Tag: ಸೈಕಲ್ ರೈಡ್

  • ಸೈಕಲ್ ರೈಡ್ ವೇಳೆ ರಾಧಿಕಾಗೆ ಹೀಗಂದ್ರು ಯಶ್- ವಿಡಿಯೋ

    ಸೈಕಲ್ ರೈಡ್ ವೇಳೆ ರಾಧಿಕಾಗೆ ಹೀಗಂದ್ರು ಯಶ್- ವಿಡಿಯೋ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಪ್ರೀತಿಯಿಂದ ತಮ್ಮ ಪತ್ನಿ ರಾಧಿಕಾ ಅವರನ್ನು ‘ಬುರ್ಶಿ’ ಎಂದು ಕರೆದಿದ್ದಾರೆ.

    ನಟ ಯಶ್ ಬೆಂಗಳೂರಿನ ರಸ್ತೆಗಳಲ್ಲಿ ರಾತ್ರಿ ಹೊತ್ತು ಯಾರಿಗೂ ಗೊತ್ತಾಗದಂತೆ ಯಶ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ. ಈ ವೇಳೆ ತಮ್ಮ ಪತ್ನಿ ರಾಧಿಕಾರನ್ನು ನೆನಪಿಸಿಕೊಂಡಿದ್ದಾರೆ.

    ಬುರ್ಶಿ ಇದು ರಾಧಿಕಾರ ನಿಕ್‍ನೇಮ್. ಚಿಕ್ಕ ವಯಸ್ಸಿನಲ್ಲಿ ರಾಧಿಕಾರಿಗೆ ಮಾತನಾಡುವಾಗ ಪದೇ ಪದೇ ನಾಲಗೆ ಹೊರ ತೆಗೆಯುವ ಅಭ್ಯಾಸ ಇತ್ತಂತೆ. ಆ ಅಭ್ಯಾಸಕ್ಕೆ ರಾಧಿಕಾರಿಗೆ ಅವರ ತಾಯಿ ‘ಡರ್ಟಿಗರ್ಲ್’ ಎಂದು ಬೈಯುತ್ತಿದ್ದರು. ಆದರೆ ಯಶ್ ಕೂಡ ರಾಧಿಕಾ ರನ್ನು `ಡರ್ಟಿಗರ್ಲ್’ ಎಂದು ಕರೆಯುತ್ತಾರೆ.

    ಯಶ್ ಪ್ರೀತಿಯಿಂದ ನನಗೆ ‘ಬುರ್ಶಿ’ ಎಂದು ಕರೆಯುತ್ತಾರೆ. `ಬುರ್ಶಿ’ ಎಂದರೆ ಕೊಂಕಣಿಯಲ್ಲಿ ಡರ್ಟಿ ಗರ್ಲ್ ಎಂದರ್ಥ. ನಾನು ಚಿಕ್ಕವಳಿದ್ದಾಗ ಹಾವಿನ ಥರ ಆಗಾಗ ನಾಲಿಗೆ ಹೊರಗೆ ಹಾಕುತ್ತಿದೆ. ಇದನ್ನು ನೋಡಿ ನನ್ನ ಅಮ್ಮ `ಬುರ್ಶಿ’ ಅಂತ ಕರೆಯುತ್ತಿದ್ರು. ಇದೀಗ ಯಶ್ `ಬುರ್ಶಿ’ ಅಂತ ಕರೆಯುತ್ತಾರೆ ಎಂದು ಈ ಹಿಂದೆ ರಾಧಿಕಾ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

    ಯಶ್ ಇತ್ತೀಚೆಗೆ ಸೈಕಲ್ ಸವಾರಿ ಮಾಡುವಾಗ `ಬುರ್ಶಿ’ `ಬುರ್ಶಿ’ ಎಂದು ಹೇಳಿ ತಮ್ಮ ಪತ್ನಿ ರಾಧಿಕಾರನ್ನು ಕರೆದಿದ್ದಾರೆ.

    https://www.youtube.com/watch?v=MphoTidE1vo