೆ ಸಾಥ್ ನೀಡಲಿದ್ದಾರೆ ಎಂದು ವರದಿಯಾಗಿದೆ. ಸೈಫ್ ಅಲಿ ಖಾನ್ ನಟಿಸುತ್ತಿರುವ ಸಿನಿಮಾಗಳು ಪ್ರೇಕ್ಷಕರನ್ನು ತಲುಪವಲ್ಲಿ ವಿಫಲವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರೀನಾ ಪತಿಯ ಜೊತೆಯೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೆಲವು ದಿನಗಳ ಹಿಂದೆ ಐಶ್ವರ್ಯ ರೈ ಸಹ ಪತಿ ಅಭಿಷೇಕ್ ಬಚ್ಚನ್ ಸಿನಿಮಾ ಕೆರಿಯರ್ ವಿಚಾರವಾಗಿ ಚಿಂತಿತರಾಗಿದ್ರು. ತದನಂತರ ಐಶ್ವರ್ಯ ಹಲವು ನಿರ್ದೇಶಕ ಮತ್ತು ನಿರ್ಮಾಪಕರನ್ನು ಸಂಪರ್ಕಿಸಿ ಪತಿಗೆ ಸಿನಿಮಾ ಅವಕಾಶವೊಂದನ್ನು ಕೊಡಿಸಿದ್ದಾರೆ. ಅನುರಾಗ ಕಶ್ಯಪ್ ನಿರ್ದೇಶನದ ಮನ್‍ಮರ್ಜಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಮಗನಿಗಾಗಿ ದುಬಾರಿ ಗಿಫ್ಟ್ ನೀಡಿದ ಸೈಫ್ ಅಲಿ ಖಾನ್: ಜೀಪಿನ ಬೆಲೆ ಎಷ್ಟು ಗೊತ್ತಾ?

    ಮಗನಿಗಾಗಿ ದುಬಾರಿ ಗಿಫ್ಟ್ ನೀಡಿದ ಸೈಫ್ ಅಲಿ ಖಾನ್: ಜೀಪಿನ ಬೆಲೆ ಎಷ್ಟು ಗೊತ್ತಾ?

    ಮುಂಬೈ: ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರು ತಮ್ಮ ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿಯ ಮಕ್ಕಳ ದಿನಾಚರಣೆಯಂದು ಸೈಫ್ ಅಲಿ ಖಾನ್ ಮತ್ತು ಕರೀನ ಕಪೂರ್ ದಂಪತಿ ತಮ್ಮ ಮಗನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಸೋಮವಾರ ಸೈಫ್ ಅಲಿ ಖಾನ್ ತಮ್ಮ ಮುದ್ದಿನ ಮಗನಾದ ತೈಮೂರ್ ಗೆ ಬರೋಬ್ಬರಿ 1.30 ಕೋಟಿ ರೂ. ವೆಚ್ಚದ ಉಡುಗೊರೆಯನ್ನು ನೀಡಿದ್ದಾರೆ. ಕೆಂಪು ಬಣ್ಣದ `swanky Jeep Grand Cherokee SRT’ ಕಾರನ್ನು ಖರೀದಿಸಿದ್ದಾರೆ. ತೈಮೂರ್ ಗೆ ಇದೇ ಮೊದಲ ಉಡುಗೊರೆಯಾಗಿದೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ ತುಂಬಾ ಮುಖ್ಯ ಈ ಜೀಪ್ ತುಂಬಾ ಸುರಕ್ಷತೆಯಿಂದ ಕೂಡಿದೆ. ಹಿಂಬದಿಯಲ್ಲಿ ಮಗುವಿಗಾಗಿ ಬೇಬಿ ನೀಟ್ ಇದೆ. ತೈಮೂರ್ ಜೊತೆ ಮೊದಲ ಡ್ರೈವ್ ಹೋಗಲು ಕಾತುರದಿಂದ ಇದ್ದೇನೆ ಎಂದು ಸಂತೋಷದಿಂದ ಹೇಳಿದರು.

    ಮಾತನ್ನು ಮುಂದುವರಿಸಿ ತೈಮೂರ್ ಕೆಂಪು ಬಣ್ಣವನ್ನು ಇಷ್ಟ ಪಡುತ್ತಾನೆ. ಆದ್ದರಿಂದ ಈ ಕಾರನ್ನು ಇಷ್ಟ ಪಡುತ್ತಾನೆ ಎಂದು ತಿಳಿಸಿದರು. ಇನ್ನು ಡಿಸೆಂಬರ್ ನಲ್ಲಿ ತೈಮೂರ್ ಹುಟ್ಟುಹಬ್ಬವಿದ್ದು, ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಮುಂಚೆಯೇ ತಮ್ಮ ಮಗನಿಗೆ ದುಬಾರಿ ಗಿಫ್ಟ್ ನೀಡಿರುವುದು ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.