Tag: ಸೇನಾಪಡೆ

  • ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಢಾಕಾ: ಸತತ ಸುರಿಯುತ್ತಿರುವ ಮುಂಗಾರು ಮಳೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ 25 ಮಂದಿ ಸಾವನ್ನಪ್ಪಿದ್ದು, 40 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತೀವ್ರ ಮಳೆಯ ಕಾರಣ ಬಾಂಗ್ಲಾ ದೇಶಾದ್ಯಂತ ಪ್ರೌಢಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಾಲಾ ತರಗತಿ ಕೊಠಡಿಗಳಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ದೇಶದ ಈಶಾನ್ಯ ಭಾಗವು ಬಹುತೇಕ ನೀರಿನಿಂದ ಆವೃತ್ತವಾಗಿದೆ. ವಾರಾಂತ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಅವರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಸೇನಾ ಪಡೆಗಳನ್ನು ರವಾನಿಸಿದೆ. ಇದನ್ನೂ ಓದಿ: ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ

    ಕೆಲ ಹಳ್ಳಿಗಳು ಕೆಲ ಗಂಟೆಗಳಲ್ಲೇ ಮುಳುಗಿ ಹೋಗಿದ್ದು, ಶಾಲೆಗಳನ್ನೇ ಆಶ್ರಯತಾಣವಾಗಿ ಮಾಡಿಕೊಳ್ಳಲಾಗಿದೆ. ಕೆಲವರು ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಂಡರೆ, ಇನ್ನೂ ಕೆಲವರು ನೀರಿನ ದಡದಲ್ಲೇ ಪ್ರಾಣ ಉಳಿಸಿಕೊಳ್ಳಲು ತವಕಿಸುತ್ತಿದ್ದಾರೆ.  ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಹಳ್ಳಿ-ಹಳ್ಳಿಗಳನ್ನು ಸುತ್ತುವರಿದಿರುವ ನೀರಿನಿಂದಾಗಿ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಕಾರ್ಯಾಚರಣೆಗೆ ಇಳಿದಿರುವ ಸೇನೆಯು ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುತ್ತಿದೆ. ನಿನ್ನೆ ಒಂದೇ ದಿನ 21 ಮಂದಿ ಮೃತಪಟ್ಟಿದ್ದು, ಈವರೆಗೆ 25 ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    Live Tv

  • ಮ್ಯಾನ್ಮಾರ್‌ ಸೇನಾ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 30 ಮಂದಿ ಬಲಿ – ಸುಟ್ಟು ಕರಕಲಾದ ದೇಹಗಳು

    ಮ್ಯಾನ್ಮಾರ್‌ ಸೇನಾ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 30 ಮಂದಿ ಬಲಿ – ಸುಟ್ಟು ಕರಕಲಾದ ದೇಹಗಳು

    ಮ್ಯಾನ್ಮಾರ್‌: ಸಂಘರ್ಷ ಪೀಡಿತ ಕಯಾಹ್‌ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅವರ ದೇಹಗಳು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿವೆ.

    ಮ್ಯಾನ್ಮಾರ್‌ ಸೇನಾ ನಿಯಂತ್ರಣದಲ್ಲಿದೆ. ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಹಿರಿಯರು, ಮಹಿಳೆಯರು, ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ. ಕರೆನ್ನಿ ಮಾನವ ಹಕ್ಕುಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಜನರನ್ನು ಅಮಾನವೀಯವಾಗಿ ಸುಟ್ಟು ಕೊಂದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    ಅಪರಿಚಿತ ಉಗ್ರರನ್ನು ಹತ್ಯೆ ಮಾಡಿದ್ದೇವೆ. ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಏಳು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ನಾವು ಹೇಳಿದರೂ ವಾಹನಗಳನ್ನು ನಿಲ್ಲಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಗುಂಡಿನ ದಾಳಿ ನಡೆಸಲಾಯಿತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಮ್ಯಾನ್ಮಾರ್‌ ಮಿಲಿಟರಿಯು ಥಾಯ್‌ ಗಡಿ ಸಮೀಪದಲ್ಲಿ ಬಂಡುಕೋರರ ಗುಂಪಿನೊಂದಿಗೆ ಘರ್ಷಣೆ ನಡೆಸುತ್ತಿದೆ. ದಾಳಿ ವೇಳೆ ರಾಕೆಟ್‌ ಚಾಲಿತ ಗ್ರೆನೇಡ್‌ಗಳು ದಾರಿ ತಪ್ಪಿ ನಾಗರಿಕರ ಕೆಲವು ಮನೆಗಳನ್ನು ಹಾನಿಗೊಳಿಸಿವೆ ಎಂದು ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್

    ಕೆಲ ದಿನಗಳಿಂದ ಮ್ಯಾನ್ಮಾರ್‌ ಗಡಿ ಭಾಗಗಳಲ್ಲಿ ಮಿಲಿಟರಿ ದಾಳಿ ವ್ಯಾಪಕವಾಗಿದೆ. ಇದರಿಂದ ಜನವಸತಿಗಳಿಗೆ ಸಮಸ್ಯೆಯಾಗುತ್ತಿದ್ದು, ಜನರು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ.

  • 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಬಂದ ಸೇನಾಪಡೆ

    4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಬಂದ ಸೇನಾಪಡೆ

    ಚಿಕ್ಕಮಗಳೂರು: ಗುಡ್ಡ ಕುಸಿತದಿಂದ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ರಕ್ಷಣೆ ಮಾಡಿ, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಸಾಗಿ ರಕ್ಷಿಸಿದೆ.

    ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿತ್ತು. ಹೀಗಾಗಿ ಮನೆಯಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗಲು ಆಗದೇ ಕಂಗಾಲಾಗಿದ್ದರು. ಕಳೆದ 6 ದಿನಗಳಿಂದ 10ಕ್ಕೂ ಮಂದಿ ಗ್ರಾಮಸ್ಥರು ಸಂಕಷ್ಟದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬೆಳಿಗ್ಗೆ 7.30ರಿಂದ ಯೋಧರು ಕಾರ್ಯಾಚರಣೆ ನಡೆಸಲು ಆರಂಭಿಸಿದರು. ಕಷ್ಟಪಟ್ಟು 10ಕ್ಕೂ ಹೆಚ್ಚು ಜನರನ್ನ ಸೇನಾಪಡೆ ರಕ್ಷಣೆ ಮಾಡಿದ್ದು, ಅವರೊಂದಿಗೆ ಸ್ಥಳೀಯ ಯುವಕರು ಕೂಡ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

    ಸಂತ್ರಸ್ತರಲ್ಲಿ 4 ಮಂದಿಗೆ ಅನಾರೋಗ್ಯ ಸಮಸ್ಯೆ ಎದುರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಸಲು ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೇನಾಪಡೆಯ ಯೋಧರೇ ಸುಮಾರು 5 ಕಿ.ಮೀ ದೂರದವರೆಗೂ ರೋಗಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರ ಜೀವ ಉಳಿಸಿದ ಸೇನಾಪಡೆಗೆ ನಾವೆಂದು ಚಿರಋಣಿ ಎಂದು ಗ್ರಾಮಸ್ಥರು ಯೋಧರಿಗೆ ನಮಿಸಿದ್ದಾರೆ.