Tag: ಸೆಕ್ಯುರಿಟಿ ಗಾರ್ಡ್

  • ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೇ ಸಾವು

    ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೇ ಸಾವು

    ನವದೆಹಲಿ: ದೆಹಲಿ (Delhi) ಸಮೀಪದ ಘಾಜಿಯಾಬಾದ್‌ನ (Ghaziabad) ಹೌಸಿಂಗ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಸೆಕ್ಯುರಿಟಿ ಗಾರ್ಡ್ (Security Guard) ಮೇಲೆ ಆಕೆಯ ಮೇಲ್ವಿಚಾರಕ ಮತ್ತು ಇತರ ಇಬ್ಬರು ಗಾರ್ಡ್‌ಗಳು ಸಾಮೂಹಿಕ ಅತ್ಯಾಚಾರ (Rape) ಮಾಡಿ ಥಳಿಸಿದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ನಿತ್ರಾಣಗೊಂಡಿರುವ ಸಂತ್ರಸ್ತ ಯುವತಿಯನ್ನು ಅತ್ಯಾಚಾರ ಮಾಡಿ ಬಳಿಕ ಮೂವರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅವಳನ್ನು ಗಾಜಿಯಾಬಾದ್ ಬದಲಿಗೆ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಂಧನದಿಂದ ತಪ್ಪಿಸಿ ಪರಾರಿಯಾಗಿದ್ದರು. ಆದಾಗ್ಯೂ ಪ್ರಮುಖ ಆರೋಪಿ ಅಜಯ್ (32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಆಸೆಯಂತೆ ರಸಗುಲ್ಲಾ ನೀಡಿ ಬಾಲಕನ ಕೊಲೆಗೈದ ಕ್ಲಾಸ್‍ಮೇಟ್ಸ್!

    ಸೋಮವಾರ ತಡರಾತ್ರಿ ಯುವತಿಯ ಆರೋಗ್ಯದಲ್ಲಿ ಏರುಪೇರದ ಹಿನ್ನೆಲೆ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಯುವತಿ ಜಾರ್ಖಂಡ್‌ಗೆ ಸೇರಿದವರಾಗಿದ್ದು, ಹೌಸಿಂಗ್ ಸೊಸೈಟಿಯ ಬಳಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಮೇಲ್ವಿಚಾರಕರು ಮತ್ತು ಇತರ ಇಬ್ಬರು ಗಾರ್ಡ್‌ಗಳು ಆಕೆಯನ್ನು ಥಳಿಸಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ನಂತರ ಆಕೆ ಪ್ರತಿಭಟಿಸಲು ಮುಂದಾದಾಗ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಆರೋಪಿ ತಪ್ಪಿಸಿಕೊಳ್ಳಲು ಇತರ ಸಹೋದ್ಯೋಗಿಗಳು ಸಹಾಯ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಕ್ಯುರಿಟಿ ಗಾರ್ಡ್‌ ಹತ್ಯೆ ಮಾಡಿ ಮನೆ ದರೋಡೆ

    ಸೆಕ್ಯುರಿಟಿ ಗಾರ್ಡ್‌ ಹತ್ಯೆ ಮಾಡಿ ಮನೆ ದರೋಡೆ

    ಬೆಂಗಳೂರು: ಸೆಕ್ಯುರಿಟಿ ಗಾರ್ಡ್‌ (Security Guard) ಹತ್ಯೆ ಮಾಡಿ ಮನೆಯೊಂದರಲ್ಲಿ ದರೋಡೆ (Robbery) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ಕೋರಮಂಗಲದ 6ನೇ ಬ್ಲಾಕ್‌ನಲ್ಲಿ ಘಟನೆ ನಡೆದಿದೆ. ಅಸ್ಸಾಂ ಮೂಲದ 45 ವರ್ಷದ ಕರಿಯಪ್ಪ, ಸೆಕ್ಯುರಿಟಿ ಗಾರ್ಡ್ ಕೊಲೆಯಾದ ದುರ್ದೈವಿ. ಮತ್ತೊಬ್ಬ ಸೆಕ್ಯುರಿಟಿ ಬಹದ್ದೂರ್‌ನಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಹದ್ದೂರ್‌ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಕಂಟ್ರಾಕ್ಟರ್‌ ರಾಜಶೇಖರ ರೆಡ್ಡಿ ಎಂಬವರಿಗೆ ಸೇರಿದ ಮನೆಯಲ್ಲಿ ದರೋಡೆಯಾಗಿದೆ. ಮನೆ ಮಾಲೀಕರು ನಿನ್ನೆ ಕುಟುಂಬ ಸಂಬಂಧಿಕರ ಮದುವೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಮಾತ್ರ ಇದ್ದ. ಈ ವೇಳೆ ಸೆಕ್ಯುರಿಟಿ ಗಾರ್ಡ್‌ನ ಕೊಲೆ ಮಾಡಿ ದುಷ್ಕರ್ಮಿಗಳು ಮನೆಯಲ್ಲಿ ದರೋಡೆ ಮಾಡಿದ್ದಾರೆ.

    ಬೆಳಗ್ಗೆ ಇತರೆ ಕೆಲಸಗಾರರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೋರಮಂಗಲ ಪೊಲೀಸರು ಪರಿಶೀಲನೆ ನಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಬೆಂಗಳೂರು: ಕೊರೊನಾ ಸೃಷ್ಟಿಸಿದ ಅವಾಂತರಗಳಿಂದ ಒಂದೆಡೆ ಜನಸಾಮಾನ್ಯರು ಕೆಲಸವಿಲ್ಲದೇ ಪರದಾಡುತ್ತಿದ್ದರೆ, ಮತ್ತೊಂದೆಡೆ ದುಡಿದ ಕೆಲಸಕ್ಕೂ ಸಂಬಳ ಸಿಗದೇ ಕೆಲ ಜನ ಒದ್ದಾಡುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಸೆಕ್ಯೂರಿಟಿ ಗಾರ್ಡ್. ಖಾಸಗಿ ಕಾಲೇಜೊಂದು ಸೆಕ್ಯೂರಿಟಿ ಗಾರ್ಡ್ ಗಳಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ.

    ಹೌದು. ಕೊರೊನಾದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಲಾಕ್ ಡೌನ್ ಆದ್ರೂ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಎಂಎಸ್ ಪಾಳ್ಯದ ಸಂಭ್ರಮ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೊನಾ ನೆಪವೊಡ್ಡಿ ಮೂರು ತಿಂಗಳ ಸಂಬಳವನ್ನೇ ಹಾಕಿಲ್ಲ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳ ಸಂಬಳವನ್ನು ಒಬ್ಬರಿಗೆ 10 ಸಾವಿರದಂತೆ ನೀಡಿಲ್ಲವೆಂದು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪ್ರಶ್ನಿಸಲು ಹೋದ ಪಬ್ಲಿಕ್ ಟಿವಿ ವರದಿಗಾರರಿಗೆ ಕಾಲೇಜಿನ ಪ್ರಿನ್ಸಿಪಾಲ್, ಯಾವುದಕ್ಕೂ ಉತ್ತರ ಕೊಡದೇ ಮೊಂಡುತನ ಪ್ರದರ್ಶಿಸಿದ್ದಾರೆ. ನಮಗೆನೂ ಗೊತ್ತಿಲ್ಲ, ಮ್ಯಾನೆಜ್ಮೆಂಟ್, ಏಜೆನ್ಸಿಯವ್ರನ್ನು ಕೇಳಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿದ ಖಾಸಗಿ ಏಜೆನ್ಸಿ, ಕಾಲೇಜು ಮ್ಯಾನೆಜ್ಮೆಂಟ್ ಕೊಟ್ಟಿಲ್ಲ ನಾವು ಸಂಬಂಳ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದುಡಿದ ಬಡ ಜೀವಗಳು ಸಂಬಳವಿಲ್ಲದೇ ಕಷ್ಟಪಡುತ್ತಿವೆ. ಪ್ರತಿಷ್ಠಿತ ಕಾಲೇಜಿಗೆ ತಿಂಗಳಿಗೆ 10 ಸಾವಿರ ಕೊಡೋದು ಭಾರವಾಯಿತೇ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಭದ್ರತೆಗೆ ನೇಮಿಸಿದ್ದ ಸೆಕ್ಯುರಿಟಿಯಿಂದಲೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್

    ಭದ್ರತೆಗೆ ನೇಮಿಸಿದ್ದ ಸೆಕ್ಯುರಿಟಿಯಿಂದಲೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್

    ಬೆಂಗಳೂರು: ಬೇಲಿಯೆ ಎದ್ದು ಹೊಲ ಮೇಯ್ದ ಎಂಬ ಮಾತಂತೆ ಭದ್ರತೆ ಒದಗಿಸಬೇಕಿದ್ದ ಸೆಕ್ಯುರಿಟಿ ಸಿಬ್ಬಂದಿಯೇ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ, ದುಡ್ಡಿನ ದುರಾಸೆಗೆ ಖಾಕಿ ಖಜಾನೆಗೆ ಭೂಪ ಕೈ ಹಾಕಿದ್ದಾನೆ.

    ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‍ನ ಹೆಡ್ ಸೆಕ್ಯುರಿಟಿ ಅನಿಲ್ ಪ್ರಾನ್ಸಿಸ್ ಪಿಎಸ್‍ಐ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಭೂಪ. ಮಡಿಕೇರಿ ನೆರೆ ವೇಳೆ ಪಿಎಸ್‍ಐ ಪರೀಕ್ಷೆಯನ್ನು ಸರ್ಕಾರ ಮುಂದೂಡಿತ್ತು. ಈ ವೇಳೆಗಾಗಲೇ ಪ್ರಶ್ನೆ ಪತ್ರಿಕೆ ಸಿದ್ಧವಿರುವ ವಿಚಾರ ತಿಳಿದಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಡರಾತ್ರಿ ಎರಡು ಗಂಟೆ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್‍ಗೆ ನುಗ್ಗಿ, ಪ್ರಶ್ನೆ ಪತ್ರಿಕೆ ಕದ್ದು, ಅಲ್ಲಿಯೇ ಜೆರಾಕ್ಸ್ ಮಾಡಿ ಆಸಲಿ ಪೇಪರ್ ನ ಅಲ್ಲೇ ಇಟ್ಟು ಬಂದಿದ್ದನು. ನಂತರ ಟಿಪನ್ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಂಡು ಅಲ್ಲಿಂದ ಪೇಪರ್ ಹೊರತಂದಿದ್ದನು.

    ಪ್ರಶ್ನೆ ಪತ್ರಿಕೆ ಏನು ಮಾಡೋದು ಎಂದು ಒಡಾಡುತ್ತಿದ್ದವನಿಗೆ ದಾವಣಗೆರೆ ಮೂಲದ ಅಮೀರ್ ಅಹಮದ್ ಪರಿಚಯವಾಗಿದ್ದನು. ಈ ಹಿಂದೆ ಆಂಧ್ರದಲ್ಲಿ ಪೇಪರ್ ಲೀಕ್ ಮಾಡಿ ಅಮೀರ್ ಸಿಕ್ಕಿಬಿದ್ದಿದ್ದನು. 45 ಲಕ್ಷಕ್ಕೆ ಡೀಲ್ ಮಾಡಿ 17 ಲಕ್ಷ ರೂ. ಅನಿಲ್ ಪಡೆದಿದ್ದನು. ಸಿಸಿಬಿ ಚಾರ್ಜ್‍ಶೀಟ್‍ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಬೆಳಕಿಗೆ ಬಂದ ತಕ್ಷಣ ಆರೋಪಿ ದುಬೈಗೆ ಹಾರಿದ್ದನು.

    ಆದರೆ ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ದುಬೈನಲ್ಲಿದ್ದವನಿಗೆ ಫ್ಯಾಮಿಲಿ ಸೆಂಟಿಮೆಂಟ್ ಡ್ರಾಮಾದಿಂದ ವಾಪಸ್ಸು ಕರೆಸಿಕೊಂಡು, ಸೆರೆಹಿಡಿದಿದ್ದಾರೆ. ಪಿಎಸ್‍ಐ ಪೇಪರ್ ಲೀಕ್ ಪ್ರಕರಣದಲ್ಲಿ ಅನಿಲ್ ಬಿಟ್ಟು ಇನ್ನೂ 119 ಜನ ಆರೋಪಿಗಳ ಮೇಲೆ 2000 ಸಾವಿರ ಪುಟಗಳ ಚಾರ್ಜ್‍ಶೀಟ್ ಅನ್ನು ಸಿಸಿಬಿ ಪೊಲೀಸರು ಸಿದ್ಧಪಡಿಸಿದ್ದಾರೆ.

  • 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    -ಪ್ರೇಯಸಿ, ಗಾರ್ಡ್‍ಗೆ ಗುಂಡು ಹೊಡೆದು ಕೊನೆಗೆ ತಾನು ಹೆಣವಾದ ಭಗ್ನ ಪ್ರೇಮಿ

    ಬ್ಯಾಂಕಾಕ್: ಕೇವಲ 15 ಸೆಕೆಂಡ್‍ನಲ್ಲಿ ಭಗ್ನ ಪ್ರೇಮಿಯೊಬ್ಬನ ಕೈಯಿಂದ ಮೂರು ಮಂದಿ ಹೆಣವಾದ ದಾರುಣ ಘಟನೆ ತೈಲ್ಯಾಂಡ್‍ನ ಲ್ಯಾಂಪಂಗ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಮೃತಪಟ್ಟವರನ್ನು ಡಾಮ್ರೊಂಗ್ಚಾಯ್ ಮೊನೊಥಾಮ್(39), ಆತನ ಮಾಜಿ ಪ್ರೇಯಸಿ ಬೂನಿಪೋರ್ನ್ ಕಂತಲಾಹ್(21) ಹಾಗೂ ಸೆಕ್ಯುರಿಟಿ ಗಾರ್ಡ್ ಮೆರಪೊಂಗ್ ಮೋರ್ಪಾ(28) ಎಂದು ಗುರುತಿಸಲಾಗಿದೆ. ಡಾಮ್ರೊಂಗ್ಚಾಯ್ ಹಾಗೂ ಬೂನಿಪೋರ್ನ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ದೂರವಾಗಿದ್ದರು. ಇದರಿಂದ ಡಾಮ್ರೊಂಗ್ಚಾಯ್ ಮನನೊಂದಿದ್ದನು. ಆದ್ರೆ ಬೂನಿಪೋರ್ನ್ ಮಾತ್ರ ಎಲ್ಲವನ್ನು ಮರೆತು ಸ್ನೇಹಿತರೊಡನೆ ಪಾರ್ಟಿ ಮಾಡಿಕೊಂಡು ಚೆನ್ನಾಗಿದ್ದಳು.

    ತನ್ನ ಮಾಜಿ ಪ್ರೇಯಸಿ ತನ್ನನ್ನು ಕಡೆಗಣಿಸಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಸುಖವಾಗಿದ್ದಾಳೆ ಎಂಬ ಕಾರಣಕ್ಕೆ ಡಾಮ್ರೊಂಗ್ಚಾಯ್ ಕೋಪಗೊಂಡಿದ್ದನು. ಅಲ್ಲದೆ ಮಂಗಳವಾರ ರಾತ್ರಿ ಬೂನಿಪೋರ್ನ್ ಸ್ನೇಹಿತರೊಡನೆ ಪಾರ್ಟಿಗೆಂದು ತೆರಳಿದ್ದ ವೇಳೆ ಏಕಾಏಕಿ ಆಕೆಯ ಮೇಲೆ ಡಾಮ್ರೊಂಗ್ಚಾಯ್ ಹಲ್ಲೆ ಮಾಡಿದ್ದಾನೆ. ಮೊದಲು ಆಕೆಯ ಸ್ನೇಹಿತರಿಗೆ ಗನ್ ತೋರಿಸಿ ಹೆದರಿಸಿ ಬೂನಿಪೋರ್ನ್‍ನನ್ನು ಎಳೆದುಕೊಂಡು ಹೋಗಿದ್ದಾನೆ. ಆ ನಂತರ ಕೆಲ ಕಾಲ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ.

    ಮೊದಲೇ ಕೋಪದಲ್ಲಿದ್ದ ಡಾಮ್ರೊಂಗ್ಚಾಯ್‍ಗೆ ಬೂನಿಪೋರ್ನ್ ತನ್ನ ಬಳಿ ವರ್ತಿಸಿದ್ದು ಇಷ್ಟವಾಗಲಿಲ್ಲ. ಆದರಿಂದ ಆಕೆಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ರಕ್ಷಿಸಲು ಬಂದ ಸೆಕ್ಯುರಿಟಿ ಗಾರ್ಡ್‍ಗೆ ಕೂಡ ಗುಂಡು ಹೊಡೆದು ಕೊಂದಿದ್ದಾನೆ. ತದನಂತರ ತಾನು ಕೂಡ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಹೀಗೆ ಕೇವಲ 15 ಸೆಕೆಂಡ್‍ಗಳಲ್ಲಿ ಮೂವರ ಪ್ರಾಣ ಹೋಗಿದೆ. ಡಾಮ್ರೊಂಗ್ಚಾಯ್ ಕೋಪಕ್ಕೆ ಅವನ ಜೊತೆಗೆ ಇಬ್ಬರು ಅನ್ಯಾಯವಾಗಿ ಜೀವ ಕಳೆದುಕೊಂಡಿದ್ದಾರೆ.

    https://www.youtube.com/watch?v=8cb-MF8G3eE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ

    ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ

    ನವದೆಹಲಿ: ಬಿಜೆಪಿ ಮುಖಂಡ ಹಾಗೂ ಅವರ ಭದ್ರತಾ ಸಿಬ್ಬಂದಿಯೊಬ್ಬರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಗ್ರೇಟರ್ ನೊಯ್ಡಾದ ಬಿಸ್ರಖ್ ಎಂಬಲ್ಲಿ ಗುರುವಾರ ನಡೆದಿದೆ.

    ಶಿವಕುಮಾರ್ ಯಾದವ್ ಹತ್ಯೆಯಾದ ಬಿಜೆಪಿ ಮುಖಂಡ. ಇವರು ಗ್ರೇಟರ್ ನೊಯ್ಡಾದ ಬೆಹ್ಲೋಲ್ಪುರ್ ಗ್ರಾಮದವರು.

    ಶಿವಕುಮಾರ್ ತನ್ನ ಸೆಕ್ಯೂರಿಟಿ ಗಾರ್ಡ್ ಫಾರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟಿಗ್ರಿ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕಾರಿನ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಗುದ್ದಿದೆ. ದುಷ್ಕರ್ಮಿಗಳ ಗುಂಡಿನ ದಾಳಿಗೆ ಇಬ್ಬರೂ ಬಲಿಯಾಗಿದ್ದಾರೆ.

    ಕಾರಿನಲ್ಲಿದ್ದ ಹ್ಯಾನ್ಸ್ಪಲ್ ಎಂಬರಿಗೆ ಗುಂಡು ತಗುಲಿದ್ದು, ಗಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಜಿಟಿಬಿ ಆಸ್ಪತ್ರೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

    ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ನರೆದಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವರದಿಗಳ ಪ್ರಕಾರ ಆರೋಪಿಗಳು ಕಾರನ್ನು ಅರ್ಧ ಕಿ.ಮೀ ದೂರದವರೆಗೆ ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದಾರೆ ಅಂತ ತಿಳಿದುಬಂದಿದೆ.

    ಈ ಹಿಂದೆ ಅಂದರೆ ನವೆಂಬರ್ 2ರಂದು ಜಮ್ಮು-ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಿಜೆಪಿ ಯುವ ಘಟಕದ ಅಧ್ಯಕ್ಷ ಬಲಿಯಾಗಿದ್ದರು. ಅಧ್ಯಕ್ಷ ಗೌರ್ ಅಹಮದ್ ಭಟ್ ಎಂಬವರನ್ನು ಉಗ್ರರು ಕತ್ತು ಸೀಳಿ ಕೊಲೆಗೈದಿದ್ದರು.