Tag: ಸೈಂಟ್‌ ಜಾನ್ಸ್‌ ಶಾಲೆ

  • 10ನೇ ತರಗತಿ ಐಸಿಎಸ್‌ಸಿ ಫಲಿತಾಂಶ ಪ್ರಕಟ: ಬೆಂಗಳೂರು ಬಾಲಕನ ಉತ್ತಮ ಸಾಧನೆ

    10ನೇ ತರಗತಿ ಐಸಿಎಸ್‌ಸಿ ಫಲಿತಾಂಶ ಪ್ರಕಟ: ಬೆಂಗಳೂರು ಬಾಲಕನ ಉತ್ತಮ ಸಾಧನೆ

    ಬೆಂಗಳೂರು: ಹತ್ತನೇ ತರಗತಿ ಐಸಿಎಸ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನ ಬಾಲಕ ಶಹಬ್ಬಾಸ್ ಖಲಂದರ್ ಶೇಕಡಾ 98 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

    ಸೈಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿಯಾಗಿರುವ ಶಹಬ್ಬಾಸ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಮೈಂಡ್ ಮಾಸ್ಟರ್‌ನ ಎಂಡಿ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಗೋಣಿ ಚೀಲಕ್ಕೆ ಹಾಕಿ ಸಾಗಿಸಲಾಗಿದ್ದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಹಾಲು ಕುಡಿಸಿ ಆರೈಕೆ

    ಈ ವಿದ್ಯಾರ್ಥಿ ಕನ್ನಡದಲ್ಲಿ ಶೇ.98, ವಿಜ್ಞಾನ ಮತ್ತು ಇತಿಹಾಸದಲ್ಲಿ ಶೇ.100 ಅಂಕ ಪಡೆದಿರುವುದು ಶ್ಲಾಘನೀಯ. ಬೆಂಗಳೂರಿನ ಕಾವಲ್ ಭೈರಸಂದ್ರ ನಿವಾಸಿ ಯುವ ಕಾಂಗ್ರೆಸ್ ಮುಖಂಡ ಆಸಿಫ್ ಅಹ್ಮದ್ ಮತ್ತು ಮೆವಾಫಿಸ್ ಫಾತಿಮಾ ದಂಪತಿ ಪುತ್ರನಾಗಿರುವ ಶಹಬ್ಬಾಸ್, ಬಾಲ್ಯದಿಂದಲೂ ಹತ್ತು ಹಲವು ಸ್ಪರ್ದೆಗಳಲ್ಲಿ ಭಾಗವಹಿಸಿ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ.

    ಶಹಬ್ಬಾಸ್ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]