Tag: ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌

  • ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಬೆಂಗಳೂರು: ಉಗ್ರರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲ ಘೋಷಿಸಿದ ಟರ್ಕಿಗೆ ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಭಾರತದಾದ್ಯಂತ ಟರ್ಕಿ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಈಗ ಆ ಸಾಲಿಗೆ ಬೆಂಗಳೂರು ಕೂಡ ಸೇರಿಕೊಂಡಿದೆ.

    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ ಏರ್​​ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್‌ ರದ್ದು!

    TURKEY PRESIDENT

    ಟರ್ಕಿಯ ಕಂಪನಿಗೆ ಬೆಂಗಳೂರಿನಲ್ಲಿಯೂ ಭಾರಿ ಹೊಡೆತ ಬಿದ್ದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್‌ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಿದೆ.

    ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ (Celebi) ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ರದ್ದು ಮಾಡಿದೆ. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶಿಸಲಾಗಿತ್ತು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌, ಕೊಚ್ಚಿನ್‌, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್‌ ರದ್ದುಗೊಳಿಸಿದೆ.

    ಸೆಲೆಬಿ ಏವಿಯೇಷನ್ ​​ಎರಡು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ವಿಮಾನ ನಿಲ್ದಾಣ ನಿರ್ವಹಣೆ ಕಾರ್ಯಾಚರಣೆ ನಡೆಸುತ್ತಿದ್ದರೆ ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ – ರಾಜನಾಥ್ ಸಿಂಗ್

    ಸೆಲೆಬಿ 2008 ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಉದ್ಯಮದ ಮೂಲಕ ಭಾರತವನ್ನು ಪ್ರವೇಶಿಸಿತು. ಸೆಲೆಬಿ ಕಂಪನಿಗೆ ಕೆಲಸ ನಿರ್ವಹಿಸಲು ಯುಪಿಎ ಸರ್ಕಾರ ಅನುಮತಿ ನೀಡಿತ್ತು.