Tag: ಸೇಂದಿ

  • ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ರಾಯಚೂರು: ತೆಲಂಗಾಣದಿಂದ ರಾಯಚೂರಿಗೆ ಅಕ್ರಮವಾಗಿ ರೈಲಿನಲ್ಲಿ ಸಿಹೆಚ್ ಪೌಡರ್ ಸೇಂದಿ ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಾರೆ. ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಸೇಂದಿ ಜಪ್ತಿ ಮಾಡಿದ್ದಾರೆ.

    ತೆಲಂಗಾಣದ ಕೃಷ್ಣಾ ರೈಲ್ವೇ ನಿಲ್ದಾಣದಿಂದ ರಾಯಚೂರಿಗೆ ತರಲಾಗುತ್ತಿದ್ದ 250 ಲೀ. ಕಲಬೆರಕೆ ಸಿಹೆಚ್ ಪೌಡರ್ ಸೇಂದಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಸೇಂದಿಯನ್ನು ಬಾಟಲ್‌ಗಳಲ್ಲಿ ತುಂಬಿ ಮಾರಾಟಕ್ಕೆ ಅಕ್ರಮವಾಗಿ ತರುತ್ತಿದ್ದರು. ಅಂದಾಜು 80 ಸಾವಿರ ರೂ. ಮೌಲ್ಯದ ಕಲಬೆರಕೆ ಸೇಂದಿ ಜಪ್ತಿಯಾಗಿದೆ. ಇದನ್ನೂ ಓದಿ: RSS, ಭಜರಂಗದಳ ಬ್ಯಾನ್ ಮಾಡಲಿ: ಜಮೀರ್ ಅಹ್ಮದ್

    ಆನಂದಮ್ಮ, ತಾಯಮ್ಮ, ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಬಂಧಿತ ಆರೋಪಿಗಳು. ಇವರಲ್ಲಿ ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಈಗಾಗಲೇ ತಲಾ ಎರಡೆರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

    ಆರೋಪಿಗಳು ನಗರದ ರಾಗಿಮಾನಗಡ್ಡ, ಸ್ಟೇಷನ್ ಏಷಿಯಾ ನಿವಾಸಿಗಳಾಗಿದ್ದಾರೆ. ಆರ್‌ಪಿಎಫ್, ರೈಲ್ವೇ ಪೊಲೀಸ್, ನಗರದ ಪಶ್ಚಿಮ ಠಾಣೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಕುಖ್ಯಾತ ಕಲಬೆರಕೆ ಸೇಂದಿ ದಂಧೆಕೋರನ ಬಂಧನ- ಗಡಿಪಾರಿಗೆ ಮುಂದಾದ ಅಧಿಕಾರಿಗಳು

    ಕುಖ್ಯಾತ ಕಲಬೆರಕೆ ಸೇಂದಿ ದಂಧೆಕೋರನ ಬಂಧನ- ಗಡಿಪಾರಿಗೆ ಮುಂದಾದ ಅಧಿಕಾರಿಗಳು

    ರಾಯಚೂರು: ಅಬಕಾರಿ ಹಾಗೂ ರಾಯಚೂರಿನ ವಿವಿಧ ಠಾಣೆ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.

    ನರಸಿಂಹಲು ಅಲಿಯಾಸ್ ಬ್ರೂಸ್ಲಿ ಬಂಧಿತ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರ. ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನ ಎದುರಿಸುತ್ತಿರುವ ಆರೋಪಿ ನರಸಿಂಹಲು ಬ್ರೂಸ್ಲಿ ಸೇಂದಿ ತಯಾರಿಕೆ ವೇಳೆ ಸಿಕ್ಕಿಬಿದ್ದಿದ್ದಾನೆ.

    ರಾಯಚೂರಿನ ಮೈಲಾರನಗರದಲ್ಲಿ ವಿವಿಧೆಡೆ ಕಲಬೆರಿಕೆ ಸೇಂದಿ ಅಡ್ಡೆಗಳನ್ನ ನಡೆಸುತ್ತಿದ್ದ ಬ್ರೂಸ್ಲಿ ಅಬಕಾರಿ ಪೊಲೀಸರ ದಾಳಿ ವೇಳೆ ಸೇಂದಿ ಸಹಿತ ಸಿಕ್ಕಿಬಿದ್ದಿದ್ದಾನೆ. 15 ಲೀಟರ್ ಕಲಬೆರಕೆ ಸೇಂದಿ, 2 ಕೆ.ಜಿ ಸಿಎಚ್ ಪೌಡರ್ ಹಾಗೂ ಸೇಂದಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ಜಪ್ತಿಮಾಡಿದ್ದಾರೆ.

    ಆರೋಪಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಮುಂದಾಗಿದ್ದು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಸಿದ್ಧತೆ ನಡೆಸಿವೆ. ಆದರೆ ಈ ಹಿಂದೆಯೂ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ ಬ್ರೂಸ್ಲಿ ಗಡಿಪಾರಾಗಿದ್ದ. ಅದಾದ ಬಳಿಕವೂ ಯಾವುದೇ ಪರಿವರ್ತನೆಯಾಗದೆ ಪುನಃ ದಂಧೆಯನ್ನ ಮುಂದುವರಿಸಿದ್ದಾನೆ.

  • ರಾಯಚೂರಲ್ಲಿ ಸೇಂದಿಗೆ ದಾಸರಾಗಿದ್ದ ಬಾಲಕರಿಬ್ಬರ ರಕ್ಷಣೆ

    ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಕಲಬೆರಿಕೆ ಸಿಎಚ್ ಪೌಡರ್ ಸೇಂದಿಗೆ ಚಿಕ್ಕಮಕ್ಕಳು ದಾಸರಾಗಿ ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡಿದ ಕುರಿತ ಪಬ್ಲಿಕ್ ಟಿವಿ ವರದಿಯಿಂದ ರೈಲ್ವೇ ಪೊಲೀಸರು ಎಚ್ಚೆತ್ತಿದ್ದಾರೆ.

    ಕುಡಿತಕ್ಕೆ ದಾಸರಾದ ಇಬ್ಬರು ಬಾಲಕರನ್ನ ರಕ್ಷಿಸಿದ್ದು, ಓರ್ವನನ್ನ ಸರ್ಕಾರಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವನನ್ನ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.

    ಒಟ್ಟು ನಾಲ್ಕು ಮಕ್ಕಳು ತೆಲಂಗಾಣಕ್ಕೆ ತೆರಳಿ ಸಿಎಚ್ ಪೌಡರ್ ಸೇಂದಿ ಕುಡಿದು ಬಾಟಲ್‍ಗಳನ್ನ ತಂದಿದ್ದರು. ರಾಯಚೂರು ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡುತ್ತಿದ್ದ ವಿಷ್ಯೂವಲ್ಸ್ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೇ ಪೊಲೀಸರು ಇಬ್ಬರು ಮಕ್ಕಳನ್ನ ರಕ್ಷಿಸುವ ಜೊತೆ ಓರ್ವ ಅಕ್ರಮ ಸಿಎಚ್ ಪೌಡರ್ ಸಾಗಣೆಗಾರನನ್ನೂ ಬಂಧಿಸಿದ್ದಾರೆ.

    ರಾಯಚೂರಿನ ರಾಗಿಮಾನಗಡ್ಡದ ನಿವಾಸಿ ವಿರೇಶ್ ಬಂಧಿತ ಆರೋಪಿ. ತೆಲಂಗಾಣದ ಕೃಷ್ಣದಿಂದ 25 ಲೀಟರ್ ಸೆಂದಿಯನ್ನ ಸಾಗಣೆ ಮಾಡುತ್ತಿದ್ದ ವೇಳೆ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.