Tag: ಸೆಲೆಬ್ರೆಟಿಗಳು

  • ನಾನು ಏನೂ ಮಾತಾಡಲ್ಲ: ಸಂಜನಾ ಗಲ್ರಾನಿ ಮೊದಲ ಪ್ರತಿಕ್ರಿಯೆ

    ನಾನು ಏನೂ ಮಾತಾಡಲ್ಲ: ಸಂಜನಾ ಗಲ್ರಾನಿ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಅವಶ್ಯಕತೆಯಿದ್ದಾಗ ಖಂಡಿತಾ ಮಾತಾಡುತ್ತೇನೆ. ಈಗ ಏನೂ ಮಾತನಾಡಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ. ನಟಿಯ ಆಪ್ತ ರಾಹುಲ್‍ನನ್ನ ಸಿಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಜನಾ, ನಿಜವಾಗಲೂ ಅವಶ್ಯಕತೆಯಿದ್ದಾಗ ನಾನೇ ಮಾತಾಡುತ್ತೇನೆ. ಅವಶ್ಯಕತೆ ಇರುವಾಗ ಖಂಡಿತಾ ಮಾತನಾಡುತ್ತೇನೆ. ಅಲ್ಲಿಯವರೆಗೂ ನಾನೂ ಏನು ಮಾತನಾಡಲ್ಲ. ನಾನೇ ಆರಾಮಾಗಿದ್ದೀನಿ. ದಯವಿಟ್ಟು ಡಿಸ್ಟರ್ಬ್ ಮಾಡಿ ಎಂದಿದ್ದಾರೆ. ಇನ್ನು ಸಂಜನಾರ ವಾಟ್ಸಪ್ ಮೂಲಕ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನ ತಳ್ಳಿ ಹಾಕಿದ್ದು, ಸುಳ್ಳು ಎಂದಿದ್ದಾರೆ.

    ಬುಧವಾರ ರಾತ್ರಿಯೇ ಸಂಜನಾರ ಆಪ್ತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ರಾಹುಲ್ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಮತ್ತೊಂದು ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್ ಸಹ ಸಿಸಿಬಿ ವಶದಲ್ಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ರಾಗಿಣಿ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ರವಿ ಶಂಕರ್ ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ

  • ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಬೆಂಗಳೂರು: ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಬಳಿಕ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಡಿಯೋ ಸಾಕ್ಷ್ಯ ಸೇರಿ ಹಲವು ಪ್ರಮುಖ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಮೂಲಕ ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ವಶಕ್ಕೆ ಪಡೆದಂತಾಗಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಕಾರಿನ ಸಮೇತ ರಾತ್ರಿ ರಾಹುಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ ಸಪ್ಲೈ ಮಾಡುತಿದ್ದನಾ ರಾಹುಲ್ ಎಂಬ ಪ್ರಶ್ನೆ ಇದೀಗ ಮೂಡಿದೆ. ರಾಹುಲ್ ಡ್ರಗ್ ಪೆಡ್ಲರ್ ಆಗಿರುವ ಶಂಕೆ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ರಾಹುಲ್ ನನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ರವಿ ಶಂಕರ್‍ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತ ರಾಹುಲ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಸಂಜನಾ ಗಲ್ರಾನಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈವರೆಗೆ ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಬಹುದು ಎಂಬ ಉದ್ದೇಶದಿಂದ ಸಂಜನಾ ಅಜ್ಞಾತ ಸ್ಥಳದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.