Tag: ಸೆಮಿಫೈನಲ್

  • ವಿಶ್ವಕಪ್ ಸೆಮಿಫೈನಲ್: ಕೊಹ್ಲಿ ಬಾಯ್ಸ್‌ಗೆ 240 ರನ್ ಗುರಿ

    ವಿಶ್ವಕಪ್ ಸೆಮಿಫೈನಲ್: ಕೊಹ್ಲಿ ಬಾಯ್ಸ್‌ಗೆ 240 ರನ್ ಗುರಿ

    ಮ್ಯಾಂಚೆಸ್ಟರ್: ಮಳೆಯ ಪರಿಣಾಮ 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ನಿಗದಿತ ಸಮಯಕ್ಕೆ ಆರಂಭವಾಗಿದ್ದು, ನಿನ್ನೆ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿದ್ದ ನ್ಯೂಜಿಲೆಂಡ್ ಇಂದು 3 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಭಾರತಕ್ಕೆ 240 ರನ್ ಗುರಿ ನೀಡಿತು.

    67 ರನ್ ಗಳಿಸಿ ಬ್ಯಾಟಿಂಗ್ ಕ್ರೀಸ್‍ನಲ್ಲಿದ್ದ ಅನುಭವಿ ಆಟಗಾರ ರಾಸ್ ಟೇಲರ್ 74 ರನ್ ಗಳಿಸಿ ರನೌಟ್ ಆಗಿ ನಿರ್ಗಮಿಸಿದರು. ಲಾಥಮ್ 11 ರನ್, ಹೆನ್ರಿ 1 ರನ್ ಗಳಿಸಿ ಔಟಾದರು. ಸ್ಯಾಂಟನರ್ ಹಾಗೂ ಬೋಲ್ಟ್ 3 ರನ್ ಗಳಿಸಿ ಅಜೇಯರಾಗಿ ಉಳಿದರು. ಪರಿಣಾಮ ಭಾರತ 240 ರನ್ ಗುರಿ ಪಡೆಯಿತು. ಪಂದ್ಯದಲ್ಲಿ ಬೀಗಿ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬುಮ್ರಾ, ಪಾಂಡ್ಯ, ಜಡೇಜಾ, ಚಹಲ್ ತಲಾ 1 ವಿಕೆಟ್ ಪಡೆದರು.

    ರಿವರ್ಸ್ ಡೇ ಹಿನ್ನೆಲೆಯಲ್ಲಿ ಮುಂದುವರಿಯತ್ತಿರುವ ಪಂದ್ಯದಲ್ಲಿ ಇದಕ್ಕೂ ಮುನ್ನ ದಿನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ ತಂಡ ನಾಯಕ ವಿಲಿಯಮ್ಸನ್ 95 ಎಸೆತಗಳಲ್ಲಿ 67 ರನ್ ಗಳ ನೆರವಿನಿಂದ 211 ರನ್ ಗಳಿಸಿತ್ತು. ಈ ನಡುವೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ಮುಂದೂಡಲಾಗಿತ್ತು. ಒಂದೊಮ್ಮೆ ಪಂದ್ಯ ಇಂದೂ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾ ರನ್ ರೇಟ್, ಅಂಕಗಳ ಅನ್ವಯ ನೇರ ಫೈನಲ್‍ಗೆ ತಲುಪಲಿದೆ.

  • ವಿಶ್ವಕಪ್ ಸೆಮಿಫೈನಲ್ ಪಂದ್ಯ ಬುಧವಾರಕ್ಕೆ ಮುಂದೂಡಿಕೆ

    ವಿಶ್ವಕಪ್ ಸೆಮಿಫೈನಲ್ ಪಂದ್ಯ ಬುಧವಾರಕ್ಕೆ ಮುಂದೂಡಿಕೆ

     – ನೇರ ಫೈನಲ್ ಪ್ರವೇಶಿಸುತ್ತಾ ಟೀಂ ಇಂಡಿಯಾ?

    ಮ್ಯಾಂಚೆಸ್ಟರ್: 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವರುಣಾ ಅಡ್ಡಿ ಪಡಿಸಿದ್ದು, ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಆಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ ಭಾರೀ ಮಳೆಯ ಪರಿಣಾಮ ಪಂದ್ಯವನ್ನು ಆಡಲು ಸಾಧ್ಯವಾಗದೆ ಪಂದ್ಯದ ರೆಫರಿ ಬುಧವಾರಕ್ಕೆ ಮುಂದೂಡಿದ್ದಾರೆ. ಇತ್ತ ಬುಧವಾರದ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಒಂದೊಮ್ಮೆ ಪಂದ್ಯವೂ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾ ರನ್ ರೇಟ್, ಅಂಕಗಳ ಅನ್ವಯ ನೇರ ಫೈನಲ್‍ಗೆ ತಲುಪಲಿದೆ.

    ಟಾಸ್ ಗೆದ್ದು 46.1 ಓವರ್ ಗಳಲ್ಲಿ 211 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡ ಪರ ರಾಸ್ ಟೇಲರ್ 67 ರನ್, ಟಾಮ್ ಲೇಥಮ್ 3 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಈ ಹಂತದಲ್ಲಿ ಮಳೆ ಸುರಿಯಲು ಆರಂಭಿಸಿತ್ತು. ಮತ್ತೆ ಪಂದ್ಯ ಮುಂದುವರಿಸುವುದು ಸಾಧ್ಯವಾದ ಪರಿಣಾಮ ಮ್ಯಾಚ್ ರೆಫರಿ ಪಂದ್ಯವನ್ನು ರಿಸರ್ವ್ ಡೇ ಬುಧವಾರಕ್ಕೆ ಮುಂದೂಡಿದ್ದಾರೆ.

    ವಿಶ್ವಕಪ್ ನಂತಹ ಮಹತ್ವದ ಟೂರ್ನಿಗಳ ಸೆಮಿ ಫೈನಲ್, ಫೈನಲ್ ಪಂದ್ಯಗಳು ನಿಗದಿತ ದಿನದಲ್ಲಿ ನಡೆಸಲು ಸಾಧ್ಯವಾಗದಿದ್ದರೆ ಮುಂದಿನ ದಿನವನ್ನು ರಿಸರ್ವ್ ಡೇ ಆಗಿ ನಿಗದಿ ಪಡಿಸಲಾಗುತ್ತದೆ. ಬುಧವಾರದ ಪಂದ್ಯ ನಿಗದಿತ ಅವಧಿಗೆ ಆರಂಭವಾಗಲಿದ್ದು, ನ್ಯೂಜಿಲೆಂಡ್ ತಂಡ 46.1 ಓವರಿನಿಂದ ಮುಂದುವರಿಸಿ 50 ಓವರ್ ಪೂರ್ಣಗೊಳಿಸಲಿದೆ. ಬಳಿಕ ಟೀಂ ಇಂಡಿಯಾ ಆಡಲಿದೆ.

    ಇನ್ನು ಇಂದಿನ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿದ್ದ ಅಭಿಮಾನಿಗಳು ನಾಳೆ ಕ್ರೀಡಾಂಗಣಕ್ಕೆ ಬರಲು ಅವಕಾಶವಿದ್ದು, ಆದರೆ ಆ ಟಿಕೆಟ್ ಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಒಂದೊಮ್ಮೆ ಅವರು ಪಂದ್ಯಕ್ಕೆ ಬರಲು ಸಾಧ್ಯವಾಗದಿದ್ದರೆ ಆ ಟಿಕೆಟ್‍ಗಳನ್ನು ಕ್ರೀಡಾಂಗಣದ ಅಧಿಕಾರಿಗಳಿಗೆ ಡೊನೇಟ್ ಮಾಡಬಹುದು. ಈ ಟಿಕೆಟ್‍ಗಳನ್ನು ಪಡೆದು ಬೇರೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರಲು ಅವಕಾಶ ಇದೆ.

  • ವಿಶ್ವಕಪ್ ಸೆಮಿಫೈನಲ್: ಮಳೆರಾಯನ ಆಟಕ್ಕೆ ಪಂದ್ಯ ಮೊಟಕು

    ವಿಶ್ವಕಪ್ ಸೆಮಿಫೈನಲ್: ಮಳೆರಾಯನ ಆಟಕ್ಕೆ ಪಂದ್ಯ ಮೊಟಕು

    ಮ್ಯಾಂಚೆಸ್ಟರ್: 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವರುಣಾ ಅಡ್ಡಿ ಪಡಿಸಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 211 ರನ್ ಗಳಿಸಿದೆ.

    ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳು ರನ್ ಗಳಿಸಲು ಪರದಾಡುವಂತೆ ಮಾಡಿದರು. ಇನ್ನಿಂಗ್ಸ್ ಆರಂಭದಲ್ಲೇ 2 ಮೇಡನ್ ಓವರ್ ಮಾಡಿದ ಬೌಲರ್ ಗಳು ಕಿವೀಸ್ ಬ್ಯಾಟ್ಸ್ ಮನ್ ಗಳಿಗೆ ಸವಾಲೆಸೆದರು. ಇತ್ತ ಬುಮ್ರಾ ತಮ್ಮ 2ನೇ ಓವರಿನಲ್ಲೇ ಆರಂಭಿಕ ಮಾರ್ಟಿನ್ ಗುಪ್ಟಿಲ್ ವಿಕೆಟ್ ಪಡೆದು ಮಿಂಚಿದರು. ಪರಿಣಾಮ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕಿವೀಸ್ ನಾಯಕ ವಿಲಿಯಮ್ಸನ್ ಹಾಗೂ ನಿಕೋಲಾಸ್ 2ನೇ ವಿಕೆಟ್‍ಗೆ 68 ರನ್ ಜೊತೆಯಾಟ ನೀಡಿದರು.

    ಈ ಹಂತದಲ್ಲಿ ದಾಳಿಗಳಿದ ಜಡೇಜಾ 28 ರನ್ ಗಳಿಸಿದ್ದ ನಿಕೋಲಾಸ್ ವಿಕೆಟ್ ಪಡೆದು ಕಿವೀಸ್‍ಗೆ 2ನೇ ಆಘಾತ ನೀಡಿದರು. ಬಳಿಕ ಬಂದ ಅನುಭವಿ ಆಟಗಾರ ಟೇಲರ್ ನಾಯಕನೊಂದಿಗೆ ಕೂಡಿ ತಂಡದ ಚೇತರಿಕೆಗೆ ಕಾರಣರಾದರು. ಈ ಜೋಡಿ ಮೂರನೇ ವಿಕೆಟ್‍ಗೆ 65 ರನ್ ಜೊತೆಯಾಟ ನೀಡಿತು. ಇತ್ತ ನಾಯಕ ವಿಲಿಯಮ್ಸನ್ ವೃತ್ತಿ ಜೀವನದ 39ನೇ ಅರ್ಧ ಶತಕವನ್ನು ಪೂರೈಸಿದರು. ಅಲ್ಲದೇ 2019 ಟೂರ್ನಿಯಲ್ಲಿ 500 ರನ್ ಪೂರೈಸಿದರು.

    ತಾಳ್ಮೆಯ ಆಟದ ಮೂಲಕ ರನ್ ಪೇರಿಸುತ್ತಿದ್ದ ಕೇನ್ ವಿಲಿಯಮ್ಸನ್ ಹಾಗೂ ಟೇಲರ್ ಜೋಡಿಯನ್ನು ಚಹಲ್ ಬೇರ್ಪಡಿಸಿದರು. 95 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 67 ರನ್ ಗಳಿಸಿದ್ದ ವಿಲಿಯಮ್ಸನ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬಳಿಕ ಬಂದ ಜಿಮ್ಮಿ ನಿಶಾಮ್ 12 ರನ್ ಗಳಿಸಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 16 ರನ್ ಗಳಿಸಿ ಗ್ರ್ಯಾಂಡ್ ಹೋಮ್ ಭುವನೇಶ್ವರ್‍ಗೆ ವಿಕೆಟ್ ಒಪ್ಪಿಸಿದರು. 44 ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡ 200 ರನ್ ಗಳಷ್ಟೇ ಗಳಿಸಿತ್ತು.

    ಇತ್ತ ವಿಕೆಟ್ ಉರುಳುತ್ತಿದ್ದರೆ ತಂಡಕ್ಕೆ ಆಸೆಯಾಗಿ ನಿಂತಿದ್ದ ಅನುಭವಿ ರಾಸ್ ಟೇಲರ್ 85 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೊಂದಿಗೆ 67 ರನ್ ಗಳಿಸಿದ್ದರು. ಈ ವೇಳೆಗೆ ಮಳೆ 2ನೇ ಬಾರಿಗೆ ಅಡ್ಡಿ ಪಡಿಸಿದ ಪರಿಣಾಮ ಆಟಕ್ಕೆ ಬ್ರೇಕ್ ಬಿತ್ತು. ಭಾರತ ಪರ ಬೀಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಗಳಾದ ಬುಮ್ರಾ, ಚಹಲ್, ಭುವಿ, ಪಾಂಡ್ಯ, ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

  • ಭಾರತ, ನ್ಯೂಜಿಲೆಂಡ್ ನಡುವೆ ಸೆಮಿಫೈನಲ್- ಪಂದ್ಯಕ್ಕೆ ಎದುರಾಗಿದೆ ಮಳೆ ಭೀತಿ

    ಭಾರತ, ನ್ಯೂಜಿಲೆಂಡ್ ನಡುವೆ ಸೆಮಿಫೈನಲ್- ಪಂದ್ಯಕ್ಕೆ ಎದುರಾಗಿದೆ ಮಳೆ ಭೀತಿ

    ಮ್ಯಾಂಚೆಸ್ಟರ್: ಇಂದಿನಿಂದ ವಿಶ್ವಕಪ್‍ನ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಆಡಲಿದೆ.

    ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನೋಡಲು ಎರಡೂ ತಂಡದ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವವೇ ಕಾದು ಕುಳಿತಿದೆ. ಇತ್ತ ಎರಡೂ ತಂಡಗಳು ಬಲಿಷ್ಠವಾಗಿದ್ದು, ರನ್‍ಗಳ ಸುರಿಮಳೆ ಸುರಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇಂದಿನ ಪಂದ್ಯಕ್ಕೆ ಮಳೆರಾಯನ ಭೀತಿ ಎದುರಾಗಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಇತ್ತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 10 ರನ್‍ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ಇರುವ ಭಾರತ ಇಂದು ನಾಲ್ಕನೇಯ ಸ್ಥಾನದಲ್ಲಿ ಇರುವ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ವರ್ಸಸ್ ಕಿವೀಸ್ ಪಂದ್ಯ ಮಳೆಯಿಂದ ರದ್ದಾದ್ರೆ ಏನಾಗುತ್ತೆ?

    ಲಿಂಗ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೇ ರದ್ದಾಗಿತ್ತು. ಹೀಗಾಗಿ 2 ತಂಡಗಳಿಗೆ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗಿತ್ತು.

    ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಶನಿವಾರಕ್ಕೆ ಮುಕ್ತಾಯವಾಗಿದ್ದು, ಭಾರತ 9 ಪಂದ್ಯಗಳಿಂದ 15 ಅಂಕ ಸಂಪಾದಿಸಿದರೆ, ಆಸ್ಟ್ರೇಲಿಯಾ 14 ಅಂಕ, ಇಂಗ್ಲೆಂಡ್ 12 ಅಂಕ, ನ್ಯೂಜಿಲೆಂಡ್ 11 ಅಂಕ ಗಳಿಸಿದೆ.

  • 11 ವರ್ಷಗಳ ಬಳಿಕ ಸೆಮಿಫೈನಲ್‍ನಲ್ಲಿ ಮುಖಾಮುಖಿಯಾಗುತ್ತಿರುವ ಕೊಹ್ಲಿ, ವಿಲಿಯಮ್ಸನ್

    11 ವರ್ಷಗಳ ಬಳಿಕ ಸೆಮಿಫೈನಲ್‍ನಲ್ಲಿ ಮುಖಾಮುಖಿಯಾಗುತ್ತಿರುವ ಕೊಹ್ಲಿ, ವಿಲಿಯಮ್ಸನ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಪರಿಣಾಮ ಟೂರ್ನಿಯ ಸೆಮಿ ಫೈನಲ್‍ನಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ.

    ವಿಶ್ವಕಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಭಾರತ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಜುಲೈ 09 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ವಿಶೇಷ ಎಂದರೆ ಈ ಪಂದ್ಯ ನಾಯಕ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರಿಗೆ ಬಹು ಮುಖ್ಯವಾಗಿದ್ದು, 2008 ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಬ್ಬರು ಮುಖಾಮುಖಿಯಾಗಿದ್ದರು. ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೆ ತಂಡದ ಜವಾಬ್ದಾರಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

    2008ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜಯಗಳಿತ್ತು. 2008ರ ಫೆ. 27 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆಲುವು ಪಡೆದಿದ್ದ ಕಿವೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೋರೆ ಆಂಡರ್ಸನ್ 67 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ವಿಲಿಯಮ್ಸನ್ 80 ಎಸೆತಗಳಲ್ಲಿ 37 ರನ್ ಗಳಿಸಿ ಔಟಾಗಿದ್ದರು. ಇದರೊಂದಿಗೆ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಇತ್ತ ಸುಲಭ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಶ್ರೀವಾತ್ಸ ಗೋಸ್ವಾಮಿ ಆಕರ್ಷಕ ಅರ್ಧ ಶತಕ ಸಿಡಿಸಿದ್ರೆ, ಕೊಹ್ಲಿ 5 ಬೌಂಡರಿಗಳೊಂದಿಗೆ 43 ರನ್ ಗಳಿಸಿದ್ದರು. ಇತ್ತ ಬೌಲಿಂಗ್ ಮಿಂಚಿದ ಟೀಮ್ ಸೌತಿ 4/29 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಕಾಡಿದ್ದರು. ರೋಚಕ ಹೋರಾಟ ನಡೆಸಿದ ಭಾರತ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ 41.3 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು.

    2008ರ ಅಂಡರ್ 19 ವಿಶ್ವಕಪ್ ಪಂದ್ಯದ ರೀತಿಯಲ್ಲೇ ಟೀಂ ಇಂಡಿಯಾ ಈ ಬಾರಿಯೂ ನ್ಯೂಜಿಲೆಂಡ್ ವಿರುದ್ಧ ಗೆಲುವು ಪಡೆದು ಫೈನಲ್ ಪ್ರವೇಶಿಸಲಿ ಎಂಬುವುದು ಅಭಿಮಾನಿಗಳ ಆಶಯವಾಗಿದೆ. ವಿಶ್ವಕಪ್ ಹೋರಾಟದ ಜುಲೈ 09 ರ ಸೆಮಿ ಫೈನಲ್ ಪಂದ್ಯ ತೀವ್ರ ಕುತೂಹಲವನ್ನು ಮೂಡಿಸಿದ್ದು, ಇತಿಹಾಸ ಮುರುಕಳಿಸಲಿದೆಯಾ ಕಾದು ನೋಡಬೇಕಿದೆ.

  • ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

    ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

    ನವದೆಹಲಿ: ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ಭಾರತ ತಂಡ ಸಹಾಯ ಮಾಡಬೇಕು ಎಂದು ಪಾಕ್‍ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಅಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿರುವ ಪಾಕಿಸ್ತಾನ ಒಂದು ಪಂದ್ಯ ಮಳೆಯ ಕಾರಣಕ್ಕೆ ರದ್ದು ಮಾಡಿಕೊಂಡು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಲೀಗ್ ಹಂತದಲ್ಲಿ ಎರಡು ಪಂದ್ಯಗಳು ಉಳಿದಿದ್ದು, 2 ಪಂದ್ಯದಲ್ಲೂ ಗೆದ್ದರೂ ಪಾಕ್ ಸೆಮಿ ಫೈನಲ್ ಪ್ರವೇಶದ ಕನಸು ಬೇರೆ ತಂಡದ ಗೆಲುವು ಸೋಲಿನ ಮೇಲೆ ಅವಲಂಬಿತವಾಗಿದೆ.

    ಈ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ವಿಶ್ವಕಪ್‍ನಲ್ಲಿ ತಮ್ಮ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ನಮಗೆ ಭಾರತ ತಂಡ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

    ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಅಡಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ವಿಶ್ವಕಪ್‍ನಿಂದ ಇಂಗ್ಲೆಂಡ್ ಹೊರಬೀಳುತ್ತದೆ. ಆಗ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಉಳಿದ ಎರಡು ಪಂದ್ಯವನ್ನು ಪಾಕ್ ಗೆದ್ದು 11 ಅಂಕಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಪಾಕಿಸ್ತಾನ ವಿಶ್ವಕಪ್‍ನಲ್ಲಿ ತುಂಬ ಒಳ್ಳೆಯ ಕಮ್‍ಬ್ಯಾಕ್ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಈಗ ಭಾರತ ನಮಗೆ ಸಹಾಯ ಮಾಡಬೇಕು ಮುಂದಿನ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಮತ್ತು ನಾವು ಉಳಿದ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‍ಗೆ ಅರ್ಹತೆ ಪಡೆದು, ಸೆಮಿಸ್ ಪಂದ್ಯವನ್ನು ಇಂಡಿಯಾ ವಿರುದ್ಧ ಅಡಿ ಅವರನ್ನು ಸೋಲಿಸಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಒಂದು ವೇಳೆ ಜೂನ್ 30 ರಂದು ನಡೆಯುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೂ, ತನ್ನ ಮುಂದಿನ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಸೋಲುತ್ತದೆ. ಅಗ ಮತ್ತೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಅರ್ಹತೆ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದು ಒಂದು ಉತ್ತಮ ವಿಶ್ವಕಪ್ ಟೂರ್ನಿಯಾಗಲಿದೆ ಮತ್ತು ನಮ್ಮ ಪಾಕಿಸ್ತಾನ ಸೆಮಿಫೈನಲ್ ತಲುಪುವ ಹಾದಿಯಲ್ಲಿದೆ. ಪಾಕಿಸ್ತಾನ ತಂಡವನ್ನು ಎಂದಿಗೂ ಮೂಲೆಗುಂಪು ಮಾಡಬೇಡಿ. ಹಾಗೆ ಮಾಡಿದರೆ ನಮ್ಮ ತಂಡ ಮತ್ತೆ ಕಮ್‍ಬ್ಯಾಕ್ ಮಾಡಿ ನಿಮ್ಮನ್ನು ಸೋಲಿಸುತ್ತದೆ ಎಂದು ಶೋಯೆಬ್ ಹೇಳಿದ್ದಾರೆ.

  • ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸಿರೀಸ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ತಮ್ಮ ಎದುರಾಳಿ ಚೀನಾದ ಚೆನ್ ಯುಫಿ ವಿರುದ್ಧ 21-14, 21-14 ಸೆಟ್‍ಗಳ ಅಂತರದಲ್ಲಿ ಗೆದ್ದ ಸಿಂಧು ಇದೇ ಮೊದಲ ಬಾರಿಗೆ ಈ ಟೂರ್ನಮೆಂಟ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

    ಈ ಹಿಂದೆ ಡೆನ್ಮಾರ್ಕ್‍ನಲ್ಲಿ ನಡೆದ ಆರಂಭಿಕ ಸುತ್ತಿನಲ್ಲಿ ಯುಫಿ, ಸಿಂಧು ವಿರುದ್ಧ ಗೆದ್ದಿದ್ದರು. ಸಿಂಧು ಅವರು ಈ ಬಾರಿ ಚೆನ್ ಯುಫಿ ವಿರುದ್ಧ ಗೆಲ್ಲುವ ಮೂಲಕ ತಮ್ಮ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ.

    ಪುರುಷರ ಸಿಂಗಲ್ಸ್‍ನಲ್ಲಿ ಶ್ರೀನಾಥ್ ಪ್ರಣಯ್, ಜಿಯಾನ್ ಜಿನ್ ವಿರುದ್ಧ 21-16, 21-16 ಸೆಟ್‍ಗಳ ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ ಡೆನ್ಮಾರ್ಕ್‍ನ ಹಾನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ ನಡೆದ ಹಣಾಹಣಿಯಲ್ಲಿ ಪ್ರಣಯ್ 21-11, 21-12 ನೆರ ಸೆಟ್‍ಗಳ ಮೂಲಕ ಜಯಗಳಿಸಿದ್ದರು. ಕಳೆದ ಎರಡು ಪಂದ್ಯಗಳಲ್ಲಿಯೂ ಪ್ರಣಯ್ ವಿಶ್ವ ಅಗ್ರ ಮಾನ್ಯ ಶ್ರೇಯಾಂಕ ಹೊಂದಿರುವ ಆಟಗಾರರನ್ನು ಸೋಲಿಸುವ ಮೂಲಕ ಆಮೋಘ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಪ್ರಣಯ್ ವಿಶ್ವ  ರ‍್ಯಾಂಕಿಂಗ್‌ ಪಟ್ಟಿಯಲ್ಲಿ 12ನೇ ಸ್ಥಾನವನ್ನು ಪಡೆದಿದ್ದಾರೆ.

    ಇನ್ನುಳಿದಂತೆ ಭಾರತದ ಬಿ.ಸಾಯಿ ಪ್ರಣೀತ್ ಜಪಾನ್ ಕೆಂಟಾ ನಿಶಿಮೊಟೊ ವಿರುದ್ಧ 13-21, 17-21 ಸೆಟ್‍ಗಳ ಮೂಲಕ ಸೋತರು. ಸೈನಾ ನೆಹ್ವಾಲ್ ಈ ಸರಣಿಯಲ್ಲಿ ಎರಡನೇ ಸುತ್ತಿನಲ್ಲಿಯೇ ಜಪಾನ್‍ನ ಅಕಾನೆ ಯಮಗುಚಿ ವಿರುದ್ಧ 9-21, 21-22 ರ ಸೆಟ್‍ಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿದರು.