Tag: ಸೇವಾ ತೆರಿಗೆ

  • ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    – ಬ್ಯಾಂಕ್, ಇನ್ಶುರೆನ್ಸ್ ಗೂ ತಟ್ಟಿದ ಜಿಎಸ್‍ಟಿ ಬರೆ
    – ಡೆಬಿಟ್, ಕ್ರೆಡಿಟ್ ಕಾರ್ಡ್ ಉಜ್ಜಿದ್ರೂ ಹೊರೆ
    – ರೈತರ ಕೃಷಿ ಉಪಯೋಗಿ ಸಲಕರಣೆಗಳು ದುಬಾರಿ
    – ಮಹಿಳೆಯರ ದಿನಬಳಕೆ ವಸ್ತುಗಳು ಕಾಸ್ಟ್ಲಿ
    – ಮೇಕಪ್ ಪ್ರಿಯರಿಗೆ ಸಂಕಷ್ಟ

    ಬೆಂಗಳೂರು: ಜುಲೈ 1 ರಿಂದ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಲಿದೆ. ಇದರಿಂದ ಯಾವೆಲ್ಲಾ ಸೇವೆಗಳು ದುಬಾರಿಯಾಗಲಿದೆ? ಯಾರಿಗೆಲ್ಲಾ ಇದರಿಂದ ಹೊರೆಯಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

    ಬ್ಯಾಂಕ್ ವ್ಯವಹಾರಗಳ ಮೇಲೆ, ಎಟಿಎಂ ವಿತ್ ಡ್ರಾವಲ್ ಮೇಲೆ ಲಿಮಿಟ್ ಹೇರಿದ್ದ ಬ್ಯಾಂಕ್‍ಗಳು ಈಗ ಜಿಎಸ್‍ಟಿ ಹೆಸರಲ್ಲಿ ಹೆಚ್ಚುವರಿ ಸೇವಾ ತೆರಿಗೆ ವಿಧಿಸಲು ಸಜ್ಜಾಗಿವೆ. ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಿದ್ರೆ ಹೆಚ್ಚುವರಿ ಸೇವಾ ಶುಲ್ಕ ಕಟ್ಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಎಂಐಗಳ ಮೇಲೂ ಜಿಎಸ್‍ಟಿ ಹೊರೆ ಬೀಳಲಿದೆ. ಆರೋಗ್ಯ ವಿಮೆ, ಖಾಸಗಿ ಇನ್ಶುರೆನ್ಸ್ ಗಳ ಮೇಲೂ ಸರ್ವೀಸ್ ಟ್ಯಾಕ್ಸ್ ಹೆಚ್ಚಾಗ್ತಿದೆ. ಎಸ್‍ಬಿಐ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಎಸ್‍ಎಂಎಸ್ ಶುರುವಾಗಿದೆ. ಹಾಲಿ ಇರುವ 15% ಸೇವಾ ತೆರಿಗೆ ಬದಲು 18%ಗೆ ಏರಿಕೆಯಾಗಲಿದೆ.

    ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಸೇವಾ ತೆರಿಗೆ ಮೇಲೆ 3% ಹೆಚ್ಚಳವಾಗಲಿದೆ. ಅಂದ್ರೆ ವರ್ಷಕ್ಕೆ ಎಟಿಎಂ ಕಾರ್ಡ್ ನಿರ್ವಹಣೆಗೆ 1,500 ರೂ. ಸೇವಾ ತೆರಿಗೆ ಕಟ್ಟುತ್ತಿದ್ರಿ. ಜಿಎಸ್‍ಟಿ ಬಂದ ಮೇಲೆ 1500 ರೂ. ಬದಲು 1,850 ರೂ. ಹಣ ಕಟ್ಟಬೇಕು.  ಜೊತೆಗೆ 4 ಬಾರಿ ಎಟಿಎಂ ವಿತ್‍ಡ್ರಾ ಮುಗಿದ್ಮೇಲೆ ಪ್ರತಿಬಾರಿಗೂ 50 ರೂ. ಶುಲ್ಕ ಕಟ್ಟಬೇಕು. ಪೆಟ್ರೋಲ್ ಹಾಕಿಸಿದ್ರೆ, ಶಾಪಿಂಗ್, ಹೋಟೆಲ್‍ನಲ್ಲಿ ಕಾರ್ಡ್ ಉಜ್ಜಿದ್ರೂ ಸರ್ವಿಸ್ ಟ್ಯಾಕ್ಸ್ ಕಟ್ಟಬೇಕು.

    ನೀವು 10 ಲಕ್ಷಕ್ಕೆ ವಿಮೆ ಮಾಡಿಸಿದ್ರೆ ತಿಂಗಳಿಗೆ 5 ಸಾವಿರ ರೂ. ಹಣ ಕಟ್ತೀರಾ ಅಂದುಕೊಳ್ಳಿ. ಕಂತಿನ ಮೇಲೆ ಸೇವಾ ತೆರಿಗೆ ರೂಪದಲ್ಲಿ 375 ರೂ ಇರ್ತಿತ್ತು, ಇನ್ಮುಂದೆ 450 ರೂ. ಆಗುತ್ತೆ. ಇನ್ಶುರೆನ್ಸ್ ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ಕಟ್ಟಿದ್ರೂ ಸೇವಾ ತೆರಿಗೆ 3% ಹೆಚ್ಚಳವಾಗಲಿದೆ.

     ಅನ್ನದಾತರಿಗೂ ಜಿಎಸ್‍ಟಿ ಬಿಸಿ: ಕೃಷಿಗೆ ಬಳಸುವ ಗೊಬ್ಬರ, ಯಂತ್ರಗಳ ಮೇಲೂ ಜಿಎಸ್‍ಟಿ ತೆರಿಗೆ ಬೀಳಲಿದೆ. 5% ಇದ್ದ ರಸಗೊಬ್ಬರ ತೆರಿಗೆ ದರ 12% ಏರಿಕೆಯಾಗಲಿದೆ. ಒಂದು ಟನ್ ಯೂರಿಯಾಗೆ 400 ರೂಪಾಯಿ ಏರಿಕೆ, ಒಂದು ಟನ್ ಡಿಎಪಿ ಗೊಬ್ಬರಕ್ಕೆ 4 ಸಾವಿರ ರೂ. ಏರಿಕೆಯಾಗಲಿದೆ. 50 ಕೆಜಿ ಚೀಲಕ್ಕೆ 20 ರಿಂದ 35 ರೂ. ಜಾಸ್ತಿಯಾಗುವ ಸಾಧ್ಯತೆಯಿದೆ. ಹೊಸ ಟ್ರ್ಯಾಕ್ಟರ್ ಖರೀದಿಗೂ 12% ತೆರಿಗೆ ಹೊರೆ ಬೀಳಲಿದೆ. ಟ್ಯ್ರಾಕ್ಟರ್ ಬಿಡಿ ಭಾಗಗಳ ಮೇಲೆ 28% ತೆರಿಗೆ ಬೀಳಲಿದೆ. ಚಕ್ರ, ಟೈರ್, ಎಂಜಿನ್, ಗೇರ್ ಬಾಕ್ಸ್, ಟ್ಯೂಬ್, ಆಕ್ಸಲ್, ಡ್ರೈವ್ ಸಾಫ್ಟ್, ಇಂಧನ ಪಂಪ್‍ಗಳು, ಎಲೆಕ್ಟ್ರಿಕಲ್ ಬಿಡಿಭಾಗಗಳ ತೆರಿಗೆ ಹೆಚ್ಚಲಿದೆ. ಸೀಟ್ ಮೆಟಲ್‍ಗಿದ್ದ 14% ತೆರಿಗೆ 28% ಗೆ ಏರಿದೆ. ಕ್ರಿಮಿನಾಶಕಗಳ ಮೇಲೆ ಶೇ 18%ರಷ್ಟು ತೆರಿಗೆ+12.5% ಅಬಕಾರಿ ಸುಂಕ, ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೇಲೆ 5% ತೆರಿಗೆ, ಫ್ರೆಶ್ ಹಾಲಿಗೆ 0%, ಸಂಸ್ಕರಿಸಿದ ಹಾಲಿಗೆ 18% ತೆರಿಗೆ ಬೀಳಲಿದೆ. ಜಿಎಸ್‍ಟಿಯಿಂದ ಟೀ ಮೇಲೆ ಶೇ.5ರಷ್ಟು ತೆರಿಗೆ ಹೊರೆಯಾಗಲಿದೆ.

    ಚಿನ್ನ ದುಬಾರಿ: ಚಿನ್ನದ ಮೇಲೆ ಶೇ. 1ರಷ್ಟಿದ್ದ ತೆರಿಗೆ ಶೇ.3ರಷ್ಟು ಏರಿಕೆಯಾಗಿದೆ. ಹೀಗಾಗಿ ಪ್ರತಿ ಗ್ರಾಂಗೆ 60 ರೂಪಾಯಿ ಬೆಲೆ ಹೆಚ್ಚಳವಾಗಿದ್ದು, ಮೇಕಿಂಗ್ ಚಾರ್ಜ್ ಮೇಲೆ ಶೇ.18ರಷ್ಟು ತೆರಿಗೆ ಬೀಳಲಿದೆ. ಬೆಳ್ಳಿ ಮೇಲೆಯೂ ಶೇ.3ರಷ್ಟು ಜಿಎಸ್‍ಟಿ ತೆರಿಗೆ ಬೀಳಲಿದೆ.

    ಮಹಿಳೆಯರ ಪರ್ಸ್‍ಗೂ ಕತ್ತರಿ: ಮಹಿಳೆಯರ ಮೇಕಪ್ ಐಟಮ್ಸ್, ಬ್ಯೂಟಿ ಪಾರ್ಲರ್ ಸೇವೆಗಳು ದುಬಾರಿಯಾಗಲಿವೆ. ಮೆನಿಕ್ಯೂರ್, ಪೆಡಿಕ್ಯೂರ್ ಸೆಟ್ಸ್‍ಗಾಗಿ ಈಗಿರುವ ತೆರಿಗೆ 26%, ಜಿಎಸ್‍ಟಿ ತೆರಿಗೆ 28%. ಹಾಗೇ ಸುಗಂಧ ದ್ರವ್ಯಗಳ ಮೇಲೆ ಈಗಿರುವ ತೆರಿಗೆ 26%, ಜಿಎಸ್‍ಟಿ ತೆರಿಗೆ 28%. ಮೇಕಪ್ ಸಾಧನಗಳ ಮೇಲೆ ಈಗಿರುವ ತೆರಿಗೆ 26%, ಜಿಎಸ್‍ಟಿ ತೆರಿಗೆ 28% ಆಗಲಿದೆ. ಸ್ಕಿನ್ ಕೇರ್ ಐಟಂ/ ಸನ್‍ಸ್ಕ್ರೀನ್ ಮೇಲೆ ಈಗಿರುವ ತೆರಿಗೆ 26%, ಜಿಎಸ್‍ಟಿ ತೆರಿಗೆ 28%. ಇನ್ನು ಲೆದರ್ ಬ್ಯಾಗ್ ಮೇಲೆ ಈಗಿರುವ ತೆರಿಗೆ 6%, ಜಿಎಸ್‍ಟಿ ತೆರಿಗೆ 28% ಆಗಿದೆ. ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ ಈಗಿರುವ ತೆರಿಗೆ 5%, ಜಿಎಸ್‍ಟಿ ತೆರಿಗೆ 12%ಗೆ ಹೆಚ್ಚಿದೆ.

    ಜಿಎಸ್‍ಟಿಯಿಂದ ವಿನಾಯಿತಿ: ಬಳೆ, ಕುಂಕುಮ ಹಾಗೂ ಬಿಂದಿಗೆ ಜಿಎಸ್‍ಟಿ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.

    ಮದ್ಯಪ್ರಿಯರಿಗೆ ಶಾಕ್: ಒಂದು ದೇಶ ಒಂದು ತೆರಿಗೆ ಹೆಸರಲ್ಲಿ ಜಾರಿಯಾಗ್ತಿರೋ ಜಿಎಸ್‍ಟಿ ಕುಡುಕರ ನಶೆ ಇಳಿಸೋದು ಖಚಿತ. ಯಾಕಂದ್ರೆ ಜಿಎಸ್‍ಟಿ ಜಾರಿಯಾದ್ಮೇಲೆ ಮದ್ಯ ತಯಾರಿಸೋ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದನ್ನ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲು ಕಂಪನಿಗಳು ನಿರ್ಧರಿಸಿವೆ. ಮದ್ಯ ತಯಾರಿಕಾ ಕಂಪನಿಗಳ ಪ್ರಕಾರ ಉತ್ಪಾದನಾ ತೆರಿಗೆ 12 ರಿಂದ 15ರಷ್ಟು ಏರಿಕೆಯಾಗಲಿದೆ. ಈ ಹೊರೆಯನ್ನ ತಪ್ಪಿಸಲು ರಮ್, ಜಿನ್ನು, ವೈನ್, ಬಿಯರ್, ವಿಸ್ಕಿ ದರ ಹೆಚ್ಚಿಸಿ ಅದನ್ನ ಸೇವಾದರ ಹೆಸರಲ್ಲಿ ಗ್ರಾಹಕರಿಂದಲೇ ವಸೂಲಿ ಮಾಡಲು ಕಂಪನಿಗಳು ತೀರ್ಮಾನಿಸಿವೆ. ಇದಲ್ಲದೆ ಬಾಟೆಲ್ ಉತ್ಪಾದನಾ ವೆಚ್ಚ 15 ರಿಂದ 18%ರಷ್ಟು ಹೆಚ್ಚಳವಾಗಲಿದ್ದು, ಸಾಗಾಟ ವೆಚ್ಚ 4.5% ರಿಂದ 5%ವರೆಗೆ ಹೆಚ್ಚಳವಾಗಲಿದೆ. ಬಿಯರ್ ದರದ ಮೇಲೆ 15% ರಷ್ಟು ಹೆಚ್ಚು ತೆರಿಗೆ ಖಚಿತ. ಬಿಯರ್ ಎಂಆರ್‍ಪಿ 120+ಸೇವಾ ತೆರಿಗೆ= 135 ರೂ.ವರೆಗೂ ಹೆಚ್ಚಳವಾಗಲಿದೆ. ವಿಸ್ಕಿ, ಬ್ರಾಂದಿ ಇತರೆ ಫುಲ್ ಬಾಟೆಲ್ ಬೆಲೆ 32 ರಿಂದ 91 ರೂ.ವರೆಗೂ ಹೆಚ್ಚಳವಾಗಲಿದೆ. 800 ರೂ ಫುಲ್ ಬಾಟೆಲ್ ದರವಿದ್ರೆ ಜುಲೈನಿಂದ 890 ರೂ.ವರೆಗೂ ಹೆಚ್ಚಳವಾಗಲಿದೆ.

    ಆನ್‍ಲೈನ್ ವ್ಯವಹಾರ: ಜುಲೈ 1 ರಿಂದ ಆನ್‍ಲೈನ್ ವ್ಯವಹಾರದ ಮೇಲೆ 1% ತೆರಿಗೆ ನಿಗದಿಯಾಗಿದೆ. ನಷ್ಟ ಸರಿದೂಗಿಸಲು ಆನ್‍ಲೈನ್ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ. ತೆರಿಗೆ ತಪ್ಪಿಸಿಕೊಳ್ಳಲು ಇನ್ಮುಂದೆ ಡಿಸ್ಕೌಂಟ್, ಆಫರ್, ಉಡುಗೊರೆ ಸಿಗಲ್ಲ. ಆನ್‍ಲೈನ್ ಬುಕ್ಕಿಂಗ್ ರಿಟರ್ನ್ ಕೊಟ್ರೆ, ಆರ್ಡರ್ ಕ್ಯಾನ್ಸಲ್ ಮಾಡಿದ್ರೆ ದಂಡ ಬೀಳಲಿದೆ. ಎಂಆರ್‍ಪಿ ಮೇಲೆ 18% ಹಣವನ್ನ ದಂಡದ ರೂಪದಲ್ಲಿ ವಸೂಲಿಗೆ ಪ್ಲಾನ್ ಮಾಡಲಾಗಿದೆ.

    ಜುಲೈ 1ರಿಂದ ದೇಶಾದ್ಯಂತ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಜಾರಿಯಾಗ್ತಿದ್ದು, ಎಲ್ಲಾ ವಸ್ತುಗಳು ಒಂದೇ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದ್ರಿಂದ ಮನೆ ಖರೀದಿ ಕಡಿಮೆಯಾಗಲಿದೆ ಎನ್ನಲಾಗಿದೆ. ಆದ್ರೆ ವಾಸ ಮಾಡುವವರ ಖರ್ಚು ವೆಚ್ಚ ಹೆಚ್ಚಾಗಲಿದೆ. ಯಾಕೆ ಅನ್ನೋದಕ್ಕೆ 5 ಕಾರಣಗಳಿವೆ.
    1. ನಿರ್ವಹಣಾ ವೆಚ್ಚ ಅಧಿಕ: 5 ಸಾವಿರಕ್ಕಿಂತ ಹೆಚ್ಚು ನಿರ್ವಹಣಾ ವೆಚ್ಚ ಪಾವತಿಸುತ್ತಿದ್ದರೆ 18%ರಷ್ಟು ತೆರಿಗೆ ಸೇರ್ಪಡೆ.ಶೇ. 15ರಷ್ಟು ತೆರಿಗೆ, ಶೇ. 0.5 ಸ್ವಚ್ಛ ಭಾರತ್ ತೆರಿಗೆ. ಶೇ. 0.05ರಷ್ಟು ಕೃಷಿಯೇತರ ತೆರಿಗೆ, ಶೇ. 2.5ರಷ್ಟು ಜಿಎಸ್‍ಟಿ ತೆರಿಗೆ.
    2. ಆಸ್ತಿ ತೆರಿಗೆಗೆ ರಿಲೀಫ್: ಹೊಸ ತೆರಿಗೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸೇರ್ಪಡೆಯಾಗಿಲ್ಲ. ಹೀಗಾಗಿ ಆಸ್ತಿ ಮಾಲೀಕರು ವಾರ್ಷಿಕವಾಗಿಯೇ ತೆರಿಗೆ ಪಾವತಿಸಬೇಕು
    3. ಹೆಚ್ಚುವರಿ ವೆಚ್ಚಗಳು: ನೀರಿನ ಬಿಲ್ ದರ ಹೆಚ್ಚಾಗಲಿದೆ, ವಿದ್ಯುತ್ ಬಿಲ್ ದರ ಏರಿಕೆಯಾಗಲಿದೆ.
    4. ರಿಪೇರಿ ವೆಚ್ಚಗಳು ಅಧಿಕ: ಮನೆ ರಿಪೇರಿ ವೆಚ್ಚಗಳು ಅಧಿಕವಾಗಲಿವೆ. ಸಿಮೆಂಟ್, ಪೇಂಟ್, ಸ್ಟೀಲ್ ಬೆಲೆ ಅಧಿಕವಾಗಲಿದೆ. ರಿಪೇರಿಗಾಗಿ ಪಡೆಯುವ ಸಾಲದ ಮೇಲೆ ಶೇ.18ರಷ್ಟು ತೆರಿಗೆ ಹೊರೆಯಾಗಲಿದೆ.
    5. ಕನಸಿನ ಮನೆ ಇದ್ರೂ ಕಷ್ಟ: ದುಡ್ಡು ಕೂಡಿಟ್ಟು ಅಪಾರ್ಟ್‍ಮೆಂಟ್ ಖರೀದಿಸಿದ್ರೂ ಜಿಎಸ್‍ಟಿ ಬರೆ. ಮನೆ ನಿರ್ವಹಣಾ ವೆಚ್ಚ ತಿಂಗಳಿಗೆ 5 ಸಾವಿರ ದಾಟಿದ್ರೂ ಜಿಎಸ್‍ಟಿ ಬರೆ. 20 ಲಕ್ಷ ವೆಚ್ಚದ ಮನೆಗಳು ಜಿಎಸ್‍ಟಿ ವ್ಯಾಪ್ತಿಯಲ್ಲೇ ನೋಂದಣಿ.

    ಕನ್ನಡ ಸ್ಟಾರ್‍ಗಳಿಗೆ ಬಿಗ್ ಶಾಕ್!: ಜಿಎಸ್‍ಟಿ ಯಿಂದ ಕನ್ನಡದ ನಟ ನಟಿಯರಿಗೂ ಬಿಸಿ ತಟ್ಟಲಿದೆ. ನಟ ನಟಿಯರ ಸಂಭಾವನೆ ಮೇಲಿನ ತೆರಿಗೆ ಹೆಚ್ಚಳವಾಗಿದೆ.
    20 ಲಕ್ಷ ಸಂಭಾವನೆ- 5.60 ಲಕ್ಷ ತೆರಿಗೆ
    50 ಲಕ್ಷ ಸಂಭಾವನೆ- 14 ಲಕ್ಷ ತೆರಿಗೆ
    1 ಕೋಟಿ ಸಂಭಾವನೆ- 28 ಲಕ್ಷ ತೆರಿಗೆ
    2 ಕೋಟಿ ಸಂಭಾವನೆ- 56 ಲಕ್ಷ ತೆರಿಗೆ
    3 ಕೋಟಿ ಸಂಭಾವನೆ- 84 ಲಕ್ಷ ತೆರಿಗೆ
    4 ಕೋಟಿ ಸಂಭಾವನೆ- 1.02 ಕೋಟಿ ತೆರಿಗೆ
    5 ಕೋಟಿ ಸಂಭಾವನೆ- 1.30 ಕೋಟಿ ತೆರಿಗೆ

    ಯಾವುದೆಲ್ಲಾ ಏರಿಕೆ?

  • ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

    ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

    ಶ್ರೀನಗರ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ `ಏಕರಾಷ್ಟ್ರ, ಏಕ ತೆರಿಗೆ’ ಪರಿಕಲ್ಪನೆಯ ಜಿಎಸ್‍ಟಿಯ ಸೇವಾ ತೆರಿಗೆಯ ದರ ಅಂತಿಮಗೊಂಡಿದೆ. ನಾಲ್ಕು ಹಂತದಲ್ಲಿ ಜಿಎಸ್‍ಟಿ ದರ ಘೋಷಿಸಲಾಗಿದ್ದು, ಶೇ.5, 12, 18 ಹಾಗೂ 28ರಷ್ಟು ತೆರಿಗೆ ವಿಧಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎರಡನೇ ದಿನದ ಸಭೆಯಲ್ಲಿ ಅಂಕಿತ ಸಿಕ್ಕಿದೆ.

    ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದ್ದು, ಐಷಾರಾಮಿ ಜೀವನ ದುಬಾರಿಯಾಗಲಿದೆ. ಆದ್ರೆ, ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ. ಹೀಗಾಗಿ ಜೂನ್ 3ರಂದು ಮತ್ತೊಂದು ಸುತ್ತಿನ ಜಿಎಸ್‍ಟಿ ಸಭೆ ನಡೆಯಲಿದೆ.

    ಯಾವುದಕ್ಕೆ ಎಷ್ಟು ತೆರಿಗೆ?
    ರಸ್ತೆ, ರೈಲ್ವೇ ಸೇವೆಗಳ ಮೇಲೆ ಶೇ.5 ರಷ್ಟು ತೆರಿಗೆ (ಓಲಾ, ಉಬರ್ ಕ್ಯಾಬ್ ಸೇವೆಗಳಿಗೆ ಶೇ.5 ರಷ್ಟು ತೆರಿಗೆ) ವಿಧಿಸಲಾಗಿದ್ದರೆ, ಎಸಿ ಸೌಲಭ್ಯವಿಲ್ಲದ ಹೋಟೆಲ್‍ಗಳಲ್ಲಿ ಶೇ.12 ರಷ್ಟು ತೆರಿಗೆ ಹಾಕಲಾಗಿದೆ.

    1 ಸಾವಿರ ರೂ. ಬಾಡಿಗೆ ಇರುವ ಹೋಟೆಲ್‍ಗಳಿಗೆ ತೆರಿಗೆ ಇಲ್ಲ. ಆದರೆ 2,500 ರೂ. ನಿಂದ 5000 ರೂ. ಹೊಟೇಲ್ ಬಾಡಿಗೆ ಕೊಟ್ಟರೆ ಶೇ.12ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಫೈವ್‍ಸ್ಟಾರ್ ಹೋಟೆಲ್‍ಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗಿದ್ದು, 5 ಸಾವಿರ ರೂಪಾಯಿ ಮೇಲ್ಪಟ್ಟ ಹೋಟೆಲ್ ವ್ಯವಹಾರಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸಿಕ್ಕಿದೆ.

    ಸಿನಿಮಾ, ಜೂಜಿನ ಮೇಲೆ ಶೇ.28ರಷ್ಟು ತೆರಿಗೆ, ಹಣಕಾಸು, ದೂರಸಂಪರ್ಕದ ಮೇಲೆ ಶೇ.18ರಷ್ಟು ತೆರಿಗೆ, ಬ್ರಾಂಡೆಂಡ್ ಬಟ್ಟೆಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. ರೆಫ್ರಿಜರೇಟರ್, ಎಸಿ, ಟಿವಿ, ಕಾರ್ ಸೇರಿದಂತೆ ಐಷಾರಾಮಿ ವಸ್ತುಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯದ ಸೆಸ್ ರದ್ದು ಮಾಡಲಾಗಿದೆ.

    ಕನ್ನಡ ಸಿನಿಮಾ ಟಿಕೆಟ್ ರೇಟ್ ದುಬಾರಿ:
    ಜಿಎಸ್‍ಟಿ ಕಾಯ್ದೆಯಡಿ ಎಲ್ಲಾ ಭಾಷೆಯ ಚಿತ್ರಗಳಿಗೆ ಶೇ.28 ಏಕರೂಪ ಟ್ಯಾಕ್ಸ್ ವಿಧಿಸಲಾಗಿದೆ. ಇದರಿಂದಾಗಿ ಕನ್ನಡ ಚಿತ್ರ ವೀಕ್ಷಕರಿಗೆ ಹೊರೆಯಾಗಲಿದೆ ಏಕರೂಪ ಟ್ಯಾಕ್ಸ್. ಹಳೆಯ ತೆರಿಗೆಯ ನಿಯಮ ಪ್ರಕಾರ ಕನ್ನಡ ಚಿತ್ರಗಳಿಗೆ ಸರ್ಕಾರ ಮನರಂಜನಾ ತೆರಿಗೆ ವಿನಾಯ್ತಿ ನೀಡಿತ್ತು. ಇಲ್ಲಿವರೆಗೆ ಕನ್ನಡ ವೀಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಹಾಗೂ ಇತರೆ ಸೆಸ್ ಸೇರಿ ಶೇ. 17 ಟ್ಯಾಕ್ಸ್ ಮಾತ್ರ ನೀಡುತ್ತಿದ್ದರು. ಆದರೆ ಜಿಎಸ್‍ಟಿಯಿಂದ ಈಗ ಕನ್ನಡ ಹಾಗೂ ಎಲ್ಲಾ ಭಾಷೆಯ ಸಿನಿಮಾಗಳಿಗೆ ಶೇ.28 ಆಗಲಿದೆ. ಇದರ ಪರಿಣಾಮ ಕನ್ನಡ ಚಿತ್ರ ವೀಕ್ಷಕರಿಗೆ ಶೇ.10 ಶೇ.11 ತೆರಿಗೆ ಹೆಚ್ಚಾಗಲಿದೆ. ಪರಭಾಷೆ ಚಿತ್ರ ಪ್ರೇಕ್ಷಕರಿಗೆ ಶೇ.3 ರಿಂದ ಶೇ.5 ತೆರಿಗೆ ಕಡಿಮೆಯಾಗಲಿದೆ .

    ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಎಷ್ಟು ತೆರಿಗೆ ಇತ್ತು?
    ಇಲ್ಲಿಯವರೆಗೆ ಕನ್ನಡ ಸಿನಿಮಾಗಳಿಗೆ ಶೇ.100 ರಷ್ಟು ಮನರಂಜನಾ ತೆರಿಗೆ ಉಚಿತವಾಗಿದ್ದರೆ, ಕನ್ನಡೇತರ ಸಿನಿಮಾಗಳಿಗೆ ಶೇ.30 ತೆರಿಗೆ ವಿಧಿಸಲಾಗುತಿತ್ತು. ಪ್ರದರ್ಶನ ತೆರಿಗೆ ಕನ್ನಡ ಚಿತ್ರಗಳಿಗೆ 48 ರೂ. ಇದ್ದರೆ, ಕನ್ನಡೇತರ ಸಿನಿಮಾಗಳಿಗೆ 118 ರೂ. ಇತ್ತು. ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಸೇವಾ ಶುಲ್ಕ 3 ರೂ. ಮತ್ತು ಪ್ರತಿ ಟಿಕೆಟ್ ಗೆ 1 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತಿತ್ತು.

    ಪರಿಹಾರ ಏನು?
    ದಶಕಗಳಿಂದ ಕನ್ನಡ ಚಿತ್ರಗಳಿಗೆ ಇದ್ದ ಮನರಂಜನಾ ತೆರಿಗೆ ವಿನಾಯಿತಿ ಉಳಿಸಿಕೊಳ್ಳಲು ಪರಿಹಾರವೂ ಇದೆ. ಈ ವಿನಾಯ್ತಿ ಮತ್ತೆ ಬೇಕಾದರೆ ಮೋದಿ ಸರ್ಕಾರದ ಜಿಎಸ್‍ಟಿ ಕೌನ್ಸಿಲ್‍ಗೆ ರಜ್ಯ ಸರ್ಕಾರ ಮೊರೆ ಹೋಗಬೇಕು. ಜಿಎಸ್‍ಟಿ ಕೌನ್ಸಿಲ್‍ಗೆ ತೆರಿಗೆ ಮರುಪರಿಶೀಲನೆ ಮಾಡುವ ಅಧಿಕಾರವಿದೆ. ರಾಜ್ಯ ಸರ್ಕಾರವೂ ಕೂಡ ತಮ್ಮ ತೆರಿಗೆ ಆದಾಯದಿಂದ ರೀಫಂಡ್ ಮಾಡುವ ಅವಕಾಶವಿದೆ.

    ಇದನ್ನೂ ಓದಿ: ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಯಾವುದು ಅಗ್ಗ? ಯಾವುದು ದುಬಾರಿ?