Tag: ಸೇನಾ ಹೆಲಿಕಾಪ್ಟರ್

  • ಪ್ರವಾಹದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್‌ ಸಿಬ್ಬಂದಿ ರಕ್ಷಿಸಿದ ಸೇನಾ ಹೆಲಿಕಾಪ್ಟರ್‌

    ಪ್ರವಾಹದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್‌ ಸಿಬ್ಬಂದಿ ರಕ್ಷಿಸಿದ ಸೇನಾ ಹೆಲಿಕಾಪ್ಟರ್‌

    ಛತ್ತೀಸಗಢ: ಪಂಜಾಬ್‌ನ (Punjab) ಪಠಾಣ್‌ಕೋಟ್ ಜಿಲ್ಲೆಯ ಮಾಧೋಪುರ್ ಹೆಡ್‌ವರ್ಕ್ಸ್ ಬಳಿ ಬುಧವಾರ ಭಾರತೀಯ ಸೇನಾ ಹೆಲಿಕಾಪ್ಟರ್‌ ರಕ್ಷಣಾ ಕಾರ್ಯಾಚರಣೆ ನಡೆಸಿತು. ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 22 ಸಿಆರ್‌ಪಿಎಫ್ ಸಿಬ್ಬಂದಿ (CRPF Personnel) ಮತ್ತು ಮೂವರು ನಾಗರಿಕರನ್ನು ರಕ್ಷಿಸಿತು.

    ಸವಾಲಿನ ಹವಾಮಾನದ ಹೊರತಾಗಿಯೂ ರಕ್ಷಣಾ ಕಾರ್ಯ ಕೈಗೊಳ್ಳಲು ಬುಧವಾರ ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಯಿತು. ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಎಲ್ಲರನ್ನೂ ಯಶಸ್ವಿಯಾಗಿ ಸ್ಥಳಾಂತರಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ ಎಂದು ಸೇನೆಯು ತಿಳಿಸಿದೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭೂಕುಸಿತ – ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಸ್ಥಳಾಂತರಿಸಿದ ಸ್ವಲ್ಪ ಸಮಯದ ನಂತರ ಸಿಬ್ಬಂದಿ ಆಶ್ರಯ ಪಡೆದಿದ್ದ ಕಟ್ಟಡ ಕುಸಿದು ಬಿದ್ದಿದೆ. ಸಮಯೋಚಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಿಂದ ಎಲ್ಲರೂ ಬಚಾವ್‌ ಆಗಿದ್ದಾರೆ.

    ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್, ಉಜ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿವೆ. ಪಠಾಣ್‌ಕೋಟ್, ಹೋಶಿಯಾರ್‌ಪುರ, ಗುರುದಾಸ್ಪುರ್, ಕಪುರ್ತಲಾ, ಫಜಿಲ್ಕಾ, ತರಣ್ ತರಣ್ ಮತ್ತು ಫಿರೋಜ್‌ಪುರ ಸೇರಿದಂತೆ ಪಂಜಾಬ್ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದನ್ನೂ ಓದಿ: ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ

    ಹೆಚ್ಚುವರಿ ಜಿಲ್ಲಾಧಿಕಾರಿ ಹರ್ದೀಪ್ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯಿಂದಾಗಿ ಪಠಾಣ್‌ಕೋಟ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಪಠಾಣ್‌ಕೋಟ್‌ನಲ್ಲಿರುವ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್ ಅನ್ನು ಸ್ಥಳಾಂತರಿಸುವ ಕೇಂದ್ರವೆಂದು ನಾವು ಗುರುತಿಸಿದ್ದೇವೆ. ನಾವು ಜನರನ್ನು ಸ್ಥಳಾಂತರಿಸುತ್ತೇವೆ. ಆಹಾರಕ್ಕಾಗಿ ಸರಿಯಾದ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ವಾಷಿಂಗ್ಟನ್: ಸೇನಾ ಹೆಲಿಕಾಪ್ಟರ್‌ – ಅಮೆರಿಕರ ವಿಮಾನದ ನಡುವಿನ ದುರಂತದಲ್ಲಿ (Plane Helicopter Collision) ಎಲ್ಲಾ 64 ಮಂದಿ ದುರ್ಮರಣಕ್ಕೀಡಾಗಿದ್ದು, ಈವರೆಗೆ 28 ಮೃತದೇಹಗಳನ್ನು ಪೊಟೊಮ್ಯಾಕ್ ನದಿಯಿಂದ (Potomac River) ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

    ಅಮೆರಿಕದ (America) ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ (Reagan National Airport) ಬಳಿ ದುರಂತ ನಡೆದಿದೆ. ಈ ವೇಳೆ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್-5342ರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 64 ಮಂದಿ ಸಾವನ್ನಪ್ಪಿದ್ದು, ಈವರೆಗೆ 28 ಮೃತದೇಹಳನ್ನು ಹೊರತೆಗೆಯಲಾಗಿದೆ. ಭೀಕರ ದುರಂತದಲ್ಲಿ ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: AI ರಂಗದಲ್ಲಿ ಡೀಪ್‌ಸೀಕ್ ಸಂಚಲನ – ಅಮೆರಿಕ ಷೇರುಪೇಟೆ ಶೇಕ್!

    ಸದ್ಯ ನದಿಯಲ್ಲಿ ಉಳಿದ ಮೃತದೇಹಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಆದ್ರೆ ಮಿಲಿಟರಿ ಬ್ಲಾಕ್‌ ಹಾಕ್ ಹೆಲಿಕಾಪ್ಟರ್‌ನಲ್ಲಿ ಮೂವರು ಸೈನಿಕರಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಅಪಘಾತ ಸಂಭವಿಸಿದ್ದು ಹೇಗೆ?
    ದುರಂತಕ್ಕೀಡಾದ ಅಮೆರಿಕನ್‌ ಏರ್‌ಲೈನ್ಸ್‌ (American Airlines) ವಿಮಾನವು ಕಾನ್ಸಾಸ್‌ನಿಂದ ಡಿ.ಸಿ.ಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬುಧವಾರ ತಡರಾತ್ರಿ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

  • ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

    ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

    ವಾಷಿಂಗ್ಟನ್: ಸೇನಾ ಹೆಲಿಕಾಪ್ಟರ್‌ಗೆ (Military Helicopter) ಪ್ರಯಾಣಿಕರಿದ್ದ ವಿಮಾನವೊಂದು (Flight) ಡಿಕ್ಕಿ ಹೊಡೆದು ನದಿಗೆ ಬಿದ್ದ ಪರಿಣಾಮ 18 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ (America) ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ (Reagan National Airport )ಬಳಿ ನಡೆದಿದೆ.

    ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಪೋಟೋಮ್ಯಾಕ್ ನದಿಗೆ ವಿಮಾನ ಬಿದ್ದಿದೆ. ಸದ್ಯ ನದಿಯಿಂದ ವಿಮಾನದಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಿದ್ದು, 18 ಮಂದಿಯ ಮೃತದೇಹಗಳನ್ನು ಮೇಲೆತ್ತಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಪುಡಿ ರೌಡಿಯ ಕಾಟ | ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ

    ಅಪಘಾತಕ್ಕೀಡಾದ ವಿಮಾನವು 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಕಾನ್ಸಾಸ್‌ನಿಂದ ಡಿ.ಸಿ.ಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬುಧವಾರ ತಡರಾತ್ರಿ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹೇಮಾವತಿ ನದಿಗೆ ಬಿದ್ದ ವಿದ್ಯಾರ್ಥಿ – ಪ್ರಾಣಾಪಾಯದಿಂದ ಪಾರು

  • Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    ಕೋಲಾರ: ಭಾರತೀಯ ವಾಯಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Fault) ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊಲಾರದಲ್ಲಿ ತುರ್ತು ಭೂಸ್ಪರ್ಶವಾಗಿದೆ.

    ಕೋಲಾರ (Kolara) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ ಕೆರೆಯಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ವಾಯುಸೇನೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಒರ್ವ ಮಹಿಳಾ ಪೈಲಟ್ ಸೇರಿದಂತೆ ಮೂವರು ಸೇಫ್‌ ಆಗಿದ್ದಾರೆ. ಇದನ್ನೂ ಓದಿ: ತೆಲಂಗಾಣ| 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸಂತ್ರಸ್ತೆ ಕುಟುಂಬಸ್ಥರಿಂದ ಆರೋಪಿ ಮನೆ, ಕಾರಿಗೆ ಬೆಂಕಿ

    ಕರಪನಹಳ್ಳಿ ಗ್ರಾಮದ ಬಳಿ ಇರುವ ಕೆರೆ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದ ಹೆಲಿಕಾಪ್ಟರ್ ನೋಡಲು ಜನರು ನಾ ಮುಂದು ತಾ ಮುಂದು ಎಂದು ಮುಂದಾಗಿದ್ದು, ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಂಗಾರಪೇಟೆ ಪೊಲೀಸರ ಜಮಾವಣೆಯಾಗಿದ್ದಾರೆ. ಸದ್ಯ ವಾಯು ಪಡೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಂಪುಟ ಪುನರ್‌ರಚನೆ – ಮತ್ತೆ ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರಿನ ಯಲಹಂಕ ಏರ್‌ ಇಂಡಿಯಾಗೆ ಸೇರಿದ ಈ ಹೆಲಿಕಾಪ್ಟರ್‌ ತರಬೇತಿ ನಿಮಿತ್ತ ಕೋಲಾರದ ಕೆಜಿಎಫ್ ಹಾಗೂ ಬಂಗಾರಪೇಟೆ ಸುತ್ತಮುತ್ತ ಹಾರಾಟ ನಡೆಸುತಿತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ತಂತ್ರಜ್ಞರ ತಂಡ ಬಂದ ಬಳಿಕ ತಾಂತ್ರಿಕ ದೋಷ ಸರಿಪಡಿಸಲಿದ್ದಾರೆ. ಬಳಿಕ ಇಲ್ಲಿಂದ ಹೆಲಿಕಾಪ್ಟರ್ ವಾಪಸ್ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    ಇನ್ನೂ ಸ್ಥಳದಲ್ಲಿ ಹೆಲಿಕಾಪ್ಟರ್ ನೋಡಲು ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದು, ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸೇನಾ ಹೆಲಿಕಾಪ್ಟರ್ ಆಗಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

  • ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್‌ ಪತನ – ನಾಲ್ವರು ಸಿಬ್ಬಂದಿ ನಾಪತ್ತೆ

    ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್‌ ಪತನ – ನಾಲ್ವರು ಸಿಬ್ಬಂದಿ ನಾಪತ್ತೆ

    ಕ್ಯಾನ್ಬೆರಾ: ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ (Australia Chopper Crash) ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

    ಯುನೈಟೆಡ್‌ ಸ್ಟೇಟ್ಸ್‌ನೊಂದಿಗೆ ಆಸ್ಟ್ರೇಲಿಯಾದ ಹೆಲಿಕಾಪ್ಟರ್‌ ಜಂಟಿ ಕಾರ್ಯಾಚರಣೆ ನಡೆಸುತ್ತಿತ್ತು. ಶುಕ್ರವಾರ ರಾತ್ರಿ 10:30 ರ ಹೊತ್ತಿಗೆ MRH-90 ತೈಪಾನ್ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರೂ ಆಸ್ಟ್ರೇಲಿಯದವರು. ಈ ಅಪಘಾತ ನಿಜಕ್ಕೂ ಭಯಾನಕ ಕ್ಷಣವಾಗಿದೆ. ಕಣ್ಮರೆಯಾದ ಸಿಬ್ಬಂದಿ ಕುಟುಂಬದವರಿಗೆ ಈ ಘಟನೆಯ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ವಿವಿಧ ನಾಗರಿಕ ಏಜೆನ್ಸಿಗಳು, ಕ್ವೀನ್‌ಲ್ಯಾಂಡ್‌ ಪೊಲೀಸ್‌, ಆಸ್ಟ್ರೇಲಿಯನ್‌ ಮಾರಿಟೈಮ್‌ ಸೇಫ್ಟಿ ಏಜೆನ್ಸಿ, ಯುಎಸ್‌ ಮಿಲಿಟರಿ ಸಿಬ್ಬಂದಿ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಮಾರ್ಲ್ಸ್‌ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಚೀನಾ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ವರದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಪತನವಾಗಿರುವ ಆಘಾತಕಾರಿ ಘಟನೆ ಗುರುವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವರ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮಚ್ನಾ ಗ್ರಾಮದ ಬಳಿ ಸೇನೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದ ವೇಳೆ ಹೆಲಿಕಾಪ್ಟರ್‌ನಲ್ಲಿ ಮೂರು ಮಂದಿ ಇದ್ದರು ಎನ್ನಲಾಗಿದೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ

    ಹೆಲಿಕಾಪ್ಟರ್ ಪತನದಿಂದಾಗಿ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ 2 ತಿಂಗಳಲ್ಲಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಅಪಘಾತವಾಗಿರುವ 3ನೇ ಘಟನೆ ಇದಾಗಿದೆ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

  • ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ – ಮುಂದೇನಾಯ್ತು?

    ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ – ಮುಂದೇನಾಯ್ತು?

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ ಹೆಲಿಪ್ಯಾಡ್‌ನಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಮೋದಿ ಭದ್ರತೆಗಾಗಿ ಬಂದಿದ್ದ ಸೇನಾ ಹೆಲಿಕಾಪ್ಟರ್‌ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡ ಘಟನೆ ರಾಯಚೂರಿನಲ್ಲಿ (Raichuru) ನಡೆಯಿತು.

    ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆಯಿತು. ಮೋದಿ ಭದ್ರತೆಗೆ ಬಂದಿದ್ದ 3ನೇ ಹೆಲಿಕಾಪ್ಟರ್‌ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡಿತ್ತು. ಮಳೆಯಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಹೆಲಿಪ್ಯಾಡ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಸಿಲುಕಿಕೊಂಡಿತ್ತು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

    ಹೆಲಿಕ್ಯಾಪ್ಟರ್ ಮೇಲೆತ್ತಲು ಸಿಬ್ಬಂದಿ ಹರಸಾಹಸಪಟ್ಟರು. ನಂತರ ಜೆಸಿಬಿ‌ ಮೂಲಕ ಹೆಲಿಕಾಪ್ಟರ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಭದ್ರತಾ ಸಿಬ್ಬಂದಿ ಸಹ ಅಲ್ಲೇ ಸಿಲುಕಿಕೊಂಡಿದ್ದರು.

    ಮತ್ತೆರಡು ಹೆಲಿಕಾಪ್ಟರ್‌ಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ಸಿಬ್ಬಂದಿಯನ್ನು ಕರೆದುಕೊಂಡು ಹೋದವು. ಈ ಸಂದರ್ಭದಲ್ಲಿ ಮೋದಿ ಅವರು ಬಂದಿದ್ದ ಹೆಲಿಕಾಪ್ಟರ್‌, ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಸುತ್ತ ಸುತ್ತು ಹಾಕಿತು. ಇನ್ನೆರಡು ಹೆಲಿಕಾಪ್ಟರ್‌ ಹಾರಾಟ ನಡೆಸುವವರೆಗೂ ಇದು ಸುತ್ತು ಹಾಕಿತ್ತು. ಇದನ್ನೂ ಓದಿ: ಸಿಎಂ ಆರ್‌.ಗುಂಡೂರಾವ್‌ ಸೋಲಿಸಿದ್ದ ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

    ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೇ ಮೇ 10 ರಂದು ಮತದಾನ ನಡೆಯಲಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ರೋಡ್‌ಶೋ, ಸಮಾವೇಶ, ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.

  • ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಇಟಾನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಶುಕ್ರವಾರ ಅರುಣಾಚಲ ಪ್ರದೇಶದ (Arunachal Pradesh) ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದಲ್ಲಿ ಪತನಗೊಂಡಿದೆ (Helicopter Crash). ಅಪಘಾತ ನಡೆದಿರುವ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ.

    ಇಂದು ಪತನವಾಗಿರುವ ಹೆಲಿಕಾಪ್ಟರ್ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ತಯಾರಿಸಿದೆ. ರುದ್ರ ಎಂದು ಕರೆಯಲಾಗುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಮಿಗ್ಗಿಂಗ್ ಗ್ರಾಮದಲ್ಲಿ ಪತನವಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ವರದಿಗಳ ಪ್ರಕಾರ ಘಟನೆ ನಡೆದಿರುವ ಸ್ಥಳದಲ್ಲಿ ಅನುಕೂಲಕರ ರಸ್ತೆ ಸಂಪರ್ಕ ಇಲ್ಲ ಎನ್ನಲಾಗಿದೆ. ಇದೀಗ ಶೋಧ ನಡೆಸಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

    Live Tv
    [brid partner=56869869 player=32851 video=960834 autoplay=true]

  • ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು

    ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು

    ನೈಪಿಡಾವ್: ಮ್ಯಾನ್ಮಾರ್‌ನ (Myanmar) ಶಾಲೆಯೊಂದರ ಮೇಲೆ ಸೇನಾ ಹೆಲಿಕಾಪ್ಟರ್‌ಗಳು (Army Helicopters) ಗುಂಡಿನ ದಾಳಿ ನಡೆಸಿದ ಪರಿಣಾಮ ಏಳು ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ.

    ಶುಕ್ರವಾರ ಸೆಂಟ್ರಲ್ ಸಾಗಯಿಂಗ್ ಪ್ರದೇಶದ (Central Sagaing Region( ಲೆಟ್ ಯೆಟ್ ಕೋನ್ (Let Yet Kone) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬೌದ್ಧ ವಿಹಾರದಲ್ಲಿದ್ದ (Buddhist Monastery) ಶಾಲೆಯ ಮೇಲೆ ಸೇನಾ ಹೆಲಿಕಾಪ್ಟರ್‌ಗಳು ಗುಂಡಿನ ದಾಳಿ ನಡೆಸಿವೆ. ಈ ವೇಳೆ ಘಟನೆಯಲ್ಲಿ ಕೆಲವು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇತರರು ಸೇನಾ ಪಡೆಗಳು ಗ್ರಾಮಕ್ಕೆ ಪ್ರವೇಶಿಸಿದ ನಂತರ ಸಾವನ್ನಪ್ಪಿದ್ದಾರೆ. ನಂತರ ಶವಗಳನ್ನು ಮಿಲಿಟರಿಯಿಂದ 11 ಕಿಲೋಮೀಟರ್ ದೂರದಲ್ಲಿರುವ ಟೌನ್‍ಶಿಪ್‍ಗೆ ಸಾಗಿಸಿ ಸಮಾಧಿ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    2020ರ ಫೆಬ್ರವರಿ 1 ರಂದು ನಡೆದ ದಂಗೆಯ ನಂತರ ಮ್ಯಾನ್ಮಾರ್ ಮಿಲಿಟರಿ ಜುಂಟಾ, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಮಿಲಿಟರಿ ಆಡಳಿತವನ್ನು ವಿರೋಧಿಸುವವರನ್ನು ಹತ್ತಿಕ್ಕಲು ಮ್ಯಾನ್ಮಾರ್‌ ಜುಂಟಾ ರಾಷ್ಟ್ರವ್ಯಾಪಿ (Junta’s Systematic) ದಮನ ಕಾರ್ಯಾಚರಣೆ ನಡೆಸುತ್ತಿದೆ. ಸಾಮೂಹಿಕ ಹತ್ಯೆಗಳು, ಚಿತ್ರಹಿಂಸೆ, ಅನಿಯಂತ್ರಿತ ಬಂಧನ ಮತ್ತು ನಾಗರಿಕರ ಮೇಲೆ ವಿವೇಚನಾರಹಿತ ದಾಳಿಗಳು ಸೇರಿದಂತೆ ಜುಂಟಾದ ವ್ಯವಸ್ಥಿತ ಮತ್ತು ವ್ಯಾಪಕ ದಾಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳು. ಇದು ಯುದ್ಧಾಪರಾಧಗಳಿಗೆ ಸಮನಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಆರೋಪಿಸಿದೆ.

    ಫೆಬ್ರವರಿಯಲ್ಲಿ ನಡೆದ ದಂಗೆಯ ನಂತರ ಭದ್ರತಾ ಪಡೆಗಳು ಇಲ್ಲಿಯವರೆಗೂ ಸುಮಾರು 1,600 ಜನರನ್ನು ಕೊಂದಿವೆ. 12,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿವೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಸಿಡಿಲಿಗೆ 11 ಮಂದಿ ಬಲಿ – ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ

    ಶ್ರೀನಗರ: ಉತ್ತರ ಕಾಶ್ಮೀರದ ಬಂಡೀಪೊರಾದಲ್ಲಿ ಸೇನಾ ಚೀತಾ ಹೆಲಿಕಾಪ್ಟರ್ ಪತನವಾಗಿದೆ. ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಿದ್ದ ಪೈಲಟ್ ಹಾಗೂ ಸಹ ಪೈಲಟ್ ಅನ್ನು ರಕ್ಷಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೇನಾ ಚೀತಾ ಹೆಲಿಕಾಪ್ಟರ್ ಗುರೆಜ್ ಕಣಿವೆಯ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಪತನಗೊಂಡಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು

    ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಸಹ ಪೈಲಟ್ ಇಬ್ಬರನ್ನೂ ಘಟನಾ ಸ್ಥಳದಿಂದ ರಕ್ಷಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದ್ದು, 92 ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತನ್ನದೇ ದಾಖಲೆ ಮುರಿದು ಗಿನ್ನಿಸ್ ದಾಖಲೆ ಬರೆದ ಲಿಮೋಸಿನ್ ಕಾರು