Tag: ಸೆಮಿ ಫೈನಲ್

  • ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

    ತುಮಕೂರು: ಬುಧವಾರ ಟೀಂ ಇಂಡಿಯಾ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಸೆಮಿ ಫೈನಲ್ (Semi Final) ಕ್ರಿಕೆಟ್ ಪಂದ್ಯ ನಡೆದಿದ್ದು, 70 ರನ್‌ಗಳ ಅಂತರದಲ್ಲಿ ಭಾರತ ಭರ್ಜರಿ ಜಯ ಗಳಿಸಿ ವಿಶ್ವಕಪ್ (World Cup) ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ನಡುವೆ ತುಮಕೂರಿನಲ್ಲಿ (Tumakuru) ಕ್ರಿಕೆಟ್ ಪ್ರೇಮಿಗಳು ತಮ್ಮ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಇಂಡೋ-ಕಿವೀಸ್ ಸೆಮಿ ಫೈನಲ್ ಮ್ಯಾಚ್ ಹಾಕಿಸಿ ಸುದ್ದಿಯಾಗಿದ್ದಾರೆ.

    ಪಾವಗಡದ (Pavagada) ಎಸ್‌ಎಸ್‌ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪ್ರೇಮಿಗಳಾದ ಸೌಂದರ್ಯ ಹಾಗೂ ಕಾರ್ತಿಕ್ ಸೆಮಿ ಫೈನಲ್ ದಿನವೇ ತಮ್ಮ ಮದುವೆ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲೇ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ವಧು ಹಾಗೂ ವರ ಮದುವೆ ಮಂಟಪದಲ್ಲಿ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಿದ್ದು, ಆರತಕ್ಷತೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಇಡಿ (LED) ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    ಮದುವೆಗೆಂದು ಬಂದವರಿಗೆ ಆರ್ಕೆಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಇಡಿ ವ್ಯವಸ್ಥೆ ಕಲ್ಪಿಸಿದ್ದು, ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದೊಂದಿಗೆ ಪಂದ್ಯ ವೀಕ್ಷಣೆಯ ಭಾಗ್ಯ ಲಭಿಸಿದೆ. ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿದೆ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ

  • ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?

    ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?

    ಮುಂಬೈ: ಈ ಬಾರಿಯ ವಿಶ್ವಕಪ್‌ನ ಹಾಟ್ ಫೇವರೇಟ್ ಭಾರತ ತಂಡ (Team India) ಇಂದು ವಿಶ್ವಕಪ್‌ನ (World Cup) ಮೊದಲ ಸೆಮಿ ಫೈನಲ್‌ನಲ್ಲಿ (Semi Final) ನ್ಯೂಜಿಲೆಂಡ್ (New Zealand) ತಂಡವನ್ನು ಎದುರಿಸಲಿದೆ. ಕಳೆದ ಬಾರಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ಭಾರತ ತಂಡ, ಈ ಬಾರಿ ಅದೇ ತಂಡದ ವಿರುದ್ದ ಸೆಮಿಫೈನಲ್ ಆಡುತ್ತಿದ್ದು, ಈ ಬಾರಿ ಗೆಲುವಿನ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

    ಏಕದಿನ ವಿಶ್ವಕಪ್ ಮಹಾ ಸಂಗ್ರಾಮ ಉಪಾಂತ್ಯಕ್ಕೆ ಬಂದಾಗಿದೆ. ಬಲಿಷ್ಠ ನಾಲ್ಕು ತಂಡಗಳ ಕಾದಾಟಕ್ಕೆ ರಣಾಂಗಣ ಕೂಡ ಸಜ್ಜಾಗಿದೆ. ಆದರೆ, ಈ ಬಾರಿಯ ಸೆಮಿಫೈನಲ್‌ನ ಮೊದಲ ಪಂದ್ಯ ಕೇವಲ ಪಂದ್ಯವಾಗಿ ಉಳಿದಿಲ್ಲ. ಬದಲಾಗಿ ಕಿವೀಸ್ ಪಡೆಯ ವಿರುದ್ಧ ಭಾರತ ತಂಡದ ಸೇಡಿನ ಸಮರವಾಗಿದೆ. ಐಸಿಸಿ (ICC) ಟೂರ್ನಿಯಲ್ಲಿ ಭಾರತ ತಂಡಕ್ಕೆ ಕಿವೀಸ್ ನೀಡಿದ ಆ ಎರಡು ಬ್ಯಾಕ್ ಟು ಬ್ಯಾಕ್ ಶಾಕ್ ಇನ್ನೂ ಕೂಡ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಾಗಿ ಉಳಿದಿದ್ದು, ಈ ಬಾರಿಯ ವಿಶ್ವಕಪ್ ಸೆಮಿಸ್‌ನಲ್ಲಿ ಮುಯ್ಯಿ ತೀರಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ಕೂಡ ಹಳೇ ನೋವು ಮರೆಸುವ ನಿಟ್ಟಿನಲ್ಲಿ ಸಜ್ಜಾಗಿದೆ. ಇದನ್ನೂ ಓದಿ: ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್..!

    2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತೀಯರು ಇಂದಿಗೂ ಆ ಸೋಲಿನ ನೋವು ಮರೆತಿಲ್ಲ. 2019ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ್ದ ನ್ಯೂಜಿಲೆಂಡ್, ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರು ಮಾಡಿತ್ತು. ಇದಕ್ಕೆಲ್ಲಾ ಕಾರಣ ಧೋನಿಯ (MS Dhoni) ಆ ಒಂದೇ ಒಂದು ರನೌಟ್. ಆ ಪಂದ್ಯದಲ್ಲಿ ಕೊನೆಯ ಓವರ್‌ಗಳಲ್ಲಿ ಎಡವಿದ್ದ ಭಾರತ ತಂಡ ಸೆಮಿಸ್‌ನಲ್ಲಿ ಸೋಲುವ ಮೂಲಕ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕನಸಾಗೇ ಉಳಿದಿತ್ತು. ಕ್ರಿಕೆಟ್ ಪ್ರೇಮಿಗಳಿಗೆ ಈ ನೋವು ಮಾಸುವ ಮುನ್ನವೇ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲೂ ಕೂಡ ಭಾರತಕ್ಕೆ ನ್ಯೂಜಿಲೆಂಡ್ ಶಾಕ್ ನೀಡಿ ಚಾಂಪಿಯನ್ ಆಗಿ ಗೆದ್ದು ಬೀಗಿತ್ತು. ಆ ಎರಡು ಸೋಲುಗಳಿಗೆ ಇಂದು ಮುಯ್ಯಿ ತೀರಿಸಿಕೊಳ್ಳುವ ಸಮಯ ಬಂದಿದ್ದು, ಟೀ ಇಂಡಿಯಾ ಕೂಡ ಭರ್ಜರಿ ತಯಾರಿ ನಡೆಸಿದೆ. ಇದನ್ನೂ ಓದಿ: 1,20,000 ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಟಿಕೆಟ್ ಮಾರಾಟ – ಓರ್ವ ಅರೆಸ್ಟ್

    ಇನ್ನೂ ಐಸಿಸಿ ವಿಶ್ವಕಪ್ 2023ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿದರೆ ಭಾರತ ಬಲಿಷ್ಠ ತಂಡವೇ ಆಗಿದೆ. ಆದರೆ ಉಭಯ ತಂಡಗಳ ವಿಶ್ವಕಪ್ ಮುಖಾಮುಖಿಯಲ್ಲಿ ಕಿವೀಸ್ ಬಲಿಷ್ಠವಾಗಿದೆ. 2003ರ ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಕೊನೆಯ ಬಾರಿಗೆ ಜಯ ಸಾಧಿಸಿತ್ತು. ಆ ಬಳಿಕ 2007, 2011 ಮತ್ತು 2015ರ ವಿಶ್ವಕಪ್ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಆಡಿರಲಿಲ್ಲ. ಒಟ್ಟು 10 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಐದು ಪಂದ್ಯಗಳನ್ನು ಗೆದ್ದರೆ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ ಈ ಅಂಕಿ ಅಂಶ ಈ ಬಾರಿ ದೊಡ್ಡ ಮಟ್ಟಿಗೆ ವರ್ಕೌಟ್ ಆಗಿಲ್ಲ ಅನ್ನೋದು ಅವರ ಲೆಕ್ಕಾಚಾರ. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್‌-ಸಚಿನ್‌ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್‌ ತಂದೆ

    ಇನ್ನೂ ಈಗಾಗಲೇ ಅಜೇಯವಾಗಿ ಉಪಾಂತ್ಯಕ್ಕೆ ತಲುಪಿರೋ ಟೀ ಇಂಡಿಯಾ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲೂ ಬಲಿಷ್ಠವಾಗಿಯೇ ಇದೆ. ಜೊತೆಗೆ ಈಗಾಗಲೇ ಕಳೆದ ಪಂದ್ಯಗಳಲ್ಲಿ ಆಡಿದ್ದ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಇವತ್ತಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಬಹುತೇಕ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಇತ್ತ ನ್ಯೂಜಿಲೆಂಡ್ ಕೂಡ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಕೊಂಚ ಎಡವಿತ್ತು. ಆದರೆ ಸೆಮಿಸ್‌ಗೆ ಬರುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇಂದು ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಎದುರಿಸಲು ಕಿವೀಸ್ ಕೂಡ ಉತ್ತಮ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿದೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

  • ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

    ಕೋಲ್ಕತ್ತಾ: ಸತತ 4 ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ (Pakistan) ಕೊನೆಗೂ ತನ್ನ 7ನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಬೌಲರ್‌ ಮತ್ತು ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದಿಂದ ಬಾಂಗ್ಲಾದೇಶದ (Bangladesh) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಪಾಕ್‌ ಅಂಕ ಪಟ್ಟಿಯಲ್ಲಿ 6 ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಬಾಂಗ್ಲಾದೇಶ 45.1 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನೂ 105 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆದು ಜಯಗಳಿಸಿತು. 7 ಪಂದ್ಯವಾಡಿ ಕೇವಲ 2 ಅಂಕ ಸಂಪಾದಿಸಿರುವ ಬಾಂಗ್ಲಾ ಈ ಪಂದ್ಯವನ್ನು ಸೋಲುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಸೆಮಿ ಫೈನಲ್‌ ರೇಸ್‌ನಿಂದ ಹೊರನಡೆಯಿತು.

    ಪಾಕ್‌ ಆರಂಭಿಕ ಆಟಗಾರರಾದ ಅಬ್ದುಲ್ಲಾ ಶಫಿಕ್‌ ಮತ್ತು ಫಖರ್‌ ಜಮಾನ್‌ ಮೊದಲ ವಿಕೆಟಿಗ 127 ಎಸೆತಗಳಿಗೆ 128 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಬಾಂಗ್ಲಾ ಕೈಯಿಂದ ಕಸಿದರು. ಅಬ್ದುಲ್ಲಾ ಶಫಿಕ್‌ 68 ರನ್‌ (69 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಫಖರ್‌ ಜಮಾನ್‌ 81 ರನ್‌ (74 ಎಸೆತ, 3 ಬೌಂಡರಿ, 7 ಸಿಕ್ಸರ್‌) ಚಚ್ಚಿ ಔಟಾದರು.  ಇದನ್ನೂ ಓದಿ: ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

    ನಾಯಕ ಬಾಬರ್‌ ಅಜಂ 9 ರನ್‌ ಗಳಿಸಿ ಔಟಾದರೂ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 26 ರನ್‌ (21 ಎಸೆತ, 4 ಬೌಂಡರಿ) ಇಫ್ತಿಕಾರ್‌ ಅಹ್ಮದ್‌ ಔಟಾಗದೇ 17 ರನ್‌ (15 ಎಸೆತ, 2 ಬೌಂಡರಿ) ಹೊಡೆಯುವ ಮೂಲಕ ಜಯವನ್ನು ತಂದುಕೊಟ್ಟರು.

    ಆರಂಭದಲ್ಲೇ ಶಾಹಿನ್‌ ಅಫ್ರಿದಿ 2 ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾಗೆ ಶಾಕ್‌ ನೀಡಿದರು. 23 ರನ್‌ಗಳಿಗೆ ಬಾಂಗ್ಲಾ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಲಿಟ್ಟನ್‌ ದಾಸ್‌ 45 ರನ್‌ (64 ಎಸೆತ, 6 ಬೌಂಡರಿ), ಮೊಹಮದುಲ್ಲಾ 56 ರನ್‌ (70 ಎಸೆತ, 6 ಬೌಂಡರಿ, 1 ಸಿಕ್ಸರ್‌), ನಾಯಕ ಶಕಿಬ್‌ ಉಲ್‌ ಹಸನ್‌ 43 ರನ್‌ (64 ಬೌಂಡರಿ, 4 ಸಿಕ್ಸರ್‌) ಹೊಡೆದ ಪರಿಣಾಮ ಬಾಂಗ್ಲಾದೇಶ 200 ರನ್‌ಗಳ ಗಡಿ ದಾಟಿತು.

    ಶಾಹಿನ್‌ ಅಫ್ರಿದಿ 9 ಓವರ್‌ ಎಸೆದು 1 ಮೇಡನ್‌ ಮಾಡಿ 23 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಸಿಮ್‌ 3 ವಿಕೆಟ್‌ ಪಡೆದರು. ಹ್ಯಾರಿಸ್‌ ರೌಫ್‌ 2 ವಿಕೆಟ್‌ ಪಡೆದರು.

    ಪಾಕಿಸ್ತಾನ 7 ಪಂದ್ಯವಾಡಿ 5ನೇ ಸ್ಥಾನ ಪಡೆದರೂ ಸೆಮಿಫೈನಲ್‌ ಪ್ರವೇಶ ಉಳಿದ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ದಕ್ಷಿಣ ಆಫ್ರಿಕಾ 10 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ,ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ತಲಾ 8 ಅಂಕ ಪಡೆದು ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳನ್ನು ಗೆದ್ದಿರುವ ಭಾರತ 12 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಟೋಕಿಯೋ: ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೆಮಿಯಲ್ಲಿ ಸೋತಿದ್ದು, ಕಂಚಿನ ಪದಕವನ್ನು ಗೆದ್ದಿದ್ದಾರೆ.

    69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ ಮನೇಲಿ ವಿರುದ್ಧ ಲವ್ಲೀನಾ 0-5 ಅಂಕಗಳಿಂದ ಸೋತಿದ್ದಾರೆ. ಈ ಪಂದ್ಯ ಸೋತರೂ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲ ಸ್ಪರ್ಧಿಗಳಿಗೆ ಪದಕ ನೀಡುವ ಕಾರಣ ಲವ್ಲೀನಾ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

    ಮೀರಾಬಾಯಿ ಚಾನು ಮತ್ತು ಪಿ.ವಿ. ಸಿಂಧು ಈಗಾಗಲೇ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಿದ್ದಾರೆ.

  • ಕ್ರೀಡಾಂಗಣದ ಮೇಲೆ ವಿಮಾನ ಹಾರಾಟ ನಿಷೇಧ – ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

    ಕ್ರೀಡಾಂಗಣದ ಮೇಲೆ ವಿಮಾನ ಹಾರಾಟ ನಿಷೇಧ – ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

    ಲಂಡನ್: ವಿಶ್ವಕಪ್ ಸೆಮಿ ಫೈನಲ್ ಕದನ ನಡೆಯುತ್ತಿರುವ ಓಲ್ಡ್ ಟ್ರಾರ್ಫಡ್ ಕ್ರೀಡಾಂಗಣದ ಪ್ರದೇಶದಲ್ಲಿ ಬಿಗಿ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಪ್ರದೇಶದ ಮೇಲೆ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ.

    ಶ್ರೀಲಂಕಾ ವಿರುದ್ಧ ಟೂರ್ನಿಯ ಲೀಗ್ ಹಂತದ ಪಂದ್ಯದ ವೇಳೆ ಭಾರತದ ವಿರೋಧಿ ಹೇಳಿಕೆ ಹೊಂದಿದ್ದ ವಿಮಾನ ಹಾರಾಟ ನಡೆಸಿತ್ತು. ಪರಿಣಾಮ ಆಟಗಾರರ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಬಿಸಿಸಿಐ ಕೂಡಲೇ ಐಸಿಸಿಗೆ ಖರವಾದ ಪತ್ರ ಬರೆದು ಕ್ರಮಕೈಗೊಳ್ಳಲು ಕೋರಿತ್ತು.

    ಬಿಸಿಸಿಐ ಪತ್ರಕ್ಕೆ ಕ್ರಮಕೈಗೊಂಡಿರುವ ವೇಲ್ಸ್ ಕ್ರಿಕೆಟ್ ಬೋಡ್ (ಇಸಿಬಿ) ಬಿಸಿಸಿಐಗೆ ಮಾಹಿತಿ ನೀಡಿದೆ. ಆಟಗಾರರ ಭದ್ರತೆ ಬಗ್ಗೆ ನಮಗೆ ಅರಿವಿದೆ. ಈಗಾಗಲೇ ಬಿಗಿ ಭದ್ರತೆ ವಹಿಸಲಾಗಿದೆ. ಕ್ರೀಡಾಂಗಣದ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಯಾವುದೇ ಅಂತರಾಷ್ಟ್ರೀಯ ಪಂದ್ಯ ನಡೆಯುವ ಕ್ರೀಡಾಂಗಣದ ಮೇಲೆ ಯಾವುದೇ ಒಂದು ದೇಶದ ವಿರೋಧವಾಗಿ ಅಥವಾ ಜನಾಂಗದ ವಿರೋಧವಾಗಿ ಘೋಷಣೆ ಮಾಡುವುದು ನಿಯಮ ಬಾಹಿರವಾಗಿದೆ. ಐಸಿಸಿದಂತಹ ಟೂರ್ನಿಯಂತಹ ಪಂದ್ಯಗಳ ವೇಳೆಯೇ ಇಂತಹ ಘಟನೆ ನಡೆದಿರುವ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು.

    ಚಹಲ್ ಇನ್: ಇತ್ತ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವೂ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಂದ್ಯಕ್ಕೆ ಮಳೆ ಅಡ್ಡ ಪಡಿಸುವ ಭೀತಿ ಇದ್ದು, ಇತ್ತಂಡಗಳು ಗೆಲುವಿವಾಗಿ ಹೋರಾಟ ನಡೆಸಿದೆ. ಇತ್ತ ಶ್ರೀಲಂಕಾ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಚಹಲ್ ತಂಡಕ್ಕೆ ಸೇರ್ಪಡೆಯಾಗಿದ್ದು, ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿದಿದ್ದಾರೆ.

  • ರಣಜಿ ಸೆಮಿಫೈನಲ್‍ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು- ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ

    ರಣಜಿ ಸೆಮಿಫೈನಲ್‍ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು- ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ

    ಕೋಲ್ಕತ್ತಾ: ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಸೋಲರಿಯದ ಸರದಾರನಂತೆ ಮುನ್ನುಗ್ಗುತ್ತಿದ್ದ ಕರ್ನಾಟಕ, ಸೆಮಿ ಫೈನಲ್‍ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿ ಫೈನಲ್ ಫೈಟ್‍ನಿಂದ ಹೊರ ನಡೆದಿದೆ.

    ರೋಚಕ ಹೋರಾಟಕ್ಕೆ ಸಾಕ್ಷಿಯಾದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ತಂಡವನ್ನು ಮಣಿಸಿದ ವಿದರ್ಭ ತಂಡ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗೆಲುವಿಗಾಗಿ 198 ರನ್‍ಗಳ ಗುರಿ ಪಡೆದಿದ್ದ ಕರ್ನಾಟಕ ಅಂತಿಮ ದಿನದಾಟದಲ್ಲಿ 59.1 ಓವರ್‍ಗಳಲ್ಲಿ 192 ರನ್‍ಗಳಿಗೆ ಆಲೌಟ್ ಆಗುವ ಮೂಲಕ 5 ರನ್‍ಗಳ ಅಂತರದಲ್ಲಿ ಫೈನಲ್ ಆಸೆಯನ್ನು ಕೈ ಬಿಟ್ಟಿತು.

    ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಪಂದ್ಯ ಜಯಿಸಲು ಮೂರು ವಿಕೆಟ್‍ಗಳ ನೆರವಿನಿಂದ 87 ರನ್‍ಗಳಿಸುವ ಸವಾಲಿನ ಗುರಿ ಹೊಂದಿತ್ತು. 19 ರನ್‍ಗಳಿಸಿ ನಾಯಕ ವಿನಯ್ ಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಮುಂದುವರಿಸಿದ್ದರು. ಜವಾಬ್ದಾರಿಯುತ ಆಟವಾಡುತ್ತಿದ್ದ ವಿನಯ್ ಕುಮಾರ್ 36 ರನ್‍ಗಳಿಸಿದ್ದ ವೇಳೆ, ಗುರ್ಬಾನಿ ಬೌಲಿಂಗ್‍ನಲ್ಲಿ ಕೀಪರ್ ವಾಡ್ಕರ್‍ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕರ್ನಾಟಕದ ಗೆಲುವಿಗೆ ಇನ್ನೂ 57 ರನ್‍ಗಳ ಅವಶ್ಯಕತೆ ಇತ್ತು.

    ಬಳಿಕ ಶ್ರೇಯಸ್ ಜೊತೆಗೂಡಿದ ಅಭಿಮನ್ಯು ಮಿಥುನ್ ಎಚ್ಚರಿಕೆಯ ಅಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. 8ನೇ ವಿಕೆಟ್‍ಗೆ 48 ರನ್‍ಗಳ ಅತ್ಯಮೂಲ್ಯ ಜೊತೆಯಾಟವಾಡಿದ ಈ ಜೋಡಿ ಕ್ರೀಸ್‍ನಲ್ಲಿರುವಷ್ಟು ಹೊತ್ತು ಕರ್ನಾಟಕದ ಫೈನಲ್ ಆಸೆ ಜೀವಂತವಾಗಿತ್ತು. ಆದರೆ ಪಟ್ಟು ಬಿಡದ ವಿದರ್ಭ ತಂಡ, ಕೊನೆಯ ಕ್ಷಣದಲ್ಲಿ ಬೌಲಿಂಗ್‍ನಲ್ಲಿ ಮತ್ತೆ ಮೋಡಿ ಮಾಡಿತು. 5 ಬೌಂಡರಿಗಳ ನೆರವಿನಿಂದ 33 ರನ್‍ಗಳಿಸಿ ಆಡುತ್ತಿದ್ದ ಅಭಿಮನ್ಯು ಮಿಥುನ್‍ರನ್ನು ತಮ್ಮ ಮೀಡಿಯಂ ವೇಗದ ಬಲೆಗೆ ಬೀಳಿಸಿದ ಗುರ್ಬಾನಿ ಪಂದ್ಯವನ್ನು ಮತ್ತಷ್ಟು ರೋಚಕ ಘಟ್ಟಕ್ಕೆ ಕೊಂಡೊಯ್ದರು. 9ನೆ ವಿಕೆಟ್ ಪತನವಾದ ವೇಳೆ ಕನಾಟಕದ ಗೆಲುವಿಗೆ 9ರನ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ವಿದರ್ಭ ಗೆಲುವಿಗೆ ಒಂದೇ ಒಂದು ವಿಕೆಟ್ ಬಾಕಿ ಇತ್ತು.

    ರೋಚಕ ಕೊನೆಯ ಓವರ್: ಕರ್ನಾಟಕ ಪರ ಕೊನೆಯ ಬ್ಯಾಟ್ಸ್ ಮನ್ ಆಗಿ ಕ್ರೀಸಿಗಿಳಿದ ಎಸ್. ಅರವಿಂದ್. ಅದರೆ ಅದೇ ವಿದರ್ಭ ಪಾಲಿಗೆ ಸ್ಟ್ರಾಂಗೆಸ್ಟ್ ಹೋಪ್ ಆಗಿತ್ತು. ಉಮೇಶ್ ಯಾದವ್ ಬೌಲಿಂಗ್‍ನ್ನು ಹಾಗೋ ಹೀಗೋ ಎದುರಿಸಿದ ಅರವಿಂದ್ ಕೊನೆಯ ಎಸೆತದಲ್ಲಿ ಒಂಟಿ ರನ್‍ಗಾಗಿ ಓಡಿದರು. ಹಿಂದೂ ಮುಂದು ನೋಡದೆ ಮತ್ತೊಂದು ಬದಿಯಲ್ಲಿದ್ದ ಸೆಟ್ ಬ್ಯಾಟ್ಸ್ ಮನ್ ಶ್ರೇಯಸ್ ಕೂಡ ಸಿಂಗಲ್‍ಗಾಗಿ ಓಡಿದರು. ಆದರೇ ಇದೇ ಕರ್ನಾಟಕದ ಪಾಲಿಗೆ ಮುಳುವಾಯಿತು. ಮುಂದಿನ ಓವರ್ ಎಸೆಯಲು ಬಂದ ಗುರ್ಬಾನಿ ಮೊದಲ ಎಸೆತದಲ್ಲೇ ಅರವಿಂದ್ ವಿಕೆಟ್ ಪಡೆದು ವಿದರ್ಭ ತಂಡವನ್ನು ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವಂತೆ ಮಾಡಿದರು.

    ಎರಡನೇ ಇನ್ನಿಂಗ್ಸ್ ನಲ್ಲಿ 198 ರನ್‍ಗಳ ಗೆಲುವಿನ ಗುರಿ ಪಡೆದಿದ್ದ ಕರ್ನಾಟಕಕ್ಕೆ ಮಾರಕವಾಗಿ ಎರಗಿದ್ದು, ವಿದರ್ಭ ಬೌಲರ್ ರಜನೀಶ್ ಗುರ್ಬಾನಿ. 23.1 ಓವರ್‍ಗಳ ಜೀವನ ಶ್ರೇಷ್ಟ ಬೌಲಿಂಗ್ ದಾಳಿಯಲ್ಲಿ 68 ರನ್ ನೀಡಿ 7 ವಿಕೆಟ್ ಪಡೆದು ವಿದರ್ಭ ಪಾಲಿಗೆ ಹೀರೋ ಆಗಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮತ್ತೊಂದೆಡೆ ರೋಚಕ ಹೋರಾಟ ನಡೆಸಿಯೂ ಕೇವಲ 5 ರನ್‍ಗಳಿಂದ ಪಂದ್ಯ ಸೋತ 8 ಬಾರಿಯ ಚಾಂಪಿಯನ್ ಕರ್ನಾಟಕ, 5 ವರ್ಷದಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಸಾಧನೆಯಿಂದ ಸ್ವಲ್ಪದರಲ್ಲಿಯೇ ವಂಚಿತವಾಯಿತು.

    ಮಹಾರಾಷ್ಟ್ರದ ಅಂಪೈರ್‍ ಗಳೇಕೆ?
    ಬಿಸಿಸಿಐ ನಿಯಮಗಳ ಪ್ರಕಾರ ದೇಶೀಯ ಕ್ರಿಕೆಟ್‍ನಲ್ಲಿ ಆಡುವ ಎರಡು ತಂಡಗಳ ಕ್ರಿಕೆಟ್ ಸಂಸ್ಥೆಗಳಿಗೆ ಸಂಬಂಧಪಟ್ಟ ಅಂಪೈರ್‍ಗಳು ಇರಬಾರದು ಎಂಬ ನಿಯಮವಿದೆ. ಆದರೆ ವಿದರ್ಭ ಮತ್ತು ಕರ್ನಾಟಕ ತಂಡಗಳ ರಣಜಿ ಸೆಮಿಫೈನಲ್‍ನ ಅಂಪೈರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪಶ್ಚಿಮ್ ಪಾಠಕ್ ಮತ್ತು ವಿನೀತ್ ಕುಲಕರ್ಣಿ ಇಬ್ಬರೂ ಮಹಾರಾಷ್ಟ್ರದವರು.

    ಇಬ್ಬರೂ ಅಂಪೈರ್ ಗಳು ವಿದರ್ಭ ಕ್ರಿಕೆಟ್ ಸಂಸ್ಥೆಗೆ ಸಂಬಂಧಪಟ್ಟಿಲ್ಲವಾದರು ಪಾಠಕ್ ಮುಂಬೈ ಹಾಗೂ ಕುಲಕರ್ಣಿ ಪುಣೆ ಮೂಲದವರು. ಇದರ ಪ್ರಕಾರ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದ ವಿದರ್ಭ ಕ್ರಿಕೆಟ್ ಸಂಸ್ಥೆಯ ಪಂದ್ಯದಲ್ಲಿ ಮಹಾರಾಷ್ಟ್ರದ ಅಂಪೈರ್‍ಗಳು ಕಾರ್ಯ ನಿರ್ವಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಈ ಹಿಂದೆ ನಾಗ್ಪುರದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ (ವಿದರ್ಭ) ಅಂಪೈರ್‍ಗಳಾದ ಅಭಿಜಿತ್ ದೇಶಮುಖ್ ಮತ್ತು ನಿತಿನ್ ಪಂಡಿತ್ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಕರ್ನಾಟಕ, ಮುಂಬೈ ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 20 ರನ್ ಗೆಲುವು ಪಡೆದಿತ್ತು.

    ವಿವಾದ ಎದ್ದಿದ್ದು ಯಾಕೆ?
    ವಿದರ್ಭ ತಂಡದ ಗುರಿ ಬೆನ್ನಟ್ಟಿದ ಕರ್ನಾಟಕದ ಪ್ರಮುಖ ಇಬ್ಬರು ಆಟಗಾರರು ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು ಕರ್ನಾಟಕಕ್ಕೆ ಮಾರಕವಾಯಿತು. ಬ್ಯಾಟಿಂಗ್ ಮುಂದುವರೆಸಿದ ಬಲಗೈ ಬ್ಯಾಟ್ಸ್ ಮನ್ ಸಮರ್ಥ್, ವಿದರ್ಭ ಬಲಗೈ ಮಧ್ಯಮ ವೇಗಿ ಸಿದ್ದೇಶ್ ನೇರಲ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸಿದ್ದರು. ಈ ವೇಳೆ ನೇರಲ್ ಎಸೆದ ಬಾಲ್ ಬ್ಯಾಟ್‍ನ ಒಳ ಅಂಚಿಗೆ ಬಡಿದು ಪ್ಯಾಡ್‍ಗೆ ತಗಿತ್ತು. ಕೂಡಲೇ ವಿದರ್ಭ ಆಟಗಾರರು ಅಂಪೈರ್ ಗೆ ಎಲ್ ಬಿಡಬ್ಲೂ ಗೆ ಮನವಿ ಸಲ್ಲಿಸಿದರು, ಕೂಡಲೇ ಆಟಗಾರರ ಮನವಿ ಸ್ವೀಕರಿಸಿದ ಅಂಪೈರ್ ಪಾಠಕ್ ಔಟ್ ಎಂದು ತೀರ್ಪು ನೀಡಿದರು.

    ಪಾಠಕ್ ಅವರ ಕಳಪೆ ಅಂಪೈರಿಂಗ್ ಸಿ.ಎಂ ಗೌತಮ್ ಅವರಿಗೂ ಮುಳುವಾಯಿತು. ಗೌತಮ್ ಬ್ಯಾಟಿಂಗ್ ವೇಳೆ ವಿದರ್ಭ ಬೌಲರ್ ರಜನೀಶ್ ಗುರ್ಬಾನಿ ಎಸೆದ ಬಾಲ್ ಗೌತಮ್ ಅವರ ಎಡಗಾಲಿನ ಪ್ಯಾಡ್ ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಕ್ಷಣ ಮಾತ್ರದಲ್ಲಿ ಅಂಪೈರ್ ಗೌತಮ್ ರನ್ನು ಔಟ್ ಎಂದು ತೀರ್ಪು ನೀಡಿದ್ದರು. ಈಗ ಈ ವಿಚಾರವನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಬಿಸಿಸಿಐಯನ್ನು ಪ್ರಶ್ನಿಸುತ್ತಿದ್ದಾರೆ.