Tag: ಸೇತುವೆ ಕುಸಿತ

  • ವಡೋದರಾ ಸೇತುವೆ ದುರಂತ – ಸಾವಿನ ಸಂಖ್ಯೆ 17ಕ್ಕೆ ಏರಿಕೆ

    ವಡೋದರಾ ಸೇತುವೆ ದುರಂತ – ಸಾವಿನ ಸಂಖ್ಯೆ 17ಕ್ಕೆ ಏರಿಕೆ

    -ನಾಲ್ವರು ಎಂಜಿನಿಯರ್‌ಗಳ ಅಮಾನತು

    ಗಾಂಧಿನಗರ: ಗುಜರಾತ್‌ನ (Gujarat) ವಡೋದರಾ (Vadodara) ಜಿಲ್ಲೆಯಲ್ಲಿ ನಡೆದ ಸೇತುವೆ ದುರಂತದಲ್ಲಿ (Bridge Collapse) ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆಂದು ವಡೋದರಾ ಡಿಸಿ ಅನಿಲ್ ಧಮೇಲಿಯಾ ಮಾಹಿತಿ ನೀಡಿದ್ದಾರೆ.

    ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು 4 ಕಿ.ಮೀ. ಕೆಳಭಾಗದವರೆಗೆ ಶೋಧಕಾರ್ಯ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಘಟನಾ ಸ್ಥಳದಲ್ಲಿ ಎರಡು ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಆ ವಾಹನಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗುತ್ತಿದೆ. ಮಳೆಯಾಗುತ್ತಿರುವ ಕಾರಣ ನದಿಯ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಡಿಸಿ ಹೇಳಿದ್ದಾರೆ. ಇದನ್ನೂ ಓದಿ: ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಖಾತೆಗಳು ಕಂಡ್ರೆ ಸೈಬರ್‌ ಸೆಲ್‌ಗೆ ದೂರು ನೀಡಿ – ಸಿಎಂ

    ಇನ್ನೂ ಸೇತುವೆ ಮೇಲೆ ತೂಗಾಡುತ್ತಿರುವ ಟ್ರಕ್ ಕುರಿತು ಮಾತನಾಡಿ, ಅದು ಖಾಲಿ ಟ್ಯಾಂಕರ್ ಆಗಿದ್ದು, ಅದನ್ನು ಸರಿಸಿದರೆ ಮತ್ತಷ್ಟು ಸೇತುವೆ ಕುಸಿದು ಬೀಳಲಿದೆ. ಸೇತುವೆ ಕೆಳಗಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಟ್ಯಾಂಕರನ್ನು ಅಲ್ಲೇ ಉಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೇಂದ್ರ ಚುನಾವಣಾ ಆಯೋಗಕ್ಕೆ ಬಿಗ್ ರಿಲೀಫ್ – ಬಿಹಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ತಡೆಗೆ ‘ಸುಪ್ರೀಂ’ ನಕಾರ

    ಘಟನೆ ಬಳಿಕ ಆರ್&ಬಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಆದೇಶ ಹೊರಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿರುವ ಎಲ್ಲಾ ಸೇತುವೆಗಳ ಸುರಕ್ಷತಾ ಪರಿಶೀಲನೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಹಠಾತ್‌ ಸಾವು| 75% ಕ್ಕಿಂತ ಹೆಚ್ಚು ಮಂದಿ ಒಂದಕ್ಕಿಂತ ಹೆಚ್ಚು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು: ದಿನೇಶ್‌

  • ವಡೋದರಾ ಸೇತುವೆ ಕುಸಿತ – ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

    ವಡೋದರಾ ಸೇತುವೆ ಕುಸಿತ – ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

    ಗಾಂಧೀನಗರ: ವಡೋದರಾದಲ್ಲಿ (Vadodara) ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಈ ಕುರಿತು ಪ್ರಧಾನಿ ಮೋದಿ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು (Ex-Gratia) ಘೋಷಿಸಿದ್ದು, ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ಹಂಚಿಕೊಂಡಿದೆ.ಇದನ್ನೂ ಓದಿ: ಅಂತರಿಕ್ಷದಲ್ಲಿ ಮೊಳಕೆಯೊಡೆದ ಮೆಂತ್ಯ, ಹೆಸರುಕಾಳು – ಭಾರತದ ಶುಭಾಂಶು ಶುಕ್ಲಾ ಪ್ರಯೋಗ ಸಕ್ಸಸ್

    ವಡೋದರಾ ಜಿಲ್ಲೆಯ ಪದ್ರಾ-ಮುಜ್‌ಪುರ ಪ್ರದೇಶದಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಗಂಭೀರಾ ಸೇತುವೆಯ ಒಂದು ಭಾಗ ಬುಧವಾರ ಬೆಳಿಗ್ಗೆ ಸುಮಾರು 7:30ರ ವೇಳೆಗೆ ಕುಸಿದಿದೆ. ಪರಿಣಾಮ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಟ್ರಕ್, ವ್ಯಾನ್ ಮತ್ತು ಕಾರುಗಳು ನದಿಗೆ ಉರುಳಿ ಬಿದ್ದಿವೆ. ವಾಹನಗಳಲ್ಲಿದ್ದ 9ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ತಕ್ಷಣ ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಮೃತದೇಹಗಳನ್ನು ಹೊರತೆಗೆದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ವಡೋದರಾ ಎಸ್‌ಪಿ ರೋಹನ್ ಆನಂದ್ ಹಾಗೂ ಸಂಸದ ಮಿತೇಶ್ ಪಟೇಲ್ ಸಾವನ್ನಪ್ಪಿರುವ ಕುರಿತು ಮಾಹಿತಿ ದೃಢಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ವಡೋದರಾ ಹಾಗೂ ಆನಂದ್ ಜಿಲ್ಲೆಗಳ ಅಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡಗಳು, ಪೊಲೀಸ್ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಸೇತುವೆ ಮಧ್ಯ ಗುಜರಾತ್ ಹಾಗೂ ಸೌರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವಡೋದರಾ ನಗರದಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಸೇತುವೆ ಕುಸಿತದಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

  • ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಗಾಂಧೀನಗರ: ಗುಜರಾತ್‌ನ ವಡೋದರಾ (Vadodara) ಜಿಲ್ಲೆಯಲ್ಲಿ ಬುಧವಾರ ಮುಂಜಾನೆ 43 ವರ್ಷದ ಹಳೆಯ ಸೇತುವೆ ಕುಸಿದು (Bridge Collapse) ಬಿದ್ದು ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

    ಸೇತುವೆ ಕುಸಿದು ಮಹಿಸಾಗರ್ ನದಿಗೆ ಹಲವಾರು ವಾಹನಗಳು ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್‌| ಮಧ್ಯದಲ್ಲೇ ಕುಸಿದ ಸೇತುವೆ – 5 ವಾಹನಗಳು ನದಿಗೆ, 8 ಸಾವು

    ಸೇತುವೆ ಕುಸಿದು ಮೃತಪಟ್ಟವರಲ್ಲಿ ರಮೇಶ್ ಪಡಿಯಾರ್, ವೇದಿಕಾ ಪಡಿಯಾರ್, ಮತ್ತು ದರಿಯಾಪುರ ಗ್ರಾಮದ ನೈತಾಯಿಕ್ ಪಾಧಿಯಾರ್, ಮಜತಾನ್‌ನ ಹಸ್ಮುಖ್ ಪರ್ಮಾರ್, ಕಹನ್ವಾ ಗ್ರಾಮದ ವಖತ್ಸಿನ್ಹ್ ಜಾದವ್ ಮತ್ತು ಉಂದೆಲ್ ಗ್ರಾಮದ ಪ್ರವೀಣ್ ಜಾದವ್ ಗುರುತು ಪತ್ತೆಹಚ್ಚಲಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ, ನದಿಗೆ ಬಿದ್ದವರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ವಡೋದರಾದ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದ ಹಲವು ರಾಜ್ಯಗಳಿಗೆ ಪ್ರವಾಹ ಎಚ್ಚರಿಕೆ – ಹಿಮಾಚಲ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್

    ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಪೊಲೀಸರು ತನಿಖೆ ಆರಂಭಿಸಲಿದ್ದಾರೆ ಎಂದು ವಡೋದರಾ ಎಸ್ಪಿ ತಿಳಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಂದ ವಿಚಾರಣಾ ವರದಿಯನ್ನು ಸಹ ಪಡೆಯುತ್ತೇವೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪದ್ರಾ ರೆಫರಲ್ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.

    ವಡೋದರಾ ಜಿಲ್ಲೆಯ ಪದ್ರಾ ತಾಲ್ಲೂಕಿನ ಮುಜ್‌ಪುರದಲ್ಲಿರುವ ಈ ಸೇತುವೆ, ಮುಜ್‌ಪುರವನ್ನು ಆನಂದ್ ಜಿಲ್ಲೆಯ ಗಂಭೀರಾಗೆ ಹಾಗೂ ಮಧ್ಯ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.

  • ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    – ಮಾಡಳ್ಳಿ-ಗುಂಜಳ ರಸ್ತೆ ಸಂಚಾರ ಸ್ಥಗಿತ

    ಗದಗ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಬಳಿ ಸೇತುವೆಯೊಂದು ಕೊಚ್ಚಿ ಹೋಗಿ ಮಾಡಳ್ಳಿ – ಗುಂಜಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಬಿಡದೇ ಸುರಿಯುತ್ತಿರುವ ಮಳೆಗೆ ಕಲ್ಲಿನ ಹಳೆಯ ಸೇತುವೆ ಕೊಚ್ಚಿಹೋಗಿದ್ದು, ಮಾಗಡಿ, ಮಾಡಳ್ಳಿ, ಗುಂಜಳದಿಂದ ಕುಂದಗೋಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೀಗ ರೈತರು, ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಜಿಲ್ಲೆಯಲ್ಲಿ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಳಿ ಸೇತುವೆ ಸಂಪೂರ್ಣ ಜಲಾವೃತವಾಗಿವೆ. ತುಂಬಿ ಹರಿಯುತ್ತಿರುವ ಬೆಳವಣಕಿ ಬಿಸಿ ಬೂದಿಹಳ್ಳದ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಹರಿಯುವ ನೀರಲ್ಲಿ ಜನರು ಹುಚ್ಚಾಟ ಮಾಡುತ್ತಿದ್ದು, ನೀರಿನ ಸೆಳೆತದ ನಡುವೆಯೂ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಕೊಚ್ಚಿಹೋದ ರಸ್ತೆಯಿಂದ ಬೆಳವಣಕಿ, ಬಳಗಾನೂರ ಗದಗ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಮೇಲ್ಸೇತುವೆ ಮಾಡುವಂತೆ ಸಾರ್ವಜನಿಕರು ಸಾಕಷ್ಟು ಮನವಿ ಮಾಡಿದ್ರೂ ಸ್ಪಂದಿಸದೇ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

  • ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಮಾಸ್ಕೋ: ರಷ್ಯಾದ (Russia) ಪಶ್ಚಿಮ ಬ್ರಿಯಾನ್ಸ್ಕ್‌ ಪ್ರದೇಶದಲ್ಲಿ ಶನಿವಾರ ತಡರಾತ್ರಿ ರೈಲು ಸೇತುವೆ ಕುಸಿದ (Bridge Collapse) ಪರಿಣಾಮ ರೈಲು ಹಳಿ ತಪ್ಪಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

    ಸಾರಿಗೆ ಕಾರ್ಯಾಚರಣೆಗಳ ಮೇಲಿನ ಅಕ್ರಮ ದಾಳಿಯಿಂದ ಉಕ್ರೇನ್ (Ukraine) ಗಡಿ ಭಾಗಗಲ್ಲಿರುವ ರೈಲ್ವೆ ಬ್ರಿಡ್ಜ್ ಕುಸಿದು ಬಿದ್ದಿದೆ. ಕ್ಲಿಮೊವೊದಿಂದ ಮಾಸ್ಕೋಗೆ ರೈಲು ಬರುತ್ತಿದ್ದಾಗ ಈ ಸೇತುವೆ ಕುಸಿದಿದೆ. ಪರಿಣಾಮ ರೈಲು ಹಳಿ ತಪ್ಪಿ ದುರಂತ ಸಂಭವಿಸಿದೆ ಎಂದು ರಷ್ಯಾದ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

    ಸೇತುವೆ ಕುಸಿದ ನಂತರ ಪಶ್ಚಿಮ ರಷ್ಯಾದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಶನಿವಾರ ರಾತ್ರಿ 10.40ರ ಸುಮಾರಿಗೆ ರೈಲ್ವೆ ಬ್ರಿಡ್ಜ್ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ರಷ್ಯಾ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

    3 ವರ್ಷಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭವಾದಾಗಿನಿಂದ ಬ್ರಿಯಾನ್ಸ್ಕ್‌ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಪದೇ ಪದೇ ಉಕ್ರೇನ್, ಡ್ರೋನ್ ದಾಳಿಗಳು, ಶೆಲ್ ದಾಳಿಯನ್ನು ನಡೆಸುತ್ತಲೇ ಬಂದಿದೆ. ಇದನ್ನೂ ಓದಿ: ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಕದನ ವಿರಾಮಕ್ಕೆ ಟ್ರಂಪ್ ಒತ್ತಾಯ
    ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳು ಕದನ ವಿರಾಮ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎರಡೂ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ವಿಫಲವಾಗಿತ್ತು. ಮುಂದಿನ ವಾರ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ವೈಯಕ್ತಿಕ ಮಾತುಕತೆ ನಡೆಸಲು ಮುಂದಾಗಿರುವುದನ್ನು ರಷ್ಯಾ ತಿಳಿಸಿದೆ.

  • ಎರಡು ದಿನದಿಂದ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆ

    ಎರಡು ದಿನದಿಂದ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆ

    ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಹಂಚಿನ ಸಿದ್ದಾಪುರ ಗ್ರಾಮದ ಬಳಿಯಿರುವ ಸೇತುವೆ ಕುಸಿದು ಬಿದ್ದಿದೆ.ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸೇತುವೆ ಕುಸಿದು ಬಿದ್ದಿದ್ದು, ಅನಾಹುತಗಳು ಬೆಳಕಿಗೆ ಬರುತ್ತಿವೆ.

    ಹಂಚಿನ ಸಿದ್ದಾಪುರ ಗ್ರಾಮದ ಸಮೀಪ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯು ಧಾರಾಕಾರ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹಂಚಿನ ಸಿದ್ದಾಪುರ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಹಾಗೂ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದೆ. ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ. ಸೇತುವೆಯನ್ನು ಶೀಘ್ರವೇ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

  • 7 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ – ಮದುವೆಗೆ ಹೊರಟಿದ್ದವರು ಗ್ರೇಟ್‌ ಎಸ್ಕೇಪ್‌!

    7 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ – ಮದುವೆಗೆ ಹೊರಟಿದ್ದವರು ಗ್ರೇಟ್‌ ಎಸ್ಕೇಪ್‌!

    ಹೈದರಾಬಾದ್‌: ತೆಲಂಗಾಣದ (Telangana Bridge) ಪೆದ್ದಪಲ್ಲಿ ಜಿಲ್ಲೆಯ ಮನೈರ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಸೇತುವೆಯ ಒಂದು ಭಾಗ ಸೋಮವಾರ ಮಧ್ಯರಾತ್ರಿ ಕುಸಿದಿದೆ.

    ಜೋರಾಗಿ ಬೀಸಿದ ಗಾಳಿಗೆ ಸೇತುವೆಯ ಎರಡು ಸಿಮೆಂಟ್ ಗರ್ಡರ್‌ಗಳು ಬಿದ್ದಿವೆ. ತಡರಾತ್ರಿ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮದುವೆಗೆ ಹೊರಡುತ್ತಿದ್ದ ಬಸ್‌ನಲ್ಲಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ಬಸ್‌ ಪ್ರಯಾಣಿಸಿದ ಸ್ವಲ್ಪ ಹೊತ್ತಲ್ಲೇ ಸೇತುವೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

    2016 ರಲ್ಲಿ ಶಂಕುಸ್ಥಾಪನೆಗೊಂಡು ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ಸೇತುವೆಯ ಅಂದಾಜು ವೆಚ್ಚ 46 ಕೋಟಿ ರೂ.. ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಎಂಟು ವರ್ಷ ಕಳೆದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶಗೊಂಡ ಸ್ಥಳೀಯರು ತಿಳಿಸಿದ್ದಾರೆ.

    ಭೂಪಾಲಪಲ್ಲಿಯ ಟೇಕುಮಟ್ಲ ಮಂಡಲದ ಗರ್ಮಿಲ್ಲಪಲ್ಲು ಮತ್ತು ಪೆದ್ದಪಲ್ಲಿಯ ಒಡೆಡೆಡುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಮಂಥನಿ, ಪರಕಲ್ ಮತ್ತು ಜಮ್ಮುಕುಂಟಾ ಪಟ್ಟಣಗಳ ನಡುವಿನ ಅಂತರವನ್ನು 50 ಕಿ.ಮೀಗಳಷ್ಟು ಕಡಿಮೆ ಮಾಡಲಿದೆ. ಇದನ್ನೂ ಓದಿ: ಅಪ್ಪ-ಮಕ್ಕಳ ಕುತಂತ್ರದಿಂದ ಉಚ್ಚಾಟನೆ, ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ: ಈಶ್ವರಪ್ಪ

  • ಕಳೆದ 20 ವರ್ಷಗಳಲ್ಲಿ ನಡೆದ ಭೀಕರ ಸೇತುವೆ ಕುಸಿತಗಳು-ಎಲ್ಲೆಲ್ಲಿ?

    ಕಳೆದ 20 ವರ್ಷಗಳಲ್ಲಿ ನಡೆದ ಭೀಕರ ಸೇತುವೆ ಕುಸಿತಗಳು-ಎಲ್ಲೆಲ್ಲಿ?

    ಮುದ್ರ ಅಥವಾ ನದಿಗಳು ಇದ್ದಲ್ಲಿ ಸಾಧಾರಣವಾಗಿ ಸೇತುವೆಗಳು (Bridge) ಇದ್ದೇ ಇರುತ್ತವೆ. ಇದನ್ನು ಜನರನ್ನು ಸುರಕ್ಷಿತವಾಗಿ ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪಿಸುವುದರ ಜೊತೆಗೆ ಬೇರೆ ಬೇರೆ ಜಾಗಗಳಿಗೆ ಸಂಪರ್ಕ ಸಾಧಿಸುವ ಸಲುವಾಗಿ ನಿರ್ಮಿಸಲಾಗುತ್ತದೆ. ಅಲ್ಲದೇ ಸರಕು ಸಾಗಣೆಗಳಿಗೂ ಸೇತುವೆ ಸಹಾಯವಾಗುತ್ತದೆ. ಆದರೆ ಇತ್ತೀಚಿಗೆ ಕೆಲವೊಂದು ಸೇತುವೆಗಳು ಕುಸಿದು ಬಿದ್ದು ಅಪಾರ ನಷ್ಟವುಂಟುಮಾಡಿದ್ದಲ್ಲದೇ ಅನೇಕ ಜನರು ಇದರಿಂದ ಜೀವತೆತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಬಾಲ್ಟಿಮೋರ್‌ನಲ್ಲಿ ಕಂಟೈನರ್ ಹಡಗೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಗಾತ್ರದ ಸೇತುವೆ ಕುಸಿದು (Bridge Collapse) ಬಿದ್ದು 6 ಜನರು ಸಾವನ್ನಪ್ಪಿದ್ದಾರೆ. ಅದೇ ರೀತಿ ಈ ಹಿಂದೆ ನಡೆದ ಕೆಲವೊಂದು ಸೇತುವೆ ಕುಸಿತದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    2024- ಬಾಲ್ಟಿಮೋರ್ ಸೇತುವೆ ಕುಸಿತ:
    ಇಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ 8 ಜನರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು 6 ಜನ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದೆ.

    ಸರಕು ಸಾಗಣೆ ಹಡಗೊಂದು ಮಂಗಳವಾರ ಇಂಜಿನ್​ ವೈಫಲ್ಯದಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಇಡೀ ಸೇತುವೆ ಕುಸಿದು ಪಾಟಾಪ್‌ಸ್ಕೋ ನದಿಗೆ ಬಿತ್ತು. ಸೇತುವೆ ಮೇಲಿದ್ದ 8 ಜನರು ನೀರಿಗೆ ಬಿದ್ದರು. ತಕ್ಷಣ ಇಬ್ಬರನ್ನು ರಕ್ಷಿಸಲಾಗಿತ್ತು. ಉಳಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದರೂ ಯಾರೂ ಪತ್ತೆಯಾಗದ ಕಾರಣ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಈ ಸೇತುವೆಯನ್ನು ಬಾಲ್ಟಿಮೋರ್ ಬಂದರಿನಲ್ಲಿ ಪಟಾಪ್ಸ್ಕೋ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 3 ಕಿಲೋಮೀಟರ್ ಉದ್ದದ ಈ ಸೇತುವೆಯ ನಿರ್ಮಾಣವು 1972 ರಲ್ಲಿ ಪ್ರಾರಂಭವಾಯಿತು ಮತ್ತು ಸೇತುವೆಯನ್ನು 1977 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.

    2022- ಭಾರತದಲ್ಲಿ ಸುಮಾರು 140 ಸಾವು:
    2022ರ ಅಕ್ಟೋಬರ್ 30 ರಂದು ಗುಜರಾತ್‌ನ ಮೊರ್ಬಿ ಸೇತುವೆ ಕುಸಿದು 45 ಮಕ್ಕಳು ಸೇರಿದಂತೆ 141 ಮಂದಿ ಬಲಿಯಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇಷ್ಟೊಂದು ಜನರನ್ನು ಬಲಿ ಪಡೆದ ಮೊರ್ಬಿ ತೂಗು ಸೇತುವೆಗೆ ಸುರಕ್ಷತಾ ಪ್ರಮಾಣ ಪತ್ರವೇ ಇರಲಿಲ್ಲ. ಅಲ್ಲದೇ ನಿಗದಿತ ಅವಧಿಗೂ ಮೊದಲೇ ತೂಗು ಸೇತುವೆಯನ್ನು ಪುನಃ ಸಾರ್ವಜನಿಕ ಬಳಕೆಗೆ ತೆರೆಯಲಾಗಿತ್ತು.

    ಮೊರ್ಬಿ ಸ್ಥಳೀಯ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ದುರಸ್ತಿ ಕಾರ್ಯಕ್ಕಾಗಿ ಏಳು ತಿಂಗಳಿಂದ ಮುಚ್ಚಲ್ಪಟ್ಟಿದ್ದ ತೂಗು ಸೇತುವೆಯನ್ನು ಘಟನೆ ನಡೆಯುವ ನಾಲ್ಕು ದಿನಗಳ ಹಿಂದಷ್ಟೇ (ಅ.26 ರಂದು) ಸಾರ್ವಜನಿಕರ ಬಳಕೆಗೆ ಪುನಃ ತೆರೆಯಲಾಗಿತ್ತು. 143 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಈ ತೂಗು ಸೇತುವೆಯ ಸುರಕ್ಷತಾ ಪ್ರಮಾಣ ಪತ್ರವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಅಷ್ಟರಲ್ಲೇ ಇದರ ಪುನಃ ಬಳಕೆಗೆ ಅವಕಾಶ ನೀಡಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.

    2021 – ಮೆಕ್ಸಿಕೋದಲ್ಲಿ 26 ಸಾವು:
    ಮೆಕ್ಸಿಕೋ ಸಿಟಿ ಮೆಟ್ರೋ ವ್ಯವಸ್ಥೆಯಲ್ಲಿನ ಎತ್ತರದ ಭಾಗವು ಮೇ ತಿಂಗಳಲ್ಲಿ ಕುಸಿದು ಪ್ರಯಾಣಿಕರ ರೈಲು ಅಪಘಾತಕ್ಕೀಡಾಯಿತು, ಇದರಲ್ಲಿ 26 ಜನರು ಸಾವನ್ನಪ್ಪಿದರು ಮತ್ತು ಡಜನ್‌ಗಟ್ಟಲೆ ಮಂದಿ ಗಾಯಗೊಂಡರು. ರಚನಾತ್ಮಕ ದೋಷಗಳು ಮತ್ತು ನಿರ್ವಹಣೆಯ ಕೊರತೆಯಿಂದ ಅಪಘಾತ ಸಂಭವಿಸಿದೆ ಎಂದು ತನಿಖೆಯು ತೀರ್ಮಾನಿಸಿದೆ.

    2018- ಇಟಲಿಯಲ್ಲಿ 43 ಸಾವು:
    ಇಟಲಿಯ ಜಿನೋವಾ ನಗರದಲ್ಲಿ ಸೇತುವೆ ಕುಸಿದು 43 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಮತ್ತು ಇಟಲಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಭಾಗವಾಗಿರುವ ಮೊರಾಂಡಿ ಸೇತುವೆಯು ಆಗಸ್ಟ್‌ನಲ್ಲಿ ಧಾರಾಕಾರ ಮಳೆಗೆ ಕೊಚ್ಚಿಹೋಗಿತ್ತು. ಹತ್ತಾರು ವಾಹನಗಳು ಪ್ರಪಾತದಡಿ ಸಿಲುಕಿತ್ತು.

    2011-2016; ಭಾರತದಲ್ಲಿನ ಮೂರು ವಿಪತ್ತುಗಳು:
    ಮಾರ್ಚ್ 2016 ರಲ್ಲಿ ಭಾರತದ ಕೋಲ್ಕತ್ತಾ ನಗರದಲ್ಲಿ ಜನನಿಬಿಡ ರಸ್ತೆಯ ಮೇಲೆ ಫ್ಲೈಓವರ್ ಕುಸಿದು ಕನಿಷ್ಠ 26 ಜನರು ಸಾವನ್ನಪ್ಪಿದರು. 

    ಆ ಸಮಯದಲ್ಲಿ ಸೇತುವೆಯನ್ನು ವೆಲ್ಡಿಂಗ್ ಮಾಡುತ್ತಿದ್ದ ಕಾರ್ಮಿಕರು ಬಿರುಕುಗಳು ಕಾಣಿಸಿಕೊಂಡಿರುವುದನ್ನು ಗಮನಿಸಿದ್ದರು. ಆದರೆ ಜನರಿಗೆ ಎಚ್ಚರಿಕೆ ನೀಡುವ ಬದಲು ಅವರು ಬಿರುಕುಗಳನ್ನು ಒಟ್ಟಿಗೆ ಬೆಸುಗೆ ಹಾಕಲು ಪ್ರಯತ್ನಿಸಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    2011 ರ ಕೊನೆಯಲ್ಲಿ, ಎರಡು ಸೇತುವೆಗಳು ಪರಸ್ಪರ ಒಂದು ವಾರದೊಳಗೆ ಕುಸಿದವು. ಒಂದು ಈಶಾನ್ಯದಲ್ಲಿರುವ ಡಾರ್ಜಿಲಿಂಗ್ ಬೆಟ್ಟದ ಪಟ್ಟಣದ ಬಳಿ, ಇನ್ನೊಂದು ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ನದಿಯ ಮೇಲೆ. ಈ ಘಟನೆಯಿಂದ  ಒಟ್ಟು 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

    2007- ಚೀನಾದಲ್ಲಿ 64 ಸಾವು:
    ಚೀನಾದಲ್ಲಿ ಆಗಸ್ಟ್‌ನಲ್ಲಿ ಕೇಂದ್ರ ಹುನಾನ್ ಪ್ರಾಂತ್ಯದ ನದಿ ಸೇತುವೆಯೊಂದು ಅದರ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವಾಗ ಕುಸಿದು ಬಿದ್ದು ಕನಿಷ್ಠ 64 ಕಾರ್ಮಿಕರು ಸಾವನ್ನಪ್ಪಿದರು. ನೇಪಾಳದಲ್ಲಿ ಡಿಸೆಂಬರ್‌ನಲ್ಲಿ ದೇಶದ ಪಶ್ಚಿಮದಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಸೇತುವೆ ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದರು ಮತ್ತು 25 ಮಂದಿ ಕಾಣೆಯಾಗಿದ್ದರು.

    2006- ಪಾಕಿಸ್ತಾನ ಮತ್ತು ಭಾರತ:
    ಪಾಕಿಸ್ತಾನದಲ್ಲಿ ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯಿಂದಾಗಿ ದೇಶದ ವಾಯುವ್ಯದಲ್ಲಿರುವ ಪೇಶಾವರದಿಂದ 50 ಕಿಲೋಮೀಟರ್ (30 ಮೈಲಿ) ದೂರದಲ್ಲಿರುವ ಮರ್ದಾನ್‌ನಲ್ಲಿ ಸೇತುವೆ ಕೊಚ್ಚಿಹೋಗಿದ್ದರಿಂದ ಕನಿಷ್ಠ 40 ಜನರು ಸಾವನ್ನಪ್ಪಿದರು.

    ಭಾರತದಲ್ಲಿ ಡಿಸೆಂಬರ್‌ನಲ್ಲಿ, ಪೂರ್ವ ರಾಜ್ಯ ಬಿಹಾರದ ರೈಲ್ವೇ ನಿಲ್ದಾಣದಲ್ಲಿ 150 ವರ್ಷಗಳಷ್ಟು ಹಳೆಯದಾದ ಸೇತುವೆಯು ಪ್ಯಾಸೆಂಜರ್ ರೈಲಿನ ಮೇಲೆ ಕುಸಿದು ಕನಿಷ್ಠ 34 ಜನರು ಸಾವನ್ನಪ್ಪಿದರು.

    2003- ಭಾರತ ಮತ್ತು ಬೊಲಿವಿಯಾ:
    ಭಾರತದಲ್ಲಿ ಆಗಸ್ಟ್‌ನಲ್ಲಿ ಮುಂಬೈ ಬಳಿ ಸೇತುವೆಯೊಂದು ಕುಸಿದು, ಶಾಲಾ ಬಸ್ ಮತ್ತು ಇತರ ನಾಲ್ಕು ವಾಹನಗಳು ನದಿಗೆ ಬಿದ್ದಾಗ 19 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದರು. ಡಿಸೆಂಬರ್‌ನಲ್ಲಿ ಬೊಲಿವಿಯಾದಲ್ಲಿ ಬಸ್‌ ಸೇತುವೆಯನ್ನು ದಾಟುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕನಿಷ್ಠ 29 ಜನರು ಸಾವನ್ನಪ್ಪಿದರು. 

    ಹೀಗೆ ಅನೇಕ ಸಣ್ಣಪುಟ್ಟ ಸೇತುವೆ ಕುಸಿತಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಘಟನೆಗಳಿಂದ ಅನೇಕ ಮಂದಿ ಜೀವ ಕಳೆದುಕೊಂಡರೆ ಇನ್ನೂ ಅನೇಕರು ಗಾಯಗೊಂಡು ಚೇತರಿಸಿಕೊಂಡಿದ್ದಾರೆ. ಸೇತುವೆಗಳನ್ನು ನಿರ್ಮಿಸುವಾಗ ಈ ರೀತಿಯಾದ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.  

  • ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ

    ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ

    ಪಾಟ್ನಾ: ಬರೋಬ್ಬರಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆಯೊಂದು (Bridge) ಕುಸಿದು ಬಿದ್ದಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

    ಬಿಹಾರದ ಖಗರಿಯಾದಲ್ಲಿ ನಿರ್ಮಿಸಲಾಗುತ್ತಿದ್ದ ಅಗುವನಿ ಸುಲ್ತಾನ್‌ಗಂಜ್ ಗಂಗಾ ಸೇತುವೆ ಭಾನುವಾರ ಕುಸಿದು ನೀರುಪಾಲಾಗಿದೆ. ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳೀಯರು ಸೇತುವೆ ಕುಸಿದು (Bridge Collapse) ಬೀಳುತ್ತಿರುವ ವೀಡಿಯೋಗಳನ್ನು ಸೆರೆಹಿಡಿದ್ದು, ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಸೇತುವೆಯನ್ನು ಖಗಾರಿಯಾ, ಆಗುವನಿ ಮತ್ತು ಸುಲ್ತಾನ್‌ಗಂಜ್ ನಡುವೆ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿತ್ತು. ಏಪ್ರಿಲ್‌ನಲ್ಲಿ ಸುರಿದಿದ್ದ ಬಿರುಗಾಳಿ ಸಹಿತ ಭಾರೀ ಮಳೆಯ ಪರಿಣಾಮ ಸೇತುವೆಗೆ ಹಾನಿಯಾಗಿತ್ತು. 2 ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

    ಏಪ್ರಿಲ್‌ನಲ್ಲಿ ಸೇತುವೆಗೆ ಹಾನಿಯಾಗಿದ್ದಾಗ ಕಳಪೆ ಕಾಮಗಾರಿಯ ಆರೋಪಗಳು ಕೇಳಿಬಂದಿದ್ದವು. ಆದರೂ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಿರ್ಮಾಣಹಂತದಲ್ಲಿದ್ದಾಗಲೇ ಸೇತುವೆ ಕುಸಿದಿದೆ. ಈ ಹಿನ್ನೆಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಸರ್ಕಾರವನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೂ ಮೊದಲು 2022 ರ ಡಿಸೆಂಬರ್‌ನಲ್ಲಿ ಬಿಹಾರದ ಬೇಗುಸರಾಯ್‌ನಲ್ಲಿ ಬುರ್ಹಿ ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದಿತ್ತು. ಸೇತುವೆ ಬಿರುಕು ಬಿಟ್ಟಿದ್ದು, ಅದರ 2-3 ಕಂಬಗಳು ಬಿದ್ದಿವೆ ಎಂದು ವರದಿಯಾಗಿತ್ತು. ಅದಕ್ಕೂ ಒಂದು ತಿಂಗಳ ಹಿಂದೆ ನವೆಂಬರ್‌ನಲ್ಲಿ ಸಿಎಂ ನಿತೀಶ್ ಕುಮಾರ್ ಅವರ ನಳಂದ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿತ್ತು. ಪರಿಣಾಮ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದರು. ಕಿಶನ್‌ಗಂಜ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿಯೂ ಉದ್ಘಾಟನೆಗೆ ಮುನ್ನ ನಿರ್ಮಾಣ ಹಂತದಲ್ಲಿದ್ದ ಸೇತುವೆಗಳು ಕುಸಿದಿವೆ. ಇದನ್ನೂ ಓದಿ: ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್

  • ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಗಾಂಧಿನಗರ: ಕಳೆದ ವರ್ಷ ಬರೋಬ್ಬರಿ 135 ಜನರ ಸಾವಿಗೆ ಕಾರಣವಾದ ಗುಜರಾತ್‌ನ (Gujarat) ಮೋರ್ಬಿಯಲ್ಲಿನ ಸೇತುವೆ ದುರಂತದ (Morbi Bridge Tragedy) ಕೆಲವು ನಿಜ ಅಂಶಗಳು ತನಿಖಾ ವರದಿಯಲ್ಲಿ ಬಯಲಾಗಿದೆ. ತೂಗು ಸೇತುವೆಯ ಕೆಲವು ತಂತಿಗಳು ಮೊದಲೇ ಮುರಿದಿದ್ದು, ಹಲವು ತುಕ್ಕು ಹಿಡಿದಿದ್ದವು ಎಂದು ತನಿಖೆಯ ವರದಿ ತಿಳಿಸಿದೆ.

    ಮೋರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು. ಇದೀಗ ಎಸ್‌ಐಟಿ ಸೇತುವೆ ದುರಸ್ತಿ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಪತ್ತೆ ಮಾಡಿದೆ.

    ಮಚ್ಚು ನದಿಯ ಮೇಲೆ 1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆಯ 2 ಮುಖ್ಯ ಕೇಬಲ್‌ಗಳಲ್ಲಿ ಒಂದು ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದೂ ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಸೇತುವೆಯ ಪ್ರತಿಯೊಂದು ಕೇಬಲ್ ಅನ್ನು 7 ಎಳೆಗಳಿಂದ ರಚಿಸಲಾಗಿದ್ದು, ಅವು ಉಕ್ಕಿನ ತಂತಿಗಳಾಗಿವೆ. ಈ ಕೇಬಲ್ ಅನ್ನು ರೂಪಿಸಲು ಒಟ್ಟು 49 ತಂತಿಗಳನ್ನು 7 ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ. 49 ತಂತಿಗಳಲ್ಲಿ 22 ತುಕ್ಕು ಹಿಡಿದಿರುವುದು ಗಮನಿಸಲಾಗಿದೆ. ಇದು ಘಟನೆಗೂ ಮೊದಲೇ ಮುರಿದು ಹೋಗಿರುವುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

    ಇನ್ನು ಸೇತುವೆ ನವೀಕರಣದ ಸಮಯದಲ್ಲಿ ಹಳೆಯ ಸಸ್ಪೆಂಡರ್‌ಗಳನ್ನು (ಕೇಬಲ್‌ಗಳನ್ನು ಸಂಪರ್ಕಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡುಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

    ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಇದು ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಆದರೂ ಸೇತುವೆಯ ನೈಜ ನಾಮರ್ಥ್ಯವನ್ನು ಪ್ರಯೋಗಾಲಯದ ವರದಿಗಳಿಂದ ದೃಢೀಕರಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k