– ಮೊದಲ ಝಲಕ್‍ನಲ್ಲೇ ಭರವಸೆ ಮೂಡಿಸಿದ ಚಿತ್ರ
ಮಹಾಕಾವ್ಯ ಮಹಾಭಾರತದಲ್ಲಿ ಬರೋ ಪರಾಕ್ರಮಿ, ದಾನಶೂರ ಸೂರ್ಯಪುತ್ರ ಮಹಾವೀರ ಕರ್ಣನ ಕಥೆ ಬೆಳ್ಳಿ ಪರದೆ ರಾರಾಜಿಸಲು ಸಿದ್ಧವಾಗಿದ್ದು, ಲೋಗೋ ಲಾಂಚ್ ಮೂಲಕ ಸಿನಿ ಅಂಗಳದಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಹಾಭಾರತ ಅರಿತವರಿಗೆ ಕರ್ಣ ಇಷ್ಟವಾಗುತ್ತಾನೆ. ಜೀವನದ ಕೊನೆಯ ಕ್ಷಣದವರೆಗೂ ಬೇರೆಯವರಿಗಾಗಿಯೇ ಬದುಕಿದ ವ್ಯಕ್ತಿತ್ವ ಕರ್ಣನದ್ದು.

ಇದೀಗ ಸೂರ್ಯಪುತ್ರ ಕರ್ಣನ ಕಥೆಯನ್ನಾಧರಿತ ಸಿನಿಮಾ ತೆರೆಯ ಮೇಲೆ ತರಲು ನಿರ್ದೇಶಕ ಆರ್.ಎಸ್.ವಿಮಲ್ ಮುಂದಾಗಿದ್ದಾರೆ. ಚಿತ್ರಕ್ಕೆ ವಶು ಭಗ್ನಾನಿ, ದೀಪ್ಷಿಕಾ ದೇಶಮುಖ್ ಮತ್ತು ಜಾಕಿ ಭಗ್ನಾನಿ ಜೊತೆಯಾಗಿ ಬಂಡವಾಳ ಹಾಕಿದ್ದಾರೆ. ಕವಿ ಡಾ.ಕುಮಾರ್ ವಿಶ್ವಾಸ್ ಲೇಖನಿಯಲ್ಲಿ ಚಿತ್ರದ ಡೈಲಾಗ್, ಸಾಹಿತ್ಯ ರಚನೆಯಾಗಲಿದೆ. ಪೂಜಾ ಎಂಟರ್‍ಟೈನಮೆಂಟ್ ಚಿತ್ರವನ್ನ ಅದ್ಧೂರಿಯಾಗಿ ತೆರೆ ಮೇಲೆ ತರಲು ಸಿದ್ಧವಾಗಿದೆ.

ಅದ್ಧೂರಿ ಗ್ರಾಫಿಕ್ಸ್ ಕಂಟೇಟ್ ಹೊಂದಿರುವ ಬಗ್ಗೆ ಸದ್ಯ ಬಿಡುಗಡೆ ಝಲಕ್ ಸಾಕ್ಷಿಯಾಗಿದೆ. ಇನ್ನು ಚಿತ್ರದಲ್ಲಿ ಖಡಕ್ ಡೈಲಾಗ್ ಜೊತೆಯಲ್ಲಿ ಯುದ್ಧದ ಸನ್ನಿವೇಶಗಳನ್ನ ಅಭಿಮಾನಿಗಳು ಕಣ್ತುಂಬಿಕೊಳೋದು ಗ್ಯಾರೆಂಟಿ ಎಂಬ ಮಾತುಗಳನ್ನ ವೀಡಿಯೋ ನೋಡಿದ ವೀಕ್ಷಕರು ಹೇಳುತ್ತಿದ್ದಾರೆ. ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ರಿಲೀಸ್ ಆಗಲಿದೆ.
https://twitter.com/jackkybhagnani/status/1364116476660051969
ಈ ಕುರಿತು ಟ್ವೀಟ್ ಮಾಡಿರುವ ನಟ, ನಿರ್ಮಾಪಕ ಜಾಕಿ ಭಗ್ನಾನಿ, ಮಹಾಭಾರತದ ಪ್ರತಿ ವೀರ ಯೋಧರಿಂದ ಪ್ರೇರಿತಗೊಂಡಿದ್ದೇನೆ. ಕರ್ಣನ ಜೀವನಾಧರಿತ ನನ್ನ ಡ್ರೀಮ್ ಪ್ರೊಜೆಕ್ಟ್ ನಿಮ್ಮ ಜೊತೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ಚಿತ್ರದ ಲೋಗೋ ಅನಾವರಣ ಮೂಲಕವೇ ಸದ್ದು ಮಾಡುತ್ತಿರೋದಕ್ಕೆ ಸಿನಿ ತಂಡ ಸಂತಸ ವ್ಯಕ್ತಪಡಿಸಿದೆ.
