Tag: ಸೂರರೈ ಪೋಟ್ರು

  • 68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್‌ಗಳು ಇವರೇ

    68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್‌ಗಳು ಇವರೇ

    ತ್ತೀಚೆಗಷ್ಟೇ 68ನೇ ಸಾಲಿನ ರಾಷ್ಟ್ರ ಪ್ರಶಸ್ತಿ(National Film Awards) ಪಡೆಯಲಿರುವ ಪ್ರತಿಭಾನ್ವಿತರ ಪಟ್ಟಿಯನ್ನ ಬಿಡುಗಡೆ ಮಾಡಲಾಗಿತ್ತು. ಅದರಂತೆ ಇಂದು ನವದೆಹಲಿಯ ವಿಗ್ಯಾನ್ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu)  ಅವರು ವಿಜೇತರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

    68ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಇಂದು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಭಿನ್ನ ಕಥಾಹಂದರ ಹೊಂದಿರುವ ಕನ್ನಡದ `ಡೊಳ್ಳು’ (Dollu) ಚಿತ್ರಕ್ಕಾಗಿ ಪವನ್ ಒಡೆಯರ್, `ತಲೆದಂಡ’ (Thaledanda) ಚಿತ್ರ, ಸಾಂಸ್ಕೃತಿಕ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾದದ ನವನೀತ’ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ತಮಿಳು ಚಿತ್ರ `ಸೂರರೈ ಪೋಟ್ರು’ ಲಭಿಸಿದೆ. ಇನ್ನು ಬಾಲಿವುಡ್ ನಟ ಅಜಯ್ ದೇವಗನ್, ಕಾಲಿವುಡ್ ನಟ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯ್ತು. `ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದಾರೆ. ಸಂಗೀತ ಸಂಯೋಜಕ ವಿಶಾಲ್ ಭಾರದ್ವಾಜ್ ಅವರು `1232 ಕೆಎಂ’ ಸಾಕ್ಷ್ಯಚಿತ್ರದಲ್ಲಿ `ಮರೇಂಗೆ ತೋ ವಹಿನ್ ಜಾ ಕರ್’ ಹಾಡಿಗಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದರು.

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಹೀಗಿದೆ:

    ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)

    ವಿಶಿಷ್ಟ ಕಥಾಹಂದರ ಸಿನಿಮಾ: ಡೊಳ್ಳು (ಕನ್ನಡ)

    ಸಾಂಸ್ಕೃತಿಕ ವಿಭಾಗದ ಸಿನಿಮಾ: ನಾದದ ನವನೀತ (ಕನ್ನಡ)

    ಅತ್ಯುತ್ತಮ ನಟ: ಅಜಯ್ ದೇವಗನ್ ಮತ್ತು ಕಾಲಿವುಡ್‌ ನಟ ಸೂರ್ಯ

    ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ

    ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು

    ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು

    ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ

    ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್

    ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ

    ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ

    ಅತ್ಯುತ್ತಮ ಚಿತ್ರಕಥೆ: ಶಾಲಿನಿ ಉಷಾ ನಾಯರ್, ಸುಧಾ ಕೊಂಗರು (ಸೂರರೈ ಪೋಟ್ರು)

    ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)

    ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ (ಮಿ ವಸಂತ್ ರಾವ್)

    ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ಕಾಲಿವುಡ್‌ನ `ಸೂರರೈ ಪೋಟ್ರು’ (Surarai Potru) ಚಿತ್ರದ ಮೂಲಕ ಗಮನ ಸೆಳೆದ ನಟಿ ಅಪರ್ಣಾ ಬಾಲಮುರಳಿ(Aparna Balamurali) ಮತ್ತೆ ಸುದ್ದಿಯಲ್ಲಿದ್ದಾರೆ. `ಸೂರರೈ ಪೋಟ್ರು’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯ ಗರಿ (National Award Winner) ಮುಡಿಗೇರಿಸಿಕೊಂಡಿದ್ದರು. ಈಗ ಬಾಡಿ ಶೇಮಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಪ್ಪಗಾಗಿದ್ದಾರೆ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ನಟಿ ತಿರುಗೇಟು ನೀಡಿದ್ದಾರೆ.

    ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಅಪರ್ಣಾ ಬಾಲಮುರಳಿ ಅವರು ಸುಧಾ ಕೊಂಗರ ನಿರ್ದೇಶನದ `ಸೂರರೈ ಪೋಟ್ರು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡರು. ಸೂರ್ಯ ಅವರ ಪತ್ನಿಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    ಇನ್ನು ಮೊದಲಿಂದಲೂ ಗುಂಡಗಿದ್ದ ನಟಿ ಅಪರ್ಣಾ ಈಗ ಮತ್ತಷ್ಟು ದಪ್ಪಗಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಬಾಡಿ ಶೇಮಿಂಗ್ ಕಾಟ ಶುರುವಾಗಿದೆ. ಇತ್ತೀಚೆಗೆ `ನೀತಂ ಒರು ವಾನಂ’ ಅಪರ್ಣಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ನಟಿಯ ಹುಟ್ಟುಹಬ್ಬ ಸಂದರ್ಭದಲ್ಲಿ ಲಂಗ ದಾವಣಿ ಲುಕ್‌ನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವ ಪೋಸ್ಟರ್‌ವೊಂದನ್ನ ರಿಲೀಸ್ ಮಾಡಲಾಗಿತ್ತು. ಅಪರ್ಣಾ ಲುಕ್ ನೋಡಿ ಕೆಲ ನೆಟ್ಟಿಗರು, ಅದೆಷ್ಟು ದಪ್ಪಗಾಗಿದ್ದೀರಾ ನೀವು ಬರೀ ತಾಯಿಯ ಪಾತ್ರಕ್ಕೆ ಲಾಯಕ್ಕು ಎಂದು ನಟಿಗೆ ಟೀಕೆ ಮಾಡಿದ್ದಾರೆ. ಅವರ ಫೋಟೋಗಳನ್ನ ಕೂಟ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ:‘ಮೀಟು’ ಅನ್ನೋದು ಕಾಮನ್ ಆಗಿದೆ, ಊರು ಅಂದ್ಮೇಲೆ ಸಮಸ್ಯೆ ಇರುತ್ತೆ: ನಿರ್ದೇಶಕ ಶಶಾಂಕ್

    ಇದೀಗ ಟ್ರೋಲಿಗರಿಗೆ ನಟಿ ಅಪರ್ಣಾ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದೇಹದ ತೂಕಕ್ಕೂ ಟ್ಯಾಲೆಂಟ್‌ಗೂ ಯಾವುದೇ ಸಂಬಂಧವಿಲ್ಲ. ದೇಹದಲ್ಲಿನ ಕೆಲ ಸಮಸ್ಯೆಗಳಿಂದ ವ್ಯಕ್ತಿಯ ತೂಕ ಹೆಚ್ಚಿಸುತ್ತದೆ. ನನಗೆ ತಾಯಿ ಪಾತ್ರ ಮಾಡುವಷ್ಟು ವಯಸ್ಸಾಗಿಲ್ಲ. ತೆಳ್ಳಗಿರುವುದು ನಟಿಯಾಗಲು ಇರಬೇಕಾದ ಅರ್ಹತೆಗಳಲ್ಲಿ ಒಂದಲ್ಲ ಎಂದು ಅಪರ್ಣಾ ತಿರುಗೇಟು ನೀಡಿದ್ದಾರೆ. ನಟಿಯ ಪ್ರತಿಕ್ರಿಯೆ ಅಭಿಮಾನಿಗಳ  ಮೆಚ್ಚುಗೆಗೆ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]