Tag: ಸೆಲೆಬ್ರೆಟಿ

  • ಕೊರೊನಾ ಭೀತಿ – ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರೆಟಿಗಳು

    ಕೊರೊನಾ ಭೀತಿ – ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರೆಟಿಗಳು

    ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಬಾಲಿವುಡ್ ತಾರೆಯರು ಮುಂಬೈ ತೊರೆದು ವಿದೇಶಗಳತ್ತ ಹಾರುತ್ತಿದ್ದಾರೆ.

    ಕಳೆದ ವರ್ಷ ಕೊರೊನಾ ಹೆಮ್ಮಾರಿ ಭೀತಿಯಿಂದ ಜನಸಾಮಾನ್ಯರು ನಗರಗನ್ನು ಬಿಟ್ಟು ತಮ್ಮ ಊರುಗಳಿಗೆ ಸೇರಿದರು. ಆದರೆ ಇದೀಗ ಕೊರೊನಾಗೆ ಹೆದರಿ ಸೆಲೆಬ್ರೆಟಿಗಳು ಊರು ಬಿಟ್ಟು ಹೋಗುತ್ತಿದ್ದಾರೆ.

    ಸದ್ಯ ಕೋವಿಡ್-19 ಎರಡನೇ ಅಲೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಬಾಲಿವುಡ್ ನಟ ರಣ್‍ವೀರ್ ಕಪೂರ್ ಹಾಗೂ ಆಲಿಯಾ ಭಟ್ ಸೋಮವಾರ ಮುಂಬೈನಿಂದ ಮಾಲ್ಡೀವ್ಸ್‌ಗೆ  ಹಾರಿದ್ದಾರೆ.

    ಬಾಲಿವುಡ್‍ನ ಕ್ಯೂಟೆಸ್ಟ್ ಪೇರ್ ಅಂತಲೇ ಫೇಮಸ್ ಆಗಿರುವ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಕೊರೊನಾಗೆ ಹೆದರಿ ಮುಂಬೈ ತೊರೆದು ಬೆಂಗಳೂರಿನತ್ತ ಬಂದಿದ್ದಾರೆ. ಶೂಟಿಂಗ್‍ಗಾಗಿ ಮುಂಬೈಗೆ ತೆರಳಿದ್ದ ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಮುಂಬೈನಲ್ಲಿ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆ ಹೈದರಾಬಾದ್‍ಗೆ ವಾಪಸ್ ಆಗಿದ್ದಾರೆ.

    ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಾಯಿ ಜೊತೆ ಎರಡುದಿನಗಳ ಹಿಂದೆಯಷ್ಟೇ ಮುಂಬೈನಿಂದ ಮಾಲ್ಡೀವ್ಸ್‌ಗೆ  ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಕೂಡ ಮಾಲ್ಡೀವ್ಸ್‌ಗೆ  ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.