Tag: ಸೆಲೆಬ್ರಿಟಿಗಳು

  • ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ

    ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ

    ಸೋಶಿಯಲ್ ಮೀಡಿಯಾ (Social Media) ವೇದಿಕೆ ಉಪಯೋಗಿಸಿಕೊಂಡು ಡಿಜಿಟಲ್ ದಾಳಿಕೋರರ ಪ್ರಮಾಣ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳ ಮೇಲೆ ಇಷ್ಟ ಕಷ್ಟ ಕೋಪ ತಾಪವನ್ನ ಈ ಮೂಲಕ ಹೊರಹಾಕಲಾಗುತ್ತದೆ. ಅವರ ಕಾರ್ಯವನ್ನು ಟೀಕಿಸಲಾಗುತ್ತದೆ. ಇಂಥಹ ಟೀಕೆ ಟಿಪ್ಪಣಿಗಳಿಂದ, ಟ್ರೋಲ್ ಬ್ಯಾಡ್ ಕಾಮೆಂಟ್ಸ್‌ಗಳಿಗೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಕೂಡ ಹೊರತಾಗಿಲ್ಲ.

    ಇದೀಗ ಹೈದ್ರಾಬಾದ್‌ನಲ್ಲಿ ‘ಬ್ಲಡ್ ಡೊನೇಷನ್ ಡ್ರೈವ್‌ ʼ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಸೋಶಿಯಲ್ ಮೀಡಿಯಾ ದಾಳಿಕೋರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಕ್ತ ವೇದಿಕೆಯಲ್ಲಿ ತಮ್ಮ ವಿರುದ್ಧ ಕೆಟ್ಟ ಕಾಮೆಂಟ್ ಹಾಗೂ ಟ್ರೋಲ್ ಮಾಡುವವರ ವಿರುದ್ಧ ಚಿರಂಜೀವಿ ಮುಕ್ತವಾಗಿ ಗುಡುಗಿದ್ದಾರೆ.

    ಪರೋಕ್ಷವಾಗಿ ಟ್ರೋಲ್‌ಗಳಿಗೆಲ್ಲ ಹೆದರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಚಿರಂಜೀವಿಯ ಕೌಟುಂಬಿಕ ವಿಚಾರಗಳು , ರಾಜಕೀಯ ಜೀವನ ಹಾಗೂ ಸಿನಿಮಾಗಳ ವಿಚಾರ ಸದಾ ಟ್ರೋಲ್ ಆಗುತ್ತದೆ. ಇದೆಲ್ಲವೂ ತಮಗೆ ಗೊತ್ತು ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ ಮೆಗಾಸ್ಟಾರ್. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಕೊಪ್ಪಳ ಮೂಲದ ಓರ್ವ ವಶಕ್ಕೆ

    ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದೇನು ?
    ಸೋಶಿಯಲ್ ಮೀಡಿಯಾ ಮೂಲಕ ನಮಗೆ ಅಟ್ಯಾಕ್ ಮಾಡ್ತಾನೇ ಇರ್ತಾರೆ, ಅದಕ್ಕೆಲ್ಲ ನಾನು ಪ್ರತಿಕ್ರಿಯೆ ಮಾಡಲ್ಲ. ಜನರು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನವೇ ನನಗೆ ರಕ್ಷಾ ಕವಚ. ಇದರ ಹೊರತಾಗಿ ನಾನು ಮಾತನಾಡುವ ಅವಷ್ಯಕತೆ ಇಲ್ಲ. ನಾವು ಮಾಡುವ ಕೆಲಸವೇ ಮಾತಾಡುತ್ತೆ, ಇದೇ ಸತ್ಯ.

  • ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

    ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

    ಮುಂಬೈ: ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿರುವ ಮುಂಬೈ ಪೊಲೀಸರ ಕಾರ್ಯಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾಹಿದ್ ಕಪೂರ್, ಕತ್ರಿನಾ ಕೈಫ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಲಾಗಿದ್ದು, ಅಧಿಕೃತವಾಗಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ. ಸದ್ಯ ಈ ಕುರಿತ ಸಣ್ಣ ವೀಡಿಯೋ ಬಿಡುಗಡೆ ಮಾಡುವ ಮೂಲಕ ಮುಂಬೈ ಪೊಲೀಸರು ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಈ ವೀಡಿಯೋಗೆ ಬಿಟೌನ್ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರದಲ್ಲೇ ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ: ಪ್ರಿಯಾಂಕ್ ಖರ್ಗೆ

     

    View this post on Instagram

     

    A post shared by Katrina Kaif (@katrinakaif)

    ಈ ಕುರಿತಂತೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ನಿಜವಾಗಿಯೂ ಧನ್ಯವಾದ ತಿಳಿಸಬೇಕು. ಈ ಕಾರ್ಯದಿಂದ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗೆ ತುಂಬಾ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

    ನಟ ಶಾಹಿದ್ ಕಪೂರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ಧನ್ಯವಾದಗಳು. ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟಲು ನಿರ್ಭಯಾ ದಳ ರಚಿಸಲಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿರುವ ಮಹಿಳೆಯರು 103 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

     

    View this post on Instagram

     

    A post shared by Shahid Kapoor (@shahidkapoor)

    ನಟಿ ಕತ್ರಿನಾ ಕೈಫ್ ಕೂಡ ನಿರ್ಭಯಾ ದಳ ಮಹಿಳೆಯರಿಗಾಗಿ ರಚಿಸಲಾಗಿರುವ ತಂಡವಾಗಿದ್ದು, ಮಹಿಳೆಯರು ಸಂಕಷ್ಟದಲ್ಲಿದ್ದಾಗ 103 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮುಂಬೈನಲ್ಲಿ ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

  • ಸಾವಿರಾರು ಜನರಿಗೆ ಅನ್ನದಾತೆಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್

    ಸಾವಿರಾರು ಜನರಿಗೆ ಅನ್ನದಾತೆಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿನಗೂಲಿ ಕಾರ್ಮಿಕರಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಹೊಟ್ಟೆ ತುಂಬ ಊಟ ಹಂಚುತ್ತಿದ್ದಾರೆ.

    ಬಿಟೌನ್ ಬ್ಯೂಟಿ ಜಾಕ್ವೆಲಿನ್ ಕೊರೊನಾ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪೌಂಡೆಶನ್‍ವೊಂದನ್ನು ಶುರು ಮಾಡಿದ್ದಾರೆ. ಹಲವು ಎನ್‍ಜಿಒಗಳ ಜೊತೆಗೆ ಕೈ ಜೋಡಿಸಿದೆ. ಈ ಪೌಂಡೆಶನ್ ಮೂಲಕ ಹಣ ಸಂಗ್ರಹಿಸಿ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ.

    ಮುಂಬೈನ್ ರೋಟಿ ಬ್ಯಾಂಕ್ ಹೆಸರಿನ ಎನ್‍ಜಿಒ ಕಚೇರಿಗೆ ಬೇಟಿ ನೀಡಿದ್ದೇನು. ರೋಟಿ ಬ್ಯಾಂಕ್ ಎನ್‍ಜಿಒ ನಿವೃತ್ತ ಪೊಲೀಸ್ ಅಧಿಕಾರಿ ಡಿ ಶಿವಾನಂದನ್ ಅವರು ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ ತಾರೆಯರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯದ ಹಸ್ತ ಚಾಚಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿ ನಿತ್ಯ 5000 ಜನರಿಗೆ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಆಹಾರವನ್ನು ಪರಿಶೀಲಿಸಿ ಪ್ಯಾಕ್ ಮಾಡಿಸುತ್ತಿದ್ದಾರೆ. ಸೋನು ಸೂದ್ ಅವರು ಕಳೆದವರ್ಷದಿಂದ ಹಲವಾರು ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಆಕ್ಸಿಜನ್ ಪೂರೈಕೆಯನ್ನು ಮಾಡುತ್ತಿದ್ದಾರೆ. ಹೀಗೆ ಹಲವು ಸೆಲೆಬ್ರಿಟಿಗಳು ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಸಹಾಯವನ್ನು ಮಾಡುತ್ತಿದ್ದಾರೆ.

  • ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಬೆಂಗಳೂರು: ಕೊರೊನಾ ಬಳಿಕ ನಟಿಮಣಿಯರಿಗೆ ಮಾಲ್ಡಿವ್ಸ್ ಫೇವರಿಟ್ ಪ್ಲೇಸ್ ಎನ್ನುವಂತಾಗಿದ್ದು, ಸ್ಯಾಂಡಲ್‍ವುಡ್, ಬಾಲಿವುಡ್ ಮಾತ್ರವಲ್ಲದೆ ಇದೀಗ ಟಾಲಿವುಡ್‍ನ ಸಮಂತಾ ಸಹ ಮಾಲ್ಡಿವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹತ್ತಾರು ನಟಿಯರು ಐಲ್ಯಾಂಡ್‍ಗಳಲ್ಲಿ ಮೊಕ್ಕಾಂ ಹೂಡಿದ್ದು, ಕಡಲ ಕಿನಾರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ನಟಿಮಣಿಯರು ಮಾಲ್ಡಿವ್ಸ್ ಗೆ ಭೇಟಿ ನೀಡಲು ಕಾರಣವೇನು, ಇದ್ದಕ್ಕಿದ್ದಂತೆ ಹೋಗಿದ್ದೇಕೆ, ಅಲ್ಲಿನ ಹೋಟೆಲ್ ಹೇಗಿವೆ, ಒಂದು ರಾತ್ರಿ ಹೋಟೆಲ್‍ಗಳಲ್ಲಿ ಕಾಲ ಕಳೆಯಲು ದರ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

     

    View this post on Instagram

     

    A post shared by Shanvi sri (@shanvisri)

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಇದೀಗ ಗೂಡಿನಿಂದ ಹಾರಿದ ಹಕ್ಕಿಗಳಂತಾಗಿದ್ದು, ತನಮ್ಮ ನೆಚ್ಚಿನ ಸ್ಥಳಗಳಿಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಟಿಮಣಿಯರಿಗೆ ಬೀಚ್, ನೀರು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸ್ಯಾಂಡಲ್‍ವುಡ್, ಬಾಲಿವುಡ್ ಹಾಗೂ ಟಾಲಿವುಡ್‍ನ ಬೆಡಗಿಯರು ಮಾಲ್ಡಿವ್ಸ್‍ನ್ನು ತಮ್ಮ ಪ್ರವಾಸದ ಡೆಸ್ಟಿನೇಶನ್ ಮಾಡಿಕೊಂಡಿದ್ದಾರೆ. ಹತ್ತಾರು ನಟಿಯರು ಮತ್ಸ್ಯ ಕನ್ಯೆಯರಂತೆ ಸಮುದ್ರ ವಿಹಾರಿಗಳಾಗಿದ್ದಾರೆ.

    ಕನ್ನಡದ ಪ್ರಣೀತಾ, ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್, ತೆಲುಗಿನ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್ ದಂಪತಿ, ಬಾಲಿವುಡ್‍ನ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾಣಿ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಟೈಗರ್ ಶ್ರಫ್, ಮೌನಿ ರಾಯ್, ನೇಹಾ ಧುಪಿಯಾ ಸೇರಿದಂತೆ ಹತ್ತು ಹಲವು ನಟಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ಒಮ್ಮೆಲೆ ನಟಿಮಣಿಯರು ಮಾಲ್ಡಿವ್ಸ್ ಗೆ ತೆರಳಿದ್ದಾರೆ.

     

    View this post on Instagram

     

    A post shared by Tiger Shroff (@tigerjackieshroff)

    ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್‍ನಿಂದ 31 ಡಿಗ್ರಿ ಸೆಲ್ಸಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ.

    ಮಾಲ್ಡಿವ್ಸ್ ಯಾಕೆ ಇಷ್ಟ?
    ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ. ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ. ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ. ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.

     

    View this post on Instagram

     

    A post shared by Rakul Singh (@rakulpreet)

    ಇಲ್ಲಿ ‘ಒಂದು ದ್ವೀಪ ಒಂದು ರೆಸಾರ್ಟ್’ ಪರಿಕಲ್ಪನೆಯನ್ನು ಅನುಸರಿಸಲಾಗುತ್ತದೆ. ಇದರಿಂದ ಮಾಲ್ಡಿವ್ಸ್ ಗೆ ಭೇಟಿ ನೀಡುವ ಪ್ರಯಾಣಿಕರು ತಾವು ಉಳಿದುಕೊಂಡ ರೆಸಾರ್ಟ್‍ಗೆ ಸೀಮಿತವಾಗುತ್ತಾರೆ. ಹೀಗಾಗಿ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ಸುರಕ್ಷಿತ ಎನ್ನಿಸುತ್ತದೆ. ಅಲ್ಲದೆ ಮಾಲ್ಡಿವ್ಸ್ ಗೆ ಭೇಟಿ ನೀಡದ ಬಳಿಕ ಕ್ವಾರಂಟೈನ್ ಆಗುವ ಅಗತ್ಯವಿಲ್ಲ. ಮಾತ್ರವಲ್ಲದೆ ಪಾಸ್‍ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.

     

    View this post on Instagram

     

    A post shared by Shanvi sri (@shanvisri)

    ರೆಸಾರ್ಟ್ ದರವೆಷ್ಟು?
    ಮಾಲ್ಡಿವ್ಸ್ ನಲ್ಲಿ ಪ್ರತಿ ದ್ವೀಪಕ್ಕೊಂದು ರೆಸಾರ್ಟ್ ಇದ್ದು, ಸಾವಿರಕ್ಕೂ ಅಧಿಕ ರೆಸಾರ್ಟ್‍ಗಳಿವೆ. ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್‍ಗಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ. ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ.

     

    View this post on Instagram

     

    A post shared by Sonakshi Sinha (@aslisona)

    ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಜೋಡಿ ಸಹ ಹನಿಮೂನ್‍ಗಾಗಿ ಮಾಲ್ಡಿವ್ಸ್ ಗೆ ತೆರಳಿದ್ದರು. ಇವರು ಅಂಡರ್ ವಾಟರ್ ಹೋಟೆಲ್‍ನಲ್ಲಿ ತಂಗಿದ್ದರು. ಇದು ವಿಶ್ವದ ಮೊದಲ ಸಬ್‍ಮರ್ಜಡ್ ಹೋಟೆಲ್ ಆಗಿದ್ದು, ಹಿಂದೂ ಮಹಾಸಾಗರದ ಮೇಲ್ಮೈಗಿಂತ 16 ಅಡಿ ಆಳದಲ್ಲಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ. ಕಾಜಲ್ ದಂಪತಿ ಮುರಾಕಾ ಹೋಟೆಲ್‍ನಲ್ಲಿ ತಂಗಿದ್ದು, ಇದರ ಒಂದು ದಿನದ ಬಾಡಿಗೆ ಅಂದಾಜು 37.33 ಲಕ್ಷ ರೂ.ಗಳಾಗಿವೆ. ಇತ್ತೀಚೆಗೆ ಕಾಜಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಸಮುದ್ರದ ಆಳದಲ್ಲಿರುವ ಗಾಜಿನ ರೂಮ್‍ನಲ್ಲಿ ಕುಳಿತಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಈ ಮೂಲಕ ಅಂಡರ್ ವಾಟರ್ ವೇವ್ ತೋರಿಸಿದ್ದರು.

    ರೆಸಾರ್ಟ್‍ಗಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಇದೀಗ ತಂಡೋಪ ತಂಡವಾಗಿ ತೆರಳಿದ್ದಾರೆ.

  • ನಾವೂ ಪಾರ್ಟಿಗಳಿಗೆ ಹೋಗುತ್ತೇವೆ, ಡ್ರಗ್ಸ್ ಎಲ್ಲ ನನಗೆ ಗೊತ್ತಿಲ್ಲ- ಉಪೇಂದ್ರ

    ನಾವೂ ಪಾರ್ಟಿಗಳಿಗೆ ಹೋಗುತ್ತೇವೆ, ಡ್ರಗ್ಸ್ ಎಲ್ಲ ನನಗೆ ಗೊತ್ತಿಲ್ಲ- ಉಪೇಂದ್ರ

    – ಇಂಡಸ್ಟ್ರಿಯಲ್ಲಿ ಯಾರ ಹೆಸರು ಹೇಳಿದರೂ ನನಗೆ ಆಶ್ಚರ್ಯ

    ಬೆಂಗಳೂರು: ನಾವೂ ಪಾರ್ಟಿಗಳಿಗೆ ಹೋಗುತ್ತೇವೆ ಆದರೆ ಡ್ರಗ್ಸ್ ದಂಧೆ ಎಲ್ಲ ನನಗೆ ಗೊತ್ತಿಲ್ಲ ಎಂದು ನಟ ಉಪೇಂದ್ರ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಎಂದು ಗೊತ್ತಿಲ್ಲ. ಆ ಪ್ರಪಂಚವೇ ನಮಗೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ಕೇಳಿ ದಿಗ್ಬ್ರಮೆಯಾಯಿತು. ಸರಿಯಾಗಿ ಮಾಹಿತಿ ಸಿಗುವವರೆಗೂ ಮಾತನಾಡೋದು ಸರಿಯಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನಾವೂ ಸಹ ಹಲವು ಪಾರ್ಟಿಗಳಿಗೆ ಹೋಗಿದ್ದೇವೆ. ಆದರೆ ಯಾರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ ಎಂದರು. ಇದನ್ನೂ ಓದಿ: ಫನ್‍ಗೋಸ್ಕರ ಚಟದ ಹಿಂದೆ ಬೀಳಬಾರದು: ಶಿವರಾಜ್‍ಕುಮಾರ್

    ಪಾರ್ಟಿಗಳಲ್ಲಿ ಡ್ರಗ್ಸ್ ಹೇಗೆ ತಗೋತ್ತಾರೆ ಅನ್ನೋದು ನಮಗೆ ಗೊತ್ತೇ ಇಲ್ಲ. ನಾನು ಯಾವತ್ತೂ ನೋಡಿಲ್ಲ. ಸರಿಯಾದ ಮೂಲಗಳಿಂದ ಮಾಹಿತಿ ಬಂದ ಮೇಲೆ ಗೊತ್ತಾಗುತ್ತೆ. ನನಗೆ ಇದರ ಬಗ್ಗೆ ಸತ್ಯವಾಗಿ ಏನು ಗೊತ್ತಿಲ್ಲ, ಏನನ್ನೂ ನೋಡಿಲ್ಲ. ಯಾರು ಆರೋಪ ಮಾಡುತ್ತಿದ್ದಾರೆ ಅವರನ್ನೇ ಕೇಳಬೇಕು. ಇಂಡಸ್ಟ್ರಿಯಲ್ಲಿ ಇವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೂ ನನಗೆ ಆಶ್ಚರ್ಯವಾಗುತ್ತೆ. ಯಾವುದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಯುವ ಜನತೆಯಲ್ಲಿ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಯುವ ಜನತೆ ಇದರಿಂದ ದೂರ ಇರಿ. ನಶೆಯ ಗುಂಗು ಶಾಶ್ವತ ಅಲ್ಲ, ಯುವಕರು ಇಂತಹ ವಿಷಯಕ್ಕೆ ಕೈ ಹಾಕಬೇಡಿ. ಇದನ್ನು ಸೇವಿಸುವವರು ಸಹ ಇದರಿಂದ ಹೊರಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.

  • ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

    ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಹೊಸ ಹೊಸ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಲೇ ಇರುತ್ತೆ. ಕೆಲವೊಂದು ಚಾಲೆಂಜ್‍ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಆದೇ ಪಟ್ಟಿಗೆ ಈಗ ಪಿಲ್ಲೋ ಚಾಲೆಂಜ್ ಕೂಡ ಸೇರಿಕೊಂಡಿದೆ.

    ಸದ್ಯ ಲಾಕ್‍ಡೌನ್ ಅಲ್ಲಿ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿದೆ. ಈ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರೋದು ಪಿಲ್ಲೋ ಚಾಲೆಂಜ್. ಈ ಚಾಲೆಂಜ್‍ಗೆ ಕೇವಲ ಯುವಕ, ಯುವತಿಯರು, ಮಹಿಳೆಯರು ಮಾತ್ರವಲ್ಲಿ ಸೆಲೆಬ್ರಿಟಿಗಳು, ಪುರುಷರು ಹಾಗೂ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಇವರೆಲ್ಲಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/B_ML5iTj-sx/

    ಹಾಲಿವುಡ್ ನಟಿಯರು ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೇ ಟಾಲಿವುಡ್ ನಟಿ ಪಾಯಲ್ ರಾಜ್‍ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಕೂಡ ಈ ಚಾಲೆಂಜ್ ಸ್ವೀಕರಿಸಿ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/B_CfrgdnUMQ/

    ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ದಿಂಬಿಗೆ ಸೇರಿಸಿ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ. ಮೊದ ಮೊದಲು ಈ ಚಾಲೆಂಜ್ ಅನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದರು, ಆದರೆ ಲಾಕ್‍ಡೌನ್ ಎಫೆಕ್ಟ್ ನಿಂದ ಮನೆಯಲ್ಲೇ ಕೂತು ಬೋರ್ ಆಗಿರುವ ಪುರುಷರೂ ಕೂಡ ಚಾಲೆಂಜ್ ಸ್ವೀಕರಿಸಿ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಈ ಪಿಲ್ಲೋ ಚಾಲೆಂಜ್ ಫೋಟೋವನ್ನು ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

    ಬರೀ ಮೈಗೆ ಅಡ್ಡ ದಿಂಬು ಕಟ್ಟಿಕೊಂಡು ಅದಕ್ಕೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ, ನಾಯಿ ಮರಿ, ಬೆಕ್ಕು, ಗಿಡಗಳ ಜೊತೆ ಫೋಟೋ ತೆಗೆದು ಶೇರ್ ಮಾಡುತ್ತಿದ್ದಾರೆ. ಕೆಲವು ಪುರುಷರು ಕೂಡ ಮಹಿಳೆಯರಂತೆ ಪಿಲ್ಲೋ ಜೊತೆಗೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳಿಗೆ ನೆಟ್ಟುಗರು ಲೈಕ್ಸ್, ಕಮೆಂಟ್‍ಗಳ ಸುರಿಮಳೆಯೇ ಸುರಿಸುತ್ತಿದ್ದಾರೆ.