Tag: ಸೇನಾ ಸಿಬ್ಬಂದಿ

  • ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

    ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

    ತಿರುವನಂತಪುರಂ: ಸೇನಾ ಸಿಬ್ಬಂದಿಯೊಬ್ಬರ (Army Personnel) ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿ ಬಳಿಕ ಬೆನ್ನಿನಲ್ಲಿ ಪಿಎಫ್‍ಐ (PFI) ಎಂದು ಕಿಡಿಗೇಡಿಗಳು ಬರೆದ ಘಟನೆಯೊಂದು ಕೇರಳದಲ್ಲಿ (Kerala) ಬೆಳಕಿಗೆ ಬಂದಿದೆ.

    ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಸೇನಾ ಸಿಬ್ಬಂದಿಯು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

    ಹಲ್ಲೆಗೊಳಗಾದ ಸೇನಾ ಸಿಬ್ಬಂದಿಯನ್ನು ಶೈನ್ ಕುಮಾರ್ ಎಂದು ಗುರುತಿಸಲಾಗಿದೆ. ಇವರ ನಿವಾಸ ಕಡಕ್ಕಲ್ ಹತ್ತಿರದ ರಬ್ಬರ್ ತೋಟದಲ್ಲಿ 6 ಜನರಿದ್ದ ಗುಂಪು ಭಾನುವಾರ ರಾತ್ರಿ ಈ ಕೃತ್ಯ ಎಸಗಿದೆ. ಟೇಪ್‍ನಿಂದ ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಥಳಿಸಿ ಬಳಿಕ ಬೆನ್ನಲ್ಲಿ ಹಸಿರು ಬಣ್ಣ ಪೈಂಟ್‍ನಲ್ಲಿ ಪಿಎಫ್‍ಐ ಎಂದು ಬರೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್ಚಿನ ಹಣ ಕೊಡಲು ನಿರಾಕರಿಸಿದ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುಷ್ಕರ್ಮಿಗಳು

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ನಿಷೇಧಿತ ಪಿಎಫ್‍ಐ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇರಳದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ದಿನ ಈ ಘಟನೆ ವರದಿಯಾಗಿದೆ. ಎರ್ನಾಕುಲಂ, ಮಲಪ್ಪುರಂ, ವಯನಾಡ್ ಮತ್ತು ತ್ರಿಶೂರ್ ಸೇರಿದಂತೆ ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಆರಂಭವಾದ ದಾಳಿಗಳು ಸಿಆರ್‍ಪಿಎಫ್ ಮತ್ತು ಕೇರಳ ಪೊಲೀಸ್ ಸಿಬ್ಬಂದಿಯ ನೆರವಿನೊಂದಿಗೆ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ

    ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‍ಕೌಂಟರ್‌ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಭಯೋತ್ಪಾದಕರಿದ್ದ ಕುಲ್ಗಾಮ್ ಸ್ಥಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ಪ್ರಾರಂಭಿಸಿದೆ. ಈ ವೇಳೆ 34 ಆರ್‌ಆರ್‌ನ  ಸೇನಾ ಯೋಧ ಜೈ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2 ಲಡಾಖ್ ಪರ್ವತವನ್ನು ಹತ್ತಿದ 13 ವರ್ಷದ ಪೋರ  

    ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಯರಿಪೋರಾದ ಬ್ರೈಹಾರ್ಡ್ ಕಥ್ಪೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಯಿತು. ಈ ವೇಳೆ 2 ರಿಂದ 3 ಉಗ್ರರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

    ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

    ಪಣಜಿ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

    ಪುಣೆ ಮೂಲದ ಸೇನಾ ಸಿಬ್ಬಂದಿಯೊಬ್ಬರು ರಜೆಗೆಂದು ಗೋವಾ ಪ್ರವಾಸ ಕೈಗೊಂಡಿದ್ದರು. ಹೀಗೆ ದಕ್ಷಿಣ ಗೋವಾ ಜಿಲ್ಲೆಯ `ಕಬೋ ಡ ರಾಮ ಕೋಟೆ’ಯ ಬಳಿ ನಡೆದು ಸಾಗುವಾಗ ಕಾಲು ಜಾರಿ ಸಮುದ್ರದಕ್ಕೆ ಬಿದ್ದಿದ್ದಾರೆ. ಬೀಚ್‍ಗಳಲ್ಲಿ ಜನರು ಸಮುದ್ರಪಾಲಾದರೆ ಅವರ ರಕ್ಷಣೆ ಮಾಡಲೆಂದೇ `ದೃಷ್ಟಿ ಲೈಫ್ ಸೇವಿಂಗ್ ಸಂಸ್ಥೆ’ಯು ಲೈಫ್ ಗಾರ್ಡ್ ಗಳನ್ನು ನೇಮಿಸಿದೆ. ಈ ವೇಳೆ ಸೇನಾ ಸಿಬ್ಬಂದಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿರುವುದನ್ನ ಕಂಡ ಲೈಫ್ ಗಾರ್ಡ್ ಸಿಬ್ಬಂದಿ ಅವರನ್ನು ರಕ್ಷಿಸಲು ತಕ್ಷಣವೇ ನೀರಿಗೆ ಹಾರಿದ್ದಾರೆ. ಆದರೆ ಅಲೆಗಳ ಸೆಳೆತ ಹೆಚ್ಚಾಗಿದ್ದರಿಂದ ಅವರನ್ನು ಆ ಕ್ಷಣ ರಕ್ಷಿಸಲು ಸಾಧ್ಯವಾಗಲಿಲ್ಲ.

    ಬಳಿಕ ಕೋಸ್ಟಲ್ ಗಾರ್ಡ್ ಹೆಲಿಕಾಪ್ಟರನ್ನು ಸ್ಥಳಕ್ಕೆ ಕರೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಸಮುದ್ರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸೇನಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ. ನಂತರ ಅವರನ್ನು ಹತ್ತಿರದ ಕೋಸ್ಟಲ್ ಗಾರ್ಡ್ ಏರ್ ಎನ್‍ಕ್ಲೇವ್‍ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಆ ಮೇಲೆ ಹೆಚ್ಚಿನ ಚಿಕಿತ್ಸೆಗಾಗಿ ಐನ್‍ಎಸ್‍ಹೆಚ್ ಜೀವಂತಿ ಆಸ್ಪತ್ರೆಗೆ ಅವರನ್ನು ರವಾನಿಸಲಾಯಿತು.

    ಸೇನಾ ಸಿಬ್ಬಂದಿಯನ್ನು ಸಮುದ್ರದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸೇನಾ ಸಿಬ್ಬಂದಿ ಅಲೆಗಳ ಹೊಡೆತಕ್ಕೆ ತತ್ತರಿಸಿ ತನ್ನ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲೆಗಳ ಸೆಳೆತ ಜೋರಾಗಿದ್ದ ಕಾರಣಕ್ಕೆ ರಕ್ಷಣಾ ಕಾರ್ಯ ತುಸು ಕಷ್ಟವಾದರೂ ಕೋಸ್ಟ್ ಗಾರ್ಡ್ ಗಳು ಒಂದು ಜೀವವನ್ನು ಉಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಗೋವಾದ ಬೀಚ್‍ಗಳಲ್ಲಿ ಕೊಚ್ಚಿ ಹೋಗಿದ್ದ ಮೂವರು ಪ್ರವಾಸಿಗರನ್ನು ಬುಧುವಾರದಂದು ಕೋಸ್ಟ್ ಗಾರ್ಡ್‍ಗಳು ರಕ್ಷಿಸಿದ್ದಾರೆ.