Tag: ಸೂರ್ನೊಲಿ

  • ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?

    ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?

    ಸೂರ್ನೊಲಿ (Surnoli) ಒಂದು ರೀತಿಯ ಸಿಹಿಯಾದ ದೋಸೆಯಾಗಿದ್ದು (Sweet Dosa), ಸೌತ್ ಕೆನರಾ ಭಾಗದ ಫೇಮಸ್ ಉಪಾಹಾರವಾಗಿದೆ. ಮುಖ್ಯವಾಗಿ ಗೋವಾದಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಕ್ಕಿ, ಅವಲಕ್ಕಿ, ಬೆಲ್ಲದೊಂದಿಗೆ ತಯಾರಿಸಲಾಗುವ ಸೂರ್ನೊಲಿಯನ್ನು ಮಕ್ಕಳು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಾರೆ. ಇಂದು ನಾವು ಸಿಹಿ ಸೂರ್ನೊಲಿ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ದೋಸೆ ಅಕ್ಕಿ – 1 ಕಪ್
    ಮೆಂತ್ಯ – ಕಾಲು ಟೀಸ್ಪೂನ್
    ನೀರು – ಅಗತ್ಯಕ್ಕೆ ತಕ್ಕಂತೆ
    ತೆಳು ಅವಲಕ್ಕಿ – ಅರ್ಧ ಕಪ್
    ತುರಿದ ತೆಂಗಿನಕಾಯಿ – ಅರ್ಧ ಕಪ್
    ಬೆಲ್ಲ – ಕಾಲು ಕಪ್
    ಹುಳಿ ಮಜ್ಜಿಗೆ – ಅರ್ಧ ಕಪ್
    ಉಪ್ಪು – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಅಡುಗೆ ಸೋಡಾ – ಕಾಲು ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ದೋಸೆ ಅಕ್ಕಿ ಹಾಗೂ ಮೆಂತ್ಯ ಬೀಜವನ್ನು ತೊಳೆದುಕೊಂಡು, ಅದನ್ನು ಒಂದು ಬಟ್ಟಲಿಗೆ ಹಾಕಿ, 3 ಕಪ್ ನೀರು ಸೇರಿಸಿ, ನೆನೆಸಿಡಿ.
    * ಇನ್ನೊಂದು ಬಟ್ಟಲಿನಲ್ಲಿ ಅವಲಕ್ಕಿ ತೆಗೆದುಕೊಂಡು, ಅದಕ್ಕೆ ಅರ್ಧ ಕಪ್ ನೀರು ಹಾಕಿ ನೆನೆಸಿ.
    * ಅಕ್ಕಿ ಹಾಗೂ ಅವಲಕ್ಕಿ 4 ಗಂಟೆಗಳ ಕಾಲ ನೆನೆದ ಬಳಿಕ ಎರಡನ್ನೂ ಬ್ಲೆಂಡರ್‌ಗೆ ಹಾಕಿ, ತುರಿದ ತೆಂಗಿನ ಕಾಯಿ, ಬೆಲ್ಲ ಹಾಗೂ ಮಜ್ಜಿಗೆ ಸೇರಿಸಿ, ನಯವಾಗಿ ರುಬ್ಬಿಕೊಳ್ಳಿ.
    * ಈಗ ಕಡಿದ ಹಿಟ್ಟಿಗೆ 8 ಗಂಟೆ ವಿಶ್ರಾಂತಿ ನೀಡಿ. (ರಾತ್ರಿ ವೇಳೆ ಹಿಟ್ಟು ಕಡಿದರೆ, ಬೆಳಗ್ಗೆ ತಯಾರಿಸಬಹುದು)

    * 8 ಗಂಟೆ ವಿಶ್ರಾಂತಿಯ ಬಳಿಕ ಹಿಟ್ಟು ಸ್ವಲ್ಪ ಹುದುಗಿರುವುದನ್ನು ನೀವು ಕಾಣಬಹುದು. ಈಗ ಅದಕ್ಕೆ ಉಪ್ಪು, ಅರಿಶಿನ ಪುಡಿ, ಅಡುಗೆ ಸೋಡಾ ಸೇರಿಸಿ, ಮಿಶ್ರಣ ಮಾಡಿ.
    * ಈಗ ದೋಸೆ ತಯಾರಿಸುವ ಪ್ಯಾನ್ ಅನ್ನು ಬಿಸಿ ಮಾಡಿ, ಅದರ ಮೇಲೆ ಅರ್ಧ ಟೀಸ್ಪೂನ್ ಎಣ್ಣೆಯನ್ನು ಸವರಿ.
    * ಉರಿಯನ್ನು ಮಧ್ಯಮದಲ್ಲಿಟ್ಟು, 1 ಸೌಟಿನಷ್ಟು ಹಿಟ್ಟನ್ನು ಪ್ಯಾನ್ ಮೇಲೆ ಸುರಿಯಿರಿ. (ಹರಡುವುದು ಬೇಡ)
    * ಪ್ಯಾನ್ ಅನ್ನು ಮುಚ್ಚಿ, 3 ನಿಮಿಷ ಬೇಯಿಸಿ.
    * ಬಳಿಕ ದೋಸೆ ಮೇಲೆ ಅರ್ಧ ಟೀಸ್ಪೂನ್ ಎಣ್ಣೆ ಹಾಕಿ, ದೋಸೆ ತಿರುವಿ, ಮತ್ತೆ 2 ನಿಮಿಷ ಬೇಯಿಸಿ.
    * ಇದೀಗ ಸಿಹಿಯಾದ ಸೂರ್ನೊಲಿ ದೋಸೆ ತಯಾರಾಗಿದ್ದು, ತುಪ್ಪ ಹಾಗೂ ಚಟ್ನಿಯೊಂದಿಗೆ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    Live Tv
    [brid partner=56869869 player=32851 video=960834 autoplay=true]