Tag: ಸೆರೆನಾ ವಿಲಿಯಮ್ಸ್

  • ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್

    ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್

    ವಾಷಿಂಗ್ಟನ್: ಯುಎಸ್ ಓಪನ್‍ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಟೆನಿಸ್ ಲೆಜೆಂಡ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್‍ಗೆ ವಿದಾಯ ಹೇಳಿದ್ದಾರೆ.

    ಯುಎಸ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಟೆನಿಸ್ ಟೂರ್ನಿಯಾಗಿದ್ದು, ಈ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸುವುದಾಗಿ ಈ ಹಿಂದೆಯೇ ಸೆರೆನಾ ಘೋಷಿಸಿದ್ದರು. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ಯುಎಸ್ ಓಪನ್ 3ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇದರೊಂದಿಗೆ ವಿಶ್ವ ಟೆನಿಸ್ ಪ್ರಿಯರ ಮನಗೆದ್ದಿದ್ದ ಲೆಜೆಂಡ್ ಆಟಗಾರ್ತಿ ಭಾವುಕರಾಗಿ ಟೆನಿಸ್ ಅಂಗಳಕ್ಕೆ ಗುಡ್‍ಬೈ ಹೇಳಿದ್ದಾರೆ.

    24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿದ್ದ 40ರ ಹರೆಯದ ಸೆರೆನಾ ಆಸ್ಟ್ರೇಲಿಯಾದ ಅಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಬರೋಬ್ಬರಿ 3 ಗಂಟೆ 5 ನಿಮಿಷಗಳ ಕಾಲ ಹೋರಾಟ ನಡೆಸಿ ಕೊನೆಗೆ ಸೋಲೊಪ್ಪಿಕೊಂಡರು. ಮೊದಲ ಸೆಟ್ ಗೆದ್ದ ಸೆರೆನಾ ಬಳಿಕ ಎರಡು ಸೆಟ್‍ಗಳನ್ನು ಸತತವಾಗಿ ಸೋತು ಟೂರ್ನಿಗೆ ಗುಡ್‍ಬೈ ಘೋಷಿಸಿದ್ದಾರೆ. 7-5, 6-7, 6-1 ಸೆಟ್‍ಗಳಿಂದ ಗೆದ್ದ ಆಜ್ಞಾ ಟೊಮಿಲ್ಲಾನೋವಿಕ್ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು. ಇದನ್ನೂ ಓದಿ: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್ಪ್ರೀತ್‌ ಬುಮ್ರಾ ಬ್ರ್ಯಾಂಡ್‌ ಅಂಬಾಸಿಡರ್‌

    ಟೆನಿಸ್ ಅಂಗಳದಲ್ಲಿ ಮಿಂಚಿನ ಪಾದ ಚಲನೆ ಮೂಲಕ ಅದೆಷ್ಟೋ ಅಗ್ರಗಣ್ಯ ಆಟಗಾರ್ತಿಯರನ್ನು ಸೋಲಿಸಿ ವಿಶ್ವದ ಗಮನಸೆಳೆದಿದ್ದ ಸೆರೆನಾ ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ವಾಷಿಂಗ್ಟನ್: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕ್ರೀಡೆಯಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. 32 ಬಾರಿ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಗೆದ್ದಿರುವ, 40 ವರ್ಷದ ಸೆರೆನಾ ಟೆನಿಸ್‌ಗೆ ವಿದಾಯ ಹೇಳಲು ಕ್ಷಣಗಣನೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ನೀವು ಯಾವುದನ್ನಾದರೂ ತುಂಬಾ ಪ್ರೀತಿಸಿದಾಗ ಅದಕ್ಕೆ ಸಮಯ ಕಷ್ಟಗಳನ್ನು ಕೊಡುತ್ತದೆ. ನಾನು ಟೆನಿಸ್ ಅನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದೆ. ನಾನು ಒಬ್ಬ ತಾಯಿಯಾಗಿ ಗಮನಹರಿಸಬೇಕಿದೆ, ಆಧ್ಯಾತ್ಮಿಕ ಗುರಿಗಳನ್ನು ತಲುಪಬೇಕಿದೆ. ಅಂತಿಮವಾಗಿ ವಿಭಿನ್ನ, ರೋಮಾಂಚನಕಾರಿ ಸೆರೆನಾಳನ್ನು ಕಂಡುಹಿಡಿಯಬೇಕಿದೆ. ಮುಂದಿನ ಕೆಲವು ವಾರಗಳ ವರೆಗೆ ಈ ಕ್ಷಣವನ್ನು ಸವಿಯಲಿದ್ದೇನೆ ಎಂದು ಸೆರೆನಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ.

     

     

    View this post on Instagram

     

    A post shared by Serena Williams (@serenawilliams)

    ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ. ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಎಲ್ಲಿ-ಯಾವಾಗ? – ಇಲ್ಲಿದೆ ಡೀಟೈಲ್ಸ್

    ಬಹುಶಃ ನಾನು ಏನನ್ನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದ ವಿಕಾಸವಾಗಿದೆ. ನಾನು ಟೆನಿಸ್‌ನಿಂದ ದೂರವಾಗಿ, ಮುಖ್ಯವಾದ ಇತರ ವಿಷಯಗಳ ಕಡೆಗೆ ಬೆಳೆಯುತ್ತಿದ್ದೇನೆ ಎಂಬುದನ್ನು ತಿಳಿಸಬೇಕಿದೆ. ಕೆಲವು ವರ್ಷಗಳ ಹಿಂದೆ ನಾನು ಸದ್ದಿಲ್ಲದೆ ಸೆರೆನಾ ವೆಂಚರ್ಸ್, ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಪ್ರಾರಂಭಿಸಿದ್ದೆ. ಅದರ ಬಳಿಕ ನಾನು ಕುಟುಂಬವನ್ನು ಪ್ರಾರಂಭಿಸಿದೆ. ನಾನು ಆ ಕುಟುಂಬವನ್ನು ಬೆಳೆಸಲು ಬಯಸುತ್ತೇನೆ ಎಂದು ಸೆರೆನಾ ತಿಳಿಸಿದ್ದಾರೆ.

    ಸೆರೆನಾ 1999ರಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಪಂದ್ಯಾವಳಿ ಗೆದ್ದಿದ್ದರು. ಈ ವರ್ಷದ ಯುಎಸ್ ಓಪನ್ ಪಂದ್ಯಾವಳಿ ಬಳಿಕ ಟೆನಿಸ್ ತ್ಯಜಿಸಲು ಯೋಜಿಸುತ್ತಿರುವುದಾಗಿ ಸೆರೆನಾ ತಿಳಿಸಿದ್ದಾರೆ. ಇದನ್ನೂ ಓದಿ: ನೆರವು ಕೇಳಿದ್ದಕ್ಕೆ ನೀವು ದೆಹಲಿ ಪ್ರತಿನಿಧಿಸಿದ್ರಾ ಎಂದು ಪ್ರಶ್ನಿಸಿದ್ದ AAP ಶಾಸಕನಿಗೆ ಸರ್ಟಿಫಿಕೇಟ್‌ ತೋರಿಸಿ ತಿರುಗೇಟು ಕೊಟ್ಟ ಕುಸ್ತಿಪಟು

    Live Tv
    [brid partner=56869869 player=32851 video=960834 autoplay=true]

  • ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ವಾಷಿಂಗ್ಟನ್: ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ಗೆ ಭರ್ಜರಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಅವರು ಅಮೆರಿಕದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅವರಿಂದ ಬಾಕ್ಸಿಂಗ್ ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಮೆರಿಕದ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿವಿಧ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ಯಾಟ್ರಿಕ್ ಮೊರಾಟೊಗ್ಲೊ ತರಬೇತಿ ನೀಡುತ್ತಿದ್ದಾರೆ.

    https://twitter.com/MikeTyson/status/1207466348940410880

    ಸೆರೆನಾ ವಿಲಿಯಮ್ಸ್ ಅವರನ್ನು ಈ ಬಾರಿ ವಿಭಿನ್ನವಾಗಿ ಸಿದ್ಧಪಡಿಸುತ್ತಿರುವ ಪ್ಯಾಟ್ರಿಕ್ ಮೊರಾಟೊಗ್ಲೊ, ಬಾಕ್ಸಿಂಗ್ ಕೂಡ ಕಲಿಸುತ್ತಿದ್ದಾರೆ. ಸೆರೆನಾ ಅಮೆರಿಕದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗೆ ಬಾಕ್ಸಿಂಗ್ ತರಬೇತಿ ಪಡೆದಿದ್ದಾರೆ.

    ಸಾಂಪ್ರದಾಯಿಕ ತರಬೇತಿ ನೀಡಲು ನನಗೆ ಇಷ್ಟವಿಲ್ಲ. ಆದ್ದರಿಂದ ಆಟಗಾರರಿಗಾಗಿ ವಿಶೇಷ ರೀತಿಯಲ್ಲಿ ತರಬೇತಿ ನೀಡುತ್ತಿರುವೆ. ಇದರಲ್ಲಿ ಹಿರಿಯ ಆಟಗಾರರಲ್ಲದೆ ಯುವಕರು ಇದ್ದಾರೆ. ಬಾಕ್ಸಿಂಗ್ ಅಷ್ಟೇ ಅಲ್ಲದೆ ಮನರಂಜನೆ ನೀಡಲಾಗುತ್ತಿದೆ. ಜೊತೆಗೆ ವಿಶ್ವದ ಕ್ರೀಡಾ ದಿಗ್ಗಜರನ್ನು ಕರೆಸಿ ಆಟಗಾರರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಪ್ಯಾಟ್ರಿಕ್ ಮೊರಾಟೊಗ್ಲೊ ತಿಳಿಸಿದ್ದಾರೆ.

    ಸೆರೆನಾ ಅತ್ಯಂತ ಯಶಸ್ವಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಆಟಗಾರ್ತಿ ಆಗಿದ್ದಾರೆ. ಸೆರೆನಾ ಈವರೆಗೂ 7 ಬಾರಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಚಾಂಪಿಯನ್ ಆಗಿದ್ದಾರೆ. 2019 ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ನವೋಮಿ ಒಸಾಕಾ ಅವರು ಪೆಟ್ರಾ ಕ್ವಿಟೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.

  • ಒಂದು ಮಗುವಾದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆರೆನಾ ವಿಲಿಯಮ್ಸ್

    ಒಂದು ಮಗುವಾದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆರೆನಾ ವಿಲಿಯಮ್ಸ್

    ವಾಷಿಂಗಟನ್: ಖ್ಯಾತ ಟೆನ್ನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಒಂದು ಮಗುವಿನ ಬಳಿಕ ಪ್ರಿಯತಮ ಅಲೆಕ್ಸಿಸ್ ಓಹಾನಿಯನ್ ರನ್ನು ಮದುವೆಯಾಗಿದ್ದಾರೆ.

    ಸೆರೆನಾ ವಿವಾಹ ಪೂರ್ವ ಸೆಪ್ಟಂಬರ್ 01ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗುರುವಾರದಂದು ರೆಡಿಟ್ ಸಂಸ್ಥೆಯ ಸಹ ಸ್ಥಾಪಕ ಅಲೆಕ್ಸಿಸ್ ರನ್ನು ವರಿಸಿದ್ದಾರೆ. ಬಿಗ್ ಈಸಿಯ ಕಂಟೆಂಪರರಿ ಆರ್ಟ್ಸ್ ಸೆಂಟರ್‍ನಲ್ಲಿ ಸೆರೆನಾ ಮತ್ತು ಅಲೆಕ್ಸಿಸ್ ಸತಿಪತಿಗಳಾಗಿದ್ದಾರೆ. ಸೆರೆನಾ ಮದುವೆಯಲ್ಲಿ ಶ್ವೇತ ಬಣ್ಣದ ವೆಡ್ಡಿಂಗ್ ಗೌನ್ ಧರಿಸಿದ್ದರೆ, ಅಲೆಕ್ಸಿಸ್ ಕಪ್ಪು ಬಣ್ಣದ ಸೂಟ್ ನಲ್ಲಿ ಮಿಂಚುತ್ತಿದ್ದರು.

    ಸೆಪ್ಟಂಬರ್ ನಲ್ಲಿ ಹೊಸ ಅತಿಥಿಯನ್ನು ಮನೆಗೆ ಬರಮಾಡಿಕೊಂಡ ಅಲೆಕ್ಸಿಸ್ ಮತ್ತು ಸೆರೆನಾ ತಮ್ಮ ಮಗಳಿಗೆ ಅಲೆಕ್ಸಿಸ್ ಒಲಂಪಿಯಾ ಜೂನಿಯರ್ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ 36 ವರ್ಷದ ಸೆರೆನಾ ಮತ್ತು ಅಲೆಕ್ಸಿಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಮದುವೆಗೆ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನವದಂಪತಿ ಮದುವೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಸೆರೆನಾ ಮೊದಲು ಇನ್ ಸ್ಟಾಗ್ರಾಂನಲ್ಲಿ ಸಹೋದರಿ ವೀನಸ್ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ನಂತರ ವೆಡ್ಡಿಂಗ್ ಗೌನ್ ಧರಿಸಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಸೆರೆನಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ವೃತ್ತಿ ಜೀವನದಲ್ಲಿ ಸೆರೆನಾ ಇದೂವರೆಗೂ 23 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜನೆವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಮುಂದಿನ ವರ್ಷ ಜನವರಿ ತಿಂಗಳಿನಿಂದ ಟೆನ್ನಿಸ್ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

    https://www.instagram.com/p/Bbn_eq8B3Y1/?hl=en&taken-by=alexisohanian

    https://www.instagram.com/p/Bbn-zE0BWv7/?hl=en&taken-by=alexisohanian

    https://www.instagram.com/p/BbnsiwWA1Lr/?hl=en&taken-by=melbarlowandco

    https://www.instagram.com/p/Bbnj0BbB1Zv/?hl=en&taken-by=serenawilliams

    https://www.instagram.com/p/Bbm-OdHhzUv/?hl=en&taken-by=serenawilliams

    https://www.instagram.com/p/BbJ6nZ6BvNb/?hl=en&taken-by=serenawilliams

    https://www.instagram.com/p/BbE3dh5BJ5K/?hl=en&taken-by=serenawilliams

    https://www.instagram.com/p/BY9fxUzholu/?hl=en&taken-by=serenawilliams

    https://www.instagram.com/p/BX2xNgDBRyX/?hl=en&taken-by=serenawilliams

    https://www.instagram.com/p/BWFn2zmBrCf/?hl=en&taken-by=serenawilliams

    https://www.instagram.com/p/Bbn73WdhnJI/?hl=en&taken-by=alexisohanian

    https://www.instagram.com/p/BbntWDpB2MZ/?hl=en&taken-by=alexisohanian

    https://www.instagram.com/p/BaZIhV2hF1G/?hl=en&taken-by=alexisohanian

    https://www.instagram.com/p/BZWPhTRh2aJ/?hl=en&taken-by=alexisohanian

    https://www.instagram.com/p/BX5sn0xhKuM/?hl=en&taken-by=alexisohanian

    https://www.instagram.com/p/BWsFPwUBZHU/?hl=en&taken-by=alexisohanian

    https://www.instagram.com/p/BV21nk9BK4w/?hl=en&taken-by=alexisohanian

    https://www.instagram.com/p/BZJWTm7Bcx2/?hl=en&taken-by=alexisohanian