Tag: ಸೂರ್ಯ ವಸಿಷ್ಠ

  • ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

    ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

    ದಾಸ ಪುರಂದರ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ದೀಪಕ್ ಸುಬ್ರಮಣ್ಯ (Deepak Subramanya) ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಆಗಮಿಸಿದ್ದಾರೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರದ ಪ್ರಧಾನ ಪಾತ್ರವೊಂದರ ಮೂಲಕ ಮತ್ತೊಮ್ಮೆ ಹಿರಿತೆರೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿ, ತಾನು ಬಯಸಿದಂಥಾದ್ದೇ ಗುಣಲಕ್ಷಣಗಳನ್ನು ಹೊಂದಿರುವ ಪಾತ್ರ ಸಿಕ್ಕಿದ ಆತ್ಮತೃಪ್ತಿ ದೀಪಕ್ ರದ್ದು. ಧಾರಾರಾವಾಹಿಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ದೀಪಕ್ ಈಗೊಂದಷ್ಟು ಕಾಲದಿಂದ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆಯ್ಕೆಯ ವಿಚಾರದಲ್ಲೊಂದು ಗುಣಮಟ್ಟ ಕಾಯ್ದುಕೊಳ್ಳುವ ಗುಣ ಹೊಂದಿರೋ ದೀಪಕ್, ಅತ್ಯಂತ ಸಂತಸದಿಂದ ಒಪ್ಪಿಕೊಂಡಿರೋ ಚಿತ್ರ ಸಾರಾಂಶ.

    ಟ್ರೈಲರ್ ನಲ್ಲಿ ದೀಪಕ್ ಸುಬ್ರಮಣ್ಯ ಪಾತ್ರದ ಒಂದಷ್ಟು ಚಹರೆಗಳು ತೆರೆದುಕೊಂಡಿವೆ. ಅದರ ಬಗ್ಗೆ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಖುದ್ದು ದೀಪಕ್ ಹಂಚಿಕೊಂಡಿದ್ದಾರೆ. ಈ ಹಿಂದೆ ಅನೇಕ ಕಿರುಚಿತ್ರಗಳ ಮೂಲಕ ದೀಪಕ್ ಅವರಿಗೆ ಸೂರ್ಯ ವಸಿಷ್ಠರ (Surya Vasistha) ಪರಿಚಯವಾಗಿತ್ತು. ಆ ಸಂದರ್ಭದಲ್ಲಿಯೇ ಸೂರ್ಯರ ನಿರ್ದೇಶನದ ಕಸುವು, ಕಥನಕ್ಕೆ ದೃಷ್ಯರೂಪ ನೀಡುವ ಚಾಕಚಕ್ಯತೆ ದೀಪಕ್ ಗೆ ಹಿಡಿಸಿತ್ತು. ಆ ಕಾರಣದಿಂದಲೇ ಸೂರ್ಯ ಕಥೆ ಹೇಳಿ, ತನ್ನ ಪಾತ್ರದ ಬಗ್ಗೆ ವಿವರಿಸಿದಾಕ್ಷಣ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಅದರ ಫಲವಾಗಿಯೇ ದೀಪಕ್ ಸಾರಾಂಶ ಚಿತ್ರದಲ್ಲಿ ತೇಜಸ್ವಿ ಪಂಡಿತ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ದೀಪಕ್ ಹಂಚಿಕೊಂಡಿರುವ ಒಂದಷ್ಟು ವಿಚಾರಗಳನ್ವಯ ಹೇಳೋದಾದರೆ, ಈ ಪಾತ್ರ ನಿಜಕ್ಕೂ ವಿಶೇಷವಾಗಿದೆ. ಅದು ಸಿಎ ಪ್ರೊಫೆಷನ್ನಿನ ಪಾತ್ರ. ಜನರ ನಡುವಿದ್ದರೂ ಅಂತರ್ಮುಖಿ ಗುಣ ಹೊಂದಿರುವ ಪಾತ್ರವದು. ಸಾಮಾನ್ಯವಾಗಿ ತಮ್ಮ ಅಸಲೀ ಗುಣಕ್ಕೆ ವಿರುದ್ಧವಾದ ಪಾತ್ರಗಳನ್ನು ನಿರ್ವಹಿಕಸೋದೆಂದರೆ ಕಲಾವಿದರಾದವರಿಗೆ ಥ್ರಿಲ್ ಆಗುತ್ತೆ. ಅದಕ್ಕಾಗಿ ತಯಾರಿ ನಡೆಸೋದೇ ಒಂದು ಅನೂಹ್ಯ ಅನುಭವ. ಅಂಥಾದ್ದನ್ನೆಲ್ಲ ದೀಪಕ್ ಸುಬ್ರಮಣ್ಯ ಅಕ್ಷರಶಃ ಸಂಭ್ರಮಿಸಿದ್ದಾರೆ. ಮೂಲತಃ ಮಾತಿನ ಮಲ್ಲನಂಥಾ ಗುಣ ಹೊಂದಿರೋ ದೀಪಕ್ ಪಾಲಿಗೆ ಅಂತರ್ಮುಖಿ ವರ್ತನೆ ಅಪರಿಚಿತ. ಅದನ್ನು ಆವಾಹಿಸಿಕೊಳ್ಳಲು ಬಹಳಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಇನ್ನುಳಿದಂತೆ ಸಿಎ ಅನ್ನೋದು ಕೂತು ಮಾಡೋ ಕೆಲಸವಾದ್ದರಿಂದ ಅದಕ್ಕೆ ದೈಹಿಕವಾಗಿಯೂ ರೂಪಾಂತರವಾಗಬೇಕಿತ್ತು. ಅದಕ್ಕಾಗಿ ದೈಹಿಕ ಕಸರತ್ತು ನಡೆಸಿದ್ದ ದೀಪಕ್, ಅತ್ಯಂತ ಕಡಿಮೆ ಅವಧಿಯಲ್ಲಿ ಇಪ್ಪತ್ಮೂರು ಕೇಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದರಂತೆ.

     

    ಇದಲ್ಲದೇ ಸಿಎಗಳ ಬಾಡಿ ಲ್ಯಾಗ್ವೇಜ್ ಮತ್ತು ವರ್ತನೆಗಳನ್ನೂ ಅಭ್ಯಸಿಸಿಕೊಂಡು ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿ ದೀಪಕ್ ಅವರಲ್ಲಿದೆ. ನಮ್ಮೊಳಗೆ ಆಗಾಗ ಊಟೆಯೊಡೆಯುತ್ತಾ, ಹೇಳಿಕೊಳ್ಳಲಾಗದ ಭಾವ ಸ್ಫರಿಸೋ ತಾಕಲಾಟಗಳನ್ನಿಲ್ಲಿ ಸೂರ್ಯ ವಸಿಷ್ಠ ಪಾತ್ರಗಳ ಮೂಲಕ ಮಾತಾಗಿಸಿದ್ದಾರಂತೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ, ತಮ್ಮದೇ ಅನ್ನಿಸುವ ಅದೆಷ್ಟೋ ವಿಚಾರಗಳು ಸಾರಾಂಶದಲ್ಲಿವೆ ಎಂಬುದು ದೀಪಕ್ ಭರವಸೆ. ಬ್ರಿಡ್ಜ್ ಮೂವಿ ಅಂತ ಕರೆಸಿಕೊಳ್ಳುವ ಲಕ್ಷಣ ಹೊಂದಿರುವ ಸಾರಾಂಶ ಬದುಕಿನ ಸೂಕ್ಷ್ಮ ಸಾರಗಳನ್ನು ಹಿಡಿದಿಟ್ಟುಕೊಂಡಿರುವ ಸಿನಿಮಾ. ಇಂಥಾ ಹೊಸತನಗಳನ್ನು ಒಳಗೊಂಡಿರುವ ಸಾರಾಂಶ ಎಲ್ಲ ವರ್ಗದ ಪ್ರೇಕ್ಷಕರಿಗೂ ಖಂಡಿತಾ ಹಿಡಿಸಲಿದೆ ಎಂಬ ಗಾಢ ನಂಬಿಕೆ ದೀಪಕ್ ಸುಬ್ರಮಣ್ಯರದ್ದು

  • ‘ಸಾರಾಂಶ’ದ ಪಾತ್ರದಲ್ಲಿ ತನ್ನೊಳಗೆ ತಾನೇ ಆವರಿಸಿಕೊಂಡ ನಟಿ ಶ್ರುತಿ

    ‘ಸಾರಾಂಶ’ದ ಪಾತ್ರದಲ್ಲಿ ತನ್ನೊಳಗೆ ತಾನೇ ಆವರಿಸಿಕೊಂಡ ನಟಿ ಶ್ರುತಿ

    ಯಾವುದೇ ನಟ ನಟಿಯರಾದರೂ ಒಮ್ಮೆ ಕಮರ್ಶಿಯಲ್ ಸಿನಿಮಾಗಳ ಮೂಲಕ ಗೆದ್ದರೆ ಮತ್ತೆ ಆಚೀಚೆ ಹೊರಳಿ ನೋಡುವುದೇ ಅಪರೂಪ. ಆದರೆ, ಇಂಥವರ ನಡುವೆ ಕೆಲವರು ಮಾತ್ರವೇ ಅಪ್ಪಟ ಕಲಾವಿದರಾಗಿ, ಸದಾ ಹೊಸತಿನೆಡೆಗೆ ಹಾತೊರೆಯುತ್ತಾರೆ. ಹೊಸ ಬಗೆಯ ಪಾತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಇಂಥಾ ವಿರಳ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುವ ಎಲ್ಲ ಗುಣಲಕ್ಷಣಗಳನ್ನೂ ಹೊಂದಿರುವವರು ಶ್ರುತಿ ಹರಿಹರನ್ (Shruthi Hariharan). ಸಾಂಸಾರಿಕ ಜೀವ, ಮಡಿಲು ತುಂಬಿದ ಮಗುವಿನ ಜವಾಬ್ದಾರಿಗಳಲ್ಲಿ ಲೀನರಾಗಿದ್ದ ಶೃತಿ ಹರಿಹರನ್ ಇದೀಗ ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರದ ಮೂಲಕ ಪ್ರೇಕ್ಷಕರನ್ನು ಸಂಧಿಸುವ ಖುಷಿಯಲ್ಲಿದ್ದಾರೆ.

    ಯಾವುದೇ ಸಿನಿಮಾವಾದರೂ, ಕಲಾವಿದರಿಗೆ ಪಾತ್ರವೊಂದು ಒಲಿದು ಬರುವುದರ ಹಿಂದೆ ಒಂದಷ್ಟು ಅಚ್ಚರಿಗಳಿರುತ್ತವೆ. ಅಂಥಾ ವಿಚಾರಗಳು ಸಾರಾಂಶದಲ್ಲಿಯೂ ಖಂಡಿತಾ ಇದ್ದಾವೆ. ಸೂರ್ಯ ವಸಿಷ್ಠ ಈ ಸಿನಿಮಾ ನಿರ್ದೇಶನಕ್ಕೆ ತಯಾರಿ ಶುರು ಮಾಡಿದ್ದು ಒಂದಷ್ಟು ವರ್ಷಗಳ ಹಿಂದೆ. ಆ ಕಾಲದಲ್ಲಿಯೇ ಅದೊಂದು ಪಾತ್ರಕ್ಕೆ ಸೂರ್ಯ ಆಯ್ಕೆ ಮಾಡಿದ್ದದ್ದು ಶೃತಿ ಹರಿಹರನ್ ಅವರನ್ನು. ಹಾಗೆ ಇಂಥಾದ್ದೊಂದು ಅವಕಾಶ ತಮ್ಮ ಮುಂದೆ ಬಂದಾಗ ಆರಂಭಿಕವಾಗಿಯೇ ಶೃತಿ ಥ್ರಿಲ್ ಆಗಿದ್ದರಂತೆ. ಸಾಮಾನ್ಯವಾಗಿ, ಯಾರೇ ನಟ ನಟಿಯರಾದರೂ ಕೆಲವೊಂದಿಷ್ಟು ಪಾತ್ರಗಳನ್ನು ಧ್ಯಾನಿಸುತ್ತಾರೆ. ಅಂಥಾದ್ದೇ ಪಾತ್ರ ಅಚಾನಕ್ಕಾಗಿ ಎದುರಾದಾಗ ಪುಳಕವೊಂದು ತಂತಾನೇ ಆವರಿಸಿಕೊಳ್ಳುತ್ತೆ. ಸಾರಾಂಶದ ಕಥೆ ಕೇಳಿ ಶೃತಿ ಹರಿಹರನ್ ಅವರನ್ನು ಆವರಿಸಿಕೊಂಡಿದ್ದು ಅಕ್ಷರಶಃ ಅಂಥಾದ್ದೇ ಭಾವ.

    ಕಥೆಗಾರನೊಬ್ಬನ ಜಗತ್ತಿನ ಸುತ್ತ ಕದಲುವ ಈ ಕಥಾನಕ ಕನ್ನಡದಲ್ಲಿ ಮಾತ್ರವಲ್ಲದೇ, ಮತ್ಯಾವ ಭಾಷೆಯಲ್ಲೂ ನೋಡಿಲ್ಲ ಎಂಬುದು ಶೃತಿ ಅಭಿಪ್ರಾಯ. ಮಕ್ಕಳಾದಿಯಾಗಿ ಎಲ್ಲರನ್ನೂ ಕಾಡುವ ಗುಣ ಹೊಂದಿರುವ ಈ ಸಿನಿಮಾವನ್ನು ಸೂರ್ಯ ವಸಿಷ್ಠ ಅಮೋಘವಾಗಿ ರೂಪಿಸಿದ್ದಾರೆಂಬ ಮೆಚ್ಚುಗೆಯೂ ಶ್ರುತಿ ಅವರಲ್ಲಿದೆ. ಅದೇ ಭಾವನೆ ನೋಡಿದ ಪ್ರತಿಯೊಬ್ಬರಲ್ಲಿಯೂ ಪ್ರವಹಿಸುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಅಂದಹಾಗೆ, ಶೃತಿ ಹರಿಹರನ್ ಗಿಲ್ಲಿ ಕಲಾವಿದೆಯ ಪಾತ್ರ ಸಿಕ್ಕಿದೆ. ಮಾಯಾ ಎಂಬ ಹೆಸರಿನ ಆ ಪಾತ್ರವನ್ನು ಆವಾಹಿಸಿಕೊಳ್ಳಲು ಒಂದಷ್ಟು ತಯಾರಿಯನ್ನ ಮಾಡಿಕೊಂಡೇ ಅದಕ್ಕೆ ಜೀವ ತುಂಬಿದ್ದಾರೆ.

    ಮೇಕಪ್ ನ ಗೊಡವೆಯಿಲ್ಲದೆ, ಅತ್ಯಂತ ಸಹಜವಾಗಿ ಆ ಪಾತ್ರಕ್ಕೆ ಜೀವ ತುಂಬಿದ ಖುಷಿ ಶೃತಿಗಿದೆ. ಈ ಸಿನಿಮಾ ವಿಶೇಷತೆಗಳಾಚೆಗೆ, ಇಂಥಾದ್ದೊಂದು ತಂಡದೊಂದಿಗೆ ಕಾರ್ಯನಿರ್ವಹಿಸಿದ ಖುಷಿಯೂ ಶೃತಿತಿಗಿದೆ. ಯಾಕೆಂದರೆ, ಲೂಸಿಯಾ ಕಾಲದ ಒಂದಷ್ಟು ತಂತುಗಳು ಸಾರಾಂಶದ ಭೂಮಿಕೆಯಲ್ಲವರನ್ನು ಸಂಧಿಸಿವೆ. ಈ ಸಿನಿಮಾದ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಈ ಹಿಂದೆ ಲೂಸಿಯಾ ತಂಡದ ಭಾಗವಾಗಿದ್ದರು. ಅವರು ಸಾರಾಂಶದಲ್ಲಿಯೂ ಮತ್ತೆ ಸಿಕ್ಕಿದ್ದಾರೆ. ಇಡೀ ತಂಡದ ಉತ್ಸಾಹ, ಪ್ರತಿಭೆ, ಸಿನಿಮಾ ಧ್ಯಾನದ ನಡುವೆ ಕಳೆದು ಹೋದದ್ದೊಂದು ವಿಶಿಷ್ಟ ಅನುಭವ ಎಂಬುದು ಶೃತಿ ಅಭಿಪ್ರಾಯ.

     

    ಸದಾ ಹೊಸತಿನತ್ತ ಹಾತೊರೆಯುವ ಶೃತಿ ಹರಿಹರನ್ ಪಾಲಿಗೆ ಸಾರಾಂಶದಲ್ಲಿ ಅಂಥಾದ್ದೇ ಪಾತ್ರ ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡಿನಲ್ಲಿ ಅವರ ಪಾತ್ರದ ಝಲಕ್ಕುಗಳು ಕಾಣಿಸಿಕೊಂಡಿವೆ. ಅದನ್ನು ನೋಡುಗರೂ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ (Deepak Subramanya), ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕನ ಆಗಮನವೂ ಆಗುತ್ತಿದೆ. ಈ ಚಿತ್ರದ ಒಟ್ಟಾರೆ ಆಕರ್ಷಣೆಗಳಲ್ಲಿ ಛಾಯಾಗ್ರಹಣವೂ ಒಂದಾಗಿ ಸೇರಿಕೊಂಡಿದೆ.

  • ನಿರ್ದೇಶಕ ಸೂರ್ಯ ವಸಿಷ್ಠ ಸಾರಥ್ಯದ ‘ಸಾರಾಂಶ’ದಲ್ಲಿದೆ ವಿಶಿಷ್ಟ ಕಥನ

    ನಿರ್ದೇಶಕ ಸೂರ್ಯ ವಸಿಷ್ಠ ಸಾರಥ್ಯದ ‘ಸಾರಾಂಶ’ದಲ್ಲಿದೆ ವಿಶಿಷ್ಟ ಕಥನ

    ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. ಈಗಾಗಲೇ ಸಿನಿಮಾ, ಧಾರಾವಾಹಿಗಳಲ್ಲಿ ನಟನಾಗಿ ಪರಿಚಿತರಾಗಿರುವ ಸೂರ್ಯ ವಸಿಷ್ಠ (Surya Vasishta) ಸಾರಾಂಶದ ಮೂಲಕ ನಿರ್ದೇಶಕನಾಗಿ ಆಗಮಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಗೊಂಡಿರುವ ಟ್ರೈಲರ್ ನಲ್ಲಿಯೇ ಕಥೆಯ ವಿಶೇಷತೆ, ಅದಕ್ಕೆ ಹೊಸೆದುಕೊಂಡಿರುವ ಭಾವತೀವ್ರತೆ ಸೇರಿದಂತೆ ಎಲ್ಲವೂ ಹೊಸತನದೊಂದಿಗೆ ಪ್ರೇಕ್ಷಕರನ್ನು ಮುಟ್ಟಿವೆ. ಇದೊಂದು ಬೇರೆಯದ್ದೇ ತೆರನಾದ ಕಥನವಿರಬಹುದೆಂಬ ನಿಖರ ಅಂದಾಜು ನೋಡುಗರಿಗೆ ಸಿಕ್ಕಿದೆ. ಈ ಹಂತದಲ್ಲಿ ಇಂಥಾದ್ದೊಂದು ಕಥೆ ಹುಟ್ಟಿದ ಬಗೆ ಹಾಗೂ ಅದರ ಆಸುಪಾಸಿನ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಸೂರ್ಯ ಹಂಚಿಕೊಂಡಿದ್ದಾರೆ.

    2008ರ ಸುಮಾರಿಗೆ ಜೋಗುಳ ಧಾರಾವಾಹಿಯ ಮೂಲಕ ನಟನಾಗಿ ವೃತ್ತಿ ಬದುಕು ಆರಂಭಿಸಿದ್ದವರು ಸೂರ್ಯ ವಸಿಷ್ಠ. ಓರ್ವ ನಟನಾಗಿ ಹಲವು ಹಂತಗಳನ್ನು ದಾಟಿ ಬಂದಿರುವ ಸೂರ್ಯ ಕಿರುತೆರೆ ಪ್ರೇಕ್ಷಕರು ಸದಾ ನೆನಪಲ್ಲಿಟ್ಟುಕೊಳ್ಳುವಂಥಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಭಾರೀ ಜನಪ್ರಿಯತೆ ಪಡೆದಿದ್ದ `ಸಾಯಿಬಾಬಾ’ ಧಾರಾವಾಹಿಯಲ್ಲಿ ಸಾಯಿಬಾಬಾ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದವರು ಸೂರ್ಯ ವಸಿಷ್ಠ. ಆ ಪಾತ್ರವನ್ನು ಈವತ್ತಿಗೂ ಜನ ನೆನಪಲ್ಲಿಟ್ಟುಕೊಂಡಿದ್ದಾರೆ. ಹೀಗೆ ನಟನಾಗಿ ನೆಲೆ ಕಂಡುಕೊಳ್ಳುವ ಇರಾದೆ, ಛಾತಿ ಇದ್ದರೂ ಕೂಡಾ ಸಿನಿಮಾದ ಒಳ ಹೊರಗಿನ ಬಗ್ಗೆ ಅತೀವ ಆಸಕ್ತಿ ಇದ್ದುದರಿಂದ ನಿರ್ದೇಶನ ವಿಭಾಗ ಅವರನ್ನು ತೀವ್ರವಾಗಿ ಆಕರ್ಷಿಸಿತ್ತು. ಇದರ ಭಾಗವಾಗಿಯೇ `ತಮಸ್ಸು’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರಂತೆ. ಹಾಗೆ ತಮಸ್ಸು ಚಿತ್ರದ ಭಾಗವಾಗಿ, ಅದರ ಕಾಸ್ಟಿಂಗ್ ಕಾರ್ಯ ನಡೆಯುತ್ತಿದ್ದ ಘಳಿಗೆಯಲ್ಲಿಯೇ ಸೂರ್ಯ ವಸಿಷ್ಠರೊಳಗೆ ಹಲವು ಭಾವಗಳ ಗುಂಗೀಹುಳ ಮಾರ್ಧನಿಸಲಾರಂಭಿಸಿತ್ತು. ಕಥೆ ಮತ್ತು ಪಾತ್ರಗಳು ಅವರೊಳಗೆ ಮುಖಾಮುಖಿಯಾಗಿ ಹೊಸಾ ಸಂಘರ್ಷವನ್ನೇ ಹುಟ್ಟುಹಾಕಿ ಬಿಟ್ಟಿದ್ದವು.

    ಅದರ ಬಗ್ಗೆ ಆಳವಾಗಿ ಆಲೋಚಿಸಿದಾಗ ಕಥೆಗಾರನಿಂದ ಪಾತ್ರವೋ, ಪಾತ್ರದಿಂದ ಕಥೆಗಾರನೋ ಎಂಬಂಥಾ ಸೂಕ್ಷ್ಮ ಎಳೆಯೊಂದು ಆವಿರ್ಭವಿಸಿತ್ತು. ಅದರ ಗುಂಗು ಹತ್ತಿಸಿಕೊಂಡು, ವರ್ಷಾಂತರಗಳ ಕಾಲ ಪ್ರಯತ್ನಿಸಿದ ಫಲವಾಗಿಯೇ `ಸಾರಾಂಶ’ ಕಥೆ ಸಿದ್ಧಗೊಂಡಿತ್ತಂತೆ. ಅದಾದ ನಂತರ ಲೂಸಿಯಾ, ಯೂ ಟರ್ನ್, ಗಂಟುಮೂಟೆ ಮುಂತಾದ ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ್ದರೂ ಸಾರಾಂಶ ಕಥೆ ಮಾತ್ರ ಕಾಡುತ್ತಲೇ ಇತ್ತು. ಈ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಾಗ ಅವರ ಮನಸಲ್ಲಿದ್ದದ್ದು ಬೇರೆಯವರಿಂದ ಈ ಕಥೆಯನ್ನು ನಿರ್ದೇಶನ ಮಾಡಿಸಬೇಕೆಂಬ ಯೋಚನೆ. ಆದರೆ, ಬೇರೆ ಯಾರೇ ನಿರ್ದೇಶನ ಮಾಡಿದರೂ ಅದರ ಸೂಕ್ಷ್ಮ ಎಳೆಗಳನ್ನು ದೃಷ್ಯಕ್ಕೆ ಅಳವಡಿಸೋದು ಕಷ್ಟ, ನೀವೇ ಮಾಡಿದರೆ ಚೆನ್ನ ಎಂಬ ನಿಖರ ಅಭಿಪ್ರಾಯ ಸ್ನೇಹಿತರ ಕಡೆಯಿಂದ ಬಂದಿತ್ತಂತೆ.

    ಇಂಥಾದ್ದೊಂದು ಸಲಹೆ ಬಂದಾಗ ನಿರ್ದೇಶನ ಮಾಡಲು ಅರ್ಹನಾ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿದ್ದ ಸೂರ್ಯ, ಆ ನಂತರ ಅದಕ್ಕಾಗಿ ಬೇಕಾದ ಸರ್ವ ತಾಲೀಮುಗಳನ್ನೂ ನಡೆಸಿದ ನಂತರವಷ್ಟೇ ನಿರ್ದೇಶನದ ಅಖಾಡಕ್ಕಿಳಿದಿದ್ದರು. ಈ ಮೂಲಕ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡು, ನಟನಾಗೋ ದಾರಿ ಆಯ್ದುಕೊಂಡಿದ್ದ ಸೂರ್ಯ ವಸಿಷ್ಠ, ಅಚಾನಕ್ಕಾಗಿ ನಿರ್ದೇಶಕನ ಅವತಾರವೆತ್ತಿದ್ದರು. ಅವರ ಪ್ರತಿಭೆ, ಕಸುಬುದಾರಿಕೆಯ ಮೇಲೆ ನಂಬಿಕೆಯಿಟ್ಟೇ ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರುಗಳು ಸಾರಾಂಶ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಇದೀಗ ಅತ್ಯಂತ ಅಚ್ಚುಕಟ್ಟಾಗಿ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆ ನಿರ್ಮಾಪಕರಲ್ಲಿದೆ.

     

    ಆ ಮೆಚ್ಚುಗೆ ಟ್ರೈಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಪ್ರೇಕ್ಷಕರ ವಲಯಕ್ಕೂ ಕೂಡಾ ಹಬ್ಬಿಕೊಂಡಿದೆ. ಇನ್ನೇನು ಸಾರಾಂಶ ಬಿಡುಗಡೆಯ ದಿನಗಳೂ ಹತ್ತಿರಾಗುತ್ತಿವೆ. ಇದರ ಬಹುಮುಖ್ಯ ಪಾತ್ರವೊಂದನ್ನು ಖುದ್ದು ಸೂರ್ಯ ವಸಿಷ್ಠ ಅವರೇ ನಿಭಾಯಿಸಿದ್ದಾರೆ. ಇವರೊಂದಿಗೆ ದೀಪಕ್ ಸುಬ್ರಮಣ್ಯ, ಶ್ರುತಿ ಹರಿಹರನ್, ಶ್ವೇತಾ ಗುಪ್ತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪೆÇ್ರಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ್ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.

  • ತೀರದಾಚೆ ತೆರೆದುಕೊಂಡ ‘ಸಾರಾಂಶ’ದ ಲಿರಿಕಲ್ ವೀಡಿಯೋ

    ತೀರದಾಚೆ ತೆರೆದುಕೊಂಡ ‘ಸಾರಾಂಶ’ದ ಲಿರಿಕಲ್ ವೀಡಿಯೋ

    ತೀರಾ ಅಪರೂಪವೆಂಬಂಥಾ ಭಾವವೊಂದನ್ನು ಕೇಳುಗರೆಲ್ಲರಲ್ಲಿ ಮೂಡಿಸುವ ನಿಟ್ಟಿನಲ್ಲಿ `ಸಾರಾಂಶ’ (Saramsha) ಚಿತ್ರದ ಹಾಡುಗಳು ಈಗಾಗಲೇ ಗೆದ್ದಿವೆ. ಇಂಥಾ ಹಾಡಿನ ಮೂಲಕವೇ ಒಂದಿಡೀ ಸಿನಿಮಾದ ಆಂತರ್ಯದ ಬಗ್ಗೆ ಕುತೂಹಲವೂ ಮೂಡಿಕೊಂಡಿದೆ. ಮೆಲುವಾಗಿ ತೇಲಿ ಬಂದು ನಾನಾ ಭಾವನೆಗಳನ್ನು ಮೊಗೆದು ತಂದು ಮನಸಿಗೆ ತುಂಬುವ ಶೈಲಿಯಲ್ಲಿ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಅಕ್ಷರಶಃ ಮೋಡಿ ಮಾಡಿದ್ದಾರೆ. ಇದೀಗ ನಿರ್ದೇಶಕ ಸೂರ್ಯ ವಸಿಷ್ಠ ಹಾಗೂ ಉದಿತ್ ಸಹಯೋಗದ ಮತ್ತೊಂದು ಮೆಲೋಡಿಯಸ್ ಹಾಡು ಬಿಡುಗಡೆಗೊಂಡಿದೆ.

    ತೀರದಾಚೆಗೆ (Theeradache) ಹಾರಿ ಹೋಗುವಾಸೆ ಅಂತ ಶುರುವಾಗುವ ಈ ಹಾಡು ಸಾಹಿತ್ಯ ಸಂಗೀತದ ಹದವಾದ ಸಂಯೋಗದೊಂದಿಗೆ ಹೊಸಾ ಅನುಭೂತಿಯೊಂದನ್ನು ಪಸರಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಸೂರ್ಯ ವಸಿಷ್ಠ ಬರೆದಿರುವ ಸಾಹಿತ್ಯಕ್ಕೆ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಇದೀಗ ಸಾರಾಂಶ ಚಿತ್ರದ ಕಥೆ ಏನೆಂಬುದರ ಸುತ್ತ ಪ್ರೇಕ್ಷಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಅಲ್ಲೊಂದು ಚೆಂದದ ಪ್ರೇಮ ಕಥೆಯೂ ಇದೆ ಎಂಬುದರ ಸ್ಪಷ್ಟ ಸೂಚನೆ ಈ ಹಾಡಿನ ಮೂಲಕ ಸಿಕ್ಕಿದೆ.

    ಇದುವರೆಗೂ ಧಾರಾವಾಹಿ, ಸಿನಿಮಾಗಳ ಮೂಲಕ ನಟರಾಗಿದ್ದ ಸೂರ್ಯ ವಸಿಷ್ಠ `ಸಾರಾಂಶ’ದ ಮೂಲಕ ನಿರ್ದೇಶಕರಾಗಿರೋದು ಗೊತ್ತೇ ಇದೆ. ಆ ಪಾತ್ರದ ಬಗೆಗಿನ ಒಂದಷ್ಟು ಮಾಹಿತಿಗಳನ್ನೂ ಚಿತ್ರತಂಡ ಹಂಚಿಕೊಂಡಿದೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ಸೂರ್ಯ ನಿಭಾಯಿಸಿರುವ ಪಾತ್ರದ ಚಹರೆಗಳು ನಿಚ್ಛಳವಾಗಿ ಕಾಣಿಸಿವೆ. ಸೂರ್ಯ ವಸಿಷ್ಠ ಹಾಗೂ ಶೃತಿ ಹರಿಹರನ್ (Sruthi Hariharan ಕಾಂಬಿನೇಷನ್ನಿನ ಸದರಿ ಹಾಡು ಸಾರಾಂಶದ ದೃಷ್ಯಗಳ ಅಸಲೀ ಮೋಡಿಯ ಪರಿಚಯವನ್ನೂ ಮಾಡಿಸಿದೆ.

     

    ಹೀಗೆ ಹಾಡುಗಳೂ ಸೇರಿದಂತೆ ನಾನಾ ಬಗೆಯಲ್ಲಿ ಸುದ್ದಿಯಲ್ಲಿರುವ ಸಾರಾಂಶ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.

  • ಭಿನ್ನ ಪ್ರಯತ್ನದ ‘ಸಾರಾಂಶ’ ಪಥ: ನಿರ್ಮಾಪಕ ರವಿ ಕಶ್ಯಪ್ ಕಂಡ ಕನಸು

    ಭಿನ್ನ ಪ್ರಯತ್ನದ ‘ಸಾರಾಂಶ’ ಪಥ: ನಿರ್ಮಾಪಕ ರವಿ ಕಶ್ಯಪ್ ಕಂಡ ಕನಸು

    ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಾರಾಂಶ’ (Saramsha) ಚಿತ್ರ ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದೆ. ಇದುವರೆಗೂ ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಸಾಗಿ ಬಂದಿರುವ ಈ ಸಿನಿಮಾ ಭಿನ್ನ ಜಾಡಿನದ್ದೆಂಬುದು ಈಗಾಗಲೇ ಋಜುವಾತಾಗಿ ಬಿಟ್ಟಿದೆ. ಚಿತ್ರರಂಗದ ಜೀವಂತಿಕೆಯ ದೃಷ್ಟಿಯಿಂದ ಸಾರಾಂಶದಂಥಾ ಸೂಕ್ಷ್ಮ ಕಥಾನಕಗಳು ಆಗಾಗ ದೃಷ್ಯರೂಪ ಧರಿಸಿ ಗೆಲ್ಲುತ್ತಿರಬೇಕು. ಆದರೆ, ಸದಾ ಕಾಲವೂ ಕಮರ್ಶಿಯಲ್ ಹಾದಿಯಲ್ಲಿ ಹೆಜ್ಜೆಯೂರುತ್ತಾ, ಅದರ ಆಚೀಚೆ ದೃಷ್ಟಿ ಹರಿಸೋ ಔಚಿತ್ಯ ಹೊಂದಿರೋ ನಿರ್ಮಾಪಕರ ಸಂಖ್ಯೆ ತೀರಾ ವಿರಳ. ಸಹನೀಯ ಸಂಗತಿಯೆಂದರೆ, ಅಂಥವರ ಸಂತೆಯಲ್ಲೂ ಸದಭಿರುಚಿಯ ಕಥನಗಳಿಗೆ ಕಣ್ಣಾಗುತ್ತಾ, ಹೊಸಬರ ಬೆನ್ತಟ್ಟಿ ಪ್ರೋತ್ಸಾಹಿಸೋ ಗುಣದ ನಿರ್ಮಾಪಕರಿದ್ದಾರೆ; ಅದಕ್ಕೆ ತಾಜಾ ಉದಾಹರಣೆಯಂತಿರುವವರು ಸಾರಾಂಶ ಚಿತ್ರದ ನಿರ್ಮಾಪಕ ರವಿ ಕಶ್ಯಪ್ (Ravi Kashyap) ಮತ್ತು ಅವರೊಂದಿಗೆ ಕೈ ಜೋಡಿಸಿರುವ ಆರ್.ಕೆ ನಲ್ಲಮ್.

    ಸೂರ್ಯ ವಸಿಷ್ಠ ಕನಸಿನ ಕೂಸಿನಂಥಾ `ಸಾರಾಂಶ’ ಚಿತ್ರದ ಪ್ರಧಾನ ನಿರ್ಮಾಪಕ ರವಿ ಕಶ್ಯಪ್ ಕನ್ನಡ ಚಿತ್ರಪ್ರೇಮಿಗಳ ಪಾಲಿಗೆ ಪರಿಚಿತರು. ಲೂಸಿಯಾ ಕಾಲದಿಂದಲೂ ನಿರ್ಮಾಪಕನಾಗಿ ತನ್ನದು ಭಿನ್ನ ಪಥ ಎಂಬುದನ್ನು ಸಾಬೀತು ಪಡಿಸಿದ್ದವರು ರವಿ ಕಶ್ಯಪ್. ಕಥೆಯೊಂದರ ಒಳ ಹೂರಣವನ್ನು ಒಂದೇ ಸಲಕ್ಕೆ ಗ್ರಹಿಸುವ, ಕಥೆಯೊಂದು ದೃಷ್ಯರೂಪ ಧರಿಸಿದಾಗ ಅದರ ಪರಿಣಾಮ ಹೇಗಿದ್ದೀತೆಂದು ನಿಖರವಾಗಿ ಅಂದಾಜಿಸಬಲ್ಲ ಗುಣ ಹೊಂದಿರುವ ರವಿ ಕಶ್ಯಪ್ ಅವರಿಗೆ ಹೊಸಬರೆಂದರೆ ತುಸು ಹೆಚ್ಚೇ ಪ್ರೀತಿ. ತಾಜಾ ಹರಿವೆಂಬುದು ಅಂಥಾ ಹೊಸಬರಿಂದಲೇ ಹುಟ್ಟಲು ಸಾಧ್ಯ ಎಂಬ ಗಾಢ ನಂಬಿಕೆ ಅದಕ್ಕೆ ಕಾರಣ.

    ಸಾರಾಂಶ ಕಥೆಯನ್ನು ಸೂರ್ಯ ವಸಿಷ್ಠ ಮೊದಲು ಹೇಳಿದಾಗಲೇ ರವಿ ಕಶ್ಯಪ್ ಪಾಲಿಗದು ಹಿಡಿಸಿತ್ತಂತೆ. ಆ ಕ್ಷಣವೇ ಅದರ ಭಾವನಾತ್ಮಕ ಸಂಗತಿಗಳಿಗೆ ಕನೆಕ್ಟಾಗಿದ್ದ ರವಿ ತಾವೇ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಆಗ ಅವರಿಗೆ ನಿರ್ಮಾಣದಲ್ಲಿ ಸಾಥ್ ಕೊಟ್ಟವರು ಆರ್.ಕೆ ನಲ್ಲಮ್. ಒಟ್ಟಾರೆ ಕಥಾ ಹಂದರ ಕೇಳಿದ ನಲ್ಲಮ್ ಕೂಡಾ ಚಕಿತಗೊಂಡು ಒಪ್ಪಿಗೆ ಸೂಚಿಸಿದ್ದರು. ರವಿ ಕಶ್ಯಪ್ ಅವರಂತೆಯೇ ಸದಭಿರುಚಿ ಹೊಂದಿರುವ ಆರ್.ಕೆ ನಲ್ಲಮ್ ಕೂಡಾ ಹೊಸಾ ಪ್ರಯತ್ನಗಳಿಗೆ ಬೆನ್ತಟ್ಟಿ ಪ್ರೋತ್ಸಾಹಿಸುವ ಗುಣ ಹೊಂದಿರುವವರು. ಇವರಿಬ್ಬರೂ ಸೇರಿಕೊಂಡು ಯಾವುದಕ್ಕೂ ಒಂದಿನಿತೂ ಕೊರತೆಯಾಗದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಾತಿಗೆ ತಕ್ಕುದಾಗಿ ಈ ಸಿನಿಮಾವನ್ನು ಮಾಡಿ ಮುಗಿಸಿರುವ ಸೂರ್ಯ ವಸಿಷ್ಠ ಸಾರಥ್ಯದ ಚಿತ್ರತಂಡದ ಬಗ್ಗೆ ಈ ನಿರ್ಮಾಪಕದ್ವಯರಲ್ಲೊಂದು ಮೆಚ್ಚುಗೆ ಇದೆ.

    ರವಿ ಕಶ್ಯಪ್ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದ ಮುಖ್ಯ ನಿರ್ಮಾಪಕರುಗಳಲ್ಲಿ ಒಬ್ಬರಾಗಿದ್ದವರು. ಲೂಸಿಯಾ ಮೂಲಕ ಶ್ರುತಿ ಹರಿಹರನ್ ಹಾಗೂ ನೀನಾಸಂ ಸತೀಶ್ ಮುನ್ನೆಲೆಗೆ ಬಂದದ್ದರ ಹಿಂದೆಯೂ ರವಿ ಕಶ್ಯಪ್ ಇದ್ದಾರೆ. ಲೂಸಿಯಾ ಪವನ್ ಕುಮಾರ್ ರವರ ಎರಡನೇ ಚಿತ್ರವಾಗಿದ್ದರೂ ಆ ಸಮಯದಲ್ಲಿ ಅದೊಂದು ಹೊಸ ಪ್ರಯೋಗವೂ, ಪ್ರಯತ್ನವೂ ಆಗಿತ್ತು. ಆದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ಕೈ ಜೋಡಿಸಿದ್ದರು. ಇದಲ್ಲದೇ ಲೂಸಿಯಾ ಚಿತ್ರವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ವತಃ ರವಿ ವಿತರಿಸಿದ್ದರು. ಈ ಮೂಲಕ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸಿ, ಹೊಸಾ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡಿದ ಕೀರ್ತಿಯೂ ರವಿ ಕಶ್ಯಪ್ ಅವರಿಗೆ ಸಲ್ಲುತ್ತದೆ. ಹೊಸಬರು ತಮ್ಮ ಬಳಿ ಬಂದರೆ, ಅವರೊಳಗೆ ತಾಜಾತನ ಹೊಂದಿರೋ ಪ್ರಯೋಗಾತ್ಮಕ ಗುಣದ ಸರಕಿದ್ದರೆ ನಿರ್ಮಾಣಕ್ಕೆ ಮುಂದಾಗುವ ಮನಃಸ್ಥಿತಿ ರವಿ ಕಶ್ಯಪ್ ಅವರದ್ದು. ಅವರಿಗೆ ಸರಿಯಾದ ಜೋಡಿಯಂತೆ ಈಗೊಂದಷ್ಟು ಕಾಲದಿಂದ ಸಾಥ್ ಕೊಡುತ್ತಿರುವವರು ಆರ್.ಕೆ ನಲ್ಲಮ್. ರವಿ ಕಶ್ಯಪ್ ಈ ಹಿಂದೆ ಆಕಾಶ್ ಶ್ರೀವತ್ಸ ನಿರ್ದೇಶನದ ಬದ್ಮಾಶ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಆಕಾಶ್ ಹೊಸಾ ಹುಡುಗ. ಡಾಲಿ ಧನಂಜಯ್ ಕೂಡಾ ಹೆಚ್ಚೂಕಮ್ಮಿ ಹೊಸಬರೆ. ಆದರೂ ಅವರ ಮೇಲೆ ನಂಬಿಕೆಯಿಟ್ಟು ಹಣ ಹೂಡಿದ್ದರು. ಈ ಇಬ್ಬರು ಪ್ರತಿಭೆಗಳು ಬೆಳಕಿಗೆ ಬರಲು ಪ್ರೋತ್ಸಾಹ ನೀಡಿದ್ದರು. ಇದೀಗ ಆಕಾಶ್ ಶ್ರೀವತ್ಸ ರಮೇಶ್ ಅರವಿಂದ್ ನಾಯಕತ್ವದ `ದೈಜಿ’ ಎಂಬ ಚಿತ್ರಕ್ಕೆ ಕೈ ಹಾಕಿದ್ದಾರೆ. ರವಿ ಕಶ್ಯಪ್ ನಿರ್ಮಾಪಕರಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ ತಮ್ಮ ಸಿನಿಮಾಗಳು ಮಾತ್ರವಲ್ಲದೇ, ಬೇರೆ ನಿರ್ಮಾಪಕರಿಗೂ ಕೂಡಾ ಬೆಂಬಲವಾಗಿ ನಿಲ್ಲುವ ಗುಣವೂ ರವಿ ಕಶ್ಯಪ್ ಅವರಲ್ಲಿದೆ.

    ಈಗ್ಗೆ ಹದಿನೈದು ವರ್ಷಗಳಿಂದೀಚೆಗೆ ಅಮೆರಿಕಾದಲ್ಲಿ ಸಿನಿಮಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ರವಿ ಕಶ್ಯಪ್ ಪಾಲಿಗೆ ಕ್ರಿಯೇಟಿವ್ ಜಗತ್ತಿನ ಇಂಚಿಂಚೂ ಪರಿಚಿತ. ವಿದೇಶದಲ್ಲಿದ್ದರೂ ಕನ್ನಡ ಸಿನಿಮಾ ರಂಗದ ಮೇಲೆ ದೊಡ್ಡ ಕನಸಿಟ್ಟುಕೊಂಡಿರುವ ರವಿ ಕಶ್ಯಪ್ ಅವರಿಗೆ ಆರ್.ಕೆ ನಲ್ಲಮ್ ಕೂಡಾ ಜೊತೆಯಾಗಿ ಸಾಗುತ್ತಿದ್ದಾರೆ. ಜಾಲಿ ಹಿಟ್ಸ್ ಎಂಬ ಸಂಸ್ಥೆಯ ಕಡೆಯಿಂದ ಯು ಟರ್ನ್, ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ, ಕಿರಿಕ್ ಪಾರ್ಟಿ, ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ರಾಜಕುಮಾರ, ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆಯ ಕಥೆ ಮುಂತಾದ ಅನೇಕ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿತರಿಸಿ ಸೈ ಅನ್ನಿಸಿಕೊಂಡಿದ್ದಾರೆ. ಆರಂಭದಲ್ಲಿ ಸಾರಾಂಶ ಕಥೆ ಕೇಳಿದಾಗ ಅಂದುಕೊಂಡದ್ದಕ್ಕಿಂತ ಅಚ್ಚುಕಟ್ಟಾಗಿ ಒಂದಿಡೀ ಸಿನಿಮಾ ಮೂಡಿ ಬಂದಿದೆ ಎಂಬ ತೃಪ್ತಿ ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರಲ್ಲಿದೆ. ಪ್ರೇಕ್ಷಕರು ಕೊಂಚ ಪ್ರೀತಿ ತೋರಿಸಿದರೆ, ಸಾರಾಂಶದ ಪ್ರಭೆ ದೊಡ್ಡ ಮಟ್ಟಕ್ಕೆ ತಲುಪಿಕೊಳ್ಳಲಿದೆ ಎಂಬ ನಂಬಿಕೆಯೂ ಅವರಲ್ಲಿದೆ.

     

    ಸಾರಾಂಶದ್ದು ಎಲ್ಲರಿಗೂ ಇಷ್ಟವಾಗಬಲ್ಲ ಕಥೆ. ಅದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಪ್ರಭಾವಿಸಲಿದೆ ಎಂಬ ನಿರೀಕ್ಷೆಯೂ ರವಿ ಕಶ್ಯಪ್ ಅವರಲ್ಲಿದೆ. ಇನ್ನುಳಿದಂತೆ, ಸಂಗೀತ, ತಾಂತ್ರಿಕತೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಸಾರಾಂಶ ಕೊರತೆಯಿಲ್ಲದಂತೆ ರೂಪುಗೊಂಡಿದೆ. ಅದು ಮಾತ್ರವಲ್ಲದೇ, ನಟನೆಯ ವಿಚಾರದಲ್ಲಿಯೂ ಕೂಡಾ ನಿರ್ಮಾಪಕರಲ್ಲೊಂದು ಬೆರಗಿದೆ. ಸೂರ್ಯ ವಸಿಷ್ಠ ನಿರ್ದೇಶಕರಾಗಿ ಮಾತ್ರವಲ್ಲದೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರೂ ಸೇರಿದಂತೆ ಶ್ರುತಿ ಹರಿಹರನ್, ದೀಪಕ್ ಸುಬ್ರಮಣ್ಯ, ಶ್ವೇತಾ ಗುಪ್ತ ಮುಂತಾದ ಕಲಾವಿದರೆಲ್ಲ ಅತ್ಯಂತ ಸಹಜವಾಗಿ ನಟಿಸಿದ್ದಾರೆಂಬ ತುಂಬು ಮೆಚ್ಚುಗೆ ನಿರ್ಮಾಪಕರದ್ದು. ಇಂಥಾ ಅನಿಸಿಕೆಗಳೆಲ್ಲವು ಪ್ರೇಕ್ಷಕರನ್ನು ದಾಟಿಕೊಳ್ಳುವ ದಿನ ಹತ್ತಿರಾಗುತ್ತಿದೆ.

  • ‘ಸಾರಾಂಶ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ನಿರ್ದೇಶಕ ಹೇಮಂತ್ ರಾವ್

    ‘ಸಾರಾಂಶ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ನಿರ್ದೇಶಕ ಹೇಮಂತ್ ರಾವ್

    `ಸಾರಾಂಶ’ (Saramsha) ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆ ಮೂಲಕ ಸಿನಿಮಾ ಮೇಲೆ ಮೂಡಿಕೊಂಡಿದ್ದ ಕುತೂಹಲ ತಣಿಸುವಂತೆ ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ (Hemanth Rao) ಸಾರಾಂಶ ಟ್ರೈಲರ್ (Trailer) ಅನ್ನು ಬಿಡುಗಡೆಗೊಳಿಸಿದ್ದಾರೆ. ಈ ಟ್ರೈಲರ್ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಾ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ.

    `ಸಾರಾಂಶ’ದ ಬಗೆಗಿನ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂತ ಹಂತವಾಗಿ ಜಾಹೀರು ಮಾಡಿತ್ತು. ಇದೀಗ ಒಂದಿಡೀ ಸಿನಿಮಾದ ಆಂತರ್ಯವನ್ನು ತೆರೆದಿಡುವಂಥಾ ಟ್ರೈಲರ್ ಲಾಂಚ್ ಆಗಿದೆ. ವರ್ಷಾಂತರಗಳ ಹಿಂದೆ ಬಿಡುಗಡೆಗೊಂಡು, ಇಂದಿಗೂ ಆ ಪ್ರಭೆ ಉಳಿಸಿಕೊಂಡಿರುವ ಲೂಸಿಯಾ ಚಿತ್ರತಂಡದ ಸದಸ್ಯರು ಈ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದರು. ಶ್ರುತಿ ಹರಿಹರನ್, ಹೇಮಂತ್ ರಾವ್ ಮಾತ್ರವಲ್ಲದೇ ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ (Surya Vasistha) ಕೂಡಾ ಲೂಸಿಯಾ ಭಾಗವಾಗಿದ್ದವರೆ. ಇವರೆಲ್ಲರ ಸಮ್ಮುಖದಲ್ಲಿ ಸಾರಾಂಶ ಟ್ರೈಲರ್ ಬಿಡುಗಡೆಗೊಂಡಿದೆ.

    ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರುತಿ ಹರಿಹರನ್, ದೀಪಕ್ ಸುಬ್ಮಣ್ಯ, ಸೂರ್ಯ ವಸಿಷ್ಠ, ಸಂಗೀತ ನಿರ್ದೇಶಕ ಉದಿತ್ ಹರಿತಾಸ್, ರವಿ ಭಟ್, ಶ್ವೇತಾ ಗುಪ್ತ ಮುಂತಾದವರು ಹಾಜರಿದ್ದರು. ಅಂದಹಾಗೆ, ಇದು ಈ ದಿನಮಾನಕ್ಕೆ ಅತ್ಯಂತ ಅಪರೂಪವೆಂಬಂಥಾ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಪ್ರಧಾನ ಪಾತ್ರಗಳಲ್ಲೊಂದಕ್ಕೆ ಜೀವ ತುಂಬಿದ್ದಾರೆ. ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರವನ್ನು ಒಳಗಿಳಿಸಿಕೊಂಡಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ಕುಗಳು ಸದರಿ ಟ್ರೈಲರ್ ನಲ್ಲಿ ಕಾಣಿಸಿಕೊಂಡಿವೆ.

    ಈ ಸಿನಿಮಾದ ಎಲ್ಲ ಪಾತ್ರಗಳೂ ವಿಶೇಷವಾಗಿವೆ ಎಂಬುದಕ್ಕೆ ಈ ಟ್ರೈಲರ್ ನಲ್ಲಿ ಪುರಾವೆಗಳು ಸಿಗುತ್ತವೆ. ಅದರಲ್ಲೊಂದು ಪಾತ್ರವನ್ನು ಶ್ವೇತಾ ಗುಪ್ತ ನಿರ್ವಹಿಸಿದ್ದಾರೆ. ಕನ್ನಡತನದ ಬಗ್ಗೆ ಅತೀವ ಪ್ರೀತಿ ಆಸಕ್ತಿ ಇಟ್ಟುಕೊಂಡಿರೋ ಕನ್ನಡೇತರ ಬುಕ್ ಪಬ್ಲಿಷರ್ ಪಾತ್ರವಿದೆ. ಆ ಪಾತ್ರದ ಬಗ್ಗೆ ನಿರ್ದೇಶಕರು ಈ ಪತ್ರಿಕಾ ಗೋಷ್ಠಿಯಲ್ಲಿ ಒಂದಷ್ಟು ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಸದರಿ ಟ್ರೈಲರ್‍ನಲ್ಲಿ ಪ್ರಧಾನವಾಗಿ ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದುಕೊಂಡಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಅದು ಟ್ರೈಲರ್ ನ ಪ್ರಮುಖ ಆಕರ್ಷಣೆಯಾಗಿಯೂ ಗಮನ ಸೆಳೆಯುವಂತಿದೆ.

     

    ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಅವರ ಛಾಯಾಗ್ರಹಣ ಕೂಡಾ ಸಾರಾಂಶದ ಶಕ್ತಿಯಂತಿದೆ ಎಂಬುದು ಚಿತ್ರತಂಡದ ಭರವಸೆ.

  • ನಶೆಯ ನಾಕಾಶೆಯಲ್ಲಿ ‘ಸಾರಾಂಶ’ದ ನಿನಾದ

    ನಶೆಯ ನಾಕಾಶೆಯಲ್ಲಿ ‘ಸಾರಾಂಶ’ದ ನಿನಾದ

    ನ್ನಡದ ಮತ್ತೊಂದು ಹೊಸ ಬಗೆಯ ಸಿನಿಮಾ ರೆಡಿಯಾಗಿದೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಚಿತ್ರದ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಸಾರಾಂಶ ಎಂಬುದು ವಿಶೇಷ ಕಥಾ ಹಂದರದೊಳಗೆ ನಾನಾ ಬೆರಗುಗಳನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ ಎಂಬ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅದೀಗ ಈ ಹಾಡಿನ ಮೂಲಕ ಸಮ್ಮೋಹಕವಾಗಿ ಸಾಬೀತಾಗಿ ಬಿಟ್ಟಿದೆ. ಒಟ್ಟಾರೆ ಸಿನಿಮಾದ ಇಂಚಿಂಚನ್ನೂ ಹೊಸತನದೊಂದಿಗೆ ಸಿಂಗರಿಸಬೇಕೆಂಬಂಥಾ ತಪನೆ ಹೊಂದಿರುವವರು ಸೂರ್ಯ ವಸಿಷ್ಠ. ಅದಕ್ಕೆ ಉದಿತ್ ಹರಿತಾಸ್ ರಂಥಾ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿರೋದರಿಂದಾಗಿ ಸಾರಾಂಶದ ನಶೆಯ ನಕಾಶೆ ಚೆಂದದ ಹಾಡಿನ ಮೂಲಕ ಪಸರಿಸುವಂತಾಗಿದೆ.

    ನಶೆಯೋ ನಕಾಶೆಯೋ ಎಂಬ ಈ ಹಾಡು ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಮತ್ತು ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ.

    ಈ ವೀಡಿಯೋ ಸಾಂಗ್ ಸಂಗೀತ, ಸಾಹಿತ್ಯದಾಚೆಗೂ ವಿಶೇಷತೆಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಒನ್ ಟೇಕ್ ಸಾಂಗ್ ಎಂಬ ಪರಿಕಲ್ಪನೆಯನ್ನು ದೃಷ್ಯಕ್ಕೆ ಒಗ್ಗಿಸುವುದು ವಿರಳ. ಅಂಥಾದ್ದೊಂದು ಅಪರೂಪದ ಚೌಕಟ್ಟಿನಲ್ಲಿ ಈ ಹಾಡು ರೂಪುಗೊಂಡಿದೆ. ಇನ್ನುಳಿದಂತೆ, ಕಥೆಗೆ ಪೂರಕವಾಗಿ ಸೂಕ್ಷ್ಮ ಕಾನ್ಸೆಪ್ಟಿನಲ್ಲಿ ಈ ಹಾಡು ಸಿದ್ಧಗೊಂಡಿದೆ. ಪ್ರತಿಯೊಬ್ಬರನ್ನೂ ಕಾಡುವ, ಪುಳಕಗೊಳಿಸುವ, ಎಂತೆಂಥಾದ್ದೋ ಸಾಹಸಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಕನಸೆಂಬ ಮಾಯಾವಿ ಈ ಹಾಡಿನ ಹಿಂದಿರುವ ಮುಖ್ಯ ಮಾಯೆ. ಆ ಕ್ಷಣಕ್ಕೆ ವಾಸ್ತವಿಕ ಪರಿಧಿಯಾಚೆ ಕೊಂಡೊಯ್ಯುವ, ಅಸಾಧ್ಯವಾದುದನ್ನೂ ಕೂಡಾ ಸಾಧ್ಯವಾಗುವಂತೆ ಮಾಡುವ ಶಕ್ತಿ ಕನಸಿಗಿದೆ. ನಾವು ಸವಾಲು ಅಂತ ಬಂದಾಗ ಕಳೆದುಕೊಳ್ಳುವ ಭಯದಿಂದ ಹಿಂದಡಿ ಇಡೋದಿದೆ. ಆದರೆ, ಕನಸಿಗಾಗಿ ಮಾತ್ರ ಎಂಥಾ ತ್ಯಾಗಕ್ಕಾದರೂ ಸಿದ್ಧವಾಗಿ ಬಿಡುತ್ತೇವೆ. ಯಾಕೆ ಹೀಗೆ ಎಂಬಂತೆ ನಮ್ಮೊಳಗೇ ನಾವು ಪ್ರಶ್ನೆಯಾಗುತ್ತೇವೆ; ಅಚ್ಚರಿಗೊಳ್ಳುತ್ತೇವೆ. ಅಂಥಾ ಎಲ್ಲ ಭಾವಗಳೂ ಎರಕ ಹೊಯ್ದಂತೆ ಈ ಹಾಡು ಮೂಡಿ ಬಂದಿದೆ.

     

    ಶೃತಿ ಹರಿಹರನ್ ಜೊತೆಗೆ ಇಲ್ಲಿ ಸುಮೇಶ್ ವಿ.ಎಂ ಮತ್ತು ಐಶ್ವರ್ಯಾ ಪ್ರತಾಪ್ ಕೂಡಾ ಹಾಡಿನ ಭಾಗವಾಗಿದ್ದಾರೆ. ಹೀಗೆ ಹೊಸತನದ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮುಟ್ಟುತ್ತಿರುವ ಸಾರಾಂಶ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.

  • ಮೆಲ್ಲಗೆ ಆವರಿಸಿಕೊಳ್ಳುವ ‘ಸಾರಾಂಶ’ ಚಿತ್ರದ ಲಿರಿಕಲ್ ಸಾಂಗ್

    ಮೆಲ್ಲಗೆ ಆವರಿಸಿಕೊಳ್ಳುವ ‘ಸಾರಾಂಶ’ ಚಿತ್ರದ ಲಿರಿಕಲ್ ಸಾಂಗ್

    ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಾರಾಂಶ’ ಚಿತ್ರ ಸದ್ಯದ ಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದೆ. ಅದರ ಬಗ್ಗೆ ಒಂದಷ್ಟು ಚರ್ಚೆ, ನಿರೀಕ್ಷೆಗಳು ಮೂಡಿಕೊಂಡಿವೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸನ್ನದ್ಧವಾಗಿ ನಿಂತಿರುವ ಈ ಚಿತ್ರದ ಚೆಂದದ ಲಿರಿಕಲ್ ಸಾಂಗ್ ಇದೀಗ ಬಿಡುಗಡೆಗೊಂಡಿದೆ. ಕೇಳಿದಾಕ್ಷಣವೇ ಹೊಸ ಅನುಭೂತಿಯೊಂದನ್ನು ತುಂಬುವ, ಸೂಕ್ಷ್ಮವಾಗಿ ಕಥಾ ಹಂದರದೊಳಗೆ ಕೈ ಹಿಡಿದು ಕರೆದೊಯ್ಯುತ್ತಲೇ ಕಾಡುವ ಗುಣ ಹೊಂದಿರುವ ಈ ಹಾಡು, ಸಾರಾಂಶದ ಭಿನ್ನ ಕಥಾನಕಕ್ಕೆ ಕನ್ನಡಿ ಹಿಡಿದಂತೆ ಭಾಸವಾಗುತ್ತವೆ.

    ಅಪರಿಚಿತ ಲಾಲಿ ಹುಡುಕಿಹೆನು ನಿನ್ನಲಿ… ಅಂತ ಶುರುವಾಗುವ ಈ ಹಾಡು ಮೆಲ್ಲಗೆ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡು, ಆರಂಭಿಕವಾಗಿಯೇ ಹೊಸಾ ಫೀಲ್ ನೊಂದಿಗೆ ತಾಕುವಂತಿದೆ. ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ ಬರೆದಿರುವ ಹಾಡಿನ ಸಾಲುಗಳು ಭಿನ್ನವಾದ ಸಂಗೀತದ ಕುಸುರಿಯಲ್ಲಿ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು, ಸಾರಾಂಶದೊಳಗಿನ ಅಸಲೀ ಸಾರಾಂಶದತ್ತ ಕೇಳುಗರೆಲ್ಲ ಮೋಹಗೊಳ್ಳುವಂತೆ ಮಾಡಿ ಬಿಟ್ಟಿದೆ.

    ಸಾಮಾನ್ಯವಾಗಿ, ಯಾವುದೇ ಸಿನಿಮಾ ವಿಚಾರದಲ್ಲಾದರೂ ಹಾಡುಗಳಿಗೆ ಬೇರೆಯದ್ದೇ ತೆರನಾದ ಕಿಮ್ಮತ್ತಿದೆ. ಈವತ್ತಿಗೂ ಅದನ್ನು ಸಿನಿಮಾವೊಂದರ ಆಹ್ವಾನ ಪತ್ರಿಕೆ ಎಂಬಂತೆಯೇ ಪರಿಭಾವಿಸಲಾಗುತ್ತದೆ. ಆ ನಿಟ್ಟಿನಲ್ಲಿ ಹೇಳುವುದಾದರೆ, ಸಾರಾಂಶ ಚಿತ್ರದ ಆಹ್ವಾನ ನಿಜಕ್ಕೂ ಮನಸೆಳೆಯುವಂತಿದೆ. ಅಂದಹಾಗೆ, ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಇದೀಗ ಅದರಲ್ಲೊಂದು ಹಾಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಅದರ ಒಟ್ಟಂದವೇ ಉಳಿದೆರಡು ಹಾಡುಗಳಿಗಾಗಿ ಕಾತರಿಸುವಂತೆ ಮಾಡಿದೆ. ಅದು ಈ ಚಿತ್ರತಂಡದ ಶ್ರಮಕ್ಕೆ ದಕ್ಕಿದ ನಿಜವಾದ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

     

    ಈ ಸಿನಿಮಾ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಎಂಬ ಸ್ಪಷ್ಟ ಸುಳಿವನ್ನು ಈ ಹಿಂದೆಯೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಅದಕ್ಕೆ ಈ ಹಾಡು ಅಕ್ಷರಶಃ ಪುರಾವೆಯಂತೆ ಮೂಡಿಬಂದಿದೆ. ಸಾರಾಂಶದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್ ಮತ್ತು ಶ್ವೇತಾ ಗುಪ್ತ ಪ್ರಮುಖ ಪಾತ್ರಗಳಾಗಿ ನಟಿಸಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣವಿದೆ.  ಖುದ್ದು ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಪ್ರದೀಪ್ ನಾಯಕ್ ಸಂಕಲನವಿರುವ ಈ ಚಿತ್ರವನ್ನು ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಹಾಗೂ ಕ್ಲಾಪ್ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ಬಿಡುಗಡೆಗೆ ಸಜ್ಜಾಗಿ ನಿಂತಿದೆ ವಿಶಿಷ್ಟ ಕಥಾ `ಸಾರಾಂಶ’

    ಬಿಡುಗಡೆಗೆ ಸಜ್ಜಾಗಿ ನಿಂತಿದೆ ವಿಶಿಷ್ಟ ಕಥಾ `ಸಾರಾಂಶ’

    ನ್ನಡ ಚಿತ್ರರಂಗವೀಗ ಹೊಸಾ ಹರಿವಿನ ಮೂಲಕ ತಾಜಾತನದಿಂದ ನಳನಳಿಸಲಾರಂಭಿಸಿದೆ. ಹೊಸಬರ ತಂಡ, ಹೊಸಾ ಆಲೋಚನೆಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಅದನ್ನು ಮತ್ತಷ್ಟು ಹೊಳಪಾಗಿಸುವಂಥಾ ಮತ್ತೊಂದು ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ. `ಸಾರಾಂಶ’ (Saaramsha) ಎಂಬ ಈ ಚಿತ್ರವನ್ನು ಬಹುಮುಖ ಪ್ರತಿಭೆ ಸೂರ್ಯ ವಸಿಷ್ಠ (Surya Vasistha) ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವೊಂದನ್ನು ಬಚ್ಚಿಟ್ಟುಕೊಂಡಂತಿರೋ ಈ ಸಿನಿಮಾ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ.

    ವಿಶೇಷವೆಂದರೆ, ಇತ್ತೀಚಿನ ವರ್ಷಗಳಲ್ಲಿ ವಿರಳವಾದರೂ ಹೊಸಾ ಸಾಧ್ಯತೆಗಳತ್ತ ತೆರೆದುಕೊಳ್ಳುತ್ತಿರುವ ಶ್ರುತಿ ಹರಿಹರನ್ (Shruti Hariharan) ಇಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಕಥಾ ಎಳೆ, ಆ ಪಾತ್ರವನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬಂಥಾ ಸೂಕ್ಷ್ಮ ಕದಲಿಕೆಯ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ. ಸದ್ಯಕ್ಕೆ ನಿರ್ದೇಶಕರು ಇವಿಷ್ಟು ವಿಚಾರವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಅದರ ಜೊತೆಗೆ ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರಿಗೆ ಈ ಸಿನಿಮಾ ಒಳಪಡಲಿದೆ ಎಂಬ ಸ್ಪಷ್ಟೀಕರಣವನ್ನೂ ಕೊಡುತ್ತಾರೆ.

    ಇನ್ನುಳಿದಂತೆ, ಈ ಚಿತ್ರದ ಚಿತ್ರೀಕರಣವನ್ನು ಅಂದುಕೊಂಡಂತೆಯೇ ವ್ಯವಸ್ಥಿತವಾಗಿ ಚಿತ್ರತಂಡ ಮುಗಿಸಿಕೊಂಡಿದೆ. ಇಲ್ಲಿ ಬಹುಮುಖ್ಯವಾಗಿ ನಾಲಕ್ಕು ಪಾತ್ರಗಳ ಸುತ್ತ ಕಥೆ ಚಲಿಸುತ್ತದೆ. ಅದಕ್ಕೆ ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಜೀವ ತುಂಬಿದ್ದಾರೆ. ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಆ ದಿನಗಳು, ತಮಸ್ಸು, ಮಠ ಮುಂತಾದ ಸಿನಿಮಾಗಳ ಮೂಲಕ ಖ್ಯಾತರಾಗಿರೋ ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

     

    ಸಾರಾಂಶ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಅವೆಲ್ಲವಕ್ಕೆ ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ಸೂರ್ಯ ವಸಿಷ್ಠ ಸಾಹಿತ್ಯವಿರೋ ಹಾಡುಗಳಿಗೆ ಮಾಧುರಿ ಶೇಷಾದ್ರಿ ಮತ್ತು ಪಂಚಮ್ ಜೀವಾ ಧ್ವನಿಯಾಗಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಭೀಮಸೇನ ನಳಮಹರಾಜ, ಗಂಟುಮೂಟೆ ಖ್ಯಾತಿಯ ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಮ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.