Tag: ಸೆಲೆಬ್ರಿಟಿ

  • ಒಳ ಉಡುಪು ತೊಡದೆ ಬಟ್ಟೆ ತೊಟ್ಟ ಮಾಡೆಲ್- ಹಿಗ್ಗಾಮುಗ್ಗ ಟ್ರೋಲ್

    ಒಳ ಉಡುಪು ತೊಡದೆ ಬಟ್ಟೆ ತೊಟ್ಟ ಮಾಡೆಲ್- ಹಿಗ್ಗಾಮುಗ್ಗ ಟ್ರೋಲ್

    ವಾಷಿಂಗ್ಟನ್: ಮಿಸ್ ಅಮೆರಿಕ ಹಾಗೂ ಮಿಸ್ ಯೂನಿವರ್ಸ್ ಪಟ್ಟವನ್ನು ಗಳಿಸಿಕೊಂಡ ಒಲಿವಿಯಾ ಕುಲ್ಪೋಗೆ ಅಮೆರಿಕದಲ್ಲಿ ದೊಡ್ಡ ಮಟ್ಟದ ಹೆಸರಿದೆ. ಇತ್ತೀಚೆಗೆ ಇವರು ತೊಟ್ಟ ಉಡುಗೆ ಸಖತ್ ಸುದ್ದಿ ಮಾಡಿದೆ.

    ಸೋಶಿಯಲ್ ಮೀಡಿಯಾದಲ್ಲಿ ಒಲಿವಿಯಾ ಅವರು ಹೋಟೆಲ್‌ವೊಂದಕ್ಕೆ ತೆರಳಿದ ಫೋಟೋ ಹಂಚಿಕೊಂಡಿದ್ದರು. ಆದರೆ ಅವರು ತೊಟ್ಟ ಬಟ್ಟೆಯಿಂದ ಟೀಕೆ ಎದುರಿಸುವಂತಾಗಿದೆ. ಬಿಳಿ ಬಣ್ಣ ಬಟ್ಟೆಯನ್ನು ತೊಟ್ಟಿದ್ದಾರೆ. ಒಲಿವಿಯಾ ಅವರ ಎಡ ಮತ್ತು ಬಲ ಭಾಗಗಗಲ್ಲಿ ಒಪನ್ ಇದ್ದು, ಅವರ ಒಳ ಉಡುಪು ತೊಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

     

    View this post on Instagram

     

    A post shared by Olivia Frances Culpo (@oliviaculpo)

    ತೆಳುವಾದ ಡ್ರೆಸ್ ಧರಿಸಿನಲ್ಲಿ ಕಾಣಿಸಿಕೊಂಡಿದ್ದು, ಅಚ್ಚರಿ ಎಂದರೆ ಅವರು ಯಾವುದೇ ಒಳುಡುಪು ಹಾಕಿರಲಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೀಗಾ ಬರೋದು ಸ್ವಲ್ಪವಾದರೂ ನಾಚಿಕೆ ಇರಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ. ಕೆಲವರು ನೀವು ಉಡುಗೆ ತೊಡುವ ಅವಶ್ಯಕತೆ ಏನಿತ್ತು ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Olivia Frances Culpo (@oliviaculpo)

    ಸೆಲೆಬ್ರಿಟಿಗಳು ಯಾವುದೇ ಉಡುಗೆ ತೊಟ್ಟರೂ ಅದನ್ನು ಗಮನಿಸುತ್ತಿರುತ್ತಾರೆ. ಕೆಲವು ಉಡುಗೆಗಳನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವು ಉಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಡ್ರೆಸ್ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ಉದಾಹರಣೆ ಸಾಕಷ್ಟಿದೆ. ಈಗ ಮಾಜಿ ಭುವನ ಸುಂದರಿಯೊಬ್ಬರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರು ಒಳಉಡುಪು ಹಾಕದೆ ರಸ್ತೆಗೆ ಇಳಿದಿದ್ದು, ಈ ವಿಚಾರದಲ್ಲಿ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

  • ಅಶ್ಲೀಲವನ್ನು ಪ್ರಚಾರ ಮಾಡಿದ ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಅಶ್ಲೀಲವನ್ನು ಪ್ರಚಾರ ಮಾಡಿದ ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಮುಂಬೈ: ಪರಭಾಷಾ ನಟಿ ರಾಧಿಕಾ ಆಪ್ಟೆ ವಿಭಿನ್ನ ಮತ್ತು ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸುತ್ತಾರೆ. ಈ ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ.

    ಕಲಾತ್ಮಕ ಸಿನಿಮಾ, ವಿಭಿನ್ನವಾದ ಪಾತ್ರ ಮಾಡುತ್ತಿದ್ದ ರಾಧಿಕಾ ಆಪ್ಟೆ, ಇಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‍ನಲ್ಲಿದ್ದಾರೆ. ಆದರೆ ಚಲನಚಿತ್ರ ಅಥವಾ ಹೊಸ ಪ್ರಾಜೆಕ್ಟ್‍ಗಾಗಿ ರಾಧಿಕಾ ಸುದ್ದಿಯಾಗಿಲ್ಲ. ಬದಲಾಗಿ ಅಶ್ಲೀಲ ವಿಷಯವನ್ನು ಪ್ರಚಾರ ಮಾಡಿದ್ದಕ್ಕಾಗಿ ನೆಟ್ಟಿಗರು ರಾಧಿಕಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

    ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ ಏಕೆಂದರೆ ಆಕೆ ಪರ್ಚೆಡ್ ಸಿನಿಮಾದ ಲವ್ ದೃಶ್ಯದಲ್ಲಿ ತೆರೆ ಮೇಲೆ ಟಾಪ್ ಬೇತ್ತಳಾಗಿದ್ದಾಳೆ. ಕೆಲವು ಸಿನಿಮಾಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಧಿಕಾ ವಿರುದ್ಧ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ. ಸೆಲೆಬ್ರಿಟಿಗಳು ಅನ್ಯಾಯದ ಬಗ್ಗೆ ಮಾತನಾಡುವಾಗ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಾಗ ಮಾತ್ರ ಸಾಮಾಜಿಕ ಜಾಲತಾಣಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದನ್ನೂ ಓದಿ:  ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಿಪ್ ಲೈನ್- ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಪ್ಲಾನ್

    ಇತ್ತೀಚೆಗೆ ರಾಧಿಕಾ ಆಪ್ಟೆಯ ಬೆತ್ತಲೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ನಟಿ ಗಾಬರಿಗೊಂಡು ಸ್ಕ್ರಿಪ್ಟ್‌ಗೆ ಇದು ಅಗತ್ಯವೆಂದು ಹೇಳಿದ್ದರು. ಈ ವೀಡಿಯೋ ಆನ್‍ಲೈನ್‍ನಲ್ಲಿ ಸೋರಿಕೆಯಾದ ನಂತರ ನಾನು ಕೆಲವು ದಿನಗಳವರೆಗೆ ಹೊರಹೋಗಲಿಲ್ಲ ಎಂದು ರಾಧಿಕಾ ಆಪ್ಟೆ ಬಹಿರಂಗಪಡಿಸಿದ್ದರು. ಏಕೆಂದರೆ ಚಾಲಕನಿಂದ ಹಿಡಿದು ಸ್ಟೈಲಿಸ್ಟ್ ವರೆಗಿನವರೆಲ್ಲರೂ ಅವಳನ್ನು ಗುರುತಿಸುತ್ತಾರೆ ಎನ್ನುವ ಭಯ ಕಾಡಿತ್ತು.

  • ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ಸೋನು ಸೂದ್

    ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ಸೋನು ಸೂದ್

    ಮುಂಬೈ: ಕೊರೊನಾ ಸಂಕಷ್ಟದಲ್ಲಿ ನಟ ಸೋನು ಸೂದ್ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಸಿಗದೇ ಒದ್ದಾಡುತ್ತಿರುವ, ಆಕ್ಸಿಜನ್ ಸಿಲಿಂಡರ್ ಕೊರತೆ ಅನುಭವಿಸುತ್ತಿರುವ ಸೋಂಕಿತರಿಗಾಗಿ ಸೋನು ಸೂದ್ ಹಲವು ಬಗೆಯಲ್ಲಿ ನೆರವು ನೀಡುತ್ತಿದ್ದಾರೆ. ಈಗ ಅವರು ಆಕ್ಸಿಜನ್ ಕೊಡಿಸುವ ಸಲುವಾಗಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.

    ದೆಹಲಿ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಸ್ಥಾಪಿಸಲು ಸೋನು ಸೂದ್ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವರು ಆಕ್ಸಿಜನ್ ಪ್ಲಾಂಟ್‍ಗಳನ್ನು ಫ್ರಾನ್ಸ್‍ನಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಮೊದಲ ಆಕ್ಸಿಜನ್ ಪ್ಲಾಂಟ್ ಅನ್ನು ಫ್ರಾನ್ಸ್ ನಿಂದ ಆರ್ಡರ್ ಮಾಡಲಾಗಿದ್ದು, 10ರಿಂದ 12 ದಿನಗಳ ಒಳಗೆ ಅದು ಭಾರತಕ್ಕೆ ಬರಲಿದೆ ಎಂದು ಹೇಳಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕು ಎಂದು ಸೋನು ಸೂದ್ ಪಣತೊಟ್ಟು ಸಹಾಯ ಮಾಡಲು ಮುಂದಾಗಿದ್ದಾರೆ.

    ದೇಶದಲ್ಲಿ ಸಾಕಷ್ಟು ಜನರು ಆಕ್ಸಿಜನ್ ಕೊರೆತೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಈಗ ನಾವು ಆಕ್ಸಿಜನ್ ಪ್ಲಾಂಟ್ ಪಡೆಯಲಿದ್ದೇವೆ. ಅದರಿಂದ ಸಿಲಿಂಡರ್‍ಗಳನ್ನು ಸದಾ ಕಾಲ ತುಂಬಿಸಿ ಇಡಲು ಸಹಕಾರಿ ಆಗುತ್ತದೆ. ಕೊವಿಡ್‍ನಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ ಎಂದು ಸೋನು ಸೂದ್ ಹೇಳಿದ್ದಾರೆ. ಮೊದಲ ಆಕ್ಸಿಜನ್ ಪ್ಲಾಂಟ್ ಅನ್ನು ಫ್ರಾನ್ಸ್ ನಿಂದ ಆರ್ಡರ್ ಮಾಡಲಾಗಿದ್ದು, 10ರಿಂದ 12 ದಿನಗಳ ಒಳಗೆ ಅದು ಭಾರತಕ್ಕೆ ಬರಲಿದೆ. ಸಮಯ ಎಂಬುದೇ ಈಗ ನಮಗೆ ದೊಡ್ಡ ಸವಾಲಾಗಿದೆ. ಆದಷ್ಟು ಬೇಗ ಆಕ್ಸಿಜನ್ ಪ್ಲಾಂಟ್ ಬರಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕು ಎಂದಿದ್ದಾರೆ ಸೋನು ಸೂದ್.

    ಸೋನು ಸೂದ್ ಮಾತ್ರವಲ್ಲದೆ, ಬಾಲಿವುಡ್‍ನ ಅನೇಕ ಸೆಲೆಬ್ರಿಟಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಸ್ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ-ವಿರಾಟ್ ಕೊಯ್ಲಿ ಕೂಡ 2 ಕೋಟಿ ರೂ. ದೇಣಿಗೆ ನೀಡಿದ್ದೂ ಅಲ್ಲದೇ ಕೈಲಾದಷ್ಟು ಸಹಾಯ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಅರ್ಜುನ್ ಗೌಡ, ಹರ್ಷಿಕಾ ಪೂಣಚ್ಚ, ಭುವನ್ ಗೌಡ, ಜಗ್ಗೇಶ್, ಉಪೇಂದ್ರ, ಶ್ರೀಮುರಳಿ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.

  • ದೇಣಿಗೆ ನೀಡಿ ಜನ್ಮದಿನವನ್ನು ಸ್ಮರಣಿಯವಾಗಿಸಿಕೊಂಡ ಮಾಜಿ ಕ್ರಿಕೆಟಿಗ

    ದೇಣಿಗೆ ನೀಡಿ ಜನ್ಮದಿನವನ್ನು ಸ್ಮರಣಿಯವಾಗಿಸಿಕೊಂಡ ಮಾಜಿ ಕ್ರಿಕೆಟಿಗ

    ಕೋಲ್ಕತ್ತಾ: ಕೊರೊನಾಗೆ ದೇಶವೇ ತತ್ತರಿಸಿ ಹೋಗುತ್ತಿದೆ. ಸೂಕ್ತ ಬೆಡ್, ಆಕ್ಸಿಜನ್ ಹಾಗೂ ಇತರೇ ವೈದ್ಯಕೀಯ ಉಪಕರಣಗಳ ಕೊರತೆ ಎದುರಿಸುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಗಾರ ರತನ್ ಶುಕ್ಲಾ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

    ಮೇ 6, 2021 ರಂದು ನನ್ನ ಹುಟ್ಟು ಹಬ್ಬವಿದೆ. ನಾನು 2021 ನೇ ಸಾಲಿನ ಐಪಿಎಲ್ ವೀಕ್ಷಕ ವಿವರಣೆಯಲ್ಲಿ ಬಂದಿರುವ ಸಂಪೂರ್ಣ ಸಂಭಾವನೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರಿಹಾರ ನೀಧಿಗೆ ನೀಡುತ್ತಿದೇನೆ. ಕೊರೊನಾ ವಿರುದ್ಧದ ಹೋರಾಟಕ್ಕೆ ನನ್ನ ಸಣ್ಣ ಕೊಡುಗೆ. ಕೊರೊನಾ ವಿರುದ್ಧ ಗೆಲುವು ಸಾಧಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

    ದೇಸಿ ಕ್ರಿಕೆಟ್ ತನ್ನದೇ ಆದ ಛಾಪು ಮೂಡಿಸಿರುವ ಲಕ್ಷ್ಮಿ ರತನ್ ಶುಕ್ಲಾ 1999ರಲ್ಲಿ ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. ಶುಕ್ಲಾ 137 ಪ್ರಥಮ ದರ್ಜೇ, 141 ಲಿಸ್ಟ್ ಎ ಹಾಗೂ 81 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‍ನಲ್ಲಿ ಕೋಲ್ಕತ್ತಾ ನೇಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 2015ರಲ್ಲಿ ಲಕ್ಷ್ಮಿ ರತನ್ ಶುಕ್ಲಾ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ವಿದಾಯ ಹೇಳಿ ವೀಕ್ಷಕ ವಿವರಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

     

  • ಬೈಕ್ ಮಾರಿ ಬಡವರಿಗಾಗಿ ಆಕ್ಸಿಜನ್ ಖರೀದಿಸುತ್ತಿದ್ದಾರೆ  ನಟ

    ಬೈಕ್ ಮಾರಿ ಬಡವರಿಗಾಗಿ ಆಕ್ಸಿಜನ್ ಖರೀದಿಸುತ್ತಿದ್ದಾರೆ ನಟ

    ಬೆಂಗಳೂರು: ಹಿಂದಿ, ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್ ರಾಣೆ ಅವರು ಬಡವರಿಗಾಗಿ ಆಕ್ಸಿಜನ್ ಸಿಲಿಂಡರ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ನೆಚ್ಚಿನ ಬೈಕ್ ಮಾರಾಟ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ 2ನೇ ಅಲೆಗೆ ಜನರು ಕಂಗಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಸ್ ಸಿಗದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ. ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ತಮ್ಮ ಕೈಲಾದಷ್ಟು ನೆರವಾಗುತ್ತಿದ್ದಾರೆ.   ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

    ನನ್ನ ಮೋಟರ್ ಸೈಕಲ್ ಮಾರುತ್ತಿದ್ದೇನೆ. ಅದರಿಂದ ಬಂದ ಹಣದಲ್ಲಿ ಆಕ್ಸಿಜನ್ ಖರೀದಿಸಿ ತುಂಬಾ ಅವಶ್ಯಕತೆ ಇರುವವರಿಗೆ ನೀಡುತ್ತಿದ್ದೇನೆ. ಹೈದರಾಬಾದ್‍ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡು ತನ್ನ ಬೈಕ್ ಫೋಟೋವನ್ನು ಹರ್ಷವರ್ಧನ್ ರಾಣೆ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Harshvardhan Rane (@harshvardhanrane)

    ಹರ್ಷವರ್ಧನ್ ರಾಣೆ ಮಾತ್ರವಲ್ಲದೇ ಇನ್ನು ಅನೇಕ ಸೆಲೆಬ್ರೆಟಿಗು ಇಂಥಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸುನೀಲ್ ಶೆಟ್ಟಿ ಬೆಂಗಳೂರು, ಮುಂಬೈ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ದೊರಕಿಸಲು ಯತ್ನಿಸುತ್ತಿದ್ದಾರೆ. ನಟ ಜಗ್ಗೇಶ್ ಬೆಂಗಳೂರಿನಲ್ಲಿರುವ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ಯಾಂಡಲ್‍ವಡ್ ನಟ ಅರ್ಜುನ್ ಗೌಡ ಕಷ್ಟದ ಸಂದರ್ಭದಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜನರ ಕಷ್ಟಕ್ಕೆ ಹೆಲ್ಪಲೈನ್‍ಗಳನ್ನು ಕೂಡ ಸೆಲೆಬ್ರಿಟಿಗಳು ಮಾಡಿಕೊಂಡು ಸಹಾಯ ಮಾಡುತ್ತಿದ್ದಾರೆ.

  • ಬಿಗ್‍ ಮನೆಯಲ್ಲಿ ಪ್ರಶಾಂತ್, ದಿವ್ಯ ವಾಸ್ತು ಚರ್ಚೆ

    ಬಿಗ್‍ ಮನೆಯಲ್ಲಿ ಪ್ರಶಾಂತ್, ದಿವ್ಯ ವಾಸ್ತು ಚರ್ಚೆ

    ಬೆಂಗಳೂರು: ಒಂಟಿ ಮನೆಯ ಮೊದಲ ದಿನದ ಆಟ ಆರಂಭವಾಗಿದೆ. ಬಿಗ್ ಮನೆಯಲ್ಲಿರುವವರು ಒಂದೇ ದಿನದಲ್ಲಿ ಹಲವಾರು ವಿಚಾರಗಳಿಂದ ಸುದ್ದಿ ಮಾಡುತ್ತಿದ್ದಾರೆ. ಅದೇ ರೀತಿ ಸ್ಪರ್ಧಿಗಳಿಬ್ಬರು ಬಿಗ್ ಮನೆಯ ವಾಸ್ತು ಬಗ್ಗೆ ಚರ್ಚೆ ನಡೆಸಿದ್ದಾರೆ.

    ಪ್ರಶಾಂತ್ ಸಂಬರಗಿ ಮತ್ತು ದಿವ್ಯ ಉರುಡುಗ ಮನೆಯ ಹಾಲ್‍ನಲ್ಲಿ ಕುಳಿತು ಮಾತನಾಡುತ್ತಾ ಬಿಗ್ ಮನೆಯ ವಾಸ್ತುವಿನ ಕುರಿತಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆ ವಾಸ್ತು ಪ್ರಕಾರವಾಗಿ ಇದೆಯೋ ಇಲ್ಲವೋ ಎಂದು ದಿವ್ಯ ಅವರು ಸಂಬರಗಿ ಬಳೀ ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಇಬ್ಬರ ನಡುವೆ ಚರ್ಚೆ ನಡೆದಿದೆ.

    ಯಾವ ಜೀವಿ ಜಗತ್ತಿಗೆ ಬರುತ್ತದೆಯೋ ಆ ಜೀವಿ ಕರ್ಮ ಫಲವನ್ನು ತೆಗೆದುಕೊಂಡು ಬರುತ್ತದೆ. ನೀನು ಪ್ರಾರ್ಥನೆ ಮಾಡುತ್ತೀಯಾ ಎಂದರೆ ದೇವರು ದೆವ್ವವನ್ನು ನಂಬಬೇಕು ಎಂದಿದ್ದಾರೆ. ಈ ವೇಳೆ ದಿವ್ಯ ನಿಮಗೆ ವಾಸ್ತುವನ್ನು ನೋಡಲು ಬರುತ್ತದೆಯಾ? ಹಾಗಾದರೆ ಬಿಗ್ ಬಾಸ್ ಮನೆಯ ವಾಸ್ತುವನ್ನು ನೋಡಿ ಹೇಳಿ ಎಂದಿದ್ದಾರೆ. ಬಿಗ್ ಮನೆ ಶೇ.90 ವಾಸ್ತುಪ್ರಕಾರ ಇದೆ ಎಂದು ಪ್ರಶಾಂತ್ ಸಂಬರಗಿ ಅವರು ದಿವ್ಯ ಉರುಡುಗ ಅವರಿಗೆ ಹೇಳಿದ್ದಾರೆ.

    ಬಿಗ್ ಬಾಸ್ ಮನೆಯ ಕಿಚನ್ ಅಗ್ನಿಮೂಲೆಯಲ್ಲಿ ಇರಬೇಕಿತ್ತು. ಬೆಡ್‍ರೂಮ್, ಬಾತ್‍ರೂಮ್, ದೇವರ ಮನೆ ಸರಿಯಾಗಿದೆ. ಹೀಗಾಗಿ ಬಿಗ್‍ಬಾಸ್ ಮನೆ ಶೇ. 90 ರಷ್ಟು ವಾಸ್ತುಪ್ರಕಾರ ಇದೆ. ಹೀಗಾಗಿಯೇ ಇಷ್ಟೊಂದು ಯಶಸ್ಸು ಬಿಗ್ ಬಾಸ್‍ಗೆ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಮನೆ ತುಂಬಾ ಹಸಿರಾಗಿದೆ. ಪರಿಸರ ಸ್ನೇಹಿಯಾಗಿದೆ. ಆಸ್ಪತ್ರೆ ಬೇಡ್‍ಗಳೆಲ್ಲ ಹಸಿರಾಗಿರುತ್ತೆ ನಮ್ಮ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಇಂತಹ ಬಣ್ಣವನ್ನು ಹಾಕಿರುತ್ತಾರೆ. ಹಿಂದಿನ ಜನ್ಮ, ಈ ಜನ್ಮ ಕುರಿತಾಗಿ ನಂಬಿಕೆ ಇದೆ ಎಂದು ಪ್ರಶಾಂತ್, ದಿವ್ಯರಿಗೆ ವಾಸ್ತುವಿನ ಪಾಠವನ್ನು ಮಾಡಿದ್ದಾರೆ.

    ದಿವ್ಯ ಕೂಡಾ ಪ್ರಶಾಂತ್ ಮಾತನ್ನು ಕೇಳುತ್ತಾ ಅವರಿಗೆ ತೋಚುವ ಪ್ರಶ್ನೆಯನ್ನು ಕೇಳುತ್ತಾ ವಾಸ್ತುವಿನ ಕುರಿತಾಗಿ ಕೇಳಿ ತಿಳಿದುಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಿರುವುದನ್ನು ನೋಡಿದ ಅಭಿಮಾನಿಗಳು ಒಂದೇ ದಿನದಲ್ಲಿ ಇಷ್ಟೊಂದು ಕ್ಲೋಸ್ ಆಗಿದ್ದಾರೆ..? ಬಿಗ್ ಬಾಸ್ ಮನೆಯ ವಾಸ್ತುವಿನ ಕುರಿತಾಗಿ ಮಾತನಾಡುತ್ತಿದ್ದಾರೆ. ಮುಂದೆ ಇವರಿಂದ ನಾವು ಇನ್ನೂ ಹೆಚ್ಚಿನ ಮನರಂಜನೆಯನ್ನು ನೀರಿಕ್ಷೆ ಮಾಡಬಹುದು ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

    ಬಿಗ್‍ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಗೆದ್ದ ಶಮಂತ್ ಗೌಡ್ ಈ ವಾರದ ವಿನ್ನರ್ ಪಟ್ಟದ ಜೊತೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ನಿರ್ಮಲಾ, ಧನುಶ್ರೀ, ಮಂಜು ಪಾವಗಡ, ನಿಧಿ ಮತ್ತು ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಒಟ್ಟಿನಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಅಥವಾ ಉಳಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

  • ಡ್ರಗ್ಸ್ ಮಾಫಿಯಾ ಪ್ರಕರಣ ತನಿಖೆ ನಡೆಸುತ್ತಿರೋ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ: ಸಿಟಿ ರವಿ

    ಡ್ರಗ್ಸ್ ಮಾಫಿಯಾ ಪ್ರಕರಣ ತನಿಖೆ ನಡೆಸುತ್ತಿರೋ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ: ಸಿಟಿ ರವಿ

    ಚಿಕ್ಕಮಗಳೂರು: ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಆಗಾಗ ಮಾಫಿಯಾವನ್ನು ನಿಯಂತ್ರಿಸುವ ಕಾರ್ಯ ಮಾಡಿದ್ದರು ಕೂಡ ಅದನ್ನು ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಈಗ ಸರ್ಕಾರ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ ತನಿಖಾ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಡ್ರಗ್ ಮಾಫಿಯಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 84ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡುವ ಕೆಲಸವಾಗಿದೆ. ಈ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿಲ್ಲ. ಈಗಾಗಲೇ ಗೃಹ ಸಚಿವರು ಈ ಕುರಿತು ಮಾತನಾಡಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಮಾಫಿಯಾದಲ್ಲಿ ಯಾರೇ ಇದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಯುವ ಜನರನ್ನು ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ಡ್ರಗ್ಸ್ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸುತ್ತಿದ್ದೆ. ಆದ್ದರಿಂದಲೇ ತನಿಖಾ ತಂಡದ ಮೇಲೆ ಒತ್ತಡ ತರುವ ಹಾಗೂ ಕೆಲವೊಮ್ಮೆ ವಿಷಯಾಂತರ ಗೊಳಿಸುವಂತಹ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆಲ್ಲಾ ಸರ್ಕಾರ ಮಣಿಯುವುದಿಲ್ಲ ಎಂದು ಹೇಳಿದರು.

    ಡ್ರಗ್ಸ್ ಮಾಫಿಯಾದಲ್ಲಿ ಈಗಾಗಲೇ ಕೆಲ ಸಾಕ್ಷಿಗಳನ್ನು ಆಧರಿಸಿ ಕೆಲವರನ್ನು ವಶಕ್ಕೆ ಪಡೆಯುವ ಮತ್ತು ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸುವ ಕಾರ್ಯವನ್ನು ಮಾಡುದೆ. ಇದರಿಂದಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುವುದು ಅರ್ಥವಾಗುತ್ತದೆ. ಈ ಮಾಫಿಯಾ ಇದು ರಾಜ್ಯಕ್ಕೆ ಸೀಮಿತವಾಗಿಲ್ಲ, ಹೊರರಾಜ್ಯ, ಹೊರದೇಶಗಳ ಸಂಪರ್ಕ ಕೂಡ ಇದೆ. ಕೆಲವು ಕಡೆ ಮಾಫಿಯಾ ಭಯೋತ್ಪಾದಕರ ಜೊತೆ ತಳುಕು ಹಾಕಿಕೊಂಡಿದೆ. ಮತ್ತೆ ಕೆಲವು ಕಡೆ ರಾಜಕಾರಣಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳ ಜೊತೆಯೂ ತಳುಕು ಹಾಕಿಕೊಂಡಿದೆ. ಮಾಫಿಯಾದಲ್ಲಿ ಯಾರೇ ಇದ್ದರೂ ಸರಿಯೇ, ಗಂಭೀರವಾಗಿ ತನಿಖೆಯಾಗುತ್ತದೆ ಎಂದು ತಿಳಿಸಿದರು.

  • ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್  ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

    ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

    ಮುಂಬೈ: ವರ್ಷಕ್ಕೆ 444 ಕೋಟಿ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    35ನೇ ಸ್ಥಾನ ಪಡೆಯುವ ಮೂಲಕ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿಟ್ ಮೇಕರ್ ಟೇಲರ್ ಸ್ವಿಫ್ಟ್ ಅವರು ಮೊದಲ ಸ್ಥಾನ ಪಡೆದಿದ್ದಾರೆ.

    ಅಕ್ಷಯ್ ಕುಮಾರ್ ಅವರನ್ನು “ಬಾಲಿವುಡ್‍ನ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್” ಎಂದು ಬಣ್ಣಿಸಿದೆ. ಅಕ್ಷಯ್ ಕುಮಾರ್ ಅವರು ಒಂದು ಚಿತ್ರಕ್ಕೆ 35 ರಿಂದ 70 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ಸಾಲು ಸಾಲು ಉತ್ತಮ ಚಿತ್ರವನ್ನು ಮಾಡುತ್ತಿರುವ ಅಕ್ಷಯ್ ಅವರು ಪ್ರಸ್ತುತ ಜಗನ್ ಶಕ್ತಿಯ ಮಿಷನ್ ಮಂಗಲ್, ಫರ್ಹಾದ್ ಸಂಜಿಯ ಹೌಸ್ ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ ಲಾರೆನ್ಸ್ ಅವರ ಲಕ್ಷ್ಮಿ ಬಾಂಬ್ ಮತ್ತು ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರಗಳನ್ನು ಮಾಡುತ್ತಿದ್ದಾರೆ.

    ಇದರ ಜೊತೆಗೆ ಅಕ್ಷಯ್ ಕುಮಾರ್ ಅವರು 20 ಕ್ಕೂ ಹೆಚ್ಚಿನ ಉನ್ನತ ಬ್ರಾಂಡ್‍ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಜಾಹೀರಾತಿನಿಂದಲೂ ಹೆಚ್ಚು ಸಂಭಾವನೆ ಸಿಗುತ್ತಿದೆ. ಜೂನ್ 2018 ರಿಂದ ಜೂನ್ 2019 ರವರೆಗೆ ಒಟ್ಟು 444 ಕೋಟಿ ರೂ ಸಂಪಾದನೆ ಮಾಡಿದ ಅಕ್ಷಯ್ ಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎ-ಲಿಸ್ಟರ್‍ ಗಳಾದ ರಿಹಾನ್ನಾ, ಜಾಕಿ ಚಾನ್, ಬ್ರಾಡ್ಲಿ ಕೂಪರ್ ಮತ್ತು ಸ್ಕಾರ್ಲೆಟ್ ಜೋಹಾನ್ಸನ್‍ರನ್ನು ಹಿಂದಿಕ್ಕಿದ್ದಾರೆ.

    ಈ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಿಷನ್ ಮಂಗಳ್ ಚಿತ್ರ ಬಿಡುಗಡೆ ಮಾಡಲು ಅಕ್ಷಯ್ ಸಜ್ಜಾಗಿದ್ದಾರೆ. ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ ಮಿಷನ್ ಮಾರ್ಸ್ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆ ಸೋನಾಕ್ಷಿ ಸಿನ್ಹಾ, ವಿದ್ಯಾ ಬಾಲನ್, ತಾಪ್ಸಿ ಪನ್ನು, ಶರ್ಮನ್ ಜೋಶಿ, ಕೀರ್ತಿ ಕುಲ್ಹಾರಿ ಮತ್ತು ನಿತ್ಯಾ ಮೆನೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರಿಟಿ ಚಾಲೆಂಜ್

    ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರಿಟಿ ಚಾಲೆಂಜ್

    ಬೆಂಗಳೂರು: ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದರು. ಇದೀಗ ತಮ್ಮ ಅಭಿಮಾನಿಗಳಿಗೆ ದರ್ಶನ್ ಚಾಲೆಂಜ್ ಹಾಕಿದ್ದಾರೆ.

    ದರ್ಶನ್ ಚಾಲೆಂಜ್ ಏನು?
    ನಾಡಿನ ಜನತೆ ನನ್ನನ್ನು ಸೆಲೆಬ್ರಟಿ ಎಂದು ಕರೆಯುತ್ತೀರಿ. ನನಗೆ ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರಿಟಿಗಳು. ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲಿದೆ. ದೊಡ್ಡ ತಾರಾಗಣವನ್ನು ಒಳಗೊಂಡಿರುವ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪಾಜಿ (ಅಂಬರೀಶ್), ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಿವಾಸ್ ಮೂರ್ತಿ ನಿಖಿಲ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಹಾಗಾಗಿ ಟಿಕೆಟ್ ನಲ್ಲಿ ಫೋಟೋ ಹಾಕಿಲ್ಲ, ಕಟೌಟ್ ಹಾಕಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ. ನನಗೆ ಏನು ಗೌರವ ಕೊಡುತ್ತೀರಿ, ಅದೇ ಗೌರವವನ್ನು ಸಿನಿಮಾದ ಎಲ್ಲ ಕಲಾವಿದರಿಗೆ ನೀಡಬೇಕು. ಒರ್ವ ಕರ್ಣ, ಅರ್ಜುನ, ದುರ್ಯೋಧನನ್ನು ಹೇಗೆ ನೋಡುತ್ತೀರಿ ಎಂಬುವುದು ನನ್ನ ಅಭಿಮಾನಿಗಳಿಗೆ ಚಾಲೆಂಜ್ ಎಂದು ಹೇಳಿದ್ದಾರೆ.

    ಬೆಳಗ್ಗೆ ಟ್ವೀಟ್ ನಲ್ಲಿ ಏನಿತ್ತು?
    ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದರು.

    ಸೋಮವಾರ ದರ್ಶನ್, ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಎಂದು ಬರೆದು ಟ್ವೀಟ್ ಮಾಡಿದ್ದರು.

  • ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್

    ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್

    ಬೆಂಗಳೂರು: ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಎಂದು ಬರೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

    ಹೌದು. ಇಂದು ಬೆಳಗ್ಗೆ 6.19ಕ್ಕೆ ದರ್ಶನ್ ಮಾಡಿರುವ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಯಾವ ಸೆಲೆಬ್ರಿಟಿಗೆ ಯಾರು ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ? ಅಥವಾ ಬೇರೆಯವರ ಚಾಲೆಂಜ್‍ಯನ್ನು ದಾಸ ಸ್ವಾಗತಿಸಲಿದ್ದಾರಾ? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿದ್ದು, ಬೆಳ್ಳಂಬೆಳಗ್ಗೆ ಏನಪ್ಪಾ ಈ ಚಾಲೆಂಜ್? ಅಂತ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವ ಹಾಗಾಗಿದೆ.

    ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರುತ್ತೇನೆ. ಆಗ ಎಲ್ಲಾನೂ ಹೇಳುತ್ತೇನೆ ಎಂದು ಡಿ ಬಾಸ್ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಯಾರ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ? ಏನಿದು ವಿಷಯ ಎಂದು ತಿಳಿಯಲು ಎಲ್ಲರು ಮಧ್ಯಾಹ್ನದ ವರೆಗೂ ಕಾಯಲೇಬೇಕು.

    ಟ್ವೀಟ್‍ನಲ್ಲಿ ಏನಿದೆ?
    ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

    ದರ್ಶನ್ ತಮ್ಮ ಕುರುಕ್ಷೇತ್ರ ಸಿನಿಮಾ ಕುರಿತು ಚಾಲೆಂಜ್ ಹಾಕುತ್ತಾರಾ ಅಥವಾ ಬೇರೆ ವಿಚಾರದ ಬಗ್ಗೆ ಚಾಲೆಂಜ್ ಹಾಕುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸೋಮವಾರ ದರ್ಶನ್, ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಎಂದು ಬರೆದು ಟ್ವೀಟ್ ಮಾಡಿದ್ದರು.