Tag: ಸೂರ್ಯ ಕುಮಾರ್ ಯಾದವ್

  • BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

    ಮುಂಬೈ: ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ (Mumbai Indians)ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಿನ ಪಂದ್ಯವು ರೋಚಕತೆಯಿಂದ ಕೂಡಿತ್ತು. ಇತ್ತಂಡಗಳ ನಡುವೆ ಭರ್ಜರಿಯಾಗಿಯೇ ರನ್‌ ಹೊಳೆ ಹರಿದಿತ್ತು. ಫಾರ್ಮ್‌ ಕಳೆದುಕೊಂಡಿದ್ದ ಸೂರ್ಯಕುಮಾರ್‌ ಯಾದವ್‌ ಪಂಜಾಬ್‌ ಬೌಲರ್‌ಗಳನ್ನು ಬೆಂಡೆತ್ತಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು.

    ಕೊನೆಯ ಓವರ್‌ನಲ್ಲಿ ಮುಂಬೈಗೆ 16 ರನ್‌ ಗಳ ಅಗತ್ಯವಿದ್ದಾಗ ಯುವ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್‌ (Arshdeep Singh) ಎಸೆದ ಸತತ 2 ಯಾರ್ಕರ್‌ಗಳ ಮೂಲಕ ತಿಲಕ್ ವರ್ಮಾ ಮತ್ತು ನೆಹಾಲ್‌ ವಧೇರ ಅವರನ್ನ ಕ್ಲೀನ್‌ ಬೌಲ್ಡ್‌ ಮಾಡಿ ಮುಂಬೈಗೆ ಮರ್ಮಾಘಾತ ನೀಡಿದರು. ಅರ್ಷ್‌ದೀಪ್‌ ಎಸೆದ ಬೌಲಿಂಗ್‌ ವೇಗಕ್ಕೆ ಸತತವಾಗಿ 2‌ ಬಾರಿ ಸ್ಟಂಪ್‌ಗಳು ಮುರಿದು ಹೋಯಿತು. ಇದರಿಂದ ಬಿಸಿಸಿಐಗೆ ಭಾರೀ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    ಪಂದ್ಯದಲ್ಲಿ 215 ರನ್‌ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌, ಸ್ಟಾರ್‌ ಬ್ಯಾಟರ್‌ಗಳಾದ ಕ್ಯಾಮರೂನ್‌ ಗ್ರೀನ್‌ (Cameron Green) ಮತ್ತು ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಜಯದತ್ತ ದಾಪುಗಾಲಿಟ್ಟಿತ್ತು. ಆದ್ರೆ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಷ್‌ದೀಪ್‌ ಸಿಂಗ್‌ ಅವರ ಮಾರಕ ಯಾರ್ಕರ್‌ಗಳ ಎದುರು ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರ ತಲೆಕೆಳಗಾದವು. ರೋಚಕ ಪಂದ್ಯದಲ್ಲಿ ಪಂಜಾಬ್‌ಗೆ 13 ರನ್‌ಗಳ ಜಯ ತಂದುಕೊಡುವಲ್ಲಿ ಅರ್ಷ್‌ದೀಪ್‌ ಸಿಂಗ್‌ ಯಶಸ್ವಿಯಾದರು. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    LED ಸ್ಟಂಪ್ಸ್‌ನ ಬೆಲೆ ಎಷ್ಟು ಗೊತ್ತಾ?
    ಆಸ್ಟ್ರೇಲಿಯಾ ಮೂಲದ ಕ್ರೀಡಾ ಸರಕು ಉತ್ಪಾದನಾ ಸಂಸ್ಥೆ ತಯಾರಿಸುವ ಈ ಎಲ್‌ಇಡಿ ಸ್ಟಂಪ್ಸ್‌ ಮತ್ತು ಝಿಂಗ್‌ ಬೇಲ್ಸ್‌ ಸೆಟ್‌ನ ಬೆಲೆ 40 ರಿಂದ 50 ಸಾವಿರ ಡಾಲರ್‌. ಭಾರತೀಯ ರೂಪಾಯಿ ಮೌಲ್ಯಕ್ಕೆ ಇದನ್ನು ಪರಿವರ್ತಿಸಿದರೆ, 32 ರಿಂದ 41 ಲಕ್ಷ ರೂ. ಬೆಲೆ ಬಾಳುತ್ತದೆ. ಅರ್ಷ್‌ದೀಪ್‌ ಕ್ಯಾಮೆರಾ ಇರುವ ಮಧ್ಯದ ಸ್ಟಂಪ್‌ ಮುರಿದಿದ್ದು, ಈ ಸ್ಟಂಪ್ ಒಂದರ ಬೆಲೆಯೇ 24 ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ. 2 ಸ್ಟಂಪ್ಸ್‌ನಿಂದ ಒಟ್ಟಾರೆ 48 ಲಕ್ಷ ರೂ.ಗಳ ನಷ್ಟ ಬಿಸಿಸಿಗೆ ಎದುರಾಗಿದೆ. ಅಂದಹಾಗೆ ಈ ಬೆಲೆಗೆ ಎರಡು ಕಾರುಗಳನ್ನೇ ಖರೀದಿಸಬಹುದಿತ್ತು ಎಂದು ಹೇಳಲಾಗುತ್ತಿದೆ.

  • ಟಿ20 ಕ್ರಿಕೆಟ್‍ನಲ್ಲಿ ವಿಸ್ಫೋಟಕ ಆಟ – ವಿಶ್ವ ದಾಖಲೆ ಬರೆದ SKY

    ಟಿ20 ಕ್ರಿಕೆಟ್‍ನಲ್ಲಿ ವಿಸ್ಫೋಟಕ ಆಟ – ವಿಶ್ವ ದಾಖಲೆ ಬರೆದ SKY

    ಮುಂಬೈ: ಟೀಂ ಇಂಡಿಯಾದ (Team India) ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್ ಯಾದವ್ (Suryakumar Yadav) ಟಿ20 (T20I) ಕ್ರಿಕೆಟ್‍ನಲ್ಲಿ 843 ಎಸೆತಗಳಲ್ಲಿ 1,500 ರನ್ ಚಚ್ಚಿ ನೂತನ ವಿಶ್ವ ದಾಖಲೆ ಬರೆದಿದ್ದಾರೆ.

    ರಾಜ್‍ಕೋಟ್‍ನಲ್ಲಿ ಶ್ರೀಲಂಕಾ (Sri Lanka) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯದ ಮೂಲಕ ಕೇವಲ 843 ಎಸೆತಗಳಲ್ಲಿ 1,500 ರನ್ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದನ್ನೂ ಓದಿ: ಸೂರ್ಯನ ಸಿಡಿಲಬ್ಬರದ ಶತಕಕ್ಕೆ ಲಂಕಾ ಭಸ್ಮ – ಭಾರತಕ್ಕೆ ಟಿ20 ಸರಣಿ ಕಿರೀಟ

    ಸೂರ್ಯಕುಮಾರ್ ಯಾದವ್ 45 ಪಂದ್ಯವಾಡಿ 43 ಇನ್ನಿಂಗ್ಸ್‌ಗಳಿಂದ 1,500 ರನ್‌ ಸಿಡಿಸಿದ್ದಾರೆ. ಈ ಮೂಲಕ ವೇಗವಾಗಿ 1,500 ರನ್ ಸಿಡಿಸಿದ ಭಾರತದ ಮೂರನೇ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಟೀಂ ಇಂಡಿಯಾ ಪರ ಈಗಾಗಲೇ ವಿರಾಟ್ ಕೊಹ್ಲಿ (Virat Kohli), ಕೆ.ಎಲ್ ರಾಹುಲ್ ಕೇವಲ 39 ಇನ್ನಿಂಗ್ಸ್‌ಗಳಿಂದ 1,500 ರನ್ ಪೇರಿಸಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್‍ರೇಟ್‍ನಲ್ಲಿ 1,500 ರನ್ ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ. ಇದೀಗ ಸೂರ್ಯ 45 ಪಂದ್ಯವಾಡಿ 43 ಇನ್ನಿಂಗ್ಸ್‌ಗಳಿಂದ 3 ಶತಕ ಮತ್ತು 13 ಅರ್ಧಶತಕ ಸಹಿತ 1,578 ರನ್ ಸಿಡಿಸಿ ಗಮನಸೆಳೆದಿದ್ದಾರೆ. ಕಳೆದ ಒಂದು ವರ್ಷದಿಂದ ಸೂರ್ಯಕುಮಾರ್‌ ಯಾದವ್‌ ರನ್‌ ಹೊಳೆ ಹರಿಸುತ್ತಿದ್ದಾರೆ. ಇದನ್ನೂ ಓದಿ: 9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಇದಲ್ಲದೇ ಟೀಂ ಇಂಡಿಯಾಪರ ಟಿ20 ಕ್ರಿಕೆಟ್‍ನಲ್ಲಿ ಮೂರು ಶತಕ ಬಾರಿಸಿ ಅತೀ ಹೆಚ್ಚು ಶತಕ ಬಾರಿಸಿರುವ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ 4 ಶತಕ ಬಾರಿಸಿರುವ ರೋಹಿತ್ ಶರ್ಮಾ (Rohit Sharma) ಈ ಪಟ್ಟಿಯಲ್ಲಿ ಅಗ್ರಜನಾಗಿ ಕಾಣಿಸಿಕೊಂಡಿದ್ದಾರೆ.

    ಸೂರ್ಯಕುಮಾರ್‌ ಯಾದವ್‌ ಸಿಡಿಲಬ್ಬರದ ಶತಕ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 91 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿ ಗೆದ್ದು ಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ

    ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ

    ಢಾಕಾ: ಟೀಂ ಇಂಡಿಯಾ (Team India) ಬಾಂಗ್ಲಾದೇಶ (Bangladesh) ಪ್ರವಾಸದಲ್ಲಿದೆ. ಬಾಂಗ್ಲಾ ವಿರುದ್ಧ ಏಕದಿನ ಸರಣಿ ಆಡುತ್ತಿರುವ ನಾಯಕ ರೋಹಿತ್ ಶರ್ಮಾರ (Rohit Sharma) ಬ್ಯಾಟ್‍ನಲ್ಲಿ (Bat) ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯ ಕುಮಾರ್ ಯಾದವ್ (Suryakumar Yadav) ಹಸ್ತಾಕ್ಷರ ಕಂಡು ಅಚ್ಚರಿ ಮೂಡಿಸಿದೆ.

    ಸೂರ್ಯ ಕುಮಾರ್ ಯಾದವ್ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಏಕದಿನ (ODI) ಮತ್ತು ಟೆಸ್ಟ್ (Test) ಸರಣಿಯಲ್ಲಿ ಆಡುತ್ತಿಲ್ಲ. ಈ ನಡುವೆ ರೋಹಿತ್ ಬ್ಯಾಟ್‍ನಲ್ಲಿ ಎಸ್.ಕೆ ಯಾದವ್ ಎಂದು ಸಹಿ ಮಾಡಿರುವುದು ಕುತೂಹಲ ಮೂಡಿಸಿದೆ. ಈ ನಡುವೆ ರೋಹಿತ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಬಳಸುತ್ತಿದ್ದಾರಾ? ರೋಹಿತ್ ಬ್ಯಾಟ್‍ನಲ್ಲಿ ಏಕೆ ಸೂರ್ಯ ಕುಮಾರ್ ಯಾದವ್ ಹೆಸರಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಿಫಾಲಿ ಇದೀಗ U19 ಕ್ಯಾಪ್ಟನ್!

    ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸೂರ್ಯ ಕುಮಾರ್ ಯಾದವ್ ಸಹಿಯಿರುವ ಬ್ಯಾಟ್ ಮಾಡಿದ್ದರು. ಆದರೆ ರೋಹಿತ್ ಆಟ 27 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸ್) ಸೀಮಿತವಾಯಿತು. ಈ ನಡುವೆ ಎಲ್ಲರ ಗಮನ ಸೆಳೆದಿದ್ದು, ರೋಹಿತ್ ಬ್ಯಾಟ್‌ನಲ್ಲಿದ್ದ ಸೂರ್ಯನ ಹಸ್ತಾಕ್ಷರ. ಟಿ20 ವಿಶ್ವಕಪ್‍ನಲ್ಲಿ ಜೊತೆಯಾಗಿ ಆಡಿದ್ದ ರೋಹಿತ್ ಮತ್ತು ಸೂರ್ಯ ಆ ಬಳಿಕ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ರೋಹಿತ್ ಆಡಿರಲಿಲ್ಲ. ಇದೀಗ ಬಾಂಗ್ಲಾ ಸರಣಿಯಲ್ಲಿ ಸೂರ್ಯ ಕುಮಾರ್ ಆಡುತ್ತಿಲ್ಲ.

    ಸೂರ್ಯ ಕುಮಾರ್ ಭರ್ಜರಿ ಫಾರ್ಮ್‍ನಲ್ಲಿದ್ದು, ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಆದರೆ ಇತ್ತ ರೋಹಿತ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿದ್ದು, ನಾಯಕತ್ವದ ಹೊರೆಯೊಂದಿಗೆ ಆಡುತ್ತಿರುವಂತೆ ಭಾಸವಾಗುತ್ತಿದೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ

    ಬಾಂಗ್ಲಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 1 ವಿಕೆಟ್‍ಗಳ ರೋಚಕ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಏಕದಿನ ಪಂದ್ಯ ಡಿ.7 ರಂದು ಮೀರ್‌ಪುರ್‌ನಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

    ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ಲೀಗ್ ಬಿಗ್‍ಬಾಶ್‌ ಲೀಗ್‌ನಲ್ಲಿ (BBL) ಭಾರತೀಯ ಆಟಗಾರರನ್ನು ಖರೀದಿಸಿ ಆಡಿಸುವಷ್ಟು ಹಣ ನಮ್ಮಲ್ಲಿಲ್ಲ ಎಂದು ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌  (Glenn Maxwell) ಹೇಳಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ ವಿಶ್ವ ರ್‍ಯಾಕಿಂಗ್‌ನಲ್ಲಿ ನ.1 ಸ್ಥಾನದಲ್ಲಿರುವ ಸೂರ್ಯ ಕುಮಾರ್ ಯಾದವ್ (Suryakumar Yadav) ಕುರಿತಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್‌ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಮ್ಯಾಕ್ಸ್‌ವೆಲ್‌ ಸೂರ್ಯ ಕುಮಾರ್ ಯಾದವ್ ಉತ್ತಮ ಆಟಗಾರ ಆದರೆ ನಮ್ಮಲ್ಲಿ ನಡೆಯುವ ಬಿಬಿಎಲ್ ಟೂರ್ನಿಯಲ್ಲಿ ಅವರನ್ನು ಕರೆತಂದು ಆಡಿಸುವಷ್ಟು ದುಡ್ಡು ನಮ್ಮಲ್ಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೆ.ಎಲ್.ರಾಹುಲ್

    ಸೂರ್ಯ ಕುಮಾರ್ ಯಾದವ್ ಭವಿಷ್ಯದಲ್ಲಿ ಬಿಬಿಎಲ್ ಟೂರ್ನಿಯಲ್ಲಿ ಆಡಬಹುದಾ ಎಂದು ಕೇಳಿದಾಗ ಮ್ಯಾಕ್ಸ್‌ವೆಲ್‌ ಇದು ಅಸಾಧ್ಯ. ನಾವು ದೊಡ್ಡ ಮೊತ್ತ ಪಾವತಿಸಿ ಆಟಗಾರರನ್ನು ತಂಡಕ್ಕೆ ಸೇರಿಸುವುದಿಲ್ಲ. ಹಾಗಾಗಿ ಬಿಬಿಎಲ್‍ನಲ್ಲಿ ಸೂರ್ಯ ಕುಮಾರ್ ಯಾದವ್ ಅವರಂತಹ ಭಾರತೀಯ ಆಟಗಾರರನ್ನು ನಿರೀಕ್ಷಿಸುವುದು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

    ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಟಿ20 ಲೀಗ್‍ನಲ್ಲಿ ಆಡಲು ಅವಕಾಶ ನೀಡಬೇಕೆಂಬ ಮಾತು ಕೇಳಿ ಬರುತ್ತಿದೆ. ಈವರೆಗೆ ಬಿಸಿಸಿಐ (BCCI) ಭಾರತೀಯ ಆಟಗಾರರಿಗೆ ಐಪಿಎಲ್ (IPL) ಬಿಟ್ಟು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡಲು ಅವಕಾಶ ನೀಡಿಲ್ಲ. ಬಿಸಿಸಿಐ ಈ ಬಗ್ಗೆ ಚಿಂತಿಸಿ ಆಟಗಾರರಿಗೆ ಅವಕಾಶ ನೀಡಿದರೆ, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ವಿದೇಶಿ ಲೀಗ್‍ನಲ್ಲಿ ದೊಡ್ಡ ಮೊತ್ತಕ್ಕೆ ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಂದಾಗಬಹುದು. ಆದರೆ ಈ ಬಗ್ಗೆ ಬಿಸಿಸಿಐ ಒಲವು ತೋರಿದಂತೆ ಕಾಣಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ನವದೆಹಲಿ: ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿದರು ಕೆಲ ಆಟಗಾರರು ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಮಾತ್ರ ಉತ್ತಮವಾಗಿ ಆಡಿಕೊಂಡು ಬರುತ್ತಿದ್ದಾರೆ.

    ಈ ಪಟ್ಟಿಯಲ್ಲಿ ನಮಗೆ ಮೊದಲು ಸಿಗುವುದು ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕಿಂಗ್ಸ್ ಇಲೆವೆನ್ ತಂಡದ ಸಂದೀಪ್ ಶರ್ಮಾ, ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಮತ್ತು ಶ್ರೇಯಸ್ ಗೋಪಾಲ್. ಈ ಎಲ್ಲರೂ ಉತ್ತಮವಾಗಿ ಆಡಿದರೂ ಕೂಡ ಟೀಂ ಇಂಡಿಯಾಗೆ ಸೆಲೆಕ್ಟ್ ಆಗುವಲ್ಲಿ ವಿಫಲರಾಗಿದ್ದಾರೆ.

    ಸೂರ್ಯ ಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

    ಇಶಾನ್ ಕಿಶನ್: 22 ವರ್ಷದ ಈ ಮುಂಬೈ ಇಂಡಿಯನ್ಸ್ ಆಟಗಾರ ಈ ಬಾರಿಯ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದರು. ತಮಗೆ ನೀಡಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಿಶನ್ 14 ಪಂದ್ಯಗಳನ್ನಾಡಿ ನಾಲ್ಕು ಅರ್ಧಶತಕದ ಜೊತೆಗೆ 516 ರನ್‍ಗಳಿಸಿದರು. ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ 30 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

    ಸಂದೀಪ್ ಶರ್ಮಾ: ಐಪಿಎಲ್ ಟೂರ್ನಿಯಲ್ಲಿ ಸಂದೀಪ್ ಶರ್ಮಾ ಬುಮ್ರಾ ಅವರಷ್ಟೇ ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಸಂದೀಪ್ ಇನ್ನು ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ. ಪವರ್ ಪ್ಲೇನಲ್ಲಿ ಸೂಪರ್ ಆಗಿ ಬೌಲ್ ಮಾಡುವ ಶರ್ಮಾ ಪವರ್ ಪ್ಲೇನಲ್ಲಿ 53 ವಿಕೆಟ್ ಪಡೆದು ಮೊದಲ ಆರು ಓವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್-2020ಯಲ್ಲಿ 13 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಮಿಂಚಿದರು.

    ರಾಹುಲ್ ತೆವಾಟಿಯಾ: ಈ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ತನ್ನ ಅಬ್ಬರ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದರು. ಜೊತೆಗೆ ಡೆತ್ ಓವರಿನಲ್ಲಿ ಒಳ್ಳೆಯ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿ ಕ್ರೀಡಾಭಿಮಾನಿಗಳನ್ನು ಇಂಪ್ರೆಸ್ ಮಾಡಿದರು. ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳನ್ನಾಡಿದ ರಾಹುಲ್ 255 ರನ್ ಸಿಡಿಸಿ 10 ವಿಕೆಟ್ ಪಡೆದು ಮಿಂಚಿದರು. ಇವರ ಜೊತೆಗೆ ರಾಜಸ್ಥಾನ್ ತಂಡ ಶ್ರೇಯಸ್ ಗೋಪಾಲ್ ಸತತ ಎರಡು ಅವೃತ್ತಿಯಲ್ಲೂ 10 ವಿಕೆಟ್ ಪಡೆದರೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ.