Tag: ಸೆಸ್

  • ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

    ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

    – ಸನ್ನಡತೆ ಆಧಾರದಲ್ಲಿ ಜೀವಾವಧಿ ಶಿಕ್ಷೆ ಖೈದಿಗಳಿಗೆ ಬಿಡುಗಡೆ ಭಾಗ್ಯಕ್ಕೂ ಒಪ್ಪಿಗೆ

    ಬೆಂಗಳೂರು: ಮೆಟ್ರೋ, ಬಸ್‌ ಟಿಕೆಟ್‌ ದರ, ಹಾಲಿನ ದರ ಏರಿಕೆ ಬಳಿಕ ಜಿಎಸ್‌ಟಿಯಿಂದ ತತ್ತರಿಸಿರುವ ಜನತೆ ರಾಜ್ಯ ಸರ್ಕಾರ ಮತ್ತೊಂದು ಶಾಕ್‌ ಕೊಟ್ಟಿದೆ. ಹೊಸದಾಗಿ ನಿರ್ಮಾಣ ಆಗುವ ರಾಜ್ಯದ ಎಲ್ಲಾ ರಾಜ್ಯದ ಎಲ್ಲ ಬಹುಮಹಡಿ ಮತ್ತು ಎತ್ತರದ ಕಟ್ಟಡಗಳಿಗೆ 1% ಸೆಸ್ (Cess) ವಿಧಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

    ಅಗ್ನಿಶಾಮಕ ದಳದ ಕಾಯ್ದೆ (Fire Service Ac) ಅನ್ವಯ ಆಗುವ ವಾಣಿಜ್ಯ ಕಟ್ಟಡಗಳು, ಕೈಗಾರಿಕಾಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಕಟ್ಟಡಗಳು, ಅಪಾರ್ಟ್ಮೆಂಟ್ ಗಳು ಸೇರಿ ಎತ್ತರದ ಬಹುಮಹಡಿ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    ಸಂಪುಟ ಸಭೆ ನಿರ್ಣಯಗಳು
    * ಬೆಂಗಳೂರಿನ ಸ್ಪೇಸ್ ಟೆಕ್ ನಲ್ಲಿ ಉತ್ಕೃಷ್ಟತಾ ಕೇಂದ್ರ (ಸೆಂಟರ್ ಆಫ್ ಎಕ್ಸಲೆನ್ಸ್) ಸ್ಥಾಪನೆಗೆ ಸಂಪುಟ ಅನುಮೋದನೆ
    * ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ, 50 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
    * ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಇಲಾಖಾ ತನಿಖೆ ನಡೆಸುವುದು. ಜೊತೆಗೆ ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಅಧಿಕೃತ ಒಪ್ಪಿಗೆ.
    * ಕುನ್ಹಾ ವರದಿ ಶಿಫಾರಸ್ಸು ಜಾರಿಗೆ ಕ್ಯಾಬಿನೆಟ್ ಒಪ್ಪಿಗೆ – ಡಿಎನ್‌ಎ ಈವೆಂಟ್‌ ಮ್ಯಾನೆಜ್‌ಮೆಂಟ್‌ ಸಂಸ್ಥೆ ವಿರುದ್ಧವೂ ಕ್ರಿಮಿನಲ್ ಕೇಸ್
    * ಇದರೊಂದಿಗೆ ಸನ್ನಡತೆ ಆಧಾರದಲ್ಲಿ ಜೀವಾವಧಿ ಶಿಕ್ಷೆ ಖೈದಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
    * ಜೊತೆಗೆ ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 46 ಜೀವಾವಧಿ ಶಿಕ್ಷಾ ಬಂಧಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

  • ಹೋಟೆಲ್‌ಗಳಿಗೆ ಬರೆ – ತಿಂಗಳಿಗೆ 30 ಸಾವಿರ ಕಸದ ಸೆಸ್!

    ಹೋಟೆಲ್‌ಗಳಿಗೆ ಬರೆ – ತಿಂಗಳಿಗೆ 30 ಸಾವಿರ ಕಸದ ಸೆಸ್!

    – ಬೆಂಗಳೂರು ಹೋಟೆಲ್ ಮಾಲೀಕರ ಕಿಡಿ

    ಬೆಂಗಳೂರು: ಮೆಟ್ರೋ ದರ, ಬಸ್ ದರ, ವಿದ್ಯುತ್ ದರ ಏರಿಕೆಯಾಯ್ತ. ಈಗ ಏಪ್ರಿಲ್ 1ರಿಂದ ಕಸದ ಸೆಸ್ ಬರೆ ಶುರುವಾಗಲಿದೆ. ಬೆಂಗಳೂರಿನ (Bengaluru) ಹೋಟೆಲ್‌ಗಳಿಗೆ ಕಸದ ಸೆಸ್ (Garbage Cess) ಬರೆಯ ಬಿಸಿ ತಟ್ಟಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ದರ ಏರಿಕೆಯ ಹೊರೆ ಜನರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಇದರ ಮಧ್ಯೆ ಈಗ ಏಪ್ರಿಲ್‌ನಿಂದ ಕಸದ ಸೆಸ್ ಬರೆ ಬೀಳಲಿದೆ. ಕಸದ ಸೆಸ್‌ಗೆ ಈಗ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Hotel Association) ಕಿಡಿಕಾರಿದೆ. ಒಂದು ಕೆಜಿಗೆ 12 ರೂ. ಫಿಕ್ಸ್ ಮಾಡಿದ್ದು, ಈ ಹಿಂದೆ ತಿಂಗಳಿಗೆ 5 ಸಾವಿರ ಕಸದ ಸೆಸ್ ಕಟ್ಟಲಾಗುತ್ತಿತ್ತು. ಆದರೆ ಈಗ ಬರೋಬ್ಬರಿ 30 ಸಾವಿರ ರೂ. ಕಸದ ಸೆಸ್ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ಸಾಮಾನ್ಯವಾಗಿ ದರ್ಶಿನಿ ಹೋಟೆಲ್‌ನಲ್ಲಿ, ದಿನಕ್ಕೆ 60-100 ಕೆಜಿಯಷ್ಟು ಕಸ ಉತ್ಪಾದನೆಯಾಗಲಿದೆ. ಮೊದಲೆಲ್ಲ ಪ್ರತಿ ತಿಂಗಳು ಕಸದ ಸೆಸ್ ಅಂತ ಬಿಬಿಎಂಪಿಗೆ ಕಟ್ಟಲಾಗುತ್ತಿತ್ತು. ಆದರೆ ಈಗ ಏಕಾಏಕಿ ಕಸದ ಸೆಸ್ 30 ಸಾವಿರಕ್ಕೆ ಏರಿಕೆ ಮಾಡಿರೋದು ಸರಿಯಲ್ಲ. ಇದು ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ

    ಒಟ್ಟಾರೆ, ದರ ಏರಿಕೆಯ ಭಾರವನ್ನು ಹೊರಲಾರದೇ ಜನ ಹೈರಾಣಾಗಿದ್ದಾರೆ. ಅದರ ಮಧ್ಯೆ ದಿನಕ್ಕೊಂದು ದರ ಏರಿಕೆ ಬಿಸಿಗೆ ಜನ ಹಿಡಿಶಾಪ ಹಾಕುವ ಪರಿಸ್ಥಿತಿ ಉದ್ಭವವಾಗಿದೆ. ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ

  • ಹೊಸ ಬೈಕ್, ಕಾರು ಖರೀದಿಸುವವರಿಗೆ ಶೀಘ್ರವೇ ಶಾಕ್ – ಯಾವುದಕ್ಕೆ ಎಷ್ಟು ಸೆಸ್‌?

    ಹೊಸ ಬೈಕ್, ಕಾರು ಖರೀದಿಸುವವರಿಗೆ ಶೀಘ್ರವೇ ಶಾಕ್ – ಯಾವುದಕ್ಕೆ ಎಷ್ಟು ಸೆಸ್‌?

    ಬೆಂಗಳೂರು: ಮುಂದಿನ ತಿಂಗಳಿನಿಂದ ಹೊಸ ದ್ವಿಚಕ್ರ ವಾಹನ (Two-Wheelers) ಹಾಗೂ ಕಾರು (Car) ಖರೀದಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲಿದೆ. ಕೆಲವೇ ದಿನಗಳಲ್ಲಿ ಸೆಸ್ (Cess) ಜಾರಿಯಾಗಲಿದ್ದು,ವಾಹನ ಖರೀದಿ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.

    ಹೌದು. ಈಗಾಗಲೇ ಹೊಸ ವರ್ಷದಿಂದ ಅಟೊಮೊಬೈಲ್‌ (Automobile) ಕಂಪನಿಗಳು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳ ದರವನ್ನು ಏರಿಕೆ ಮಾಡಿದೆ. ಈಗ ರಾಜ್ಯ ಸರ್ಕಾರ ಕಾರ್ಮಿಕ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರ ವಾಹನ, ಸಾರಿಗೇತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂ. ಮತ್ತು 1,000 ರೂ. ಉಪಕರ ವಿಧಿಸಲು ಮುಂದಾಗಿದೆ.

    ಏನಿದು ಸೆಸ್‌?
    ರಾಜ್ಯ ಮೋಟಾರ್ ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಗಾಗಿ ದ್ವಿಚಕ್ರ ವಾಹನ ಮತ್ತು ಸಾರಿಗೇತರ ಮೋಟಾರು ಕಾರುಗಳ ನೋಂದಣಿಯ ವೇಳೆ ಉಪಕರ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ರಾಜ್ಯಪಾಲರ ಸಹಿಯೂ ಬಿದ್ದಿದ್ದು ಸರ್ಕಾರ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಿದೆ.

    ಯಾಕೆ ಈ ಸೆಸ್‌?
    ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಾಲಕರು ಸೇರಿ ಮತ್ತಿತರ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಣೆಗೆ ನಿರ್ಧಾರ ಮಾಡಲಾಗಿದೆ. ಈ ನಿಧಿಗೆ ಸುಮಾರು 100 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಹೊಸ ಸೆಸ್‌ ಸರ್ಕಾರದ ವಾಹನ ತಂತ್ರಾಂಶದಲ್ಲಿ ಅಪ್ ಡೇಟ್ ಆಗಲು ಮಾತ್ರ ಬಾಕಿಯಿದೆ.

    ಮುಂದಿನ 15 ದಿನಗಳಲ್ಲಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಆದರೆ ಮುಂದಿನ ತಿಂಗಳಿನಿಂದ ದ್ವಿಚಕ್ರ ವಾಹನಗಳ ನೋಂದಣಿ ವೇಳೆ 500 ರೂ. ಹಾಗೂ ಸಾರಿಗೇತರ ಮೋಟಾರ್ ಕಾರುಗಳಿಗೆ 1,000 ರೂ.ಗಳನ್ನು ನೀಡಬೇಕಾಗುತ್ತದೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆಯಾಗುವ ಸಾಧ್ಯತೆ

    ಯಾವೆಲ್ಲ ತೆರಿಗೆ ಇದೆ?
    ಹೊಸ ವಾಹನ ಖರೀದಿಸುವಾಗ ಜಿಎಸ್‌ಟಿ(ಕೇಂದ್ರ+ ರಾಜ್ಯ), ರಸ್ತೆ ತೆರಿಗೆ, ವಿಮೆ ಸೇರಿದಂತೆ ಹಲವು ರೀತಿಯಲ್ಲಿ ಸರ್ಕಾರ ಕರ ಸಂಗ್ರಹಿಸುತ್ತಿದೆ. ಒಂದು ಕಾರಿನ ಒಟ್ಟು ಬೆಲೆಯಲ್ಲಿ ಅಂದಾಜು ಶೇ.45 ರಷ್ಟು ಹಣ ಸರ್ಕಾರಕ್ಕೆ ತೆರಿಗೆ (Tax) ರೂಪದಲ್ಲೇ ಹೋಗುತ್ತದೆ.

     

    ದೇಶದಲ್ಲಿ ಅತಿ ಹೆಚ್ಚು ಮೋಟಾರು ವಾಹನ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರಸ್ತುತ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ವಿಧಿಸಲಾಗುವ ತೆರಿಗೆಯ ಮೇಲೆ ರಾಜ್ಯವು 11% ರಷ್ಟು ಸೆಸ್ ಅನ್ನು ಸಂಗ್ರಹಿಸುತ್ತದೆ. ಇದರಲ್ಲಿ 10% ರಷ್ಟು ಮೂಲಸೌಕರ್ಯ ಅಭಿವೃದ್ಧಿ, ಬೆಂಗಳೂರು ಮಾಸ್ ರಾಪಿಡ್ ಟ್ರಾನ್ಸಿಟ್ ಲಿಮಿಟೆಡ್‌ನಲ್ಲಿ ಷೇರು ಹೂಡಿಕೆ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ (ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ) ಸೇರಿದಂತೆ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದೆ. ಉಳಿದ 1% ರಷ್ಟು ನಗರ ಸಾರಿಗೆ ನಿಧಿಗೆ ಹೋಗುತ್ತದೆ.

    ಸಾರಿಗೆ ವಾಹನಗಳ ಮೇಲೆ (ಹಳದಿ ಬೋರ್ಡ್ ವಾಣಿಜ್ಯ ವಾಹನಗಳು) 3% ರಷ್ಟು ಸೆಸ್ ಅನ್ನು ವಿಧಿಸುತ್ತದೆ. ಇದನ್ನು ಕರ್ನಾಟಕ ಮೋಟಾರ್ ಸಾರಿಗೆ ಮತ್ತು ಇತರ ಮಿತ್ರ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಬಳಸಲಾಗುತ್ತದೆ.

  • 11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ನವದೆಹಲಿ: ಆಗಸ್ಟ್‌ ತಿಂಗಳಿನಲ್ಲಿ 1,59,069 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸತತ 17 ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟುತ್ತಿದೆ.

    ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 11% ರಷ್ಟು ಏರಿಕೆಯಾಗಿದೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ1,43,612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷದ ಜುಲೈನಲ್ಲಿ 1,65,105 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

    ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ (CGST) ಪಾಲು 28,328 ಕೋಟಿ ರೂ. ಆಗಿದ್ದರೆ ರಾಜ್ಯ ಜಿಎಸ್‌ಟಿ (SGST) 35,794 ಕೋಟಿ ರೂ. ಆಗಿದೆ. ಇಂಟಿಗ್ರೇಟೆಡ್ ಜಿಎಸ್‌ಟಿ (ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 83,251 ಕೋಟಿ ರೂ.ಗಳಾಗಿವೆ. ಇದರಲ್ಲಿ 11,695 ಕೋಟಿ ರೂ.(ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ 1,016 ಕೋಟಿ ರೂ. ಸಂಗ್ರಹ ಸೇರಿ) ಸೆಸ್‌ ಕೂಡ ಸೇರಿದೆ.  ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ಇಸ್ರೋ ಮುಖ್ಯಸ್ಥ

    ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ 37,581 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 31,408 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಹಂಚಿಕೆಯ ಬಳಿಕ ಆಗಸ್ಟ್‌ ತಿಂಗಳಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಕ್ರಮವಾಗಿ 65,909 ಕೋಟಿ ರೂ. ಮತ್ತು 67,202 ಕೋಟಿ ರೂ.ಗಳಾಗಿವೆ.

    ಕರ್ನಾಟಕದಲ್ಲಿ(Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 16% ರಷ್ಟು ಏರಿಕೆಯಾಗಿದ್ದು, 11,116 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಎರಡನೇ ಸ್ಥಾನ ಪಡೆದಿದೆ. ಕಳೆದ ಆಗಸ್ಟ್‌ನಲ್ಲಿ 9,583 ಕೋಟಿ ರೂ. ಸಂಗ್ರಹವಾಗಿತ್ತು.

    ಮಹಾರಾಷ್ಟ್ರದಲ್ಲಿ 23,282 ಕೋಟಿ ರೂ. ಸಂಗ್ರಹವಾಗಿದ್ದು ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಗುಜರಾತ್‌ 9,765 ಕೋಟಿ ರೂ., ತಮಿಳುನಾಡು 9,475 ಕೋಟಿ ರೂ., ಉತ್ತರ ಪ್ರದೇಶದಲ್ಲಿ 7,468 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

    ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

    ಬೆಂಗಳೂರು: ರಾಜಧಾನಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ವಿದ್ಯುತ್ ಬಿಲ್ ಮೂಲಕ ಕಸ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ಪ್ಲಾನ್ ಮಾಡ್ತಿದೆ.

    ಬಿಬಿಎಂಪಿ ಸೆಸ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದ್ರೇ ಸದ್ಯದಲ್ಲೇ ಸಿಲಿಕಾನ್ ಸಿಟಿ ಜನರ ಮನೆಗೆ ತಿಂಗಳಿಗೊಮ್ಮೆ ಕರೆಂಟ್ ಬಿಲ್ ಜೊತೆಗೆ ಗಾರ್ಬೇಜ್ ಬಿಲ್ ಬರಲಿದೆ.

    2011 ರಿಂದ ಆಸ್ತಿ ತೆರಿಗೆ ಮೇಲೆ ಶೇ.19 ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ಆದರೆ ಇದರಿಂದ ಕಸ ನಿರ್ವಹಣಾ ವೆಚ್ಚದ ಶೇ.15 ರಷ್ಟು ಸಂಗ್ರಹಣೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಮೂಲಕ ಪ್ರತಿ ತಿಂಗಳು ಕಸ ನಿರ್ವಹಣೆ ಸೆಸ್ ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಮಾಸಿಕ 48 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ.

    ವಾಣಿಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಗುರಿಯನ್ನು ಬಿಬಿಎಂಪಿ ಹೊಂದಿದೆ. ಈ ಆದಾಯದ ಮೂಲಕ ಗುತ್ತಿಗೆದಾರರ ಬಿಲ್, ಪೌರಕಾರ್ಮಿಕರ ಸಂಬಳಕ್ಕೆ ಅನುಕೂಲ ಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು ಮಾತ್ರ ಇಂಥಾ ಯಾವುದೇ ಪ್ರಸ್ತಾವನೆಯನ್ನು ಬಿಬಿಎಂಪಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ:

    ವಿದ್ಯುತ್ ಬಿಲ್                      ಕಸ ಸೆಸ್
    * 200 ರೂ. ವರೆಗೆ               30 ರೂ.
    * 200-500 ರೂ.                60 ರೂ.
    * 500-1000 ರೂ.              100 ರೂ.
    * 1001-2000 ರೂ.             200 ರೂ.
    * 2001-3000 ರೂ.             350 ರೂ.
    * 3000 ರೂ.ಗಿಂತ ಹೆಚ್ಚು         500 ರೂ.

  • ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಮಡಿಕೇರಿ: ಜನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿ, ತೆರಿಗೆ ಮತ್ತು ಸೆಸ್ ಮಧ್ಯೆ ಇರುವ ವ್ಯತ್ಯಾಸಗಳನ್ನು ಜನರು ಮೊದಲು ತಿಳಿದುಕೊಳ್ಳಬೇಕು. ತೆರಿಗೆ ಹಣವನ್ನು ಯಾವುದಕ್ಕೆ ಬೇಕಾದರೂ ಬಳಕೆ ಮಾಡಬಹುದು. ಅದರೆ ಸೆಸ್ ಹಣವನ್ನು ಯಾವುದಕ್ಕೆ ಸಂಗ್ರಹ ಮಾಡುತ್ತಿರೋ ಅದಕ್ಕೆ ಮಾತ್ರ ಅ ಹಣವನ್ನು ಬಳಕೆಮಾಡಲಾಗುತ್ತದೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕೊಡುತ್ತಿರುವುದು ಈ ಸೆಸ್ ಹಣ ಸಂಗ್ರಹದಿಂದಲೇ. ಕೃಷಿ ಸೆಸ್ ಅನ್ನು ಕೃಷಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

    ಇನ್ನೂ ರಾಜ್ಯ ಸರ್ಕಾರ ಡಕೋಟ ಎಕ್ಸ್‍ಪ್ರೆಸ್ ಎಂದಿದ್ದ ಸಿದ್ದರಾಮಯ್ಯ ಕುರಿತು ಮಾತಾನಾಡಿದ ಡಿವಿ ಸಿದ್ದರಾಮಯ್ಯ ಅವರಿಗೆ ಶಬ್ಧ ಪ್ರಯೋಗ ಗೊತ್ತಿಲ್ಲ ಅವರು ಹತ್ತು ಬಜೆಟ್ ಗಳನ್ನು ಮಂಡನೆ ಮಾಡಿದವರು ಆದರೂ ಅವರಿಗೆ ಪದ ಪ್ರಯೋಗ ಗೊತ್ತಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

    ತೆರಿಗೆ ವಸ್ತುವಿನ ಮೇಲೆ ತೆರಿಗೆ ಹಾಕಿದರೆ ಆ ವಸ್ತುವಿನಿಂದ ಬಂದ ತೆರಿಗೆಯನ್ನು ಯಾವುದೇ ಯೋಜನೆಗಳಿಗೆ ಬಳಸಬಹುದು. ಆದರೆ ಸೆಸ್ ಹಾಕಿದರೆ ಯಾವ ಉದ್ದೇಶವನ್ನು ಇಟ್ಟುಕೊಂಡು ಸೆಸ್ ಜಾರಿ ಆಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತದೆ.

  • ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ – ಕೇಂದ್ರ ಸರ್ಕಾರಕ್ಕೆ ಪ್ರತಿದಿನ 400 ಕೋಟಿ ಆದಾಯ

    ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ – ಕೇಂದ್ರ ಸರ್ಕಾರಕ್ಕೆ ಪ್ರತಿದಿನ 400 ಕೋಟಿ ಆದಾಯ

    ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ವಿಧಿಸಲಾಗಿದೆ.

    ಇದರಿಂದಾಗಿ ವಾಹನ ಸವಾರರು ಈಗಾಗ್ಲೇ ಸಿಟ್ಟಾಗಿದ್ದಾರೆ. ಆ ಸಿಟ್ಟು ಇನ್ನು ಒಂದೆರಡು ದಿನಗಳಲ್ಲಿ ತಣ್ಣಗಾಗುತ್ತೆ. ಜನ ಗೊಣಗಿಕೊಂಡೇ ತಮ್ಮ ತಮ್ಮ ವಾಹನಗಳಿಗೆ ತೈಲ ತುಂಬಿಸಿಕೊಳ್ಳುತ್ತಾರೆ. ಹೆಸರಿಗಷ್ಟೇ ಎರಡು ರೂಪಾಯಿ ಸುಂಕ ವಿಧಿಸುತ್ತಿದ್ದರೂ ಇದರಿಂದ ದೇಶದ ಜನತೆ ಮೇಲೆ ಬೀಳುವ ಹೊರೆ ಪ್ರಮಾಣ ಎಷ್ಟು ಎಂದು ಕೇಳಿದರೆ ಒಂದು ಕ್ಷಣ ದಂಗಾಗ್ತೀರಿ.

    1 ಲೀಟರ್ ಮೇಲೆ 2 ರೂ.ಸೆಸ್ (ಮೇಲ್ತೆರಿಗೆ) ವಿಧಿಸಿರೋದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿದಿನ 400 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದ್ರೆ ವರ್ಷಕ್ಕೆ ಬರೋಬ್ಬರಿ 1 ಲಕ್ಷ 42 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಕೇಂದ್ರಕ್ಕೆ ಸಿಗುತ್ತದೆ. ಅಷ್ಟು ಹೊರೆ ಗ್ರಾಹಕರ ಮೇಲೆನೇ ಬೀಳುತ್ತದೆ ಎನ್ನಲಾಗಿದೆ.

    ಪೆಟ್ರೋಲ್ ಮತ್ತು ಡೀಸೆಲ್‍ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈ ಅಂಶಗಳನ್ನು ಪ್ರಸ್ತಾಪ ಮಾಡುತ್ತಿದ್ದಂತೆಯೇ ಕುಳಿತಿದ್ದ ವಿರೋಧ ಪಕ್ಷದ ಸದಸ್ಯರು ಅಲ್ಲೇ ವಿರೋಧ ವ್ಯಕ್ತಪಡಿಸಿದರು.

    ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದಾಗ ಭಾರತದ ಕೆಲ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಏರಿತ್ತು. ಈ ವೇಳೆ ಕೇಂದ್ರ ಸರ್ಕಾರ 1 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಮೊದಲ ಅವಧಿಯಲ್ಲಿ ಕೆಲವೊಮ್ಮೆ ಕಚ್ಚಾ ತೈಲದ ಬೆಲೆ ಕಡಿಮೆಯಾದಾಗ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಆಗ್ರಹ ಕೇಳಿ ಬಂದಿತ್ತು. ಈ ವೇಳೆ ಪೆಟ್ರೋಲ್, ಡೀಸೆಲ್ ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಸೇರಿದಂತೆ ಇತರ ಯೋಜನೆಗಳಿಗೆ ಬಳಸಿಕೊಳ್ಳುತ್ತೇವೆ ಎಂದು ಸರ್ಕಾರ ಉತ್ತರ ನೀಡಿತ್ತು.

    ಇತ್ತ ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಾಗುವುದು ಖಚಿತವಾಗಲಿದೆ. ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಚಾರ್ಜ್ ಶೀಘ್ರ ದುಬಾರಿಯಾಗುವ ಸಂಭವ ಇದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇವೆ.

  • ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

    ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.

    ಬಜೆಟ್‍ನಲ್ಲಿ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10ರಿಂದ 12.5ಕ್ಕೆ ಏರಿಸಲಾಗಿದೆ. ಹೀಗಾಗಿ ಬಜೆಟ್ ಅಧಿಕೃತವಾಗಿ ಜಾರಿಯಾದ ಬಳಿಕ ಚಿನ್ನದ ದರ ಏರಿಕೆಯಾಗಲಿದೆ.

    ಎಷ್ಟು ಏರಿಕೆಯಾಗಲಿದೆ?
    10 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಕ್ಕೆ 1 ಸಾವಿರ ರೂ. ಹಣ ಆಮದು ಸುಂಕವಾಗಿ ಪಾವತಿಯಾಗುತ್ತಿತ್ತು. ಈಗ ಶೇ.12.5 ರಷ್ಟು ಏರಿಕೆಯಾಗಿರುವ ಕಾರಣ 1,250 ರೂ. ಹಣವನ್ನು ಪಾವತಿಸಬೇಕಿದೆ.

  • ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್

    ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್

    ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬಲೆಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ತುಂಬಿಸಲು ತೈಲದ ಮೆಲೆ ಅಬಕಾರಿ ಸುಂಕ ಹೆಚ್ಚಿಸಲು ಮೋದಿ ಸರ್ಕಾರ ಮುಂದಾಗಿದೆ.

    ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಮೂಲ ಸೌಕರ್ಯ ಸೆಸ್ ಅಡಿಯಲ್ಲಿ ಒಂದು ರೂ. ಸೆಸ್ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಪೆಟ್ರೋಲ್ ಮತ್ತು ಡೀಸೆಲ್‍ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಈ ಅಂಶಗಳನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಕುಳಿತ್ತಿದ್ದ ವಿರೋಧ ಪಕ್ಷದ ಸದಸ್ಯರು ಅಲ್ಲೇ ವಿರೋಧ ವ್ಯಕ್ತಪಡಿಸಿದರು.

    ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದಾಗ ಭಾರತದ ಕೆಲ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಏರಿತ್ತು. ಈ ವೇಳೆ ಕೇಂದ್ರ ಸರ್ಕಾರ 1 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು.

    ಮೊದಲ ಅವಧಿಯಲ್ಲಿ ಕೆಲವೊಮ್ಮೆ ಕಚ್ಚಾ ತೈಲದ ಬೆಲೆ ಕಡಿಮೆಯಾದಾಗ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಆಗ್ರಹ ಕೇಳಿ ಬಂದಿತ್ತು. ಈ ವೇಳೆ ಪೆಟ್ರೋಲ್, ಡೀಸೆಲ್ ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಸೇರಿದಂತೆ ಇತರ ಯೋಜನೆಗಳಿಗೆ ಬಳಸಿಕೊಳ್ಳುತ್ತೇವೆ ಎಂದು ಸರ್ಕಾರ ಉತ್ತರ ನೀಡಿತ್ತು.

  • ಮಗನಿಗೆ ಶಹಬ್ಬಾಶ್ ಎಂದ ಮಾಜಿ ಪ್ರಧಾನಿ ದೇವೇಗೌಡ!

    ಮಗನಿಗೆ ಶಹಬ್ಬಾಶ್ ಎಂದ ಮಾಜಿ ಪ್ರಧಾನಿ ದೇವೇಗೌಡ!

    ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಗ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಶಹಬ್ಬಾಶ್ ಅಂದಿದ್ದಾರೆ.

    ಹೌದು. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸಿದ್ದ ಕುಮಾರಸ್ವಾಮಿ ನಿರ್ಧಾರಕ್ಕೆ ದೊಡ್ಡಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಳ್ಳೆಯ ನಿರ್ಧಾರ ಅಂತ ಹೇಳುವ ಮೂಲಕ ಸೆಸ್ ಇಳಿಸಿರುವ ಕುರಿತು ಸರ್ಕಾರದ ಬೆನ್ನು ತಟ್ಟಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಜನರ ಮೇಲಿನ ಹಣದ ಹೊರೆಯನ್ನು ಕಡಿಮೆ ಮಾಡಿಕೊಡುವುದಾಗಿ ನರೇಂದ್ರ ಮೋದಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

    ದಿನನಿತ್ಯ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಏರಿಕೆಯಾಗುತ್ತಿದೆ. ಸಾರ್ವಜನಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಇಂದು ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ಸೆಸ್ ಕಡಿತಗೊಳಿಸುತ್ತಿದೆ.

    ಈ ಕುರಿತು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಲಬುರಗಿಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಆದರೆ ಬಂದ್ ದಿನವೇ ಸೆಸ್ ಇಳಿಸುವ ಸುಳಿವನ್ನು ನೀಡಿದ್ದರು. ಇದರಂತೆ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ ಇಳಿಕೆಯಾಗಲಿದೆ.

    ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರ ವಿಧಿಸುವ ಸೆಸ್ ಕಡಿಮೆಯಾದರೂ ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿರುವ ಕಾರಣ ಸೆಸ್ ಕಡಿಮೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ. ಇತ್ತ ತೈಲ ಬೆಲೆ ನಿತ್ಯ ಹೆಚ್ಚಾಗುತ್ತಿದ್ದು ಇಂದು ಕೂಡ ಲೀಟರ್ ಪೆಟ್ರೋಲ್‍ಗೆ 15 ಪೈಸೆ, ಡೀಸೆಲ್ 6 ಪೈಸೆಯಷ್ಟು ಹೆಚ್ಚಳವಾಗಿದೆ. ರಾಜಸ್ಥಾನ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅನುಸರಿಸಿದ್ದು ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=xjRf1PNpmvg