Tag: ಸೆಲ್ಫಿ ವೀಡಿಯೋ

  • ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಬೀದರ್: ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲ್ಫಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಪೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶದಲ್ಲಿ ಸಿಲುಕಿದ ಹಾವೇರಿಯ 9 ವೈದ್ಯಕೀಯ ವಿದ್ಯಾರ್ಥಿಗಳು – ಪೋಷಕರಲ್ಲಿ ಆತಂಕ

    Bidar

    ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್​ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಸೇಫಾಗಿರಿ ಎಂದು ಭಾರತ ಸರ್ಕಾರ ಹೇಳಿದೆ ಎಂದು ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದಾರೆ.  ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

  • ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆ

    ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆ

    – ವೀಡಿಯೋದಲ್ಲಿ ಯುವಕ ಹೇಳಿದ್ದೇನು..?

    ಹೈದರಾಬಾದ್: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ತಾಯಿಗೆ ಸೆಲ್ಫಿ ವೀಡಿಯೋ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಯುವಕನನ್ನು ಮನಲಾ ರಾಜೇಶ್(24) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಜಗಿತ್ತಲ ಜಿಲ್ಲೆಯ ಗೊಲ್ಲಪೆಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ನಿವಾಸಿ. ಈತ ತನ್ನ ತಾಯಿಗೆ ಸೆಲ್ಫೀ ವೀಡಿಯೋ ಮಾಡಿ ಕಳುಹಿಸಿದ್ದಾನೆ. ಅದರಲ್ಲಿ ಪ್ರೇಯಸಿ ಇಲ್ಲದ ಜೀವನ ವ್ಯರ್ಥ ಎಂದು ತನ್ನ ನೋವನ್ನು ಹೊರಹಾಕಿದ್ದಾನೆ.

    ಜಗಿತ್ತಲ ಜಿಲ್ಲೆಯ ಗೋವಿಂದಪಲ್ಲಿ ಗ್ರಾಮದ ಯುವತಿಯನ್ನು ರಾಜೇಶ್ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯೂ ಸಹ ರಾಜೇಶ್ ನನ್ನು ತುಂಬಾನೇ ಇಷ್ಟಪಡುತ್ತಿದ್ದಳು. ಆದರೆ ಈ ಮಧ್ಯೆ ರಾಜೇಶ್ ಕೆಲಸಕ್ಕೆಂದು ದುಬೈಗೆ ತೆರಳಿದ್ದ. ಅಲ್ಲದೆ ದುಬೈನಿಂದ ಬಂದ ಬಳಿಕ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

    ಇತ್ತ ಮಗಳ ಪ್ರೀತಿಯ ವಿಚಾರ ಆಕೆಯ ಪೋಷಕರ ಗಮನಕ್ಕೆ ಬಂದಿದೆ. ಹೀಗಾಗಿ ಪ್ರೀತಿಗೆ ಒಪ್ಪದ ಪೋಷಕರು ಆಕೆಗೆ ಬೇರೆಯೊಬ್ಬನ ಜೊತೆ ಮದುವೆ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ವರನ ಹುಡುಕಾಟ ಆರಂಭಿಸಿದ್ದಾರೆ. ರಾಜೇಶ್ ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಯುವತಿಗೆ ಒಪ್ಪಿಗೆ ಇಲ್ಲ. ಹೀಗಾಗಿ ತಂದೆ-ತಾಯಿಯ ನಿರ್ಧಾರದಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ತನ್ನ ಪ್ರಿಯತಮೆ ಸೂಸೈಡ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜೇಶ್ ಕೂಡ ದುಬೈನಲ್ಲಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಈತ, ಪ್ರಿಯತಮೆ ಇಲ್ಲದ ಜೀವನ ವ್ಯರ್ಥ ಎಂದು ಸೆಲ್ಫಿ ವೀಡಿಯೋ ಮಾಡಿ ಅದನ್ನು ತನ್ನ ತಾಯಿಗೆ ಕಳುಹಿಸಿದ್ದಾನೆ. ಮಗ ರಾಜೇಶ್ ಸಾವಿನ ಸುದ್ದಿ ಕೇಳಿ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

  • ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ತುಮಕೂರು: ಪತ್ನಿ ಅತ್ತೆ ಹಾಗೂ ಮಾವನ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತುರುವೇಕೆರೆ ತಾಲೂಕು ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.

    ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸೆಲ್ಫಿ ವೀಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತೆಗೆ ಶರಣಾಗಿದ್ದಾನೆ. ಈ ಘಟನೆ ನವೆಂಬರ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೀಡಿಯೋದಲ್ಲಿ ಲೋಕೇಶ್ ಹೇಳಿದ್ದೇನು..?
    ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ. ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೇಗೆ ಬದುಕಲಿ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾನೆ.

    ವಿಡಿಯೋ ಮಾಡಿಟ್ಟು ಲೋಕೇಶ್ ಕೀಟನಾಶಕ ಸೇವಿಸಿದ್ದಾನೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಪೊಲೀಸರು ಪ್ರಕರಣದ ತನಿಖೆಯನ್ನೇ ಮಾಡುತ್ತಿಲ್ಲ ಅಂತ ಮೃತನ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

  • ಕರಡಿ ದಾಳಿ – ಮರವೇರಿ ಸೆಲ್ಫಿ ವೀಡಿಯೋ ಮಾಡಿ ಗ್ರಾಮಸ್ಥರನ್ನ ಸಹಾಯಕ್ಕೆ ಕರೆದ!

    ಕರಡಿ ದಾಳಿ – ಮರವೇರಿ ಸೆಲ್ಫಿ ವೀಡಿಯೋ ಮಾಡಿ ಗ್ರಾಮಸ್ಥರನ್ನ ಸಹಾಯಕ್ಕೆ ಕರೆದ!

    ಕಾರವಾರ: ಕಾಡು ಹಾಗಲಕಾಯಿ ತರಲು ಹೋಗಿದ್ದ ವ್ಯಕ್ತಿಯ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಮುಂಡಗೋಡಿನ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ. ತನ್ನ ಜೀವ ಉಳಿಸಿಕೊಳ್ಳಲು ಸೆಲ್ಫಿ ವೀಡಿಯೋ ಮಾಡಿ ಗ್ರಾಮಸ್ಥರಿಗೆ ಕಳುಹಿಸಿ ಸಹಾಯ ಕೋರಿ ನಂತರ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

    ನ್ಯಾಸರ್ಗಿ ಗ್ರಾಮದ ನಿರಂಜನ್ (35) ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ನ್ಯಾಸರ್ಗಿ ಅರಣ್ಯದಲ್ಲಿ ಬೆಳಗ್ಗೆ 8 ಗಂಟೆ ವೇಳೆ ತನ್ನ ಎತ್ತು ಕಳೆದಿರುವುದನ್ನು ಹುಡುಕಾಟ ನಡೆಸಿದ್ದ. ಈ ವೇಳೆ ಕಳೆದು ಹೋದ ಎತ್ತುಗಳು ಸಿಕ್ಕ ಬಳಿಕ ಅವುಗಳನ್ನು ಹೊಡೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಕಾಡಿನಲ್ಲಿ ಕಾಡು ಹಾಗಲಕಾಯಿ ಕಂಡಿದ್ದು, ಅವನ್ನು ತರಲು ಹೋದಾಗ ಎರಡು ಕರಡಿಗಳು ಈತನ ಮೇಲೆ ದಾಳಿ ನಡೆಸಿವೆ. ತಲೆ, ಕೈ ಕಾಲುಗಳಿಗೆ ಸೇರಿದಂತೆ ವಿವಿಧೆಡೆ ಕಚ್ಚಿ ಗಂಭೀರ ಗಾಯಗೊಳಿಸಿದವು.

    ಗಂಭೀರವಾಗಿ ಗಾಯಗೊಂಡರೂ ಕರಡಿಗಳಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಮರವನ್ನೇರಿ ಕುಳಿತ ನಿರಂಜನ್, ಈ ವೇಳೆ ತನ್ನ ಸ್ಥಿತಿಯ ಬಗ್ಗೆ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ನಂತರ ಮೊಬೈಲ್ ಮೂಲಕ ಗ್ರಾಮಸ್ಥರಿಗೆ ವೀಡಿಯೋ ಕಳುಹಿಸಿ ಕರೆ ಮಾಡಿ ಕರಡಿ ದಾಳಿಯ ಬಗ್ಗೆ ತಿಳಿಸಿದ್ದಾನೆ.

    ಕೂಡಲೇ ಸುಮಾರು 25ಕ್ಕೂ ಹೆಚ್ಚು ಗ್ರಾಮಸ್ಥರು ಅರಣ್ಯಕ್ಕೆ ಧಾವಿಸಿ ಗಾಯಾಳುವನ್ನು ಹುಡುಕಾಡಿ ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.