Tag: ಸೆಕ್ಸ್ ಸಿಡಿ

  • ಸೆಕ್ಸ್ ‘ಸಿಡಿ’ ಬಾಂಬ್ – ದೆಹಲಿಗೆ ತೆರಳದೆ ಅಜ್ಞಾತ ಸ್ಥಳ ಸೇರಿದ್ರಾ ರಮೇಶ್ ಜಾರಕಿಹೊಳಿ..?

    ಸೆಕ್ಸ್ ‘ಸಿಡಿ’ ಬಾಂಬ್ – ದೆಹಲಿಗೆ ತೆರಳದೆ ಅಜ್ಞಾತ ಸ್ಥಳ ಸೇರಿದ್ರಾ ರಮೇಶ್ ಜಾರಕಿಹೊಳಿ..?

    ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂತ್ರಿ ಅಜ್ಞಾತ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಿಡಿ ಬಿಡುಗಡೆಯಾಗುತ್ತಿದ್ದಂತೆಯೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಾಹುಕಾರ, ಸಿಎಂ ಭೇಟಿ ಮಾಡಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗ್ತೀನಿ ಎಂದು ಹೇಳಿದ್ದರು. ಆದರೆ ದೆಹಲಿಗೆ ಹೊರಟ ಸಚಿವರು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆ ಇದೀಗ ಎದ್ದಿದೆ. ಖಾಸಗಿ ಕಾರಿನಲ್ಲಿ ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ಬೆಳಗಾವಿ ಸಾಹುಕಾರ್ ಬೆಂಗಳೂರಿನಲ್ಲಿದ್ದಾರಾ..? ಬೆಳಗಾವಿಗೆ ಹೋದ್ರಾ..? ದೆಹಲಿಗೆ ಹೋಗಿದ್ದಾರಾ..? ಎಂಬ ಕುರಿತು ಇದೀಗ ಚರ್ಚೆಯಾಗುತ್ತಿದೆ. ಸಿಎಂ ಭೇಟಿ ಮಾಡಿ ದೆಹಲಿಗೆ ಹೋಗ್ತೀನಿ ಅಂತ ನಿನ್ನೆ ರಾತ್ರಿ ಬೆಂಗಳೂರು ನಿವಾಸದಿಂದ ಹೊರಟಿದ್ದ ಸಾಹುಕಾರ್, ಇದುವರೆಗೂ ಸಿಎಂ ಬಿಎಸ್‍ವೈ ಭೇಟಿ ಮಾಡಿಲ್ಲ. ಹೀಗಾಗಿ ಅಜ್ಞಾತ ಸ್ಥಳದಲ್ಲಿದ್ದೇ ಅದೇನು ಪ್ರಕರಣದಿಂದ ತಮ್ಮನ್ನು ಪಾರು ಮಾಡಿಕೊಳ್ಳಲು ತಂತ್ರ ಹೂಡುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ಇತ್ತ ಸದಾಶಿವನಗರದ ರಮೇಶ್ ಜಾರಕಿಹೊಳಿಯ ‘ಭಾಗ್ಯಲಕ್ಷ್ಮಿ’ ನಿವಾಸ ಭಣ ಭಣ ಎನ್ನುತ್ತಿದೆ.

  • ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್‍ಗೆ ಸಂಬಂಧಿಸಿದೆ ಎಂದುಹೇಳಲಾಗುತ್ತಿರುವ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ.

    ಮೇ 22ರಂದು ತನ್ನ ಮೂವರು ಗೆಳೆಯರೊಂದಿಗೆ ಯುವತಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ರೆಕಾರ್ಡ್ ಆಗಿದ್ದಾಗ ಹಾರ್ದಿಕ್ ಸೇರಿ ಮೂವರು ತಲೆಬೋಳಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

    ಸೋಮವಾರ ಮಹಿಳೆಯೊಂದಿಗೆ ಹಾರ್ದಿಕ್ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದ ವೀಡಿಯೋ ವೈರಲ್ ಆಗಿತ್ತು. ಇದು ಚುನಾವಣೆ ಗೆಲ್ಲಲು ಬಿಜೆಪಿ ಹಿಡಿದಿರುವ ಅಡ್ಡದಾರಿ ಅಂತಾ ಹಾರ್ದಿಕ್ ಆರೋಪಿಸಿದ್ದಾರೆ. ಈ ವರ್ಷದ ಮೇ 22 ರಂದು ಈ ವಿಡಿಯೋ ಸೆರೆಯಾಗಿದೆ.

     

     

     

     

     

     

     

    https://twitter.com/HardikPatel_/status/930005238991478784

    https://youtu.be/rePlIfEZkVQ

  • ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    – ಈ ವಿಡಿಯೋದಲ್ಲಿರೋದು ನಾನಲ್ಲ : ಹಾರ್ದಿಕ್ ಪಟೇಲ್

    ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿದೆ. ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದಾರೆ.

    ಮಾಧ್ಯಮಗಳಲ್ಲಿ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ನಕಲಿ ಸಿಡಿಯೊಂದು ನನ್ನ ವಿರುದ್ಧ ಬಿಡುಗಡೆ ಆಗಲಿದೆ ಅಂತಾ ಹಾರ್ದಿಕ್ ಹೇಳಿಕೊಂಡಿದ್ರು. ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸಿಡಿ ನನ್ನ ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ.

    https://twitter.com/HardikPatel_/status/930005238991478784

     

    https://youtu.be/rePlIfEZkVQ