Tag: ಸೇಲ್ಸ್ ಮ್ಯಾನ್

  • ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ- ಉಗ್ರರ ಗುಂಡಿನ ದಾಳಿಗೆ ಸೇಲ್ಸ್ ಮ್ಯಾನ್ ಬಲಿ

    ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ- ಉಗ್ರರ ಗುಂಡಿನ ದಾಳಿಗೆ ಸೇಲ್ಸ್ ಮ್ಯಾನ್ ಬಲಿ

    ಶ್ರೀನಗರ: ಸೇಲ್ಸ್ ಮ್ಯಾನ್ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮೊಹಮ್ಮದ್ ಇಬ್ರಾಹಿಂ ಖಾನ್ ಎಂದು ಗುರುತಿಸಲಾಗಿದ್ದು, ಇವರು ಬಂಡಿಪೋರಾದ ನಿವಾಸಿಯಾಗಿದ್ದಾರೆ. ಗುಂಡಿನ ದಾಳಿ ನಂತರ ಮೊಹಮ್ಮದ್ ಇಬ್ರಾಹಿಂ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮೊಹಮ್ಮದ್ ಇಬ್ರಾಹಿಂ ಖಾನ್ ಅವರು ಫಾರ್ಮಸಿಯೊಂದರ ಸೇಲ್ಸ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ ಉಗ್ರರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಇದನ್ನೂ ಓದಿ: ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    ಈ ಮುನ್ನ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಟಮಾಲೂ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಒಳಗಾಗಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡು ಸಾವನ್ನಪ್ಪಿದ್ದರು. ಮೃತರನ್ನು ಎಸ್‍ಡಿ ಕಾಲೋನಿ ಪ್ರದೇಶದಲ್ಲಿ ಕಾನ್‍ಸ್ಟೆಬಲ್ ತೌಸೀಫ್ ಎಂದು ಗುರುತಿಸಲಾಗಿತ್ತು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣಾ ಸಾವು

    ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ, ಭಯೋತ್ಪಾದಕರು ಜೆಕೆಪಿ ಕಾನ್‍ಸ್ಟೆಬಲ್ ತೌಸಿಫ್ ಅಹ್ಮದ್ ಅವರ ನಿವಾಸದ ಬಳಿ ಬಟಮಾಲೂ ಎಸ್‍ಡಿ ಕಾಲೋನಿಯಲ್ಲಿ ಗುಂಡು ಹಾರಿಸಿದ್ದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.