ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ದಾಳಿ ನಡೆಸಿರುವ ಆರೋಪದ ಹಿನ್ನೆಲೆ ಮೂವರು ಶಂಕಿತರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದ ಆರೋಪದಲ್ಲಿ ಮೂವರು ಶಂಕಿತರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನೂ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ಅಷ್ಟಕ್ಕೂ ಆಗಿದ್ದೇನು?
ಮುಂಬೈನ ಬಾಂದ್ರಾದಲ್ಲಿರುವ ನಟನ ನಿವಾಸಕ್ಕೆ ತಡರಾತ್ರಿ ದರೋಡೆ ಮಾಡಲು ಕೆಲ ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ, ದರೋಡೆಕೋರನಿಗೆ ಪ್ರತಿರೋಧ ತೋರುವಾಗ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ, ಸೈಫ್ ಕುತ್ತಿಗೆ, ಕೈ ಸೇರಿ 6 ಕಡೆ ಗಾಯವಾಗಿದೆ. 2 ಕಡೆ ಗಂಭೀರವಾಗಿ ಪೆಟ್ಟಾಗಿದೆ. ಹೆಚ್ಚು ರಕ್ತಸ್ರಾವ ಆಗಿರುವ ಹಿನ್ನೆಲೆ ಕೂಡಲೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಟನಿಗೆ ಆಪರೇಷನ್ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕರೀನಾ ಕಪೂರ್ ಮತ್ತು ಮಕ್ಕಳು ಸೇಫ್ ಆಗಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಶಿವಣ್ಣಗೆ 6 ಆಪರೇಷನ್, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ
ಮುಂಬೈನ ಬಾಂದ್ರಾದಲ್ಲಿ ಸೈಫ್ ಅಲಿ ಖಾನ್ ಮೇಲೆ ತಡರಾತ್ರಿ 2 ಗಂಟೆಗೆ ದಾಳಿ ನಡೆದಿದೆ. ದರೋಡೆಗೆ ಬಂದಿದ್ದ ಕಿಡಿಗೇಡಿಗಳಿಂದ ಈ ಕೃತ್ಯ ಜರುಗಿದೆ. ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು, ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ನಟನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಕರೀನಾ ಕಪೂರ್ ಮತ್ತು ಇಬ್ಬರೂ ಮಕ್ಕಳು ಸೇಫ್ ಆಗಿದ್ದಾರೆ.
ಇನ್ನೂ ನಟನ ನಿವಾಸಕ್ಕೆ ಮುಂಬೈ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ ‘ಪುಷ್ಪ 2’ (Pushpa 2) ಚಿತ್ರದಲ್ಲಿ ಕಿಸ್ಸಿಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದೀಗ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಜೊತೆ ಶ್ರೀಲೀಲಾ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಲ ತಿಂಗಳುಗಳಿಂದ ಶ್ರೀಲೀಲಾ ಬಾಲಿವುಡ್ ಎಂಟ್ರಿ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗೆ ಗ್ರಾಸವಾಗಿತ್ತು. ಇಬ್ರಾಹಿಂ ಅಲಿ ಖಾನ್‌ಗೆ ಶ್ರೀಲೀಲಾ (Sreeleela) ನಾಯಕಿ ಎಂಬ ಸುದ್ದಿ ಭಾರೀ ವೈರಲ್ ಆಗಿತ್ತು. ಆದರೆ ಅದು ಯಾವುದಕ್ಕೂ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಈಗ ‘ಸ್ತ್ರೀ 2’ ಸಿನಿಮಾ ನಿರ್ಮಿಸಿದ್ದ ಮಾಡೋಕ್ ಫಿಲ್ಮ್ಸ್ ಆಫೀಸ್‌ಗೆ ನಟಿ ಭೇಟಿ ನೀಡಿದ್ದಾರೆ. ಈ ವೇಳೆ, ಇಬ್ರಾಹಿಂ ಜೊತೆ ಶ್ರೀಲೀಲಾ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಪಕ್ಕಾ ಆಗಿದೆ.
ಅಂದಹಾಗೆ, ಶ್ರೀಲೀಲಾ ಲಿಸ್ಟ್‌ನಲ್ಲಿ 5ಕ್ಕೂ ಹೆಚ್ಚು ಸಿನಿಮಾಗಳಿವೆ. ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಚಿತ್ರ, ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್, ಧಮಾಕ ಬಳಿಕ ರವಿತೇಜ ಜೊತೆ 2ನೇ ಬಾರಿ ಹೊಸ ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ. ‘ಮಾಸ್ ಜಾತ್ರ’ ಎಂದು ಟೈಟಲ್ ಇಡಲಾಗಿದೆ.
ಶಿವಕಾರ್ತಿಕೇಯನ್ ನಟನೆಯ 25ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ತಮಿಳಿಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಜನಾರ್ಧನ್ ರೆಡ್ಡಿ ಪುತ್ರನ ಜೊತೆ ಕನ್ನಡದ ಸಿನಿಮಾ ಮಾಡುತ್ತಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇದೀಗ ಹೊಸ ಪ್ರಾಜೆಕ್ಟ್‌ವೊಂದನ್ನು ಒಪ್ಪಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ನಟನೆಯ ಬಹುನಿರೀಕ್ಷಿತ ‘ರೈಸ್ 4’ (Race 4) ಚಿತ್ರಕ್ಕೆ ಸಿದ್ಧಾರ್ಥ್ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ:ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್ ಶೆಟ್ಟಿ ಫೋಟೋ ವೈರಲ್
‘ರೈಸ್ 4’ ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಗುತ್ತಿದೆ. ಸೈಫ್ ಅಲಿ ಖಾನ್ (Saif Ali Khan) ಜೊತೆ ಸಿನಿಮಾ ಮಾಡಲು ಸಿದ್ಧಾರ್ಥ್ ಮುಂದಾಗಿದ್ದಾರೆ. ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರದಲ್ಲಿ ಅವರು ನಟಿಸಲಿದ್ದಾರೆ ಎಂಬುದು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸಂಗತಿ.
ಸಾಮಾನ್ಯವಾಗಿ ತಾವು ಕೂಡ ಹೀರೋ ಆಗಿದ್ದು ಬೇರೆ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುವುದಿಲ್ಲ. ಈಗ ಕಾಲ ಬದಲಾಗಿದೆ. ಕತೆ ಮತ್ತು ಪಾತ್ರಕ್ಕೆ ಸ್ಕೋಪ್ ಇದ್ರೆ ಎಂತಹ ಸ್ಟಾರ್ ಆದ್ರೂ ನಟಿಸಿ ಹೋಗ್ತಾರೆ. ಸಿದ್ಧಾರ್ಥ್ ವಿಚಾರದಲ್ಲೂ ಹಾಗೇ ಆಗಿದೆ. ಅವರು ನಟಿಸಲಿರುವ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ರೋಲ್ ಇಷ್ಟವಾಗಿ ‘ರೈಸ್ 4’ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇನ್ನೂ ಸೈಫ್ (Saif ali Khan) ಜೊತೆ ಸಿದ್ಧಾರ್ಥ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಶುರುವಿನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ.
ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್‌ನಲ್ಲಿ ಮಿಂಚಿದ ಬಳಿಕ ಬಾಲಿವುಡ್‌ಗೆ (Bollywood) ‘ಕಿಸ್’ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ನಟನ ಪುತ್ರನ ಜೊತೆ ನಟಿ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ರಾಜ-ರಾಣಿ ಶೋ: ಸೆಲೆಬ್ರಿಟಿ ದಂಪತಿಗಳ ಕಚಗುಳಿ
ಟಾಲಿವುಡ್ ಬಳಿಕ ಬಾಲಿವುಡ್‌ನಲ್ಲಿ ನಟಿಗೆ ಅದೃಷ್ಟದ ಬಾಗಿಲು ತೆರೆದಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ (Ibrahim Ali Khan) ಶ್ರೀಲೀಲಾ ಜೋಡಿಯಾಗ್ತಿದ್ದಾರೆ ಎನ್ನಲಾಗಿದೆ. ‘ಡೈಲರ್’ ಎಂಬ ಹಿಂದಿ ಸಿನಿಮಾದಲ್ಲಿ ಶ್ರೀಲೀಲಾ ಲೀಡ್ ರೋಲ್‌ನಲ್ಲಿ ನಟಿಸಲು ಕರೆ ಬಂದಿದೆಯಂತೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದ್ದು, ಶ್ರೀಲೀಲಾ ಕೂಡ ಸಾಥ್ ನೀಡುತ್ತಿದ್ದಾರೆ.
ಮೊದಲ ಹಿಂದಿ ಸಿನಿಮಾದಲ್ಲೇ ನಟಿಗೆ ಉತ್ತಮ ಪಾತ್ರ ಸಿಕ್ಕಿದೆಯಂತೆ. ಇದೇ ಮೊದಲ ಬಾರಿಗೆ ಯುವ ನಟ ಇಬ್ರಾಹಿಂ ಜೊತೆ ಶ್ರೀಲೀಲಾ ನಟಿಸುತ್ತಿರುವ ಕಾರಣ, ಈ ಜೋಡಿಯನ್ನು ಸಿನಿಮಾದಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಅಂದಹಾಗೆ, ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಸಿನಿಮಾ ಟ್ರ್ಯಾಕ್‌ಗೆ ನಟಿ ಮರಳಿದ್ದಾರೆ. ತೆಲುಗಿನ ನಟ ರವಿತೇಜ (Ravi Teja) ಜೊತೆ ಕೂಡ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮತ್ತೆ ಶ್ರೀಲೀಲಾ ಜಮಾನ ಶುರುವಾಗೋದು ಗ್ಯಾರಂಟಿ ಅಂತಿದ್ದಾರೆ ನೆಟ್ಟಿಗರು.
ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಕೈ ಮೇಲಿದ್ದ ಪತ್ನಿ ಕರೀನಾ (Kareena Kapoor) ಟ್ಯಾಟೂ ಮಾಯಾವಾಗಿರೋದು ಈಗ ಬಿಟೌನ್‌ನಲ್ಲಿ ಚರ್ಚೆ ಶುರುವಾಗಿದೆ. ಸೈಫ್ ನಡೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇಬ್ಬರ ನಡುವೆ ಬಿರುಕು ಮೂಡಿದ್ಯಾ ಎಂದು ಫ್ಯಾನ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸೈಫ್ ಮತ್ತು ಕರೀನಾ ಕಪೂರ್ ಪ್ರೀತಿಸಿ ಮದುವೆಯಾದವರು. ಪತ್ನಿ ಮೇಲಿನ ಪ್ರೀತಿಗೆ ಕರೀನಾ ಎಂದೇ ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. 16 ವರ್ಷಗಳಿಂದ ಅವರ ಕೈ ಮೇಲಿದ್ದ ಟ್ಯಾಟೂ ಮಾಯವಾಗಿದ್ದು, ತ್ರಿಶೂಲಾಕಾರದ ಚಿಹ್ನೆ ಕಂಡು ಬಂದಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡಗೆ ಸಾಯಿ ಪಲ್ಲವಿ ನಾಯಕಿ
ಮೊದಲೇ ಚಿತ್ರರಂಗದಲ್ಲಿ ಸ್ಟಾರ್ ಕಲಾವಿದರು ಡಿವೋರ್ಸ್ ಘೋಷಿಸುವ ಮೂಲಕ ಶಾಕ್ ಕೊಡುತ್ತಿದ್ದಾರೆ. ಹೀಗಿರುವಾಗ ಸೈಫ್- ಕರೀನಾ ಬಗ್ಗೆ ಡಿವೋರ್ಸ್ ವಿಚಾರ ಚರ್ಚೆಯಾಗುತ್ತಿದೆ. ಎರಡನೇ ಪತ್ನಿ ಕರೀನಾರನ್ನು ಬಿಟ್ಟು 3ನೇ ಮದುವೆಗೆ (Wedding) ಸೈಫ್ ಸಜ್ಜಾದ್ರಾ? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ.
ಅಂದಹಾಗೆ, 2007ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಬಳಿಕ 2012ರಲ್ಲಿ ಕರೀನಾ ಜೊತೆ ಸೈಫ್ ಮದುವೆಯಾದರು. ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ.
ಹಿಂದೂ ದೇವಾಲಯಕ್ಕೆ (Temple) ಭೇಟಿ ನೀಡಿದರು ಎನ್ನುವ ಕಾರಣಕ್ಕಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿಖಾನ್ ಅವರನ್ನು ಕೆಲ ಸಂಪ್ರದಾಯವಾದಿಗಳು ತರಾಟೆಗೆ ತಗೆದುಕೊಂಡಿದ್ದರು. ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದು ಟೀಕಿಸಿದ್ದರು. ಪದೇ ಪದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿಸಿದ್ದರು. ಇಂಥವರಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಸಾರಾ.
ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಸರಿಯಾಗಿಯೇ ಮಾತಿನ ಪೆಟ್ಟು ಕೊಟ್ಟಿರುವ ಸಾರಾ, ನೀವು ಎಷ್ಟೇ ಟ್ರೋಲ್ ಮಾಡಿದರೂ ನಾನು ಪದೇ ಪದೇ ದೇವಸ್ಥಾನಕ್ಕೆ ಹೋಗುತ್ತಲೇ ಇರುತ್ತೇನೆ ಎಂದಿದ್ದಾರೆ. ಇಂತಹ ಟ್ರೋಲ್ ಗಳಿಗೆ ಕೇರ್ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ಎಲ್ಲಿಗೆ ಹೋಗಬೇಕು ಅಥವಾ ಹೋಗಬಾರದು ಎಂದು ನಿರ್ಧರಿಸೋಕೆ ನೀವ್ಯಾರು ಎಂದು ಸಾರಾ ಮರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್
ಸಾರಾ ಅಲಿ ಖಾನ್ (Sara Ali Khan) ಮೊನ್ನೆ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleshwar) ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ತಮ್ಮ ಚಿತ್ರಕ್ಕೆ ಗೆಲುವು ತಂದುಕೊಡುವಂತೆ ಅವರು ಪ್ರಾರ್ಥಿಸಿದ್ದರು. ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಹೀಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಕೇದಾರನಾಥಕ್ಕೆ ಹೋಗಿದ್ದರು.
ಸಾರಾ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದು, ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದರು. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇಂಥವರಿಗೆ ತಿರುಗೇಟು ನೀಡಿ ತಮ್ಮ ಪಾಡಿಗೆ ತಾವು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.
ಮುಸ್ಲಿಂ ಅನ್ನುವ ಕಾರಣಕ್ಕಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿ ಖಾನ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದು ಸಖತ್ ಟ್ರೋಲ್ (Troll) ಆಗಿತ್ತು. ಮುಸ್ಲಿಂ ನಟಿಯು ಹಿಂದೂ ದೇವಾಲಯಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು, ಹಿಂದೂ ಸಂಪ್ರದಾಯ ಆಚರಿಸುವುದು ಎಲ್ಲವೂ ಗಿಮಿಕ್ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದರು. ಇದಕ್ಕೆ ನಟಿ ಸಾರಾ ಅಲಿ ಖಾನ್ ಉತ್ತರ ನೀಡಿದ್ದಾರೆ.
ಯಾರು, ಏನೇ ಹೇಳಿದರೂ ದೇವರ ಮೇಲಿನ ನನ್ನ ನಂಬಿಕೆ ಕಡಿಮೆ ಆಗದು. ಇಂತಹ ಅನೇಕ ಟ್ರೋಲ್ ಗಳನ್ನು ನಾನು ಕಂಡಿದ್ದೇನೆ. ಅವೆಕ್ಕೆಲ್ಲ ಹೆದರುವುದಿಲ್ಲ. ನಾನು ದೇವಸ್ಥಾನಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಅದು ನನ್ನ ನಂಬಿಕೆ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ ಸಾರಾ ಅಲಿ ಖಾನ್.
ಸಾರಾ ಅಲಿ ಖಾನ್ (Sara Ali Khan) ನಿನ್ನೆಯಷ್ಟೇ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಆದ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿದ್ದವು. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿ ಆಗುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಕೇದಾರನಾಥಕ್ಕೆ ಹೋಗಿದ್ದರು. ಈಗ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwara Temple) ಭೇಟಿ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಕಾಣಿಸಿಕೊಂಡ ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಾರಾ, ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರುವುದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದಾರೆ. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಸಾರಾ, ವಿಕ್ಕಿ ಕೌಶಲ್ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರ ಜೊತೆಯಾಗಿ ಸಾರಾ ನಟಿಸಿದ್ದಾರೆ. ಜೂನ್ 2ರಂದು ಈ ಚಿತ್ರ ಬಿಡುಗಡೆ ಆಗಲಿದೆ.
ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಕಾನ್ ಚಿತ್ರೋತ್ಸವಕ್ಕೆ (Cannes Festival) ಹಾಜರಿ ಹಾಕಿದ್ದರು. ಅಲ್ಲಿ ಅವರು ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದರು. ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆಯಾಗಿದೆ. ನಟಿ ಸಾರಾ ಅವರು ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದು, ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು.
‘ಆರ್‌ಆರ್‌ಆರ್’ (RRR) ಸೂಪರ್ ಸಕ್ಸಸ್ ನಂತರ ‘ಎನ್‌ಟಿಆರ್ 30’ ಚಿತ್ರದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ (Jr.ntr) ಸಿನಿಮಾ ತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಾರಕ್ ಟೀಮ್‌ಗೆ ಬಾಲಿವುಡ್ (Bollywood) ಸ್ಟಾರ್ ಸೈಫ್ ಅಲಿ ಖಾನ್ (Saif Ali Khan) ಸೇರಿದ ಬಳಿಕ ಕನ್ನಡ ಕಿರುತೆರೆ ನಟಿಗೆ ಬಂಪರ್ ಆಫರ್ ಸಿಕ್ಕಿದೆ.
ಕೊರಟಾಲ ಶಿವ ನಿರ್ದೇಶನದ ‘ಎನ್‌ಟಿಆರ್ 30’ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ. ತಾರಕ್- ಜಾನ್ವಿ ಕಪೂರ್ (Janhavi Kapoor) ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಬಿಟೌನ್ ಸೂಪರ್ ಹೀರೋ ಸೈಫ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್
ತೆಲುಗಿನ ಈ ಸಿನಿಮಾ ಸೈಫ್ ಅಲಿ ಖಾನ್ ಪತ್ನಿ ಪಾತ್ರದಲ್ಲಿ ನಟಿಸಲು ಕರಾವಳಿ ನಟಿ ಚೈತ್ರಾ ರೈ (Chaithra Rai) ಅವರಿಗೆ ಚಾನ್ಸ್ ಸಿಕ್ಕಿದೆ. ಕನ್ನಡದ ರಾಧಾ ಕಲ್ಯಾಣ (Radha Kalyana) ಸೇರಿದಂತೆ ಹಲವು ಸೀರಿಯಲ್- ಸಿನಿಮಾಗಳಲ್ಲಿ ನಟಿಸಿದ್ದ ಚೈತ್ರಾ ಸೈಫ್‌ಗೆ ಪತ್ನಿಯಾಗಿ ಕಾಣಿಸಿಕೊಳ್ತಿದ್ದಾರೆ. ಚೈತ್ರಾ ರೈ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕನ್ನಡ- ತೆಲುಗು ಸೀರಿಯಲ್‌ನಲ್ಲಿ ಚೈತ್ರಾ ಆಕ್ಟೀವ್ ಆಗಿದ್ದಾರೆ. ಸದ್ಯ ತೆಲುಗಿನ ‘ರಾಧಕು ನೀವರೆ ಪ್ರಣಾಮ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.
ಓಂ ರೌತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಶುರುವಾದಾಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಸದ್ಯ ಸೀತೆ ಆಗಿ ನಟಿಸಿರುವ ಕೃತಿ ಸನೋನ್ (Kriti Sanon) ಲುಕ್‌ನ್ನು ಆದಿಪುರುಷ್ ಟೀಂ ರಿವೀಲ್ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?
ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಟೀಸರ್- ಪೋಸ್ಟರ್‌ಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಆದರೆ ಇದೀಗ ತಪ್ಪಿಲ್ಲದೇ ಸೀತಾ ಪಾತ್ರಧಾರಿ ಕೃತಿ ಸನೂನ್ ಫಸ್ಟ್ ಲುಕ್‌ನ ರಿವೀಲ್ ಮಾಡಲಾಗಿದೆ.
ಸೀತೆ ಬೈತಲೆಗೆ ಕುಂಕುಮ, ಕೈಯಲ್ಲಿ ಬಳೆ ಧರಿಸಿ ಸುಂದರವಾಗಿ ಸೀತೆ ಲುಕ್‌ನಲ್ಲಿ ಕೃತಿ ಸನೋನ್ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಸೀತೆಯ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲಿಗೆ ಪ್ರಭಾಸ್ ಶ್ರೀರಾಮನಾಗಿ ಬಿಲ್ಲು ಬಾಣ ಹಿಡಿದು ನಿಂತಿರುವ ಚಿತ್ರ ಕಾಣುತ್ತದೆ. ನಂತರ ನಿಧಾನವಾಗಿ ಸೀತಾ ಮಾತೆಯ ದರ್ಶನವಾಗುತ್ತದೆ. ಸೀತಾ ಮಾತೆಯ ಎರಡು ಪೋಸ್ಟರ್ ಚಿತ್ರತಂಡ ಹಂಚಿಕೊಂಡಿದೆ.
400 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನ ’ಆದಿಪುರುಷ್’ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ರಂದು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ಆದಿಪುರುಷ್’ ಸಿನಿಮಾ ತೆರೆ ಕಾಣಲಿದೆ.