Tag: ಸೃಷ್ಠಿ ಪಾಟೀಲ್

  • ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಹುಬ್ಬಳ್ಳಿ: ಕೆಲವು ದಿನಗಳಿಂದ ನಗರದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.

    ಹಾಲಿ ಹಾಗೂ ಮಾಜಿ ಸಚಿವರಿಬ್ಬರು ಪಾಪು ಅವರ ಆರೋಗ್ಯದ ಬಗ್ಗೆ ಅವರ ಸಂಬಂಧಿಗಳು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಪಾಟೀಲ್ ಪುಟ್ಟಪ್ಪವರು ನಾಡಿನ ಹಿರಿಯ ಚಿಂತಕರು, ಅವರು ಬೇಗನೆ ಗುಣಮುಖರಾಗಿ ಮತ್ತೆ ಮೊದಲಿನಂತೆ ನೆಲ, ಜಲ ಹಾಗೂ ಕನ್ನಡಕ್ಕಾಗಿ ಅವರ ಹೋರಾಟ ಮುಂದುವರೆಸಲು ಎಂದು ಬಿ.ಸಿ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಹಾರೈಸಿದರು.

    ಇದೇ ವೇಳೆ ಕೃಷಿ ಸಚಿವರು ಕಿಮ್ಸ್ ವೈದ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಂಡರು. ಬಳಿಕ ಪಾಪು ಅವರ ಆರ್ಶಿವಾದ ಪಡೆದರು. ಸಚಿವ ಬಿಸಿ ಪಾಟೀಲ್ ಜೊತೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಸಹ ಪಾಪುರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

  • ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ: ಬಿ.ಸಿ ಪಾಟೀಲ್ ಪುತ್ರಿ ಗರಂ

    ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ: ಬಿ.ಸಿ ಪಾಟೀಲ್ ಪುತ್ರಿ ಗರಂ

    -ಪಕ್ಷದಲ್ಲಿ ಸಿದ್ದರಾಮಯ್ಯರ ಮಾತಿಗೆ ಬೆಲೆ ಇಲ್ಲ

    ಬೆಂಗಳೂರು: ಒಂದು ಸಾರಿ ಚಾನ್ಸ್ ಕೊಡಬಹುದು. ಆದರೆ ಎಷ್ಟು ಸಲ ಅಂತ ನಾವು ಮೋಸ ಹೋಗುವುದು. ಇದು ಮೂರನೇ ಬಾರಿ ಸಚಿವ ಸ್ಥಾನ ಕೊಡುತ್ತೀನಿ ಎಂದು ಹೇಳಿ ಮೋಸ ಮಾಡಿರುವುದು. ಹೀಗಾಗಿ ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ ಎಂದು ಹೀರೆಕೆರೂರು ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಕೈ ಹೈಕಮಾಂಡ್ ಮೇಲೆ ಗರಂ ಆಗಿದ್ದಾರೆ.

    ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೃಷ್ಟಿ ಪಾಟೀಲ್, ಮೂರನೇ ಬಾರಿಯೂ ಕೊಡುತ್ತೀನಿ ಎಂದು ಕತ್ತು ಕೂಯ್ದಂಗೆ ಆಗಿದೆ. ಹೀಗಾಗಿ ಅವರು ತುಂಬಾ ಬೇಸರದಿಂದ ಇದ್ದಾರೆ. ಈ ಬಾರಿ ನಾವೇನೂ ಕೇಳಿಕೊಂಡು ಹೋಗಿರಲಿಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಪರವಾಗಿದ್ದು, ಮಂತ್ರಿ ಸ್ಥಾನ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯನವರ ಮಾತಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭರವಸೆ ಕೊಟ್ಟು ಹಿಂದೆ ತಳ್ಳುತ್ತಾ ಇದ್ದಾರೆ. ಕಾಣದ ಕೈವಾಡ ಇಲ್ಲದಿದ್ದರೂ ಪಕ್ಷದ ಒಳಗಡೆ ಏನೋ ನಡೆಯುತ್ತಿದೆ. ಇದು ಮೂರನೇ ಬಾರಿ ಸಚಿವ ಸ್ಥಾನ ಕೊಡುತ್ತೀನಿ ಎಂದು ಹೇಳಿ ಮೋಸ ಮಾಡಿರುವುದು. ಒಂದು ಸಾರಿ ಚಾನ್ಸ್ ಕೊಡಬಹುದು. ಆದರೆ ಎಷ್ಟು ಸಲ ಅಂತ ನಾವು ಮೋಸ ಹೋಗುವುದು. ಮತ್ತೆ ಮತ್ತೆ ಚಾನ್ಸ್ ಕೊಡುವುದಕ್ಕೆ ಯಾರೂ ಮೂರ್ಖರಲ್ಲ. ಎಂಪಿ ಎಲೆಕ್ಷನ್‍ನಲ್ಲೂ ನಾವೂ ಕಷ್ಟ ಪಟ್ಟರೂ ಅಷ್ಟೊಂದು ಫಲಿತಾಂಶ ಬಂದಿಲ್ಲ. ಅದನ್ನಾದರೂ ಪಕ್ಷದ ಮುಖಂಡರು ನೋಡಿ ಪಕ್ಷ ಬೆಳೆಸಬೇಕು ಅಂತಿದ್ದರೆ ತೀರ್ಮಾನ ಮಾಡಬೇಕಿತ್ತು. ಆದರೆ ಪಕ್ಷ ಬೆಳೆಸಬೇಕಾ, ಬೆಳೆಸಲು ಅವರೇ ಬಿಡುತ್ತಿಲ್ಲವಾ ಎಂಬ ಪ್ರಶ್ನೆ ಮೂಡಿದೆ ಎಂದರು.

    ನಮ್ಮ ಕ್ಷೇತ್ರದಲ್ಲಿ 48 ವರ್ಷದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಗೆದ್ದಿದೆ. ಹೀಗಾಗಿ ಕಷ್ಟ ಪಟ್ಟಿದ್ದಾರೆ ಎಂದು ಅವರಿಗೆ ಬೆಲೆನೂ ಕೊಟ್ಟಿಲ್ಲ. ಅಭಿವೃದ್ಧಿ ಯಾರು ಮಾಡುತ್ತಾರೆ, ಯಾರು ಮುಂದೆ ಬೆಳೆಯುತ್ತಾರೋ ಅವರನ್ನು ತುಳಿಯುವ ಕೆಲಸ ಮಾಡುತ್ತಿದೆ. ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಪಕ್ಷದ ಭವಿಷ್ಯವನ್ನು ಅವರೇ ತೀರ್ಮಾನ ಮಾಡುತ್ತಿದ್ದಾರೆ. ತಂದೆ ಕ್ಷೇತ್ರದ ಜನತೆಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸೃಷ್ಠಿ ಪಾಟೀಲ್ ತಿಳಿಸಿದರು.

  • ಅಪ್ಪನಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ ಪಾಟೀಲ್ ಮಗಳು ಗರಂ..!

    ಅಪ್ಪನಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ ಪಾಟೀಲ್ ಮಗಳು ಗರಂ..!

    ಬೆಂಗಳೂರು: ತಂದೆಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

    ರಾಮಲಿಂಗಾ ರೆಡ್ಡಿ ಪುತ್ರಿ ಆಯ್ತು, ಈಗ ಬಿಸಿ ಪಾಟೀಲ್ ಪುತ್ರಿಯ ಸರದಿ ಎಂಬಂತೆ ಸೃಷ್ಠಿ ಪಾಟೀಲ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. ಸಚಿವ ಸ್ಥಾನ ಕೊಡದೇ ಇರೋದು ಬಿಸಿ ಪಾಟೀಲಿಗೆ ಮಾಡಿದ ದೊಡ್ಡ ಅನ್ಯಾಯ. ಹಿರೇಕೆರೂರು-ರಟ್ಟೇಹಳ್ಳಿ ತಾಲೂಕಿಗೆ ಮಾಡಿದ ದೊಡ್ಡ ಅನ್ಯಾಯ. ಬಿಸಿ ಪಾಟೀಲ್‍ಗೆ ಸಚಿವ ಸ್ಥಾನದ ಅರ್ಹತೆ ಇದ್ದರೂ ಕಾಂಗ್ರೆಸ್ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಿಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಮಲಿಂಗಾರೆಡ್ಡಿಗೆ ಕೈ ತಪ್ಪಿದ ಸಚಿವ ಸ್ಥಾನ- ಅಸಮಾಧಾನ ಹೊರ ಹಾಕಿದ ಶಾಸಕಿ ಸೌಮ್ಯ ರೆಡ್ಡಿ

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸೃಷ್ಠಿ ಪಾಟೀಲ್, ಅಪ್ಪಾಜಿಗೆ ಸಚಿವ ಸ್ಥಾನ ಕೊಡದಿರುವುದಕ್ಕೆ ಅಸಮಾಧಾನವಿದೆ. ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆ ಇದೆ. ಮೂರು ಬಾರಿ ಶಾಸಕರಾಗಿದ್ದಾರೆ, ಪಕ್ಷನಿಷ್ಠೆ ತೋರಿದ್ದಾರೆ. ಇಡೀ ಹಾವೇರಿ ಜಿಲ್ಲೆಗೆ ಬಿ.ಸಿ ಪಾಟೀಲ್ ಅವರು ಏಕೈಕ ಕಾಂಗ್ರೆಸ್ ನಾಯಕರಾಗಿದ್ದಾರೆ. ಅಲ್ಲದೆ ಕಳೆದ 38 ವರ್ಷಗಳಿಂದ ಹಿರೇಕೆರೂರು ತಾಲೂಕಿಗೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿಲ್ಲ. ಹೀಗೆ ಮಾಡಿದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕೆಂದರೆ ಎಲ್ಲಿಂದ ಆಗುತ್ತೆ? ಇದು ದೊಡ್ಡ ಅನ್ಯಾಯ ಎಂದು ಕಿಡಿಕಾರಿದ್ದಾರೆ.

    https://twitter.com/shrustipatil_/status/1076290848562790400

    ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲು ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಕಾಂಗ್ರೆಸ್ ನಾಯಕರೊಡನೆ ಮಾತನಾಡಿದ್ದೆವು. ಸ್ವಾರ್ಥಕ್ಕಾಗಿ ಸಚಿವ ಸ್ಥಾನವನ್ನು ಕೇಳುತ್ತಿಲ್ಲ ಅಭಿವೃದ್ಧಿ ಕೆಲಸವನ್ನು ಮಾಡಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಒಳಗೆ ಏನು ನಡೀತಿದೆ ಅಂತಾ ಗೊತ್ತಿಲ್ಲ. ಯಾವ ಆಧಾರದ ಮೇಲೆ ಪಕ್ಷದವರು ಸಚಿವ ಸ್ಥಾನ ಕೋಡ್ತಾರೆ, ಯಾಕೆ ಅರ್ಹತೆ ಇರುವವರಿಗೆ ಅಧಿಕಾರ ಕೊಡುತ್ತಿಲ್ಲ ಅಂತಾ ಅರ್ಥವಾಗ್ತಿಲ್ಲ. ಹೈಕಮಾಂಡ್ ಅವರು ಏನು ನಿರ್ಧಾರ ಮಾಡ್ತಾರೆ ಅಂತಾ ನೋಡೋಣ ಎಂದು ಅಪ್ಪಾಜಿ ಹೇಳಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರಿಗೂ ಬೇಸರವಿದೆ. ಈ ಭಾಗದ ಜನರಿಗೂ ಬೇಸರವಾಗಿದೆ. ಮುಂದೆ ಯಾವ ತೀರ್ಮಾನಕ್ಕೆ ಹೈಕಮಾಂಡ್ ಬರುತ್ತೆ ಅಂತಾ ಕಾದು ನೋಡುವುದಾಗಿ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv