Tag: ಸೈಕೋ

  • ರಕ್ತ ಚರಿತ್ರೆ – ಸೈಕೋ ಹಂತಕರ ಲೋಕದಲ್ಲಿ…..!

    ರಕ್ತ ಚರಿತ್ರೆ – ಸೈಕೋ ಹಂತಕರ ಲೋಕದಲ್ಲಿ…..!

    ಕೆಲ ದಿನಗಳ ಹಿಂದೆಯಷ್ಟೇ ತಮಿಳಿನಲ್ಲಿ ಇರೈವನ್‌ ಎಂಬ ಸಿನಿಮಾ ತೆರೆ ಕಂಡಿತ್ತು. ಜಯಂ ರವಿ ನಾಯಕನಾಗಿ, ರಾಹುಲ್‌ ಬೋಸ್‌ ಖಳನಾಯಕನಾಗಿ ನಟಿಸಿರುವ ಈ ಚಿತ್ರ ಯುವತಿಯರಿಗೆ ಮೈನಡುಗಿಸುವಂತಿತ್ತು. ಈ ಸಿನಿಮಾದಲ್ಲಿ ಮದುವೆಯಾಗದ ಯುವತಿಯರನ್ನ ಕಿಡ್ನ್ಯಾಪ್‌ ಮಾಡಿ ಕ್ರೂರವಾಗಿ ಕೊಲ್ಲುವ ವ್ಯಕ್ತಿ, ಅವರ ಚೀರಾಟ.. ಕೂಗಾಟ… ನರಳಾಟ ಕಂಡು-ಕೇಳಿ ಆನಂದಿಸುತ್ತಾನೆ. ಅಬ್ಬಬ್ಬಾ… ತೆರೆಯ ಮೇಲೆ ಕಾಣುವ ಈ ಸಿನಿಮಾ ನೋಡಿದ್ರೆನೇ ಮೈ ನಡುಗುತ್ತೆ ಅಂದ್ಮೇಲೆ ನಿಜ ಜೀವದಲ್ಲಿ ನಡೆದ್ರೆ ಹೇಗಿರುತ್ತೆ? ಒಂದು ಕ್ಷಣ ಊಹೆಗೂ ನಿಲುಕದು. ಇತ್ತೀಚಿಗೆ ಅಂತಹದ್ದೇ ಒಂದು ಹತ್ಯೆ ಕೇರಳದಲ್ಲಿ ನಡೆಯಿತು.. ಆದ್ರೆ ಇಲ್ಲಿ ಸೈಕೋ ಹಂತಕ ಕೊಂದಿದ್ದು ಯುವತಿಯರನ್ನಲ್ಲ.. ತನ್ನ ಕುಟುಂಬದ ಐವರನ್ನ.. ಈ ರೋಚಕ ಕಥೆ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ರಕ್ತ ಸಿಕ್ತ ಕಥೆ ಶುರುವಾಗಿದ್ದೇ ಇಲ್ಲಿಂದ…
    ಫೆ.24ರಂದು ಸಂಜೆ ಸರಿಯಾಗಿ 6:15 ಆಗಿತ್ತು, ಕತ್ತಲು ಆವರಿಸಲು ಇನ್ನೊಂದು ಅರ್ಧಗಂಟೆಯಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಯುವಕನೊಬ್ಬ ತಿರುವನಂತಪುರಂನಲ್ಲಿರುವ ವೆಂಜರಮುಡು ಪೊಲೀಸ್ ಠಾಣೆಗೆ ಬಂದವನೇ ಸರ್..‌ ನಾನು 6 ಕೊಲೆ ಮಾಡಿದ್ದೇನೆ ಅಂತ ಹೇಳಿದ. ಅವನ ಹೆಸರು ಆಫಾನ್‌ ಒಂದು ಕ್ಷಣ ಚಕಿತರಾದ ಪೊಲೀಸರು ಮುಂದೇನು ಅಂತ ಯೋಚಿಸುವ ಮೊದಲೇ ಈ 6 ಕೊಲೆಗಳನ್ನು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯೊಳಗೆ ಮಾಡಿದ್ದೇನೆ, ನನ್ನ ಮನೆ ಪೊಲೀಸ್‌ ಠಾಣೆಗೆ ಹತ್ತಿರದಲ್ಲೇ ಇದೆ, ಅಲ್ಲಿ ಮೂರು ಮೃತದೇಹಗಳು ಬಿದ್ದಿವೆ ಅಂದುಬಿಟ್ಟ. ಕೂಡಲೇ ಅವನನ್ನ ಸ್ಟೇಷನ್‌ನಲ್ಲಿ ಕೂರಿಸಿ ತಮ್ಮ ಪೊಲೀಸರ ತಂಡದೊಂದಿಗೆ ಅವು ಹೇಳಿದ ವಿಳಾಸಕ್ಕೆ ದೌಡು ಕಿತ್ತರು. ಕೊನೆಗೆ ಒಂದೊಂದೇ ಶವಗಳನ್ನು ಪತ್ತೆ ಮಾಡಿದರು. ಅವನು ತನ್ನ ಅಮನನ್ನೂ ಸತ್ತಿದಾಳೆಂದು ತಿಳಿದು 6 ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದ್ರೆ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು, 5 ಶವಗಳು, ಏಕೆಂದರೆ ಸತ್ತಿದ್ದಾಳೆ ಅನ್ನೋ ತನ್ನ ತಾಯಿ ಬದುಕಿಯೇ ಇದ್ದಳು. ಪೊಲೀಸರು ಕಾರಣ ಕೇಳಿದಾಗ ಅನು ಹೇಳಿದ್ದೇ ವಿಚಿತ್ರವಾಗಿತ್ತು… ಕೊರೊನಾಗಿಂತ ಮುಂಚೆ ಎಲ್ಲವೂ ಚೆನ್ನಾಗಿಯೇ ಇತ್ತು. ಆ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸಾಲವೂ ಹೆಚ್ಚಾಗಿತ್ತು, ನನ್ನ ಹುಡುಗಿಗೆ ಸ್ವಂತ ಶಕ್ತಿಯಿಂದ ಬದುಕಲು ಆಗುತ್ತಿರಲಿಲ್ಲ. ಅದಕ್ಕಾಗಿ ಕೊಂದುಬಿಟ್ಟೆನೆಂದು ಹೇಳಿದ. ಅವನೆಂತಹ ಸೈಕೋ ಅಂದ್ರೆ ತನ್ನ ಕುಟುಂಬದವರನ್ನೂ ಕೊಂದು ತಾನೂ ವಿಷ ಸೇವಿಸಿ ಬಂದಿದ್ದ.

    ಸುತ್ತಿಗೆ ಹೊಡೆತಕ್ಕೆ ಬಿತ್ತು ಒಂದೊಂದೇ ಹೆಣ…
    ಸಾಮಾನ್ಯವಾಗಿ ಸೈಕೋ ಹಂತಕರು ಯಾವ ಸಂದರ್ಭದಲ್ಲಿ ಹೇಗಿರುತ್ತಾರೆ ಅನ್ನೋದು ಊಹಿಸೋಕು ಸಾಧ್ಯ ಇರಲ್ಲ. ಕೆಲವೊಮ್ಮೆ ಸಭ್ಯಸ್ಥರಂತೆ ಇನ್ನೂ ಕೆಲವೊಮ್ಮೆ ಕ್ರೂರಿಗಳಾಗಿಯೂ ಬದಲಾಗುತ್ತಿರುತ್ತಾರೆ. ಅದೇ ರೀತಿ ನೆರೆಹೊರೆಯವರಿಗೆ ಸಭ್ಯಸ್ಥನಂತೆ ಕಾಣುತ್ತಿದ್ದ ಆಫಾನ್, ಆ ದಿನ ಬೆಳಗ್ಗೆ 10.30 ರಿಂದ 12.30ರ ಸುಮಾರು ವೆಂಜರಮೂಡುವಿನ ಪಾಂಗೊಡೆ ಮನೆಯಲ್ಲಿ ಹಾಲ್‌ನಲ್ಲಿ ಕುಳಿತಿದ್ದ ತನ್ನ ʻಸಲ್ಮಾ ಬೀಬಿ’ (74) ಎನ್ನುವ ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ನಂತರ ಮಧ್ಯಾಹ್ನ 1.30 ರಿಂದ 4 ಗಂಟೆ ಸುಮಾರು ಪಾಂಗೊಡೆಯಿಂದ 17 ಕಿ.ಮೀ ದೂರದಲ್ಲಿರುವ ಎಸ್.ಎನ್ ಪುರ ಎಂಬಲ್ಲಿಗೆ ತೆರಳಿ ತನ್ನ ಚಿಕ್ಕಪ್ಪ ‘ಲತೀಫ್’ (60) ಮತ್ತು ಚಿಕ್ಕಮ್ಮ ‘ಶಾಹೀದಾ’ (56) ಎನ್ನುವರನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದ. ಅಷ್ಟಕ್ಕೆ ಸುಮ್ಮನಾಗದ ಆಫಾನ್ ಶಾಲೆಗೆ ಹೋಗಿದ್ದ ತನ್ನ 14 ವರ್ಷದ ತಮ್ಮ ʻಅಹ್ಸಾನ್‌ʼನ್ನು ಬೈಕ್‌ನಲ್ಲಿ ಕರೆದುಕೊಂಡು ಎಸ್.ಎನ್ ಪುರದಿಂದ 5 ಕಿ.ಮೀ ದೂರ ಇರುವ ಪೆರುಮಾಳ್ ಎಂಬಲ್ಲಿ ತನ್ನ ತಾಯಿ ರೇಷ್ಮಾ (50) ಹಾಗೂ ಗೆಳತಿ ಫರ್ಸಾನಾ (22) ಇದ್ದ ಮನೆಗೆ ಹೋಗಿದ್ದ, ಅದಕ್ಕೂ ಮುನ್ನ ತಮ್ಮನಿಗೆ ಅವನಿಷ್ಠದ ಊಟ ಕೊಡಿಸಿದ್ದ. ಆಗ ಸಂಜೆ 4 ಗಂಟೆ ಸಮಯ. ಮೂವರನ್ನು ಪ್ರತ್ಯೇಕವಾಗಿ ಮಾತನಾಡಿಸುವ ನೆಪದಲ್ಲಿ ಹೋಗಿ, ತನ್ನ ಬಳಿಯಿದ್ದ ಸುತ್ತಿಗೆಯಿಂದ ಹಣೆಗೆ, ತಲೆಗೆ ರಪ್ಪ ರಪ್ಪನೆ ಹಲವು ಬಾರಿ ಜೋರಾಗಿ ಹೊಡೆದಿದ್ದಾನೆ. ಒಂದೇ ಏಟಿಗೆ ತಮ್ಮ ಆಫ್ರಾನ್ ಮತ್ತು ಗೆಳತಿ ಫರ್ಸಾನಾ ಮೃತಪಟ್ಟಿದ್ದಾರೆ. ಆ ವೇಳೆ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದ, ತನ್ನ ತಾಯಿ ಕೂಡ ಸತ್ತಳೆಂದು ಭಾವಿಸಿದ್ದ. ಆದರೆ, ಆತನ ತಾಯಿಯ ಪ್ರಾಣ ಹೋಗಿರಲಿಲ್ಲ. ಕಡೆಗೆ ತನ್ನ ಮನಸ್ಸಿನ ಕ್ರೌರ್ಯವನ್ನು ತಣಿಸಿಕೊಂಡ ಆಫಾನ್ ಅದೇ ದಿನ ರಾತ್ರಿ 8 ಗಂಟೆ ಸುಮಾರು ವೆಂಜರಮೂಡು ಪೊಲೀಸ್‌ ಠಾಣೆಗೆ ಹಾಜರಾಗಿದ್ದ. ಕೂಡಲೇ ಪೊಲೀಸರು ಕ್ರೈಮ್ ಸೀನ್ ಪರಿಶೀಲನೆ ನಡೆಸಿದಾಗ ಆಫಾನ್‌ ಕೃತ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದಕ್ಕೂ ಮುನ್ನ ಆತ ಬೇರೆ ಬೇರೆ ವಿಧಾನಗಳನ್ನು ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದ.

    ಹಂತಕ ʻಆಫಾನ್ ಕೊಲೆಗಳನ್ನು ಮಾಡುವ ಮುನ್ನ ಡ್ರಗ್ಸ್ ತೆಗೆದುಕೊಂಡಿದ್ದು ನಂತರವೇ ದೃಢಪಟ್ಟಿತ್ತು. ಆದರೆ, ಯಾವ ಡ್ರಗ್ಸ್ ತೆಗೆದುಕೊಂಡಿದ್ದ ಎಂಬುದು ಇನ್ನೂ ಖಚಿತವಾಗಿಲ್ಲ. ಪೊಲೀಸರಿಗೆ ಶರಣಾದಾಗಲೂ ಅವನ ಮುಖದಲ್ಲಿ ಪಶ್ಚಾತ್ತಾಪದ ಮನೋಭಾವ ಕಂಡಿರಲಿಲ್ಲ. ತನ್ನವರನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಗಳ ಉದ್ದೇಶ ಏನು? ಅಂತ ಕೇಳಿದ್ರೆ ಆತನ ಬಳಿಯಿರುವ ಉತ್ತರ ಆರ್ಥಿಕ ಸಮಸ್ಯೆ. ಆದ್ರೆ ಅಚ್ಚರಿ ಏನು ಗೊತ್ತಾ? ಸ್ಥಳೀಯರನ್ನ ಕೇಳಿದ್ರೆ, ಆತ ತುಂಬಾ ಒಳ್ಳೆಯ ಹುಡುಗನಂತೆ ಕಾಣುತ್ತಿದ್ದ. ಯಾರ ಮನಸ್ಸಿಗೂ ನೋವುಂಟು ಮಾಡಿರಲಿಲ್ಲ. ಏಕೆ ಹೀಗೆ ಮಾಡಿದ? ಎಂಬುದು ಗೊತ್ತಾಗುತ್ತಿಲ್ಲ ಅಂತ ಹೇಳ್ತಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

    ಕ್ರಿಮಿನಲ್‌ ಮೈಂಡ್‌ ಹಿಂದಿನ ಕಥೆ ಏನು?
    ವಿಜ್ಞಾನ ಲೋಕವೆಂಬುದು ಕುತೂಹಲ, ಬಗೆದಷ್ಟೂ ಆಳ. ಇಲ್ಲಿ ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಕೆಲವೊಂದು ಅನುಭವಕ್ಕೆ ಬಂದಾಗಷ್ಟೇ ನಂಬಬೇಕಾಗುತ್ತದೆ, ಇಲ್ಲದಿದ್ದರೆ ಅನುಭವಕ್ಕಾಗಿ ಕಾಯಬೇಕಾಗುತ್ತೆ. ಆದಾಗ್ಯೂ ಕೆಲ ಮನೋವಿಜ್ಞಾನಿಗಳು ಮನುಷ್ಯನಲ್ಲಿ ಮಾನಸಿಕ ವಿಕೃತಿಗಳನ್ನು ಕಂಡಾಗ ಅವುಗಳನ್ನು ʻಕ್ರಿಮಿನಲ್‌ ಮೈಂಡ್‌ʼ ಅನ್ನೋ ಪದಗಳಲ್ಲಿ ಗುರುತಿಸಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವನ್ನು ಮೊದಲಬಾರಿಗೆ 1928ರಲ್ಲಿ ಪರಿಚಯಿಸಲಾಯಿತು. ʻಜರ್ನಲ್‌ ಆಫ್‌ ಅಬ್ನಾರ್ಮಲ್‌ ಅಂಡ್‌ ಸೋಶಿಯಲ್‌ ಸೈಕಾಲಜಿʼ ಎಂಬ ಜರ್ನಲ್‌ನಲ್ಲಿ ಲೇಖನವೂ ಪ್ರಕಟವಾಯಿತು. ʻಕ್ರಿಮಿನಲ್‌ ಮೈಂಡ್‌ʼ ವ್ಯಕ್ತಿಗಳು ಕೇವಲ ಒಬ್ಬಿಬ್ಬರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವು ಸುಮಾರು ನೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ, ಇಂತಹ ಕೇಸ್‌ಗಳು ವಿಜ್ಞಾನ ಲೋಕಕ್ಕೆ ಹಾಗೂ ವಿಜ್ಞಾನಿಗಳಿಗೆ ಸವಾಲಿನದ್ದಾಗಿಯೇ ಇದೆ. ಕೆಲ ವಿಜ್ಞಾನಿಗಳು ಇಂತಹ ಮಾನಸಿಕ ಸ್ಥಿತಿಯುಳ್ಳ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಬಹುದಾ ಅನ್ನೋ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಅದಕ್ಕಾಗಿ ಮೆದುಳಿನ ಸ್ಕ್ಯಾನರ್‌ಗಳ ಮೊರೆ ಹೋಗಿದ್ದಾರೆ.

    ತಜ್ಞರ ಪ್ರಕಾರ, ಕೆಲವೇ ಕೆಲವು ಲಕ್ಷಣಗಳನ್ನು ನೋಡಿ ಭವಿಷ್ಯದಲ್ಲಿ ಯಾರೂ ಭಯಾನಕ ಕೊಲೆಗಾರನಾಗಬಹುದು ಅಂತ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರಚೋದನೆಯಿಂದಾಗಿ ತಪ್ಪು ಮಾಡಿರುತ್ತಾನೆ. ಆ ತಪ್ಪನ್ನು ಮುಚ್ಚಿಹಾಕಲು ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇರುತ್ತಾನೆ. ಇದನ್ನು ʻಕೋಲ್ಡ್‌ ಬ್ಲಡ್‌ʼ ಎಂದೂ ಸಹ ಕರೆಯುತ್ತಾರೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

    ಗಂಟೆಗಳ ಕಾಲ ಬಾಲಕಿ ಶವದ ಮೇಲೆ ಅತ್ಯಾಚಾರ ಎಸಗಿದ್ದ
    ಈ ಹಿಂದೆಯೂ ದೇಶದ ಅನೇಕ ಕಡೆ ಸೈಕೋ ಹಂತಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಗುಜರಾತ್ ಪೊಲೀಸರು ಹಿಂದೊಮ್ಮೆ ಸೈಕೋ ಕಿಲ್ಲರ್ ಒಬ್ಬನನ್ನ ಬಂಧಿಸಿದ್ದರು. ಆತನ ಹೆಸರು ರಾಹುಲ್ ಸಿಂಗ್ ಜಾಟ್ (29) ಹರಿಯಾಣದ ರೋಹ್ಟಕ್ ನಿವಾಸಿ. ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದ ಆ ಹಂತಕ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರನ್ನೂ ಬಿಡದೇ ಕೊಲ್ಲುತ್ತಿದ್ದ. ಬಾಲಕಿಯೊಬ್ಬಳನ್ನ ಕೊಲೆ ಮಾಡಿ ನಂತರ ಆಕೆಯ ಶವದ ಮೇಲೆ ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದ. ಪೊಲೀಸರಿಗೆ ಸಿಕ್ಕಿಬಿದ್ದಾಗ.. ಹೌದು.. ನಾನು ಐದು ರಾಜ್ಯಗಳಲ್ಲಿ ಕೊಲೆಗಳನ್ನ ಮಾಡಿದ್ದೇನೆ ಎಂದು ರಾಜಾರೋಷವಾಗಿ ಒಪ್ಪಿಕೊಂಡಿದ್ದ. ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ರೈಲಿನಲ್ಲಿ ಕೊಲೆ ಮಾಡಿದ್ದೇನೆ, ರೈಲಿನಲ್ಲೇ ಅತ್ಯಾಚಾರ ಎಸಗಿದ್ದೇನೆ ಎಂದು ಹಂತಕ ಪೊಲೀಸರಿಗೆ ತಿಳಿಸಿದ್ದ. ಕೊನೆಗೂ ಹರಸಾಹಸ ಪಟ್ಟು ಬಂಧಿಸಿದ ಪೊಲೀಸರು ಜೈಲಿಗಟ್ಟಿದರು.

    ಇಷ್ಟೇ ಅಲ್ಲ ಸುಮಾರು 27 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಯರ ಪಾಲಿನ ಆತಂಕವಾದಿ ಸೈಕೋ ಜೈ ಶಂಕರ್, ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಯುವತಿಯನ್ನ ತುಂಡರಿಸಿದ್ದ ರಂಜನ್‌ರಾಯ್‌ ಕೇಸ್‌, ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ, ಛತ್ತೀಸ್‍ಗಢದ ರಾಯ್‍ಪುರ್‌ನಲ್ಲಿ ಮಹಿಳಾ ಅಧಿಕಾರಿಯನ್ನು ಕೊಂದು ಆಕೆಯ ಶವದ ಮೇಲೂ ಅತ್ಯಾಚಾರ ಮಾಡಿದ್ದ ಪ್ರಕರಣಗಳು ಸೈಕೋ ಹಂತಕರ ಮನಸ್ಥಿತಿಗೆ ಉದಾಹರಣೆಯಾಗಿದೆ.

    ಒಟ್ಟಿನಲ್ಲಿ ಮನುಷ್ಯ ಹುಟ್ಟಿನಿಂದಲೇ ಸೈಕೋ ಹಂತನಕಾಗುವುದಿಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಯಾವುದೋ ಒಂದು ವಿಷಯ ಆತನ ಮೇಲೆ ಗಾಢವಾಗಿ ಪರಿಣಾಮ ಬೀರಿದಾಗ ತನ್ನ ಉದ್ದೇಶ ಈಡೇರಿಕೆಗಾಗಿ ತಪ್ಪನ್ನೇ ತನ್ನ ಪಾಲಿಗೆ ಸರಿ ಅಂದುಕೊಳ್ಳುತ್ತಾನೆ.. ಆಗ ಇಂತಹ ಅನಾಹುತಗಳಾಗುತ್ತವೆ ಎಂದು ಮನೋವೈದ್ಯರು ಹೇಳಿದ್ದಾರೆ.

  • ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಬಾಲಿವುಡ್ ನ ವಿವಾದಿತ ಸಿನಿಮಾ ವಿಮರ್ಶಕನೆಂದೇ ಖ್ಯಾತನಾಗಿರುವ ಉಮೈರ್ ಸಂಧು (Umair Sandhu) , ಮೊದ ಮೊದಲು ಸಿನಿಮಾ ರಿಲೀಸ್ ಗೂ ಮುನ್ನ ಚಿತ್ರದ ಬಗ್ಗೆ ವಿಮರ್ಶೆ ಮಾಡಿ ಸಂಚಲನ ಸೃಷ್ಟಿಸುತ್ತಿದ್ದ. ಅದರಲ್ಲೂ ವಿದೇಶದಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ನಾನು ಸೆನ್ಸಾರ್ ಮಂಡಳಿಯ ಸದಸ್ಯನೆಂದು ಹೇಳಿಕೊಂಡು, ರಿಲೀಸ್ ಗೂ ಮುನ್ನವೇ ಚಿತ್ರ ವಿಮರ್ಶೆ ಪ್ರಕಟಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಉಮೈರ್ ಸಿಲೆಬ್ರಿಟಿಗಳ ಹಿಂದೆ ಬಿದ್ದಿದ್ದಾನೆ.

    ಉಮೈರ್ ಸಂಧು ಸಿಲೆಬ್ರಿಟಿಗಳ ಬಗ್ಗೆ ಕಾಮೆಂಟ್ ಮಾಡುವುದು, ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನೂ ಅಲ್ಲ. ಈವರೆಗೂ ಬಾಲಿವುಡ್ ನಟ ನಟಿಯರ ಬಗ್ಗೆ ಕಾಮೆಂಟ್ ಮಾಡುತ್ತಿದ್ದವರು. ಇದೀಗ ದಕ್ಷಿಣದ ತಾರೆಯರ ಹಿಂದೆ ಬಿದ್ದಿದ್ದಾರೆ. ಈ ಬಾರಿ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಬಗ್ಗೆ ಟ್ವೀಟ್ ಮಾಡಿದ್ದಾರೆ ಉಮೈರ್. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಶ್ರುತಿ ಹಾಸನ್ (Shruti Haasan) ಬಗ್ಗೆ ಟ್ವೀಟ್ ಮಾಡಿರುವ ಉಮೈರ್, ‘ಶ್ರುತಿ ಹಾಸನ್ ಸೈಕೋ (Psycho) ವುಮನ್. ಅವರು ಇತ್ತೀಚಿನ ದಿನಗಳಲ್ಲಿ ಆಂಟಿ ಡಿಪ್ರೆಸೆಂಟ್ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಅವರ ಬಾಯ್ ಫ್ರೆಂಡ್ ಜೊತೆ ನಿತ್ಯವೂ ಅವರು ಡ್ರಗ್ಸ್ (Drugs) ಸೇವಿಸುತ್ತಾರೆ. ನಿನ್ನೆ ರಾತ್ರಿ ಕೂಡ ಶ್ರುತಿ ಅವರು ತಮ್ಮ ತಂದೆ ಕಮಲ್ ಹಾಸನ್ ಜೊತೆ ಜಗಳ ಮಾಡಿಕೊಂಡಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.

     

    ಉಮೈರ್ ಸಂಧು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ಟ್ವೀಟ್ ಗೆ ಕಾಮೆಂಟ್ ಮಾಡಿದ್ದಾರೆ. ಶ್ರುತಿ ಹಾಸನ್ ಅವರು ಶಂತನು ಹಜಾರಿಕಾ (Shantanu Hazarika) ಅವರ ಜೊತೆ ಡೇಟಿಂಗ್ ಮಾಡುತ್ತಿರುವುದು ಗುಟ್ಟಿನ ವಿಚಾರವೇನೂ ಅಲ್ಲ. ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡ್ರಗ್ಸ್ ತೆಗೆದುಕೊಳ್ಳುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಮಂಡ್ಯ: ಒಂದು ಇಯರ್ ಫೋನ್, 25 ಗ್ರಾಂ ಬೆಳ್ಳಿ ಖಡ್ಗದ ಆಸೆಗೆ ಶ್ರೀರಂಗಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣವನ್ನು ಮಂಡ್ಯ ಪೊಲೀಸರು ಭೇದಿಸಿದ್ದಾರೆ.

    ಸಣ್ಣ ಸುಳಿವು ಸಿಗದಂತೆ ಡಿಸೆಂಬರ್ 6 ರ ಮಧ್ಯರಾತ್ರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕನನ್ನು ಹಂತಕ ಹತ್ಯೆ ಮಾಡಿದ್ದನು. ಆದರೆ ನಿರತರ ತನಿಖೆ ನಡೆಸಿದ ಹಂತಕ ಕೊನೆಗೂ ಖಾಕಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

    ನಡೆದಿದ್ದೇನು?
    ಗೂಡ್ಸ್ ಆಟೋ ಚಾಲಕ ಗಜೇಂದ್ರ(25) ಕೊಲೆಯಾದ ದುರ್ದೈವಿ. ಈತ ಹೊಸಪೇಟೆ ತಾಲೂಕಿನ ಕುಂಬಾರಹಳ್ಳಿಯ ಗ್ರಾಮದವನು. ಹೊಸಪೇಟೆಯಿಂದ ಮೈಸೂರಿಗೆ ತರಕಾರಿಯನ್ನು ಗಜೇಂದ್ರ ಸಾಗಿಸುತ್ತಿದ್ದನು. ಅಂದು ಮೈಸೂರಿಗೆ ತೆರಳುವಾಗ ನಿದ್ದೆ ಬಂದ ಕಾರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಗೂಡ್ಸ್ ವಾಹನ ನಿಲ್ಲಿಸಿ ನಿದ್ರೆ ಮಾಡುತ್ತಿರುತ್ತಾನೆ. ಇದನ್ನೂ ಓದಿ: ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!

    ಈ ವೇಳೆ ಸೈಯದ್ ರಫೀಕ್ ಆಟೋ ಗಾಜು ಹೊಡೆದು ಗಂಜೇಂದ್ರನನ್ನು ಮಚ್ಚಿನಿಂದ ಕೊಚ್ಟಿ ಕೊಲೆ ಮಾಡಿದ್ದಾನೆ. ನಂತರ ಗಜೇಂದ್ರನ ಮೈ ಮೇಲೆ ಇದ್ದ 25 ಗ್ರಾಂ ಬೆಳ್ಳಿ ಖಡ್ಗ ಹಾಗೂ 200 ರೂ. ಮೌಲ್ಯದ ಹೆಡ್ ಫೋನ್ ದೋಚಿ ಪರಾರಿಯಾಗಿದ್ದಾನೆ. ಹೆದ್ದಾರಿ ಬದಿಯಲ್ಲಿ ನಡೆದಿದ್ದ ಕೊಲೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಸಣ್ಣ ಸುಳಿವನ್ನು ಆರೋಪಿ ಬಿಟ್ಟಿರಲಿಲ್ಲ. ಈ ಹಿನ್ನೆಲೆ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸವಾಲಾಗಿತ್ತು.

    ಹಂತಕನಿಗಾಗಿ ಶೋಧ!
    ಕೃತ್ಯ ನಡಿದಿದ್ದ ಸ್ಥಳದಿಂದ ಸುಮಾರು 1 ಕಿ.ಮೀ ದೂರದಲ್ಲಿದ್ದ ಸಿಸಿಟಿವಿ ದೃಶ್ಯ ಆಧರಿಸಿ ಹಂತಕನಿಗಾಗಿ ಪೊಲೀಸರು ಶೋಧ ನಡೆಸುತ್ತಾರೆ. ಕೊಲೆಯಾದ ರಾತ್ರಿ ಆದೇ ಸಮಯದಲ್ಲಿ ಬಾಬುರಾಯನಕೊಪ್ಪಲು ಗ್ರಾಮ ರಸ್ತೆಯಲ್ಲಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಾಣುತ್ತದೆ. ಅನುಮಾನಗೊಂಡ ಪೊಲೀಸರು ಆತ ಯಾರು ಎಂದು ಪತ್ತೆ ಮಾಡಲು ಮುಂದಾಗುತ್ತಾರೆ.

    ಶೋಧನೆ ಮಾಡಿದ ಬಳಿಕ ಆತ ಸೈಯ್ಯದ್ ರಫಿ ಎಂದು ಪೊಲೀಸರಿಗೆ ತಿಳಿಯುತ್ತೆ. ಆಗ ಪೊಲೀಸರು ಸೈಯ್ಯದ್ ರಫಿ ಎಲ್ಲಿದ್ದಾನೆ ಎಂದು ಹುಡುಕುವಷ್ಟರಲ್ಲಿ ಆತ ಸರಗಳ್ಳತನ ಮಾಡಿ ರಾಮನಗರ ಜೈಲು ಸೇರಿದ್ದಾನೆ ಎಂದು ತಿಳಿಯುತ್ತದೆ. ಮಂಡ್ಯ ಪೊಲೀಸರು ರಾಮನಗರಕ್ಕೆ ತೆರಳಿ ವಿಶೇಷ ಅನುಮತಿ ಪಡೆದು ರಫಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!

    ಸೈಯದ್ ರಫಿ ಒಬ್ಬ ಸೈಕೋ!
    ಕೊಲೆ ಮಾಡಿರುವ ಸೈಯ್ಯದ್ ರಫಿ ಸೈಕೋ ಆಗಿದ್ದು, ಈ ಹಿಂದೆ ಹಲವು ಅಪರಾಧ ಕೃತ್ಯಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿರುತ್ತಾನೆ. ಶ್ರೀರಂಗಪಟ್ಟಣದ ಬಳಿ ಕೊಲೆ ಮಾಡಿದ ಮರುದಿನವೇ ರಫಿ ರಾಮನಗರದಲ್ಲಿ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿರುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕೋ ಮನಸ್ಥಿತಿ ಹೊಂದಿದ್ದ ಸಯ್ಯದ್ ರಫಿ, ಸರಗಳ್ಳತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

  • ರಾತ್ರಿ ಒಣಹಾಕಿದ್ದ ಹೆಣ್ಮಕ್ಕಳ ಒಳಉಡುಪು ಬೆಳಗ್ಗೆ ಮಾಯ- ಆತಂಕದಲ್ಲಿ ನಿವಾಸಿಗಳು

    ರಾತ್ರಿ ಒಣಹಾಕಿದ್ದ ಹೆಣ್ಮಕ್ಕಳ ಒಳಉಡುಪು ಬೆಳಗ್ಗೆ ಮಾಯ- ಆತಂಕದಲ್ಲಿ ನಿವಾಸಿಗಳು

    ಬೆಂಗಳೂರು: ರಾತ್ರಿ ಒಣಹಾಕಿದ ಬಟ್ಟೆ ಕಾಣೆಯಾಗುತ್ತದೆ. ಗಂಡಸರ ಬಟ್ಟೆ ಮಾತ್ರ ಇದ್ದ ಜಾಗದಲ್ಲೇ ಇರುತ್ತದೆ. ಆದರೆ ಹೆಣ್ಣು ಮಕ್ಕಳ ಬಟ್ಟೆ ಮಾತ್ರ ಮಾಯವಾಗಿರುತ್ತದೆ. ಏನ್ ಆಗುತ್ತಿದೆ, ಯಾರಾದರೂ ತೆಗೆದುಕೊಂಡು ಹೋಗುತ್ತಿದ್ದಾರಾ ಎಂದು ಗೊತ್ತಾಗದೆ ಇಷ್ಟು ದಿನ ತಲೆ ಕೆಡಿಸಿಕೊಳ್ಳುತ್ತಿದ್ದ ನಿವಾಸಿಗಳಿಗೆ ಒಳ ಉಡುಪು ಎಲ್ಲಿ ಹೋಗ್ತಿದೆ ಅನ್ನೊದು ತಿಳಿದು ಬಂದಿದೆ.

    ಹಲಸೂರು ಲೇಕ್ ಬಳಿಯ ಕಲ್ಲಹಳ್ಳಿ ಸೆಕೆಂಡ್ ಫೇಸ್ ಬಿಡಿಎಯ 400 ಮನೆಗಳಿರುವ ಅಪಾರ್ಟ್ ಮೆಂಟ್ ಮೇಲೆ ಬಟ್ಟೆ ಒಣ ಹಾಕಿದರೆ ಬೆಳಗಾಗೋದರೊಳಗೆ ಅವು ಮಾಯವಾಗಿ ಬಿಡುತ್ತವೆ. ಇದು ಯಾವುದೋ ಶಕ್ತಿಯ ಕೃತ್ಯ ಅಲ್ಲ. ಇಲ್ಲೊಬ್ಬ ಸೈಕೋ ಅಪಾರ್ಟ್ ಮೆಂಟ್ ಮೇಲೆ ಒಣಗಾಕಿರೋ ಹೆಣ್ಣುಮಕ್ಕಳ ಒಳ ಉಡುಪುಗಳನ್ನ ಮಾತ್ರ ಕದಿಯುತ್ತಿದ್ದಾನೆ. ಮೊದಲೆಲ್ಲ ಒಂದೋ ಎರಡೋ ಬಟ್ಟೆಗಳು ಮಿಸ್ ಆಗುತ್ತಿತ್ತು. ಅಕ್ಕಪಕ್ಕದ ಮನೆಯವರ ಬಟ್ಟೆಗಳಲ್ಲಿ ಮಿಕ್ಸ್ ಆಗಿರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದು ವಾರದಿಂದ ಸತತವಾಗಿ ಎರಡು ದಿನ ಸಂಪೂರ್ಣ ಹೆಣ್ಣು ಮಕ್ಕಳ ಒಳ ಉಡುಪನ್ನ ಕದಿಯುತ್ತಿದ್ದರಿಂದ ಅವನ್ಯಾರೋ ಸೈಕೋ ಎಂದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಸೆಕ್ಯೂರಿಟಿ ಕೊಟ್ಟಿಲ್ಲ. ಪ್ರತಿಕ್ಷಣ ಭಯದಲ್ಲಿ ಬದುಕುತ್ತಿದ್ದೇವೆ. ಪುರುಷರು ಕೆಲಸಕ್ಕೆ ತೆರಳಿದ ಬಳಿಕ ನಾವು ಮನೆಗಳಲ್ಲಿ ಇರೋಕೆ ಭಯ ಆಗುತ್ತದೆ. ಸಣ್ಣ ಸಣ್ಣ ಮಕ್ಕಳಿದ್ದಾರೆ. ಏನಾದ್ರೂ ತೊಂದರೆಯಾದರೆ ಏನ್ ಮಾಡೋದು. ಅವನ್ಯಾರೋ ಡ್ರಗ್ಗಿಸ್ಟ್ ಅನ್ನಿಸುತ್ತದೆ. ಹೆಣ್ಣುಮಕ್ಕಳ ಒಳಉಡುಪು ಒಂದೂ ಬಿಡದೇ ಕದ್ದೊಯ್ಯುತ್ತಿದ್ದಾನೆ. ಪದೇ ಪದೇ ಈ ರೀತಿ ಆಗುತ್ತಿದೆ. ದಯವಿಟ್ಟು ಸಂಬಂಧಪಟ್ಟವರು ನಮಗೆ ರಕ್ಷಣೆ ನೀಡಬೇಕಿದೆ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

  • ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲೇ ಸೈಕೋ ಬೆಂಕಿರಾಜ ಅರೆಸ್ಟ್

    ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲೇ ಸೈಕೋ ಬೆಂಕಿರಾಜ ಅರೆಸ್ಟ್

    – ಇಬ್ಬರು ಪೇದೆಗಳು ಅಮಾನತು

    ಬೆಂಗಳೂರು: ಶೂಟೌಟ್ ನಡೆಸಿ ಬಂಧಿಸಲಾಗಿದ್ದ ಕೊಲೆ ಆರೋಪಿ ಸೈಕೋ ಬೆಂಕಿರಾಜ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲಿ ಮತ್ತೆ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಎಟಿಎಂ ಕಾವಲುಗಾರನ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಸೈಕೋ ಬೆಂಕಿರಾಜ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಇತ್ತ ಆರೋಪಿ ತಪ್ಪಿಸಿಕೊಂಡಿದ್ದನ್ನು ತಿಳಿದ ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಆಸ್ಪತ್ರೆ ಪಕ್ಕದ ರಸ್ತೆಯಲ್ಲೇ ನಡೆದು ಹೋಗುತ್ತಿದ್ದ ಆತನನ್ನು ಮತ್ತೆ ಬಂಧಿಸಿಲಾಗಿದೆ.

    ಮಾರ್ಚ್ 23ರ ಮುಂಜಾನೆ ಕುಮಾರಸ್ವಾಮಿ ಲೇಔಟ್ ಬಳಿಯ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಕೊಲೆಗೈದಿದ್ದ ಆರೋಪಿ ಸೈಕೋ ಬೆಂಕಿ ರಾಜನನ್ನು ಮಾಚ್ 31 ರಂದು ಕೋಣನಕುಂಟೆ ಬಳಿಯಿರುವ ನಾರಾಯಣನಗರ ಬಳಿ ಗುಂಡು ಹಾರಿಸಿ ಬಂಧಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗಾಗಿ ಆರೋಪಿಯನ್ನು ನಗರದ ಸಾಯಿ ರಾಮ್ ಆಸ್ಪತೆಗೆ ದಾಖಲಿಸಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಎಚ್ಚೆತ್ತ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಅವರು ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದಾರೆ. ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಉತ್ತರಹಳ್ಳಿಯ ಮುಖ್ಯ ರಸ್ತೆಯಲ್ಲಿದ್ದ ಕರ್ಣಾಟಕ ಬ್ಯಾಂಕ್ ಎಟಿಎಂ ಕಾವಲುಗಾರ ಲಿಂಗಪ್ಪ ಮೇಲೆ ಕಲ್ಲು ಎತ್ತಿಹಾಕಿ ಸೈಕೋ ರಾಜ ಕೊಲೆ ಮಾಡಿದ್ದ. ಈ ವೇಳೆ ಲಿಂಗಪ್ಪ ಬಳಿ ಇದ್ದ 150 ರೂ. ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಗಾಂಜಾ ವ್ಯಸನಿಯಾಗಿದ್ದ ಈತ 10 ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಈತ ಮತ್ತೆ ತನ್ನ ಕಾರ್ಯ ಮುಂದುವರಿಸಿ ಬಸವನಗಡಿಯ ಸೂಪರ್ ವೈಸರ್ ನನ್ನು ಕೊಲೆ ಮಾಡಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಣಕ್ಕಾಗಿ ಸಾಮಾನ್ಯ ಜನರ ಮೇಲೆ ಹಲ್ಲೆ ಮಾಡಿ ಸಿಕ್ಕಿದಷ್ಟು ಹಣವನ್ನು ದೋಚುತ್ತಿದ್ದ.

  • ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಲೈಂಗಿಕ ದೌರ್ಜನ್ಯ!

    ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಪೊಲೀಸ್ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ವ್ಯಕ್ತಿಯೊಬ್ಬ ಮಹಿಳಾ ಪೇದೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಜಧಾನಿಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕಿರಿಕುಳ ನೀಡುತ್ತಿದ್ದ ಆರೋಪಿಯನ್ನು ಆಂಧ್ರ ಪ್ರದೇಶ ಮೂಲದ ರಮೇಶ್ ನಾಯಕ ಎಂದು ಗುರುತಿಸಲಾಗಿದೆ. ರಮೇಶ್ ಸುಮಾರು ಮೂರು ತಿಂಗಳಿನಿಂದ ನಿರಂತರವಾಗಿ ಬಾಗಲಗುಂಟೆ ಪೊಲೀಸ್ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಕಿರುಕುಳ ನೀಡಿದ್ದಾನೆ. ಕರೆ ಮಾಡಿದ ಸೈಕೋಪಾತ್ ತನ್ನ ಜೊತೆ ಸಹಕರಿಸುವಂತೆ ಮಹಿಳಾ ಪೇದೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಾನೆ.

    ನಾನು ಕೊಲೆ ಮಾಡಿದ್ದೇನೆ ಬಂದು ಅರೆಸ್ಟ್ ಮಾಡು. ನಾನು ರೇಪ್ ಮಾಡಿದ್ದೇನೆ ತಾಕತ್ತಿದ್ದರೆ ಹಿಡಿ ಎಂದು ಅವಾಜ್ ಹಾಕಿದ್ದಾನೆ. ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಕರೆಯ ಮಾಹಿತಿ ಆಧರಿಸಿ ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುರ್ಖಾ ಧರಿಸಿ ಮಹಿಳೆಯಂತೆ ಲೇಡಿಸ್ ಬಾತ್ ರೂಂಗೆ ನುಗ್ಗಿದ್ದ ಸೈಕೋಪಾಥ್

    ಬುರ್ಖಾ ಧರಿಸಿ ಮಹಿಳೆಯಂತೆ ಲೇಡಿಸ್ ಬಾತ್ ರೂಂಗೆ ನುಗ್ಗಿದ್ದ ಸೈಕೋಪಾಥ್

    ಬೆಂಗಳೂರು: ನಗರದ ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ಮತ್ತೊಬ್ಬ ಸೈಕೋಪಾಥ್ ಪ್ರತ್ಯಕ್ಷವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮದನ್ ಕುಮಾರ್ ಲೇಡಿಸ್ ಬಾತ್‍ರೂಮಿಗೆ ನುಗ್ಗಿದ್ದ ಸೈಕೋಪಾಥ್. ಈತ ಬುರ್ಖಾ ಧರಿಸಿ ಮಹಿಳೆಯಂತೆ ಲೇಡಿಸ್ ಬಾತ್‍ರೂಂಗೆ ನುಗ್ಗಿದ್ದಾನೆ. ಬಳಿಕ ಈ ವ್ಯಕ್ತಿಯನ್ನು ನೋಡುತ್ತಿದ್ದಂತೆ ಅಲ್ಲಿದ್ದ ಮಹಿಳೆಯರು ಜೋರಾಗಿ ಕಿರುಚಿದ್ದಾರೆ.

    ಸಾರ್ವಜನಿಕರು ಸೈಕೋ ಮದನ್ ಕುಮಾರ್‍ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಟನ್ ಪೇಟೆ ಪೊಲೀಸರು ಸೈಕೋಪಾಥ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಬಾಗಿಲು ಬಡಿದು ಏಕಾಏಕಿ ಮಹಿಳೆಯ ಮೇಲೆ ಕೈ ಹಾಕ್ದ- ಬೆಡ್‍ರೂಂಗೆ ಎಳೆದುಕೊಂಡು ಹೋಗಿ ರೇಪ್

    ಮನೆಯ ಬಾಗಿಲು ಬಡಿದು ಏಕಾಏಕಿ ಮಹಿಳೆಯ ಮೇಲೆ ಕೈ ಹಾಕ್ದ- ಬೆಡ್‍ರೂಂಗೆ ಎಳೆದುಕೊಂಡು ಹೋಗಿ ರೇಪ್

    ಬೆಂಗಳೂರು: ವ್ಯಕ್ತಿಯೊಬ್ಬ ಒಂಟಿ ಮಹಿಳೆಯೊಬ್ಬರ ಮನೆ ಬಾಗಿಲು ಬಡಿದು ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬಗಲಕುಂಟೆಯಲ್ಲಿ ನಡೆದಿದೆ.

    ನಾಗರಾಜ್ ಅತ್ಯಾಚಾರ ಎಸಗಿದ ಕಾಮುಕ. ನಾಗರಾಜ್ ಕೆಲಸದಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ನಗರದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದ ಹಳ್ಳಿಯಲ್ಲಿ ಒಂಟಿ ಮಹಿಳೆ ಮನೆಗೆ ನುಗ್ಗಿ ಆಕೆಯ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾನೆ.

    ಕಳೆದ 16ರಂದು ಸುಮಾರು 30 ವರ್ಷದ ಮಹಿಳೆಯೊಬ್ಬರು, ಮನೆಯಲ್ಲಿ ಒಂಟಿಯಾಗಿದ್ದು ಸುಮಾರು ಎರಡು ಗಂಟೆಗೆ ಮನೆ ಬಳಿ ಬಂದ ನಾಗರಾಜ್ ಮನೆ ಬಾಗಿಲು ಬಡಿದಿದ್ದಾನೆ. ಒಳಗಿದ್ದ ಮಹಿಳೆ ಯಾರೋ ಪರಿಚಿತರು ಇರಬೇಕೆಂದು ಬಾಗಿಲು ತೆಗೆದಿದ್ದಾಳೆ. ಅಷ್ಟರಲ್ಲಿ ಆ ವ್ಯಕ್ತಿ ಏಕಾಏಕಿ ಮಹಿಳೆಯ ಮೇಲೆ ಕೈ ಹಾಕಿದ, ಬೆಡ್ ರೂಮ್ ಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ.

    ಕಾಮುಕನಿಂದ ತಪ್ಪಿಸಿಕೊಳ್ಳಲು ಮಹಿಳೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಳು. ಆದರ ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ನಾಗರಾಜ್ ಕೈಗೆ ಸಿಕ್ಕ ವಸ್ತುಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಜೀವ ಉಳಿಸಿಕೊಳ್ಳುವುದಕ್ಕೆ ಮನೆಯ ಮೂಲೆಯಲ್ಲಿದ್ದ ಬಾತ್ ರೂಮ್ ಒಳಗೆ ಬಾಗಿಲು ಹಾಕಿಕೊಂಡು ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ನಾಗರಾಜ್ ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ, ಕೆಲ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದ. ಗಂಭೀರವಾಗಿ ಹಲ್ಲೆಗೊಳಾದ ಮಹಿಳೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಬಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಚರಣೆ ನಡೆಸಿ ಈ ಸೈಕೋ ಪಾತ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷ – ಮಹಿಳೆಯರ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ನಿಂತ ಕಾಮುಕ

    ಬೆಂಗ್ಳೂರಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷ – ಮಹಿಳೆಯರ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ನಿಂತ ಕಾಮುಕ

    ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷನಾಗಿದ್ದು, ನಡುರಸ್ತೆಯಲ್ಲಿ ಪ್ಯಾಂಟ್ ಜಿಪ್ ಬಿಚ್ಚಿ ಕಾಮುಕನೊಬ್ಬ ನಿಂತಿದ್ದ ಘಟನೆ ನಡೆದಿದೆ.

    ಸುಬ್ರಹ್ಮಣ್ಯ ನಗರದಲ್ಲಿ ಕಾಮುಕನೊಬ್ಬ ಮಹಿಳೆಯರ ಎದುರಲ್ಲೇ ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ರಾತ್ರಿ ವೇಳೆ ಏರಿಯಾಗೆ ಎಂಟ್ರಿ ಕೊಟ್ಟು ಈ ರೀತಿ ಮಾಡಿದ್ದಾನೆ. ಇದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

    ಸಂಗೊಳ್ಳಿರಾಯಣ್ಣ ಪಾರ್ಕ್ ಬಳಿ ಪ್ರತ್ಯಕ್ಷನಾಗಿದ್ದ ಕಾಮುಕ ಪರಮೇಶ್ ಎಂಬಾತ ಈ ಕೃತ್ಯ ಎಸಗುತ್ತಿದ್ದಾನೆ. ಮೂರು ದಿನಗಳಿಂದ ಸುಬ್ರಮಣ್ಯ ನಗರದ ಏರಿಯಾದ ರಸ್ತೆಯಲ್ಲಿ ಕಂಡ ಮಹಿಳೆಯರ ಮುಂದೆ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೊರಿಸಿದ್ದಾನೆ. ಈತನ ಕೃತ್ಯದಿಂದ ಮಹಿಳೆಯರು ಗಾಬರಿಗೊಂಡಿದ್ದಾರೆ.

    ಗುರುವಾರ ರಾತ್ರಿ ಮತ್ತೆ ಪ್ರತ್ಯಕ್ಷನಾಗಿದ್ದ ಸೈಕೋ ನಡುರಸ್ತೆಯಲ್ಲೇ ಪ್ಯಾಟ್ ಜಿಪ್ ಬಿಚ್ಚಿ ನಿಂತಿದ್ದ. ಈ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈತನ ಈ ವರ್ತನೆಯಿಂದ ಸ್ಥಳಿಯರು ಬೇಸತ್ತು ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

  • ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲೇ ಸೈಕೋ ಜೈಶಂಕರ್ ಆತ್ಮಹತ್ಯೆ

    ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲೇ ಸೈಕೋ ಜೈಶಂಕರ್ ಆತ್ಮಹತ್ಯೆ

    ಬೆಂಗಳೂರು: ಅತ್ಯಾಚಾರಿ, ಸೈಕೋ ಕಿಲ್ಲರ್ ಜೈಶಂಕರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    24 ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸೈಕೋ ಜೈಶಂಕರ್, 2013ರ ಸೆಪ್ಟೆಂಬರ್‍ನಲ್ಲಿ ಜೈಲಿನಿಂದ ಪರಾರಿಯಾಗಿದ್ದನು. ಕಾಲಿಗೆ ಗಾಯ ಮಾಡಿಕೊಂಡಿದ್ದ ಆತ, ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಜೈಲಿನಿಂದ ಸ್ವಲ್ಪ ದೂರದಲ್ಲೇ ನಡುಮುರಿದುಕೊಂಡು ಬಿದ್ದಿದ್ದ ಜೈಶಂಕರನನ್ನ ಬಂಧಿಸಲಾಗಿತ್ತು. ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿದ್ದು, ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದನು.

    ಇದೀಗ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ವಿಕ್ಟೋರಿಯಾ ಅಸ್ಪತ್ರಗೆ ಕರೆತರಲಾಗುತಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

    ಪ್ರಕರಣಗಳು: ತುಮಕೂರಿನ ಗಿರಿಯನಹಳ್ಳಿಯಲ್ಲಿ ದೊಡ್ಡಯ್ಯ, ಪುಟ್ಟಮ್ಮ ದಂಪತಿಗಳು ಹಾಗೂ ಅವರ ಪುತ್ರಿ ರಾಜಮ್ಮ ಕೊಲೆ ಮಾಡಿದ ಆರೋಪ ಸೈಕೋ ಜಯಶಂಕರ್ ಮೇಲಿತ್ತು. 2011ರ ಮಾರ್ಚ್ 29ರಂದು ಈ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೈಶಂಕರ್ ಖುಲಾಸೆಗೊಂಡಿದ್ದನು. ಸೂಕ್ತ ಸಾಕ್ಷಿಗಳು ದೊರೆಯದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

    2011ರ ಏಪ್ರಿಲ್ 27ರಂದು ಚಿತ್ರದುರ್ಗದ ಎಂ.ಕೆ.ಹಟ್ಟಿಯಲ್ಲಿ ಚಂದ್ರಮ್ಮ ಎಂಬವರ ಮೇಲೆ ಜೈಶಂಕರ್ ಅತ್ಯಾಚಾರ ನಡೆಸಿದ್ದನು. ಈ ವೇಳೆ ಅಲ್ಲಿಗೆ ಆಕೆಯ ಪತಿ ಹನುಮಂತಪ್ಪ ಬಂದಿದ್ದರು. ಇಬ್ಬರನ್ನು ಕೊಲೆ ಮಾಡಿದ ಆರೋಪ ಜೈಶಂಕರ್ ಮೇಲಿತ್ತು. ಈ ಜೋಡಿ ಕೊಲೆ ಪ್ರಕರಣವನ್ನೂ 2017ರ ಸೆಪ್ಟೆಂಬರ್‍ನಲ್ಲಿ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.


    ವಿಜಯಪುರದಲ್ಲಿ ಜೈ ಶಂಕರ್ ನನ್ನು ಪೊಲೀಸರು ಬಂಧಿಸಿದಾಗ ಹಲವು ಕೊಲೆ ಪ್ರಕರಣಗಳು ಹೊರಬಂದಿದ್ದವು. ಕರ್ನಾಟಕದ ಮೂರು ಪ್ರಕರಣಗಳಲ್ಲಿ ಜೈ ಶಂಕರ್ ಈಗಾಗಲೇ ಖುಲಾಸೆಗೊಂಡಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನಲ್ಲಿಯೂ ಜೈ ಶಂಕರ್ ಮೇಲೆ ಹಲವು ಕೇಸುಗಳಿವೆ ಎಂಬುದಾಗಿ ತಿಳಿದುಬಂದಿತ್ತು.

    ಸದ್ಯ ಶಂಕರ್ ಆತ್ಮಹತ್ಯೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.

    https://www.youtube.com/watch?v=MdCVv0MV_Fc&feature=youtu.be