Tag: ಸೇವಾ ಭಾರತಿ ಟ್ರಸ್ಟ್

  • ಸೇವಾ ಭಾರತಿ ಟ್ರಸ್ಟ್​ನಿಂದ ಕಿಮ್ಸ್​​ಗೆ  ಆಂಬುಲೆನ್ಸ್ ಹಸ್ತಾಂತರ

    ಸೇವಾ ಭಾರತಿ ಟ್ರಸ್ಟ್​ನಿಂದ ಕಿಮ್ಸ್​​ಗೆ ಆಂಬುಲೆನ್ಸ್ ಹಸ್ತಾಂತರ

    ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಗೆ ಪ್ರತಿದಿನವೂ ನೂರಾರು ಬಡ ರೋಗಿಗಳು ಬರುತ್ತಾರೆ. ತುರ್ತು ಸಮಯದಲ್ಲಿ ವಾಹನ ಸೇವೆ ತುಂಬ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಆಂಬುಲೆನ್ಸ್ ನೀಡಿರುವುದು ಖುಷಿಯ ಸಂಗತಿ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.

    ಕಿಮ್ಸ್ ಆಸ್ಪತ್ರೆಗೆ ಸೇವಾ ಭಾರತಿ ಟ್ರಸ್ಟ್ ಉಚಿತವಾಗಿ ಅಂಬುಲೆನ್ಸ್ ನೀಡಿದ್ದು, ಅದನ್ನು ಕೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರ ಮಾಡಲಾಯಿತು. ನಂತರ ರಾಮಲಿಂಗಪ್ಪ ಅಂಟರತಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸೇವಾ ಭಾರತಿ ಟ್ರಸ್ಟ್ ನಿರಂತರ ಜನಸಾಮಾನ್ಯರ ಸೇವೆಗೆ ಅಣಿಯಾಗಿದೆ. ಕೊರೊನಾ ಸಂದರ್ಭದಲ್ಲಿಯೂ ಈ ಟ್ರಸ್ಟ್ ಉತ್ತಮ ನೆರವು ನೀಡಿದೆ. ನಿಜಕ್ಕೂ ಸೇವಾ ಭಾರತಿ ಟ್ರಸ್ಟ್ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ರಘು ಅಕಮಂಚಿ ಮಾತನಾಡಿ, ತುರ್ತು ವಾಹನ ಸೇವೆಯಿಂದ ಮನುಷ್ಯನ ಪ್ರಾಣ ಉಳಿಸುವಂತಾಗಿದೆ. ಕೆಲವು ಸಮಯದಲ್ಲಿ ಇದರ ಅವಶ್ಯಕತೆ ತುಂಬಾ ಇರುತ್ತದೆ. ಬಡವರಿಗಾಗಿ ಉಚಿತ ಸೇವೆ ಒದಗಿಸಲು ಟ್ರಸ್ಟ್ ಮುಂದಾಗಿದೆ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಕಿಮ್ಸ್ ಆವರಣದಲ್ಲಿ ನೆರವು ಕೇಂದ್ರ ಸ್ಥಾಪನೆ ಆರಂಭಿಸುವ ಆಸೆಯಿದೆ. ನಿರ್ದೇಶಕರು ಈ ಕುರಿತು ಯೋಜನೆ ರೂಪಿಸಿದರೆ ಸಹಕಾರ ನೀಡಲಾಗುವುದಾಗಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್​ನಲ್ಲಿರುವ ವಿರುಷ್ಕಾ!

    ಸೇವಾ ಭಾರತಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಗೋವರ್ಧನ ರಾವ್, ಮಂಜುನಾಥ.ಎಂ, ಜಯತೀರ್ಥ ಕಟ್ಟಿ ದತ್ತಮೂರ್ತಿ, ಶಂಕರ್ ಗುಮಾಸ್ತೆ, ಸಂದೀಪ್ ಕುಲಕರ್ಣಿ, ಚಂದ್ರಶೇಖರ್ ಗೋಕಾಕ್, ಬೂದಿಹಾಳ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.