Tag: ಸೆಟ್

  • ‘ಕಾಂತಾರ’ ಚಿತ್ರೀಕರಣಕ್ಕೆ ಕುಂದಾಪುರದಲ್ಲಿ ತಲೆಯೆತ್ತಿ ನಿಂತ ಬೃಹತ್ ಸೆಟ್

    ‘ಕಾಂತಾರ’ ಚಿತ್ರೀಕರಣಕ್ಕೆ ಕುಂದಾಪುರದಲ್ಲಿ ತಲೆಯೆತ್ತಿ ನಿಂತ ಬೃಹತ್ ಸೆಟ್

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ 1  (Kantara 1) ಸಿನಿಮಾದ ಚಿತ್ರೀಕರಣಕ್ಕಾಗಿ ಕುಂದಾಪುರದಲ್ಲಿ (Kundapur) ಬೃಹತ್ ಆಧುನಿಕ ಸೆಟ್ ವೊಂದನ್ನು ನಿರ್ಮಾಣ ಮಾಡಿದೆ ಹೊಂಬಾಳೆ ಫಿಲ್ಮ್ಸ್. ರಾಮೋಜಿರಾವ್ ಫಿಲ್ಮ್ಸ್ ಬಿಟ್ಟರೆ, ಈ ಪ್ರಮಾಣದಲ್ಲಿ ತಯಾರಾದ ಸೆಟ್ ಇದಾಗಲಿದೆ. 200 x 200 ಅಡಿ ಒಳಾಂಗಣ ಹೊಂದಿರುವ ಸೆಟ್ ಇದಾಗಿದೆಯಂತೆ.

    ಕಾಡಿನ ಮಧ್ಯ ಕೆಲವು ದೃಶ್ಯಗಳನ್ನು ರಿಷಬ್ ಚಿತ್ರೀಕರಿಸಿದರೆ ಒಳಾಗಂಣದ ಬಹುತೇಕ ಚಿತ್ರೀಕರಣ ಇದೇ ಸೆಟ್ ನಲ್ಲೇ ನಡೆಯಲಿದೆಯಂತೆ. ಕುದುರೆ ಸವಾರಿ ಸೇರಿದಂತೆ ಹಲವಾರು ಕಸರತ್ತುಗಳನ್ನು ಈ ಸೆಟ್ ನಲ್ಲೇ ಮಾಡುವಷ್ಟು ದೊಡ್ಡದಾಗಿ ಅದು ನಿರ್ಮಾಣವಾಗಿದೆ. ಅಲ್ಲಿಯೇ ಡಬ್ಬಿಂಗ್, ಎಡಿಟಂಗ್ ಸ್ಟುಡಿಯೋ ಕೂಡ ನಿರ್ಮಾಣವಾಗಿದೆಯಂತೆ.

    ಈಗಾಗಲೇ ಚಿತ್ರೀಕರಣವನ್ನು ಆರಂಭಿಸಿರುವ ರಿಷಬ್, 20 ದಿನಗಳ ಕಾಲ ಮೊದಲನೇ ಹಂತದ ಶೂಟಿಂಗ್ ಇರಲಿದೆಯಂತೆ. ಈಗಾಗಲೇ ಕಾಡಿನ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಸೆಟ್ ನಲ್ಲೂ ಮುಂದಿನ ದಿನಗಳಲ್ಲಿ ಚಿತ್ರೀಕರಣ ಮುಂದುವೆಯಲಿದೆ. ಕುಂದಾಪುರದಲ್ಲೇ ಬಹುತೇಕ ಟೀಮ್ ವಾಸ್ತವ್ಯ ಹೂಡಿದೆ.

     

    ಕಥೆಯ ಸಾರಾಂಶವನ್ನು ಹೇಳುವಂತ ದೃಶ್ಯಗಳು ಈಗಾಗಲೇ ಚಿತ್ರೀಕರಣವಾಗಿದ್ದು, ಮುಂದಿನ ದಿನಗಳಲ್ಲಿ ಒಂದೊಂದೇ ಪ್ರಮುಖ ಪಾತ್ರಗಳು ಜೊತೆಯಾಗುತ್ತವೆಯಂತೆ. ಅಂದಹಾಗೆ ಸೆಟ್ ಫೋಟೋಗಳು ಸೋರಿಕೆಯಾಗದಂತೆ ಮುತುವರ್ಜಿ ವಹಿಸಿದ್ದಾರೆ ರಿಷಬ್ ಅಂಡ್ ಟೀಮ್.

  • ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಅವಘಡ: ಕಣ್ಮುಂದೆ ಭಸ್ಮವಾಯ್ತು ₹6 ಕೋಟಿ ಸೆಟ್

    ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಅವಘಡ: ಕಣ್ಮುಂದೆ ಭಸ್ಮವಾಯ್ತು ₹6 ಕೋಟಿ ಸೆಟ್

    ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿಹರ ವೀರ ಮಲ್ಲು’ (Harihara Veera Mallu) ಸಿನಿಮಾ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಭಾರೀ ಪ್ರಮಾಣದ ಸೆಟ್ ಹಾಕಲಾಗಿತ್ತು. ಭಾನುವಾರ ತಡರಾತ್ರಿ ಸೆಟ್ (Set) ನಲ್ಲಿ ಬೆಂಕಿ (Fire) ಕಾಣಿಸಿಕೊಂಡು, 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೆಟ್ ಬಹುತೇಕ ಸುಟ್ಟು ಹೋಗಿದೆ.

    ಸಂಪೂರ್ಣವಾಗಿ ಸೆಟ್ ಸುಟ್ಟು ಭಸ್ಮವಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಬೆಂಕಿ ನಂದಿಸಲು ಹರಸಾಹಸಪಟ್ಟರು ಸಾಧ್ಯವಾಗದೇ ಇರುವಷ್ಟು ಭಾರೀ ಪ್ರಮಾಣದಲ್ಲೇ ಬೆಂಕಿ ಕಾಣಿಸಿಕೊಂಡಿತ್ತು. ಸೆಟ್ ಹಾಗೂ ಶೂಟಿಂಗ್ ಗಾಗಿ ಬಳಸುತ್ತಿದ್ದ ಪರಿಕರಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ತೆಲಂಗಾಣದ ದುಂಡಿಗಲ್ ನ ಬೀರಂಪೇಟೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿತ್ತು. ಸಿನಿಮಾದ ಬಹುತೇಕ ಶೂಟಿಂಗ್ ಇದೇ ಸೆಟ್ ನಲ್ಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಶೇಕಡಾ 75ರಷ್ಟು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಿದ್ದು, ಬಾಕಿ ಉಳಿದ ಚಿತ್ರೀಕರಣಕ್ಕಾಗಿ ಮತ್ತೆ ಸೆಟ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

    17ನೇ ಶತಮಾನದ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್, ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ ಸೇರಿದಂತೆ ಹೆಸರಾಂತ ತಾರಾಬಳಗವೇ ಈ ಸಿನಿಮಾದಲ್ಲಿದೆ. ಕ್ರಿಶ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  • ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಹಿಂದಿಯ ಪ್ರಸಿದ್ಧ ಧಾರಾವಾಹಿ (Serial) ಸೆಟ್ (Set) ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಇಡೀ ಸೆಟ್ ಬೆಂಕಿ ಆಹುತಿಯಾಗಿದೆ. ಹಿಂದಿಯ ಗಮ್ ಹೈ ಕಿಸೀಕೆ ಪ್ಯಾರ್ ಮೈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಮಾರ್ಚ್ 10ರಂದು ಸೆಟ್ ನಲ್ಲಿದ್ದ ಸಿಲಿಂಡರ್ (Cylinder Blast) ಸ್ಫೋಟವಾಗಿದೆ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಡೆದ ಘಟನೆಯಲ್ಲಿ ಪೂರ್ತಿ ಸೆಟ್ ಬೆಂಕಿಯಲ್ಲಿ ಭಸ್ಮವಾಗಿದೆ.

    ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಅಲಿಂದ ಬಚಾವ್ ಮಾಡಲಾಗಿದೆ. ಪಕ್ಕದಲ್ಲೇ ಮತ್ತೊಂದು ಧಾರಾವಾಹಿಯ ಸೆಟ್ ಕೂಡ ಹಾಕಲಾಗಿತ್ತು. ಅದಕ್ಕೂ ಹಾನಿಯಾಗಿದೆ ಎಂದಿದೆ ಧಾರಾವಾಹಿ ತಂಡ.

  • ವಸಿಷ್ಠ ಸಿಂಹ ಅಭಿನಯದ ಸಿನಿಮಾಗೆ ಕೋಟಿ ವೆಚ್ಚದ ಸೆಟ್

    ವಸಿಷ್ಠ ಸಿಂಹ ಅಭಿನಯದ ಸಿನಿಮಾಗೆ ಕೋಟಿ ವೆಚ್ಚದ ಸೆಟ್

    ಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಸಿನಿಮಾ ಸೆಟ್ಟೇರಿದ ದಿನದಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮಲ್ಪೆಯ ಪಡುಕರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ‘ಲವ್ ಲಿ’ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ  ಹತ್ತು  ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

    ನಟ ವಸಿಷ್ಠ ಸಿಂಹ ಮಾತನಾಡಿ ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದ್ದೇವೆ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿ ಪ್ರಿಯರ ಮನಸ್ಸು ಗೆಲ್ಲುವುದರಲ್ಲಿ ಮರು ಮಾತಿಲ್ಲ ಎಂದು ತಿಳಿಸಿದ್ರು. ಇದನ್ನೂ ಓದಿ: ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

    ನಿರ್ದೇಶಕ ಚೇತನ್ ಕೇಶವ್ ಮಾತನಾಡಿ 7 ದಿನಗಳ ಚಿತ್ರೀಕರಣ ನಡೆಸಿದ್ರೆ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಲಂಡನ್ ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್ ಗೆ ತೆರಳಲಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು

    ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು

    ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸುತ್ತಿರುವ ‘ಕಬೀರ್ ಸಿಂಗ್’ ಚಿತ್ರದ ಸೆಟ್‍ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ರಾಮ್ ಕುಮಾರ್(35) ಮೃತಪಟ್ಟ ವ್ಯಕ್ತಿ. ರಾಮ್ ಕುಮಾರ್ ಡೆಹ್ರಾಡೂನಿನ ಮುಜಾಫರ್ ನಗರದ ಕಿನೋಯಿ ಗ್ರಾಮದ ನಿವಾಸಿಯಾಗಿದ್ದು, ಜನರೇಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮಸ್ಸೂರಿಯ ಹೋಟೆಲಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

    ರಾಮ್ ಕುಮಾರ್ ಗುರುವಾರ ಹೋಟೆಲ್‍ನಲ್ಲಿ ಹಾಕಿದ ಸೆಟ್‍ನಲ್ಲಿ ಜನರೇಟರ್ ರಿಪೇರಿ ಮಾಡುತ್ತಿದ್ದರು. ರಿಪೇರಿ ಮಾಡುತ್ತಿದ್ದ ವೇಳೆ ಅವರ ಮಫ್ಲರ್ ಫ್ಯಾನಿಗೆ ಸಿಲುಕಿಕೊಂಡು ಅವರ ತಲೆ ಫ್ಯಾನಿಗೆ ಬಡಿದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಮ್ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.

    ರಾಮ್ ಕುಮಾರ್ ಮೃತಪಟ್ಟ ವಿಷಯವನ್ನು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ರಾಮ್ ಕುಮಾರ್ ಮೃತದೇಹದ ಮರಣೋತ್ತರ ಪರೀಕ್ಷೆ ಶುಕ್ರವಾರ ಅಂದರೆ ಇಂದು ನಡೆಯಲಿದೆ ಎಂದು ಸಬ್ ಇನ್ಸ್ ಪೆಕ್ಟರ್ ನೀರಜ್ ಕತೈತ್ ತಿಳಿಸಿದ್ದಾರೆ.

    ಈ ಘಟನೆ ನಡೆಯುವಾಗ ನಟ ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಈ ಘಟನೆ ನಡೆದ ನಂತರ ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಆಗಿ ರಿಮೇಕ್ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್ ಮನೆಯಲ್ಲಿ ಅಗ್ನಿ ಅವಘಡ- ಸುಮಾರು 3 ಕೋಟಿ ವೆಚ್ಚದ ಮ್ಯೂಸಿಯಂ ಸುಟ್ಟು ಭಸ್ಮ

    ಬಿಗ್‍ಬಾಸ್ ಮನೆಯಲ್ಲಿ ಅಗ್ನಿ ಅವಘಡ- ಸುಮಾರು 3 ಕೋಟಿ ವೆಚ್ಚದ ಮ್ಯೂಸಿಯಂ ಸುಟ್ಟು ಭಸ್ಮ

    ರಾಮನಗರ: ಬಿಗ್ ಬಾಸ್ ಸೀಸನ್- 5ರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಿಗ್ ಬಾಸ್ ಸೆಟ್ ಸುಟ್ಟು ಕರಕಲಾದ ಘಟನೆ ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ.

    ಸುಮಾರು 3 ಗಂಟೆಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ವಾಗತ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‍ ನಿಂದ ಈ ಅಗ್ನಿ ದುರಂತ ಸಂಭವಿಸಿದೆ. ಸುಮಾರು 13 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.

    ಇಡೀ ಬಿಗ್ ಬಾಸ್ ಸೆಟ್‍ಗೆ ಬೆಂಕಿ ಆವರಸಿಕೊಂಡಿದ್ದು, ಮೇಣದ ಮ್ಯೂಸಿಯಂನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಲವು ಮೇಣದ ಪ್ರತಿಮೆಗಳು ಬೆಂಕಿಗೆ ಆಹುತಿಯಾಗಿದೆ. ವೀಡಿಯೋ ಎಡಿಟಿಂಗ್ ಹಾಗೂ ಬಿಗ್ ಬಾಸ್ ಮನೆಯ ರೆಸ್ಟ್ ಆವರಣದವರೆಗೂ ಹಾಗೂ ಸ್ಪರ್ಧಿಗಳು ಕೂತು ಹರಟೆ ಹೊಡೆಯುತ್ತಿದ್ದ ಅಂಗಳದವರೆಗೂ ಬೆಂಕಿ ವ್ಯಾಪಿಸಿದೆ.

    ಹೆಚ್ಚಿನದ್ದಾಗಿ ಮರದ ಹಲಗೆಗಳಿಂದ ಈ ಮನೆ ನಿರ್ಮಿಸಿದ್ದು, ಬಿಗ್ ಬಾಸ್ ಮನೆಯ ಒಳಗೆಲ್ಲ ಬೆಂಕಿ ಆವರಿಸಿಕೊಂಡಿದೆ. ಈಗಾಗಲೇ ಒಟ್ಟು 13 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಈಗ ಬೆಂಕಿ ನಂದಿಸಲು ಮತ್ತೆರಡು ವಾಹನಗಳ ಆಗಮಿಸಿದೆ. ರಾಮನಗರ, ಕನಕಪುರದಿಂದ 9 ಅಗ್ನಿಶಾಮಕ ವಾಹನ, ಬಾಷ್ ಮತ್ತು ಟೊಯೋಟಾ ಕಂಪನಿಗಳ 3 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಪಡೆ ಹರಸಾಹಸ ಪಡುತ್ತಿದ್ದಾರೆ.

    ಈ ಅಗ್ನಿ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.