Tag: ಸೈಫ್ ಅಲಿ ಖಾನ್

  • ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    ಮುಂಬೈ: ಬಾಲಿವುಡ್‍ನ ಸ್ಟಾರ್ ನಟ ಸೈಫ್ ಅಲಿ ಖಾನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರ 2ನೇ ಮಗನ ಮುದ್ದಾದ ಫೋಟೋ ವೈರಲ್ ಆಗಿದೆ.

    ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯ ಮಗಳು ಸಾರಾ ಆಲಿ ಖಾನ್ ತಂದೆಯ ಜನ್ಮದಿನಕ್ಕೆ ಶುಭಕೋರಿ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಜಹಾಂಗೀರ್ ಅಲಿ ಖಾನ್ ಪೋಸ್ ಗಮನ ಸೆಳೆಯುತ್ತಿದೆ. ಕರೀನಾ ತಮ್ಮ ಮುದ್ದು ಮಗನ ಫೋಟೋವನ್ನು ಇಲ್ಲಿವರೆಗೂ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಆದರೆ ಕೆಲವು ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. ಇದನ್ನೂ ಓದಿ:  ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

     

    View this post on Instagram

     

    A post shared by Sara Ali Khan (@saraalikhan95)

    ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನನ್ನ ಪಾಲಿನ ಸೂಪರ್ ಹೀರೋ ಆಗಿರುವುದಕ್ಕೆ ನಿಮಗೆ ಧನ್ಯವಾದಗಳು. ಬುದ್ಧಿವಂತ ಸ್ನೇಹಿತ, ಒಳ್ಳೆಯ ಮಾತುಗಾರ ಮತ್ತು ನನಗೆ ದೊಡ್ಡ ಸಪೋರ್ಟ್‍ರ್ ಆಗಿದ್ದೀರಿ. ಲವ್ ಯೂ ಎಂಬ ಕ್ಯಾಪ್ಷನ್‍ನೊಂದಿಗೆ ಸಾರಾ ಆಲಿ ಖಾನ್ ಈ ಫೋಟೋ ಶೇರ್ ಮಾಡಿದ್ದಾರೆ. ಜಹಾಂಗೀರ್ ತುಂಬಾ ಮುದ್ದಾಗಿದ್ದಾನೆ ಎಂದು ಜನರೆಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಸೈಫ್ ಅವರ ಇನ್ನೋರ್ವ ಪುತ್ರ ತೈಮೂರ್ ಅಲಿ ಖಾನ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾನೆ. ಇದನ್ನೂ ಓದಿ:  ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಅಭಿಮಾನಿಗಳು ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಂದ ಸೋಶಿಯಲ್ ಮೀಡಿಯಾ ಮೂಲಕ ಸೈಫ್‍ಗೆ ಶುಭಾಶಕೊರುತ್ತಿದ್ದಾರೆ. ಹಾಗೂ ಜಹಾಂಗೀರ್ ಅಲಿ ಖಾನ್ ಅನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಪತಿ ಹುಟ್ಟುಹಬ್ಬ ಆಚರಿಸಲು ಮಾಲ್ಡೀವ್ಸ್​ಗೆ ಹೊರಟ ಕರೀನಾ ಫ್ಯಾಮಿಲಿ- ಕೊರೊನಾ 3ನೇ ಅಲೆ ಭೀತಿ

    ಪತಿ ಹುಟ್ಟುಹಬ್ಬ ಆಚರಿಸಲು ಮಾಲ್ಡೀವ್ಸ್​ಗೆ ಹೊರಟ ಕರೀನಾ ಫ್ಯಾಮಿಲಿ- ಕೊರೊನಾ 3ನೇ ಅಲೆ ಭೀತಿ

    ಮುಂಬೈ: ಬಾಲಿವುಡ್‍ನ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಕೊರೊನಾ ಸಮಯದಲ್ಲಿ ಹೋಗಿರುವುದು ಸಖತ್ ಸುದ್ದಿಯಾಗಿದೆ.

    ನಟ ಸೈಫ್ ಅಲಿ ಖಾನ್ 52ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ, ಅವರ ಜನ್ಮದಿನವನ್ನು ಆಚರಿಸಲು ಮಾಲ್ಡೀವ್ಸ್​ಗೆ  ಕುಟುಂಬ ಸಮೇತ ಕರೀನಾ ತೆರಳಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣವೊಂದರಿಂದ ಈ ಜೋಡಿ ಮಾಲ್ಡೀವ್ಸ್​ಗೆ  ತೆರಳಿದೆ. ಮಕ್ಕಳಾದ ಜೇಹ್ ಮತ್ತು ತೈಮೂರ್ ಕೂಡಾ ಜೊತೆಯಲ್ಲಿದ್ದರು.

     

    View this post on Instagram

     

    A post shared by Viral Bhayani (@viralbhayani)

    ಇತ್ತೀಚೆಗೆ ಕರೀನಾ ಮತ್ತು ಸೈಫ್ ಜೋಡಿ ತಮ್ಮ ಮಕ್ಕಳಿಗೆ ಇಟ್ಟ ಹೆಸರಿನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ತಮ್ಮ ಮೊದಲ ಮಗನಿಗೆ ತೈಮೂರ್ ಎಂದು ನಾಮಕರಣ ಮಾಡಿದ್ದ ಕರೀನಾ- ಸೈಫ್, ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದರು. ಇದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಟೀಕೆಗಳೂ ವ್ಯಕ್ತವಾಗಿದ್ದವು.

     

    View this post on Instagram

     

    A post shared by Viral Bhayani (@viralbhayani)

    ಕರೀನಾ ಹೆಸರಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಪರೋಕ್ಷವಾಗಿ ಉತ್ತರಿಸಿದ್ದರು ನಾನು ತುಂಬಾ ಸಕಾರಾತ್ಮಕ ವ್ಯಕ್ತಿ. ಕೋವಿಡ್‍ನಂತಹ ಸಮಯದಲ್ಲಿ ಸಾಧ್ಯವಾದಷ್ಟು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡಲು ಬಯಸುತ್ತೇನೆ. ಯಾವುದೇ ರೀತಿಯ ನಕಾರಾತ್ಮಕತೆಯ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಕರೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  • ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2 ನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರು ಇಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ಹೆಸರು ಇಟ್ಟಿದ್ದು ಬಹಳ ಚರ್ಚೆಯಾಗಿತ್ತು. ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:  ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಕರೀನಾ ಜನ್ಮ ನೀಡಿದ್ದರು.  ಏನು ಹೆಸರು ಇಟ್ಟಿದ್ದಾರೆ ಎಂಬುದು ಕೂಡ ಬಹಿರಂಗ ಆಗಿರಲಿಲ್ಲ. ಇತ್ತೀಚೆಗೆ ಅವರ ಎರಡನೇ ಪುತ್ರನಿಗೆ ಅವರು ಜೇ (Jeh) ಎಂದು ಹೆಸರು ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

    ಕರೀನಾ ಅವರು ಪ್ರಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಎರಡನೇ ಮಗುವಿನ ಬಗ್ಗೆ ಕರೀನಾ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮಗುವಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

  • ಗುಟ್ಟಾಗಿ ಎರಡನೇ ಪುತ್ರನಿಗೆ ನಾಮಕರಣ ಮಾಡಿದ್ರಾ ಸ್ಟಾರ್ ದಂಪತಿ?

    ಗುಟ್ಟಾಗಿ ಎರಡನೇ ಪುತ್ರನಿಗೆ ನಾಮಕರಣ ಮಾಡಿದ್ರಾ ಸ್ಟಾರ್ ದಂಪತಿ?

    ಮುಂಬೈ: ಸ್ಟಾರ್ ದಂಪತಿಯಾದ ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ ಈಗಾಗಲೇ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಫೆಬ್ರವರಿ 21ರಂದು ಕರೀನಾ ತಮ್ಮ ಎರಡನೇ ಪುತ್ರನಿಗೆ ಜನ್ಮ ನೀಡಿದ್ದರು. ಆದರೆ ಈವರೆಗೂ ಒಂದು ಬಾರಿಯೂ ಕರೀನಾ ತಮ್ಮ ಮಗುವಿನ ಮುಖವನ್ನು ಅಭಿಮಾನಿಗಳಿಗೆ ತೋರಿಸಿರಲಿಲ್ಲ. ಮಗುವಿನ ಹೆಸರು ಕೂಡ ಬಹಿರಂಗ ಆಗಿರಲಿಲ್ಲ. ಆದರೆ ಈಗ ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ `ಜೇ’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

    ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ `ಜೇ’ ಎಂದು ಹೆಸರಿಟ್ಟಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಕರೀನಾ ಅಥವಾ ಸೈಫ್ ಅಲಿ ಖಾನ್ ಯಾರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು `ಜೇ’ ಪದದ ಅರ್ಥವೇನು ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ `ಜೇ’ ಎಂಬ ಪದಕ್ಕೆ ನೀಲಿ ಬಣ್ಣದ ಒಂದು ಪಕ್ಷಿ ಎಂಬ ಅರ್ಥ ಇದೆ.

    ಇದಲ್ಲದೇ ಮನ್ಸೂರ್ ಹಾಗೂ ಇನ್ನೂ ಹಲವು ಹೆಸರಿನ ಬಗ್ಗೆ ಕರೀನಾ ದಂಪತಿ ಆಲೋಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ಕರೀನಾ-ಸೈಫ್ ಅಲಿ ಖಾನ್‍ರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಕರೀನಾ ದಂಪತಿಯ ಮೊದಲ ಪುತ್ರ ತೈಮೂರ್ ಈಗಾಗಲೇ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ಫೇಮಸ್ ಆಗಿದ್ದಾನೆ. ಆದರೆ ವಿರುಷ್ಕಾ ದಂಪತಿಯಂತೆ ಕರೀನಾ ದಂಪತಿ ಕೂಡ ತಮ್ಮ ಎರಡನೇ ಮಗುವನ್ನು ಸಾಮಾಜಿಕ ಜಾಲತಾಣದಿಂದ ದೂರವಿಟ್ಟು ಬೆಳೆಸಬೇಕೇಂಬ ತೀರ್ಮಾನ ಕೈಗೊಂಡಂತೆ ಕಂಡು ಬರುತ್ತಿದೆ.

    ಕರೀನಾ-ಸೈಫ್ ಅಲಿ ಖಾನ್ ಎರಡನೇ ಪುತ್ರನ ಹೆಸರಿನ ವಿಷಯ ಇಷ್ಟೊಂದು ಚರ್ಚೆಯಾಗಲು ಇನ್ನೊಂದು ಕಾರಣವಿದೆ. ಮೊದಲ ಪುತ್ರನಿಗೆ ಅವರು ತೈಮೂರ್ ಎಂದು ಹೆಸರಿಟ್ಟಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತಮ್ಮ ಎರಡನೇ ಮಗನಿಗೆ ಹೆಸರಿಡುವಾಗ ಕರೀನಾ ದಂಪತಿ ತುಂಬಾ ಎಚ್ಚರವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  • ಕರೀನಾ ಮಗುವಿನ ಫೋಟೋ ಶೇರ್ ಮಾಡಿ ಡಿಲೀಟ್ ಮಾಡಿದ್ರು ರಣಧೀರ್ ಕಪೂರ್!

    ಕರೀನಾ ಮಗುವಿನ ಫೋಟೋ ಶೇರ್ ಮಾಡಿ ಡಿಲೀಟ್ ಮಾಡಿದ್ರು ರಣಧೀರ್ ಕಪೂರ್!

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗುವಿನ ಹೆಸರು ಹಾಗೂ ಫೋಟೋವನ್ನು ಇಲ್ಲಿಯವರೆಗೂ ಬಹಿರಂಗ ಪಡಿಸಿರಲಿಲ್ಲ. ಆದರೆ ಇದೀಗ ಕರೀನಾ ಕಪೂರ್ ತಂದೆ ರಣ್‍ಧೀರ್ ಕಪೂರ್‍ರವರು ಮಗುವಿನ ಮೊದಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    ರಣ್‍ಧೀರ್ ಕಪೂರ್‍ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದು, ಮಗು ನೋಡಲು ತೈಮೂರ್ ಅಲಿ ಖಾನ್ ರೀತಿಯೇ ಇರುವುದನ್ನು ಕಾಣಬಹುದಾಗಿದೆ. ಬಳಿಕ ಆದ್ಯಾಕೋ ರಣ್‍ಧೀರ್ ಕಪೂರ್ ಅವರು ಫೋಟೋವನ್ನು ಸೋಶಿಯಲ್ ಮೀಡಿಯಾದಿಂದ ತಕ್ಷಣಕ್ಕೆ ರಿಮೂವ್ ಮಾಡಿದ್ದಾರೆ. ಆದರೂ ಅಭಿಮಾನಿಗಳು ಮಗುವಿನ ಫೋಟೋವನ್ನು ಶೀಘ್ರವೇ ಸೇವ್ ಮಾಡಿಕೊಂಡು ವೈರಲ್ ಮಾಡಿದ್ದಾರೆ.

    ಈ ಮುನ್ನ ಮಹಿಳಾ ದಿನಾಚರಣೆ ದಿನದಂದು ಕರೀನಾ ತಮ್ಮ ಎರಡನೇ ಮಗುವಿನ ಮೊದಲ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ಮಗುವನ್ನು ಎತ್ತಿಕೊಂಡಿರುವುದನ್ನು ನೋಡಬಹುದಾಗಿದೆ.

  • ಮಹಿಳಾ ದಿನಾಚರಣೆ ಅಂಗವಾಗಿ ಮಗನ ಫೋಟೋ ಹಂಚಿಕೊಂಡ ಕರೀನಾ

    ಮಹಿಳಾ ದಿನಾಚರಣೆ ಅಂಗವಾಗಿ ಮಗನ ಫೋಟೋ ಹಂಚಿಕೊಂಡ ಕರೀನಾ

    ಮುಂಬೈ: ಕರೀನಾ ಕಪೂರ್ ತಮ್ಮ ಮುದ್ದು ಕಂದಮ್ಮನ ಫೋಟೋವನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಗಂಡು ಮಗುವಿನ ಪೋಟೋವನ್ನು ಮಹಿಳಾ ದಿನಚರಣೆಯಂದು ಮೊದಲಬಾರಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳಾ ದಿನಚರಣೆಯ ಶುಭಾಶಯವನ್ನು ಕೋರಿ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಫೋಟೋವನ್ನು ನೋಡಿದ ನೆಟ್ಟಿಗರು, ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಕರೀನಾ ಮತ್ತು ನವಜಾತ ಶಿಶುವಿಗೆ ಶುಭಾಶಯಗಳನ್ನು ಕಮೆಂಟ್ ಮೂಲಕವಾಗಿ ತಿಳಿಸುತ್ತಿದ್ದಾರೆ. ಫೆಬ್ರವರಿ 21 ರಂದು ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಅವರಿಗೆ ಹೆರಿಗೆಯಾಗಿತ್ತು.

    ಡಿಸೆಂಬರ್ 2016ರಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮೂರ್ ಅಲಿ ಖಾನ್ ಜನಿಸಿದ್ದಾನೆ. ಕಳೆದ ವರ್ಷ ಆಗಸ್ಟ್‍ನಲ್ಲಿ ಕರೀನಾ ಕಪೂರ್ ತಾನು ತಾಯಿ ಆಗುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು. ಕರೀನಾ ಅವರಿಗೆ 2ನೇ ಮಗು ಕೂಡಾ ಗಂಡು ಆಗಿದೆ.

    ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕರೀನಾ ದಂಪತಿಯ 2ನೇಯ ಮುದ್ದು ಕಂದಮ್ಮನಿಗೆ ಆಶೀರ್ವಾದವನ್ನು ಬಿ-ಟೌನ್ ಮಂದಿ ತಿಳಿಸುತ್ತಿದ್ದಾರೆ.

    ಈ ಜೋಡಿಯು ಮೊದಲ ಬಾರಿಗೆ ತಶಾನ್ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿದ್ದರು. ನಂತರ 2012ರಲ್ಲಿ ವಿವಾಹವಾಗಿದ್ದಾರೆ. ಇದೀಗ ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದಾರೆ.

  • ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡಿದ ಬೇಬೊ

    ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡಿದ ಬೇಬೊ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮತ್ತೊಮ್ಮೆ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

    ಕರೀನಾ ಕಪೂರ್ ಖಾನ್ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬೇಬೊ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 4:45ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    ತಮ್ಮ ಎರಡನೆಯ ಮಗುವಿನ ಜನನದ ಮುಂಚೆಯೇ ಸೈಫ್ ಮತ್ತು ಕರೀನಾ ದೊಡ್ಡ ಮನೆಗೆ ಸ್ಥಳಾಂತರಗೊಂಡಿದ್ದರು. ಅದು ಅವರ ಹಿಂದಿನ ಮನೆಯ ಎದುರು ಇದೆ. ದಂಪತಿಗೆ ಈಗಾಗಲೇ 4 ವರ್ಷದ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ.

    ಆಗಸ್ಟ್ 2020ರಲ್ಲಿ ಕರೀನಾ ಬಾರಿ ಗರ್ಭಿಣಿಯಾಗಿರುವುದರ ಬಗ್ಗೆ ದಂಪತಿ ಘೋಷಿಸಿದ್ದರು. ಇದೀಗ ಕರೀನಾ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕರೀನಾ ದಂಪತೀಯ 2 ನೇಯ ಮುದ್ದು ಕಂದಮ್ಮನಿಗೆ ಆಶೀರ್ವಾದವನ್ನು ಬಿ-ಟೌನ್ ಮಂದಿ ತಿಳಿಸುತ್ತಿದ್ದಾರೆ.

    ಡಿಸೆಂಬರ್ 2016ರಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮೂರ್ ಅಲಿ ಖಾನ್ ಜನಿಸಿದ್ದಾನೆ. ಈ ಜೋಡಿಯು ಮೊದಲ ಬಾರಿಗೆ ತಶಾನ್ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿತ್ತು. ನಂತರ 2012ರಲ್ಲಿ ವಿವಾಹವಾಗಿದ್ದಾರೆ.

  • ಕರೀನಾ ಬೇಬಿ ಬಂಪ್ ಫೋಟೋ ವೈರಲ್

    ಕರೀನಾ ಬೇಬಿ ಬಂಪ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬೇಬೋ, ಸೈಫ್ ಮಡದಿ ಕರೀನಾ ಕಪೂರ್ ಬೇಬಿ ಬಂಪ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಆರೋಗ್ಯದ ಬಗ್ಗೆ ನಿಗಾ ಇರಲಿ ಎಂದು ಸಲಹೆ ನೀಡುತ್ತಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಕರೀನಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ಖಾನ್, ಕೆಲ ದಿನಗಳ ಹಿಂದೆ ಮುಂಬೈಗೆ ವಾಪಸ್ ಆಗಿದ್ದಾರೆ. ಖಾಸಗಿ ಕಂಪನಿಯ ಜಾಹೀರಾತಿನ ಶೂಟಿಂಗ್ ತೊಡಗಿಕೊಂಡಿರುವ ಕರೀನಾ ಕಪೂರ್, ನಾವಿಬ್ಬರು ಚಿತ್ರೀಕರಣದ ಸೆಟ್ ನಲ್ಲಿದ್ದೇವೆ ಎಂದು ಬರೆದು ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ಪಟೌಡಿ ಕುಟುಂಬ ತಿಳಿಸಿದೆ. ಅಕ್ಟೋಬರ್ 16, 2012ರಂದು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮದುವೆಯಾಗಿದ್ದರು. ದಂಪತಿಗೆ ಡಿಸೆಂಬರ್ 20, 2016ರಂದು ಗಂಡು ಮಗು ಜನನವಾಗಿತ್ತು. ಇದೀಗ ದಂಪತಿ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.

     

  • ‘ಆದಿಪುರುಷ’ನ ಬಿಡುಗಡೆಗೆ ಮುಹೂರ್ತ ನಿಗದಿ

    ‘ಆದಿಪುರುಷ’ನ ಬಿಡುಗಡೆಗೆ ಮುಹೂರ್ತ ನಿಗದಿ

    ಹೈದರಾಬಾದ್: ಯಂಗ್ ರೆಬೆಲ್ ಸ್ಟಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ರಾಧೆ ಶಾಮ್ ಬಳಿಕ ಆದಿಪುರುಷ ಸಿನಿಮಾ ಘೋಷಿಸಿದ್ದರು. ಎರಡೂ ಸಿನಿಮಾಗಳು ಕುರಿತು ಹೆಚ್ಚು ಅಪ್‍ಡೇಟ್‍ಗಳನ್ನು ಸಹ ನೀಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ.

    ಸಾಹೋ ಸಕ್ಸಸ್ ಬಳಿಕ ಇದೀಗ ರಾಧೆ ಶಾಮ್ ಹಾಗೂ ಆದಿಪುರುಷ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಅಮಿತಾಬ್ ಬಚ್ಚನ್ ಜೊತೆಗೆ ಸಹ ಸಿನಿಮಾ ಮಾಡುತ್ತಿರುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಹೀಗೆ ಲಾಕ್‍ಡೌನ್ ಬಳಿಕ ಸಾಲು ಸಾಲು ಅಪ್‍ಡೇಟ್‍ಗಳನ್ನು ಪ್ರಭಾಸ್ ನೀಡುತ್ತಿದ್ದಾರೆ. ಇತ್ತೀಚೆಗೆ ಬೀಟ್ಸ್ ಆಫ್ ರಾಧೆ ಶ್ಯಾಮ್ ಎಂಬ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನಿಡಿದ್ದರು. ಇದೀಗ ಆದಿಪುರುಷ ತೆರೆಗೆ ಅಪ್ಪಳಿಸುವ ದಿನವನ್ನು ಘೋಷಿಸಿದ್ದಾರೆ.

    ಈ ಕುರಿತು ಬುಧವಾರವೇ ಮಾಹಿತಿ ಹಂಚಿಕೊಂಡಿದ್ದ ಪ್ರಭಾಸ್, ನಾಳೆ ಆದಿಪುರಷನ ಕುರಿತು ಘೋಷಣೆಯೊಂದು ಹೊರ ಬೀಳಲಿದೆ ಎಂದಿದ್ದರು. ಅದರೆಂತೆ ಇಂದು ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಆದಿಪುರುಷ ಸಿನಿಮಾ 2022ರ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡಿದ್ದಾರೆ. ಈ ಮೂಲಕ 2022ಕ್ಕೆ ರಿಲೀಸ್ ಆಗಲಿರುವ ಸಿನಿಮಾ ದಿನಾಂಕವನ್ನು ಈಗಲೇ ಘೋಷಿಸಿ, ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಸಖತ್ ಸದ್ದು ಮಾಡಿತ್ತು. ಪುರಾಣ ಕಥೆಗಳನ್ನು ಬಿಂಬಿಸುವ, ಒಂದೇ ಪೋಸ್ಟ್‍ನ ಎ ಅಕ್ಷರದಲ್ಲಿ ರುದ್ರ ತಾಂಡವವಾಡುತ್ತಿರುವ ಆದಿಪುರುಷ ಶಿವ, ಗಧೆ ಹಿಡಿದ ಹನುಮಂತ, ಬಿಲ್ಲು ಹಿಡಿದ ರಾಮ, ಕೆಳಗೆ ಹತ್ತು ತಲೆಗಳ ರಾವಣನ ಚಿತ್ರವಿತ್ತು. ಹೀಗಾಗಿ ಯಾವ ರೀತಿಯ ಕಥಾ ಹಂದರ ಹೆಣೆಯಲಾಗಿದೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

    ಇನ್ನೂ ವಿಶೇಷ ಎಂಬಂತೆ ಆದಿಪುರುಷ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಒಟ್ಟು 5 ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ. ಅಲ್ಲದೆ 3ಡಿ ಸಿನಿಮಾ ಇದಾಗಿದೆ. ಓಂ ರಾವತ್ ಅವರು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತುದ್ದಾರೆ. ಅಲ್ಲದೆ ಸೈಫ್ ಅಲಿ ಖಾನ್ ಸಹ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ.

  • 2ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಕರೀನಾ

    2ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಕರೀನಾ

    ಮುಂಬೈ: ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದು, ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ತಿಳಿಸಿದ್ದಾರೆ.

    ಈ ಕುರಿತು ದಂಪತಿ ಹೇಳಿಕೆ ನೀಡಿದ್ದು, ನಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಡಿಸೆಂಬರ್ 2016ರಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮುರ್ ಅಲಿ ಖಾನ್ ಜನಸಿದ್ದಾನೆ. ಈ ಜೋಡಿಯು ಮೊದಲ ಬಾರಿಗೆ ತಶಾನ್ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿತ್ತು. ನಂತರ 2012ರಲ್ಲಿ ವಿವಾಹವಾಗಿದ್ದಾರೆ. ಇದೀಗ ಒಬ್ಬ ಮಗನಿದ್ದಾನೆ.

    ಸೈಫ್ ಅಲಿ ಖಾನ್ ಸಹೋದರಿ ಸೋಹಾ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ಜೋಡಿಗೆ ಶುಭ ಕೋರಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಕಳೆದ ಬುಧವಾರವಷ್ಟೇ ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಗಾಸಿಪ್ ಕುರಿತು ಪ್ರತಿಕ್ರಿಯಿಸಿ, ಈ ಸುದ್ದಿ ನಿಜ ಎಂದು ಅನ್ನಿಸುತ್ತಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಸಂತೋಷಪಡುತ್ತೇನೆ ಎಂದು ಹೇಳಿದ್ದರು.

     

    View this post on Instagram

     

    Coming soon!! Couldn’t resist! Congratulations @kareenakapoorkhan be safe and healthy – and radiant as ever ! ❤️

    A post shared by Soha (@sakpataudi) on

    ಕರೀನಾ ಕಪೂರ್ ಕೊನೇಯದಾಗಿ ಅಂಗ್ರೇಜಿ ಮಿಡಿಯಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಇತ್ತಿಚೆಗೆ ಸಾವನ್ನಪ್ಪಿದ ಇರ್ಫಾನ್ ಖಾನ್, ರಾಧಿಕಾ ಮದನ್ ಹಾಗೂ ರಣವೀರ್ ಶೋರಿ ನಟಿಸಿದ್ದಾರೆ. ಇದೀಗ ಲಾಲ್ ಸಿಂಗ್ ಛಡಾ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಕರೀನಾ ಕಾಣಿಸಿಕೊಳ್ಳುತ್ತಿದ್ದಾರೆ.